POLICE BHAVAN KALABURAGI

POLICE BHAVAN KALABURAGI

22 November 2016

Kalaburagi District Press Note

ಪತ್ರಿಕಾ ಪ್ರಕರಟಣೆ
                 ದಿನಾಂಕ:21.11.2016 ರಂದು ಫಿರ್ಯಾದಿ ಶ್ರೀ ರಾಜಶೇಖರ ತಂದೆ ದೇವಿಂದ್ರಪ್ಪ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಅರ್ಜಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ: 20.11.2016 ರಂದು ಎಂದಿನಂತೆ ಶನಿವಾರ ಸಾಯಂಕಾಲ 06:30 ಗಂಟೆಗೆ ಸಂಗೀತ ಪಾಠಕ್ಕಾಗಿ ನನ್ನ 3 ಜನ ಮಕ್ಕಳು ಮತ್ತು ಓಣಿಯಲ್ಲಿರುವ ಮಕ್ಕಳು ಕೂಡಿಕೊಂಡು ಸಾಯಿ ಮಂದಿರಕ್ಕೆ ಹೋಗಿದ್ದು ಇರುತ್ತದೆ. ಸಾಯಂಕಾಲ 07:30 ಗಂಟೆ ಸುಮಾರಿಗೆ ನಮ್ಮ ಪಕ್ಕದ ಮನೆಯ ಹುಡುಗನಾದ ಶಶಿಕಾಂತ ಇವರ ತಾಯಿಯವರಾದ ಜಗದೇವಿ ಇವರು ನಮ್ಮ ಮನೆಗೆ ಫೋನಮಾಡಿ ತಿಳಿಸಿದ್ದೆನೆಂದರೆ,  ಸಾಯಂಕಾಲ 07:00 ಗಂಟೆಗೆ ನಮ್ಮ ಮಗ ಶಶಿಕಾಂತ ಮತ್ತು ನಿಮ್ಮ ಮಗ ದೇವಕುಮಾರ ಇಬ್ಬರು ಕೂಡಿ ಸಂಗೀತ ಪಾಠಕ್ಕೆ ಹೋಗುತ್ತಿರುವಾಗ ಸಾಯಿ ಮಂದಿರ ಹತ್ತಿರ ಹೋಗುತ್ತಿದ್ದಂತೆ ಒಂದು ಆಟೋ ಬಂದಿದ್ದು, ಅದರಲ್ಲಿದ್ದ ಆಟೋ ಚಾಲಕ ಮತ್ತು ಆಟೋದಲ್ಲಿ ಕುಳಿತಿದ್ದ 3 ಜನರು ನಿಮ್ಮ ಹುಡುಗನಿಗೆ ಧನ್ವಂತರಿ ಆಸ್ಪತ್ರೆ ತೋರಿಸುವಂತೆ ಹೇಳಿ ಅವನನ್ನು ಆಟೋದಲ್ಲಿ ಕೂಡಿಸಿಕೊಂಡು ಹೋಗಿರುತ್ತಾರೆ ಇಲ್ಲಿಯ ವರೆಗೆ ದೇವಕುಮಾರ ಈತನು ಮರಳಿ ಬಂದಿರುವುದಿಲ್ಲ ಅಂತ ನನ್ನ ಮಗ ಶಶಿಕಾಂತ ತಿಳಿಸಿರುತ್ತಾನೆ ಅಂತ ಅವರು ನಮ್ಮ ಮನೆಗೆ ಫೋನಮಾಡಿ ವಿಷಯನ್ನು ತಿಳಿಸಿರುತ್ತಾರೆ.  ವಿಷಯನ್ನು ತಿಳಿದು ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಗಾಭರಿಯಾಗಿ ಸಾಯಿ ಮಂದಿರ ಹತ್ತಿರ ಧನ್ವಂತರಿ ಆಸ್ಪತ್ರೆ ಹತ್ತಿರ ಹೋಗಿ ನೋಡಲು ನಮ್ಮ ಮಗನು ಪತ್ತೆಯಾಗಿರುವುದಿಲ್ಲ. ಯಾರೋ ಅಪರಿಚಿತ 4 ಜನರು ನಿನ್ನೆ 07:00 ಪಿ.ಎಂ.ಕ್ಕೆ ನಮ್ಮ ಮಗನನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.  ಮಗನನ್ನು ಅಪಹರಣ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿ  ಮಗನನ್ನು ಪತ್ತೆಮಾಡಿಕೊಡಲು  ನೀಡಿದ ಮೇಲಿಂದ   ಅಶೋಕ ನಗರ ಪೊಲೀಸ  ಠಾಣೆ ಗುನ್ನೆ ನಂ. 254/2016 ಕಲಂ 363 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ:21.11.2016 ರಂದು ಅಪಹರಣಕಾರರು ಫಿರ್ಯಾದಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಮಗನನ್ನು ಬಿಡುಗಡೆ ಮಾಡುವ ಸಂಬಂಧ ರೂ. 20,00,000/- ಲಕ್ಷಗಳನ್ನು ನೀಡುವಂತೆ ಬೇಡಿಕೆ ಇಟ್ಟಿರುವದರಿಂದ  ಈ ಪ್ರಕರಣವನ್ನು  ಮಾನ್ಯ ಎಸ್.ಪಿ ಸಾಹೇಬರು ಗಂಭಿರವಾಗಿ ಪರಿಗಣಿಸಿ ಅಪಹಣಕಾರಿಂದ ಅಪಹರಣಕ್ಕೆ ಒಳಗಾದ ಮಗುವನ್ನು ರಕ್ಷಿಸುವ ಸಲುವಾಗಿ, ಮಾನ್ಯ ಆರಕ್ಷಕ ಅಧೀಕ್ಷಕು ಕಲಬುರಗಿ ಜಿಲ್ಲೆರರವರ ಮಾರ್ಗದರ್ಶನದಲ್ಲಿ, ಮಾನ್ಯ ಡಿ.ಎಸ್.ಪಿ. ಉಪ ವಿಭಾಗ ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ. ಡಿ.ಸಿ.ಆರ್.ಬಿ. ಘಟಕ ಕಲಬುರಗಿ ರವರ ನೇತೃತ್ವದಲ್ಲಿ ಮತ್ತು ಪಿ.ಐ. ಅಶೋಕ ನಗರ, ಪಿ.ಐ.  ಚೌಕ, ಸ್ಟೇಷನ ಬಜಾರ, ಪಿ.ಐ. ಬ್ರಹ್ಮಪೂರ, ಪಿ.ಐ ರೋಜಾ, ಪಿ.ಐ. ಟ್ರಾಫೀಕ , ಪಿ..ಎಸ್.ಐ ಮಹಿಳಾ ಪೊಲೀಸ ಠಾಣೆರವರು ಮತ್ತು ಸಿಬ್ಬಂದಿ ಜನರನ್ನು ಕೂಡಿ 8 ತಂಡವನ್ನು ರಚಿಸಿದ್ದು, ತನಿಖಾ ತಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ರಾಣಸಪೀರ ದರ್ಗಾ, ಆಶ್ರಯ ಕಾಲನಿ, ಡಬರಾಬಾದ. ಸಿಂದಗಿ, ಮಿಸಬಾ ನಗರ, ಇತ್ಯಾದಿ ಕಡೆ ಸಂಚರಿಸಿ ಸಾರ್ವಜನಿಕರಿಂದ ಹಾಗೂ ಪೊಲೀಸ ಬಾತ್ಮಿದಾರರಿಂದ ಅಪರಾಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು,  ಸಾರ್ವಜನಿಕರು ಮತ್ತು ಪೊಲೀಸ ಬಾತ್ಮಿದಾರು ಆರೋಪಿಗಳ ಬಗ್ಗೆ  ನೀಡಿರುವ ಮಾಹಿತಿಯನ್ನು ಆಧರಿಸಿ ಮತ್ತು ಆರೋಪಿತರು ಉಪಯೋಗಿಸಿದ ಮೊಬೈಲ್ ನಂಬರಗಳ ಟಾವರ ಲೊಕೇಶನ ಆಧರಿಸಿ  ದಿನಾಂಕ:21.11.2016 ರಂದು ರಾತ್ರಿ 11:00 ಗಂಟೆಗ ಕಪನೂರ ಇಂಡಸ್ಟ್ರೀಯಲ್ ಏರಿಯಾದ ಕಡೆಗೆ  ಓಡಿ ಹೋಗುತ್ತಿದ್ದಾಗ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆನ್ನಟ್ಟಿ ಅಪಹರಣಕಾರರಾದ 1)  ಶ್ರೀಧರ  ತಂದೆ ಶಿವಶರಣಪ್ಪ ಸಂಗೋಳಗಿ ಸಾಃ ಪಿ.& ಟಿ ಕಾಲನಿ ಕಲಬುರಗಿ 2) ವಿನೋದ ತಂದೆ  ಅಶೋಕಕೊಟಗಿಸಾಃ ಇಂದಿರಾನಗರ  ಕಲಬುರಗಿ 3)  ವಿಜಯ ತಂದೆ ದಶರಥ ಕೊಟಗಾ ಸಾಃ ಆಶ್ರಯ ಕಾಲನಿ ಕಲಬುರಗಿ 4) ತ್ರೀಮೂರ್ತಿ @ ಮೂರ್ತಿ ತಂದೆ  ಅಪ್ಪಾಸಾಬ  ಅವುಟಿ ಸಾಃ ತ ಸಂಪಿಗೆ ನಗರ ಪಿ& ಟಿ ಕ್ವಾಟರ್ಸ ಕಲಬುರಗಿ ಇವರನ್ನು  ಹೀಡಿದು ಅಪಹರಣಕ್ಕೆ ಒಳಗಾದ ಬಾಲಕ  ದೇವಕುಮಾರ ವಯಃ 12 ವರ್ಷ ಇತನ್ನನು ರಕ್ಷಿಸಿದ್ದು ಇರುತ್ತದೆ. ಈ ಕಾರ್ಯಾಚರಣೆಯಲ್ಲಿ ಮಗುವಿಗೆ ಯಾವುದೇ ರೀತಿಯ ತೊಂದರೆ ಆಗಿರುವುದಿಲ್ಲ. ಮಗುವನ್ನು ಸುರಕ್ಷಿತವಾಗಿ ತಂದೆ-ತಾಯಿಯವರ ಮಡಲಿಗೆ ಒಪ್ಪಿಸಿದ್ದು ಇರುತ್ತದೆ. 
           ಈ ಪ್ರಕರಣವು ಸುಖ್ಯಾಂತ ಕಾಣುವಲ್ಲಿ ಸಾರ್ವಜನಿಕರು, ಪೊಲೀಸ ಬಾತ್ಮಿದಾರರು ಮತ್ತು ಮಾದ್ಯಮದವರುಯ ಸಹಕರಿಸಿದಕ್ಕೆ ಅವರನ್ನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಶ್ಲಾಘಿಸಿ  ಧನ್ಯವಾದಗಳನ್ನು  ತಿಳಿಸಿರುತ್ತಾರೆ ಮತ್ತು ತನಿಖಾ ತಂಡದ  ಅಧಿಕಾರಿ ಸಿಬ್ಬಂದಿಯವರಿಗೆ  ಪ್ರಸಂಶಿಸಿರುತ್ತಾರೆ.
            ಮಕ್ಕಳ ಹೆತ್ತವರು ಮತ್ತು ಪಾಲಕರು ಗಾಬರಿಯಾಗದೆ ಎಚ್ಚೆತಕೊಂಡು ಮಕ್ಕಳನ್ನು ಶಾಲೆಗೆ ,  ಟ್ಯೂಷನಗೆ, ಸಂಗಿತ ಶಾಲೆಗೆ ಕಳುಹಿಸುವ ಸಂಧರ್ಭದಲ್ಲಿ ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಅಪಹರಣ ಮಾಡುವವರು ಕಂಡು ಬಂದರೆ ಕೂಡಲೆ ಪೊಲೀಸ ರಿಗೆ  ತಿಳಿಸಬೇಕು ಎಂದು  ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ
ಅಪಘತಾ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಜಂಬಣ್ಣ ತಂದೆ ಶಂಕರೆಪ್ಪ ಅವಂಟಿ ಸಾ: ಅಸ್ಕಿ ತಾ: ಸಿಂದಗಿ ಜಿಲ್ಲಾ ವಿಜಯಪೂರ ರವರು ದಿನಾಂಕ: 21.11.2016 ರಂದು ಮುಂಜಾನೆ ನಮ್ಮ ಸಂಸ್ಥೆಯ ಮಾನೆಂಜರ ರವರು ನನಗೆ ಚಾಲಕ ಅಂತ ಮತ್ತು ಪ್ರಭು ತಂದೆ ದರ್ಮು ಕೋಲಕರ್ ಇವರಿಗೆ ಕಂಡಕ್ಟರ ಅಂತ ನೇಮಿಸಿದ ಪ್ರಕಾರ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-28-ಎಫ್-2080 ನೇದ್ದನ್ನು ತಗೆದುಕೊಂಡು ವಿಜಯಪೂರದಿಂದ ಪ್ರಯಾಣಿಕರನ್ನು ಕೂಡಿಸಿಕೊಂಡು ಜೇವರಗಿ ಮಾರ್ಗವಾಗಿ ಕಲಬುರಗಿಗೆ ಬರುತ್ತಿದ್ದೇವು. ಮದ್ಯಾಹ್ನ 1.00 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಹೊರ ವಲಯದಲ್ಲಿರುವ ಬಸ್ ಡಿಪೋ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದೆ ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅವನ ಮುಂದೆ ಬರುತ್ತಿದ್ದ ಡಿಸೆಲ ಟ್ಯಾಂಕರ ಲಾರಿಗೆ ಓವರಟೇಕ ಮಾಡಿ ಆ ಲಾರಿಯ ಮಗ್ಗಲಿಗೆ ಡಿಕ್ಕಿ ಪಡಿಸಿ ನಂತರ ನಮ್ಮ ಬಸ್ಸಿಗೆ ಎದುರಾಗಿ ಡಿಕ್ಕಿ ಪಡಿಸಿ ಬಸ್ ಜಖಂ ಗೊಳಿಸಿದನು. ನಾವು ಕೆಳಗೆ ಇಳಿದು ನೋಡಲು ನಮ್ಮ ಬಸ್ಸಿನ ಮುಂಭಾಗದ ಸೈಡಿನಲ್ಲಿ ಜಖಂಗೊಂಡಿದ್ದು ನನಗೆ ಬಲಗಾಲ ಹತ್ತಿರ ಒಳಪೆಟ್ಟು ಆಗಿರುತ್ತದೆ. ನಮ್ಮ ಕಂಡಕ್ಟರನಿಗೆ ಹಾಗೂ ಪ್ರಯಾಣಿಕರಿಗೆ ಯಾವುದೆ ಗಾಯ ಆಗಿರಲಿಲ್ಲಾ ಟ್ಯಾಂಕರ ಲಾರಿ ಚಾಲಕನಿಗೆ ಮತ್ತು ಕ್ಲೀನರನಿಗೆ ಯಾವುದೇ ಗಾಯ ಆಗಿರಲಿಲ್ಲಾ. ಅವರ ಹೆಸರು ಕೇಳಲು ಚಾಲಕನ ಹೆಸರು ಚಂದ್ರಕಾಂತ ಅಂತ ಕ್ಲೀನರನ ಹೆಸರು ಚಿದಾನಂದ ಅಂತ ಹೇಳಿದರು. ಟ್ಯಾಂಕರ ಲಾರಿ ನಂ ಕೆಎ-32-ಸಿ-4286 ಇತ್ತು. ನಮ್ಮ ಬಸ್ಸಿಗೆ ಮತ್ತು ಟ್ಯಾಂಕರ ಲಾರಿಗೆ ಡಿಕ್ಕಿ ಪಡಿಸಿದ ಲಾರಿ ನಂಬರ ನೋಡಲು ಅದು ಕೆಎ-32-ಬಿ-9332 ಇತ್ತು ಅದರ ಚಾಲಕನಿಗೆ ಹೆಸರು ಕೇಳುಲು ಚಂದ್ರಶೇಖರಯ್ಯಾ ತಂದೆ ಭೀಮಯ್ಯಾ ಸಾ: ಶಹಾಬಾದ ಅಂತ ಹೇಳಿದನು ಅವನು ಕುಡಿದ ಅಮಲಿನಲ್ಲಿದ್ದನು. ಸದರಿ ಚಾಲಕನಿಗೂ ಕೂಡಾ ಠಾಣೆಗೆ ಕರೆದುಕೊಂಡು ಬಂದಿರುತ್ತೇವೆ. ಕಾರಣ ಮೇಲೆ ನಮೂದಿಸಿದ ಲಾರಿ ನಂ ಕೆಎ-32-ಬಿ-9332 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಬಸವರಾಜ ತಂದೆ ಮೈಲಾರಿ ನಾಟೀಕರ ವ: 29 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಮಿಣಜಗಿ  ರವರು  ದಿನಾಂಕ 19/11/16 ರಂದು ಮಧ್ಯಾಹ್ನ ತನ್ನ ಮೋ. ಸೈಕಲ್ ನಂ. ಕೆಎ-32 ಇಡಿ-3321 ನೇದ್ದರ ಹಿಂದೆ ಶ್ರೀಕಾಂತನಿಗೆ ಕೂಡಿಸಿಕೊಂಡು ಕಲಬುರಗಿ ಕಡೆಗೆ ಹೋಗುವಾಗ ನಂದಿಕೂರ  ತಾಂಡಾ ದಾಟಿದಾಗ ಹಿಂದಿನಿಂದ ಕ್ರೂಜರ ಜೀಪ ನಂ. ಕೆಎ-40 ಎಮ್ 0605 ನೇದ್ದರ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ಓಡಿಸುತ್ತ ಬಂದು ಸದರಿ ಮೋ. ಸೈ. ಹಿಂದುಗಡೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸದರಿಯವರಿಗೆ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.