POLICE BHAVAN KALABURAGI

POLICE BHAVAN KALABURAGI

18 August 2015

Kalaburagi District Reported Crimes.

C¥sÀd®¥ÀÆgÀ oÁuÉ : ದಿನಾಂಕ 18-08-2015 ರಂದು 1:00 ಪಿ ಎಮ್ ಕ್ಕೆ ಠಾಣೆಯಲಿದ್ದಾಗ ದೇಸಾಯಿ ಕಲ್ಲೂರ ತಾಂಡಾದ ಹತ್ತಿರ ಕಾಂತಪ್ಪ ಅತನೂರ ರವರ  ಹೊಲದ ಹತ್ತಿರ  ರೋಡಿನ ಬಾಜು ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ   ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ ವ||25 ವರ್ಷ ಜಾ||ಎಸ್ ಸಿ  ಉ||ಕೂಲಿಕೆಲಸ  ಸಾ|| ಅಫಜಲಪೂರ  2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ  ವ||24 ವರ್ಷ ಜಾ||ಎಸ್ ಸಿ  ಉ|| ಕೂಲಿ ಕೆಲಸ ಸಾ||ಅಫಜಲಪೂರ   ಇವರನ್ನು ಠಾಣೆಗೆ ಬರಮಾಡಿಕೊಂಡು. ದಾಳಿ ವಿಷಯ ತಿಳಿಸಿ ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಜನರಾದ 1) ಜಗನ್ನಾಥ ಸಿಪಿಸಿ-530, 2) ಸುರೇಶ ಸಿಪಿಸಿ-801 3) ಆನಂದ ಸಿಪಿಸಿ-1258, 4) ನಿಂಗಣ್ಣ ಸಿಪಿಸಿ-894   ರವರನ್ನು ಸಂಗಡ ಕರೆದುಕೊಂಡು ಒಂದು ಖಾಸಗಿ ವಾಹನದಲ್ಲಿ ನಾನು ಮತ್ತು ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರು ಕೂಡಿಕೊಂಡು 1:20 ಪಿ ಎಮ್ ಕ್ಕೆ ಹೊರಟು, ಸ್ಥಳಕ್ಕೆ 1:40 ಪಿ ಎಮ್ ಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಖಾಸಗಿ ಜೀಪನ್ನು  ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ದೇಸಾಯಿ ಕಲ್ಲೂರ ತಾಂಡದ ಸಮೀಪ ಕಾಂತಪ್ಪ ಅತನೂರ ರವರ ಹೊಲದ ಹತ್ತಿರ ರೋಡಿನ ಬಾಜು  ಖುಲ್ಲಾ ಜಾಗದಲ್ಲಿ 7 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ನಮ್ಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿದ್ದು ಅದರಲ್ಲಿ ಜೂಜಾಡುತ್ತಿದ್ದ ಐದು ಜನರು ಪಣಕ್ಕೆ ಇಟ್ಟ ಹಣವನ್ನು ಸ್ಥಳದಲ್ಲಿಯೆ ಬಿಟ್ಟು  ಓಡಿ ಹೋಗಿದ್ದು , ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮೈಬೂಬಸಾಬ ತಂದೆ ಉಮರಸಾಬ ಜಮಾದಾರ ವ||53 ವರ್ಷ ಜಾ||ಮುಸ್ಲೀಮ್ ಉ||ಒಕ್ಕಲುತನ ಸಾ||ನಿಚೆ ಗಲ್ಲಿ ಅಫಜಲಪೂರ  ಅಂತಾ ತಿಳಿಸಿದ್ದು, ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 610/- ರೂ ನಗದು ಹಣ ದೊರೆತಿದ್ದು  2) ಮೌಲಾಸಾಬ ತಂದೆ ಸೈಪನಸಾಬ ಚೌಧರಿ ವ||38 ವರ್ಷ ಜಾ||ಮುಸ್ಲೀಮ್ ಉ|| ಕೂಲಿ ಕೆಲಸ ಸಾ||ಜಿಮ್ಮಾ ಮಜೀದ ಹತ್ತಿರ ಅಫಜಲಪೂರ  ಅಂತಾ ತಿಳಿಸಿದ್ದು, ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 700/- ರೂ ನಗದು ಹಣ ದೊರೆತಿದ್ದು, ನಂತರ ಓಡಿ ಹೋದ ಐದು ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಕಾಂತಪ್ಪ ಅತನೂರ ಸಾ||ಸಿದ್ದರಾಮೇಶ್ವರ ಗುಡಿ ಹತ್ತಿರ ಅಫಜಲಪೂರ  2) ಮಲ್ಲು ಬ್ಲಾಸ್ಟಿಂಗ್ ಸಾ||ಅಫಜಲಪೂರ 3) ಸುರೇಶ ಅಂದೊಡಗಿ ಸಾ||ಸಿದ್ದರಾಮೇಶ್ವರ ಗುಡಿ ಹತ್ತಿರ ಅಫಜಲಪೂರ 4)ಪುತ್ರಪ್ಪ ತಂದೆ ಪರೇಪ್ಪ ಸಾ||ಲಿಂಬಿತೋಟ ಅಫಜಲಪೂರ 5) ಸಂತೋಷ   ಅಂತ ತಿಳಿಸಿರುತ್ತಾರೆ. 7 ಜನರ  ಮದ್ಯ ಇಸ್ಪೇಟ ಜೂಜಾಟಕ್ಕೆ ಇಟ್ಟಿದ 3400/- ರೂ ಮತ್ತು 52 ಇಸ್ಪೆಟ ಎಲೆಗಳು ಸ್ಥಳದಲ್ಲಿ ದೊರೆತವು. ಹೀಗೆ ಒಟ್ಟು 4710/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ 1:45 ಪಿ ಎಮ್ ದಿಂದ 2:30 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಆರೋಪಿತರೊಂದಿಗೆ ಮರಳಿ ಠಾಣೆಗೆ 2:50 ಪಿ ಎಮ್ ಕ್ಕೆ ಬಂದು ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಗ್ರಾಮೀಣ ಠಾಣೆ : ದಿನಾಂಕ|| 16/08/2015ಬ ರಂದು ಸಾಯಂಕಾಲ 04:00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ಕಲಬುರಗಿ ನಗರದ ಮಿಜಬಾ ನಗರದ ಅಲೈ ಹದೀಜ ಮಜೀದ ಹಿಂದೆ ಇರುವ ಖುಲ್ಲಾ ಪ್ಲಾಟಿನಲ್ಲಿ ಸ್ವಚ್ಛ ಮಾಡುವಾಗ ಆರೋಪಿತರಾದ ಇಲಿಯಾಸ ಪಟೇಲ್ ಹಾಗೂ ಸಂಗಡ ಎರಡು ಜನ ಅಣ್ಣತಮ್ಮಂದಿರು ಹಾಗೂ ರಿಯ್ಯಾಜ ಪಟೇಲ್ ಸಂಗಡ 3 ಜನ ಅಣ್ಣತಮ್ಮಂದಿರರು ಏ ಭೋಸಡಿ ಮಗನೇ ಹೊಲ್ಯಾ ಸೂಳ್ಯಾ ಮಗನೇ ಈ ಪ್ಲಾಟ ನಮ್ ಪ್ಲಾಟ ಇದೆ ಇಲ್ಲಿ ಯ್ಯಾಕೆ ನೀ ಕೆಲಸ ಮಾಡುತ್ತಿದ್ದಿ ಅಂತಾ ಅವಾಚ್ಯ ಶಬ್ಧಗಳಿಂದ ಬೈಯ್ದಿದ್ದರಿಂದ ತಾನು ಕೆಲಸ ಮಾಡುವ ಮಾಲೀಕನಾದ ಕುಸಮಾಕರ್ ಸಾ|| ಹಿರಾಪೂರ ಈತನಿಗೆ ಕರೆದುಕೊಂಡು ಸದರ್ ಪ್ಲಾಟ್ ಹತ್ತಿರ 7 ಗಂಟೆಗೆ ಬಂದಾಗ ಆರೋಪಿತರೇಲ್ಲರೂ ಹೊಲ್ಯಾ ಸೂಳ್ಯಾ ಮಗನೇ ಅವನಿಗೆ ಏಕೆ ಕರೆದುಕೊಂಡು ಬಂದಿರುವಿ ಅಂತಾ ಕೈಯಿಂದ ಮುಷ್ಠಿ ಮಾಡಿ ಸಿಕ್ಕಾ ಪಟ್ಟೆ ಹೊಡೆದು ಅವಾಚ್ಯ ಶಬ್ಧಗಳಿಂದ ಬೈಯ್ದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ನಂತರ ಸ್ವಲ್ಪ ಆರಾಮವಾಗಿದ್ದರಿಂದ ಮನೆಗೆ ಹೋಗಿ ಮನೆಯಲ್ಲಿ ವಿಚಾರ ಮಾಡಿ ಠಾಣೆಗೆ ಬಂದು ಫಿರ್ಯಾದಿ ಕೊಡಲು ತಡವಾಗಿರುತ್ತದೆ ಅಂತಾ ವಗೈರೇ  ಆಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 326/2015 ಕಲಂ 143 147  323  504 506 ಸಂಗಡ 149 ಐಪಿಸಿ ಮತ್ತು 3(1) (10) ಎಸ್.ಸಿ ಎಸ್.ಟಿ ಪಿಎ ಆಕ್ಟ 1989 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. 

Kalaburagi District Reported Crimes.

ಗ್ರಾಮೀಣ ಠಾಣೆ : ದಿನಾಂಕ 17-08-15 ರಂದು 10-00 ಗಂಟೆ ಸುಮಾರಿಗೆ ಫಿರ್ಯಾದಿ ಮೋಟಾರ ಸೈಕಲ ಕೆಎ 32 ಎಕ್ಸ್ 7118 ನೇದ್ದರ ಹಿಂದೆ ಮೃತ ವೀರಭದ್ರಪ್ಪ ಇತನಿಗೆ ಕೂಡಿಸಿಕೊಂಡು ಅವರಾದದಿಂದ  ಶ್ರಾವಣ ಸೋಮವಾರ ಪೂಜಾ ಸಾಮಾನು ತರಲು ಕಲಬುರಗಿಗೆ ಹೊರಟಿದ್ದು, ಬೆಳಗಿನ 10-30 ಗಂಟೆ ಸುಮಾರಿಗೆ ಬಂದೂಕವಾಲಾ ಟಾಕಾ ಇನ್ನೂ ಸ್ವಲ್ಪ ಮುಂದೆ ಇರುವಂತೆ ಹೊರಟಾಗ ಹಿಂದಿನಿಂದ ಶರಣಬಸಪ್ಪ ತಂದೆ ಅಂಬಾರಾಯ ಕಾಮಶೆಟ್ಟಿ ಇತನು ಮೋಟಾರ ಸೈಕಲ ಕೆಎ 38 ಜೆ 2037 ನೇದ್ದು  ಅತಿವೇಗದಿಂದ  ಮತ್ತು ನಿಷ್ಕಾಳಿಜಿತನದಿಂದ  ನಡೆಸುತ್ತಾ ಫಿರ್ಯಾದಿ ಮೋಟಾರ ಸೈಕಲಿಗೆ ಸೈಕಲಗೆ ಡಿಕ್ಕಿ ಹೊಡೆದಾಗ ಹಿಂದೆ ಕುಳಿತ ವೀರಭದ್ರಪ್ಪ ಇವರು ನೆಲಕ್ಕೆ ಬಿದಿದ್ದು, ನಾನು ಮೋಟಾರ್ ಸೈಕಲ್ ಹೆಗೋ ನಿಯಂತ್ರಣ ಮಾಡಿ ನಿಲ್ಲಿಸಿ , ಅವರಿಗೆ ಅಂದರೆ ವೀರಭದ್ರಪ್ಪ ಇವರಿಗೆ ನೋಡಲಾಗಿ ಅವರ ಎಡಕಣ್ಣೀನ ಹತ್ತಿರ & ಎಡ ಮೇಲಕಿನ ಮೇಲೆ ಮತ್ತು ಎಡ ತಲೆ ಮೇಲೆ ಕಂದು ಗಟ್ಟಿದ ರಕ್ತಗಾಯವಾಗಿದ್ದು, ಮತ್ತು ಎದೆಗೆ , ಹೊಟ್ಟೆಗೆ ಗುಪ್ತಗಾಯವಾಗಿ ಎದೆನೋಯುತ್ತಿದೆ  ಅಂತಾ ಅನ್ನುತ್ತಿದ್ದು, ಕೂಡಲೆ , ದಾರಿಗೆ ಹೊರಟ ಯಾವುದೋ ಒಂದು ಆಟೋಗೆ ಕೈ ಮಾಡಿ ನಿಲ್ಲಿಸಿ ಆಟೋದಲ್ಲಿ ವೀರಭದ್ರಪ್ಪ ಇವರಗೆ ನನ್ನ ಹೋರಟ ನಮ್ಮೂರಿನ ಉಮೇಶ, ರಾಜಕುಮಾರ, ಅಂಬರೀಶ ಎಲ್ಲರೂ ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತುಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಬೆಳಿಗ್ಗೆ 11-45 ಗಂಟೆ ಸುಮಾರಿಗೆ ವೈದ್ಯರಿಗೆ ತೋರಿಸಿದಾಗ ವೈದ್ಯರು ವೀರಭದ್ರಪ್ಪ ಇವರಿಗೆ ಉಪಚಾರ ಮಾಡಲು ನೋಡಿದಾಗ ಅವರು ಈಗಾಗಲೆ  ಬರುವಾಗ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ  ಕಾರಣ ಶರಣಬಸಪ್ಪ ತಂದೆ ಅಂಬಾರಾಯ ಕಾಮಶೆಟ್ಟಿ ಇತನು ಮೋಟಾರ ಸೈಕಲ ಕೆಎ 38 ಜೆ 2037 ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಹೇಳಿಕೆ ಫಿರ್ಯಾದಿ ಮೇಲಿಂದ ಠಾಣೆ ಗುನ್ನೆ ನಂ. 324/15 ಕಲಂ 279,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.