POLICE BHAVAN KALABURAGI

POLICE BHAVAN KALABURAGI

24 October 2011

GULBARGA DIST REPORTED CRIME

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ:ಶ್ರೀ ಮೌಲಾಲಿ ತಂದೆ ಖಾಜಾಮಿಯಾ ಹಾಜಿ ರವರು ನಾನು ಜೀಪ ಖರಿದಿ ಮಾಡಲು ರಶೀದ ತಂದೆ ಹುಸೇನ ಪಟೇಲ್ ಇತನಿಗೆ ಹಣ ಕೊಟ್ಟಿದ್ದು, ಹಣ ಕೊಡು ಅಂತಾ ಕೇಳಿದಾಗ ರಶೀದ ಮತ್ತು ಆತನ ಹೆಂಡತಿ ಮಗ ಕೂಡಿಕೊಂಡು ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 102/2011 ಕಲಂ.341,323,504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

GULBARGA DIST REPORTED CRIMES

ಜೂಜಾಟ ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ದಿನಾಂಕ: 23/10/2011 ರಂದು ಸಾಯಂಕಾಲ್ ಖಚಿತ ಬಾತ್ಮಿ ಮೇರೆಗೆ ಬಾಪೂನಗರ ಬಡಾವಣೆಯ ವಿಠಲ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಆಡುತತ್ಇದ್ದ ಸ್ಥಳಕ್ಕೆ ಸಿಬ್ಬಂದಿ ಜನರೊಂದಿಗೆ ಸ್ಥಳಕ್ಕೆ ಹೋಗಿ ಜ್ಯೋತಿಬಾ ತಂದೆ ಸುಭಾಶ ಜಾಧವ, ಸಾ|| ಐಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ, ಯಲ್ಲಾಲಿಂಗ ತಂದೆ ಭೀಮರಾವ ಸುತ್ತಾರ, ಸಾ|| ನಾಗನಹಳ್ಳಿ, ಬಸವರಾಜ ತಂದೆ ಸಿದ್ರಾಮಪ್ಪ ಶಿವಶಕ್ತಿ, ಸಾ|| ನಾಗನಹಳ್ಳಿ, ರಾಜಾಬಕ್ಷರ ತಂದೆ ಗುಡುಸಾಬ ನದಾಫ, ಸಾ|| ಗೌಡಗಾಂವ, ಪ್ರಭು ತಂದೆ ಸಿದ್ದಣ್ಣಾ ಪಾಟೀಲ, ಸಾ|| ಹನುಮಾನ ಗುಡಿಯ ಹತ್ತಿರ ಭವಾನಿ ನಗರ ಗುಲಬರ್ಗಾ, ಸುದೇಶ ತಂದೆ ರವಿದಾಸ ಉಪಾದ್ಯ, ಸಾ|| ಬಾಪೂನಗರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6125/-, 52 ಇಸ್ಪೇಟ ಎಲೆಗಳು, ಜಪ್ತ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:197/2011 ಕಲಂ: 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ಸಚಿನ ತಂದೆ ಶರಣಪ್ಪ ಸಜ್ಜನ ಸಾ|| ಬಾಪೂನಗರ ಗುಲಬರ್ಗಾ ರವರು ನಾನು ಲಿಂಗರಾಜ, ಬಾಬು, ಭರತ ನಾವೇಲ್ಲರೂ ಬಟ್ಟೆ ಖರೀದಿ ಗೋಸ್ಕರ ಮಾರ್ಕೆಟಿಗೆ ಹೋಗಿದ್ದು, ಅರುಣಕುಮಾರ ಶಹಾ ಆಸ್ಪತ್ರೆಯ ಎದುರುಗಡೆ ಭರತ ಇವನು ನನಗೆ ಯಾಕಲೆ ಮಗನೆ ಲೇಟ ಮಾಡಿ ಬಂದಿದ್ದಿಯಾ ಅಂತಾ ಹೊಡೆದಾಗ ನಾನು ಕೂಡ ಅವನಿಗೆ ಕಾಲಿನಿಂದ ಎದೆಯ ಮೇಲೆ ಹೊಡೆದಿದ್ದು ಇದರಿಂದ ಅವನು ಬೇಹುಶ ಆಗಿ ಕೆಳಗೆ ಬಿದ್ದಾಗ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಭರತನಿಗೆ ಮರಣ ಹೊಂದಿರುತ್ತಾನೆ ಅಂತಾ ಹೇಳಿದ್ದರಿಂದ ಅವನ ಸಂಬಂಧಿಕರಾದ ಲವ, ಕುಶ, ಚಿನ್ನೇಶ ಎಲ್ಲರೂ ಸಾ|| ಬಾಪೂನಗರ ಮೂರು ಜನರು ಕೂಡಿ ನಮ್ಮ ಭರತನಿಗೆ ಕೊಲೆ ಮಾಡಿದಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಾಲಿನಿಂದ, ಮೈಮೇಲೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 198/11 ಕಲಂ: 323, 504, 341, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಅಫಜಲಪೂರ ಪೊಲೀಸ್ ಠಾಣೆ :
ಗುರುಬಾಳಪ್ಪ ತಂದೆ ದುಂಡಪ್ಪ ನವಲಗಿರಿ ಸಾ|| ಆನೂರು ರವರು ಆನೂರು ಸರ್ಕಾರಿ ಶಾಲೆಯ ಕಾರ್ಯಾಲಯದ ಎರಡು ಕೀಲಿಗಳು ಮುರಿದು ಹೋದ ಬಗ್ಗೆ ನಮ್ಮ ಶಾಲೆಯ ಅಡುಗೆಯವರು ಮೊಬೈಲ ಮೂಲಕ ತಿಳಿಸಿದರು ಆವಾಗ ನಾನು ನಮ್ಮ ಸಹ ಶಿಕ್ಷಕರಾದ ವಿಶ್ವನಾಥ ಇಬ್ಬರೂ ಸೇರಿಕೊಂಡು ನೋಡಿದಾಗ ಒಳಗಡೆ ಇರುವ 1 ಸಮ್ ಸಂಗ ಕಲರ ಟಿ ವಿ, 1 ಸೈಕಲ್ ಅಂಧಾಜು ಕಿಮ್ಮತ್ತು 23,000/- ರೂ ಕಿಮ್ಮತ್ತಿನ ಮಾಲು ಯಾರೊ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 173/11 ಕಲಂ 457 380 ಐ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ:
ಶ್ರೀ ಶ್ರೀಮಂತ ತಂದೆ ಭಗವಂತಪ್ಪ ಸೋಮಜಾಳ ಸಾ: ಸರ್ವೆ ನಂ 1/2 ಕುಸನೂರ ಗುಲಬರ್ಗಾ ರವರು ನಾನು  ದಿನಾಂಕ 23-10-2011 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಬ್ಲಾಕ ನಂ-4 ಉಪನ್ಯಾಸಕರ ಕೋಣೆ ನಂ-2 ರಲ್ಲಿ ಕೆ.ಎಸ.ಈ.ಟಿ ಪರೀಕ್ಷೆಯ ಪೇಪರ-1 ವಿದ್ಯಾರ್ಥಿಗಳಿಗೆ ನೀಡುತ್ತಾ ಮುಂದೆ ಸಾಗಿದೆ. ನೊಂದಣಿ ಸಂಖ್ಯೆ -16140052 ನೇದ್ದರ ವಿದ್ಯಾರ್ಥಿಯು ಗೈರು ಹಾಜರಾಗಿದ್ದು ಕಾರಣ ಸದರಿಯವರ ಟೇಬಲ ಮೇಲೆ ಬುಕಲೇಟ ಇಟ್ಟು ಮುಂದೆ ಸಾಗಿದೆ. ಅಷ್ಟರಲ್ಲಿ ನೊಂದಣಿ ಸಂಖ್ಯೆ ಹುಡುಕುತ್ತಾ ಬಂದಾಗ ಯಾರೂ ಒಬ್ಬ ವಿದ್ಯಾರ್ಥಿನಿ ಬಂದು ಟೇಬಲ ಮೇಲೆ ಇಟ್ಟಂತ ಬುಕಲೇಟ್ ಪೇಪರ -1 ತೆಗೆದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 241/11  ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.