POLICE BHAVAN KALABURAGI

POLICE BHAVAN KALABURAGI

03 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಲರಾಜ ತಂದೆ ಬೀಮರಾಯ ಹುಲಿಮನಿ ಸಾ: ತಾರಫೈಲ್ 3 ನೇ ಕ್ರಾಸ್ ದುರ್ಗಮ್ಮ ಟೆಂಪಲ್ ಹತ್ತಿರ ಕಲಬುರಗಿ ಇವರು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗದಲ್ಲಿ ಗುತ್ತಿಗೆ ಆದಾರದ ಮೇಲೆ ಖಾಸಗಿ ನೌಕರನಾಗಿ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೇನೆ. ನಾನು ದಿನಾಲು ಕಲಬುರಗಿಯಿಂದ ಶಹಾಪೂರಕ್ಕೆ ಕರ್ತವ್ಯಕ್ಕೆ ಹೋಗಿ ಬಂದು ಮಾಡುತ್ತೇನೆ. ಹೀಗಿದ್ದು ಎಂದಿನಂತೆ ಇಂದು ದಿನಾಂಕ; 02/06/2018 ರಂದು ಮುಂಜಾನೆ ನಾನು ಕಲಬುರಗಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.-32-ಎಫ್-2244, ಕಲಬುರಗಿ - ದಾವಣಗೇರಿ ಬಸ್ನಲ್ಲಿ ಕುಳಿತುಕೊಂಡು ಶಹಾಪೂರಕ್ಕೆ ಹೊರಟಿದ್ದೇನು. ಬಸ್ಸಿನಲ್ಲಿ ಇನ್ನು ಅನೇಕ ಜನ ಪ್ರಯಾಣಿಕರಿದ್ದರು. ಮುಂಜಾನೆ 8-15 ಗಂಟೆ ಸುಮಾರಿಗೆ ನಮ್ಮ ಬಸ್ಸು ಜೇವರಗಿ ಹೊರವಲಯದ ಕ್ರೀಡಾಂಗಣದ ಹತ್ತಿರ ಜೇವರಗಿ ಶಹಾಫೂರ ರೋಡಿನಲ್ಲಿ ಹೋಗುತ್ತಿದ್ದಾಗ ನಮ್ಮ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ, ಅದೆ ವೇಳೆಗೆ ನಮ್ಮ ಎದುರಿಗೆ ಅಂದರೆ ಶಹಾಪೂರ ರೋಡಿನ ಕಡೆಯಿಂದ ಇನ್ನೊಂದು ಕೆ.ಎಸ್.ಆರ.ಟಿ.ಸಿ ಬಸ್ಸಿನ ಚಾಲಕನು ಕೂಡ ಬಸ್ಸನ್ನು ಅತಿವೇಗ ಮತ್ತು ಅಲಕ್ಷತತನದಿಂದ ನಡೆಯಿಸಿಕೊಂಡು ಬಂದು, ಎರಡು ಬಸ್ಸಿನ ಚಾಲಕರು ಒಬ್ಬರಿಗೊಬ್ಬರು ಸೈಡ ತೆಗೆದುಕೊಳ್ಳದೆ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ನಾವು ಕುಳಿತ ಬಸ್ಸು ರೋಡಿನ ಎಡ ಬದಿಯ ಸಣ್ಣ ಪೂಲಿಗೆ ಡಿಕ್ಕಿ ಹೊಡೆದು ಅದರ ರಭಸಕ್ಕೆ ಬಸ್ಸಿನ ಮುಂದಿನ ದೊಡ್ಡ ಗ್ಲಾಸ್ ಒಡೆದು ಮುಂದಿನ ಭಾಗ ಖುಲ್ಲಾ ಆಗಿದ್ದರಿಂದ ಮುಂದೆ ಕುಳಿತ ಮೂರು ಜನರು ಬಸ್ಸಿನ ಮುಂದೆ  ಕೆಳಗೆ ಬಿದ್ದಿದ್ದರಿಂದ ಬಸ್ಸು ಮೇಲೆ ಹಾಯಿದು ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಮ್ಮ ಬಸ್ಸಿನ ಚಾಲಕನು ಕೂಡಾ ಡ್ರೈವರ ಸೀಟಿನಲ್ಲಿ ಕುಳಿತಲ್ಲಿಯೇ ಸಿಕ್ಕು ಹಾಕಿಕೊಂಡು ಭಾರಿ ಗಾಯ ಹೊಂದಿ ಮೃತಪಟ್ಟಿರುತ್ತಾನೆ. ಈ ಅಪಘಾತದಿಂದ ನನಗೆ ತುಟಿ ಕಟ್ಟಾಗಿದ್ದು, ಎರಡು ಕಾಲುಗಳ ಮೊಳಕಾಲು ಹತ್ತಿರ ಗುಪ್ತ ಪೆಟ್ಟಾಗಿರುತ್ತವೆ. ನಮ್ಮ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರಾದ 01) ಶರೀಫಾ ಕಾತೂನ್ ಲಾವರೆವಾಲೆ, 02) ಮಹ್ಮದ್ ಗೌಸ್ ಲಾವರೆವಾಲೆ, 03) ಚಾಂದಪಾಶಾ ತಂದೆ ಗುಲಾಮ್ ಹುಸೇನ್ ಶಹಾಪೂರ, 04) ಶಾರೀಫಾ ತಮಕಿನ್ ಗಂಡ ಮಹ್ಮದ್ ಅಸ್ರಫ್ ಶಹಾಫೂರ. 05) ಸಾದಿಯಾ ಸುಲ್ತಾನ ಗಂಡ ಮಹ್ಮದ ಸಲೀಂ ಅನ್ನುವವರಿಗೆ ಮತ್ತು ಇತರರಿಗೆ ಅಲ್ಲದೆ ಎದುರಿನ ಬಸ್ಸಿನಲ್ಲಿ ಕುಳಿತು ಬರುತ್ತಿದ್ದ 01) ವೇದರೇಖಾ, 02) ವೀಣಾ,  03) ಓಂಸಿದ್ದರಾಜ, 04) ಮಹ್ಮದ್ ರಫಿ, ಹಾಗು ಇತರೆ ಪ್ರಯಾಣಿಕರಿಗೂ ಹೀಗೆ ಎರಡೂ ಬಸ್ಸನಲ್ಲಿದ್ದ ಒಟ್ಟು 25-30 ಜನರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿರುತ್ತವೆ. ನಾವು ಕುಳಿತು ಹೊರಟಿದ್ದ ಬಸ್ಸ ಚಾಲಕನ ಹೆಸರು ಮೃತ 1) ರುಕ್ಕಪ್ಪ ತಂದೆ ಚಂದ್ರಶಾ ಬೋಗನಕರ್ ಸಾ: ಸಿಂದಗಿ (ಬಿ) ಅಂತಾ ಮತ್ತು ಸ್ಥಳದಲ್ಲಿಯೇ ಮೃತಪಟ್ಟ 3 ಜನ ಹೆಣ್ಣು ಮಕ್ಕಳ ಹೆಸರು 2) ಆಯೇಶಾ ಸಿದ್ದಿಕಾ ಗಂಡ ಅಬ್ದುಲ್ ಸಯೀದ ವನದುರ್ಗಾ ಸಾ: ಕಲಬುರಗಿ 3) ಫರೀನಾಬೇಗಂ ಗಂಡ ಅಬ್ದುಲ್ ಅಸ್ಲಾಂ ಖಾತೆಕಾನಿ ಸಾ: ಕಲಬುರಗಿ 4) ಸಹರಾ ಕಾತೂನ್ ಗಂಡ ಮಹ್ಮದ್ ನೂರಖಾನ್ ಸಲಿಂ ಸಾ: ಆನಂದ ನಗರ ಕಲಬುರಗಿ ಎಂದು ಮತ್ತು ಮೂರು ಜನರು ಹೆಣ್ಣುಮಕ್ಕಳು ಸಹ ಶಿಕ್ಷಕಿಯರು ಶಾಲೆಗೆ ಹೋಗುತ್ತಿದ್ದರು ಎಂದು ಗೊತ್ತಾಗಿರುತ್ತದೆ. ಹಾಗು ಎದುರಿಗೆ ಬರುತ್ತಿದ್ದ ಬಸ್ಸ ನಂ, ಕೆ.-33-ಎಫ್-0159 ಇದ್ದು ಅಪಘಾತದಲ್ಲಿ ಎರಡೂ ಬಸ್ಸುಗಳ ಮುಂಭಾಗ ಭಾರಿ ಜಖಂ ಆಗಿರುತ್ತವೆ. ಶಹಾಪೂರ ಕಡೆಯಿಂದ ಬರುತ್ತಿದ್ದ ಬಸ್ಸ ಚಾಲಕನ ಹೆಸರು ಸೋಮಶೇಖರ ತಂದೆ ಅಪರಪ್ಪ ಸಾ: ಸುರಪೂರ ಅಂತಾ ಗೊತ್ತಾಗಿದ್ದು ಅವನಿಗೂ ಗಾಯಗಳಾಗಿರುತ್ತವೆ. ಘಟನೆಯ ವಿಷಯ ಗೊತ್ತಾಗಿ ಸ್ಥಳಕ್ಕೆ ಅಂಬುಲೇನ್ಸ ವಾಹನಗಳು ಬಂದಾಗ ಗಾಯಗೊಂಡವರೆಲ್ಲರೂ ಅಂಬುಲೇನ್ಸ ವಾಹನಗಳಲ್ಲಿ ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಹೆಚ್ಚಿಗೆ ಗಾಯಗೊಂಡ ಕೆಲವರು ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಗೆ ಹೋಗಿರುತ್ತಾರೆಮೇಲೆ ನಮೂದಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ನಂ:ಕೆ.-32-ಎಫ್-2244 ನೇದ್ದರ ಚಾಲಕ ರುಕ್ಕಪ್ಪ ತಂದೆ ಚಂದ್ರಶಾ ಬೋಗನಕರ್ ಮತ್ತು  ಬಸ್ ನಂಬರ ಕೆ.-33-ಎಫ್-0159 ನೇದ್ದರ ಚಾಲಕ ಸೋಮಶೇಖರ ತಂದೆ ಅಪರಪ್ಪ ಸಾ: ಸುರಪೂರ ಇವರಿಬ್ಬರು ತಮ್ಮ ತಮ್ಮ ಬಸ್ಸಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪರಸ್ಪರ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ಈ ಅಪಘಾತ ಸಂಭವಿಸಿದ್ದು ಇರುತ್ತದೆ. ಕಾರಣ ಎರಡೂ ಬಸ್ಸ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.