POLICE BHAVAN KALABURAGI

POLICE BHAVAN KALABURAGI

30 August 2016

Kalaburagi District Reported Crimes

ಕೊಲೆ ಪ್ರಕರಣ :
ಆಳಂದ ಠಾಣೆ : ದಿನಾಂಕ 13/10/2014 ರಂದು ಬೆಳಿಗ್ಗೆ ನನ್ನ ಗಂಡ ಮಕ್ಕಳು ಬದನೆಕಾಯಿ ಕಡೆಯಲು ಹೊಲಕ್ಕೆ ಹೋದರು ನಾನು 11:00 ಗಂಟೆಯ ಸುಮಾರಿಗೆ ಹೊಲಕ್ಕೆ ಹೊದೇನು, ಎಲ್ಲರೂ ಕೂಡಿ ಬದನೆಕಾಯಿ ಕಡೆದು ನನ್ನ ಮಕ್ಕಳು ಮೊದಲು ಮನೆಗೆ ಹೋಗಿರುತ್ತಾರೆ, ನಾನು ಹೊಲದಿಂದ ಮನೆಗೆ ಬರುವಾಗ ಸಾಯಂಕಾಲ 06:00 ಗಂಟೆಯ ಸುಮಾರಿಗೆ ನನ್ನ ಗಂಡನ ಮೋಬಾಯಿಲಗೆ ಫೋನ್ ಬಂದಿದ್ದು ಯಾರದು ಎಂದು ಕೇಳಿದಾಗ ನಮ್ಮೂರ ಬಸವರಾಜ ಕುಪ್ಪಣ್ಣಾ ಹತ್ತೆ ಇತನ ಫೋನ್ ಇದೆ ಎಂದು ಹೇಳಿದಾಗ ಅವರೊಂದಿಗೆ ಹೋಗಬೇಡ ಎಂದು ಹೇಳಿ ಮನೆಗೆ ಬಂದೇನು, ರಾತ್ರಿ 7:00 ಗಂಟೆಯ ಸುಮಾರಿಗೆ ನನ್ನ ಗಂಡ ಶರೆ ಕುಡಿದು ಮನೆಗೆ ಬಂದರು ನಮ್ಮ ಮನೆಯ ಮುಂದೆ 1) ಬಸವರಾಜ ಕುಪ್ಪಣ್ಣ ಹತ್ತೆ 2) ಬಸವರಾಜ ಝಳಕೆ ಇವರಿಬ್ಬರು ನನ್ನ ಗಂಡನನ್ನು ಸರಾಯಿ ಕುಡಿಸಲು ಕರೆದುಕೊಂಡು ಹೋದರು ಇಡಿ ರಾತ್ರಿ ಮನೆಗೆ ಬರಲಿಲ್ಲ, ದಿನಾಂಕ 14/10/2014 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಊರಿನ ಜನರು ಅಂದಾಡುವುದರಿಂದ ಗೊತ್ತಾಗಿದ್ದೇನೆಂದರೆ ಡಾ|| ವಿಜಯಕುಮಾರ ಭಗತ ಇವರ ಮನೆಯ ಮುಂದಿನ ಕಟ್ಟೆಯ ಮೇಲೆ ಸರಾಯಿ ಪಾಕೀಟ್ ಓರಿಜಿನಲ್ ಚ್ವಾಯಿಸ್ ಇದ್ದು ಅದು ವಿಷದ ಪುಡಿಯಿಂದ ಮಿಶ್ರಣವಾದ ವಾಸನೆ ಬರುತ್ತಿತ್ತು, ನನ್ನ ಗಂಡನು ಹೊರಳಾಡಿಸಲು ಅವನು ಮರಣ ಹೊಂದಿದ್ದು ಗೊತ್ತಾಯಿತು, ಅವನು ಅಲ್ಲಿ ಮಲಗಿದ್ದ ಸ್ಥಳದಲ್ಲಿ ಸರಾಯಿ ಹೊಂದಿದ ಹಸಿರು ಮಿಶ್ರಿತವಾದ ದ್ರವ ಚಲ್ಲಿದ್ದು ಕಂಡು ಬಂದಿರುತ್ತದೆ, ನನ್ನ ಗಂಡ ಸಾಯಂಕಾಲ 7:00 ಗಂಟೆಯಿಂದ ಇಂದು ಬೆಳಿಗ್ಗೆ 6:00 ಗಂಟೆಯ ಮಧ್ಯದಲ್ಲಿ ಮರಣ ಹೊಂದಿರುತ್ತಾನೆ, ನನ್ನ ಗಂಡ ಸತ್ತ ಬಗ್ಗೆ ಅವನ ಮರಣದಲ್ಲಿ ಸಂಶಯ ಇರುತ್ತದೆ, ಇದರ ಬಗ್ಗೆ ನನ್ನ ಗಂಡನ ಸಾವಿನ ಬಗ್ಗೆ ಪ್ರಾಣ ಭಯ ಇರುತ್ತದೆ ಎಂದು 2014 ನೇಯ ಸಾಲಿನ ಶಿವರಾತ್ರಿಯ ಮುಂದೆ ಆಳಂದ ಠಾಣೆಯಲ್ಲಿ ಧರ್ಮಣ್ಣಾ ಶಿವಶರಣಪ್ಪಾ ಪಾಟೀಲ್ ಇವರಿಂದ ನನ್ನ ಮಗನ ಪ್ರಾಣ ಭಯ ಇರುತ್ತದೆ ಎಂದು ನನ್ನ ಮಾವನಾದ ಖಂಡೋಬಾ ದವಲತ ಬಂಡಗರ ಇವರು ದೂರು ಸಲ್ಲಿಸಿರುತ್ತಾರೆ, ನನ್ನ ಗಂಡನು ಸತ್ತ ಬಗ್ಗೆ ಸಾವಿಗೆ ಸಂಶಯ ಇರುತ್ತದೆ, ಕಾರಣ ದಯಾಳುಗಳಾದ ತಾವು ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಶ್ರೀಮತಿ ಇಂದುಬಾಯಿ ಗಂಡ ಹಣಮಂತರಾಯ ಬಂಡಗರ ಮು|| ಕಿಣ್ಣಿ ಸುಲ್ತಾನ ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ಜೇವರಗಿ ಠಾಣೆ : ದಿನಾಂಕ 29.08.2016 ರಂದು ಮದ್ಯಾಹ್ನ ಚಿಗರಳ್ಳಿ ಕ್ರಾಸ್ ಹತ್ತಿರ ಹಣಮಂತ ಇಜೇರಿ ಇವರ ಹೊಟೇಲ ಹತ್ತಿರ  ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಇಟ್ಟು ಅಂದರ ಬಾಹರ ಏಂಬ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳದ ಕಡೆಗೆ ಎಲ್ಲರೂ ನಡೆದುಕೊಂಡು ಹೋಗಿ ಒಂದು ಹೊಟೇಲ ಗೋಡೆಯ ಮರೆಯಲ್ಲಿ ನಿಂತು ನೋಡಲು ಹೊಟೇಲ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದಾರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಮದ್ಯಾಹ್ನ 2.00 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿ ಜನರ ಸಹಾಯದಿಂದ ಏಕ ಕಾಲಕ್ಕೆ ದಾಳಿ ಮಾಡಿ ಅವರಿಗೆ ಹಿಡಿದು ಅವರಲ್ಲಿ ಒಬ್ಬನು ಓಡಿ ಹೋಗಿದ್ದು  ಸಿಕ್ಕವರಿಗೆ  ಹೆಸರು ವಿಳಾಸ ವಿಚಾರಿಸಲು ಅಂಗದ ಶೋದನೆ ಮಾಡಲು 1) ಪ್ರಕಾಶ ತಂದೆ ಶರಣಪ್ಪಗೌಡ ಪೊಲೀಸ್ @ ಚನ್ನಶೆಟ್ಟಿ ಸಾ: ಅಣಬಿ  ತಾಃ ಶಹಾಪೂರ 2) ಭಾಷಾಸಾಬ ತಂದೆ ಅಬ್ಬಾಸ ಅಲಿ  ಚೌದರಿ  ಸಾಃ ಚಿಗರಳ್ಳಿ  ಒಟ್ಟು ನಗದು ಹಣ 4650/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಔಶಕ್ಕೆ ತೆಗೆದುಕೊಂಡು  ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು 3. ಶರಣಪ್ಪ ತಂದೆ ಬೀರಪ್ಪ ಪೂಜಾರಿ  ಸಾಃ ಚಿಗರಳ್ಳಿ, ಅಂತಾ ತಿಳಿಸಿದ್ದು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ನಿಂಗನಗೌಡ ತಂದೆ ಶರಣಗೌಡ ಪಾಟೀಲ ಸಾ: ಮೌನೇಶ್ವರ ನಗರ ಜೇವರಗಿ ರವರು ತಮ್ಮ ಓಣಿಯಲ್ಲಿ ಕಿರಾಣಿ ಅಂಗಡಿ ಇದ್ದು, ನಾನು ಮತ್ತು ನನ್ನ ಹೆಂಡತಿ ಇಬ್ಬರು ಕಿರಾಣಿ ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತೇವೆ. ದಿನಾಂಕ: 28.08.2016 ರಂದು ಎಂದಿನಂತೆ ಮುಂಜಾನೆ 06.00 ಗಂಟೆಗೆ ನಮ್ಮ ಕಿರಾಣಿ ಅಂಗಡಿ ತೆರೆದು ರಾತ್ರಿ 9.00 ಗಂಟೆ ವರೆಗೆ ವ್ಯಾಪಾರ ಮಾಡಿಕೊಂಡು ಕಿರಾಣಿ ಅಂಗಡಿ ಬಾಗಿಲು ಕೀಲಿ ಹಾಕಿ ಮನೆಗೆ ಹೋಗಿದ್ದೇವು. ಇಂದು ದಿನಾಂಕ: 29.08.2016 ರಂದು ಮುಂಜಾನೆ 05.30 ಗಂಟೆ ಸುಮಾರಿಗೆ ನಾನು ಹಾಲು ತರಲು ನನ್ನ ಮೊಟಾರ ಸೈಕಲದ ಮೇಲೆ ನನ್ನ ಅಂಗಡಿ ಹತ್ತಿರದಿಂದ ಹೋಗುತ್ತಿದ್ದಾಗ ನಮ್ಮ ಅಂಗಡಿ ಬಾಗಿಲು ಕೀಲಿ ಮುರಿದು ಬಾಗಿಲು ತೆರೆದಿತ್ತು. ನಾನು ಗಾಬರಿಯಾಗಿ ನೋಡಲು ಅಂಗಡಿಯಲ್ಲಿ ಕಿರಾಣಿ ಸಾಮಾನುಗಳು ಚಲ್ಲಾಪಿಲಿಯಾಗಿ ಬಿದ್ದಿದ್ದವು. ನೋಡಲು 1) 10 ಕೆಜಿ ಕೊಬ್ಬರಿ ಅ.ಕಿ 700/-ರೂ 2) 25 ಕೆಜಿ ಸಕ್ಕರಿ ಅ.ಕಿ 1000/-ರೂ 3) 10 ಕೆಜಿ ರವಾ 320/-ರೂ 4) ಆರ್,ಎಮ್,ಡಿ ಬಾಕ್ಟ 700/-ರೂ 5) 12 ಕಿನ್ಲೇ ನೀರಿನ ಬಾಟಲಿ ಅ.ಕಿ 240/-ರೂ 6) 10 ಸ್ಪ್ರೈಟ್ ಕೋಲ್ಡ ಡ್ರಿಂಕ್ಸ  ಬಾಟಲಿ 180/-ರೂ 7) ಆರ್.ಆರ್, ಬಾಬಾ, ವಿಮಲ್ ಗುಟಕಾ ಅ.ಕಿ 600/-ರೂ 8) 200 ಗ್ರಾಂ 6 ಪ್ಯಾರಾಶ್ಯೂಟ್ ಕೊಬ್ಬರಿ ಎಣ್ಣೆ ಅ.ಕಿ 600/-ರೂ 9) 10 ನೀರ್ಮಾ ಸಾಬೂನ ಪುಡಿ ಪಾಕೇಟ ಅ.ಕಿ 230/-ರೂ 10) ಸ್ಯಾಂಪೋ ಅ,ಕಿ 200/-ರೂ 11) ನಗದು ಹಣ 1500/-ರೂ 12) 24 ರೀನ್ ಅಡ್ವಾನ್ಸ್ ಅ.ಕಿ 240/-ರೂ 13) 24 ಫೇವಿಕಾಲ್ ಡಬ್ಬಿ ಅ.ಕಿ 240/-ರೂ 14) 4 ಡೆಬ್ಬಿ ಕಿಂಗಸೈಜ ಸಿಗರೇಟ ಅ.ಕಿ 400/-ರೂ 15) 3 ಡೆಬ್ಬಿ ಸ್ಮಾಲ್ ಸೈಜ್ ಸಿಗರೇಟ ಅ.ಕಿ 400/-ರೂ 16) ಒಂದು ಬಾಕ್ಸ್ ಗಣೇಶ ಬೀಡಿ ಅ.ಕಿ 320/-ರೂ ಇರಲಿಲ್ಲಾ. ಅಷ್ಟರಲ್ಲಿ ನಮ್ಮ ಓಣಿ ಮೌನೇಶ ತಂ ಶಿವಾನಂದ ವಿಶ್ವಕರ್ಮ ಇತನು ಬಂದನು ಕಳ್ಳತನವಾದ ಮಾಹಿತಿ ತಿಳಿಸಿ ನಂತರ ನಾನು ನನ್ನ ಹೆಂಡತಿಗೆ ವಿಷಯ ತಿಳಿಸಿದಾಗ ನನ್ನ ಹೆಂಡತಿ ಸಾವಿತ್ರಿ ಇವಳು ಕೂಡಾ ಬಂದರು. ಅವರು ಕೂಡಾ ಅಂಗಡಿಯಲ್ಲಿ ಹೋಗಿ ಹಕ್ಕಿಕತ ನೋಡಿರುತ್ತಾರೆ. ನಂತರ ನಾವು ನಮ್ಮ ಓಣಿಯಲ್ಲಿ ಹುಡುಕಾಡಿದೆವು. ಆದರು ಕೂಡಾ ಕಳುವಾದ ಸಾಮಾನುಗಳು ಸಿಕ್ಕಿರುವದಿಲ್ಲಾ. ಯಾರೋ ಕಳ್ಳರು ದಿ: 28,29/08.2016 ರಂದು ರಾತ್ರಿ 11.30 ಗಂಟೆಯಿಂದ ಬೆಳಗಿನ ಜಾವ 05.30 ಗಂಟೆ ಅವಧಿಯಲ್ಲಿ ನಮ್ಮ ಕಿರಾಣಿ ಅಂಗಡಿ ಬಾಗಿಲು ಕೀಲಿ ಮುರಿದು ಒಳಗೆ ಹೋಗಿ ಅಂಗಡಿಯಲ್ಲಿದ್ದ ಕಿರಾಣಾ ಸಾಮಾನುಗಳು ಮತ್ತು ನಗದು ಹಣ ಹೀಗೆ ಒಟ್ಟು ಅ.ಕಿ 7.870/-ರೂ ಕಿಮ್ಮತಿವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಅಂಜನಾ ತಂದೆ ನೀಲಕಂಟ ರಾಠೋಡ ಸಾ ಮಲಸಾಪೂರ ತಾಂಡಾ ರವರ  ಮಗನಾದ ಅಭೀಶೇಖ ವಯ: 6 ವರ್ಷ ಇತನು ನಮ್ಮ ಮನೆಯ ಮುಂದೆ ಆಟ ಆಡುತ್ತಿದ್ದು ಅದೆ ವೇಳೆಗೆ ತುಕಾರಾಮ ತಂದೆ ದೇವಲಾ ಚೌವ್ಹಾಣ ಇತನು ನಮ್ಮ ಮನೆಯ ಹತ್ತಿರ ಬಂದು ನನ್ನ ಮಗ ಅಭೀಶೇಖ ಇತನಿಗೆ ಏ ರಂಡಿ ಮಗನೆ ನಿಮ್ಮ ಅವ್ವ ಎಲ್ಲಿ ಇದ್ದಾಳೆ ಅಂತ ಬೈಯುತ್ತಿದ್ದು ಆಗ ನಾನು ಮನೆಯಿಂದ ಹೊರಗೆ ಬಂದು ಸದರಿ ತುಕಾರಾಮ ಇತನಿಗೆ ನನ್ನ ಮಗನಿಗೆ ಯಾಕೆ ಬೈಯುತ್ತಿ ಅವನು ಏನು ಮಾಡಿದ್ದಾನೆ ಅಂತ ಕೇಳಿದ್ದು ಆಗ ಸದರಿಯವನು ರಂಡಿ ನಾನು ನಿನ್ನ ಸಂಗಡ ಮಲಗಲು ಬಂದಿದ್ದೆನೆ ಸೂಳಿ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ನೀನು ನನ್ನ ಸಂಗಡ ಏನು ಮಲಗುತ್ತಿ ನಿನ್ನ ಹೆಂಡತಿ ಸಂಗಡ ಮಲಗು ಅಂತ ಹೇಳಿದ್ದು ಆಗ ಸದರಿಯವನು ರಂಡಿ ನೀನು ನನಗೆ ಎದರು ಮಾತನಾಡುತ್ತಿ ಸುಳಿ ಅಂತ ಬೈಯುತ್ತಾ ನನಗೆ ಹಿಡಿದುಕೊಂಡು ನೇಲಕ್ಕೆ ಹಾಕಿ ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಅದೆ ವೇಳೆಗೆ ತುಕಾರಾಮನ ತಮ್ಮನಾದ ಮಾಣಿಕ ಮತ್ತು ತಂದೆ ಯಾದ ದೇವಲಾ ಇಬ್ಬರು ಕೂಡಿಕೊಂಡು ಬಂದು ಈ ರಂಡಿ ಸೊಕ್ಕು ಬಹಳ ಆಗಿದೆ ಇವಳ ಗಂಡ ಜೇಲಿಗೆ ಹೋದರು ಇವಳ ಸೊಕ್ಕು ಕಮ್ಮಿಯಾಗಿಲ್ಲ ಇವಳ ಸೊಕ್ಕು ಇಳಿಸಬೇಕು ಅಂತ ಬೈಯುತ್ತಿದ್ದು, ದೇವಲಾ ಇತನು ಈ ರಂಡಿಗೆ ಬಿಡಬೇಡಿರಿ ಇವಳಿ ಹೊಡೆಯಿರಿ ಅಂತ ಹೇಳಿದ್ದು ಆಗ ಮಾಣಿಕ ಇತನು ಅಲ್ಲೆ ಬಿದ್ದ ಬಡಿಗೆ ತೆಗೆದುಕೊಂಡು ನನ್ನ ಬಲಗೈ ಹಸ್ತದ ಹತ್ತಿರ ಹೊಡೆದು ತೆರಚಿದ ರಕ್ತಗಾಯ ಪಡಿಸಿದ್ದು ಸದರಿ ಮೂರು ಜನರು ಕೂಡಿಕೊಂಡು ನನಗೆ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಹಾಕಿ ನನಗೆ ಹೊಡೆಬಡೆ ಮಾಡುತ್ತಿದ್ದು ಸದರಿಯವರು ನನಗೆ ಹೊಡೆಯುವದನ್ನು ನೋಡಿ ಮನೆಯಲ್ಲಿದ್ದು ನಮ್ಮ ಮಾವ ಮಾನಸಿಂಗ್ ನಮ್ಮ ಗ್ರಾಮದ ಶರಣಪ್ಪ ಉಪ್ಪಾರ ಇವರು ಬಂದು ನನಗೆ ಹೊಡೆಯುವವರಿಗೆ ಬೈದು ನನಗೆ ಹೊಡೆಯುವದನ್ನು ಬಿಡಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

28 August 2016

Kalaburagi District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶ್ರೀಕಾಂತ ತಂದೆ ಶಂಕರ ಕಟ್ಟಿಮನಿ ಸಾ:ದೇವಿನಗರ ಕಲಬುರಗಿ ಇವರು ದಿನಾಂಕ: 23-08-2016  ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಮಲಗಿಕೊಂಡಿದ್ದು ಇಂದು ದಿನಾಂಕ: 27-06-2016 ರಂದು ಬೆಳಗ್ಗೆ 6 ಗಂಟೆಗೆ ಎದ್ದು ನಮ್ಮ ಮನೆಯ ಮೊದಲನೆ ಮಹಡಿ ಮೇಲೆ ಹೋಗಿ ನೋಡಲು ನನ್ನ ಬೇಡರೂಮೀನ ಬೀಗ ಮುರಿದು ಬಾಗಿಲು ತೆರೆದಿದ್ದು ಇದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಅಲಮಾರ ತೆಗೆದಿದ್ದು ನಾನು ನೋಡಲು ಅಲಮಾರದಲ್ಲಿ ಇದ್ದ ತಲಾ ಒಂದು ತೊಲಿಯ ಎರಡು ಲಾಕೇಟಗಳು ಮತ್ತು ನಗದು ಹಣ 1.50,000/-ರೂ ಇರಲಿಲ್ಲ ಯಾರೋ ಕಳ್ಳರು ನಮ್ಮ ಮನೆಯ ಬೇಡ ರೂಮೀನ ಒಳಗೆ ಪ್ರವೇಶ ಮಾಡಿ 10 ಗ್ರಾಂ ಬಂಗಾರದ 2 ಲಾಕೇಟಗಳು ಅಂದಾಜು 60000/-ರೂ ನಗದು ಹಣ ಒಟ್ಟು ಸೇರಿ 2,10,000/-ರೂ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವೆಂಕಟೇಶ ತಂದೆ ಬಾಲಾಜಿ ಠಾಕೂರ ಸಾ: ಅಶೋಕ  ನಗರ ಕಾಲೋನಿ ಶಾಹಾಬಾದ ತಾ: ಚಿತ್ತಾಪುರ ಜಿ: ಕಲಬುರಗಿ ಇವರು ದಿನಾಂಕ: 14/02/2014 ರಂದು ಸಾಯಾಂಕಾಲ 4-00 ಗಂಟೆ ಸೂಮಾರಿಗೆ ಸೇವು ತಂದೆ ಶಂಕರು ಪವಾರ ಮತ್ತು ರಾಜು ತಂದೆ ಮಾರುತಿ ಪೊಲೀಸ್ ಇವರು ನನಗೆ ತಿಳಿಸಿದ್ದೆನೆಂದರೆ, ನಿನಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀನು ಕಲಬುರಗಿ ನಗರದ  ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬರಬೇಕು ಅಂತ ಹೇಳಿದಾಗ  ನಾನು ಮತ್ತು ನನ್ನ ಗೇಳೆಯರಾದ ಸಂತೋಷ PÀÄ®PÀtÂÃð, ಜೆತೇಂದ್ರ ರಾಠೋಡ, ಎಲ್ಲರು ಅಲ್ಲಿಗೆ ಹೊಗಿದೇವು ಅಲ್ಲಿ ಅವರು ಹಾಜರಿದ್ದು  ನಮಗೆ ಹೇಳಿದನೆಂದರೆ. ನಿಮಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀವು ನಮಗೆ ಹಣ ಕೊಡಬೆಕು ಅಂತಾ ಹೇಳಿದಾಗ ನಾನು  1 ಲಕ್ಷ 10 ಸಾವಿರ ರೂ ಮತ್ತು 2) ಸಂತೋಷ ಬಿ ಹೂಗಹಾರ ಯಡ್ರಾಮಿ ಇವರು 90 ಸಾವಿರ ರೂ. 3) ಜಿತೆಂದ್ರ ತಂದೆ ನೂರಸಿಂಗ ರಾಠೋಡ ಸಾ.ಕಾಳಗಿ ಕಿಂಡಿ ತಾಂಡಾ ಇವರು  80 ಸಾವಿರ ರೂಪಾಯಿಗಳು ಹೀಗೆ ಒಟ್ಟು 2 ಲಕ್ಷ 80 ಸಾವಿರ ರೂಪಾಯಿ ಕೊಟ್ಟಿರುತ್ತವೆ. ಮತ್ತೆ 12-13 ತಿಂಗಳ ನಂತರ ಅಂದರೆ 2015 ಸಾಲಿನಲ್ಲಿ ನಮಗೆ ದಿನಾಂಕ ಮತ್ತು ತಿಂಗಳು ನೆನೆಪು ಇರುವದಿಲ್ಲಾ  ಆಗ ಇವರಿಬ್ಬರೂ ನೀವು ಇನ್ನೂ ಹಣ ತೆಗೆದುಕೊಂಡು ನಮ್ಮ ಜೊತೆಯಲ್ಲಿ ಬೆಂಗಳೂರಿಗೆ ಬರಬೇಕು ಅಲ್ಲಿ ನಮ್ಮ ಗೆಳೆಯ ಅಮುಲ ಮದನಕರ ಇವರು ಇರುತ್ತಾರೆ ಅವರಿಗೆ ಕೂಡಾ ಹಣ ಕೊಡಬೇಕು ಆಗ ನಿಮಗೆ ನೌಕರಿ ಆಗುತ್ತದೆ ಅಂತಾ ಹೇಳಿದಾಗ ನಾವು 3 ಜನರು ಅವರ ಜೊತೆಯಲ್ಲಿ ಬೆಂಗಳೂರಿಗೆ ಹೋಗಿದ್ದು ಅಲ್ಲಿ ಒಬ್ಬ ವ್ಯಕ್ತಿ ಇದ್ದು ಇವರೆ ಅಮುಲ ಮದನಕರ ಇರುತ್ತಾನೆ ಅಂತಾ ನಮಗೆ ಹೇಳಿ ಆತನ ಪರಿಚಯ ಮಾಡಿಸಿದರು ಆಗ ನಾವು ಅಲ್ಲಿ ಎಲ್ಲರೂ ಕೂಡಿ ನಾನು 1 ಲಕ್ಷ 20 ಸಾವಿರ ರೂಪಾಯಿ ಸಂತೋಷ ಕುಲಕರ್ಣಿೇ ಇವರು 1 ಲಕ್ಷ 15 ಸಾವರಿ ರೂಪಾಯಿ ಮತ್ತು ಜಿತೇಂದ್ರ ರಾಠೋಡ 1 ಲಕ್ಷ 20 ಸಾವಿರ ರೂಪಾಯಿ ಅಂತಾ ಅಲ್ಲಿ ಒಟ್ಟು 3 ಲಕ್ಷ 55 ಸಾವಿರ ರೂಪಾಯಿ ಕೊಟ್ಟಿರುತ್ತೇವೆ. ಅವರು ನಮಗೆ ನೌಕರಿ ಕೊಡಿಸುತ್ತೆವೆ ಅಂತ ಅಂದಿನಿಂದ ಇಲ್ಲಿಯವರಗೆ ಕಲ್ಕತ್ತಾ ದೇಹಲಿ  ಮತ್ತು ಇನ್ನಿತರ ಕಡೆಗಳಲ್ಲಿ ತಿರುಗಾಡಿಸಿ  ನೌಕರಿ ಕೊಡಿಸದೆ  ನಮಗೆ ಮೊಸ ಮಾಡಿರುತ್ತಾರೆ ಅಲ್ಲದೆ ನಮ್ಮಂತೆ 1 ) ಭೀಮಣ್ಣ ಜಿಗರಿ ಸಾ. ಯಡ್ರಾಮಿ 2) ಸೇವು ರಾಠೋಡ ಸಾ. ಯಡ್ರಾಮಿ 3) ಪರಶುರಾಮ ಖಾಚಾಪುರ 4) ದೆವಿದ್ರಪ್ಪ ಸೂರಪುರ 5) ಮಾಂತೇಶ ರಾಠೋಡ ಸಾ.ಅಲ್ಲಾಪೂರ ತಾಂಡಾ 6) ಗೋವಿಂದ ಚೌಹಾಣ ಅಲ್ಲಾಪೂರ ತಾಂಡಾ 7) ಪಿಂಟು ರಾಠೋಡ ಸಾ. ಅಲ್ಲಾಪೂರ ತಾಂಡಾ 8) ಭೀಮು ತಂದೆ ನಾಗಪ್ಪ ಚೌದರಿ 9) ಆನಂದ ತಂದೆ ಮಲ್ಲಿಕಾಜರ್ಿನ ಸಾ.ಶಾಹಾಬಾದ 10)   ಮಲ್ಲಿನಾಥ ತಂದೆ ಗುಂಡೆರಾವ ಬೀರಾದರ ಸಾ.ಬನ್ನುರ ತಾ.ಜಿ. ಕಲಬುರಗಿ 11) ನಿಂಗಣ್ಣ ತಂದೆ ಶರಣ ಬಸ್ಸಪ್ಪ ಶಂಕರವಾಡಿ ಸಾ. ಕಡಣಿ 12) ಅರುಣ ಕೊಗಟನೂರ ತಾ: ಸಿಂದಗಿ ಜಿಲ್ಲಾ ವಿಜಯಪೂರ 13) ವಿಲಾಶ ವಚ್ಹಾಣ ಮಹಾರಾಷ್ಟ್ರ 14) ಬಸವರಾಜ ಜೇವಗಿ 15) ಗುರುನಾಥ ಯಡ್ರಾಮಿ ಇವರೆಲ್ಲರ  ಹತ್ತಿರ ಕೂಡ ನಿಮಗೆ ನೌಕರಿ ಕೊಡಿಸುತ್ತೆವೆ ಅಂತ ಸುಳ್ಳು ಹೇಳಿ ಹಣ ಪಡೆದು ಮೊಸ ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ. ಅಲ್ಲದೆ ಅವರ ಹತ್ತಿರ ಕೂಡಾ  ಹಂತ ಹಂತವಾಗಿ ಹಣ ಪಡೆದುಕೊಂಡು ನಿಮಗೆ ನೌಕರಿ ಕೊಡಿಸುತ್ತೆವೆ ಅಂತಾ ಅವರಿಗೆ ಮತ್ತು ನಮಗೆ ಕಲ್ಕತ್ತಾ. ಮತ್ತು  ದೇಹಲಿಯ ವರೆಗೆ ಕರೆದುಕೊಂಡು ಹೋಗಿ ತಿರುಗಾಡಿಸಿ ನಮಗೆ ನೌಕರಿ ಕೊಡಿಸದೆ ಮೋಸ ಮಾಡಿದಾಗ ನಾವು ನೌಕರಿ ಸಲುವಾಗಿ ನಿಮಗೆ ಕೊಟ್ಟಿರುವ ಹಣವನ್ನು ಮರಳಿ ನಮಗೆ ಕೊಡಿರಿ ಅಂತಾ ಕೇಳಿದಾಗ ಅವರು ಇಂದು ಕೊಡುತ್ತೇವೆ. ನಾಳೆ ಕೊಡುತ್ತೇವೆ ಅಂತಾ ಸತಾಯಿಸುತ್ತಾ ಇಲ್ಲಿಯವರೆಗೆ  ಹಣ ಕೊಡದೆ ಸುಳ್ಳು ಹೇಳುತ್ತಾ ದಿನ ದೂಡುತ್ತಿದ್ದಾರೆ. ಅವರು ನನಗೆ ಮೋಸ ಮಾಡಿದ್ದರಿಂದ ಇಂದು ದಿನಾಂಕ:25/08/2016 ರಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :  ದಿನಾಂಕ 26.08.2016 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ನನ್ನ ಗ್ಯಾರೆಜಕ್ಕೆ ಬಂದಿದ್ದು ತಮ್ಮ ಖಾಸಗಿ ಕೇಲಸ ಸಂಬಂದ ಕಾರ ತೆಗೆದುಕೊಂಡು ಹೈದ್ರಾಬಾದಕ್ಕೆ ಹೊಗಬೇಕಾಗಿದೆ ಕಾರಿನ ಆಯಿಲ್ ಚೆಕ್ಕ ಮಾಡಲು ಹೇಳಿದ್ದು ಅದರಂತೆ ನಾನು ಅವರ ಕಾರನ್ನು ಆಯಿಲ್ ಚೆಕ್ಕ ಮಾಡಿ ಸರಿ ಮಾಡಿದ್ದು ನಂತರ ಸದರಿಯವರು ನನಗೆ ತಿಳಿಸಿದ್ದೆನೆಂದರೆ ಹೈದ್ರಾಬಾದಕ್ಕೆ ನಾನು ಒಬ್ಬನೆ ಹೊಗುತ್ತಿದ್ದೆನೆ ಗ್ಯಾರೇಜ ಸಾಮಾನು ಖರಿದಿ ಮಾಡುವದಿದ್ದರೆ ತನ್ನ ಸಂಗಡ ಬರಲು ನನಗೆ ಹೇಳಿದ್ದು. ನನಗು ಗ್ಯಾರೆಜ ಸಮಾನುಗಳು ತರುವದು ಇದ್ದು ಅವರ ಸಂಗಡ ಹೈದ್ರಾಬಾದಕ್ಕೆ ಹೋಗಲು ನಾನು ಒಪ್ಪಿಕೊಂಡಿದ್ದು ಅದರಂತೆ ನಿನ್ನೆ ದಿನಾಂಕ 26.08.2016 ರಂದು ರಾತ್ರಿ 11 ಗಂಟೆಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಅವರ ಟಾಟಾ ಇಂಡಿಕಾ ಕಾರ ನಂ ಕೆಎ 48 ಎಮ್ 0518 ನೇದ್ದು ತೆಗೆದುಕೊಂಡು ನನ್ನಲ್ಲಿಗೆ ಬಂದಿದ್ದು ನಾನು ಸದರಿಯವರ ಸಂಗಡ ಕಾರಿನಲ್ಲಿ ಕುಳಿತು ಕಲಬುರಗಿ ಹುಮನಾಬಾದ ರಿಂಗ್ ರೋಡಿಗೆ ಬಂದು ನಂತರ ಹೈದ್ರಾಬಾದಕ್ಕೆ ಹೋಗುವ ಕುರಿತು ಕಲಬುರಗಿ- ಹುಮನಾಬಾದ ರಾಷ್ಟ್ರಿಯ ಹೆದ್ದಾರಿ ನಂ 218 ನೇದ್ದರ ಮುಲಕ ಕಲಬುರಗಿಯಿಂದ ಹೈದ್ರಾಬಾದಕ್ಕೆ ಹೊಗುತ್ತಿದ್ದು. ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಹೋಗುತ್ತಿದ್ದು ಆಗ ನಾನು ಸದರಿಯವರಿಗೆ ಕಾರನ್ನು ನಿಧಾನವಾಗಿ ನಡೆಯಿಸಲು ಹೇಳಿದರು ಕೂಡಾ ಸದರಿಯವರು ನನ್ನ ಮಾತನ್ನು ಕೇಳದೆ ಅದೆ ವೇಗದಲ್ಲಿ ಕಾರನ್ನು ನಡೆಯಿಸಿಕೊಂಡು ಹೋಗುತ್ತಿದ್ದು. ಕಮಲಾಪೂರ ದಾಟಿದ ನಂತರ ಕುದುರೆ ಮುಖ ಏರಿನಲ್ಲಿ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸುತ್ತಾ ಒಮ್ಮಲೆ ರಸ್ತೆಯ ಎಡಬಾಗಕ್ಕೆ ಕಾರ ತೆಗೆದುಕೊಂಡಿದ್ದು ಆಗ ಕಾರ ರಸ್ತೆಯಿಂದ ಕೇಳಗೆ ಇಳಿದು ಸ್ವಲ್ಪ ಮುಂದೆ ಹೊಗಿ ತೆಗ್ಗಿನಲ್ಲಿ ಬಿದ್ದಿದ್ದು ಕಾರಿನಲ್ಲಿ ಕುಳಿತ ನನಗೆ ಮತ್ತು ಕಾರ ಚಾಲಕ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಕಾರ ಸಂಪೂರ್ಣ ಡ್ಯಾಮೇಜ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ
ಫರತಾಬಾದ ಠಾಣೆ : ಶ್ರೀ ದತ್ತಪ್ಪ ತಂದೆ ಪದಮಣ್ಣ  ಇವರು ದಿನಾಂಕ 26-08-2016 ರಂದು 7 ಪಿಎಮ್  ಸುಮಾರಿಗೆ ನಾನು ನಮ್ಮೂರ ಸಿದ್ದು ತಳವಾರ ಇವರ ಹೋಟೆಲದಲ್ಲಿ ಚಹಾ ಕುಡಿದು ಹೊರಗೆ ಬಂದು ನಿಂತಾಗ ಈ ಮೊದಲೆ ನಮ್ಮ ಮೇಲೆ ವೈಮನಸ್ಸು ಹೊಂದಿದ 1) ವಿದ್ಯಾಸಾಗ ತಂದೆ ಈರಣ್ಣ ಕಲಬುರಗಿ 2) ನಾಗಣ್ಣ ತಂದೆ ಸಿನಗಪ್ಪ ಮಳ್ಳಿ 3) ಶಿವಾ ತಂದೆ ಬಸಣ್ನ ಮಡ್ಡಿ 4) ಮಂಜು ತಂದೆ ಬಸಣ್ಣ ಕೊಳ್ಳೂರ 5) ಸಂಗು ತಂದೆ ಬಸಣ್ಣ ಮಡ್ಡಿ  ಸಾ: ಎಲ್ಲರೂ ಮೇಳಕುಂದಾ (ಬಿ) ರವರು ಅಕ್ರಮ ಕೂಟ ಮಾಡಿಕೊಂಡು ಬಂದು ನಮಗೆ ನೋಡಿ ಟಾವಲ ಹಾರಿಸುತ್ತಿ ರಂಡಿ ಮಗನೆ  ಅಂತಾ ಅವಾಚ್ಯವಾಗಿ ಬೈಯುವಾಗ ನನಗೆ ಯಾಕೆ ಬೈಯುತ್ತಿರಿ  ಅಂತಾ ಕೇಳಿದಕ್ಕೆ ಬೋಸಡಿ ಮಗನೆ ನಿನ್ನದು ಬಹಳ ಆಗಿದೆ ಎಂದು ನಾಗಣ್ಣ ಮಳ್ಳಿ, ಶಿವಾ ಮಡ್ಡಿ ನನಗೆ ಒತ್ತಿ ಹಿಡಿದಾಗ ವಿದ್ಯಾಸಾಗರ ಕಲಬುರಗಿ ಈತನು ಒಂದು ಚಾಕುವಿನಿಂದ ಬಲಗೈ , ಎಡಗೈಗೆ ಹೊಡೆದು ತರಚಿದಗಾಯಗೊಳಿಸಿದ್ದು  ಅಲ್ಲದೆ ಮಂಜು ಕೊಳ್ಳೂರ, ಸಂಗು ಮಡ್ಡಿ ಕೂಡಿ ನನಗೆ ಮುಷ್ಥಿ ಮಾಡಿ ಮುಖಕ್ಕೆ, ಹೊಟ್ಟೆಗೆ ಹೊಡೆದು ಗುಪ್ತಗಾಯ ಗೊಳಿಸಿರುತ್ತಾರೆ. ಅವರು ನನಗೆ ಹೊಡೆಯುದನ್ನು ನೋಡಿ ಬಸಣ್ಣ ತಂದೆ ಶರಣಪ್ಪ ಪೂಜಾರಿ, ಮಲ್ಲು ಕೋಟೆನವರ, ಮೈನು ನದಾಫ ಕೂಡಿ ಬಿಡಿಸುವಾಗ ಇನ್ನು ಮುಂದೆ ನಮಗೆ ನೋಡಿ ಅಂಕಡೊಂಕ ಮಾತಾಡಿ ಟಾವೆಲ್ ಹಾರಿಸುವದು ಮಾಡಿದರೆ ನಿನ್ನ ಜೀವ ಸಹೀತ ಇಡುವದಿಲ್ಲ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 August 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸುನಿತಾ ಗಂಡ ಸಂಜುಕುಮಾರ ಹೊಸಮನಿ ಇವಳಿಗೆ ಮದುವೆಯಾಗಿ 09-10 ವರ್ಷ ಗತಿಸಿದ್ದು, ಅವಳ ಗಂಡ ಸಂಜುಕುಮಾರ ಇತನು ಕುಡಿಯಲಿಕ್ಕೆ ಹಣ ಕೊಡದೇ ಇದುದ್ದರಿಂದ ಅವಳಿಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಹೊಡೆ ಬಡಿ ಮಾಡುತ್ತಾ ಹೊರಟಿದ್ದು, ಅಲ್ಲದೇ ದಿನಾಂಕ 22/08/16 ರಂದು ರಾತ್ರಿ 09-00 ಗಂಟೆ ಸುಮರಿಗೆ ಕುಡಿಯಲಿಕ್ಕೆ ಹಣ ಕೊಡದೇ ಇರುವುದರಿಂದ ಅವಳ  ಮೈಮೇಲೆ ಸೀಮೆಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಗ್ರಾಶಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಶ್ರೀಮತಿ ಸುನಿತಾ ಇವಳು ದಿನಾಂಕ 22/08/16 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಸುಟ್ಟಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ದಿನಾಂಕ 26/08/16 ರಂದು ಬೆಳಿಗ್ಗೆ 6-00 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಸಿದ್ಧಪ್ಪ ತಂದೆ ಮಸ್ತಾನಪ್ಪ ವಾಗದಳ್ಳಿ ಸಾ: ಮಾಹಾಗಾಂವ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ವಿಠೋಬ ತಂದೆ ಲಕ್ಷ್ಮಣ ಜಮಾದಾರ ಅಂಕಲಗಾ ಶಾಖೆಯ ಪ್ರಭಾರಿ ಶಾಖಾಧಿಕಾರಿ ಆಗಿದ್ದು, ನಮ್ಮ ಶಾಖೆಯಲ್ಲಿ ಬರುವ ಅಂಕಲಗಾ ಗ್ರಾಮದಿಂದ ಬೋಸಗಾ[ಕೆ] ಹಾದು ಹೋಗಿರುವ 11 ಕೆ ವಿ ಎ ಲೈನ್ ವಾಯರ್ ಸುಮಾರು 5 ಕಂಬಗಳ ವಾಯರ್ ಮತ್ತು ಎರಡು ಕಂಬಗಳು ಮುರಿದು ನೆಲಕ್ಕೆ ಉರಳಿಸಿ ವಾಯರ್ ಕಟ್ಟು ಮಾಡಿಕೊಂಡು ಹೋಗಿದ್ದು, ನಾನು ದಿನಾಂಕ: 10/08/2016 ರಂದು ನಾನು ಕೆಲಸದ ನಿಮಿತ್ಯವಾಗಿ ಇಟಗಾ ಗ್ರಾಮಕ್ಕೆ ಹೋಗುವ ನಾನು ಖುದ್ದಾಗಿ ನೋಡಿದಾಗ ನನಗೆ ಸಂಶಯ ಬಂದು ನೋಡಿದಾಗ ಅಲ್ಲಿ 5[ಕಂಬಗಳ] ವಾಯರ ಮತ್ತು 2 ಕಲಂಬಗಳು ಮುರಿದಿರುವದು ಕಂಡು ಬಂದು ನಾನು ನಮ್ಮ ಸಿಬ್ಬಂದಿಗಳಿಗೆ ಹೇಳಿದಾಗ ಅವರು ನಾವು ಕೂಡಿಕೊಂಡು ನೋಡಿದಾಗ ಅಲ್ಲಿ ನಮ್ಮ ಕಂಪನಿಯ ವಾಯರ್ ಕಂಬಗಳು ವಾಯರ್ ಮುರಿದು ತೆಗೆದುಕೊಂಡು ಹೋಗಿದ್ದು ಅದರ ಅಂದಾಜು ಮೊತ್ತ 35000/- ರೂಪಾಯಿ ಆಗಿರುತ್ತದೆ. ದಿನಾಂಕ: 10/08/2016 ರ ಹಿಂದಿನ ಎರಡು ದಿನಗಳಲ್ಲಿ ಕಳ್ಳತನ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 August 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 25/08/16 ರಂದು ಅಂಬರೀಷ ಇತನು ಹಿರೋ ಹೊಂಡಾ ಸ್ಪೆಂಡರ ಮೋಟಾರ ಸೈಕಲ ನಂ. ಕೆಎ 32 ಇಕೆ 1570 ನೇದ್ದರ ಹಿಂದೆ ಫಿರ್ಯಾದಿಗೆ ಕೂಡಿಸಿಕೊಂಡಿದ್ದು ಮತ್ತು ಫಿರ್ಯಾದಿ ಹಿಂದೆ ಮೃತ ಸೂರ್ಯಕಾಂತನಿಗೆ ಕೂಡಿಸಿಕೊಂಡು ಯುನಿವರಸಿಟಿಯಿಂದ  ಕಲಬುರಗಿ ತಮ್ಮೂರಾದ ಕಲ್ಲಹಂಗರಗಾಕ್ಕೆ ಹೊರಟಿದ್ದು, ಮಧ್ಯಾಹ್ನ  ಹುಮನಾಬಾದ ರಿಂಗ ರೋಡದಿಂದ ರೋಡ ಸೈಡ ಹಿಡಿದುಕೊಂಡು ನಿಧಾನವಾಗಿ ಆಳಂದ ಚೆಕ್ಕ ಪೋಸ್ಟ್  ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ  ಅಂದರೆ ಸೇಡಂ ರಿಂಗ ರೋಡ ಕಡೆಯಿಂದ  ಟಿಪ್ಪರ ಕೆಎ 32 ಬಿ 2811  ಚಾಲಕನು ತನ್ನ ಟಿಪ್ಪರನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತಿವೇಗದಿಂದ ಮತ್ತು ನಿಷ್ಕಾಳಿಜಿತನಿದಂದ ನಡೆಯಿಸಿಕೊಂಡು ಬಂದವನೇ ಹಿಂದಿನಿಂದ ಫಿರ್ಯಾದಿಗೆ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತಪಡಿಸಿ, ಟಿಪ್ಪರ ಚಾಲಕ ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ. ಇದರಿಂದಾಗಿ  ಮೋಟಾರ ಸೈಕಲ ಮೇಲಿಂದ ಮೂರು ಜನರು ರೋಡಿನ ಮೇಲೆ ಬಿದ್ದಿದ್ದು, ಇದರಿಂದಾಗಿ ಶ್ರೀಮಂತ ಮತ್ತು ಸೂರ್ಯಕಾಂತ @ ಸುರೇಶ ಇವರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಅಂಬರೀಷ ಇತನಿಗೆ ಅಂತಹ ಪೆಟ್ಟಾಗದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲಾ. ಸೂರ್ಯಕಾಂತ @ ಸುರೇಶ ಇತನು ತನಗೆ ಆದ ರಸ್ತೆ ಅಪಘಾತಗಾಯಗಳಿಂದ ಗುಣ ಮುಖ ಹೊಂದದೇ  ಮಧ್ಯಾಹ್ನ 03-20 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಶ್ರೀಮಂತ ತಂದೆ ರಾಜೇಂದ್ರ ಒಡೆಯರಾಜ ಸಾ : ಕಲ್ಲಹಂಗರಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ: 24-08-2016 ರಂದು ಬೆಳಿಗ್ಗೆ ನಾನು ಎಂ.ಆರ್.ಎಂ.ಸಿ ಕಾಲೇಜಿನಲ್ಲಿ ಕೆಲಸದ ಮೇಲೆ ಇದ್ದಾಗ ಆಗ ನಮ್ಮ ಓಣಿಯ ಆಳಂದದ ಶಶಿಕುಮಾರ ತಂದೆ ಶ್ರೀಕಾಂತ ಪಾಟೀಲ ಇತನು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂಧರೆ, ನಾನು ಆಳಂದದಿಂದ ಕಲಬುರಗಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕುಳಿತುಕೊಂಡು ಹೊರಟಿದ್ದೇನು. ಭೀಮಳ್ಳಿ ಕ್ರಾಸ್ ಹತ್ತಿರ ನಮ್ಮ ಬಸ್ಸು ಬರುತ್ತಿದ್ದಾಗ ನಮ್ಮ ಬಸ್ಸಿನ ಮುಂದುಗಡೆ ಒಬ್ಬ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದು ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಇನ್ನೊಬ್ಬ ಮೋಟರ್ ಸೈಕಲ್ ಸವಾರ ಬರುತ್ತಿದ್ದು ಎರಡು ಮೋಟರ್ ಸೈಕಲ್ ಸವಾರನು ತನ್ನ ಮೋಟರ ಸೈಕಲ್ ಗಳನ್ನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಡಿಕ್ಕಿಪಡಿಸಿ ಅಪಘಾತಪಡಿಸಿಕೊಂಡು ರೋಡಿನ ಮೇಲೆ ಇಬ್ಬರೂ ಮೋಟರ್ ಸೈಕಲ್ ಗಳೊಂದಿಗೆ ಬಿದ್ದಿರುತ್ತಾರೆ. ಆಗ ನಮ್ಮ ಬಸ್ಸು ನಿಂತಿದ್ದು ನಾನು ಕೆಳಗಡೆ ಹೋಗಿ ನೋಡಲಾಗಿ ಆಳಂದ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಮೋಟರ್ ಸೈಕಲ್ ಸವಾರ ನಿಮ್ಮ  ಚಿಕ್ಕಪ್ಪನಾದ ಸಂತೋಷ ತಂದೆ ಸಂಗಣಪ್ಪ ಪಾಟೀಲ ಇತನು ಇದ್ದು ಸದರಿಯವನಿಗೆ ತುಟಿಗೆ, ಗದ್ದಕ್ಕೆ, ಭಾರಿ ರಕ್ತಗಾಯ. ತಲೆಗೆ ಗುಪ್ತ ಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗುತ್ತಿದ್ದು ಎಡಕಾಲು ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು ಎಡಕಾಲ ಹಿಮ್ಮಡಿಯ ಮೇಲಭಾಗಕ್ಕೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಕಲಬುರಗಿ ಕಡೆಯಿಂದ ಆಳಂದ ಕಡೆಗೆ ಬರುತ್ತದ್ದ ಮೋಟರ್ ಸೈಕಲ್ ಸವಾರನಿಗೆ ನೋಡಲಾಗಿ ಆತನಿಗೆ ಹಣೆಗೆ ತಲೆಯ ಹಿಂದೆ, ಮತ್ತು ಕಾಲುಗಳಿಗೆ ಭಾರಿ ರಕ್ತಗಾಯ ಮತ್ತು ಗುಪ್ತ ಗಾಯಗಳಾಗಿರುತ್ತವೆ. ಆತನಿಗೆ ಹೆಸರು ಕೇಳಲಾಗಿ ಶಾಂತಲಿಂಗ ತಂದೆ ರವೀಂದ್ರ ಚಿಂಚೊಳ್ಳಿ ಸಾ: ಗೋಳಾ ಬಿ ಹಾವ: ಜಿಆರ್ ನಗರ ಕಲಬುರಗಿ ಅಂತಾ ತಿಳಿಸಿದನು. ಚಿಕ್ಕಪ್ಪನ ಮೋಟರ್ ಸೈಕಲ್ ನೋಡಲಾಗಿ ಅದು ಹೊಂಡಾ ಶೈನ್ ಕಂಪನಿಯದಿದ್ದು ಅದರ ನಂ ಕೆಎ 32 ಡಬ್ಲೂ 3623 ಅಂತಾ ಇರುತ್ತದೆ ಮತ್ತು ಕಲಬುರಗಿ ಕಡೆಯಿಂದ  ಬರುತ್ತಿದ್ದ ಶಾಂತಲಿಂಗ ಈತನ ಮೋಟರ್ ಸೈಕಲ್ ಬಜಾಜ ಪಲ್ಸರ್ ಕಂಪನಿಯದಿದ್ದು ಅದರ ನಂ ಕೆಎ 32 ಇಸಿ 1248 ಅಂತಾ ಇರುತ್ತದೆ ಯಾರೋ 108 ಅಂಬುಲೆನ್ಸ್ ಗೆ ಪೋನ್ ಮಾಡಿದ್ದು ಅಂಬುಲೆನ್ಸ ಬಂದಿದ್ದು ಅದರಲ್ಲಿ ಇಬ್ಬರನ್ನು ಹಾಕಿಕೊಂಡು ಕಲಬುರಗಿಯ ತಂದು ಶಾಂತಲಿಂಗ ಈತನಿಗೆ ಕಾಮರೆಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿ ಚಿಕ್ಕಪ್ಪ ಸಂತೋಷ ಇವರಿಗೆ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೆನೆ ನೀವು ಅಲ್ಲಿಗೆ ಬನ್ನಿರಿ ಅಂತಾ ತಿಳಿಸಿದ್ದು ನಾನು ಗಾಬರಿಗೊಂಡು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ತಮ್ಮ ಸಂತೋಷ ಈತನಿಗೆ ನೋಡಲಾಗಿ ಹಕಿಕತ್ ನಿಜವಿದ್ದು ಆತನಿಗೆ ನೋಡಲಾಗಿ ನನ್ನ ತಮ್ಮನಿಗೆ ತುಟಿಗೆ ಗದ್ದಕ್ಕೆ, ಹರಿದ ಭಾರಿ ರಕ್ತಗಾಯ ತಲೆಗೆ ಗುಪ್ತಗಾಯವಾಗಿ ಮೂಗನಿಂದ ರಕ್ತ ಸ್ರಾವವಾಗುತ್ತಿದ್ದು ಎಡಕಾಲು ತೊಡೆಗೆ ,ಹಿಮ್ಮಡಿಯ ಮೇಲ್ಬಾಗಕ್ಕೆ ಭಾರಿಗುಪ್ತ ಗಾಯವಾಗಿ ಮುರಿದಂತೆ ಆಗಿರುತ್ತದೆ ನಂತರ ವೈದ್ಯಾಧಿಕಾರಿಳು ನಮ್ಮ ತಮ್ಮನಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀಮತಿ ನಿರ್ಮಲಾ ಗಂಡ ಹಣಮಂತರಾವ ಕವಾಡೆ ಸಾ: ಸಂಗಮೇಶ್ವರ ಕಾಲೋನಿ ಎಸ್.ಬಿ ಕಾಲೇಜ್ ಹತ್ತಿರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಲಕ್ಷ್ನಣ ತಂದೆ ಭೀಮಶ್ಯಾ ಮುದ್ನಾಳ ಸಾ; ಸೊಂತ ತಾ;ಜಿ ಕಲಬುರಗಿ ಇವರು ದಿನಾಂಕ:23.08.2016 ರಂದು ರಾತ್ರಿ ಸೊಂತ ಗ್ರಾಮದ ಮನೋಹರ ಮುದ್ನಾಳ ಇವರ ಮನೆಯ ಹತ್ತೀರ ಹೋಗಿ ನನಗೆ ಸಾಲ ಬಹಾಳ ಆಗಿದ್ದು. ನಾನು ಕೆಲಸ ಮಾಡಿದ ಬಾಕಿ 8 ಸಾವಿರ ರುಪಾಯಿಗಳನ್ನು ಕೊಡು ಅಂತಾ ಕೇಳಿದಾಗ ಮನೋಹರ ಇವರು ಸದ್ಯ ನನ್ನ ಹತ್ತೀರ ರೋಕ್ಕ ಇಲ್ಲಾ ಅಂತಾ ಹೇಳಿದ್ದು. ಆಗ ನಾನು ನನಗೆ ಕೋಡಬೇಕಾದ ರೋಕ್ಕ ಕೋಡದೆ ಸತಾಯಿಸುವುದು ಸರಿಯಲ್ಲಾ ಅಂತಾ ಹೇಳಿದಾಗ ಮನೋಹರ ಇವರು ನನಗೆ ಹೋಗಲೆ ಸೂಳೆ ಮಗನೆ ನಮ್ಮ ಹತ್ತೀರ ರೋಕ್ಕ ಇಲ್ಲಾ ಅಂತಾ ಹೇಳಿದ್ದರು ಮನೆ ಮುಂದ ನಿಂತು ನಮ್ಮ ಮರ್ಯಾದೆ ತೆಗಿತಿ ಅಂತಾ ಹೋಲಸಾಗಿ ಬೈಯುತ್ತ ಮನೋಹರ ಮುದ್ನಾಳ ಅಂಬಣ್ಣ ಮುದ್ನಾಳ ಮತ್ತು ಸಂಜು ಮುದ್ನಾಳ ಇವರು ನನಗೆ ಏಳೆದುಕೊಂಡು ಅವರ ಮನೆಯ ಹತ್ತೀರ ಇರುವ ನಿರಿನ ಟಾಕಿ ಹತ್ತೀರ ತಂದು ಮನೋಹರ ಇವನು ಕಲ್ಲಿನಿಂದ ನನ್ನ ತಲೆಯ ಬಲಭಾಗಕ್ಕೆ ಹೋಡೆದು ರಕ್ತಗಾಯ ಮಾಡಿದ್ದು. ಅಲ್ಲದೆ ನನ್ನ ಹಣೆಯ ಮಧ್ಯದಲ್ಲಿ ಕಲ್ಲಿನಿಂದ ಹೋಡೆದು ಗುಪ್ತಗಾಯ ಮಾಡಿದನು. ಅಂಬಣ್ಣ ಇವನು ತನ್ನ ಕಾಲಿನಿಂದ ನನ್ನ ಎಡಕಾಲ ಮೋಣಕಾಲಿಗೆ ಜೋರಾಗಿ ಒದ್ದಾಗ ನಾನು ಜೋಲಿ ಹೋಗಿ ಕೆಳಗೆ ಬಿದ್ದೇನು. ಆಗ ಸಂಜು ಇವನು ನನ್ನ ಹೋಟ್ಟೆ ಮೇಲೆ ಕುಂತು ನನ್ನ ಎದೆಯ ಮೇಲೆ ಕೈಯಿಂದ ಹೋಡೆದು ನನ್ನ ಎದೆಯ ಎಡಬಾಗಕ್ಕೆ ಚೂರಿದನು. ಆಗ ನಾನು ಅಂಜಿ ಚಿರಾಡುತ್ತಿದ್ದು ನನಗೆ ಹೋಡೆಯುತ್ತಿದ್ದನ್ನು ನಿಂತು ನೋಡುತ್ತಿದ್ದ ನಮ್ಮೂರ ಆಕಾಶ ಮತ್ತು ಇಂದುಬಾಯಿ ಇವರು ಬಂದು ನನಗೆ ಹೋಡೆಯುದನ್ನು ಬಿಡಿಸಿ ಕಳಿಸುತ್ತಿದ್ದಾಗ ಮನೋಹರ ಇವನು ರಂಡಿ ಮಗನೆ ಮುಂದೆ ಏನಾದರು ರೋಕ್ಕ ಕೊಡು ಅಂತಾ ನಮಗೆ ಕೇಳಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಬಸಮ್ಮ ಗಂಡ ಕಲ್ಲಪ್ಪ ಮಾಳಬೋ ಮು: ಮಂದರವಾಡ ತಾ: ಜೇವರ್ಗಿ ಜಿ: ಕಲಬುರಗಿ ರವರ ಮಗಳಾದ ಜೈಯಶ್ರೀ  ಇವಳಿಗೆ ದಿನಾಂಕ 10/07/16 ರಂದು ಸರಡಗಿ (ಬಿ) ಗ್ರಾಮದ ದೇವಿಂದ್ರಪ್ಪಾ ತಂದೆ ದಿ: ಸುಭಾಷ ಲಕ್ಕಬೋ ಎಂಬುವವರಿಗೆ  ಧಾರ್ಮಿಕ  ಪದ್ದತಿಯಂಯೆ ಫರಹತಾಬಾದ ಶರಣಬಸವೇಶ್ವರ ದೇವಸ್ಥಾನದಲ್ಲಿ  ಮದುವೆ ಮಾಡಿದ್ದು ಇದೆ ನನ್ನ ಮಗಳು ಜಯಶ್ರೀ ಅಳಿಯ  ದೇವಿಂದ್ರಪ್ಪ ಒಬ್ಬರಿಗೋಬ್ಬರು ಪ್ರೀತಿಯಿಂದ  ಇದ್ದು ಅವಳಿಗೆ  ಅವಳ ಗಂಡನ ಮನೆಯಲ್ಲಿ ಆಕೆಯ ಅತ್ತೆ ಮೈದುನ ತೊಂದರೆ ಕೂಡ  ಇದ್ದಿರುವುದಿಲ್ಲಾ  ಎಲ್ಲರೂ ನನ್ನ ಮಗಳಿಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.ನನ್ನ ಮಗಳಿಗೆ ಆಗಾಗ ಹೊಟ್ಟೆ ಕಡೆಯುತ್ತಿದ್ದು ತೋರಿಸಿದರು ಕಡಿಮೆಯಾಗಿರುವುದಿಲ್ಲಾ ದಿನಾಂಕ 17/08/2016 ರಂದು ನನ್ನ ಮಗಳ ಗಂಡ ಅಳಿಯ ದೇವಿಂದ್ರಪ್ಪಾ ನಮ್ಮ ಊರಿಗೆ ಬಂದು ನನ್ನ ಮಗಳಿಗೆ  ಕರೆದುಕೊಂಡು  ಸರಡಗಿ (ಬಿ) ಗ್ರಾಮಕ್ಕೆ ಹೋದನು ದಿನಾಂಕ 18/08/16 ರಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ  ನನ್ನ ಮಗಳು  ಹೊಟ್ಟೆ ಕಡೆಯುತ್ತಿದೆ ಎಂದು ಹೇಳಿರುವದರಿಂದ ಆಕೆಗೆ ಕಲಬುರಗಿಯ ಸ್ಪರ್ಶ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇನೆ ಕೂಡಲೇ ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಗ  ಮಲ್ಲಿಕಾರ್ಜುನ ಕುಸನೂರು ಗ್ರಾಮದಲ್ಲಿರುವ  ಇನ್ನೊಬ್ಬ ಮಗಳು ಈಶಮ್ಮ ಗಂಡ ಲಿಂಗಪ್ಪ ಜಾಪೂರ ಕೂಡಿ ದವಾಖಾನೆಗೆ ಬಂದು ನೋಡಲಾಗಿ ನನ್ನ ಮಗಳು ಪ್ರಜ್ಞೆಯಲ್ಲಿ ಇರಲಿಲ್ಲಾ ಅಲ್ಲಿ ಉಪಚಾರ ಪಡೆದು ಹೆಚ್ಚಿನ  ಉಪಚಾರಕ್ಕಾಗಿ  ದಿನಾಂಕ 23/08/2016  ರಂದು ಬಸವೇಶ್ವರ  ಆಸ್ಪತ್ರೆ ಕಲಬರುಗಿಗೆ ತಂದು ದಾಖಲು ಮಾಡಿದ್ದು  ನನ್ನ ಮಗಳು ತನಗಾದ ಹೊಟ್ಟೆ ನೋವಿನ ತಾಪ ತಾಳದೇ ಯಾವುದೋ  ಕ್ರೀಮಿನಾಶಕ ಜೌಷದ ಕುಡಿದಿದ್ದು ಆಕೆ ಉಪಚಾರ ಹೊಂದುತ್ತಾ  ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 24/08/2016 ರಂದು ಮದ್ಯಾಹ್ನ  ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 22-08-2016 ರಂದು ಬೆಳಿಗ್ಗೆ ನನ್ನ ಹಿರಿ ಮಗ ಮಂಜುನಾಥ ಈತನು ಖಾಸಗಿ ಕೆಲಸದ ನಿಮಿತ್ಯ ನಮ್ಮ ಮೋಟರ ಸೈಕಲ ಹಿರೋ ಸ್ಪ್ಲೇಂಡರ ಪ್ರೋ ಮೋಟರ ಸೈಕಲ್ ನಂ ಕೆ.ಎ-32/ಇ.ಎಫ್-3610 ನೇ ತೆಗೆದುಕೊಂಡು ಚಿಗರಳ್ಳಿಗೆ ಹೋಗಿರುತ್ತಾನೆ, ನಂತರ ಸಾಯಂಕಾಲ 4;15 ಗಂಟೆ ಸುಮಾರಿಗೆ ಯಾರೋ ಅಪರಿಚತರು ನನ್ನ ಮಗನ ಮೂಬೈಲನಿಂದ ನಮಗೆ ಫೋನ ಮಾಡಿ ಹೇಳಿದ್ದೇನೆಂದರೆ, ಇದೀಗ 4;00 ಗಂಟೆ ಸುಮಾರಿಗೆ ನಿಮ್ಮ ಮಗ ಆಲೂರ ದಾಟಿ ಮಹಿಬೂಬಸುಬಾನಿ ದರ್ಗಾ ಸಮೀಪ ಬರುತ್ತಿದ್ದಾಗ ಎದುರುಗಡೆಯಿಂದ ಯಾವುದೋ ವಾಹನದ ಚಾಲಕ ಡಿಕ್ಕಿ ಪಡಿಸಿ ಹೋಗಿದ್ದು, ನಿಮ್ಮ ಮಗನ ತಲೆಗೆ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಇತರೆ ಮೈ ಕೈಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ತಿಳಿಸಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಸುಮಿತ್ರಾ, ನನ್ನ  ಕಿರಿ ಮಗ ಯಮನಪ್ಪ, ನಮ್ಮ ಅಣ್ಣತಮ್ಮಕಿಯ ಸಕ್ರೆಪ್ಪ ತಂದೆ ಮುರಗೆಪ್ಪ ಬಂಕಲಗಿ, ಹಾಗು ನಮ್ಮೂರ ಸಿದ್ದಯ್ಯ ತಂದೆ ಮಲ್ಲಯ್ಯ ಗುತ್ತೇದಾರ ರವರು ಸೇರಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ರಸ್ತೆಯ ಎಡಗಡೆ ಬಿದ್ದಿದ್ದು ಅವನ ಹಣೆಯ ಮೆಲೆ ಮತ್ತು ಬಲಗಡೆ ತಲೆಗೆ ಭಾರಿ ರಕ್ತಗಾಯ ವಾಗಿದ್ದು, ಬಲ ಮುಂಡಿಗೆ, ಬಲ ಗಲ್ಲದ ಮೇಲೆ, ಬಲಗೈ ಹಸ್ತದ ಮೇಲ್ಭಾಗ, ತರಚಿದ ಗಾಯಗಳಾಗಿರುತ್ತವೆ, ಆಗ ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ನಾವೆಲ್ಲರು ಸೇರಿಕೊಂಡು ನನ್ನ ಮಗನಿಗೆ ಉಪಚಾರ ಕುರಿತು ಒಂದು ಖಾಸಗ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ವಾತ್ಸಲ್ಯ ಲೈಫ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಇಂದು ದಿನಾಂಕ 23-08-2016 ರಂದು 12;25 ಎ.ಎಂ ಸುಮಾರಿಗೆ ನನ್ನ ಮಗ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಿಸದೆ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಸಕ್ರೆಪ್ಪ ರಂದೆ ಯಮನಪ್ಪ ಬಂಕಲಗಿ ಸಾ|| ಕರಕಿಹಳ್ಳಿ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ: 22-08-2016 ರಂದು ಮುಂಜಾನೆ ನಾನು ಮತ್ತು ನಮ್ಮೂರ ಗುರುದೇವ ಇಂಗಳಗಿ ಇಬ್ಬರು ಕೂಡಿ ಮೋಟಾರ್ ಸೈಕಲ್ ನಂ ಕೆಎ-32 ಇಎ-3795 ನೇದ್ದರ ಮೇಲೆ ನಮ್ಮೂರಿನಿಂದ ಕೆಲಸದ ಸಲುವಾಗಿ  ಜೇವರಗಿಗೆ ಬಂದು ಕೆಲಸ ಮುಗಿಸಿದ ಬಳಿಕ ಮತ್ತು ನಾವಿಬ್ಬರು ಅದೇ ಮೋಟಾರು ಸೈಕಲ್ ಮೇಲೆ ಜೇವರಗಿಯಿಂದ ನಾರಾಯಣಪೂರಕ್ಕೆ ಹೊರಟೆವು. ಮೋಟಾರು ಸೈಕಲ್ ಗರುರದೇವ ನಡೆಯಿಸುತ್ತಿದ್ದನು. ನಾನು ಹಿಂದೆ ಕುಳಿತಿದ್ದೇನು. ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ನಾವು ಮಂದೇವಾಲ ದಾಟಿ ಕೇನಾಲ್ ಹತ್ತೀರ ಜೇವರಗಿ-ಸಿಂದಗಿ ರೋಡ ಮುಖಾಂತರ ಹೋಗುತ್ತಿರುವಾಗ ಅದೇ ವೇಳೆಗೆ ಎದರಿನಿಂದ ಒಂದು ಕಾರು ಚಾಲಕನು ಕಾರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ಗೆ ಎದುರಿನಿಂದ ಜೋರಾಗಿ ಡಿಕ್ಕಿ ಹೊಡೆದನು. ನಾವು ಮೋಟಾರು ಸೈಕಲ್ ಸಮೇತ ರೋಡಿನ ಬಾಜು ಬಿಳಲು ಕಾರಿನ ಟೈರ ಗುರುದೇವನ ತಲೆಯ ಮೇಲೆ ಹಾಯ್ದು ಹೋಗಿ ಕಾರ ಕ್ಯಾನಲದಲ್ಲಿ ಪಲ್ಟಿಯಾಗಿ ಬಿದ್ದಿತ್ತು. ಇದರಿಂದ ನನಗೆ ಎಡಗೈ ಮುಂಗೈಗೆ,ಎಡ ಮೊಳಕಾಲಿಗೆ ರಕ್ತಗಾಯ, ಎದೆಗೆ ಗುಪ್ತ ಪೆಟ್ಟಾಗಿದ್ದವು. ಗುರುದೇವನಿಗೆ ತಲೆ ಒಡೆದದು ಮೆದಳು ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು. ಸ್ಥಳಕ್ಕೆ ಜನರು ಬಂದಾಗ ಕಾರ ಚಾಲಕ ಅಲ್ಲಿಂದ ಓಡಿ ಹೋದನು. ಅವನ  ಹೆಸರು ಗೊತ್ತಿಲ್ಲಾ. ಕಾರಿನ ನಂ ಜೆಎ-08 ಇ-8864 ಅಂತಾ ಇರುತ್ತದೆ ಅಂತಾ ಶ್ರೀ ಯಲ್ಲಪ್ಪ ತಂದೆ ಜೆಟ್ಟೆಪ್ಪ ಯಲಬಾ ಸಾ : ನಾರಾಯಣಪೂರ ತಾ : ಜೇವರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಮಿರಾಜೋದ್ದಿನ್ ತಂದೆ ಖಾಜಾಮೈನೊದ್ದಿನ್ ಸಾ. ಹಾಗರಗಾ ರೋಡ್ ಕಲಬುರಗಿ ರವರು  ದಿನಾಂಕ 21-08-2016 ರಂದು ಸೇಡಂ ಪಟ್ಟಣದ ವಾಸವದತ್ತಾ ಸಿಮೇಂಟ್ ಕಂಪನಿಗೆ ಸಿಮೇಂಟ್ ತುಂಬಲು ಬಂದಿದ್ದು ದಿನಾಂಕ 22-08-2016 ರಂದು ಸಿಮೇಂಟ್ ತುಂಬಿಕೊಂಡು ಕಲಬುರಗಿ ಕಡೆಗೆ ಹೋರೆಟ್ಟದು ಎದರುಗಡೆಯಿಂದ ಒಂದು ಟ್ರೈಲರ ಲಾರಿ ನಂ ಎಂಎಚ್ 24 ಜೆ 4422 ನೇದ್ದರ ಚಾಲಕ ನನ್ನ ಲಾರಿ ನಂ ಕೆಎ. 56 / 0070 ನೇದ್ದಕೆ ಡಿಕ್ಕಿ ಪಡೆಸಿ ಅಪಘಾತ ಪಡೆಸಿ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಸುನಿತಾ ಗಂಡ ಸಂಜುಕುಮಾರ ಹೊಸಮನಿ ಇವರ ಮದುವೆಯು 09-10 ವರ್ಷ ಗತಿಸಿದ್ದು, ಅವಳ ಗಂಡ ಸಂಜುಕುಮಾರ ಇತನು ಕುಡಿಯಲಿಕ್ಕೆ ಹಣ ಕೊಡದೇ ಇದ್ದುದರಿಂದ ಅವಳಿಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಹೊಡೆ ಬಡಿ ಮಾಡುತ್ತಾ ಹೊರಟಿದ್ದು, ಅಲ್ಲದೇ ದಿನಾಂಕ 22/08/16 ರಂದು ರಾತ್ರಿ 09-00 ಗಂಟೆ ಸುಮರಿಗೆ ಕುಡಿಯಲಿಕ್ಕೆ ಹಣ ಕೊಡದೆ ಇರುವುದರಿಂದ ಅವಳ ಮೈಮೇಲೆ ಸೀಮೆಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.ಇದರಿಂದಾಗಿ ಅವಳ ತಲೆ ಕೂದಲು, ಮುಖ, ಎದೆ, ಹೊಟ್ಟೆ, ಎರಡು ಕೈಗಳಿಗೆ ಮತ್ತು ಎರಡು ಕಾಲು ತೊಡೆಯ ಹತ್ತಿರ ಅಲ್ಲಲ್ಲಿ ಸುಟ್ಟಗಾಯಗಳಾಗಿ ಚರ್ಮ ಸುಲಿದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಫರತಾಬಾದ ಠಾಣೆ : ದಿನಾಂಕ: 21-08-2016 ರಂದು ರಾತ್ರಿ  2 -00 ಗಂಟೆಯ ಸುಮಾರಿಗೆ ಅಫಜಲಪೂರ ಕಲಬುರಗಿ ಮುಖ್ಯ ರೋಡಿನ ಮುಖುಂತಾರ ಚೌಡಾಪೂರ ಕಡೆಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು (ಉಸುಕು) ಸಾಗಾಣೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಶ್ರೀ ಪಿ, ಎಸ್‌, ವನಂಜಕರ್‌‌  ಪಿಎಸ್‌ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಡಗಿಲ ಹಾರುತಿ ಗ್ರಾಮದ ಕ್ರಾಸ್  ಕಡೆಗೆ ಹೊರಟು ಹಡಗಿಲ ಹಾರುತಿ ಗ್ರಾಮದ ಕ್ರಾಸ್ ತಲುಪಿದ ನಂತರ ಅಫಜಲಪೂರ ಕಲಬುರಗಿ ಮುಖ್ಯ ರಸ್ತೆಯಲ್ಲಿ ನಾವೆಲ್ಲರೂ ವಾಚ (ಕಾಯುತ್ತಾ) ಮಾಡುತ್ತಾ ಕ್ರಾಸದಲ್ಲಿ  ಮರೆಯಲ್ಲಿ ನಿಂತಾಗ ಅಂದಾಜು ಬೆಳಗಿನ ಜಾವ 03-15 ಗಂಟೆಯ ಸುಮಾರಿಗೆ ಚೌಡಾಪೂರ ಕಡೆಯಿಂದ 4 ಟಿಪ್ಪರಗಳು ಒಂದರ ಹಿಂದೆ ಒಂದು ಬರುತ್ತಿದ್ದು ಅವುಗಳ ಮೇಲೆ ನಮಗೆ ಸಂಶಯ ಬಂದು ಅವುಗಳನ್ನು ನಿಲ್ಲಿಸಲು ಚಾಲಕರಿಗೆ ಸೂಚಿಸಿದಾಗ ಈ 4 ಟಿಪ್ಪರಗಳ ಚಾಲಕರು ತಮ್ಮ, ತಮ್ಮ ಟಿಪ್ಪರಗಳನ್ನು ನಿಲ್ಲಿಸಿ ಕತ್ತಲಲ್ಲಿ ಓಡಿ ಹೋದರು. ನಂತರ ಸದರಿ ಟಿಪ್ಪರಗಳಲ್ಲಿ ಮರಳು ಇರುವುದನ್ನು ಖಚಿತಪಡಿಸಿಕೊಂಡು ಈ ಟಿಪ್ಪರಗಳ ನಂಬರ ನೋಡಲಾಗಿ  1) ಟಿಪ್ಪರ ನಂ ಕೆಎ-33,ಎ-4427 2) ಟಿಪ್ಪರ ನಂ ಕೆಎ-33 ಎ- 4396 ಇದ್ದು 3) ಟಿಪ್ಪರ  ನಂ ಕೆಎ-32 , ಸಿ- 1416 ಇದ್ದು 4) ಟಿಪ್ಪರ  ನಂ ಕೆಎ-32, ಸಿ- 5093  ಇದ್ದು  ಸದರಿ ಟಿಪ್ಪರಗಳಲ್ಲಿ ಮರಳನ್ನು ಸಾಗಾಣಿಕೆಗೆ ಸಂಬಂದಪಟ್ಟಂತೆ ದಾಖಲಾತಿಗಳನ್ನು ಹುಡುಕಾಡಲಾಗಿ ಯಾವುದೇ ದಾಖಲಾತಿಗಳು ಕಂಡು ಬಂದಿರುವು ದಿಲ್ಲಾ ಈ ಮರಳನ್ನು ಕಳ್ಳತನದಿಂದ ಸರಕಾರಕ್ಕೆ ರಾಜಸ್ವ ಹಣವನ್ನು ಭರಿಸದೆ ತುಂಬಿಕೊಂಡು ಬರುತ್ತಿದ್ದಾರೆ  ಅಂತಾ ಕಂಡು ಬಂದಿರುತ್ತದೆ, ಸದರಿ ಸ್ಥಳದಲ್ಲಿ ವಾಹನಗಳ ಜಪ್ತಿ ಮಾಡಿಕೊಂಡಿದ್ದು ಪ್ರತಿಯೊಂದು ಟಿಪ್ಪರಗಳ ಅ.ಕಿ. 5,00,000/-ರೂ  ಹೀಗೆ ಒಟ್ಟು 20 ಲಕ್ಷ ಮತ್ತು ಇವುಗಳಲ್ಲಿ ತುಂಬಿರುವ ಮರಳಿನ (ಉಸುಕಿನ) ತಲಾ ಟಿಪ್ಪರ ಅ.ಕಿ. 8000/- ರೂ ಗಳಂತೆ ಹೀಗೆ ಒಟ್ಟು 32 ಸಾವಿರ ರೂಪಾಯಿಗಳು ಆಗುತ್ತಿದ್ದು, ಜಪ್ತಿಪಡಿಸಿಕೊಂಡ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಫರತಾಬಾದ ಠಾಣೆ : ಶ್ರೀ ಶಂಕರಗೌಡ ತಂದೆ ಮಲಕಣಗೌಡ ಬಿರಾದಾರ ಸಾ : ಹಂಗರಗಾ(ಬಿ) ತಾ : ಜೇವರ್ಗಿ ಇವರ ಕಾರ ನಂ ಕೆಎ-56 ಎನ್-0170 ನೇದ್ದರಲ್ಲ್ಲಿ ಸೈಟ ಕೆಲಸ ಮುಗಿಸಿಕೊಂಡು  ನನ್ನೋಂದಿಗೆ ಶರಣಗೌಡ ಬಿರಾದಾರ ಹಾಂತೇಶ,ನಂದಿಕೋಲ ಹಾಗೂ ಚಾಲಕ ಸುರೇಶ ರವರೊಂದಿಗೆ ಕಲಬುರಗಿ ಕಡೆಗೆ ಬರುವಾಗ ಫಿರೋಜಾಬಾದ ದರ್ಗಾದ ಮುಂದಿನ ರೋಡಿನಲ್ಲಿ ಬಂದಾಗ ಕಲಬುರಗಿ ಕಡೆಯಿಂದ ಕಾರ ನಂ ಕೆಎ-28 ಎನ್-5420 ನೇದ್ದರ ಚಾಲಕ ಅತೀ ವೇಗ ಮತ್ತು ಅಲಕ್ಷ್ಯತನದಿಂದ ಓಡಿಸುತ್ತಾ ಬಂದು ನಮ್ಮ ಕಾರಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ್ದು ಆಗ ಸಮಯ ಮದ್ಯಾನ್ಹ 4-10 ಗಂಟೆಯಾಗಿದ್ದು ಅಪಗಾತದಿಂದ ನಮ್ಮ ಚಾಲಕನಿಗೆ ಬಿಟ್ಟು ನಮ್ಮ ಮೂರು ಜನರಿಗೆ  ಸಾದಾ ಗಾಯವಾಗಿದ್ದು ಅಪಗಾತ ಪಡಿಸಿದ್ದ ಕಾರಿನಲ್ಲಿದ್ದವರಿಗೆ ಸಾದಾ ಮತ್ತು ಭಾರಿ ಗಾಯವಾಗಿದ್ದು ಇಂಡಿಕಾ ಕಾರ ಚಾಲಕನು ವಹಾನ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಾತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಶಾರದಾ ಗಂಡ ಪ್ರಭು ಮಾಳಗಿ ಕಿರಿಯ ತರಬೇತಿ ಅಧಿಕಾರಿ ಡಾ :ಬಿ.ಆರ್. ಅಂಬೇಡ್ಕರ ಐಟಿಐ ಕಮಲಾಪೂರ ರವರು ಕಮಲಾಪೂರದಲ್ಲಿರುವ ಕಿರಿಯ ತರಬೇತಿ ಅಧಿಕಾರಿ ಡಾ :. ಬಿ.ಆರ್. ಅಂಬೇಡ್ಕರ ಐಟಿಐ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು. ಕಮಲಾಪೂರ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂ. 0459101024941 ನೇದ್ದು ಹೊಂದಿದ್ದು ದಿನಾಂಕ 10-08-2016 ರಂದು 12-00 ಗಂಟೆ ಸುಮಾರಿಗೆ ಪಿರ್ಯಾದಿಯ ಮೋಬೈಲ್ ನಂ. 9900421244 ನೇದಕ್ಕೆ, ಮೋಬೈಲ್ ನಂ ಗಳಾದ 7797511013 ಮತ್ತು 8051330203 ನೇದ್ದವುಗಳಿಂದ ಕರೆ ಮಾಡಿ ನಾವು ಬ್ಯಾಂಕಿನಿಂದ ಮಾತನಾಡುತ್ತಿದ್ದು, ನಿಮ್ಮ ಎ.ಟಿ.ಎಮ್ ಕಾರ್ಡ ಬ್ಲಾಕ ಆಗಿದೆ ಅದನ್ನು ಪ್ರಾರಂಭಿಸಲು ನಿಮ್ಮ ಎ.ಟಿ.ಎಮ್ ಕಾರ್ಡನ 16 ಸಂಖ್ಯೆಗಳನ್ನು ನಂಬರ ಹೇಳಿರಿ ಅಂತ ಕೇಳಿದಾಗ ತನ್ನ ಎ.ಟಿ.ಎಮ್ ಕಾರ್ಡ ನಂ ಹೇಳಿದ್ದರಿಂದ ನಂಬರ ಕೇಳಿದ 15 ನಿಮಿಷಗಳ ನಂತರ ಪಿರ್ಯಾದಿಯ ಬ್ಯಾಂಕ ಖಾತೆಯಿಂದ ಒಟ್ಟು 1,04,736 ರೂ ಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.