POLICE BHAVAN KALABURAGI

POLICE BHAVAN KALABURAGI

01 October 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಜಯಸುಧಾ  ಗಂಡ ವಿಜಯ ಪ್ರಸಾದ ಸಾ: ಎನ್.ಜಿ.ಓ ಕಾಲೋನಿ ಕಲಬುರಗಿ ರವರನ್ನು ದಿನಾಂಕ 24/05/2013ರಂದು  ಕುಟುಂಬದ ಸದಸ್ಯರ ಸಮಕ್ಷಮದಲ್ಲಿ ಧಾರವಾಡದ ವಿಜಯ ಪ್ರಸಾದ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು   ಮದುವೆಯಲ್ಲಿ 10,00,000 ನಗದು ಹಣ 25 ತೊಲೆ ಬಂಗಾರ ಮತ್ತು ಹೇಳಿದ ಕಡೆ ಏಂಗೆಜಮೆಂಟ ಮತ್ತು ಮದುವೆ ಮಾಡಿಕೊಡಬೇಕು ಅಂತಾ ಬೇಡಿಕೆ ಇಟ್ಟಿದ್ದು  ನಮ್ಮ ತಂದೆಯವರು  5 ಲಕ್ಷ ರೂಪಾಯಿ ಮತ್ತು 10 ತೊಲೆ ಬಂಗಾರ ಅವರ ಕುಟುಂಬದವರ ಒತ್ತಾಯದ ಮೇರೆಗೆ ಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡ ಅತ್ತೆ ಮಾವ ನಾದಿನಿ  ಇವರೆಲ್ಲರು ನನಗೆ 3 ಲಕ್ಷ ರೂಪಾಯಿ ಹಾಗೂ ಕಾರನ್ನು ನಿಮ್ಮ ತಂದೆಯಿಂದ  ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡುತ್ತಿದ್ದರು ಆಗ ನನ್ನ ಗಂಡ ನಾನು ನಿನ್ನ ಜೊತೆ ಸುಮನ್ನೆ ಮದುವೆಯಾದೆ ನನ್ನ ಜೊತೆಯಿದ್ದ ಅಶ್ವಿನಿ ಇವಳ ಜೊತೆ ನಾನು ಬಹಳ ದಿನದಿಂದ ಸಂಬಂಧ ಇಟ್ಟುಕೊಂಡಿದ್ದೆ ಅವಳಿಗೆ ಕೇಳಿದರೆ ಹಣ ಒಡವೆ ಕೊಡಿಸುತ್ತಿದ್ದಳು. ಆಗ ನಾನು ನಮ್ಮ ತಂದೆಯವರಿಗೆ ವಿಷಯವನ್ನು ತಿಳಿಸಿದಾಗ ಅವರು ನನ್ನ ಗಂಡನಿಗೆ ಬುದ್ದಿವಾದ ಹೇಳಿದಾಗ ಆಗ ನನ್ನ ಗಂಡ ಇದು ನನ್ನ ವೈಯಕ್ತಿಕ ಜೀವನ ನಿವೇನು ಹೇಳುವುದು ಬೇಡ ಅಂತಾ ಹೇಳಿ ನಮ್ಮ ತಂದೆ ತಾಯಿಯವರಿಗೆ ವಾಪಸ ಕಳುಹಿಸಿರುತ್ತಾರೆ ನಾನು ಗರ್ಭಿಣಿಯಾದ ನಂತರ ನನ್ನ ಗಂಡ ಹಾಗೂ ಅವರ ಕುಟುಂಬದ ಸದಸ್ಯರು ನನಗೆ ಚೆನ್ನಾಗಿ ನೋಡಿಕೊಳ್ಳದೆ  ಗರ್ಭಪಾತ ಮಾಡಿಸು ಅಂತಾ ಒತ್ತಡ ಹೇರಿದರು ಅದಕ್ಕೆ ನಾನು ಒಪ್ಪದಿದ್ದಾಗ ನನ್ನ ಗಂಡ ನನಗೆ ಕಾಲಿನಿಂದ ಹೊಟ್ಟೆಗೆ ಒದ್ದು  ನನ್ನ ಅತ್ತೆ ಮಾವ ನಾದಿನಿ  ಇವರೆಲ್ಲರು ಕೂಡಿ ನನಗೆ ದೈಹಿಕ ಹಿಂಸೆ ನೀಡಿರುತ್ತಾರೆ.  ನನ್ನ ಅತ್ತೆ ಮಾವ ನನ್ನ ಗಂಡನಿಗೆ ಬುದ್ದಿವಾದ ಹೇಳದೆ ಅವನು ಗಂಡಸು ಇದ್ದಾನೆ ಅವನ ಇಷ್ಟ ಬಂದ ಹಾಗೆ ಮಾಡುತ್ತಾನೆ ಅಂತಾ ನೀನು ಇದ್ದರೆ ಇರು ಇಲ್ಲದಿದ್ದರೆ ಮನೆ ಬಿಟ್ಟು ಹೊಗು ಅಂತಾ ಹೇಳಿದರು ಒಂದು ದಿನ ರಾತ್ರಿ ನನ್ನ ಗಂಡ ತನ್ನ ಪೋನನ್ನು ಮನೆಯಲ್ಲಿ ಬಿಟ್ಟು ಹೊಗಿದನು ಅದಕ್ಕೆ ಅಶ್ವಿನಿ ಇವಳಿಂದ ಪೋನ ಬಂದಿತ್ತು ನಾನು ಪೋನ ರಿಸಿವ ಮಾಡಿದಾಗ ಅಶ್ವಿನಿ ಇವಳು ಸುಮ್ಮನೆ ವಿಜಯಗೆ ಪೋನ ಕೊಡು ಅಂತಾ ಹೇಳಿದ್ದು ಆಗ ನಾನು ಅಶ್ವಿನಿ ಇವಳಿಗೆ ಸುಮ್ಮನೆ ನನ್ನ ಜೀವನ ಮತ್ತು ನನ್ನ ಗಂಡನ ಜೀವನ ಯಾಕೆ ಹಾಳು ಮಾಡುತ್ತಿ ದಯವಿಟ್ಟು ನಮ್ಮಿಂದ ದೂರ ಇರು ಅಂತ ಹೇಳಿದರು ಅದಕ್ಕೆ ಅವಳು  ಏ ಮುದೈವಿ ನಿನಗೆಂತ ಮೊದಲು ಅವನ ಸುಖ ನಾನು ಪಡೆದಿದ್ದಿನಿ ನೀನು ಈಗ ಬಂದಿದ್ದಿ ನೀ ಏನಾದರು ನನಗೆ ಮತ್ತು ವಿಜಯಗೆ ತೊಂದರೆ ಕೊಟ್ಟೆ ಅಂದರೆ ನಮ್ಮ ಅಪ್ಪನೆ ಡಿ.ಎಸ್.ಪಿ ಇದ್ದಾನೆ ನೀನು ಹೆಸರು ಕೇಳಿಲ್ವಾ ನಮ್ಮ ಪಾಡಿಗೆ ನಮಗೆ ಬಿಡು ಅಂತಾ ಹೇಳಿದಳು. ನಾನು ಗರ್ಭಿಣಿಯಾಗಿದ್ದಾಗ ಕುಬುಸ ಕಾರ್ಯಕ್ರಮದಲ್ಲಿ ನನ್ನ ತಂದೆ ನನ್ನ ಗಂಡನಿಗೆ ನಮ್ಮ ತಂದೆ 2 ತೊಲೆ ಬಂಗಾರ ಉಂಗುರ ಹಾಕಿದರು. ನನಗೆ ಒಂದು ಹೆಣ್ಣು ಮಗು ಹುಟ್ಟಿತ್ತು ಆಗ ನನ್ನ ಗಂಡ ಅತ್ತೆ ಮಾವ ನಾದಿನಿ ಎಲ್ಲರೂ ನೀನು ಗಂಡು ಮಗುವನ್ನು ಹೇರಲಿಲ್ಲ ಅಂತಾ ಮನೆಯಿಂದ ಹೊರಗೆ ಹಾಕಿದರು. ಆಗ ನನ್ನ ತಂದೆ ತಾಯಿ ಬಂದು ಬುದ್ದಿವಾದ ಹೇಳಿ ಅಲ್ಲಿಯೇ ಬಿಟ್ಟು ಬಂದರು. ಆಗ ಅವರು ಪ್ರತಿ ಕ್ಷಣ ಮಾನಸಿಕ ಮತ್ತು ದೈಹಿಕೆ ಹಿಂಸೆ ಕೊಟ್ಟು ಚಿತ್ರ ಹಿಂಸೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದನು. ದಿನಾಂಕ 01-09-2015 ರಂದು 10-30 ನಿಮಿಷಕ್ಕೆ ಕೊರ್ಟ ಆವರಣದಲ್ಲಿ ನನ್ನ ಗಂಡ ಹಾಗೂ ಕುಟುಂಬದ ಎಲ್ಲಾ ಸದಸ್ಯರು  ನನ್ನನ್ನು ಅವಾಚ್ಯವಾಗಿ ಬೈದು ನನ್ನ ಗಂಡ ಹಾಗೂ ಗಂಡನ ತಮ್ಮ ಸಿಂಹಾದ್ರಿ ಹಾಗೂ ಸಣ್ಣ ನಾದಿನಿ ನೀನು ನಮ್ಮ ಮೇಲೆ ಎಷ್ಟು ಕೇಸು ಬೇಕಾದರೂ ಹಾಕಿಕೊಳ್ಳು ನಮಗೆ ಯಾವುದೇ ಭಯವಿಲ್ಲ ಅಂತಾ ಹೆದರಿಸಿದ್ದು ನನ್ನ ಗಂಡ ನಾನು ಅಶ್ವಿನಿ ಜೊತೆ ಸಂಬಂದ ಹಾಗೆ ಮುಂದುವರೆಸುತ್ತೇನೆ. ನೀನು ಏನು ಬೇಕಾದರು ಮಾಡಿಕೊಳ್ಳು ಅಂತಾ ನನ್ನನ್ನು ಅವಾಚ್ಯವಾಗಿ ಬೈದಿರುತ್ತಾನೆ. ನಂತರ 12-20 ಗಂಟೆ ಸುಮಾರಿಗೆ ಪುನ: ನನ್ನ ಗಂಡ ಹಾಗೂ ನನ್ನ ಮಾವ ಪೈಡಯ್ಯ ಅತ್ತೆ ರಗುಪತಮ್ಮ ನಾದಿನಿ ಶ್ರೀದೇವಿ ಹಾಗೂ ಗಂಡನ ಅಣ್ಣ ವೆಂಕಟೇಶ ತಮ್ಮ ಸಿಂಹಾದ್ರಿ ಇವರು ನಮ್ಮ ಮನೆಗೆ ಬಂದು ರಂಡಿ ಬೋಸಡಿ ನಿನಗೆ ನಾವು ಇಟ್ಟುಕೊಳ್ಳುವದಿಲ್ಲ ನೀನು ನಮ್ಮ ಮೇಲೆ ಕೇಸು ಮಾಡಿದ್ದಿ ಅದು ವಾಪಾಸ್ಸು ತೆಗೆದುಕೊಂಡರೆ ಸರಿ ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ತಂದೆಯನ್ನು ಸಾಯಿಸುತ್ತೇವೆ. ಅಂತಾ ಬೈದು ಮತ್ತು ನಿಮ್ಮ ಎಲ್ಲಾ ಕುಟುಂಬದ ಸದಸ್ಯರ ಮೇಲೆ ನಾವು ಪ್ರಕರಣ ದಾಖಲಿಸಿ ನಿಮಗೆ ಸತಾಯಿಸುತ್ತೇವೆ ಅಂತಾ ಅಂದು ಅವರಲ್ಲಿ ನನ್ನ ಗಂಡನ ತಂದೆಯಾದ ಪೈಡಯ್ಯ ಅತ್ತೆ ರಗುಪತಮ್ಮ ನಾದಿನಿ ಶ್ರೀದೇವಿ ಹಾಗೂ ನನ್ನ ಗಂಡನ ಅಣ್ಣ ವೆಂಕಟೇಶ ತಮ್ಮ ಸಿಂಹಾದ್ರಿ ನನ್ನ ತಲೆಯ ಕೂದಲು ಎಳದಾಡಿ ಹೊಡೆದಿದ್ದು ಮತ್ತು ನನ್ನ ಕತ್ತನ್ನು ಒತ್ತಿ ಸಾಯಿಸಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 27-09-2015  ರಂದು  ರಾತ್ರಿ ನನ್ನ  ಮಗನಾದ ರೇವಣಸಿದ್ದಪ್ಪ ಇತನು ತನ್ನ  ಮೋಟಾರ ಸೈಕಲ ನಂ ಕೆಎ-32-ವಾಯ್-714 ನೇದ್ದನ್ನು ಆರ.ಟಿ.ಓ ಕ್ರಾಸ ಕಡೆಯಿಂದ ಮನೆಗೆ ಹೋಗುವ ಕುರಿತು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಎಮ.ಆರ.ಎಮ್.ಸಿ ಕಾಲೇಜ  ಎದುರು ರೋಡ ಮೇಲೆ ರೋಡ ಎಡ ಬಲ ಕಟ  ಹೋಡೆದು ಒಮ್ಮಲೇ ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ತೆಲೆಗೆ ಭಾರಿ ಗುಪ್ತಗಾಯ ಬಲ ಮೆಲಿಕಿನ ಹತ್ತೀರ ಹಾಗೂ ಬಲಗಾಲು ಪಾದದ ಮೇಲ್ಬಾದಲ್ಲಿ ಗಾಯ ಹೊಂದಿ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ವ್ಹಿ - ಕೇರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೊರಿಸಲು ವೈದ್ಯರು ಪರೀಕ್ಷಿಸಿ  ಬೆಳಗ್ಗೆ 5-00 ಗಂಟೆಗೆ  ಮೃತಪಟ್ಟಿರುತ್ತಾನೆ, ಅಂತಾ ತಿಳಿಸಿದ್ದು ನನ್ನ ಮಗ ಗಾಯದ ಉಪಚಾರ ಫಲಕಾರಿಯಾಗದೆ ಹೈದ್ರಾಬಾದ ವ್ಹಿ - ಕೇರ ಆಸ್ಪತ್ರೆಯಲ್ಲಿ  ದಿನಾಂಕ 30-09-215 ರಂದು  ಬೆಳಿಗ್ಗೆ 5-00 ಗಂಟೆಗೆ  ಮೃತಪಟ್ಟಿರುತ್ತಾನೆ ಅಂತಾ ಶ್ರೀ ಪರಮೇಶ್ವರ ತಂದೆ ದೇವರಾಯ  ಹೊಸಮನಿ ಸಾ: ಖಜೂರಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.