POLICE BHAVAN KALABURAGI

POLICE BHAVAN KALABURAGI

03 April 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಸಂತೋಷಕುಮಾರ ತಂದೆ ರೇವಣಸಿದ್ದಪ್ಪಾ ಸಾ ಬೆಳಮಗಿ ತಾ ಆಳಂದ ಜಿ ಗುಲಬರ್ಗಾ ರವರು ನಾನು ದಿನಾಂಕ: 23/01/2012 ರಂದು 1900 ಗಂಟೆಗೆ ಮೊರೆ ಆಸ್ಪತ್ರೆ ಎದುರುಗಡೆ ನನ್ನ ದ್ವಿಚಕ್ರ ವಾಹನ ಹಿರೋ ಹೊಂಡಾ ಪ್ಯಾಷನ್ ನಂ:ಕೆಎ 33 ಹೆಚ್ 5537 ಅಕಿ 25,000/- ನೇದ್ದನ್ನು ನಿಲ್ಲಿಸಿ ಮರಳಿ ಸುಮಾರು 2000 ಗಂಟೆಗೆ ಬಂದು ನೋಡಿದಾಗ ಸದರಿ ಸ್ಥಳದಲ್ಲಿ ನಿಲ್ಲಿಸಿರುವ ವಾಹನವು ಇರುವದಿಲ್ಲ. ನಾನು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 42/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಅಬ್ದುಲ ಖದೀರ ತಂದೆ ಸೈಫನಸಾಬ ಅತಾರ ಸಾಮನೆ ನಂ. 4-601/71 ಬಿ/19 ಬಂದೇನವಾಜ ಕಾಲೋನಿ ಗುಲಬರ್ಗಾರವರು ನನ್ನ ಮಗ ಸಾಜೀದ ಜಹೀರ ಇತನು ದಿನಾಂಕ 02-04-2012 ರಂದು ಬೆಳಿಗ್ಗೆ 6-30 ಗಂಟೆ ಸುಮಾರಿಗೆ ಹೈದ್ರಾಬಾದಕ್ಕೆ ಹೋಗಲು ಹುಮನಾಬಾದ ರಿಂಗ ರೋಡ ಕ್ರಾಸಿನಲ್ಲಿ ಬಿಟ್ಟು ಮೋಟಾರ ಸೈಕಲ ಕೆಎ 32 ಯು 1906 ಮೇಲೆ ಮನೆಯ ಕಡೆ ಹೊರಟಾಗ ಹುಮನಾಬಾದ ರೋಡ ಕಡೆಯಿಂದ ಮಾರುತಿ ಕಾರ ಕೆಎ 38 ಎಂ. 2283 ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:100/2012 ಕಲಂ 279,338 ಐಪಿಸಿ ಸಂ. 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.