POLICE BHAVAN KALABURAGI

POLICE BHAVAN KALABURAGI

27 April 2014

Gulbarga District Reported Crimes

ಕೊಲೆ ಪ್ರಕರಣದ ಆರೋಪಿತನ ಬಂಧನ :
ರೋಜಾ ಠಾಣೆ : ದಿನಾಂಕ: 25/03/2014 ರಂದು ಮಧ್ಯಾನ 13:15 ಗಂಟೆಗೆ ಫಿರ್ಯಾದಿ ಶ್ರೀ ಸೈಯ್ಯದ ರಫತ ರಹೆನ ತಂದೆ ಸೈಯ್ಯದ ಅಬ್ದುಲ ಸತ್ತಾರ ಸಾ: ನ್ಯಾಶನಲ್ ಪ್ಲಾವರ ಸ್ಕೂಲ ಹತ್ತಿರ ಮುಸ್ಲಿಂ ಚೌಕ್ ಮೋಮಿನಪುರ ಇವರು ಕೊಟ್ಟ ದೂರು ಅರ್ಜಿಯ ಸಂಕ್ಷಿಪ್ತ ಸಾರಾಂಶ ಏನೆಂದರೆ ತನ್ನ ಅಣ್ಣ ಸೈಯ್ಯದ ಜಾವೀದ ನುಮಾನ ಸಾ: ಮನೆ ನಂ. 7-1105/34/38 ನೆಹರು ಗಂಜ ಬ್ಯಾಂಕ ಕಾಲೋನಿ ಗುಲಬರ್ಗಾ ಇವರು ದಿನಾಂಕ: 24/03/2014 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ತಮ್ಮ ಕುಟುಂಬಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದು ಮನೆಯ ಕಾಯಲು ನಂಬಿಗಸ್ತವಾಚಮನ ಅಬ್ದುಲ ನಬಿ ತಂದೆ ಅಲಾವುದ್ದಿನ ಸಾಬ ಬಿದನೂರ ವಯ: 55 ಸಾ: ಗ್ರೀನ ಸರ್ಕಲ್ ಮದೀನಾ ಕಾಲೋನಿ ಜಿಲಾನಾಬಾದ ಇವರಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಈ ವಿಷಯವನ್ನು ಮನಗಂಡು ಅಪರಿಚಿತ ದುಷ್ಕರ್ಮಿಗಳು ಉಪಾಯದಿಂದ ಮನೆಯಲ್ಲಿ ಪ್ರವೇಶ ಮಾಡಿ ವಾಚಮನ ಈತನಿಗೆ ಯಾವುದೋ ಮತ್ತುಬರುವ ಪದಾರ್ಥವನ್ನು ಕುಡಿಸಿ ಅವನು ಮೂರ್ಚೆ ಹೋದ ನಂತರ ಅವನ ಕೈಕಾಲು ಕಟ್ಟಿ ಮನೆಯಲ್ಲಿಯ ಅಲಮಾರಗಳ ಒಡೆದು ಒಟ್ಟು ಅಂದಾಜು 21,43,800/-ರೂಪಾಯಿ ಬೆಲೆಯುಳ್ಳ ಒಟ್ಟು 726 ಗ್ರಾಂ ಬಂಗಾರದ ಆಭರಣ ಮತ್ತು ನಗದು ಸೇರಿ ಮನೆ ದರೋಡೆ ಮಾಡಿ ಯಾವುದೇ ಸಾಕ್ಷಿಪುರಾವೆ ಸಿಗದಹಾಗೆ ವಾಚಮನ ಅಬ್ದುಲ ನಬಿ ಈತನಿಗೆ ಹರಿತವಾದ ಮಾರಕಾಸ್ತ್ರದಿಂದ ಕುತ್ತಿಗೆ ಕೊಯ್ದು ಕೊಲೆಮಾಡಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಅಲ್ಲದೇ ಫಿರ್ಯಾದಿ ಅಣ್ಣನವರ ರೀಯಲ ಎಸ್ಟೆಟ್ ದಾಖಲಾತಿಗಳಿಗೂ ಬೆಂಕಿ ಹಚ್ಚಿ ಸುಟ್ಟು ಹೋಗಿದ್ದು ಇರುತ್ತದೆ. ಅಪರಿಚಿತ ಆರೋಪಿತರಿಗೆ ಪತ್ತೆಹಚ್ಚುವಂತೆ ಕೊಟ್ಟ ಫಿರ್ಯಾದಿಯ ಮೇಲಿಂದ ರೋಜಾ ಠಾಣೆಯಲ್ಲಿ ಗುನ್ನೆ ನಂ. 11/2014 ಕಲಂ. 302 ,201, 396, 120[ಬಿ] ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.ಮಾನ್ಯ ಎಸ್.ಪಿ. ಸಾಹೇಬ ಗುಲಬರ್ಗಾ ಮಾನ್ಯ ಅಪರ ಎಸ್.ಪಿ. ಸಾಹೇಬರು ಗುಲಬರ್ಗಾ ಮತ್ತು ಮಾನ್ಯ ಉದಯಕುಮಾರ ಬೇವಿನಗಿಡದ ಡಿ.ಎಸ್.ಪಿ. ಬಿ”  ಉಪ ವಿಭಾಗ ಗುಲಬರ್ಗಾರವರ ರವರ ಮಾರ್ಗದರ್ಶನದಲ್ಲಿ ಸಯ್ಯದ ಜಾವೆದ ನುಮಾನ ಇವರ ಮನೆಯ ವಾಚಮನ ಅಬ್ದುಲ ನಬಿ ಈತನಿಗೆ ಕೈಕಾಲು ಕಟ್ಟಿ ಕೊಲೆಮಾಡಿ ಸೈಯ್ಯದ ಜಾವೀದ ನೂಮಾನ ಇವರ ಮನೆಯಿಂದ ದರೋಡೆ ಮಾಡಿದ ಬಂಗಾರ ಮತ್ತು ನಗದು ಹಣ ದೋಚಿರುವ ಅಪರಿಚಿತ ದುಷ್ಕರ್ಮಿ ಆರೋಪಿತರ ಪತ್ತೆ ಕುರಿತು ವಿಷೇಶ ತಂಡ ರಚಿಸಿ ಶ್ರೀ ಎಂ. ನಾರಾಯಣಪ್ಪಾ ಪಿ.ಐ ರೋಜಾ ಠಾಣೆ ಗುಲಬರ್ಗಾ , ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ[ಕಾ.ಸು] ರೋಜಾ ಠಾಣೆ, ಶ್ರೀ ಭೀಮಶಾ ಎಎಸ್ ಐ, ಪಿಸಿ-645 ಮದರ ಸಾಬ, ಪಿಸಿ-248 ವೈಜನಾಥ, ಪಿಸಿ-954 ಅಂಬಾಜಿ, ಪಿಸಿ-256 ಅಂಬಾದಾಸಶಣ್ಮುಖ ಪಿಸಿ 496ಅಶೋಕ ಸಿಪಿಸಿ 175ಬಸವರಾಜ ವಸ್ತಾರಿ ಸಿಪಿಸಿ 938,  ಈ ತಂಡವು  ದರೋಡೆ ಮಾಡಿದ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಮೊಬಾಯಿಲ ದೂರವಾಣಿಯ ಜಾಲ ಹಿಡಿದು ಖಚಿತ ಬಾತ್ಮಿ ಬಂದ ಮೇರೆಗೆ ಆರೋಪಿ ವಸೀಮ ಅಬ್ಬಾಸ ಇರಾನಿ ತಂಧೆ ಗುಲಾಮ ಮಹ್ಮದ ವಃ 22 ವರ್ಷ ಉಃ ಬಿ.ಇ ವಿದ್ಯಾರ್ಥಿ ಜಾಃ ಮುಸ್ಲಿಂ (ಶಿಯಾ) (ಇರಾನಿ) ಸಾ// ಮನೆ ನಂ 1-952/2 ಆದರ್ಶ ಮಾರ್ಗ ಗೌಸ ನಗರ 8ನೇ ಕ್ರಾಸ ತಾರಪೈಲ ಗುಲಬರ್ಗಾ ಈತನಿಗೆ ದಿನಾಂಕ: 26/04/2014 ರಂದು ಬೆಳಗಿನಜಾವ 5-45 ಎಎಂಕ್ಕೆ ಆರೋಪಿನ ಮನೆ ತಾರಪೈಲ ಬಡಾವಣೇಯಲ್ಲಿ ದಸ್ತಗಿರಿ ಮಾಡಿದ ಆರೋಪಿತನಿಂದ ಕೃತ್ಯಕ್ಕೆ ಉಪಯೋಗಿಸಿದ 1) ಒಂಧು ಚಾಕು 2) ಒಡೆದ ಸಿಸಿ ಕ್ಯಾಮರಾದ ಡಿ.ವಿ.ಆರ್ ಹಾಗು 3) ಒಟ್ಟು 200 ಗ್ಯಾಂ ಬಂಗಾರದ ಆಭರಣಗಳು ಅ.ಕಿ 6೦೦೦೦೦=೦೦ ಲಕ್ಷ ಬೆಲೆವುಳ್ಳದ್ದು. ಜಪ್ತಿಮಾಡಿಕೊಂಡಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಒಬ್ಬ ಆರೋಪಿ ಸಯ್ಯದ ಆಬೆದ ಫ್ಯಸಲ ತಂದೆ ಜಾವೆದ ನುಮಾನ ಈತನು ತಲೆಮರೆಸಿಕೊಂಡಿದ್ದು ಪತ್ತೆಕ್ರಮ ಜಾರಿಯಲ್ಲಿ ಇರುತ್ತದೆ. ಸದರಿ ದಸ್ತಗಿರಿಯಾದ ಆರೋಪಿತನಿಗೆ ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಗೌಸಖಾನ ಮರತುರಕರ್ ಸಾ: ಶಹಾಬಾದ ರವರು ದಿನಾಂಕ: 26-04-2014 ರಂದು ಮದ್ಯಾಹ್ನ 1-00 ಗಂಟೆಗೆ ಶೇಖದಾವೂದ ತಂದೆ ಶೇಖಬಾಸುಮಿಯಾ ಸಾ: ಶಹಾಬಾದ ಇತನು ಮೊಟಾರ ಸೈಕಲ ನಂ ಕೆ.ಎ-32-ಎಲ್-8908 ನೇದ್ದರ ಮೇಲೆ ಶಹಾಪೂರ- ಜೇವರಗಿ ಮೇನ್ ರೋಡ ಚಿಗರಳ್ಳಿ ಸಮೀಪ ಗುಂಪಾದ ಹತ್ತಿರ ರೋಡಿನಲ್ಲಿ ಚಾಮನಾಳ ಗ್ರಾಮಕ್ಕೆ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ವಾಹನದ ಚಾಲಕನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಶೇಖ ದಾವೂದನ ಮೊಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಭಾರಿ ಗಾಯಗೊಳಿಸಿ ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ ನಂತರ ಶೇಖದಾವೂದನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಅವನಿಗೆ ಉಪಚಾರ ಫಲಕಾರಿಯಾಗದೇ ಸಾಯಾಂಕಾಲ 7-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆದಿತ್ಯ ತಂದೆ ಶರದ ಕುಲಕರ್ಣಿ ಸಾ: ಪ್ಲಾಟ ನಂ  70 ಶಾಸ್ತ್ರಿ ನಗರ ಹಳೆ ಜೆವರ್ಗಿ ರೋಡ ಗುಲಬರ್ಗಾ ರವರು ದಿನಾಂಕ 26-04-2014 ರಂದು ಫಿರ್ಯಾದಿಯು ತನ್ನ ಮೋಟಾರ ಸೈಕಲ ನಂಬರ ಕೆಎ-32 ಡಬ್ಲೂ-9486 ನೇದ್ದರ ಮೇಲೆ ತನ್ನ ಮನೆಗೆ ಹೋಗುವ ಕುರಿತು ಜಗತ ಸರ್ಕಲ ಮುಖಾಂತರ ಎಸ್.ವಿ.ಪಿ ಸರ್ಕಲ ಕಡೆಗೆ ಹೋಗುವಾಗ ಲಾಹೋಟಿ ಪೆಟ್ರೋಲ ಪಂಪ ಎದುರಿನ ಕ್ರಾಸ್ ಹತ್ತಿರ ಅಟೋರಿಕ್ಷಾ ನಂಬರ ಕೆಎ-32 ಬಿ-4300 ರ ಚಾಲಕನು ಲಾಹೋಟಿ ಕ್ರಾಸ್ ಏಷಿಯನ ಮಹಲ ಕಡೆಯಿಂದ ಘಂಟೋಜಿ ಸುಪರ ಬಜಾರ ಕಡೆಗೆ ಹೋಗುವ ಕುರಿತು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಅಟೋರಿಕ್ಷಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಗುರುಪಾದಪ್ಪ ತಂದೆ ಬಸಪ್ಪ ರಾಯಪ್ಪ ಗೌಡ ಸಾಃ ಕೃಷ್ಣ ನಗರ, ಕುಸನೂರ್ ರೋಡ್ ಗುಲಬರ್ಗಾ ರವರು ದಿನಾಂಕಃ 26/04/2014 ರಂದು 10.00 ಎ.ಎಂ. ಕ್ಕೆ ಕುಸನೂರ್ ರೋಡದಿಂದ ಜಯನಗರ ಕ್ರಾಸ್ ಕಡೆಗೆ ತಮ್ಮ ಟಿ.ವಿ.ಎಸ್. ಎಕ್ಸಲ್ ನಂ.ಕೆಎ-32 ಎಲ್-1776 ನೇದ್ದರ ಮೇಲೆ ಹೋಗುತ್ತಿರುವಾಗ, ಬನಶಂಕರಿ ಕಾಲೋನಿ ಜಯನಗರ ಕಡೆಯಿಂದ ಮೊ/ಸೈ ನಂ.ಕೆಎ.32/ಯು-0800 ನೇದ್ದರ ಚಾಲಕನಾದ ಬಾಳಲೋಚನ ದೇಸಾಯಿ ಈತನು ತನ್ನ ಮೊ/ಸೈಕಲನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ನಡೆಸುತ್ತಿದ್ದ  ಟಿ.ವಿ.ಎಸ್. ಎಕ್ಸಲ್ ನಂ.ಕೆಎ-32 ಎಲ್-1776 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿದಾರರಿಗೆ ಬಲಗಡೆ ತಲೆಯ ಮುಂಭಾಗಕ್ಕೆ ಭಾರೀ  ರಕ್ತಗಾಯ ಮತ್ತು ಟೊಂಕಕ್ಕೆ ಭಾರೀ ಗುಪ್ತ ಗಾಯ, ಬಲಗಾಲ ಮೊಣಕಾಲ ಕೆಳಗೆ ತೆರಚಿದ ರಕ್ತಗಾಯ ಹಾಗೂ ಬಲಕಿವಿಯಿಂದ ರಕ್ತ ಬಂದಿರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ ಲಕ್ಷ್ಮಿಪುತ್ರ ತಂದೆ ಶಿವಮೂರ್ತಿ ಬಿರಾದಾರ ಸಾ:ದೇವಿ ನಗರ ಗುಲಬರ್ಗಾ ಇವರು ದಿನಾಂಕ:-21/04/2014 ರಂದು ಬೆಳಿಗ್ಗೆ 07:00 ಗಂಟೆ ಸುಮಾರಿಗೆ ನನ್ನ ತಂದೆ ಶಿವಮೂರ್ತಿ ಮತ್ತು ನಮ್ಮ ತಾಯಿ ಬಸಮ್ಮಾ ಇಬ್ಬರು ಕೂಡಿಕೊಂಡು ಬಂಗರಗಿ ಗ್ರಾಮಕ್ಕೆ ನಮ್ಮ ಟಿ.ವಿ.ಎಸ್. ಮೋಟಾರ ಸೈಕಲ ನಂ ಕೆ.ಎ-32 ಕ್ಯೂ-524 ನೇದ್ದರ ಮೇಲೆ ಹೋಗಿ ಮರಳಿ ಬರುತ್ತಿರುವಾಗ ಸುಂಟನೂರ ಕ್ರಾಸ ಹತ್ತಿರ ಎದುರಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ಮೆಹೆಂದ್ರಾ ಜೀಪ ನಂ ಎಂ.ಹಚ್-25 ಎ-761 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು   ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದು ನಮ್ಮ ತಾಯಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ನಂತರ ಉಪಚಾರ ಕುರಿತು ನೇರವಾಗಿ ಸೋಲಾಪುರ ಯಶೋದಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ.ಅಂತಾ ವಗೈರೇ ಹೇಳಿಕೆ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲಕ್ಷ್ಮಿಪುತ್ರ ಇವರು ಪು:ನ ಠಾಣೆಗೆ ಹಾಜರಾಗಿ  ಪುರವಣಿ ಹೇಳಿಕೆ ನೀಡಿದೆನೆಂದರೆ ದಿನಾಂಕ: 23/04/2014 ರಂದು ನಾನು ಸೊಲಾಪೂರದಿಂದ ಗುಲಬರ್ಗಾಕ್ಕೆ ಬಂದಾಗ ನಮ್ಮ ತಂದೆಯವರು ಆಸ್ಪತ್ರೆಯ ಖರ್ಚು ವೆಚ್ಚ ಹೆಚ್ಚಾಗಿರುವದರಿಂದ ಯಶೊಧಾ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಿಸಿಕೊಂಡು ನಮ್ಮ ತಾಯಿಗೆ ಸೊಲಾಪೂರ  ಸಿವಿಲ್ ಆಸ್ಪತ್ರೆಗೆ ಸೇರಿಕೆ ಮಾಡುತ್ತಿದ್ದೆನೆಂದು ಹೇಳಿರುತ್ತಾರೆ. ದಿನಾಂಕ:-24/04/2014 ರಂದು ಬೆಳಿಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಕೊಟ್ಟು ಮನೆಗೆ ಹೋದಾಗ ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನಮ್ಮ ತಂದೆ ಶಿವಮೂರ್ತಿ ಇವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಮ್ಮ ತಾಯಿ ಬಸಮ್ಮಾ ಇವರು ಉಪಚಾರ ಪಡೆಯುತ್ತಾ ಮದ್ಯಾಹ್ನ 12:30 ಗಂಟೆ ಸುಮಾರಿಗೆ  ಉಪಚಾರ ಫಲಕಾರಿ ಆಗದೇ ಸೊಲಾಪೂರ ಸಿವಿಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಶ್ರೀ ರಾಜು ಕಮಲಾಪೂರಕರ ಶ್ರೀ ಸುಕ್ಷೆತ್ರ  ಕೊರಂಟಿ  ಹನುಮಾನ  ಗುಡಿಯ ಗುಲಬರ್ಗಾ ರವರು ದಿನಾಂಕ  27-04-2014 ರಂದು 1 ಎ ಎಮ್ ರವರೆಗೆ ಹನುಮಾನ ದೇವರ ಕಾರ್ಯಕ್ರಮ ಮುಗಿಸಿಕೊಂಡು ಬಾಗಿಲು ಗಳಿಗೆ  ಕೀಲಿ ಹಾಕಿ ಮನೆಗೆ ಹೋಗಿದ್ದು ಬೆಳಿಗ್ಗೆ  07:00  ಎ.ಎಮ್ ಸುಮಾರಿಗೆ  ಅರ್ಚಕರಾದ  ಶರಣಬಸ್ಸು ಚಿಂಚೋಳಿ ರವರು ಫೋನ ಮಾಡಿ ತಿಳಿಸಿದಮೇರೆಗೆ  ನಾನು  ಗುಡಿಗೆ  ಬಂದು ನೋಡಲಾಗಿ  ಪೂರ್ವ  ದಿಕ್ಕಿನ  ಬಾಗಿಲ ಮುರದಿದ್ದು  ಒಳಗಡೆ  ಹನುಮಾನ ಮೂರ್ತಿಯ ಬೆಳ್ಳಿಯ ಕವಚ ಇರಲಿಲ್ಲಾ ಹಾಗು ನಾಲ್ಕು ಹುಂಡಿಗಳು ಕಂಪೌಂಡ ಗೊಡೆಯ ಹೊರಗಡೆ ಒಯ್ದು ಒಡೆದು  ಹಣ ತೆಗೆದುಕೊಂಡಿದ್ದು ಇರುತ್ತದೆ  ಸದರಿ  ಬೆಳ್ಳಯ ಕವಚ  ಅಂದಾಜು ತೂಕ 10ಕೆ.ಜಿ ಅದರ ಅಂದಾಜು ಕಿಮ್ಮತ್ತು 5,00,000/-ರೂ ಹಾಗು ನಾಲ್ಕು  ಹುಂಡಿಯಲ್ಲಿಯ  ಅಂದಾಜು 40,000/- ರೂ ಇರಬಹುದು ಹೀಗೆ ಒಟ್ಟು 5,40,000/-ರೂ ಕಿಮ್ಮತ್ತಿನ  ಬೆಳ್ಳಿಯ  ಮುಖ ಕವಚ ಹಾಗು ಹಣ  ರಾತ್ರಿ  ವೇಳೆ ಬಾಗಿಲ ಮುರಿದು ಯಾರೋ ಕಳ್ಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶ ದ  ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಸಕಾFರಿ ಹಿರಿಯ ಪ್ರಾಥಮಿಕ ಶಾಲೆ ಬೇಲೂರ (ಜೆ) ಮುಖ್ಯ ಗುರುಗಳಾದ ಶ್ರೀ  ಶಾಂತವೀರ ತಂದೆ ರುದ್ರಮುನಿ ವೈದ್ಯ ಇವರು ದಿನಾಂಕ: 25.04.2014 ರಂದು ಮಧ್ಯಾಹ್ನ 1 ಗಂಟೆಗೆ ಮಕ್ಕಳಿಗೆ ಬಿಸಿ ಊಟ ನೀಡಿ ನಂತರ ಕೋಣೆಯ ಬಾಗಿಲಿಗೆ 2 ಗಂಟೆಗೆ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕ: 26-04-2014 ರಂದು 8 ಗಂಟೆಗೆ ಶಾಲೆಗೆ ಬಂದು ಬಿಸಿ ಊಟದ ಕೋಣೆಯ ಕೀಲಿ ತೆರೆದು ಅಡಿಗೆ ಮಾಡುವ ಸಿಬ್ಬಂದಿಯವರಾದ ಶ್ರೀಮತಿ ಶರಣಮ್ಮ , ಮಲ್ಲಮ್ಮ , ಲಕ್ಷ್ಮೀಬಾಯಿ, ಚಂದ್ರಕಲಾ ಇವರು ಸಹ ಬಂದಿದ್ದು ನಾನು ಕಂಪ್ಯೂಟರ್ ಕೋಣೆಯ ಕಡೆಗೆ ನೋಡಲಾಗಿ ಕೋಣೆಯ ಬಾಗಿಲ ಕೊಂಡಿ ಮುರಿದು ಬಾಗಿಲು ಖುಲ್ಲಾ ಇದ್ದು ಗಾಬರಿಯಾಗಿ ನೋಡಲಾಗಿ ಅಷ್ಟರಲ್ಲಿಯೇ ಅಲ್ಲೆ ಹೊರಟ ಗ್ರಾ,ಪಂ ಸದಸ್ಯರಾದ ಅಂಬಾರಾಯ ಪೂಜಾರಿ, ಹಾಗೂ ಅಡಿಗೆ ಸಿಬ್ಬಂದಿಯವರೂ ಕೂಡಿ ನೋಡಲಾಗಿ ಕಂಪ್ಯೂಟರ್ ಕೋಣೆಯಲ್ಲಿದ್ದ 3 ಕಂಪ್ಯೂಟರ್ ಮತ್ತ ಸ್ಪೀಕರ್ ಅ,ಕಿ: 1,06,015.50  ರೂ ಬೆಲೆಬಾಳುವಂತಹ ವಸ್ತುಗಳನ್ನು ಯಾರೋ ಕಳ್ಳರು ಕೋಣೆಯಲ್ಲಿ ಪ್ರವೇಶ ಮಾಡಿ ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮನುಷ್ಯನು ನೀರಿನಲ್ಲಿ ಮುಳುಗಿ ಸಾವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಲ್ಲು ತಂದೆ ನಾಗೇಂದ್ರಪ್ಪ ಕಟಕೆ  ಸಾ: ಹರಸೂರ ರವರು ಪ್ರತಿದಿವಸದಂತೆ ಇಂದು ಕೂಡಾ ಹರಸೂರ ಸೀಮಾಂತರ ಬೆಣ್ಣೆ ತೋರೆ ಸೀಮಾಂತರದಲ್ಲಿ ಮೀನು ಹಿಡಿಯಲು ಹೋಗಿದ್ದು,  ಮೀನು ಹಿಡಿದುಕೊಂಡು ಬೆಳಿಗ್ಗೆ 10-00 ಗಂಟೆಗೆ ಜಲಾಯಶದ ದಡಕ್ಕೆ ತೆಪ್ಪೆಯ ಮೇಲೆ ಕುಳಿತುಕೊಂಡು ಬರುತ್ತಿರುವಾಗ, ನೀರಿನ ಮೇಲೆ ತೇಲಾಡುತ್ತಿದ್ದ ಒಂದು ಅಪರಿಚಿತ ಗಂಡು ಮನುಷ್ಯನ ಶವವು ಕಂಡು ಬಂತು. ನಾನು, ಗಾಬರಿಗೊಂಡು ಈ ವಿಷಯ ನಮ್ಮೂರಿನ ಶರಣಪ್ಪ ತಂದೆ ತಿಪ್ಪಣ್ಣಾ ನಾಯಿಕೋಡಿ ಇವರಿಗೆ ತಿಳಿಸಿದಾಗ ಅವರು ಕೂಡಾ ಬಂದು ನೋಡಿದ್ದು, ಮೃತ ಅಪರಿಚಿತ ಮನುಷ್ಯನು ಸುಮಾರು 40-45 ವರ್ಷದವನಾಗಿದ್ದು, ಅರ್ಧ ತಲೆ ಬೋಳ ಇದ್ದು, ಎರಡು ಇಂಚು ಉದ್ದದಷ್ಟು ಕಪ್ಪು ದಾಡಿ ಇದ್ದು, ಈಗ ಸುಮಾರು 5-6 ದಿವಸಗಳ ಹಿಂದೆ ನೀರಿನಲ್ಲಿ ಬಿದ್ದಿದ್ದರಿಂದ, ಮೈಮೇಲಿನ ಚರ್ಮ ಸುಲಿದು ಹೋಗಿದಂತೆ ಕಂಡು ಬಂತು ಹಾಗೂ ನೀರಿನಲ್ಲಿ ಜಲಚರ ಪ್ರಾಣಿಗಳು ತಿಂದಿದ್ದರಿಂದ ಅಲ್ಲಿಲ್ಲಿ  ರಕ್ತ ಬರುತ್ತಿದ್ದು ಕಂಡು ಬಂತು ಆತ ನೋಡಲು ಅರೆ ಹುಚ್ಚನಂತೆ ಕಂಡು ಬರುತ್ತಿದ್ದು, ನಂತರ  ಶರಣಪ್ಪ ನಾಯಿಕೋಡಿ ಇವರು ಈ ವಿಷಯ ಪೊಲೀಸ ಠಾಣೆಗೆ ತಿಳಿಸಬೇಕು ಅಂತಾ ಹೇಳಿದಾಗ ನಾವಿಬ್ಬರು ಬಂದು   ಅಪರಿಚಿತ ಗಂಡು ಮನುಷ್ಯ ಈಗ ಸುಮಾರು 5-6 ದಿವಸಗಳ ಹಿಂದೆ ಎಲ್ಲಿಂದಲೋ ಬಂದು, ಜಲಾಶಯದಲ್ಲಿ ನೀರು ವವೈರೇ ಕುಡಿಯಲು ಹೋಗಿ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.