POLICE BHAVAN KALABURAGI

POLICE BHAVAN KALABURAGI

18 August 2015

Kalaburagi District Reported Crimes.

ಗ್ರಾಮೀಣ ಠಾಣೆ : ದಿನಾಂಕ 17-08-15 ರಂದು 10-00 ಗಂಟೆ ಸುಮಾರಿಗೆ ಫಿರ್ಯಾದಿ ಮೋಟಾರ ಸೈಕಲ ಕೆಎ 32 ಎಕ್ಸ್ 7118 ನೇದ್ದರ ಹಿಂದೆ ಮೃತ ವೀರಭದ್ರಪ್ಪ ಇತನಿಗೆ ಕೂಡಿಸಿಕೊಂಡು ಅವರಾದದಿಂದ  ಶ್ರಾವಣ ಸೋಮವಾರ ಪೂಜಾ ಸಾಮಾನು ತರಲು ಕಲಬುರಗಿಗೆ ಹೊರಟಿದ್ದು, ಬೆಳಗಿನ 10-30 ಗಂಟೆ ಸುಮಾರಿಗೆ ಬಂದೂಕವಾಲಾ ಟಾಕಾ ಇನ್ನೂ ಸ್ವಲ್ಪ ಮುಂದೆ ಇರುವಂತೆ ಹೊರಟಾಗ ಹಿಂದಿನಿಂದ ಶರಣಬಸಪ್ಪ ತಂದೆ ಅಂಬಾರಾಯ ಕಾಮಶೆಟ್ಟಿ ಇತನು ಮೋಟಾರ ಸೈಕಲ ಕೆಎ 38 ಜೆ 2037 ನೇದ್ದು  ಅತಿವೇಗದಿಂದ  ಮತ್ತು ನಿಷ್ಕಾಳಿಜಿತನದಿಂದ  ನಡೆಸುತ್ತಾ ಫಿರ್ಯಾದಿ ಮೋಟಾರ ಸೈಕಲಿಗೆ ಸೈಕಲಗೆ ಡಿಕ್ಕಿ ಹೊಡೆದಾಗ ಹಿಂದೆ ಕುಳಿತ ವೀರಭದ್ರಪ್ಪ ಇವರು ನೆಲಕ್ಕೆ ಬಿದಿದ್ದು, ನಾನು ಮೋಟಾರ್ ಸೈಕಲ್ ಹೆಗೋ ನಿಯಂತ್ರಣ ಮಾಡಿ ನಿಲ್ಲಿಸಿ , ಅವರಿಗೆ ಅಂದರೆ ವೀರಭದ್ರಪ್ಪ ಇವರಿಗೆ ನೋಡಲಾಗಿ ಅವರ ಎಡಕಣ್ಣೀನ ಹತ್ತಿರ & ಎಡ ಮೇಲಕಿನ ಮೇಲೆ ಮತ್ತು ಎಡ ತಲೆ ಮೇಲೆ ಕಂದು ಗಟ್ಟಿದ ರಕ್ತಗಾಯವಾಗಿದ್ದು, ಮತ್ತು ಎದೆಗೆ , ಹೊಟ್ಟೆಗೆ ಗುಪ್ತಗಾಯವಾಗಿ ಎದೆನೋಯುತ್ತಿದೆ  ಅಂತಾ ಅನ್ನುತ್ತಿದ್ದು, ಕೂಡಲೆ , ದಾರಿಗೆ ಹೊರಟ ಯಾವುದೋ ಒಂದು ಆಟೋಗೆ ಕೈ ಮಾಡಿ ನಿಲ್ಲಿಸಿ ಆಟೋದಲ್ಲಿ ವೀರಭದ್ರಪ್ಪ ಇವರಗೆ ನನ್ನ ಹೋರಟ ನಮ್ಮೂರಿನ ಉಮೇಶ, ರಾಜಕುಮಾರ, ಅಂಬರೀಶ ಎಲ್ಲರೂ ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತುಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಬೆಳಿಗ್ಗೆ 11-45 ಗಂಟೆ ಸುಮಾರಿಗೆ ವೈದ್ಯರಿಗೆ ತೋರಿಸಿದಾಗ ವೈದ್ಯರು ವೀರಭದ್ರಪ್ಪ ಇವರಿಗೆ ಉಪಚಾರ ಮಾಡಲು ನೋಡಿದಾಗ ಅವರು ಈಗಾಗಲೆ  ಬರುವಾಗ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ  ಕಾರಣ ಶರಣಬಸಪ್ಪ ತಂದೆ ಅಂಬಾರಾಯ ಕಾಮಶೆಟ್ಟಿ ಇತನು ಮೋಟಾರ ಸೈಕಲ ಕೆಎ 38 ಜೆ 2037 ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಹೇಳಿಕೆ ಫಿರ್ಯಾದಿ ಮೇಲಿಂದ ಠಾಣೆ ಗುನ್ನೆ ನಂ. 324/15 ಕಲಂ 279,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

No comments: