POLICE BHAVAN KALABURAGI

POLICE BHAVAN KALABURAGI

25 October 2012

GULBARGA DISTRICT REPORTED CRIME

ಅಪಘಾತ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಮಡಿವಾಳಪ್ಪ ತಂದೆ ಬಸಪ್ಪ ಲಕ್ಕಣಗಾಂವ ಸಾ:ಸಿದ್ರಾಮೇಶ್ವರ ನಗರ ಬಿಜಾಪೂರ ರವರು ನಾನು ಮತ್ತು ನನ್ನ ಮಗ ಅರವಿಂದ ಸೊಸೆಯಾದ ಕಾಂಚನಾ ಮೊಮ್ಮಕ್ಕಳಾದ ಅನುಪ, ಅಂಕಿತ ಐದು ಜನರು ಕೂಡಿಕೊಂಡು ನಮ್ಮ ಹೊಸ ಕಾರ ಟಿಆರ್ ನಂ, ಕೆಎ-29-ಟಿಸಿಆರ್-06 ನೇದ್ದರಲ್ಲಿ  ಬಿಜಾಫೂರದಿಂದ ಹುಮನಾಬಾದಕ್ಕೆ ಹೋಗುತ್ತಿದ್ದಾಗ ಬೆಳಿಗ್ಗೆ 8-30 ಗಂಟೆಯ ಸಮಾರಿಗೆ ಜೇವರ್ಗಿ ಸಮೀಪದ ಲಕ್ಷ್ಮೀ ಗುಡಿ ಹತ್ತಿರ ನನ್ನ ಮಗ ಅರವಿಂದನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಮುಂದೆ ಹೋಗುತ್ತಿದ್ದ ಲಾರಿಗೆ ಓವರ ಟೆಕ್ ಮಾಡಲು ಹೋಗಿ ಒಮ್ಮೇಲೆ ಕಟ್ ಹೊಡೆದುದಕ್ಕೆ ಕಾರ ಪಲ್ಟಿಯಾಗಿ ಅರವಿಂದ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ಸೊಸೆ ಹಾಗು ಮೊಮ್ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 159/2012 ಕಲಂ 279,337,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಕಿರಣ ತಂದೆ ಮಲ್ಲಿಕಾರ್ಜುನ ಪಂಚಕಟ್ಟಿ, ವ|| 17 ವರ್ಷ, ಸಾ|| ದೇವಿ ನಗರ ಗುಲಬರ್ಗಾ ನಾನು ದಿನಾಂಕ:24-10-2012 ರಂದು ದೇವಿ ನಗರ  ಬಡಾವಣೆಯ ದೇವಿ ಮೆರವಣಿಗೆ ಇದ್ದ ಪ್ರಯುಕ್ತ, ಡ್ಯಾನ್ಸ್ ಮಾಡುತ್ತಿದ್ದಾಗ, ನಮ್ಮ ಬಡಾವಣೆಯ ಆಕಾಶ ತಂದೆ ಅನಿಲ ಈತನು ಬಂದವನೇ ಭೋಸಡಿ ಮಗನ್ಯಾ ಇಲ್ಲಿ ಯಾಕೆ ಡ್ಯಾನ್ಸ್ ಮಾಡುತ್ತಿ ಅಂತ ಅವಾಚ್ಯದಿಂದ ಬೈಯುತ್ತಾ ಅಲ್ಲಿ ಬಿದ್ದ ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿದನು. ವಿನಾಃಕಾರಣ ನನಗೆ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಬೆದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:76/2012 ಕಲಂ 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶಿವಪುತ್ರ ತಂದೆ ಚಂದ್ರಶಾ ಕುಂಬಾರ ಸಾ|| ಕಿಣ್ಣಿ ಸಡಕ, ಹಾ|| ವ|| ರಾಮತೀರ್ಥ ಗುಡಿಯ ಹತ್ತಿರ ಚೆಕ್ ಪೋಸ್ಟ್ ಅಳಂದ ರೋಡ ಗುಲಬರ್ಗಾ ರವರು ನಮ್ಮ ಅಣ್ಣ ಮೃತ ಲಕ್ಷ್ಮಿಕಾಂತ ಈತನು ಪ್ರತಿ ದಿವಸ ಕುಡಿದು ಮನೆಗೆ ಬರುತ್ತಿದ್ದು, ದಿನಾಂಕ:20-10-2012 ರಂದು ಬೆಳಿಗ್ಗೆ ಮನೆಯಿಂದ ಹೋದವನು, ಮನೆಗೆ ಬರದೇ ಇರುವದರಿಂದ ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲಾ. ಎಲ್ಲಾ ಸಂಬಂಧಿಕರಿಗೆ ವಿಚಾರಿಸಿದರು  ಮಾಹಿತಿ ಸಿಗಲಿಲ್ಲ. ದಿನಾಂಕ 24-10-2012 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಅಳಂದ ಚೆಕ್ ಪೋಸ್ಟ್ ಹತ್ತಿರ ಚಿಂಚೋಳಿ ಲೇಔಟ್ ನಲ್ಲಿರುವ ಹಾಳು ಭಾವಿಯಲ್ಲಿ ಒಂದು ಶವ ಬಿದ್ದಿದೆ, ಅಂತ ಜನರು ಮಾತಾಡುವದನ್ನು ಕೇಳಿ, ನಾನು ಅಲ್ಲಿಗೆ ಹೋಗಿ ನೋಡಲು, ಭಾವಿಯಲ್ಲಿದ್ದ ಶವವು ತನ್ನ ಅಣ್ಣ ಲಕ್ಷ್ಮಿಕಾಂತನ ಶವ ಆಗಿದ್ದು, ಸದರಿಯವನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 17/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲಿಸಿಕೊಂಡಿರುತ್ತಾರೆ.