POLICE BHAVAN KALABURAGI

POLICE BHAVAN KALABURAGI

08 August 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಗುಂಡಮ್ಮ ಗಂಡ ಶರಣಪ್ಪ ಸಂದೇನವರ್ ಸಾಃ ಪರತಾಬಾದ ಹಾಃವಃ ಬಸವೇಶ್ವರ ನಗರ ಜೇವರಗಿ ಇವರ ಗಂಡ ಶರಣಪ್ಪ ಪೂಜಾರಿ ಇವರು ರೇವನೂರ ಗ್ರಾಮದಲ್ಲಿ ನನಗೆ ಪರಿಚಯದ ದೂಳಪ್ಪ ಕಡ್ಲೆ ಈತನು ಸತ್ತಿರುತ್ತಾನೆ ಮಣ್ಣು ಕೊಟ್ಟು ಬರುತ್ತೆನೆ ಎಂದು ಹೇಳಿ ದಿನಾಂಕ 07.08.2018 ರಂದು ಮುಂಜಾನೆ ಅವರ ಗೆಳೆಯನಾದ ನಿಂಗಣ್ಣಾ ತಂದೆ ಮುತ್ತಣ್ಣ ಗೂಡೂರ ಈತನು ನಡೆಯಿಸುವ ಮೋಟಾರ ಸೈಕಲ್ ನಂಬರ್ ಕೆ.ಎ- 33-ಎಸ್-9026 ನೇದ್ದರ ಮೇಲೆ ಕುಳಿತುಕೊಂಡು ಇಬ್ಬರು ಜೇವರಗಿ ಮನೆಯಿಂದ ಹೋದರು. ನಂತರ ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ನನ್ನ ತಮ್ಮ ಬೀರಲಿಂಗ ಇತನು ಪೊನ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿನ್ನ ಗಂಡ ಶರಣಪ್ಪನಿಗೆ ಮೊಟಾರ್ ಸೈಕಲ್ ಎಕ್ಸಿಡೆಂಟ ಆಗಿರುತ್ತದೆ ಅವನಿಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅವನ ಹೆಣ ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿದ್ದೆವೆ ಎಂದು ಹೇಳಿದನು. ವಿಷಯ ಗೊತ್ತಾದ ಕೂಡಲೆ ನಾನು ಮತ್ತು ನನ್ನ ಅಣ್ಣನಾದ ಶಾಂತಕುಮಾರ ತಂದೆ ತಿಪ್ಪಣ್ಣ ಇಬ್ಬರು ಕೂಡಿ ಜೇವರಗಿ ಸರಕಾರಿ ಆಸ್ಪತ್ರಗೆ ಬಂದು ನೋಡಲಾಗಿ ನನ್ನ ಗಂಡನ ತಲೆಗೆ ಬಾರಿ ರಕ್ತಗಾಯವಾಗಿ, ಮೂಗಿನ ಹತ್ತಿರ ರಕ್ತಗಾಯವಾಗಿ, ಬಾಯಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದನು. ಅಲ್ಲಿಯೇ ಇದ್ದ ನನ್ನ ತಮ್ಮ ಬೀರಲಿಂಗ್ ಸಂಗಡ ಇದ್ದ ನನಗೆ ಪರಿಚಯದ ಬಸವರಾಜ ತಂದೆ ಸಿದ್ದಣ್ಣ ಪೂಜಾರಿ ಇತನು ಹೇಳಿದ್ದೆನೆಂದರೆ ನಾನು ರೇವನೂರದಿಂದ ನನ್ನ ಮೋಟಾರ ಸೈಕಲ್ ಮೇಲೆ ಜೇವರಗಿ ಕಡೆಗೆ ಬರುತ್ತಿದ್ದಾಗ ನಮ್ಮ ಮುಂದೆ ನನಗೆ ಪರಿಚಯದ ನಿಂಗಣ್ಣ ಈತನು ತನ್ನ ಮೋಟಾರ ಸೈಕಲ್ ನಂಬರ್ ಕೆ.ಎ-33-ಎಸ್-9026 ನೇದ್ದರ ಮೇಲೆ ಶರಣಪ್ಪ ಸಂದೆನವರ್ ಈತನಿಗೆ ಕೂಡಿಸಿಕೊಂಡು ಹೋಗುತ್ತಿದ್ದನು. ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ರೇವನೂರ ಜೇವರಗಿ ರೋಡಿನ ವಿಠಲ್ ಜಾದವ ಇವರ ಹೊಲದ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಜೇವರಗಿ ಕಡೆಯಿಂದ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಂಗಣ್ಣನ ಮೋಟಾರ ಸೈಕಲಿಗೆ ಡಿಕ್ಕಿಪಡಿಸಿ ಸ್ವಲ್ಪ ಮುಂದೆ ಹೋಗಿ ಅವನು ಕೆಳಗಡೆ ಬಿದ್ದನು. ಅವನ ಮೊಟಾರ್ ಸೈಕಲ ನಂಬರ ನೋಡಲಾಗಿ ಅದರ ನಂಬರ ಕೆಎ-32-ಇ.ಕ್ಯೂ-9609 ಇದ್ದು, ಅದರ ಸವಾರನಿಗೆ ನೋಡಲಾಗಿ ಅವನು ನನಗೆ ಪರಿಚಯದ ಜೇವರಗಿಯ ಬೋಗೇಶ ತಂದೆ ಹಣಮಂತರಾಯ ಕುರಳ್ಳಿ ಇದ್ದನು. ನಂತರ ಅವನು  ತನ್ನ ಮೊಟಾರ್ ಸೈಕಲ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು. ನಾನು ರೋಡಿನ ಮೇಲೆ ಬಿದ್ದಿದ್ದವರ ಹತ್ತಿರ ಹೋಗಿ ನೋಡಲು ಶರಣಪ್ಪ ಈತನಿಗೆ ತಲೆಗೆ, ಮೂಗಿಗೆ ಬಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಮೋಟಾರ ಸೈಕಲ್ ನಡೆಸುತ್ತಿದ್ದ ನಿಂಗಣ್ಣಾ ತಂದೆ ಮುತ್ತಣ್ಣ ಗೂಡೂರ ಇತನ ಕಾಲಿಗೆ, ಸೊಂಟಕ್ಕೆ ಭಾರಿ ಗಾಯವಾಗಿತ್ತು. ನಂತರ ವಿಷಯವನ್ನು ಬೀರಲಿಂಗ ಸರಡಗಿ ಈತನಿಗೆ ಪೋನಿನಲ್ಲಿ ತಿಳಿಸಿ. ನಂತರ ನಾನು ಮತ್ತು ರೋಡಿನಲ್ಲಿ ಹೊಗಿ ಬರುವವರು ಕೂಡಿಕೊಂಡು ನಿಂಗಣ್ಣನಿಗೆ ಉಪಚಾರ ಕುರಿತು ಅಂಬುಲೇನ್ಸನಲ್ಲಿ ಹಾಕಿ ಜೇವರಗಿ ಆಸ್ಪತ್ರೆಗೆ ಕಳುಹಿಸಿ ನಂತರ ನಾನು ಮತ್ತು ಬಿರಲಿಂಗ, ನಾಗಪ್ಪ ತಂದೆ ಸದಾಶಿವಾ ನ್ಯಾನೂರ ಕೂಡಿಕೊಂಡು ಶರಣಪ್ಪನ ಹೆಣವನ್ನು ಮತ್ತೊಂದು ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 06/08/2018 ರಂದು ಮದ್ಯಾಹ್ನ ನನ್ನ ಗಂಡನಾದ ಶ್ರೀ ವಿರಣ್ಣ ತಂದೆ ವಿರೂಪಾಕ್ಷಪ್ಪಾ ಮಣ್ಣೂರೆ ಇವರು ಅಂಗಡಿಗೆ ಬೇಕಾಗುವ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಟಿ.ವಿಎಸ್ ಮೋಟಾರ ಸೈಕಲ ನಂ ಕೆಎ-32 ಇ.ಎನ್-3541ನೇದ್ದನು ತೆಗೆದುಕೊಂಡು ಹೊಗಿದ್ದು, ಸಾಯಂಕಾಲ 7.30 ಪಿ.ಎಮ್ ಸುಮಾರಿಗೆ ನಮಗೆ ಪರಿಚಯದ ಶರಣಬಸಪ್ಪಾ ಕುಂಬಾರ ಇವರು ಪೋನ ಮಾಡಿ ತಿಳಿಸಿದ್ದೇನೆಂದರೆ ಫರಹತಾಬಾದ ಗ್ರಾಮದ ಕರಿಘೋಳೇಶ್ವರ ಗುಡಿಯ ಎದುರುಗಡೆ ರಾಷ್ಟ್ರೀಯ ಹೇದ್ದಾರಿ 218ರ ರೋಡಿನ ಮೇಲೆ ನಿಮ್ಮ ಗಂಡನಾದ ವೀರಣ್ಣ ಇವರಿಗೆ ರಸ್ತೆ ಅಪಘಾತವಾಗಿರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಬಂದು ನೋಡಲಾಗಿ ನನ್ನ ಗಂಡನ ಎಡ ಕಪಾಳಕ್ಕೆ ಭರಿ ರಕ್ತಗಾಯ, ತಲೆಗೆ ಭಾರಿ ರಕ್ತಗಾಯವಾಗಿ ಎರಡು ಕಿವಿ ಮತ್ತು ಮೂಗಿನಿಂದ ರಕ್ತ ಸೋರುತ್ತಿತ್ತು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ.  ಅಷ್ಟರಲ್ಲಿ ಅಂಬ್ಯುಲೇನ್ಸ ಬಂದಿದ್ದು, ಉಪಚಾರ ಕುರಿತು ಕಲಬುರಗಿಯ ಯುನಿಟೇಡ ಆಸ್ಪತ್ರೆಗೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ನಂತರ ಶರಣಬಸಪ್ಪಾ ಕುಂಬಾರ ಇವರಿಗೆ ವಿಚಾರಿಸಲಾಗಿ ತಿಳಿಸಿದೆನೆಂದರೆ, ಲಾರಿ ನಂ ಕೆಎ-25 ಸಿ-2367 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಟಿ.ವಿ.ಎಸ್ ಮೋಟಾರ ಸೈಕಲ ನಂ ಕೆಎ-32 ಇ.ಎನ್-3541 ನೇದ್ದರ ಮೇಲೆ ಹೊಗುತ್ತಿದ್ದ ನಿಮ್ಮ ಗಂಡನಿಗೆ ಡಿಕ್ಕಿಪಡಿಸಿದ್ದರಿಂದ ಈ ರೀತಿ ಗಾಯಗಳಾಗಿದ್ದು,. ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಹೊಗಿರುತ್ತಾನೆ ಅಂತಾ ತಿಳಿಸಿದರು. ದಿನಾಂಕ 06/08/2018 ರಂದು ರಾಷ್ಟ್ರೀಯ ಹೇದಾರಿ 218ರ ಫರಹತಾಬಾದ ಗ್ರಾಮದ ಕರಿ ಘೋಳೆಶ್ವರ ಗುಡಿಯ ಎದುರುಗಡೆ ರೋಡಿನ ಮೇಲೆ ಲಾರಿ ನಂ ಕೆಎ-25 ಸಿ-2367 ನೇದ್ದರ ಚಾಲಕನು ತನ್ನ ಲಾರಿಯನ್ನ ಅತೀ ವೇಗ ಮತ್ತು ಅಲಕ್ಷ್ಕತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಾದ ವಿರಣ್ಣ ಇವರು ಚಲಾಯಿಸುತ್ತಿದ್ದ ಟಿ.ವಿ.ಎಸ್ ಮೋಟಾರ ಸೈಕಲ ನಂ ಕೆಎ-32 ಇ.ಎನ್-3541 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ನನ್ನ ಗಂಡನಿಗೆ ಬಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಪಾರ್ವತಿ ಗಂಡ ವೀರಣ್ಣ ಮಣ್ಣೂರೆ ಸಾಃ ಸರಡಗಿ(ಬಿ) ಗ್ರಾಮ ತಾ.ಜಿಃ ಕಲಬುರಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:11/07/18 ರಂದು ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ನವಜಾತ ಶಿಶು ಸಿಕ್ಕಿದ್ದು ಅದನ್ನು ಚೈಲ್ಡಲೈನ (ರೈಲ್ವೆ ಚೈಲ್ಡಲೈನ) ರವರಲ್ಲಿ ಪಾಲನೆ ಪೋಷಣೆಗಾಗಿ ಸೇರ್ಪಡೆ ಮಾಡಿದ್ದು ನಂತರ ಮಗು ತನ್ನದೆಂದು ಅಂಜಮ್ಮ ಎಂಬ ಮಹಿಳೆ ಬಂದು ಕೇಳಿದ್ದರಿಂದ ಅದರಿಂದ ಮೇಲಾಧಿಕಾರಿಗಳ ಅಭಿಪ್ರಾಯದಂತೆ ಸದರಿ ಅಪರಿಚಿತ ನವಜಾತ ಶಿಶುವನ್ನು ಅಂಜಮ್ಮನಿಗೆ ಒಪ್ಪಿಸಿದ್ದು ಅಂಜಮ್ಮಾ @ಮಂಜುಳಾ ಮಹಿಳಾ ನಿಲಯದಲ್ಲಿ ಮಗುವಿನೊಂದಿಗೆ ಆಶ್ರಯ ಪಡೆದುಕೊಂಡಿದ್ದು ನಂತರ ಅಂಜಮ್ಮ ಇವಳು ಹೇಳದೆ ಕೆಳದೆ ಮಗುವನ್ನು ಬಿಟ್ಟು ಹೋಗಿದ್ದು ನಂತರ ಮಗುವಿನ ಪಾಲನೆ ಪೋಷಣೆಗಾಗಿ ದಿನಾಂಕ:30/07/18 ರಂದು ಮತ್ತೆ ಮರಳಿ ನಮ್ಮ ಸಂಸ್ಥೆಗೆ ಸೇರ್ಪಡೆ ಮಾಡಿದ್ದು ನಾವು ಪಾಲನೆ ಪೋಷಣೆ ಮಾಡುತ್ತಾ ಇರುವಾಗ ಮಗು ಆಸ್ಪತ್ರೆಯಲ್ಲಿಯೇ ಉಸಿರಾಟದ ತೊಂದರೆ ಹಾಗೂ ಕಡಿಮೆ ತೂಕ ಹೊಂದಿದ್ದು ಎನ್‌‌.ಐ.ಸಿ.ಯು ವಾರ್ಡನಲ್ಲಿ ಉಪಚಾರ ಪಡೆಯುತ್ತಿದ್ದು ಸದರಿ ಮಗುವಿಗೆ ಅಭಿಜಿತ ಅಂತಾ ಹೆಸರು ಇಟ್ಟಿದ್ದು ಇರುತ್ತದೆ. ಹೀಗಿದ್ದು ಅಭಿಜಿತ 28 ದಿವಸದ ಮಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ದಿ:07/08/2018 ರಂದು 9.30 ಎ.ಎಂ ಸುಮಾರಿಗೆ ಮರಣ ಹೊಂದಿದ್ದು ಇರುತ್ತದೆ. ಕಾರಣ ಅಭಿಜಿತ 28 ದಿವಸದ ಮಗು ಉಸಿರಾಟದ ತೊಂದರೆ ಹಾಗೂ ಕಡಿಮೆ ತೂಕ ಹೊಂದಿದ್ದು ಅನಾರೋಗ್ಯದಿಂದ ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆಯು ಸಂಶಯ ಹಾಗೂ ದೂರು ಇರುವದಿಲ್ಲಾ ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರಯ್ಯಾ ಹಲಕರಣಿ ಮಠ ಅಧೀಕ್ಷಕರು ಅಮೂಲ್ಯ ಶಿಶುಗೃಹ (ಜಿ) ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಲ್ಲಾಭಕ್ಷ ತಂದೆ ರಾಜಾವಲಿ ಚೌಧರಿ ಸಾ||ಮಣುರ ಪಂಕ್ಷನ್ ಹಾಲ್ ಹತ್ತಿರ ಅಫಜಲಪೂರ ರವರದು ಅಫಜಲಪೂರ ಪಟ್ಟಣದ ಎಸ್ ಕೆ ಜಿ ಲಾಡ್ಜ ಮುಂದುಗಡೆ ಅಶೋಕ ಗವಳಿ ರವರ ಕಾಂಪ್ಲೇಕ್ಸದಲ್ಲಿ ಸಮೀರ ಆಟೋ ಕನ್ಸರ್ಟಿಂಗ್  ಸೆಕೆಂಡ ಹ್ಯಾಂಡ್ ಮೋಟಾರ್ ಸೈಕಲ್ ಶೋ ರೂಮ್ ಇರುತ್ತದೆ ದಿನಾಲು ಬೆಳಿಗ್ಗೆ 09.00 ಗಂಟೆಗೆ ನಮ್ಮ ಶೋ ರೂಮ್ ತಗೆದು ರಾತ್ರಿ 8.00 ಗಂಟೆಗೆ ಬಂದ್ ಮಾಡಿಕೊಂಡು ಮನೆಗೆ ಹೋಗುತ್ತೇನೆ. ಎಂದಿನಂತೆ ನಿನ್ನೆ ದಿನಾಂಕ 05/08/2018 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನಾನು ನನ್ನ ಶೋ ರೂಮ್ ದ ಟೆಬಲ್ ಲಾಕರದಲ್ಲಿ ಮೋಟಾರ್ ಸೈಕಲ್ ದಾಖಲಾತಿಗಳು ಹಾಗು 12,000/-ರೂಪಾಯಿ ಇಟ್ಟು ಲಾಕ ಮಾಡಿಕೊಂಡು ಶೋ ರೂಮ್ ಸೆಟರ್ ಲಾಕ ಮಾಡಿ ಮನೆಗೆ ಹೋಗಿರುತ್ತೇನೆ. ದಿನಾಂಕ 06/08/2018 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ನಾನು ನನ್ನ ಶೋ ರೂಮ್ ಗೆ ಹೋದಾಗ ಶೋ ರೂಮ್ ಸೆಟರ್ ಅರ್ಧಾ ತೆರೆದಿತ್ತು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ನನ್ನ ಟೆಬಲ್ ಲಾಕರ ಮುರಿದಿತ್ತು ಅದರಲ್ಲಿ ನಾನು ಇಟ್ಟಿದ್ದ 12,000/-ರೂ ಹಾಗು ಮೋಟಾರ ಸೈಕಲ್ ದಾಖಲಾತಿಗಳು ಇರಲಿಲ್ಲಾ ನನ್ನಂತೆ ನಮ್ಮ ಅಂಗಡಿಯ ಹತ್ತಿರ ಇದ್ದ ಬಸವೇಶ್ವರ ಆಟೋ ಮೊಬೈಲ್ಸ್ ಅಂಗಡಿಯ ಸೆಟರ್ ತಗೆದು ಅದರಲ್ಲಿದ್ದ 5000/-ರೂಪಾಯಿ, ಶ್ರೀ ಗುರು ಕುಮಾರೇಶ್ವರ ಮಶಿನರಿ ಸ್ಟೋರಿನ ಎರಡು ಸೇಟರ್ ತಗೆದು ಟೆಬಲ್ ಲಾಕರದಲಿದ್ದ 4000/-ರೂಪಾಯಿ ಕಳ್ಳತನ ಮಡಿರುತ್ತಾರೆ ಹಾಗು ಜಾವೀದ ಸತ್ಕರ ರವರ ಆಶಿರ್ವಾದ ಅಂಗಡಿಯ ಮತ್ತು ರಮೇಶ ದೇಶುಣಗಿ ರವರ ಜೆಕೆ ಟಾಯರ್ಸ ಅಂಗಡಿಯ ಸೆಟರ ತಗೆದು ಲಾಕರ ಮುರಿದಿದ್ದು ಇರುತ್ತದೆ. ದಿನಾಂಕ 05/08/2018 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 06/08/2018 ರಂದು ಬೆಳಿಗ್ಗೆ 5.00 ಗಂಟೆ ಮದ್ಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಶೋ ರೂಮ್ ಹಾಗು ನನ್ನಂತೆ ಬಸವೇಶ್ವರ ಆಟೋ ಮೊಬೈಲ್ಸ್ ಅಂಗಡಿ, ಶ್ರೀ ಗುರು ಕುಮಾರೇಶ್ವರ ಮಶಿನರಿ ಸ್ಟೋರ, ಜಾವೀದ ಸತ್ಕರ ರವರ ಆಶಿರ್ವಾದ ಅಂಗಡಿಯ ಮತ್ತು ರಮೇಶ ದೇಶುಣಗಿ ರವರ ಜೆಕೆ ಟಾಯರ್ಸ ಅಂಗಡಿಯ ಸೆಟರ ತಗೆದು  ಒಟ್ಟು 21,000/-ರೂಪಾಯಿ ಹಾಗು ಮೋಟಾರ್ ಸೈಕಲ್ ದಾಖಲಾತಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.