POLICE BHAVAN KALABURAGI

POLICE BHAVAN KALABURAGI

30 October 2015

Kalaburagi District Reported Crimes

ಕೊಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 14/10/2015 ರಂದು ಮುಂಜಾನೆ 7-10 ಗಂಟೆಗೆ ತನ್ನ ಗಂಡನಾದ ಶರಣಕುಮಾರ ಇತನಿಗೆ ನಮ್ಮೂರ ಶ್ರೀಶೈಲ ತಂದೆ ಸಿದ್ದಪ್ಪ ಜೈನಾಪೂರ ಇತನು ನನ್ನ ಗಂಡನಿಗೆ ಮನೆಯಿಂದ ಕರೆದಕೊಂಡು ಹೋಗಿದ್ದು  ಎರಡು ತಾಸಿನ ನಂತರ ನನ್ನ ಗಂಡ ಬಿದ್ದಿರುತ್ತಾನೆ ಅವನಿಗೆ ಆಸ್ಪತ್ರೆಗೆ ಅಟೋದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ವಿಷಯ ಗೊತ್ತಾಗಿದ್ದು ನಂತರ ಮೃತಪಟ್ಟ ನನ್ನ ಗಂಡ ಶವ ಮನೆಗೆ ತಂದಿರುತ್ತಾರೆ. ನನ್ನ ಗಂಡನಿಗೆ ಶ್ರೀಶೈಲ ಇತನು ತನ್ನ ತೋಟದ ಹೊಲದಲ್ಲಿ ಜೀವ ಹೊಡೆದು ಓಡಿ ಹೋಗಿರುತ್ತಾನೆ. ಮತ್ತು ನಮ್ಮ ಕುಟುಂಬದರಿಗೆ ಶ್ರೀಶೈಲ ಇತನ ಕುಟುಂಬದವರು ಅವಾಚ್ಯವಾಗಿ ಬೈದು ಬೇಡ ಅಂತಾ ಜಾತಿ ನಿಂದನೆ  ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಶ್ರೀಮತಿ ದೇವಮ್ಮ ಗಂಡ ಶರಣಕುಮಾರ ಸುಬೇದಾರ ಸಾ: ಹಳೆ ಶಹಾಬಾದ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದವರ ಬಂಧನ :
ಸೇಡಂ ಠಾಣೆ : ದಿನಾಂಕ:30-10-2015 ರಂದು ಸೇಡಂ ಪಟ್ಟಣದ ಮೇನ್ ಬಜಾರ ಅಂಬೇಡ್ಕರ ಮೂರ್ತಿಯ ಹತ್ತಿರ ಸೇಂದಿ ಪಾಕೀಟ್ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ಧಾರೆ.  ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಬಾಪುಗೌಡ ಎಸ್. ಪಾಟೀಲ್ ಪಿ.ಎಸ್.ಐ. ಸೇಡಂ ಪೊಲೀಸ್ ಠಾಣೆ, ಮತ್ತು ಠಾಣೆಯ ಸಿಬ್ಬಂದಿಯವರಾದ, ಶಿವಕುಮಾರ ಪಿಸಿ-861, ಮನೋಹರ ಪಿಸಿ-536 ಹಾಗೂ ಮಪಿಸಿ-746 ಹಾಗು ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳಕ್ಕೆ ಹೋಗಿ, ಅಂಬೇಡ್ಕರ ಮೂರ್ತಿ ಹತ್ತಿರ  ಮರೆಯಾಗಿ ನಿಂತು ನೋಡಲಾಗಿ, ಒಬ್ಬ ಹೆಣ್ಣುಮಗಳು ತನ್ನ ತಲೆಯ ಮೇಲೆ ಒಂದು ಪ್ಲಾಸ್ಟಿಕ್ ಪಾಕೀಟ್ ತುರತ್ತಿದ್ದು ಈ ಬಗ್ಗೆ ಅನುಮಾನ ಬಂದು ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಹಾಗೂ ಮಪಿಸಿ=746 ರವರ ಸಹಾಯದಿಂದ ಅವಳ ತಲೆಯ ಮೇಲಿದ್ದ ಚೀಲವನ್ನು ಕೆಳಗೆ ಇಳಿಸಿ ಬಿಚ್ಚಿ ನೋಡಲಾಗಿ ಅದರಲ್ಲಿ ಸೇಂದಿ ತುಂಬಿದ ಪಾಕೀಟಗಳು ಇದ್ದವು. ಅವುಗಳ ಬಗ್ಗೆ ವಿಚಾರಿಸಲು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು. ಪರಿಶೀಲಿಸಲಾಗಿ ಒಟ್ಟು 25 ಸೇಂದಿ ಪಾಕೀಟ್ ಗಳು ಇದ್ದವು ಅದರ ಅಂದಾಜು ಕಿಮ್ಮತ್ತು 250/- ರೂಪಾಯಿ ಇರುತ್ತದೆ. ಸದರಿಯವಳ ಹೆಸರು ವಿಚಾರಿಸಲಾಗಿ ಲಕ್ಷ್ಮೀಬಾಯಿ ಗಂಡ ಹೀರಾಲಾಲ ರಾಠೋಡ ವಯ:40 ವರ್ಷ, ಜಾತಿ:ಲಂಬಾಣಿ, ಉ:ಕೂಲಿ ಕೆಲಸ, ಸಾ:ಇಂದಿರಾ ನಗರ, ಸೇಡಂ ಅಂತ ತಿಳಿಸಿದ್ದು  ಸದರಿಯವಳನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ : ದಿನಾಂಕ:30-10-2015 ರಂದು ಸೇಡಂ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಶ್ರೀ, ಗೌರಿಶಂಕರ ಹೆಚ್.ಸಿ-91 ಸೇಡಂ ಪೊಲೀಸ್ ಠಾಣೆ ಮತ್ತು ಠಾಣೆಯ ಸಿಬ್ಬಂದಿಯವರಾದ, ಮರೆಗೆಪ್ಪ ಪಿಸಿ-791, ಪಿಸಿ-572 ಆನಂದ ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ನಡೆದುಕೊಂಡು ಹೋಗಿ, ಇಂದಿರಾನಗರದ ಒಂದು ಮನೆಯ ಹತ್ತಿರ ಮನೆಯ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಜನರು ಒಬ್ಬೊಬ್ಬರಾಗಿ ಹೋಗಿ ಬರುತ್ತಿದ್ದನ್ನು ಹಾಗೂ ಒಬ್ಬ ವ್ಯಕ್ತಿ ಸೇಂದಿ ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು, ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಏಕಕಾಲಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲಾಗಿ, ಆಸೀಫ್ ತಂದೆ ಬಾಬುಮಿಯಾ ಗೌಂಡಿ, ಸಾ:ಇಂದಿರಾನಗರ, ಸೇಡಂ  ಅಂತ ತಿಳಿಸಿದರು ಅವನ ಹತ್ತಿರ ಇರುವ ಚೀಲದಲ್ಲಿ ಪರಿಶೀಲಿಸಲಾಗಿ 25 ಸೇಂದಿ ಪಾಕೀಟಗಳು ಅಂ.ಕಿ 250/- ರೂಪಾಯಿ, ನೇದ್ದ್ನನು ಜಫ್ತಿ ಮಾಡಿಕೊಂಡೇವು. ಸದರಿ ಸೇಂದಿ ಬಗ್ಗೆ ವಿಚಾರಿಸಲು ತಾನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು.  ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ : ದಿನಾಂಕ:29-10-2015 ರಂದು ಬಸವನಗರದಲ್ಲಿ ಅಕ್ರಮವಾಗಿ ಸೇಂದಿ ತೈಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಶ್ರೀ, ಗೌರಿಶಂಕರ ಹೆಚ್.ಸಿ-91 ಸೇಡಂ ಪೊಲೀಸ್ ಠಾಣೆ ಮತ್ತು ಠಾಣೆಯ ಸಿಬ್ಬಂದಿಯವರಾದ, ಮರೆಗೆಪ್ಪ ಪಿಸಿ-791, ಶಿವಕುಮಾರ ಪಿಸಿ-861, ಭಿಮಣ್ಣ ಪಿಸಿ-808, ಆಸೀಫ್ ಮಿಯಾ ಪಿಸಿ-535  ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ನಡೆದುಕೊಂಡು ಹೋಗಿ, ಬಸವನಗರ ತಾಂಡಾದಲ್ಲಿರುವ ರಮೇಶ ರಾಠೋಡ ಇವರ ಮನೆಯ ಗೋಡೆಗೆ  ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಜನರು ಒಬ್ಬೊಬ್ಬರಾಗಿ ಹೋಗಿ ಬರುತ್ತಿದ್ದು, ಹಾಗೂ ಒಬ್ಬ ಹೆಣ್ಣುಮಗಳು ಮತ್ತು ಇನ್ನೊಬ್ಬ ವ್ಯಕ್ತಿ ಸೇಂದಿ ಪಾಕೀಟಗಳನ್ನು 10 ರೂಪಾಯಿಗೆ ಒಂದರಂತೆ ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಏಕಕಾಲಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲಾಗಿ 1] ಸುರೇಖ ಗಂಡ ರಮೇಶ ರಾಠೋಡ, 2] ರಮೇಶ ತಂದೆ ಗಣಪತಿ ರಾಠೋಡ ಇಬ್ಬರೂ ಸಾ:ಬಸವನಗರ ತಾಂಡಾ, ಸೇಡಂ. ಅಂತ ತಿಳಿಸಿದರು ಅವರ ಹತ್ತಿರ ಪರಿಶೀಲಿಸಲಾಗಿ 100 ಸೇಂದಿ ಪಾಕೀಟಗಳು ಅಂ.ಕಿ 1000/- ರೂಪಾಯಿ ಮತ್ತು ಒಂದು ಪ್ಲಾಸ್ಟಿಕ್ ಬುಟ್ಟಿ ಜಫ್ತಿ ಮಾಡಿಕೊಂಡು ಸದರಿ ಸೇಂದಿ ಬಗ್ಗೆ ವಿಚಾರಿಸಲು ನಾವು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ: 29.10.2015 ರಂದು ಖಾರಿಬೌಡಿ ಮೋಮಿನಪೂರ ಮಹಿಬೂಬ ಟೇಲರ ಅಂಗಡಿಯ ಹತ್ತಿರ ಇರುವ ಸಾರ್ವಜನಿಕ ರಸ್ತೆಯ ಹತ್ತಿರ ಕೆಲವು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಉಮಾಶಂಕರ.ಬಿ. ಪಿ.ಐ ಚೌಕ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಾರಿಬೌಡಿ ಮೋಮಿನಪೂರ ಮಹಿಬೂಬ ಟೇಲರ ಅಂಗಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರೂ ವ್ಯಕ್ತಿಗಳು ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮೋದಲನೇಯವನು ತನ್ನ ಹೆಸರು ಮಹ್ಮದ ಶಮ್ಸ್ ಮೈನೋದ್ದಿನ @ ಮುನ್ನಾ ತಂದೆ ಮಹ್ಮದ ಹಸನ ಅಲಿ ಸಾ: ಖಾರಿಬೌಡಿ ಮೋಮಿನಪೂರ ಕಲಬುರಗಿ 2) ಮಹ್ಮದ ಜಾಫರ ತಂದೆ ಇಮಾಮ ಸಾಬ ಭಗವಾನ ಹಿಪ್ಪರಗಾ ಸಾ: ಖಾರಿಬೌರಿ ಮೋಮಿನಪೂರ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3300/- ರೂ  ಮಟಕಾ ಚೀಟಿಗಳು ಹಾಗು  ಬಾಲಪೆನ್ ವಶಪಡಿಸಿಕೊಂಡು ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ ವಿಚಾರಣೆಗೆ ಒಳಪಡಿಸಿದ್ದು ಸದರಿಯವರು ಇಬ್ಬರೂ ತಾವು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೆಳಗೇರಿ ವ: 36 ಉ: ಮಟಕಾ ಬುಕ್ಕಿ & ವ್ಯಾಪಾರ ಸಾ: ಮಾಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತರಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಅವರೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ಮಟಕಾ ಬುಕ್ಕಿ ವಿಜಯಕುಮಾರ @ ಬುಕ್ಕಿ ವಿಜಯ ಇತನು ಇಲ್ಲಿಂದ ಓಡಿ ಹೋಗಿದ್ದು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ,
ಚೌಕ ಠಾಣೆ : ದಿನಾಂಕ: 29.10.2015 ರಂದು ಸಾಯಂಕಾಲ ಎಸ್.ಕೆ ಲಮಾಣಿ ಇವರ ಮನೆಯ ಹತ್ತಿರ ಪೂಲಿನ ಬದಿಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಸ್.ಕೆ ಲಮಾಣಿ ಇವರ ಮನೆಯ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗುಂಡಪ್ಪ ತಂದೆ ಶಂಕರ ನಾಟೀಕಾರ ಸಾ: ಕಾವೇರಿ ನಗರ  ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 2420/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್ , ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲು  ವಶಪಡಿಸಿಕೊಂಡು ಈ ಮಟಕಾ ಚೀಟಿಯನ್ನು ಯಾರಿಗೆ ಕೂಡುವುದಾಗಿ ಕೇಳಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ರಾಜು @ ರಾಜಶೇಖರ ತಂದೆ ಮಲ್ಲಿಕಾರ್ಜುನ ಸಾ: ರಾಜುಗಾಂಧಿ ನಗರ ಕಲಬುರಗಿ ಅಂತಾ ಹೆಸರು ಹೇಳಿದ್ದು ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ರಾಜು @ ರಾಜಶೇಖರ ಇತನು ಅಲ್ಲಿಂದ ಓಡಿ ಹೋಗಿದ್ದು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಂಕ್ರೆಪ್ಪ ತಂದೆ ಬಸಪ್ಪ ಸಾತನೂರ ಸಾ|| ಗೊರವಗುಂಡಗಿ ತಾ|| ಸಿಂದಗಿ ಇವರು ದಿನಾಂಕ 13-09-2015 ರಂದು ಬೆಳಿಗ್ಗೆ ನಮ್ಮೂರಿನಿಂದ ನಾನು ಮತ್ತು ನನ್ನ ಹೆಂಡತಿ ಈರಮ್ಮ ಹಾಗೂ ನನ್ನ ಮಗಳು ರೇಣುಕಾ ಹಾಗೂ ಅವಳ 2 ಹೆಣ್ಣು ಮಕ್ಕಳು ಎಲ್ಲರೂ ಕೂಡಿಕೊಂಡು ಶ್ರೀ ಘತ್ತರಗಾ ಭಾಗ್ಯವಂತಿ ದೇವಸ್ಥಾನಕ್ಕೆ ದೆವರ ದರ್ಶನಕ್ಕೆಂದು ಬಂದು ಶ್ರೀ ಭಾಗ್ಯವಂತಿ ದೇವಸ್ಥಾನದ ಹತ್ತಿರ ಇರುವ ಭೀಮಾನದಿಯಲ್ಲಿ ಸ್ನಾನ ಮಾಡುವ ಸಂಭದ ನಮ್ಮ ಬಟ್ಟೆಬರೆಗಳನ್ನು ಹಾಗೂ ನನ್ನ ಹೆಂಡತಿಯ ಮೈ ಮೇಲೆ ಇದ್ದ ಒಂದು ಬೋರಮಳ ಸರ ಹಾಗೂ ನನ್ನ ಮಗಳ ಮೈ ಮೇಲೆ ಇದ್ದ ಒಂದು ಬೋರಮಳ ಎಲ್ಲವುಗಳನ್ನು ನಾವು ತಗೆದುಕೊಂಡು ಹೋದ ಹಳೆಯ ಬಟ್ಟೆಯ ಚೀಲದಲ್ಲಿ ಹಾಕಿ ಹೊಳೆಯ ದಂಡೆಯ ಮೇಲೆ ಇಟ್ಟು, ಎಲ್ಲರೂ ಹೊಳೆಯಲ್ಲಿ ಸ್ನಾನ ಮಾಡಿದೆವು. ನಂತರ ಎಲ್ಲರೂ ಸ್ನಾನ ಮುಗಿಸಿಕೊಂಡು ನಾವು ಇಟ್ಟಿದ ಚೀಲದ ಹತ್ತಿರ ಬಂದು ನೋಡಲಾಗಿ ನಾವು ಬಂಗಾರದ ಸಾಮಾನುಗಳು ಇಟ್ಟ ಚೀಲವನ್ನು ಬಂಗಾರ ಸಾಮಾನುದೊಂದಿಗೆ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ನಾವು ಎಲ್ಲಾ ಕಡೆ ಹುಡುಕಾಡಿ ಅಲ್ಲಿಗೆ ಬಂದ ಭಕ್ತಾದಿಗಳು ಸಹ ವಿಚಾರಿಸಿದೇವು. ಸದರಿ ನಮ್ಮ ವಡವೆಗಳು ಸಿಕ್ಕಿರುವುದಿಲ್ಲ. 2 ಬಂಗಾರದ ಬೋರಮಳ ಸರಗಳು ಅಂದಾಜು 42,000/- ರೂ ಕಿಮ್ಮತ್ತು ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.