POLICE BHAVAN KALABURAGI

POLICE BHAVAN KALABURAGI

22 July 2017

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ನಮ್ಮೂರಲ್ಲಿ ರೇಷನ ಅಂಗಡಿ ಇರುವುದಿಲ್ಲಾ, ನಮ್ಮೂರ ರೇಷನ  ಗಂವ್ಹಾರದ ರೇಷನ ಅಂಗಡಿಗೆ ಬರುತ್ತದೆ.  ನಾವು ಗಂವ್ಹಾರ ಗ್ರಾಮಕ್ಕೆ ಹೋಗಿ ರೇಷನ ತೆಗೆದುಕೊಂಡು ಬರುತ್ತೆವೆ. ಈ ತಿಂಗಳ ರೇಷನ ಬಂದಿದ್ದು ಗೊತ್ತಾಗಿ ಇಂದು ದಿ. 21.07.2017 ರಂದು ಮುಂಜಾನೆ ನಾನು ಮತ್ತು ನನ್ನ ಅಣ್ಣ ಮಲ್ಲಪ್ಪ ತಂದೆ ಭೀಮಶ್ಯಾ ದೊಡಮನಿ ಇಬ್ಬರೂ ಕೂಡಿ ನಮ್ಮೂರಿನಿಂದ ಗಂವ್ಹಾರಕ್ಕೆ ಬಂದು ರೇಷನ ತೆಗೆದುಕೊಳಲು ರೇಷನ ಅಂಗಡಿಯ ಮುಂದುಗಡೆ ಸಾಲಾಗಿ ಪಾಳಿಯಲ್ಲಿ ನಿಂತಿದ್ದೆವು, ನಮ್ಮಂತೆ ನಮ್ಮೂರ ಇತರೆ ಜನರು ಸಹ ರೇಷನ ತೆಗೆದುಕೊಂಡು ಹೋಗಲು ಸಾಲಾಗಿ ಪಾಳಿಯಲ್ಲಿ ನಿಂತಿದ್ದರು, ಮುಂಜಾನೆ 10.00 ಗಂಟೆಯ ಸುಮಾರಿಗೆ ನಮ್ಮೂರ ಬಸವರಾಜ ತಂದೆ ಶಿವರಾಯ ನಾಯ್ಕೊಡಿ ಇತನು ರೇಷನ ಅಂಗಡಿ ಮುಂದೆ ಸಾಲಿನಲ್ಲಿ ನಮ್ಮ ಹಿಂದೆ ನಿಂತಿದ್ದವನು, ಒಮ್ಮಲೆ ನಮ್ಮ ಮುಂದೆ ಬಂದು ಸಾಲಿನಲ್ಲಿ ನಿಂತುಕೊಂಡು ತನ್ನ ಕೈ ಚೀಲ ಇಟ್ಟನು. ಅದಕ್ಕೆ ನಾನು ಅವನಿಗೆ ನಾವು ಸಾಲಿನಲ್ಲಿ ಪಾಳಿಯಲ್ಲಿ ನಿಂತಿದ್ದೆವೆ ನೀನು ಒಮ್ಮಲೆ ಹಿಂದಿನಿಂದ ನಮ್ಮ ಮುಂದೆ ಹೋಗಿ ಪಾಳಿ ಹಚ್ಚಿ ನಿಲ್ಲುತ್ತಿದ್ದಿ ಯಾಕೆ? ಎಂದು ಕೇಳಿದಾಗ ಆಗ ಅವನು ನನಗೆ ಏ ಮಾದಿಗ ಸೂಳೆ ಮಗನೆ ನನಗೆ ನೀನು ಏನು ಕೇಳುತಿ ಎಂದು ಅವಾಚ್ಯವಾಗಿ ಬೈಯ   ಹತ್ತಿದ್ದನು, ಆಗ ನಾನು ಅವನಿಗೆ ಪಾಳಿ ಪ್ರಕಾರ ರೇಷನ ತೆಗೆದುಕೊಳಬೇಕು ಎಂದು ಅಂದಾಗ ಅವನು ಚಪ್ಪಲಿಯಿಂದ  ನನ್ನ ತಲೆಯ ಮೇಲೆ ಹೊಡೆದನು, ಮತ್ತು ನನಗೆ ನೇಲಕ್ಕೆ ಹಾಕಿ ಕಾಲಿನಿಂದ ಹೊಟ್ಟೆಯ ಮೇಲೆ ಒದೆಯುತ್ತಿದ್ದಾಗ ನನ್ನ ಅಣ್ಣ ಮಲ್ಲಪ್ಪ ಇತನು ಬಿಡಿಸಲು ಬಂದಾಗ ಬಸವರಾಜ ನಾಯ್ಕೊಡಿ ಇತನ  ಅಣ್ಣತಮ್ಮಂದಿರಾದ 1) ಈಶಪ್ಪ ತಂದೆ ಶಿವರಾಯ ನಾಯ್ಕೊಡಿ, 2) ದೇವಪ್ಪ ತಂದೆ ಶಿವರಾಯ ನಾಯ್ಕೊಡಿ, 3) ತುಳಜಪ್ಪ ತಂದೆ ಶಿವರಾಯ ನಾಯ್ಕೊಡಿ ಇವರು ಬಂದು ಎ ಮಾದಿಗ ಸೂಳೆಮಕ್ಕಳೆ ನಿಮಗೆ ಸೊಕ್ಕು ಬಹಳ ಇದೆ ಎಂದು ಅವಾಚ್ಯವಾಗಿ  ಬೈಯ್ದು, ಅವರಲ್ಲಿಯ ದೇವಪ್ಪ ಇತನು ಚಪ್ಪಲಿಯಿಂದ ನನ್ನ ಅಣ್ಣ ಮಲ್ಲಪ್ಪನ ಬೇನ್ನು ಮೇಲೆ ತಲೆಯ ಮೇಲೆ ಹೊಡೆದಿರುತ್ತಾನೆ, ತುಳಜಪ್ಪ ಇತನು ಕಾಲಿನಿಂದ ನನ್ನ ಅಣ್ಣನ ಸೊಂಟದ ಮೇಲೆ ಒದ್ದಿರುತ್ತಾನೆ, ಈಶಪ್ಪ ಇತನು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಮತ್ತು ಅವರೆಲ್ಲರೂ ಏ ಮಾದಿಗ ಸೂಳೆ ಮಕ್ಕಳೆ ಇನ್ನೂ ನಮ್ಮ  ತಂಟೆಗೆ ಬಂದರೆ ನೀಮ್ಮ  ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಜೇಟ್ಟೆಪ್ಪ  ತಂದೆ ಭೀಮಶ್ಯಾ ದೊಡ್ಡಮನಿ ಸಾಃ ಮಾರಡಗಿ (ಎಸ್.) ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ರವರು ದಿನಾಂಕ 24.08.2015 ರಂದು ನಮ್ಮ ದೂರದ ಸಂಬಂದಿಕನಾದ ನಿಖಿಲ ಎಂಬುವವರು ಪೇಸ್ಬುಕ್ ನಲ್ಲಿ ಪರಿಚಯನಾಗಿದ್ದು ಆವಾಗಿನಿಂದ ನಾವಿಬ್ಬರೂ ಪೋನಿನಲ್ಲಿ ಮಾತನಾಡುತ್ತಿದ್ದೇವು. ಮತ್ತು ನಿಖಿಲ ಇತನು ಆಗಾಗ ಕಲಬುರಗಿಗೆ ಬಂದು ಬೇಟಿಯಾಗಿ ಹೋಗುತ್ತಿದ್ದನು. ಸ್ವಲ್ಪ ದಿವಸಗಳು ಕಳೆದ ನಂತರ ನಿಖಿಲ ಇತನು ನನಗೆ ತನ್ನೊಂದಿಗೆ ದೈಹಿಕ ಸಂಪರ್ಕ ಮಾಡುವಂತೆ ಒತ್ತಾಯ ಮಾಡಿದನು. ನಾನು ಮದುವೆಯಾಗುವವರೆಗೂ ದೈಹಿಕ ಸಂಪರ್ಕ ಮಾಡುವುದು ಬೇಡ ಅಂತಾ ನಿರಾಕರಿಸಿದೆ. ಆದರೂ ಕೂಡ ನಿಖಿಲ ನಾನು ನಮ್ಮ ಮನೆಯಲ್ಲಿ ನಿನ್ನನ್ನು ನನ್ನ ಜೊತೆ ಮದುವೆಯಾಗಲು ಒಪ್ಪಿಸಿದ್ದೆನೆ. ನಾನು ನಿನ್ನನ್ನೆ ಮದುವೆ ಆಗುವದಾಗಿ ನಂಬಿಸಿ ದಿನಾಂಕ 09.12.2015 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಸ್ವಂತ ಕಾರಿನಲ್ಲಿ ಫರತಾಬಾದ ಹತ್ತಿರ ಇರುವ ಇಂದಿರಾ ಲೇ ಔಟ ದಲ್ಲಿರುವ ಖುಲ್ಲಾ ಜಾಗದಲ್ಲಿ ತನ್ನ ಕಾರಿನಲ್ಲಿ ನಾನು ಬೇಡವೆಂದರೂ ನನಗೆ ಒತ್ತಾಯದಿಂದ ದೈಹಿಕ ಸಂಬೋಗ ಮಾಡಿ ನನಗೆ ಮತ್ತೇ ನನ್ನ ಪಿ.ಜಿ ಬಿಟ್ಟುಹೋದನು ಅದಾದ ನಂತರ ತಿಂಗಳಿಗೆ 2-3 ಸಲ ಕಲಬುರಗಿಗೆ ಬಂದು ತನ್ನ ಕಾರಿನಲ್ಲಿಯೇ ನನಗೆ ಅದೇ ಜಾಗಕ್ಕೆ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಸ್ವಲ್ಪ ದಿವಸಗಳ ನಂತರ ನಾನು ಗರ್ಭೀಣಿಯಾದೆ. ಈ ವಿಷಯ ಅವನಿಗೆ ತಿಳಿಸಿದಾಗ ಅವನು ನನಗೆ ತಾಳಿ ಕಟ್ಟ ನಮಗೆ ಈಗಲೇ ಮಗು ಬೇಡ ಅಂತಾ ಹೇಳಿ ಇಂದಿರಾ ಆಸ್ಪತ್ರೆಯಲ್ಲಿ ಹೋಗಿ ತನ್ನ ಹೆಂಡತಿ ಅಂತಾ ಹೇಳಿಕೊಂಡು ಟ್ಯಾಬಲೆಟ್ ಕೊಡಿಸಿದನು. ಆಗ ನನಗೆ ಗರ್ಭಪಾತವಾಯಿತು. ಅಷ್ಟರಲ್ಲಿಯೇ ನಿಖಿಲ ಇತನಿಗೆ ಅವರ ತಂದೆ ತಾಯಿ ಮದುವೆ ಮಾಡುವ ಸಲುವಾಗಿ ಹೆಣ್ಣು ನೋಡುತ್ತಿರುವ ವಿಷಯ ಗೊತ್ತಾಯಿತು. ಈ ವಿಷಯವನ್ನು ನಾನು ಅವರ ತಂದೆ ಪ್ರಕಾಶ ಖೇಣಿದ ಅವರಿಗೆ ತಿಳಿಸಿದೆನು. ಆಗ ಅವರ ತಂದೆ ಕೂಡ ನನಗೆ ನಿನ್ನ ಕ್ಯಾರಿಕ್ಟರ ಸರಿ ಇಲ್ಲಾ ನಿನಗೆ ನನ್ನ ಮಗನೊಂದಿಗೆ ಮದುವೆ ಮಾಡಲು ಸಾದ್ಯವಿಲ್ಲ ಎಂದು ಬೈದು ಬಿಟ್ಟರು. ಆದರೂ ಕೂಡ ನಿಖಿಲ ಇತನು ದಿನಾಂಕ 29.06.2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಮತ್ತೇ ಮೊದಲಿನ ಜಾಗಕ್ಕೆ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದೆನು. ಈ ವಿಷಯವನ್ನು ನಾನು ಸ್ವಲ್ಪ ದಿವಸಗಳು ಕಳೆದ ನಂತರ ನಮ್ಮ ತಂದೆ ತಾಯಿಗೆ ತಿಳಿಸಿದೆನು ದಿನಾಂಕ 24.03.2017 ರಂದು ನಾನು ನಮ್ಮ ತಾಯಿ ಅಕ್ಕ ಕೂಡಿ ನಿಖಿಲ ಇವರ ಮನೆಗೆ ಹೋಗಿ ನನ್ನೊಂದಿಗೆ ನಡೆದ ವಿಷಯವನ್ನೆಲ್ಲಾ ಅವರ ತಂದೆ ತಾಯಿಗೆ ತಿಳಿಸಿದಾಗ ಅವರು ಕೂಡ ನನ್ನ  ಮಗನಿಗೆ 20 ಜನ ಹುಡುಗಿಯರು ಇದ್ದಾರೆ ಅವರಲ್ಲಿ ನೀನು ಒಬ್ಬಳು ಹಾಗಂತ ನಿನಗೆ ನನ್ನ ಮಗನೊಂದಿಗೆ ಮದುವೆ ಮಾಡಲು ಸಾದ್ಯವಿಲ್ಲ. ನನಗೆ ಹಾಗೂ ನನ್ನ ತಾಯಿ ಅಕ್ಕಳಿಗೆ ಅವಮಾನ ಮಾಡಿ ನೀವು ಕೇಸು ಮಾಡಿದರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದರು. ಅಲ್ಲದೇ ನಿಖಿಲ ಇತನು ಬೇರೆ ಹುಡುಗಿಯೊಂದಿಗೆ ಮದುವೆ ಆಗಿರುತ್ತಾನೆ. ಕಾರಣ ನಿಖಿಲ ನನ್ನೊಂದಿಗೆ ಮದುವೆ ಆಗುವದಾಗಿ ನಂಬಿಸಿ ದಿನಾಂಕ 09.12.2015 ರಿಂದ 07.03.2017 ರವರೆಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದ್ದು ಅಲ್ಲದೇ ಗರ್ಬಿಣಿಯಾದ ನನಗೆ ಟ್ಯಾಬಲೆಟ್ (ಮಾತ್ರೆ)  ಕೊಟ್ಟು ನನಗೆ ಗರ್ಭಪಾತ ಕೂಡ ಮಾಡಿಸಿದ್ದು ಮತ್ತು ನನಗೆ ಹಾಗೂ ನಮ್ಮ ಮನೆಯವರಿಗೆ ಜೀವದ ಬೆದರಿಕೆ ಹಾಕಿದ ನಿಖಿಲ ಇತನ ತಂಧೆ ಪ್ರಕಾಶ ತಾಯಿ ಸುವರ್ಣಾ ಇವರ ಮೇಲೆ ಕಾನೂನು ಕ್ರಮ  ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀ ಅನಂತಪ್ಪ ತಂದೆ ಭೀಮಪ್ಪ ನೀರಟ್ಟಿ ಸಾ|| ಮದನಾ ಗ್ರಾಮ ಇವರು ದಿನಾಂಕ 28-06-2017 ರಂದು ಬುಧುವಾರ ಮುಧೋಳ ಸಂತೆ ಇದ್ದ ಕಾರಣ ಸಂತೆ ಮಾಡಿಕೊಂಡು ಬರಲು ನಾನು ಮತ್ತು ನನ್ನ ಸ್ನೇಹಿತ ವೆಂಕಟಪ್ಪಾ ತಂದೆ ಆಶಪ್ಪಾ ಕವಡಿ ಸಾ|| ಮದನಾ ಇಬ್ಬರೂ ಸೇರಿ ನನ್ನ ಮೋಟಾರ ಸೈಕಲ ನಂ ಕೆಎ 32, ಇಕೆ 1137 ನೆದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಮುಧೋಳಕ್ಕೆ ಬಂದು ಸದರಿ ನನ್ನ ಮೋಟಾರ ಸೈಕಲನ್ನು ಮುಧೋಳ ಬಸ್ಟಾಂಡದ ಹಿಂದುಗಡೆ ಮಿಸ್ಕೀನ ಡಾಕ್ಟರ ದವಾಖಾನೆಯ ಮುಂದುಗಡೆ ಕೀಲಿ ಹಾಕಿ ನಿಲ್ಲಿಸಿ ನಾನು ಮತ್ತು ನನ್ನ ಸ್ನೇಹಿತ ಇಬ್ಬರೂ ಕೂಡಿಕೊಂಡು ಸಂತೆ ಮಾಡಲು ಬಜಾರದಲ್ಲಿ ಹೋಗಿ ಸಂತೆ ಮಾಡಿಕೊಂಡು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ನಾವು ಮೋಟಾರ ಸೈಕಲ್ಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನಾವು ನಿಲ್ಲಿಸಿದ ನಮ್ಮ ಮೋಟಾರ ಸೈಕಲ ಕಾಣೆಯಾಗಿದ್ದು ಇರುತ್ತದೆ.ನಂತರ ಮುಧೋಳ ಗ್ರಾಮದಲ್ಲಿ ಎಲ್ಲಾ ಕಡೆ ಹುಡಿಕಿದರೂ ನಮ್ಮ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ಮತ್ತು ಅಂದಿನಿಂದ ಇಂದಿನವರೆಗೆ ಮುಧೋಳ ಗ್ರಾಮದ ಸುತ್ತ ಮುತ್ತ ಹಾಗು ನಮ್ಮೂರ ಮದನಾ, ಹಾಗು ಕಡಚರ್ಲಾ, ಶಿಲಾರಕೋಟ, ಮೇದಕ, ಚಂದಾಪೂರ, ಕೊಲ್ಕುಂಧಾ, ಮೋತಕಪಲ್ಲಿ ಮುಂತಾದ ಗ್ರಾಮಗಳಲ್ಲಿ ಹುಡುಕಿದರೂ ಎಲ್ಲಿಯೂ ನಮ್ಮ ಮೋಟಾರ ಸೈಕಲ ಪತ್ತೆಯಾಗಿರುವುದಿಲ್ಲಾ  ದಿನಾಂಕ 28-06-2017 ರಂದು ಮಧ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯ ಅವಧಿಯಲ್ಲಿ ಮುಧೋಳ ಗ್ರಾಮದ ಬಸ್ಟಾಂಡದ ಹಿಂದುಗಡೆ ಮಿಸ್ಕೀನ ಡಾಕ್ಟರ ದವಾಖಾನೆಯ ಮುಂದುಗಡೆ ಕೀಲಿ ಹಾಕಿ ನಿಲ್ಲಿಸಿದ ನನ್ನ ಮೋಟಾರ ಸೈಕಲ ನಂ ಕೆಎ 32, ಇಕೆ 1137 ಅ,ಕಿ 20,000 ರೂಪಾಯಿ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.