POLICE BHAVAN KALABURAGI

POLICE BHAVAN KALABURAGI

13 June 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ: 11-06-2017 ರಂದು ಸಾಯಂಕಾಲ ಬ್ರಹ್ಮಪೂರ ಪೊಲೀಸ ಠಾಣಾ ವ್ಯಾಪ್ತಿಯ ಮಕ್ತಂಪೂರ ಏರಿಯಾದ ಸರಾಫ ಬಜಾರದ ಹತ್ತಿರ ಇರುವ ಮಂತ್ರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ಕಪೀಲ ದೇವ ಪಿ.ಐ. ಡಿ.ಸಿ.ಬಿ ಘಟಕ, ಪಿ.ಐ. ಬ್ರಹ್ಮಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಅಪರ್ ಎಸ.ಪಿ ಕಲಬುರಗಿ, ಮಾನ್ಯ ಮಾನ್ಯ ಡಿ.ಎಸ.ಪಿ ಎ ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳಕ್ಕೆ ಹೋಗಿ ಒಂದು ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಮಂತ್ರಿ ಆಸ್ಪತ್ರೆ ಮತ್ತು ಕಲಗುರ್ತಿ ಬಂಗಾರದ ಅಂಗಡಿಯ ಮಧ್ಯದ ಸಾರ್ವಜನಿಕ ಸ್ಥಳದಲ್ಲಿ ಸಮೀಪ ಖುಲ್ಲಾ ಜಾಗದಲ್ಲಿ 11 ಜನರು ದುಂಡಾಗಿ ಕುಳಿತು ಹಣವನ್ನು ಫಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ 100 ರೂಪಾಯಿ ಬಾಹರ 100 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ 11 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು ತಮ್ಮ ಹೆಸರುಗಳು 1) ಅಶೋಕ ತಂದೆ ಮಹಾಂತಪ್ಪ ಪಾಟೀಲ ಸಾ: ಬ್ರಹ್ಮಪೂರ ಕಲಬುರಗಿ 2) ಕಲ್ಲಪ್ಪ ತಂದೆ ಶಿವಶರಣಪ್ಪ ಪೂಜಾರಿ ಸಾ: ಕುಸನೂರ ತಾ:ಕಲಬುರಗಿ 3) ಏಜು ಪಟೇಲ ತಂದೆ ಮಹಿಬೂಬಸಾಬ ಸಾ: ಗಂಜ ಕಾಲನಿ ಕಲಬುರಗಿ 4) ಬಸವರಾಜ ತಂದೆ ಹಣಮಂತ ಕೊಡ್ಲಿ ಸಾ: ಕೂಡ್ಲಿ ತಾ: ಚಿಂಚೋಳಿ 5) ಸುನೀಲಕುಮಾರ ತಂದೆ ಸಾಯಬಣ್ಣ ಗೌಳಿ ಸಾ: ಲಂಗಾರ ಹನುಮಾನ ನಗರ ರಿಂಗ ರೋಡ ಕಲಬುರಗಿ 6) ರಾಜಕುಮಾರ ತಂದೆ ಚಂದ್ರಕಾಂತ ಬಿರಾದಾರ ಸಾ: ಶಿವಾಜಿ ನಗರ ಕಲಬುರಗಿ 7) ಅನೀಲ ತಂದೆ ನರಸಿಂಗ ಶಹಾಪೂರಕರ ಸಾ: ಕುಸನೂರ ತಾ:ಕಲಬುರಗಿ 8) ಗುರುನಾಥ ತಂದೆ ಹಣಮಂತ ಬೆನಕನ ಸಾ: ಕುಸನೂರ ತಾ:ಕಲಬುರಗಿ 9) ಮಹೇಶಕುಮಾರ ತಂದೆ ಬಸವಣ್ಣಪ್ಪ ದ್ಯಾಮಣಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ 10) ಅಂಬಾರಾಯ ತಂದೆ ಶಿವಪುತ್ರಪ್ಪ ಪಾಟೀಲ ಸಾ: ಗಂಜ ಕಾಲನಿ ಕಲಬುರಗಿ 11) ಅಣ್ಣಾರಾವ ತಂದೆ ಕಂಟೆಪ್ಪ ಬಿರಾದಾರ ಸಾ: ಭಾಗ್ಯ ನಗರ ಕಲಬುರಗಿ ಅಂತಾ ತಿಳಿಸಿದ್ದು. ಸದರಿಯವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 63040/-ರೂ ಹಾಗೂ 52 ಇಸ್ಪೆಟ್ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸೀತಮ್ಮ  ಗಂಡ ಈರಪ್ಪ ಹರಿಜನ ಸಾಃ ಮೂದಬಾಳ (ಬಿ)  ತಾಃ ಜೇವರಗಿ ಇವರು ದಿನಾಂಕ 11-06-2017 ರಂದು ಸಾಯಂಕಾಲ ತನ್ನ ಅಳಿಯನಾದ ಶ್ರೀ ಭಾಗಪ್ಪ ತಂದೆ ಸಂಗಪ್ಪ ಸಾ|| ಮೂಬಬಾಳ ಬಿ ಇವರಿಬ್ಬರು ಕೂಡಿಕೊಂಡು ನಮ್ಮ ಓಣಿ ಹತ್ತಿರ ನಿಂತಿರುವಾಗ ಪೂಜಾರಿ ಓಣಿಯ ಶ್ರೀ ಯಲ್ಲಪ್ಪ ತಂದೆ ಮಲ್ಲಪ್ಪ ಚಿಗರಳ್ಳಿ ಸಾ|| ಮುದಬಾಳ ಬಿ ಇತನು ನಮ್ಮ ಹುಡುಗರ ಹತ್ತಿರ ಮಾತನಾಡುತ್ತ ನಿಂತಿದ್ದರು ಆಕಸ್ಮಿಕವಾಗಿ ನಮ್ಮ ಅಣ್ಣಸ ಮಗನಾದ ಶ್ರೀ ಭಾಗಪ್ಪ ತಂದೆ ಸಂಗಪ್ಪ ನಾಟೀಕಾರ ಸಾ|| ಮೂದಬಾಳ ಬಿ ಇತನು ಶ್ರೀ ಯಲ್ಲಪ್ಪ ತಂದೆ ಮಲ್ಲಪ್ಪ ಚಿಗರಳ್ಳಿ  ಸಾಃ ಮೂದಬಾಳ (ಬಿ0 ಇತನಿಗೆ ಮುಟ್ಟಿದ್ದಕ್ಕಾಗಿ ಏ ಹೊಲೆಯ ಸೂಳೆ ಮಗನೇ ನನಗೆ ಮುಟ್ಟಿಸಿಕೊಳುತ್ತಿಯಾ?  ರಂಡೀ ಮಗನೆ  ಸೂಳೆ ಮಗನೆ ಎಂದು ನನ್ನ ಎದುರಿನಲ್ಲಿಯೇ ಜಾತಿ ಎತ್ತಿ ಬೈಯುತ್ತಿರುವಾಗ ನನ್ನ ಮಗನಾದ ಚಂಧ್ರಶೇಖರ ಇತನು ಇಬ್ಬರೂ ಜಗಳಾಡುವ ಸಂದರ್ಭ ಕಂಡ ಬಾಗಪ್ಪನನ್ನು ತಳ್ಳಿಕೊಂಡು ಓಣಿಯೊಳಗೆ ಹೊಗುತ್ತಿರುವಾಗ  ಶ್ರೀ ಯಲ್ಲಪ್ಪ ತಂದೆ ಮಲ್ಲಪ್ಪ ಚಿಗರಳ್ಳಿ ಇತನು  ಕಲ್ಲಿನಿಂದ ನನ್ನ ಮಗನಾದ ಚಂದ್ರಶೇಖರನ ತಲೆಗೆ ಬಲವಾಗಿ ಹೊಡೆದು ರಕ್ತಸಿಕ್ತ  ಭಯಂಕರ ಗಾಯಗೊಳಿಸಿರುತ್ತಾರೆ ನನ್ನ ಮಗನಿಗೆ ಜಾತಿ ಎತ್ತಿ ಏ ಹೊಲೆಯ ಸೂಳೆ ಮಗನೆ ರಂಡೀ ಮಗನೆ ಎಂದು ಬೈಯುತ್ತಾ ಊರೊಳಗೆ ಹೋಗಿ ನಮ್ಮ ಓಣಿಯ ಮುಖಂಡರನ್ನು ನಮ್ಮ ಹರಿಜನ ಓಣಿಯವರೆಗೂ ಕರೆ ತಂದು ಹಲ್ಲೆ ಮಡಿ ಜೀವ ಬೇದರಿಕೆ ಹಕಿದವರಲ್ಲಿ ಈ ಕೆಳಕಂಡವರು ಇರುತ್ತಾರೆ 1) ಹಣಮಂತ ತಂದೆ ಬೆಂಚಪ್ಪ ಪೂಜರಿ, 2) ಶಿವಪ್ಪ ತಂಧೆ ಬೆಂಚಪ್ಪ ಪೂಜಾರಿ 3) ಈರಣ್ಣಾ ತಂದೆ ಬಸಣ್ಣ ಉಕ್ಕನಾಳ, 4) ಸಾಯಿಬಣ್ಣ ತಂದೆ ಗುರಪ್ಪ ಮರಡಗಿ  5) ನಿಂಗಪ್ಪ ತಂದೆ ಮಲ್ಲೇಶಿ ಕೊಂತಲ್ 6) ನಿಂಗಪ್ಪ ತಂದೆ ಮಲ್ಲಪ್ಪ ಯಳವರ, 7) ಸಾಯಿಬಣ್ಣ ತಂದೆ ಬಸಪ್ಪ ಚಿಗರಳ್ಳಿ, 8) ಮಂಜು ತಂದೆ ಶಿವಪ್ಪ 9) ಭೀಮಾಶಂಕರ ತಂದೆ ಹಣಮಂತ 10) ರವಿ ತಂದೆ ಹಣಮಂತ  11) ಬಸಪ್ಪ ತಂದೆ ಗುರಪ್ಪ  ಮಾರಡಗಿ 12 ) ನಿಂಗಪ್ಪ ತಂದೆ ಸಾಯಿಬಣ್ಣ ಚಿಗರಳ್ಳಿ, 13) ನಾಗಪ್ಪ ತಂದೆ ಸಾಯಿಬಣ್ಣ  ಇಷ್ಟೇಲಾ ಜನರು ಮೂದಬಾಳ (ಬಿ) ಗ್ರಾಮದವರಿದ್ದು ನಮ್ಮ ಓಣಿಯವರೆಗೂ ಬಂದು ಗುಂಡಾಗಿರಿ ಪ್ರದರ್ಶಿಸಿ  ಏ ಹೊಲೆಯ ಸೂಳೆ ಮಕ್ಕಳೇ ಸೊಕ್ಕು ಬಹಳ ಆಗಿದೆ ಎಂದು ಪದೆ ಪದೆ  ಜಾತಿ ಎತ್ತಿ ಹೀನಾಯಮಾನವಾಗಿ ಬೈಯ್ದು  ಅಪಮಾನಗೊಳಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.