POLICE BHAVAN KALABURAGI

POLICE BHAVAN KALABURAGI

10 March 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಅಂಬುಬಾಯಿ ಗಂಡ ಮಹಾಂತಪ್ಪ ಹಾದಿಮನಿ ಸಾ: ಪ್ಲಾಟ ನಂ:147 ವಿಧ್ಯಾ ನಗರ ಗುಲಬರ್ಗಾರವರು ನಾನು ದಿನಾಂಕ 08-03-2012 ರಂದು ಬೆಳಗ್ಗೆ 7-30 ಗಂಟೆಯ ಸುಮಾರಿಗೆ ಕೇಂದ್ರ ಬಸ್ ನಿಲ್ದಾಣ ಹತ್ತಿರ ಮಹಾರಾಜ ಚಪ್ಪಲ ಅಂಗಡಿ ಎದುರು ಹೊರಟಾಗ ಮೋಟಾರ ಸೈಕಲ್ ನಂ: ಕೆಎ-33, ಜೆ - 2596 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2012 ಕಲಂ: 279,338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಯು.ಡಿ.,ಅರ್. ಪ್ರಕರಣ:

ಆಳಂದ ಠಾಣೆ: ಶಿವಶರಣಪ್ಪ ತಂದೆ ಪ್ರಭು ಸವಳೇಶ್ವರ ಉ:ಗೌಂಡಿ ಕೆಲಸ ಸಾ; ಖಜೂರಿ ರವರು ನನ್ನ ಮಗ ಸಿದ್ದಪ್ಪ 27 ವರ್ಷ ಈತನು ಸಿದ್ರಾಮ ಪಾಟೀಲ ಇವರ ಹೊಲದ ಬಾಯಿ ದಂಡೆಯ ಮೇಲೆ ಇದ್ದ ನುಗ್ಗಿ ಗಿಡದ ನುಗ್ಗಿ ಕಾಯಿಯನ್ನು ಕಡಿಯುವಾಗ ನುಗ್ಗಿ ಗಿಡದ ಟೊಂಗೆ [ಫಂಟೆ] ಮುರಿದ್ದು ಟೊಂಗೆಯೊಂದಿಗೆ ಬಾವಿಯ ನೀರಿನಲ್ಲಿ ಬಿದ್ದು ಸತ್ತಿರುತ್ತಾನೆ ಅಂತಾ ತಿಳಿದುಕೊಂಡು ನಾನು ಹಾಗೂ ಊರಿನ ಇತರು ಜನರು ಕೂಡಿ ಬಂದು ನೋಡಲಾಗಿ, ಬಾಯಿಯಲ್ಲಿ ಅಂದಾಜು 5 ಪೀಟ ನೀರು ಇದ್ದು ಹೊರತಗೆದು ನೋಡಲಾಗಿ ನನ್ನ ಮಗನ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಅವನ ಮರಣದಲ್ಲಿ ಯಾರ ಮೇಲೆ ಸಂಶಯವಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು,ಡಿ.ಅರ್. ನಂ: 2/2012 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆಗೆ ಪ್ರಯತ್ನ:

ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮೈನುದ್ದಿನ್ ತಂದೆ ಮಹಿಬೂಬಸಾಬ ಖುರೇಶಿ ಸಾ|| ಎಕ್ಬಾಲ್ ಕಾಲೋನಿ ಜಿಲಾನಾಬಾದ ಗುಲಬರ್ಗಾರವರು ನನ್ನ ಮಗನಿಗೂ ಮತ್ತು ಸಲಿಂ ತಂದೆ ಯೂಸುಪ್ ಇತನಿಗೂ ದಿನಾಂಕ 08-03-2012 ರ ಮದ್ಯಾಹ್ನ ಸಮಯದಲ್ಲಿ ಎಮ್.ಎಸ್.ಕೆ ಮಿಲ್ ಬಡಾವಣೆಯ ಸೈದಾಪೂರಿ ಹೋಟೆಲನಲ್ಲಿ ಬಾಯಿ ಮಾತಿನ ತಕರಾರಾಗಿದ್ದು ಅದೇ ವೈಮನಸ್ಸಿನಿಂದ ಸಲಿಂ ತಂದೆ ಯುಸೂಫ, ಇಸಾಮ್, ವಾಸಿಂ, ಇಮ್ತಿಯಾಜ್, ಖದೀರ, ಕರೀಮ್, ತಾಹು, ಫಿರೋಜ್. ಮಹ್ಮದ, ಮಹಿಬೂಬ ಸಂಗಡ ಬಸವನಗರದ 8-10 ಹುಡುಗರು ಸಾ|| ಎಲ್ಲರೂ ಗುಲಬರ್ಗಾ ರವರು ದಿನಾಂಕ 09-03-2012 ರಂದು ರಾತ್ರಿ 11 ಗಂಟೆಗೆ ಕೊಲೆ ಮಾಡುವ ಉದ್ಧೇಶದಿಂದ ಮೌಲಾಲಿ ಕಟ್ಟಾದಲ್ಲಿ ಮಾತಾಡುತ್ತಾ ನಿಂತ ನನಗೆ ಮತ್ತು ನನ್ನ ಸಂಗಡಿಗರಿಗೆ ಬಡಿಗೆ ಮತ್ತು ಹರಿತವಾದ ಆಯುಧಗಳಿಂದ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 20/12 ಕಲಂ 143, 144, 147, 148, 341, 323, 324, 307, 504 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕೊಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:
ಶ್ರೀಮತಿ.ಲಕ್ಷ್ಮಿಬಾಯಿ ಗಂಡ ಲಕ್ಷ್ಮಣ ಬೋಯಿನೂರ್ ಸಾನಾಗಯಿದಲಾಯಿ ರವರು ನನಗೆ ಮೂರು ಜನ ಮಕ್ಕಳಿದ್ದು ಈಗ ಸುಮಾರು 15 ದಿವಸಗಳ ಹಿಂದೆ ಕಿರಿಯ ಮಗನಾದ ನಾಗಪ್ಪನು ಹೈದ್ರಾಬಾದನಿಂದ ನಾಗಯಿದಲಾಯಿಗೆ ಬಂದಿದ್ದು ರಾತ್ರಿ ವೇಳೆಯಲ್ಲಿ ತನ್ನ ಹೊಲದಲ್ಲಿದ್ದ ಬೆಳೆ ಕಾವಲು ಮಾಡುತ್ತಾ ಹೊಲದಲ್ಲಿಯೇ ಮಲಗಿಕೊಂಡು ಬೆಳಿಗ್ಗೆ ಮನೆಗೆ ಬರುತ್ತಿದ್ದನು. ದಿನಾಂಕ 08.03.2012 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಹೊಲಕ್ಕೆ ಹೋಗಿದ್ದು ಬೆಳಿಗ್ಗೆ ಮಗನು ಮನೆಗೆ ಬರದೇ ಇದ್ದಾಗ ನನ್ನ ಗಂಡ ಲಕ್ಷ್ಮಣ ಹೊಲಕ್ಕೆ ಹೋಗಿ ನನ್ನ ಮಗನನ್ನು ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ . ತನ್ನ ಮಗನಾದ ನಾಗಪ್ಪನು ಹೊಲದಲ್ಲಿ ಹೊರಸಿನ ಮೇಲೆ ಮಲಗಿಕೊಂಡಾಗ ಯಾರೋ ದುಷ್ಕರ್ಮಿಗಳು ಅವನಿಗೆ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 25/2012 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ನವಜಾತ ಶಿಶು ಪತ್ತೆ:
ಮಹಿಳಾ ಪೊಲೀಸ ಠಾಣೆ
:ಶ್ರೀ ಮೆಹಬೂಬ ಖಾನ್ ತಂಧೆ ಮಹ್ಮದ ಇಸ್ಲಾಯಿಲ್ ಖಾನ ಸಾ: ಮಿಸಬಾನಗರ ರವರು ನಾನು ನನ್ನ ಅತ್ತೆಯ ಮನೆಗೆ ಖಾಸಗಿ ಕೆಲಸಕ್ಕೆ ಹೊರಟಿದ್ದನು ಆಗಾ ಶಾಂತಿನಗರದ ಹತ್ತಿರ ಇರುವ ಹೆಚ್.ಪಿ.ಗ್ಯಾಸ ಏಜೇನ್ಸಿಯ ಬಳಿಯ ತಿಪ್ಪೆಯಲ್ಲಿ ಒಂದು ದಿನದ ನವಜಾತ ಶಿಶುವು ಬಿದಿದ್ದು ಅಲ್ಲಿ ಜನರು ಜಮಾಯಿಸಿದ್ದ ಕಂಡಿನು ನಾನು ಮಗುವಿಗೆ ನೋಡಿದಾಗ ಅದರ ಮುಖವು ಕಪ್ಪಾಗಿತ್ತು ಮತ್ತು ನಡುಗುತ್ತಿತ್ತು ಆದರಿಂದ ನಾನು ಮಾನವತೆಯ ದೃಷ್ಠಿಯಿಂದ ಅದನ್ನು ಡಾ" ಅನುರೂಪ್ ಶಹಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿ ಇಂದಿಗೆ 5 ದಿವಸಗಳಾಗಿರುತ್ತದೆ. ಮಗುವು ಐ.ಸಿ.ಯು ವಾರ್ಡನಲ್ಲಿ ಚಿಕ್ಸಿತ್ಸೆ ಪಡೆಯುತ್ತಿದೆ. ಆಸ್ಪತ್ರೆ ಖರ್ಚ ದಿನೆ ದಿನೆ ಹೆಚ್ಚಾಗಿ ನನಗೆ ಏನು ಮಾಡುವುದು ಎಂದು ತೋಚಲಿಲ್ಲಾ ಅದಕ್ಕಾಗಿ ಮುಂದಿನ ಕ್ರಮಕ್ಕಾಗಿ ಕಾನೂನು ಕ್ರಮ್ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 24/12 ಕಲಂ 317 ಐಪಿಸಿ ಪ್ರಕಾರ ಪ್ರಕರಣವು ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಚಿತ್ತಾಪೂರ ಠಾಣೆ:
ಶ್ರೀ ಮೋನಪ್ಪ ತಂದೆ ನಾಗಪ್ಪ ತಳವಾರ ಸಾ ಭೀಮನಳ್ಳಿ ರವರು ನಾನು 5 ವರ್ಷಗಳ ಹಿಂದೆ ನನಗೆ ಮತ್ತು ಮಲ್ಲಿಕಾರ್ಜುನ ದಂಡೋತಿ ಹೆಂಡತಿಯ ಸಂಗಡ ಅನೈತಿಕ ಸಂಬಂದ ಇದೆ ಅಂತ ಹೊಡೆ ಬಡೆ ಮಾಡಿದ್ದು ಈ ಬಗ್ಗೆ ನನ್ನ ಮೇಲೆ ಕೇಸು ಆಗಿತ್ತು ದಿನಾಂಕ 09/03/2012 ರಂದು 1-00 ಪಿ.ಎಮ್.ಕ್ಕೆ ಭೀಮನಳ್ಳಿ ಗ್ರಾಮದಲ್ಲಿ ನಡುಕಟ್ಟಿಯ ಚೌಕದಲ್ಲಿ ಕುಳಿತಾಗ ಮುಸಲಪ್ಪ ತಂದೆ ಬಸಣ್ಣ ತಿನಬೋ ಮತ್ತು ಮಲ್ಲಿಕಾರ್ಜುನ ಧಂಡೋತಿ ಭೀಮರಾಯ ದಂಡೋತಿ ಹಣಮಂತ ದಂಡೋತಿ ಸಾಬಣ್ಣ ದಂಡೋತಿ ಇವರೆಲ್ಲರೂ ಕೂಡಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 22/2012ಕಲಂ 147,148,324,307,504, ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಬಸವರಾಜ ತಂದೆ ರಾಣಪ್ಪ ವಗ್ಗಿ ಸಾ: ಪಟ್ಟಣ್ಣ ತಾ: ಜಿ;ಗುಲಬರ್ಗಾರವರು ನಾನು ದಿನಾಂಕ:08/03/2012ರಂದು ಸಾಯಂಕಾಲ ಸುಮಾರಿಗೆ ಮನೆಯ ಮುಂದೆ ಆಕಳಿಗೆ ಚುನ್ನಿ ಹಿಡಿುವಾಗ ರಾಮಚಂದ್ರ ತಂದೆ ಹಣಮಂತ ವಗ್ಗಿ,ಮಹಾದೇವಿ ಗಂಡ ರಾಮಚಂದ್ರವಗ್ಗಿಸಾ:ಪಟ್ಟಣ್ಣವಿನಾಕಾರಣನನಗೆ ಅವ್ಯಾಚ್ಛವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಹೆಂಡತಿ ಬಿಡಿಸಲು ಬಂದಾಗ ಅವಳಿಗೆ ಕೈಹಿಡಿದು ಜಗ್ಗಿ ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 78/2012 ಕಲಂ 323 504 354 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ದಿನಾಂಕ:09/03/2012 ರಂದು ಮಧ್ಯಾಹ್ನ ಮೋಹನ ಲಾಡ್ಜ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮನುಷ್ಯ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ,ಶ್ರೀ ಜೆ.ಹೆಚ್ ಇನಾಮದಾರ ಪಿ.ಐ ರವರು ಮತ್ತು ಠಾಣೆಯ ಸಿಬ್ಬಂದಿಯಾದ ಶೆಶಿಕಾಂತ, ಹಾಜಿಮಲಂಗ್, ಹಾಗೂ ಶೀವಾಜಿ ರವರೆಲ್ಲರೂ ಹೋಗಿ ದಾಳಿ ಮಾಡಿ ಅವನನ್ನು ವಿಚಾರಿಸಲಾಗಿ ತನ್ನ ಹೆಸರು ನಾಗಣ್ಣ ತಂದೆ ಸಂಗಣ್ಣ ಕರಜಗಿ ವಯ 56 ವರ್ಷ ಸಾ ಮನೆ ನಂ 1-873/2 ವೆಂಕಟೇಶ ನಗರ ಗುಲಬರ್ಗಾ ಅಂತಾ ಹೇಳಿದ್ದು ಆತನಿಂದ ನಗದು ಹಣ 3700=00ರೂಪಾಯಿ ಮಟಕಾ ಚೀಟಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:24/2012 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ