POLICE BHAVAN KALABURAGI

POLICE BHAVAN KALABURAGI

09 September 2014

Gulbarga District Reported Crimes

ಕೊಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಬಸಮ್ಮ ಗಂಡ ಸೈದಪ್ಪ ಜೇವರಗಿ ಸಾ:  ಇಜೇರಿ ತಾ: ಜೇವರಗಿ ರವರು  ದಿನಾಂಕ 08.09.2014 ರಂದು ಬೆಳಗ್ಗೆ 08:15 ಗಂಟೆಯ ಸುಮಾರಿಗೆ ಎಂದಿನಂತೆ ಈ ದಿವಸ ಕೂಡ ನಮ್ಮೂರಲ್ಲಿ ಇದ್ದ ಖಾಜಾ ಅಮಿನೋದ್ದಿನ್ ದರ್ಗಾದಲ್ಲಿ ಇರುವ ನೀರಿನ ಟ್ಯಾಂಕಿಗೆ ನಾನು ಮತ್ತು ನನ್ನ ಮಗಳಾದ ತಾಯಮ್ಮ ಅಲ್ಲದೆ ನಮ್ಮ ಅಣ್ಣ-ತಮ್ಮಕೀಯ ಲಕ್ಷ್ಮಣ ತಂದೆ ಬೀಮರಾಯ ನೀರು ತರಲು ಹೋಗಿದ್ದೆವು. ಆಗ ವೇಳೆಗೆ ನಮ್ಮೂರ 1) ಖಾಸಿಂಸಾಬ್ ಲಾಡಜೀ 2) ಜಿಲಾನಿ ಅಂತರಗಂಗಿ ಅವನ ತಂದೆಯಾದ 3) ಗಫೂರ್ ಅಂತರಗಂಗಿ 4) ಬಾಬಾ ಮಡಕಿ, 5) ನಬಿಸಾಬ್ ಸೌದಾಗರ್ 6) ರಾಜಅಹ್ಮದ್ ತಂದೆ ಸೈಯದಸಾಬ ತಳ್ಳಮ್ ತೋಟ 7) ಮಹೀಬೂಬ ಸಾಬ್ ಲಾಡಜಿ ಇವರು ನಮ್ಮ ಹತ್ತಿರ ಬಂದು ನಮಗೆ ಇಲ್ಲಿ ಯಾಕೆ ನೀರಿಗೆ ಬರುತ್ತಿರಿ ಬ್ಯಾಡ ಸೂಳೆ ಮಕ್ಕಳೆ ಅಂತ ಹೊಲಸು ಶಬ್ದಗಳಿಂದ ಬೈದು ಅವರಲ್ಲಿ ಜಿಲಾನಿ ಅಂತರಗಂಗಿ ಮತ್ತು ಗಫೂರ್ ಅಂತರಗಂಗಿ ಇವರು ನನಗೆ ಮತ್ತು ಮಗಳಾದ ತಾಯಮ್ಮಳಿಗೆ ಎರಡು ಎಟು ಕೈಯಿಂದ ಹೊಡೆದರು. ಆಗ ಅಲ್ಲಿಯೆ ಇದ್ದ ಲಕ್ಷ್ಮಣ ಟಣಕೆದಾರ ಈತನು ನಮ್ಮ ಹೆಣ್ಣು ಮಕ್ಕಳಿಗೆ ಯಾಕೆ ಹೊಡೆಯುತ್ತಿರಿ ಅಂತ ಕೇಳಿದಾಗ ಖಾಸಿಂಸಾಬ್ ಲಾಡಜೀ ಬಾಬಾ ಮಡಕಿ, ನಬಿಸಾಬ್ ಸೌದಾಗರ್, ರಾಜಅಹ್ಮದ್ ತಂದೆ ಸೈಯದಸಾಬ ತಳ್ಳಮ್ ತೋಟ, ಮತ್ತು   ಮಹೀಬೂಬ ಸಾಬ್ ಲಾಡಜಿ ಇವರು ಲಕ್ಷ್ಮಣ ಈತನಿಗೆ ಏ ಬ್ಯಾಡ ಸೂಳೆ ಮಕ್ಕಳೆ 2 ತಿಂಗಳ ಹಿಂದೆ ನಮ್ಮಿಂದ ಎಟು ತಿಂದಿದ್ದಿರಿ ಮತ್ತೆ ನಮಗೆ ಎದುರು ಮಾತಾಡುವಸ್ಟು ಧೈರ್ಯ ಬಂತೆನು ಅಂತ ಅವನಿಗೆ ರಾಡು, ಕಲ್ಲು ಮತ್ತು ಬಡಿಗೆಯಿಂದ ತಲೆಗೆ ಮುಖಕ್ಕೆ ಮತ್ತು ಮೈಮೆಲೆ ಅಲ್ಲಲ್ಲಿ ಹೋಡೆಯ ತೊಡಗಿದರು, ಆಗ ಅವನು ಅಂಜಿ ಅಲ್ಲಿಂದ ಮನೆಯ ಕಡೆಗೆ ಓಡಿ ಹೋಗುತ್ತಿರುವಾಗ ಅವನ ಹಿಂದೆ ಮೇಲಿನವರೊಂದಿಗೆ ಇನ್ನು ಮುಸ್ಲೀಂ ಜನಾಂಗದವರಾದ 1. ರಾಜಅಹ್ಮದ್ ಟಾಕಿ ಮಡಕಿ 2. ಇಮಾಮಸಾಬ್ ಸಿಣಬುಡ್‌ ಮಡಕಿ 3. ಖಾಜಾಸಾಬ್ ಮದರಸಾಬ್ ಬಾಗವಾನ್ 4. ಅಮೀರ್ ಹಮ್ಜಾ ತಂದೆ ಬಾಷಾಸಾಬ್ ಲಖಣಾಪುರ 5. ಶಬ್ಬಿರ ಮಾಲಿಗೌಡ ಟಿಪ್ಪರ 6. ಸುಬಾನ ಮಾಲಿಗೌಡ್ 7. ಸದ್ದಾಂ ಹುಸೇನ್ ಸಾಹುಕಾರ್ ಮಡಕಿ 8. ಖಯುಂ ಸಾಬ್ ಸಿರವಾಳ ಅಂಗಡಿ 9. ರಜಾಕ್ ಮಾಲಿಗೌಡ  ಸ್ಟೇಷನರ್ ಅಂಗಡಿ 10. ಮಹಿಬೂಬ ಸೈಯದ್‌ ಸಾಬ್ ಬಾಗಬಾನ್ 11. ಅಬ್ದುಲ್ ಘನಿ ಅಂತರಗಂಗಿ 12. ರಹೀಮ ಸಾಹುಕಾರ್ ಮಡಕಿ 13. ಸೈಯದ್‌ ಸಾಬ್ ಖಾಸಿಂ ಸಾಬ್ ಗಾಣಗಾಪುರ 14. ಮೀರಾಜ ಪಟೇಲ್ ಚಿಕ್ಕಹಳ್ಳಿ 15. ಘನಿ ಕಂಡಕ್ಟರ್ 16. ಅಕ್ಬರ್ ಮಾಲಿಗೌಡ ಟಿಪ್ಪರ್ ಇವರೆಲ್ಲರು ಗುಂಪು ಕಟ್ಟಿಕೊಂಡು ಲಕ್ಷ್ಮಣ ಟಣಕೆದಾರ್ ಈತನು ಹೆದರಿ ಓಡಿಹೋಗುವಾಗ ಖಾಜಾಲಾಲ್ ಅಂತರಗಂಗೆ ಇವರ ಮನೆಯ ಮುಂದೆ ಹಿಡಿದು ನಿಲ್ಲಿಸಿ ತಗ್ಗಿನಲ್ಲಿ ಕೆಡವಿ ಖಾರದ ಪುಡಿಯನ್ನು ಮುಖದ ಮೇಲೆ ಚೆಲ್ಲಿ ರಾಡಿನಿಂದ, ಕಲ್ಲಿನಿಂದ ಮತ್ತು ಬಡಿಗೆಯಿಂದ ಲಕ್ಷ್ಮಣ ಟಣಕೆದಾರ ಈತನಿಗೆ ಹೊಡೆಯಹತ್ತಿದರು ಆಗ ನಾನು ಮತ್ತು ನನ್ನ ಮಗಳು ಚಿರಾಡುತ್ತಾ ಅವರ ಹಿಂದೆ ಓಡಿ ಬರುತ್ತಿದ್ದಗಾ ನನಗೆ ರಾಡಿನಿಂದ ರಾಜಅಹ್ಮದ್ ಟಾಕಿ ಮಡಕಿ ಈತನು ಕೊಲೆ ಮಾಡುವ ಉದ್ದೆಶದಿಂದ ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಕಾಲಿಗೆ ಹೊಡೆದು ಮರಣಾಂತಿಕ ಗಾಯಪಡಿಸಿದನು.  ರಾಡು, ಕಲ್ಲು ಬಡಿಗೆಯಿಂದ ಮತ್ತು ಕೈಯಿಂದ ತಲೆಗೆ, ಮುಖಕ್ಕೆ ಮತ್ತು ಬೆನ್ನಿಗೆ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಬಿಡಬ್ಯಾಡರಿ ಸೂಳಿ ಮಗನಿಗೆ ಖಲಾಸ್‌ ಮಾಡಿರಿ ಅಂತ ಬೈಯುತ್ತ ಕೆಕೆ ಹಾಕುತ್ತ ಓಡಿ ಹೋದರು. ಲಕ್ಷ್ಮಣನಿಗೆ ಅವರು ಸಿಕ್ಕಾಪಟ್ಟೆ ಹೊಡೆದಿದ್ದರಿಂದ ಆತನು ಭಾರಿ ಗಾಯಹೊಂದಿ  ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕಳ್ಳತನ ಮಾಡಿತ್ತಿದ್ದ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲಿಸ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 25-08-2014 ರಂದು ಘಾಟಗೇ ಲೇಔಟ ಬಡಾವಣೆ ಶ್ರೀ ಬಸಣ್ಣ ಸಿಂಪಿ ರವರ ಮನೆ ಕಳ್ಳತನವಾಗಿದ್ದು ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಮಾಡಲು ಶ್ರೀ ಅಮಿತಸಿಂಗ ಎಸ.ಪಿ ಗುಲಬರ್ಗಾ, ಶ್ರೀ ಬಿ. ಮಾಹಾಂತೇಶ ಅಪರ ಎಸ್.ಪಿ ಗುಲಬರ್ಗಾ, ಶ್ರೀ ಎಮ್.ಬಿ. ನಂದಗಾಂವಿ ಡಿ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಸುಧಾ ಆದಿ ಪಿ.ಐ, ಶ್ರೀ ಕೆ.ಎಸ್.ಕಲ್ಲದೇವರು ಪಿ.ಎಸ್.ಐ (ಕಾ.ಸು), ಶ್ರೀ ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಹಾಗು ಸಿಬ್ಬಂದಿ ಜನರಾದ 1) ಶಿವಪ್ರಕಾಶ ಪಿ.ಸಿ. 615, 2) ಜ್ಯೋತಿರ್ಲಿಂಗ ಪಿ.ಸಿ. 1159, 3) ಸುರೇಶ ಪಿ.ಸಿ. 534, 4) ಬಸವರಾಜ ಪಿ.ಸಿ. 765, 5) ಸಂಜೀವಕುಮಾರ ಪಿ.ಸಿ 245, ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿದ್ದು. ಈ ತಂಡವು ವೈಜ್ಞಾನಿಕ ತನಿಖೆಯಿಂದ ರಾತ್ರಿ ಮನೆ ಗಳ್ಳತನ ಮಾಡುವ ಪಾರದಿ ಜನಾಂಗದ ಆರೋಪಿತರಾದ 1) ಸನ್ನು @ ಸನ್ಯಾ ತಂದೆ ಮಾಣಿಕ ಕಾಳೆ  2) ರಾಜು @ ತಿತರಿ ತಂದೆ ನಾಗಪ್ಪ ಪವಾರ ಸಾ: ಇಬ್ಬರೂ ಸಾವಳಗಿ (ಬಿ) ಗ್ರಾಮ ರವರಿಗೆ ದಸ್ತಗಿರಿ ಮಾಡಿ ಒಟ್ಟು 6 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 2,10,000/- ರೂ ಮೌಲ್ಯದ 7 ವರೇ ತೊಲೆ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. 
ಹಲ್ಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಭಿಮರಾಯ ತಂದೆ ದೇವಪ್ಪ ಅಲ್ಲೂರ ಸಾ:ಕೊಡ್ಲಾ  ಇವರು ನಮ್ಮ ಗ್ರಾಮದ ನಮ್ಮ ಸಮಾಜದವರಾದ ಕೃಷ್ಣಪ್ಪ ತಂದೆ ದ್ಯಾವಪ್ಪ ತಳವಾರ ಇವರಿಗೂ ನಮಗೂ ಜಗಳವಾಗಿದ್ದು ಇತ್ತು. ಹೀಗಿದ್ದು ಇಂದು ದಿ:08-09-2014 ರಂದು ಸಾಯಂಕಾಲ 07-30 ಗಂಟೆಗೆ ನಮ್ಮ ಅಣ್ಣಂದಿರಾದ ಕಾಶಿನಾಥ ಮತ್ತು ಮಲ್ಲಪ್ಪ ಇವರಿಬ್ಬರಿಗೆ ಕೃಷ್ಣಪ್ಪ ತಂದೆ ದ್ಯಾವಪ್ಪ ತಳವಾರ ಹಾಗೂ ಇತರರು ಕೂಡಿ ನಮ್ಮೂರ ಗೇಟ್ ಹತ್ತಿರ ಜಗಳ ಮಾಡಿದ್ದರಿಂದ ನಾವು ಅಣ್ಣ ತಮ್ಮಂದಿರರು ಕೇಳಲು ಹೋಗಿದ್ದರಿಂದ ಅವರೆಲ್ಲರೂ ಕೂಡಿಕೊಂಡು ನಮಗೆ ಹಿಂದಿನ ಜಗಳದ ವೈಮನಸ್ಸಿನಿಂದ ಕೊಲೆ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಗುಂಪು ಕಟ್ಟಿಕೊಂಡು ಬಂದು ನಮಗೆ ಬಡಿಗೆ ಹಾಗೂ ಕಲ್ಲುಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ನನಗೂ ಹಾಗೂ ನಮ್ಮ ಅಣ್ಣ ತಮ್ಮಂದಿರರಿಗೂ ಸಾಧಾ ಹಾಗೂ ಭಾರಿ ರಕ್ತ ಮತ್ತು ಗುಪ್ತ ಗಾಯಗಳನ್ನು ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಫಾದರ್ ವಿಲ್ಸನ್ ತಂದೆ ಫ್ರಾನ್ಸಿಸ್ ಫರ್ನಾಂಡಿಸ್, ಸಾಃಹೊನ್ನಾವರ ಜಿಃಕಾರವಾರ ಸದ್ಯ ಗುಲಬರ್ಗಾ ರವರು ದಿನಾಂಕ:23/08/2014 ರಂದು 1200 ಗಂಟೆಗೆ ಬೀದರಗೆ ಹೋಗುವ ಸಲುವಾಗಿ ಬಸ್ ಸಂಃ ಕೆಎ38ಎಫ್749 ನೇದ್ದರಲ್ಲಿ ಕುಳಿತು ಹೋಗುವಾಗ ಫಿರ್ಯಾದಿಯ ಹತ್ತಿರ ಒಂದು ಕಪ್ಪು ಬಣ್ಣದ ಡೆಲ್ ಕಂಪನಿಯ ಲ್ಯಾಪ್‌ಟಾಪ್‌ ಅಂ.ಕಿಃ 25,000/-ರೂ. ಹಾಗು ಅದರ ಬ್ಯಾಗಿನಲ್ಲಿ 20,000/-ರೂ. ನಗದು ಇಟ್ಟುಕೊಂಡು ನಿದ್ದೆ ಬರುತ್ತಿದ್ದರಿಂದ ತನ್ನ ಹತ್ತಿರದ ಲ್ಯಾಪ್‌ಟಾಪ್ ಬ್ಯಾಗನ್ನು ಫಿರ್ಯಾದಿಯು ತಾನು ಕುಳಿತ ಮೇಲ್ಭಾಗದಲ್ಲಿ ಇಟ್ಟು ಮಲಗಿರುತ್ತಾರೆ. ಸುಮಾರು 1300 ಗಂಟೆಗೆ ಹಳ್ಳಿಖೇಡ(ಕೆ) ಗ್ರಾಮದ ಹತ್ತಿರ ಬಂದಾಗ ಫಿರ್ಯಾದಿಯು ಎಚ್ಚರವಾಗಿ ತಾನು ಇಟ್ಟಿದ್ದ ಬ್ಯಾಗ್ ನೋಡಲಾಗಿ ಅಲ್ಲಿ ಬ್ಯಾಗ್ ಇದ್ದಿರುವುದಿಲ್ಲಾ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಹಾಗು ನಿರ್ವಾಹಕನಾದ ಸಿದ್ದರಾಮಪ್ಪಾ ಹಾಗು ಚಾಲಕ ಸಂತೋಷ ರವರು ತಿಳಿಸಿದ್ದೇನೆಂದರೆ 'ಬಸ್ಸು ಹುಮನಾಬಾದವರೆಗೆ ನಾನ್ ಸ್ಟಾಪ್ ಇದ್ದು ಒಬ್ಬ ವ್ಯಕ್ತಿಯು ಗುಲಬರ್ಗಾದಿಂದ ಹುಮನಾಬಾದ ವರೆಗೆ ಟಿಕೆಟ್ ತೆಗೆಸಿದ್ದು ಕಮಲಾಪೂರದಲ್ಲಿ ಅತಿ ಜರೂರಿ ಕೆಲಸ ಇದೆ ಬಸ್ಸನ್ನು ನಿಲ್ಲಿಸಿ ಅಂತ ಅಂದಿದಕ್ಕೆ ನಾವು ಬಸ್ಸನ್ನು ನಿಲ್ಲಿಸಿದ್ದು ಆತನು ಕಮಲಾಪೂರದಲ್ಲಿ ಇಳಿದು ಹೋಗಿರುತ್ತಾನೆ' ಅಂತ ತಿಳಿಸಿದ್ದು ಕಾರಣ ಗುಲಬರ್ಗಾ ದಿಂದ ಕಮಲಾಪೂರದವರೆಗಿನ ಮಧ್ಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.