POLICE BHAVAN KALABURAGI

POLICE BHAVAN KALABURAGI

22 May 2016

Kalaburagi District Reported Crimes.

ರೇವೂರ ಠಾಣೆ : ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಯಲ್ಲಿ   ಉಪಚಾರ  ಕುರಿತು  ದಾಖಲಾಗಿದ್ದ ಶ್ರೀ ಲಕ್ಕಪ್ಪಾ ತಂದೆ ಹಣಮಂತರಾಯ ಮಾಂಗ ವಯಾ;20 ಜಾತಿ;ಮಾಂಗ ಸಾ:ನೀಲೂರ(ಬಿ) ಗ್ರಾಮ  ತಾ||ಅಫಜಲಪೂರ   ಇವರು   ಎಮ್,ಎಲ್,ಸಿ  ಹೇಳಿಕೆಯನ್ನು  ಪಡೆದುಕೊಂಡು  ಪರುತಪ್ಪಾ  ಸಿಹೆಚ್,ಸಿ 406 ರವರು  ಪಡೆದುಕೊಂಡು ಠಾಣೆಗೆ ತಂದು  ಹಾಜರು  ಪಡಿಸಿದ್ದು. ಸದರಿ  ಹೇಳಿಕೆ ಸಾರಾಂಶ ವೆನೆಂದರೆ ನಾನು  ಈ ಮೇಲ್ಕಂಡ  ವಿಳಾಸದ  ನಿವಾಸಿತನಿದ್ದು  ಕೂಲಿ ಕೆಲಸ ಮಾಡಿಕೊಂಡು  ಪರಿವಾರದೊಂದಿಗೆ  ಉಪಜೀವನ ಸಾಗಿಸುತ್ತಿದ್ದೇನೆ.ನಿನ್ನೆ ದಿನಾಂಕಃ20/05/2016 ರಂದು 2 ಪಿಎಮ್ ಕ್ಕೆ ನನ್ನ ದೊಡ್ಡಪ್ಪನ ಮಗಳಾದ ಶೃತಿ ಇವಳು ಮನೆಯ ಮಾಳಿಗೆ ಮೇಲೆ ಬಟ್ಟೆ ತೆಗೆಯುತ್ತಿದ್ದಾಗ ಅಲ್ಲೆ ಪಕ್ಕದಲ್ಲಿರುವ ಹಾಲ ಕಟ್ಟಿಯ ಹತ್ತಿರ ಕುಳಿತ ನಮ್ಮ ಗ್ರಾಮದ ಶಿವಕುಮಾರ ತಂದೆ ಸಾಯಬಣ್ಣಾ ಮಾಂಗ ಈತನು  ಅವಳಿಗೆ ಏ ರಂಡಿ ಅಂತಾ ಬೈದ್ದಿರುತ್ತಾನೆ. ಆಗ ನನ್ನ ದೊಡ್ಡಮ್ಮಳಾದ ಮಹಾದೇವಿ ಇವಳು ಶಿವಕುಮಾರ ಬೈದ್ದಿರುವುದನ್ನು ಕೇಳಿ ಶಿವಕುಮಾನಿಗೆ  ನನ್ನ ಮಗಳಿಗೆ ಏಕೆ ಬೈಯುತ್ತಿದ್ದಿಯಾ ಅಂತಾ ಕೇಳಿದಾಗ ಶಿವಕುಮಾರನು ಬೈಯುತ್ತೇನೆ ಏನ್ನ ಮಾಡಕೊಳ್ಳತ್ತಿರಿ ಮಾಡಕೊಳ್ಳಿ ಅಂತಾ ಅಂದಿರುತ್ತಾನೆ.ಈ  ವಿಷಯ  ನಮ್ಮ  ದೊಡ್ಡಮ್ಮಳು  ನನಗೆ  ಮತ್ತು  ನನ್ನ ದೊಡ್ಡಪ್ಪನಾದ  ನಾಗಪ್ಪರವರಿಗೆ   ತಿಳಿಸಿದಾಗ   ನಾನು ನನ್ನ ದೊಡ್ಡಪ್ಪನಾದ ನಾಗಪ್ಪ, ನನ್ನ ತಾಯಿಯಾದ ಭಾರತಿಬಾಯಿ, ನನ್ನ ದೊಡ್ಡಮ್ಮಳಾದ ಮಹಾದೇವಿ ಎಲ್ಲರೂ ಕೂಡಿಕೊಂಡು ರಾತ್ರಿ 8-00 ಗಂಟೆ ಸುಮಾರಿಗೆ  ಶಿವಕುಮಾರನ ಮನೆಯವರಿಗೆ ಈ ವಿಷಯ ತಿಳಿಸಲು ಅವರ ಮನೆಗೆ ಹೋಗುತ್ತಿದ್ದಾಗ   ಅವರ ಮನೆಯ  ಹತ್ತಿರ ಇರುವ  ರಸ್ತೆಯಲ್ಲಿ  ಶಿವಕುಮಾರ ಮತ್ತು ಆತನ ಅಣ್ಣನಾದ ಲಕ್ಕಪ್ಪನು  ಇಬ್ಬರೂ  ನಿಂತಿದ್ದರು ಆಗ ನನ್ನ  ದೊಡ್ಡಪ್ಪನಾದ  ನಾಗಪ್ಪನು         ಲಕ್ಕಪ್ಪನಿಗೆ ನಿಮ್ಮ ತಮ್ಮ ನನ್ನ ಮಗಳಿಗೆ ವಿನಾಕಾರಣ ಮದ್ಯಾನ್ಹ ಬೈದಾನ ಅವನಿಗೆ  ಈ ರೀತಿ ಮಾಡದಂತೆ ತಿಳಿಸಿ ಹೇಳು  ಅಂತಾ ಹೇಳಿದಾಗ  ಲಕ್ಕಪ್ಪನು ನನ್ನ ದೊಡ್ಡಪ್ಪನಿಗೆ  ಭೋಸ್ಡಿ ಮಕ್ಕಳೇ ನನ್ನ  ತಮ್ಮನ  ಮೇಲೆ ವಿನಾ ಕಾರಣ ಸುಳ್ಳು ಅಪವಾದ ಹೊರಸುತ್ತಿಯಾ ಅಂತಾ ಬೈದು ಅಲ್ಲೆ  ಬಿದ್ದಿದ  ಕಲ್ಲನು  ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ಗೋಳಿಸಿದ, ಶಿವಕುಮಾರನು ತನ್ನ ಕೈಯಲಿದ್ದ ಬಡಿಗೆಯಿಂದ  ನನ್ನ ದೊಡಪ್ಪನ ಸೊಂಟದ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನನ್ನ ದೊಡಪ್ಪನು ನೇಲಕ್ಕೆ ಬಿದ್ದಾಗ ಚಿದಾನಂದ ಮತ್ತು ಪ್ರಭುಲಿಂಗ ಇಬ್ಬರೂ ಕಾಲಿನಿಂದ ಬೆನ್ನ ಮೇಲೆ ಒದ್ದಿರುತ್ತಾರೆ. ಆಗ ನನ್ನ ತಾಯಿ ಏಕೆ  ಹೊಡೆಯುತ್ತಿರಿ ಅಂತಾ ಕೇಳಿದಾಗ ಲಕ್ಕಪ್ಪನು ನನ್ನ ತಾಯಿಯಾದ ಭಾರತಬಾಯಿ ಇವಳಿಗೆ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಬಲಭುಲದ ಮೇಲೆ ಹೊಡೆದು ತೆರೆಚಿದ ಗಾಯಮಾಡಿ, ನನಗೆ ಲಕ್ಕಪ್ಪನು ಕೈಯಿಂದ ನನ್ನ ಎಡಗಣ್ಣಿನ ಮೇಲೆ ಹೊಡೆದು ಗುಪ್ತಗಾಯ ಮಾಡಿದನು ಆಗ ಶಿವಕುಮಾರನು ಬಡಿಗೆಯಿಂದ ನನ್ನ ಬೆನ್ನ ಮೇಲೆ ಹೊಡೆದು  ಗುಪ್ತಗಾಯ  ಮಾಡಿದನು. ಆಗ ಶಿವಪ್ಪ ತಂದೆ ಚಂದಪ್ಪ  ದೊಡಮನಿ ಈತನು ಈ ರಂಡಿ ಮಕ್ಕಳ ಸೋಕ್ಕು ಬಹಾಳ ಆಗಿದೆ ಇವರಿಗೆ ಖಲಾಸ ಮಾಡಿರಿ ಅಂತಾ ಜೀವದ ಬೇದರಿಕೆ ಹಾಕುತ್ತಿದ್ದಾಗ ನಮ್ಮ ಓಣಿಯವರಾದ ಬಸಪ್ಪ ತಂದೆ ಅಂಬಣ್ಣಾ  ಮಾಂಗ & ಸಿದ್ರಾಮ  ತಂದೆ ಲಕ್ಕಪ್ಪ  ದೊಡಮನಿ  ರವರು  ಜಗಳ ನೋಡಿ  ಬಿಡಿಸಿರುತ್ತಾರೆ ನಂತರ ನನಗೆ, ತಾಯಿಗೆ ಮತ್ತು ನನ್ನ ದೊಡ್ಡಪನಿಗೆ ಉಪಚಾರ ಕುರಿತು ನಮ್ಮ ತಂದೆಯವರಾದ ಶ್ರೀ ಹಣಮಂತ ತಂದೆ ರಾಯಪ್ಪ ಮಾಂಗ ರವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ಅಲ್ಲಿಂದ ಮತ್ತೆ ಸರಕಾರಿ ಆಸ್ಪತ್ರೆಗೆ ಕೆರೆತಂದು ಸೇರಿಕೆ ಮಾಡಿರುತ್ತಾರೆ.          ಕಾರಣ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಬರೆಯಿಸಿದ  ಹೇಳಿಕೆ ನೀಜವಿರುತ್ತದೆ. ಅಂತಾ ಹೇಳಿಕೆ  ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ- 22/16  ಕಲಂ 143,147,148,323,324,504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಂಡೆನು.     
ರೇವೂರ ಠಾಣೆ : ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಯಲ್ಲಿ   ಉಪಚಾರ  ಕುರಿತು  ದಾಖಲಾಗಿದ್ದ ಶ್ರೀ  ಚಿದಾನಂದ ತಂದೆ ಚಂದಪ್ಪ ಮಾಂಗ ವಯಃ 22 ಜಾಃ ಮಾಂಗ  ಉಃಒಕ್ಕಲುತನ ಸಾ|| ನೀಲೂರ  ತಾ|| ಅಫಜಲಪೂರ   ಇವರು   ಎಮ್,ಎಲ್,ಸಿ  ಹೇಳಿಕೆಯನ್ನು  ಪಡೆದುಕೊಂಡು  ಪರುತಪ್ಪಾ  ಸಿಹೆಚ್,ಸಿ 406 ರವರು  ಪಡೆದುಕೊಂಡು ಠಾಣೆಗೆ ತಂದು  ಹಾಜರು  ಪಡಿಸಿದ್ದು. ಸದರಿ  ಹೇಳಿಕೆ ಸಾರಾಂಶ ವೆನೆಂದರೆ ನಾನು  ಈ ಮೇಲ್ಕಂಡ  ವಿಳಾಸದ  ನಿವಾಸಿತನಿದ್ದು  ಒಕ್ಕಲುತನ ಕೆಲಸ ಮಾಡಿಕೊಂಡು  ಪರಿವಾರದೊಂದಿಗೆ  ಉಪಜೀವನ ಸಾಗಿಸುತ್ತಿದ್ದೇನೆ. ನಿನ್ನೆ ದಿನಾಂಕಃ20/05/2016  ರಂದು  ರಾತ್ರಿ 8-00 ಗಂಟೆ ಸುಮಾರಿಗೆ ನಾನು ಹಾಗೂ ಪ್ರಭುಲಿಂಗ ಇಬ್ಬರೂ  ನಮ್ಮ  ದೊಡ್ಡಪ್ಪನ ಮನೆಯ ಹತ್ತಿರ ಮಾತನಾಡುತ್ತಾ ನಿಂತಾಗ ಮನೆಯ ಹತ್ತಿರ ಇರುವ ರಸ್ತೆಯಲ್ಲಿ ಶಿವಕುಮಾರ ಮತ್ತು ಆತನ ಅಣ್ಣನಾದ ಲಕ್ಕಪ್ಪನು ಇಬ್ಬರೂ ಮಾತನಾಡುತ್ತಾ ನಿಂತಿದ್ದರು, ನಮ್ಮ ಸಮಾಜದವರಾದ ನಾಗಪ್ಪ. ಆತನ ಹೆಂಡತಿಯಾದ   ಮಹಾದೇವಿ, ಲಕ್ಕಪ್ಪ ತಂದೆ ಹಣಮಂತ ಮಾಂಗ ಮತ್ತು ಆತನ ತಾಯಿಯಾದ ಭಾರತಬಾಯಿ ಗಂಡ ಹಣಮಂತ ಮಾಂಗ  ಎಲ್ಲರೂ ಬಂದು ಅವರಲ್ಲಿ  ನಾಗಪ್ಪನು  ಲಕ್ಕಪ್ಪನಿಗೆ ಏ ಭೋಸ್ಡಿ ಮಗನೇ ನಿನ್ನ ತಮ್ಮನಿಗೆ ಬುದ್ದಿ ಹೇಳಿಕೆ ಬರೋಲ್ಲೇನೋ  ನಿನ್ನ ತಮ್ಮ ಶಿವ್ಯಾ ನನ್ನ ಮಗಳಿಗೆ ಮದ್ಯಾನ್ಹ ಬೈದಾನ ಅಂತಾ ಬೈದು ಅಲ್ಲೆ ಬಿದ್ದ  ಬಡಿಗೆಯನ್ನು  ತೆಗೆದುಕೊಂಡು ಲಕ್ಕಪ್ಪನ ಬಲಗಾಲ  ತೊಡೆಯ ಮೇಲೆ ಹೊಡೆದಿರುತ್ತಾನೆ. ಅವರ ನಾಗಪ್ಪನ ಸಂಬಂದಿಕರಾಧ ಹಣಮಂತ ತಂದೆ ರಾಯಪ್ಪ ಮಾಂಗ, ರಾಯಪ್ಪ ತಂದೆ ನಾಗಪ್ಪ ಮಾಂಗ, ಸಾಯಬಣ್ಣಾ ತಂದೆ ನಾಗಪ್ಪ ಮಾಂಗ, ಅನೀಲ ತಂದೆ ನಾಗಪ್ಪ ಮಾಂಗ, ಗಣಪತಿ ತಂದೆ ಹಣಮಂತ ಮಾಂಗ ಎಲ್ಲರೂ  ಬಂದರು ನಾನು ಹಾಗೂ  ಪ್ರಭೂ  ಇಬ್ಬರೂ ಹೋಗಿ ನಾನು ಏಕ್ಕೆ ಲಕ್ಕಪ್ಪನಿಗೆ  ಹೊಡೆಯುತ್ತಿದ್ದರಿ ಅಂತಾ  ಕೇಳಿದಾಗ  ಹಣಮಂತ ತಂದೆ ರಾಯಪ್ಪ ಮಾಂಗ ಈತನು  ನನಗೆ  ತನ್ನ ಕೈಯಲಿದ್ದ ಕಟ್ಟಿಗೆಯಿಂದ ನನ್ನ  ಎಡಗೈ ಮೇಲೆ  ಹೊಡೆದನು. ಪ್ರಭೂಗೆ ರಾಯಪ್ಪನು ಕಟ್ಟಿಗೆಯಿಂದ ತಲೆಯ ಎಡಭಾಗಕ್ಕೆ  ಹೋಡೆದು  ರಕ್ತಗಾಯ ಮಾಡಿದನು, ಶಿವಕುಮಾರನಿಗೆ  ಗಣಪತಿಯು ಬಲಗೈ ಮೇಲೆ  ಹೊಡೆದನು ಮನೆಯಿಂದ  ಬಂದಂತಹ  ಪಾರ್ವತಿಗೆ  ಭಾರತಿ ಕಲ್ಲಿನಿಂದ ಮೋಳಕಾಲ ಮೇಲೆ ಇಂದುಬಾಯಿಗೆ ಮಹಾದೇವಿ  ಕೈಯಿಂದ  ಕಪಳ ಮೇಲೆ  ಹೊಡೆದಿರುತ್ತಾಳೆ. ಆಗ ಬಸಪ್ಪ ತಂದೆ ಅಂಬಣ್ಣಾ  ಮಾಂಗ & ಪರಮೇಶ್ವರ ತಂದೆ ರಾಯಪ್ಪಾ  ಮಾಂಗ ರವರು ಜಗಳ  ಬಿಡಿಸಿರುತ್ತಾರೆ. ಆಗ ಲಕ್ಕಪ್ಪ ತಂದೆ ಹಣಮಂತ , ಸಾಯಬಣ್ಣಾ ತಂದೆ ನಾಗಪ್ಪ ಮಾಂಗ, ಅನೀಲ ತಂದೆ ನಾಗಪ್ಪ ಮಾಂಗ ಇವರು ಭೋಸ್ಡಿ ಮಕ್ಕಳೆ ಇವತ್ತು  ಇವರು  ಬಂದು  ಬಿಡಿಸಿದಕ್ಕೆ   ಉಳದಿರಿ ಇಲ್ಲಾ ಅಂದ್ರೆ ನಿಮಗೆ ಜೀವಸಹಿತ  ಬಿಡುತ್ತಿರಲಿಲ್ಲಾ ಅಂತಾ ಜೀವದ  ಬೇದರಿಕೆ  ಹಾಕಿದರು. ನಂತರ  ಪರಮೇಶ್ವರ ರವರು  ನನಗೆ, ಪ್ರಭುಗೆ,ಲಕ್ಕಪ್ಪನಿಗೆ ಶಿವಕುಮಾರನಿಗೆ ಇಂದು ಬಾಯಿಗೆ ಪಾರ್ವತಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ  ಕರೆದುಕೊಂಡು ಬಂದು ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಯಲ್ಲಿ  ಸೇರಿಕೆ  ಮಾಡಿರುತ್ತಾನೆ.ಕಾರಣ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ  ಅಂತಾ ಹೇಳಿಕೆ  ನೀಡಿದ್ದು.   ಸದರಿ ಹೇಳಿಕೆ  ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ- 23/16  ಕಲಂ 143,147,148,323,324,504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಂಡೆನು.              
ದೇವಲಗಾಣಗಾಪೂರ ಠಾಣೆ : ದಿ:21-05-2016 ರಂದು 5:30 ಪಿಎಂಕ್ಕೆ ಪಿರ್ಯಾದಿ ಡಾ|| ನಾಮದೇವ ರಾಠೋಡ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಶ್ರೀ ಮಹಿಬೂಬ ಪಟೇಲ್ ಪ್ರಭಾರೆ ಪಿಡಿಓ ಗ್ರಾ ಪಂ. ದೇವಲಗಾಣಗಾಪುರ ಹಾಗೂ ಚವಡಾಪೂರ ಇವರನ್ನು ದಿನಾಂಕ: 03-05-2016 ರಂದು ಸೇವೆಯಿಂದ ಅಮಾನತ್ತು ಗೋಲಿಸಿರುತ್ತಾರೆ. ಅಮಾನತ್ತು ಅವಧಿಯಲ್ಲಿ ಶ್ರೀ ಮಹಿಬೂಬ ಪಟೇಲ್ ಪಿ.ಡಿಓ ಇವರು ದೇವಲಗಾಣ ಗಾಪುರ ಗ್ರಾಮ ಪಂಚಾಯತಿಯ 72 ಹಾಗೂ ಚವಡಾಪುರ ಗ್ರಾಮ ಪಂಚಾಯಿತಿಯ 12. ಫಾರಂ ನಂ.9 ಮತ್ತು ಫಾರಂ. ನಂ. 11 ಎ ದಾಖಲೆಗಳನ್ನು ಪಂಚ ತಂತ್ರದಲ್ಲಿ ಅಳವಡಿಸಿರುತ್ತಾರೆ. ಇದು ಕಾನೂನು ಬಾಹಿರ ಅಪರಾಧವಾಗಿರುತ್ತದೆ. ಆದ್ದರಿಂದ ಸದರಿ ಸಿಬ್ಬಂದಿಯವರ ಮೇಲೆ ಕ್ರೀಮಿನಲ್ ಮೊಕದ್ದಮೆ ಹೂಡಿ ಸೂಕ್ತ ಕ್ರಮ ಜರುಗಿಸಸಲು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ ರವರು ಆದೇಶಿಸಿದ ಮೇರೆ ಶ್ರೀ ಮಹಿಬೂಬ ಪಟೇಲ್ ಪ್ರಭಾರ ಪಿ.ಡಿ.ಓ ಗ್ರಾ. ಪಂ ದೇವಲ ಗಾಣಗಾಪುರ ಹಾಗೂ ಚವಡಾಪುರ ಇವರ ಮೇಲೆ ಕ್ರೀಮಿನಲ್ ಮೊಕದ್ದಮೆ ಹೂಡಿ ಕ್ರಮ ಜರುಗಿಸಲು ಕೋರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 42/2016 U/s 166 (A) 188 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.
ನಿಂಬರ್ಗಾ ಠಾಣೆ : ದಿನಾಂಕ 21/05/2016 ರಂದು 1030 ಎ.ಎಮ ಕ್ಕೆ ಪಿ.ಎಸ್.ಐ ನಿಂಬರ್ಗಾ ರವರು ಠಾಣೆಗೆ ಬಂದು ತಾವು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಎಮ.ಎಲ.ಸಿ ವಿಚಾರಣೆ ಕುರಿತು ಹೋದಾಗ ಉಪಚಾರನಿರತ ಚಂದ್ರಕಾಂತ ತಂದೆ ಈರಣ್ಣಾ ಹೊಸಮನಿ ಇವರ ಲಿಖಿತ ಫಿರ್ಯಾದಿ ಸ್ವೀಕರಿಸಿ ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ ಶಾರದಾಬಾಯಿ ಇವಳು ಅಂಗನವಾಡಿ ಕಾರ್ಯಕರ್ತೆ ಇದ್ದು ಅಂಗನವಾಡಿಯಲ್ಲಿ ಅಕ್ಕಿ, ಗೊಧಿ, ಸೆಂಗಾ ಕಾಳು ಇವುಗಳನ್ನು ಕದ್ದು ಮಾರಾಟ ಮಾಡುವಾಗ ಫೀರ್ಯಾದಿ ಹಿಡಿದು ಇಲಾಖೆಯ ಮತ್ತು ಊರವರ ಗಮನಕ್ಕೆ ತಂದಿದ್ದು ಸದರಿಯವಳು ಆರೋಪಿ ಲಕ್ಷ್ಮಣನೊಂದಿಗೆ ಅನೈತಿಕ ಸಂಭಂಧ ಹೊಂದಿದ್ದು ಅವಳ ಮೇಲು ಕಟ್ಟಿ ದ್ವೇಶ ಸಾಧೀಸಿ ಫಿರ್ಯಾದಿ ಮತ್ತು ಆತನ ಕಡೆಯವರಿಗೆ ಶಾರದಾಬಾಯಿ ಮತ್ತುಲಕ್ಷ್ಮಣನಕಡೆಯವರು ದಿನಾಂಕ 20/05/2016 ರಂದು 1930 ಗಂಟೆಗೆ ಅಂಗನವಾಡಿ ಕೇಂದ್ರದ ಎದುರು ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ಜಗಳ ಮಾಡಿ ಕೈಯಿಂದ, ಬಡಿಗೆಯಿಂದ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಜೀವ ಭಯಪಡಿಸಿರುತ್ತಾರೆ.
ನಿಂಬರ್ಗಾ ಠಾಣೆ : ಇಂದು ದಿನಾಂಕ 21/05/2016 ರಂದು 0130 ಗಂಟೆಗೆ ಶ್ರೀ ನಾಗಮ್ಮ ಗಂಡ ಶ್ರೀಪತಿ ಕ್ಷೇತ್ರಿ @ ಕಟಬೂ ವ|| 75 ವರ್ಷ, ಜಾ|| ಕಟಬೂ, || ಮನೆಕೆಲಸ, ಸಾ|| ಹಿತ್ತಲಶಿರೂರ, ತಾ|| ಆಳಂದ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಸಂಕ್ಷಿಪ್ತ ಸಾರಾಂಶವೇನೆಂದರೆ - ದಿನಾಂಕ 20/05/2016 ರಂದು 0730 ಪಿ.ಎಮ ಕ್ಕೆ ನನ್ನ ಮೊಮ್ಮಗಳು ಸುನಿತಾ ಕೂಡಿ ನಮ್ಮೂರಿನ ಶಾರದಾ ಅಂಗನವಾಡಿ ಟೀಚರ ಮನೆಗೆ ಹೊಸದಾಗಿ ಮದುವೆಯಾದವರ ಸರ್ವೆ ಹೆಸರು ಬರೆಸಲು ಹೋದಾಗ ಅಂಗನವಾಡಿ ಮುಂದೆ ಶಾರದಾ ಟೀಚರ ಮತ್ತು ನಾನು, ನನ್ನ ಮೊಮ್ಮಗಳು ಮಾತನಾಡುತ್ತಿದ್ದಾಗ ನಮ್ಮೂರಿನ 01] ಈರಣ್ಣಾ ತಂದೆ ಭೀಮಶಾ ಹೋಸಮನಿ, 02] ಪೂಜಾ ಗಂಡ ಈರಣ್ಣ, 03] ಭೀಮಶಾ ತಂದೆ ಈರಣ್ಣಾ ಹೊಸಮನಿ, 04] ಸುಶಿಲಾಬಾಯಿ ಗಂಡ ಭೀಮಶಾ ಹೊಸಮನಿ, 05] ಚಂದ್ರಶಾ ತಂದೆ ಈರಣ್ಣಾ ಹೊಸಮನಿ, 06] ಸುರೇಖಾ ಗಂಡ ಚಂದ್ರಶಾ ಹೊಸಮನಿ ಎಲ್ಲರೂ ಏ ರಂಡಿ ಮಕ್ಕಳೆ ಕಟಬುರ ಅಂತ ಬೈದನು ನಾನು ಕೇಳಲು ಹೋಗಿದ್ದಕ್ಕೆ ನನಗೆ ಚಂದ್ರಾಶಾನು ಬಡಿಗೆಯಿಂದ ಬಲ ಮುಂಡಿಯ ಮೇಲೆ ಹೊಡೆದಿರುತ್ತಾನೆ. ನನ್ನ ಮೊಮ್ಮಗಳಿಗೆ ಈರಣ್ಣನು ಚಾಕುವಿನಿಂದ ಎಡಗೈ ಮೇಲೆ ಹೊಡೆದು ನಿನಗೆ ಇವತ್ತು ಬಿಡಂಗಿಲ್ಲ ರಂಡಿ ಅಂತ ಹೊಲಸು ಬೈದಿರುತ್ತಾನೆ. ಅಂಬುಬಾಯಿ ಗಂಡ ರಾಮಚಂದ್ರ ಕಟಬು ಇವಳು ಬಿಡಿಸಲು ಬಂದಿದ್ದಕ್ಕೆ ಸುರೇಖಾ ಮತ್ತು ಸುಶಿಲಾಬಾಯಿ ಇಬ್ಬರೂ ಕೈ ಹಿಡಿದು ಜಗ್ಗಾಡಿ ಕೈಯಿಂದ ಹೊಟ್ಟೆ, ಬೆನ್ನಿನ ಮೇಲೆ ಹೊಡೆದಿರುತ್ತಾರೆ. ಪೂಜಾ ಇವಳು ನನ್ನ ಮೊಮ್ಮಗಳಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾಳೆ, ಆರೋಪಿತರೆಲ್ಲರೂ ಈ ರಂಡಿ ಮಕ್ಕಳಿಗೆ ಬಿಡಾದು ಬೇಡ ಅಂತ ಅನ್ನುತ್ತಿದ್ದಾಗ ಕಿರಣ ತಂದೆ ಲಕ್ಷ್ಮಣ ಕ್ಷೇತ್ರಿ ಮತ್ತು ರಾಮಚಂದ್ರ ತಂದೆ ಶ್ರೀಪತಿ ಇವರು ಬಿಡಿಸಿರುತ್ತಾರೆ. ಕಾರಣ ನಮಗೆ ಹೊಡೆ ಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 56/2016 ಕಲಂ 143, 147, 148, 323, 324, 354, 504, 506, ಸಂ. 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು .