POLICE BHAVAN KALABURAGI

POLICE BHAVAN KALABURAGI

29 October 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ಮರೆಮ್ಮ ಗಂಡ ಸಣ್ಣಮರೆಪ್ಪ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ್ ಗುಲಬರ್ಗಾರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮ ದೇವಸ್ಥಾನದ ಹತ್ತಿರದಿಂದ ನಡೆದುಕೊಂಡು ಹೋಗುತ್ತಿದ್ದಾಗ ಪೋಚಪ್ಪ ತಂದೆ ಮರೆಯಪ್ಪ, ಮರೆಪ್ಪ ತಂದೆ ಪೋಷಪ್ಪ, ಮುತ್ತಮ್ಮ ಗಂಡ ಪೋಚಪ್ಪ, ನಾಗಮ್ಮ ಗಂಡ ಸಾಮಿ ಅಮಲಪ್ಪ ತಂದೆ ಮರೆಯಪ್ಪ ಯಲ್ಲಮ್ಮ ತಂದೆ ಅಮಲಪ್ಪ, ದೊಡ್ಡ ನಾಗಮ್ಮ ಗಂಡ ಅಮಲಪ್ಪ, ಹಾಗೂ ಸೌರಮ್ಮ ಗಂಡ ಬಿಚ್ಚಪ್ಪ ಇವರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನ ಗಂಡ ಮತ್ತು ನನ್ನ ಮಗ ಯಾಕೇ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಪೋಚಪ್ಪ ತಂದೆ ಮರೆಪ್ಪ ಹಾಗೂ ಮತ್ತಮ್ಮ ಇವರು ನನಗೆ ತಲೆಗೆ ಬೆನ್ನಿಗೆ, ಬಡಿಗೆಯಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿದರು. ಬಿಡಿಸಲು ಬಂದ ನನ್ನ ಗಂಡನಿಗೆ ಮತ್ತು ಮಗನಿಗೂ ಸಹ ಬೆನ್ನಿನ ಮೇಲೆ, ತಲೆಯ ಮೇಲೆ ಬಡಿಗೆಯಿಂದ ಹೊಡೆದು ಅಲ್ಲದೇ ಕೈಯಿಂದ ಕಲ್ಲಿನಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 191/2011 ಕಲಂ :143, 147, 354, 323, 324, 506, ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ನಾಗಮ್ಮ ಗಂಡ ಸಾಮಿ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ ಗುಲಬರ್ಗಾ ರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮನ ಗುಡಿ ಮುಂದಿನ ಜಾಗೆಯಲ್ಲಿ ನಿಂತಾಗ ದುರ್ಗಪ್ಪ ತಂದೆ ಯರ್ರಪ್ಪ ಪೊತರಾಜ ಸಂಗಡ ಇನ್ನೂ 4 ಜನರು ಕೂಡಿ ಬಂದವರೇ ಅವಾಚ್ಯವಾಗಿ ಬೈದು ಕೂದಲು ಹಿಡಿದು ಜಗ್ಗಾಡಿದ್ದು ಆಗ ಅಮಲಪ್ಪ ತಂದೆ ಮರೆಪ್ಪ ನನಗೆ ಮತ್ತು ನನ್ನ ಗಂಡನಿಗೆ ಮತ್ತು ಪೋಚಪ್ಪ ತಂದೆ ಮರೆಪ್ಪ ಇವರು ಬಿಡಿಸಲು ಬಂದಾಗ ಇವರಿಗೂ ಸಹ ಕೈಯಿಂದ, ಬಡಿಗೆಯಿಂದ, ಮತ್ತು ಕಲ್ಲಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 192/2011 ಕಲಂ :143, 147, 504, 354, 323, 506, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮನುಷ್ಯ ಕಾಣೆಯಾದ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ದಿನಾಂಕ 22/10/11 ರಂದು ಮದ್ಯಾನ್ನ ಸುಮಾರಿಗೆ ಶ್ರೀ ಭೀಮರಾವ ತಂದೆ ಸಿದ್ರಾಮ ಹಿಟಕರ್ ವ:40 ಜಾ: ವಡ್ಡರ ಉ:ಖಣಿ ಕೆಲಸ ಸಾ: ಮದಕಲ್ ತಾ:ಸೇಡಂ ಮನೆಯಿಂದ ಮದಗಲ್ ಗ್ರಾಮಕ್ಕೆ ಹೊಗುತ್ತೇನೆ ಅಂತಾ ಶಹಾಬಾದದ ಮನೆಯಿಂದ ಹೊದವನು ಮದಗಲ್ ಗ್ರಾಮಕ್ಕೆ ಹೋಗದೇ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿರುತ್ತಾನೆ ಅಂತಾ ಶ್ರೀ ಬಾಬು ತಂದೆ ಸಿದ್ರಾಮ ಹಿಟಕರ್ ಸಾ:ಶಿಬರಕಟ್ಟಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 160/11 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕ ಶಾಂತತೆ ಭಂಗ ಉಂಟು ಮಾಡಿದ ಬಗ್ಗೆ :

ಚೌಕ ಪೊಲೀಸ್ ಠಾಣೆ : ಪಾಪುಲರ ಪ್ರಂಟ ಆಫ ಇಂಡಿಯಾ ಸಂಘಟನೆಯ ಗುಲಬರ್ಗಾ ಜಿಲ್ಲಾ ಅಧ್ಯಕ್ಷರಾದ ನಾಸೀರ ಹುಸೇನ ರವರ ನೇತೃತ್ವದಲ್ಲಿ 100-150 ಜನರು ಕೂಡಿಕೊಂಡು ಇಲಾಖೆಯ ಯಾವುದೇ ಪೂರ್ವಾನುಮತಿ ಇಲ್ಲದೆ ಬಸ್ ಮತ್ತು ಕ್ರೂಷರ ಜೀಪ ತೆಗೆದುಕೊಂಡು ಬಹುಮನಿ ಕೋಟೆಯ ಮುಖ್ಯ ಆವರಣದಲ್ಲಿ ಅಕ್ರಮ ಕೂಟ ರಚಿಸಿಕೊಂಡು ಅತಿಕ್ರಮಣ ಪ್ರವೇಶ ಮಾಡಿ ಜಮಾಯಿಸಿ, ರಸ್ತೆಯಿಂದ ಹೋಗಿ ಬರುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತಡೆದು ಅಡ್ಡಿ ಪಡಿಸಿರುತ್ತಾರೆ ಅಂತಾ ಶ್ರೀ ಸಂಗಣ್ಣ ತಂದೆ ಭಿಮಾಶಂಕರ ಕಣ್ಣಿ ಸಾಃ ಭಾರತ ಪುರಾತತ್ವ ಇಲಾಖೆ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 224/2011 ಕಲಂ 143,147,447,283,341,149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ :
ಶ್ರೀ.ಓಂಪ್ರಕಾಶ ತಂದೆ ನೂರಂದಪ್ಪNN ಮಲಕೊಡ ಸಾ|| ನೇರು ಚೌಕ ಆರ್,ಬಿ.ರೋಡ ಶಾಹಾಬಾದ ತಾ|| ಚಿತ್ತಾಪೂರ ರವರು ನಾನು ದಿನಾಂಕ: 20/08/2011 ರಂದು 1900 ಗಂಟೆಯ ಸುಮಾರಿಗೆ ಸುಪರ ಮಾರ್ಕೆಟದಲ್ಲಿರುವ ಕಾಮತ ಹೊಟೇಲ ಎದುರುಗಡೆ ನನ್ನ ಮೋಟರ ಸೈಕಲ ನಂ: ಕೆಎ 32 ಎಲ್ 4264 ಅ||ಕಿ|| 30,000/- ನೇದ್ದನ್ನು ನಿಲ್ಲಿಸಿ ಕಾಮತ ಹೊಟೇಲ ಒಳಗಡೆ ಹೊಗಿ ಮರಳಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 204/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ಪ್ರೇಮನಾಥ ತಂದೆ ಶಿವಶರಣಪ್ಪಾ ಕಾಮಶೆಟ್ಟಿ ಉದ್ಯೋಗ; ಶಿಕ್ಷಕ ಸರಕಾರಿ ನೌಕರ ವಿಳಾಸ;-ಅವರಾದ (ಬಿ) ತಾ;ಜಿ;ಗುಲಬರ್ಗಾ ಸದ್ಯ|| ವಿಠಲರಾವ ಜೈಶಟ್ಟಿ ರೇವಣಸಿದ್ದೇಶ್ವರ ಕಾಲೂನಿ ಹುಮನಾಬಾದ ರೋಡ ಗುಲಬರ್ಗಾ ರವರು ನಾನು ದಿನಾಂಕ.27-10-2011 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಮನೆಯ ಕೀಲಿ ಹಾಕಿಕೊಂಡು ಅವರಾದ (ಬಿ) ಗ್ರಾಮಕ್ಕೆ ಹೋಗಿರುತ್ತೆನೆ. ದಿನಾಂಕ. 28-10-2011 ರಂದು ನಮ್ಮ ಪಕ್ಕದ ಮನೆಯವರಾದ ಸಿದ್ರಾಮಪ್ಪಾ ತಂದೆ ಗುರುಬಸ್ಸಪ್ಪಾ ಪಾಟೀಲ್ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದು ಏನೆಂದರೆ ನಿಮ್ಮ ಮನೆಯ ಬಾಗಿಲ ಕೊಂಡಿ ಮುರಿದಿದ್ದು, ಬಾಗಿಲು ತೆರೆದಿರುತ್ತದೆ. ಮನೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾಣು ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಆಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 320/2011 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಳಾಗಿದೆ.

ಅಪಘಾತ ಪ್ರಕರಣ:

ಆಳಂದ ಪೊಲೀಸ ಠಾಣೆ: ಶ್ರೀ ಹಣಮಂತ ತಂದೆ ಬಸವಣ್ಣಪ್ಪ ಲೆಂಡೆ ಸಾ: ಜವಳಗಾ ಗ್ರಾಮ ರವರು ನಾನು ಉಮರ್ಗಾ ತಾಲೂಕಿನ ಖಸಗಿ ಗ್ರಾಮಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಮರಳಿ ಬಸ್ಸಿನಲ್ಲಿ ಬರುತ್ತಿರುವಾಗ ನಾವು ಕುಳಿತ ಬಸ್ಸು ಲಿಂಗಣ್ಣ ತಂದೆ ಸೈಬಣ್ನ ಡಿಗ್ಗಿ ಇವರ ಹೋಲದ ಹತ್ತಿರ ರೋಡಿನ ಮೇಲೆ ಬಸ್ಸ ಬಂದಾಗ ಎದುರಿನಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಹಿಂದೆ ಒಬ್ಬನಿಗೆ ಕೂಡಿಸಿಕೊಂಡು ಅತೀ ವೇಗದಿಂದ ಹಾಗು ಅಲಕ್ಷತನದಿಂದ ಬಂದು ಬಜಾಜ ಎಂ80 ಸವಾರನಿಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದನು ನಾವು ಬಸ್ಸಿನಿಂದ ಕೆಳಗೆ ಇಳಿದು ನೋಡಲಾಗಿ ಬಜಾಜ ಎಂ80 ವಾಹನ ನಂ ಎಂಹೆಚ್-12 ವಿ.ಎ-1397 ಇದ್ದು ಅದರ ಸವಾರ ಪರಮೇಶ್ವರ ತಡಕಲೆ ಇದ್ದು ಅಪಗಾತದಿಂದ ಅವನಿಗೆ ಭಾರಿ ತಕರ ಗಾಯವಾಗಿತ್ತು ಅಪಘಾತ ಪಡಿಸಿದ ಹೀರೊ ಹೊಂಡಾ ಸ್ಪ್ಲೆಂಡರ ಮೋಟರ ಸೈಕಲ ನಂ ಕೆ.ಎ-32, ಎಕ್ಸ್- 6096 ಇದ್ದು ಅದರ ಮೇಲಿದ್ದ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿರರುತ್ತವೆ. ಉಪಚಾರ ಫಲಕಾರಿಯಾಗದೇ ಪರಮೇಶ್ವರನು ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನನೆ ನಂ: 250/2011 ಕಲಂ 279, 337, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.