POLICE BHAVAN KALABURAGI

POLICE BHAVAN KALABURAGI

29 April 2016

KALABURAGI DISTRICT REPORTED CRIMES.

ನಿಂಬರ್ಗಾ ಪೊಲೀಸ ಠಾಣೆ : ನಾನು ಈ ಹಿಂದೆ 2 ಬಾರಿ ಮತ್ತು ನನ್ನ ಹೆಂಡತಿಯಾದ ಶಾಂತಾಬಾಯಿ 2 ಬಾರಿ ದಂಗಾಪೂರ ಗ್ರಾಮ ಪಂಚಾಯತನ ಸದಸ್ಯರು ಆಗಿದ್ದೇವು. ಇದಕ್ಕೆ ನಮ್ಮ ಜಾತಿಯವರೆ ಆದ ರವಿ ತಂದೆ ಮೌಲಪ್ಪ ಮದನಕರ ಮತ್ತು ಆತನ ಮನೆಯವರು ನಮ್ಮ ಮೇಲೆ ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ. ಕಳೆದ ಬಾರಿ ನನ್ನ ಹೆಂಡತಿ ಶಾಂತಾಬಾಯಿ ಇವಳು ಕೂಡ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ದಿಸಿದ್ದು ಇವಳ ಎದುರು ರವಿ ತಂದೆ ಮೌಲಪ್ಪ ಮದನಕರ ಇವರ ತಾಯಿಯಾದ ನೀಲಮ್ಮ ಗಂಡ ಮೌಲಪ್ಪ ಮದನಕರ ಇವಳು ಗೆದ್ದಿರುತ್ತಾಳೆ. ನಮ್ಮಷ್ಟಕ್ಕೆ ನಾವು ಇದ್ದರು ಸಹ ರವಿ ಮತ್ತು ಆತನ ಕಡೆಯವರು ನಮ್ಮ ಮೇಲೆ ದ್ವೇಶ ಹೆಚ್ಚಿಸಿಕೊಂಡು ದಿನಾಂಕ 28/04/2016 ರಂದು ಅಂದಾಜ ಸಾಯಂಕಾಲ 0700 ಗಂಟೆಯ ಸುಮಾರಿಗೆ ನಮ್ಮೂರಿನ ಅಂಬೇಡ್ಕರ ಕಟ್ಟೆಯ ಮೇಲೆ ನಾನು ನನ್ನ ಕಡೆಯವರಾದ 01] ಮಲೀಕಪ್ಪ ತಂದೆ ಫಕೀರಪ್ಪ ಸಿಂಘೆ, 02] ಬಾಬು ತಂದೆ ದತ್ತಪ್ಪ ಸಿಂಘೇ. 03] ಸಂತೋಷತಂದೆ ದತ್ತಪ್ಪ ಸಿಂಘೆ, 04] ವಿಶಾಲ ತಂದೆ ಬಸವರಾಜ ಸಿಂಘೇ, 05] ಶಿವಾನಂದ ತಂದೆ ಮಲ್ಲಿಕಾರ್ಜುನ ಸಿಂಘೇ, 06] ಭಾಗಮ್ಮ ಗಂಡ ಮಹಾಂತಪ್ಪ ಸಿಂಘೇ, 07] ಉಮಾಶ್ರೀ ಗಂಡ ಬಾಬು ಸಿಂಘೆ, 08] ರಮಾ ಗಂಡ ಸಂತೋಷ ಸಿಂಘೆ, 09] ಶಾಂತಾಬಾಯಿ ಗಂಡ ದತ್ತಪ್ಪ ಸಿಂಘೆ ಎಲ್ಲರೂ ಸೇರಿ ಮಾತನಾಡುತ್ತಾ ಕುಳಿತಾಗ ಇದೆ ಸಮಯ ಸಾಧೀಸಿಕೊಂಡು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ 01] ರವಿ ತಂದೆ ಮೌಲಪ್ಪ ಮದನಕರ, 02] ಮಹಾಂತಪ್ಪ ತಂದೆ ಮೌಲಪ್ಪ ಮದನಕರ, 03] ಬಾಬು ತಂದೆ ಮಲ್ಕಪ್ಪ ಮದನಕರ, 04] ಮಡಿವಾಳ ತಂದೆ ಮಲ್ಕಪ್ಪ ಮದನಕರ, 05] ವಿಶ್ವನಾಥ ತಂದೆ ಮಲ್ಕಪ್ಪ ಮದನಕರ, 06] ಮಲ್ಕಪ್ಪ ತಂದೆ ಶಿವಪ್ಪ ಮದನಕರ, 07] ಗೌತಮ ತಂದೆ ರವಿ  ಮದನಕರ, 08] ರಾಹುಲ ತಂದೆ ರವಿ ಮದನಕರ, 09] ಜೈಕುಮಾರ ತಂದೆ ಅಣ್ಣಪ್ಪ ಘತ್ತರ್ಗಿ, 10] ಬಾಬು ತಂದೆ ಅಣ್ಣಪ್ಪ ಘತ್ತರ್ಗಿ, 11] ಭೋಗಪ್ಪ ತಂದೆ ಸೋಮಣ್ಣ ಝಳಕಿ, 12] ಪರಸಪ್ಪ ತಂದೆ ಭೋಗಪ್ಪ ಝಳಕಿ, 13] ಬಸವರಾಜ ತಂದೆ ಭೋಗಪ್ಪ ಝಳಕಿ, 14] ಸೋಮಣ್ಣ ತಂದೆ ಪರಸಪ್ಪ ಝಳಕಿ, 15] ನಾಗಪ್ಪ ತಂದೆ ಬಸಪ್ಪ ಸಿಂಘೆ, 16] ಜೈಕುಮಾರ ತಂದೆ ನಾಗಪ್ಪ ಸಿಂಘೆ, 17] ಸುನೀಲ ತಂದೆ ಮಲಕಪ್ಪ ದಂಡನಕರ, 18] ರವಿ ತಂದೆ ಮಲಕಪ್ಪ ದಂಡನಕರ, 19] ಬಾಬು ತಂದೆ ಗಾಳೆಪ್ಪ ಖಾನಾಪೂರ, 20] ರಮೇಶ ತಂದೆ ಗಾಳೆಪ್ಪ ಖಾನಾಪೂರ ಸಾ|| ಎಲ್ಲರೂ ಭಟ್ಟರ್ಗಾ, 21] ವಸಂತ ತಂದೆ ಮಲ್ಲಿಕಾರ್ಜುನ ಕುಮಸಿ ಸಾ|| ನಿಂಬರ್ಗಾ ಅಲ್ಲದೆ ಇನ್ನು ಇತರರು ತಮ್ಮ ತಮ್ಮ ಕೈಯಲ್ಲಿ ತಲವಾರ, ಚಾಕು, ಕಲ್ಲು ಮತ್ತು ಬಡಿಗೆಗಳೊಂದಿಗೆ ಚೀರಾಡುತ್ತಾ ಗುಂಪು ಕಟ್ಟಿಕೊಂಡು ಇವತ್ತು ನಿಮಗೆ ಇಡಂಗಿಲ್ಲ ರಂಡಿ ಮಕ್ಕಳೆ ಅಂತ ಬೈದಾಡುತ್ತಾ ಬಂದರು ನಾವೆಲ್ಲರೂ ಗಾಬರಿಗೊಂಡು ನಡಗುತ್ತಾ ನಿಂತಾಗ ರವಿ ತಂದೆ ಮೌಲಪ್ಪ ಮದನಕರ ಇತನು ತನ್ನ ಕೈಯಲ್ಲಿರುವ ತಲವಾರದಿಂದ ನನ್ನ ತಮ್ಮ ಮಲ್ಲಿಕಪ್ಪ ಇತನಿಗೆ ಮನಸ್ಸಿಗೆ ಬಂದಂತೆ ತಲೆಗೆ, ಬೆನ್ನಿಗೆ ಅಲ್ಲದೆ ಎಡಗೈ ಗೆ ಹೊಡೆದನು ನನ್ನ ತಮ್ಮ ಒದ್ದಾಡುತ್ತಾ ಅಲ್ಲಿಯೇ ಬಿದ್ದಾಗ ಬಾಬು ತಂದೆ ದತ್ತಪ್ಪ ಸಿಂಘೆ ಇತನು ಬಿಡಿಸಲು ಹೋಗಿದ್ದಕ್ಕೆ ಆತನಿಗೆ ಮಹಾಂತಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಮೇಲೆ ಮನಸ್ಸಿಗೆ ಬಂದಂತೆ ಹೊಡೆದನು, ಬಾಬು ತಂದೆ ಮಲ್ಕಪ್ಪ ಮದನಕರ ಇತನು ಕಲ್ಲಿನಿಂದ ಬೀಸಿ ಹೊಡೆದನು, ಸಂತೋಷ ತಂದೆ ದತ್ತಪ್ಪ ಸಿಂಘೆ ಇತನಿಗೆ ಜೈಕುಮಾರ ತಂದೆ ಅಣ್ಣಪ್ಪ ಘತ್ತರ್ಗಿ ಇತನು ಕೈಯಿಂದ ಹೊಟ್ಟೆ ಎದೆ ಬೆನ್ನಿಗೆ ಹೊಡೆದು ನೆಲಕ್ಕೆ ಹಾಕಿ ಕಲ್ಲಿನಿಂದ ಬಲಗಾಲ ಮೇಲೆ ಹೇರಿದನು, ವಿಶಾಲ ತಂದೆ ಬಸವರಾಜ ಸಿಂಘೆ ಇತನಿಗೆ ವಿಶ್ವನಾಥ ತಂದೆ ಮಲ್ಕಪ್ಪ ಮದನಕರ ಇತನು ಕಲ್ಲಿನಿಂದ ಕಪಾಳಕ್ಕೆ ಹೊಡೆದು ರಕ್ತಗಾಯ ಗುಪ್ತಗಾಯಪಡಿಸಿದನು. ಶಿವನಾಂದ ತಂದೆ ಮಲ್ಲಿಕಾರ್ಜುನ ಸಿಂಘೆ ಇತನಿಗೆ ಮಡಿವಾಳ ತಂದೆ ಮಲ್ಕಪ್ಪ ಮದನಕರ ಇತನು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದನು, ಭಾಗಮ್ಮ ಗಂಡ ಮಹಾಂತಪ್ಪ ಸಿಂಘೆ ಇವಳಿಗೆ ಜೈಕುಮಾರ  ತಂದೆ ನಾಗಪ್ಪ  ಸಿಂಘೆ ಇತನು ಕಲ್ಲಿನಿಂದ ತೊಡೆಯ  ಮೇಲೆ  ಹೊಡೆದನು,  ಉಮಾಶ್ರೀಗೆ ಭೋಗಪ್ಪ ತಂದೆ  ಸೋಮಣ್ಣ ಝಳಕಿ ಇತನು ಬಲಗೈ ತಿರುವಿರುತ್ತಾನೆ. ರಮಾ ಇವಳೀಗೆ ಸೋಮಣ್ಣ ತಂದೆ ಪರಸಪ್ಪ ಝಳಕಿ ಇತನು ಬೆನ್ನ ಮೇಲೆ ಹಾಗೂ ಶಾಂತಾಬಾಯಿಗೆ ರಮೇಶ ತಂದೆ ಗಾಳೆಪ್ಪ ಖಾನಾಪೂರ ಇತನು ಕಾಲಿನಿಂದ ಹೊಟ್ಟೆ ಮೇಲೆ ಒದ್ದಿರುತ್ತಾನೆ. ನಾನು ನಿಮ್ಮ ಕಾಲ ಬೀಳತೀನಿ ಬಿಡರೋ ಅಂತ ಅಂದಾಗ ನನಗೆ ರವಿ ಮದನಕರ ಇತನು ಪಿಸ್ತೂಲ ತೆಗೆದುಕೊಂಡು ನನಗೆ ತೋರಿಸಿ ಇವತ್ತು ನಿನಗೆ ಇಡಂಗಿಲ್ಲ ಅಂತ ಅಂಜಿಸಿರುತ್ತಾನೆ. ಮಲೀಕಪ್ಪನು ರಕ್ತದ ಮಡುವಿನಲ್ಲಿ ಬಿದ್ದಾಗ ಮಲೀಕಪ್ಪ ಸತ್ತಾನ  ನಡಿರೋ ಅಂತ ಚೀರಾಡುತ್ತಾ ತಮ್ಮ ಮನೆಯ ಕಡೆಗೆ ಹೋಗಿರುತ್ತಾರೆ. ರವಿ ಮತ್ತು ಆತನ ಕಡೆಯವರು ನನ್ನ ತಮ್ಮನಾದ ಮಲೀಕಪ್ಪನಿಗೆ ತಲವಾರದಿಂದ ಹಲ್ಲೆ ಮಾಡಿ ತಲೆ, ಎಡಗೈಗೆ ಭಾರಿ ರಕ್ತಗಾಯಪಡಿಸಿ, ಬಾಬು, ಸಂತೋಷ, ವಿಶಾಲ, ಶಿವಾನಂದ ಇವರುಗಳಿಗೆ ಕಲ್ಲು ಬಡಿಗೆಗಳಿಂದ ತಲೆ, ಹೊಟ್ಟೆಗಳಿಗೆ ಭಾರಿ ರಕ್ತಗಾಯ ಗುಪ್ತಗಾಯಪಡಿಸಿ ಕೊಲೆ ಮಾಡಲು ಯತ್ನಿಸಿ ಹೆಣ್ಣುಮಕ್ಕಳ ಮೇಲು ಸಹ ಹಲ್ಲೆ ಮಾಡಿ ದೌರ್ಜನ್ಯವೆಸಗಿ ಹೋಗಿರುತ್ತಾರೆ. ಜಗಳದಲ್ಲಿ ಗಾಯಗೊಂಡವರನ್ನು ನಾನು ಮತ್ತು ನಮ್ಮೂರಿನ ಕಾಂತಪ್ಪ ತಂದೆ ಸೈಬಣ್ಣ ಸಿಂಘೇ, ಭೀಮಾಶಂಕರ ತಂದೆ ಹಣಮಂತ ಸಿಂಘೆ, ಸಂತೋಷ ತಂದೆ ಭೀಮಾಶಂಕರ ಸಿಂಘೆ, ಲಕ್ಷಪ್ಪ ತಂದೆ ತಿಪ್ಪಣ್ಣ ದಂಡನಕರ ಎಲ್ಲರೂ ಸೇರಿ  ಒಂದು ಖಾಸಗಿ  ವಾಹನದಲ್ಲಿ ನಿಂಬರ್ಗಾ ಆಸ್ಪತ್ರೆಗೆ ತಂದು ಉಪಚಾರ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕೊಟ್ಟು ಕಳಿಸಿರುತ್ತೇನೆ. ಕಾರಣ ರವಿ ಮತ್ತು ಇತರರ ಮೇಲೆಸೂಕ್ತ ಕಾನೂನು  ಕ್ರಮ ಜರುಗಿಸಲು ಹೇಳಿಯ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
ಅಶೋಕ ನಗರ ಠಾಣೆ : ದಿನಾಂಕ 28/04/2016 ರಂದು ಸಂಜೆ 6 ಪಿಎಂಕ್ಕೆ  ಶ್ರೀ. ವಿಶ್ವನಾಥ ತಂದೆ ಹಣಮಂತರಾವ ಕೌವಲಗಿ  ವಿಳಾಸ: ಮನೆ ನಂ. 1-891/30/254/1 ಸಂತೋಷ ಕಾಲೋನಿ ಚಾಮುಂಡೆಶ್ವರಿ ನಗರ ಕಲಬುರಗಿ ರವರು ಸಲ್ಲಿಸಿದ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ ನನ್ನ ಪತ್ನಿಯವರು ಬೆಂಗಳೂರಿಗೆ ಹೊಗಿರುತ್ತಾರೆ. ಈಗ 3 ದಿನದಿಂದ  ನಾನು ಮತ್ತು ನನ್ನ ಮಗ ವೀರಣ್ಣ ಕೌವಲಗಿ ಇಬ್ಬರೇ ಮನೆಯಲ್ಲಿದ್ದೆವೆದಿನಾಂಕ 26/04/2016 ರಂದು ನಾನು ಮತ್ತು ನನ್ನ ಮಗನಾದ ವೀರಣ್ಣ ಕೌವಲಗಿ ಇಬ್ಬರೂ ಕೂಡಿ ಪಂಜಾಬ ನ್ಯಾಶನಲ್‌ ಬ್ಯಾಂಕಿಗ ಹೊಗಿ  ಅಗ್ರಿ ಗೊಲ್ಡ ಲೋನದಲ್ಲಿ ಇಟ್ಟಿದ್ದ ನನ್ನ ಪತ್ನಿಯ  21 ತೊಲೆ ಚಿನ್ನದ ಆಭರಣಗಳನ್ನು ಬಿಡಿಸಿಕೊಂಡು ಮನೆಯ ಬೇಡ್‌ ರೂಮಿನಲ್ಲಿರುವ ಕಪಾಟ ಡ್ರಾವದಲ್ಲಿಟ್ಟಿರುತ್ತೆನೆ. ನಿನ್ನೆ ದಿನಾಂಕ 27/04/2016 ರಂದು ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೊಗಿದ್ದು ಮನೆಯಲ್ಲಿ ನನ್ನ ಮಗ ಒಬ್ಬರೇ ಇದ್ದರು. ಮನೆಕೆಲಸದವಳಾದ  ನಿಂಗಮ್ಮಾ ಮಡಿವಾಳಪ್ಪಾ ರವರು ಮನೆಯಲ್ಲಿ ಕೆಲಸ ಮಾಡಿ ಹೊಗಿರುತ್ತಾರೆ. ನಾನು ಮದುವೆ ಕಾರ್ಯಕ್ರಮದಿಂದ ರಾತ್ರಿ ಮನೆಗೆ ಬಂದಿರುತ್ತೆನೆಇಂದು ದಿನಾಂಕ: 28/04/2016 ರಂದು ಮದ್ಯಾಹ್ನ 3 ಗಂಟೆಗೆ ಕೂಡಲಸಂಗಮಕ್ಕೆ ಮದುವೆ ಕಾರ್ಯಕ್ರಮಕ್ಕಾಗಿ ಹೊಗುತ್ತಿರುವಾಗ ನನ್ನ ಮಗನಾದ ವೀರಣ್ಣ ಕೌವಲಗಿ ರವರು ಫೋನ ಮಾಡಿ ಕಪಾಟ ಡ್ರಾವದಲ್ಲಿಟ್ಟಿದ್ದ  ಬಂಗಾರದ ಆಭರಣಗಳು ಕಡಿಮೆ ಕಾಣಿಸುತ್ತಿವೆ. ಎಂದು ಹೇಳಿದಾಗ ನಾನು ಮರಳಿ ಬಂದು ನೊಡಲು ಡ್ರಾವದಲ್ಲಿಟ್ಟಿದ್ದ ಒಂದು ಬಿಳಿಬಟ್ಟೆಯ ಪಾಕೇಟದಲ್ಲಿ ಎರಡು ಚಿನ್ನದ ಪಾಟಲಿಗಳು ಮಾತ್ರ ಇದ್ದು, ಇನ್ನೂಳಿದ  1) ಚಿನ್ನದ ನಾಲ್ಕು ಬಿಲ್ವಾರ್‌ಗಳು 50 ಗ್ರಾಂ, 2) ಚಿನ್ನದ ಒಂದು ಜೊತೆ ತೊಡೆಗಳು 50 ಗ್ರಾಂ, 3) ಚಿನ್ನದ ಚಪ್ಪಲಾರ್‌ 60 ಗ್ರಾಂ, ಕಾಣಿಸಲಿಲ್ಲಈ ಬಗ್ಗೆ ನನ್ನ ಮಗ ವೀರಣ್ಣ ಕೌವಲಗಿ ಮತ್ತು ಮನೆಕೆಲಸದವಳಾದ ನಿಂಗಮ್ಮಾ ಮಡಿವಾಳಪ್ಪಾ ರವರಿಗೆ ಕರೆದು ಕೇಳಿದ್ದು  ನಮಗೇನು ಗೊತ್ತಿಲ್ಲಾ ಎಂದು ಹೇಳಿದರು. ನನ್ನ ಮನೆಯ ಬೇಡ ರೂಮಿನ ಡ್ರಾವದಲ್ಲಿಟ್ಟಿದ್ದ  ಒಟ್ಟು 21 ತೊಲೆ ಚಿನ್ನಾಭರಣದಲ್ಲಿಂದ  16 ತೊಲೆ ಚಿನ್ನಾಭರಣಗಳು ಅದರ ಅಂದಾಜು ಕಿಮ್ಮತ್ತು 4,16,000/- ರೂ ನೇದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಥವಾ ಮನೆಗೆಲಸದವರು ಮಾಡಿರುತ್ತಾರೆ ಎನ್ನುವ ಬಗ್ಗೆ ಸಂಶಯ ಇರುತ್ತದೆ. ಈ ಬಗ್ಗೆ ತನಿಖೆ ಮಾಡಿ ಕಳ್ಳತನವಾಗಿರುವ ನನ್ನ ಚಿನ್ನಾಭರಣಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
ಆಳಂದ ಠಾಣೆ : ದಿನಾಂಕ:28/04/2016 ರಂದು 02:00 ಪಿ.ಎಂ.ಕ್ಕೆ ಪಿರ್ಯಾದಿ ಶ್ರೀ.ಸಂತೋಷ ತಂದೆ ರೇವಣಸಿದ್ದಪ್ಪಾ ಬಂಡೆ ವಯಸ್ಸು:33 ವರ್ಷ ಜಾತಿ:ಲಿಂಗಾಯತ ಸಾ:ಖಂಡಾಳ ತಾ: ಆಳಂದ ಇವರು ಠಾಣೆಗೆ ಹಾಜರಾಗಿ ಅರ್ಜಿ ನೀಡಿದರ ಸಾರಾಂಶವೆನೆಂದರೆ ನಾನು ಹಾಗೂ ಉಲ್ಲಾಸ ಗಂಡು ಮಕ್ಕಳಿದ್ದು ನಮ್ಮ ತಾಯಿ ಮಹಾನಂದಾ ನಮ್ಮ ಜೊತೆಗೆ ವಾಸವಾಗಿದ್ದು. ನಮ್ಮ ತಂದೆಯ ಪಾಲಿಗೆ 04 ಎಕರೆ ಜಮೀನು ಇದ್ದು ಅದನ್ನು ಸಾಗುವಳಿ ಮಾಡುತ್ತಾ ಬಂದಿದ್ದಿದೆ ಈ ಎರಡು ತಿಂಗಳ ಹಿಂದೆ ನನ್ನ ಹೆಂಡತಿ ಹೆರಿಗೆ ಸಮಯದಲ್ಲಿ ಉಮರ್ಗಾದ ಶಿಂದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾಳೆ. ನಮ್ಮ ತಂದೆಯವರು ಆಸ್ಪತ್ರೆಯ ನನ್ನ ಹೆಂಡತಿಯ ಉಪಚಾರಕ್ಕಾಗಿ 02 ಲಕ್ಷ ರೂಪಾಯಿ ಖರ್ಚು ಮಾಡಿದ್ದು ಅಲ್ಲದೆ ಈ ವರ್ಷ ಬರಗಾಲ ಬಿದ್ದು ಹೊಲದಲ್ಲಿ ಯಾವುದೇ ಬೆಳೆ ಇರದಿದ್ದರಿಂದ ಸರಕಾರದ ಸಾಲ ಹಾಗೂ ಖಾಸಗಿ ಸಾಲ ಹೊಲದ ಮೇಲೆ ಅಂದಾಜು 05 ಲಕ್ಷ ರೂಪಾಯಿದಷ್ಟು ಸಾಲ ಮಾಡಿಕೊಂಡಿದ್ದು ಅದನ್ನು ಹೇಗೆ ತೀರಿಸುವದು ಅಂತಾ ನಮ್ಮ ತಂದೆಯವರು ಚಿಂತೆ ಮಾಡುತ್ತಿದ್ದರು ಅದಕ್ಕೆ ನಾವು ಹೇಗಾದರೂ ಮಾಡಿ ಸಾಲ ಮುಟ್ಟಿಸೋಣ ಚಿಂತಿಸಬೇಡ ಎಂದು ಧೈರ್ಯ ಹೇಳುತ್ತಾ ಬಂದಿದ್ದೆವೆ. ದಿನಾಂಕ: 27/04/2016 ರಂದು ಬೆಳೆಗ್ಗೆ ಸುಮಾರು 10 ಗಂಟೆಗೆ ಮನೆಯಿಂದ ಆಳಂದಕ್ಕೆ ಹೋಗುತ್ತೆನಂತ ಹೋದವನು ಮರಳಿ ಮನೆಗೆ ಬಂದಿರಲಿಲ್ಲಾ. ಇಂದು ದಿನಾಂಕ:28/04/2016 ರಂದು ಮದ್ಯಾಹ್ನ 01:00 ಗಂಟೆ ಸುಮಾರಿಗೆ ಪೋನ್ ಮುಖಾಂತರ ಮಾಹಿತಿ ಬಂದಿದ್ದೆನೆಂದರೆ ನಮ್ಮ ತಂದೆಯವರು ಆಳಂದದ ಕ್ರಿಡಾಂಗಣದ ಹತ್ತಿರ ಘಾಳೇಪ್ಪಾ ಹಟಗಾರ ಇವರ ಹೊಲದಲ್ಲಿದ ಬೇವಿನ ಮರಕ್ಕೆ ಹಗ್ಗದಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ನಮ್ಮೂರ ಲಕ್ಷ್ಮಣ ತಂದೆ ಗುಂಡಪ್ಪಾ ಜಮಾದಾರ ತಿಳಿಸಿದ ಮೇರೆಗೆ ನಮ್ಮೂರಿಂದ ನಾನು ಹಾಗೂ ನನ್ನ ಚಿಕ್ಕಪ್ಪಾ ಮಲ್ಲಿನಾಥ ಹಾಗೂ ಗ್ರಾಮಸ್ಥರು ಕೂಡಿ ಬಂದು ನೋಡಲಾಗಿ ನಮ್ಮ ತಂದೆಯವರು ಉರಲು ಹಾಕಿಕೊಂಡು ಮೃತಪಟ್ಟಿದ್ದು ನಿಜವಿತ್ತು. ನಮ್ಮ ತಂದೆಯವರಿಗೆ ಆದ ಸಾಲದ ಭಾದೆಯನ್ನು ತಾಳದೆ ಅದನ್ನು ಹೇಗೆ ಮುಟ್ಟಿಸುವದು ಎಂದು ಚಿಂತಿಸಿ ಮನ:ನೊಂದು ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ತಾವುಗಳು ಮುಂದಿನ ಕ್ರಮ ಜರುಗಿಸಬೇಕು. ನಮ್ಮ ತಂದೆಯವರು ಇಂದು 28/04/2016 ರಂದು 10:00 ಎ.ಎಂ.ದಿಂದ 12:00 ಪಿ.ಎಂ. ಅವಧಿಯಲ್ಲಿ ಮರಣ ಹೊಂದಿರುತ್ತಾರೆಂದು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿಯಾಗಿರುತ್ತದೆ ಮೃತ ಪಟ್ಟವರು ರೇವಣಸಿದ್ದಪ್ಪಾ ತಂದೆ ರಾಮಲಿಂಗಪ್ಪಾ ಬಂಡೆ ವಯ: 65 ವರ್ಷ ಜಾತಿ:ಲಿಂಗಾಯತ ಉ:ಒಕ್ಕಲುತನ ಸಾ: ಖಂಡಾಳ ತಾ: ಆಳಂದ .

28 April 2016

KALABURAGI DISTRICT REPORTED CRIMES

ಮಟಕಾ ಜೂಜುಕೋರರ ಬಂಧನ:
ನಿಂಬರ್ಗಾ ಪೊಲೀಸ ಠಾಣೆ:- ದಿನಾಂಕ 27/04/2016 ರಂದು ಶ್ರೀ ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ ರವರು ಡಿ.ಸಿ.ಬಿ ಘಟಕದ ಸಿಬ್ಬಂಧಿಯವರಾದ ಶ್ರೀ ಮುಜುಬುದ್ದೀನ ಹೆಚ್.ಸಿ 410, ಶ್ರೀ ನಾಗರಾಜ ಸಿಪಿಸಿ 386, ಶ್ರೀ ಸಂತೋಷ ಸಿಪಿಸಿ 900 ರವರೊಂದಿಗೆ ಕಲಬುರಗಿಯಿಂದ ಆಳಂದ ಕಡೆಗೆ ಹೋಗುವ ರಸ್ತೆಯ ಮೇಲೆ  ಟೋಲ ನಾಕಾ ಹತ್ತಿರ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಸುಂಟನೂರ ಗ್ರಾಮದ ಯಲ್ಲಾಲಿಂಗ ಗುಂಪಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಅಂತ ಮಾಹಿತಿ ತಿಳಿದು ಪಂಚರಾದ 01] ಶ್ರೀ ಅರ್ಜುನ ತಂದೆ ಅಪ್ಪಣ್ಣ ನ್ಯಾಮನ 02] ಶ್ರೀ ಶ್ರೀಮಂತ ತಂದೆ ಶಿವಲಿಂಗಪ್ಪ ನೈಕೋಡಿ ಸಾ|| ಇಬ್ಬರೂ ಸುಂಟನೂರ ಗ್ರಾಮ ಇವರೊಂದಿಗೆ ಸುಂಟನೂರ ಗ್ರಾಮದ ಯಲ್ಲಾಲಿಂಗ ಗುಂಪಾದ ಹತ್ತಿರ ಹೋಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಮೋಟಾರ ಸೈಕಲ ಮೇಲೆ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಕಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಿಚಾರಿಸಲು ತನ್ನ ಹೆಸರು ಅಪ್ಪಾರಾವ  ತಂದೆ ಶಾಂತಪ್ಪ ಮೇಲಿನಕೇರಿ ಸಾ|| ಸುಂಟನೂರ  ಅಂತ ತಿಳಿಸಿದ್ದು ಆತನಿಗೆ ಚಕ್ ಮಾಡಲಾಗಿ ಆತನ ಹತ್ತಿರ ನಗದು ಹಣ 7010/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ, ಒಂದು ಮೋಬೈಲ, ಆಪಾದಿತನು ಕುಳಿತುಕೊಂಡ ಮೋಟಾರ ಸೈಕಲ ನಂ.ಕೆ.ಎ 32, ಇಜೆ 2075 ಇದ್ದು ಇವುಗಳನ್ನು ಜಪ್ತಿಪಡಿಸಿಕೊಂಡು ಆರೋಪಿತರ ಮೇಲೆ ನಿಂಬಗಾ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 26/04/2016 ರಂದು ಶ್ರೀ ಶ್ರೀಕಾಂತ ತಂದೆ ಪ್ರಭು ಹೊಸಳಿ, ಸಾ|| ವಿಧ್ಯಾನಗರ ಕಲಬುರಗಿ ರವರು ಮತ್ತು ಸುನೀಲ ತಂದೆ ಸಿದ್ರಾಮಪ್ಪ ಸಿರಗಾನೂರ ಸಾ|| ಬಸವ ನಗರ ಕಲಬುರಗಿ ಇಬ್ಬರೊ ಕಲಬುರಗಿಯಿಂದ ಜವಳಿ (ಡಿ) ಗ್ರಾಮಕ್ಕೆ ಮೋಟರ ಸೈಕಲ ನಂ. ಕೆ.ಎ 32, ಇಡಿ 9212 ನೇದ್ದರ ಮೇಲೆ ಹೋಗುವಾಗ ಸುನೀಲ ತಂದೆ ಸಿದ್ರಾಮಪ್ಪ ಸಿರಗಾನೂರ ಈತನು ತಾನು ಚಲಾಯಿಸುತ್ತಿರುವ ಮೋಟರ ಸೈಕಲ ನಂ. ಕೆ.ಎ 32, ಇಡಿ 9212 ನ್ನು ಬಾಬಾ ಫಕ್ರೂದ್ದೀನ ದರ್ಗಾ ದಾಟಿ 1 ಕೀಮಿಟರ ದಾಟಿ ಸ್ಟೇಶನ ಗಾಣಗಾಪೂರ ಕಡೆಗೆಬರುವ ರೋಡಿನ ಮೇಲೆ ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿದ್ದರಿಂದ ಮೋಟರ ಸೈಕಲ ಸ್ಕೀಡ ಆಗಿ ಶ್ರೀಕಾಂತ ಮತ್ತು ಸುನೀಲ ಮೈ ಕೈಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಜೇವರ್ಗಿ ಠಾಣೆ : ದಿನಾಂಕ: 27/04/2016 ರಂದು ಶ್ರೀಮತಿ, ಲಕ್ಷ್ಮಿ ಗಂಡ ಚನನ್ಬಸವ ಬುದಿಹಾಳ ಹಾ:ವ: ಡಿ.ಎ.ಆರ್.ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ 13/04/16 ರಂದು ಮದ್ಯಾನ್ಹ 1-00 ಗಂಟೆಯಿಂದ 1-15 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಜೇವರ್ಗಿ ಪಟ್ಟದ ಬಸ್ ನಿಲ್ದಾಣದ ಬಸ್ಸಿನಲ್ಲಿದ್ದ ತನ್ನ ವ್ವ್ಯಾನಿಟಿ ಬ್ಯಾಗಿನಲ್ಲಿದ್ದ 1) ಬಂಗಾರದ ತಾಳಿ ಅರ್ದ ತೊಲಿ ಅ.ಕಿ. 14.000/- ರೂ 2) ಬಂಗಾರದ ಚಪ್ಲಾರ 3 ತೊಲಿ ಅ.ಕಿ.75.000/- 3) ಬಂಗಾರದ ನೆಕ್ಲೆಸ್ 1 ತೋಲಿ 25.000/- 4) ಬಂಗಾರದ ಲಾಕೇಟ 1 ತೋಲಿ ಅ.ಕಿ. 25.000/- 5) ಬಂಗಾರದ2 ಉಂಗುರಗಳು 4 ಗ್ರಾಮ.ಅ.ಕಿ. 10.000/-ರೂ.ಹಾಗೂ ನಗದು ಹಣ 3000/- ರೂ. ಹಿಗೆ ಒಟ್ಟು 1.52.000/- ರೂ ಕಿಮ್ಮತ್ತಿನದು ವ್ಯಾನೇಟಿ ಬ್ಯಾಗ ಸಮೇತ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

27 April 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ದಿನಾಂಕ: 25-04-2016 ರಂದು ಶ್ರೀ ರಾಜು ತಂದೆ ಜಗದೇವಪ್ಪ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ ತಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ತಾನು ಊರಲ್ಲಿ ಮಾತೋಳಿ ರಸ್ತಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿಯಿಂದ ಚಲಾಯಿಸುತ್ತಾ ತನಗೆ ಅಪಘಾತ ಪಡಿಸಿದ್ದು . ನನಗೆ ಅಪಘಾತ ಪಡಿಸಿದ ಮೋಟರ ಸೈಕಲ ನಂಬರ ನೋಡಲು ಅದರ ನಂ ಕೆಎ-28 ಜೆಡ್-9279 ಇದ್ದು, ಮೋಟರ ಸೈಕಲ ಚಾಲಕ ನಮ್ಮ ಬಾಜು ಗ್ರಾಮದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಇದ್ದು. ಮೋಟರ ಸೈಕಲ ಚಾಲಕ ಹಣಮಂತನು ಮೋಟರ ಸೈಕಲ ತಗೆದುಕೊಂಡು ಓಡಿ ಹೋಗಿರುತ್ತಾನೆ. ಕಾರಣ ನನಗೆ ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-28 ಜೆಡ್-9279 ನೇದ್ದರ ಚಾಲಕನಾದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಈತನ ಮೇಲೆ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ :
ಗ್ರಾಮೀಣ ಪೊಲೀಸ್ ಠಾಣೆ
ಪೊಲೀಸ್ ಪ್ರಕಟಣೆ
ಇಂದು ದಿನಾಂಕ. 23-4-2016 ರಂದು 10-30 ಎ.ಎಂ.ಕ್ಕೆ. ಶ್ರೀ  ಸಂಜೀವಕುಮಾರ ತಂದೆ ನಾಗಪ್ಪಾ ಕಮ್ಮನ ಸಾ; ಪಟ್ಟಣ್ಣ ಇವರು ಠಾಣೆಗೆ ಹಾಜರಾಗಿ ಅಂದಾಜು 30-35 ವರ್ಷದ ಒಬ್ಬ ಅಪರಿಚಿತ ವ್ಯಕ್ತಿ ಎತ್ತರ 5 ಫೀಟ , 6 ಇಂಚು ಇದ್ದು , ಸಾಧಗಪ್ಪು ಮೈಬಣ್ಣ ಹೊಂದಿದ್ದು  ಒಂದು ಬೂದು ಬಣ್ಣದ ಶರ್ಟ , ಮತ್ತು ಮೆಂದಿಕಲರ ಪ್ಯಾಂಟಧರಿಸಿರುತ್ತಾನೆ. ಸದರಿ ವ್ಯಕ್ತಿಯ ಮೈ ಮೇಲೆ ಯಾವುದೇ ಗಾಯವಗೈರೆ ಕಂಡು ಬಂದಿರುವದಿಲ್ಲಾ.  ಈ ವ್ಯಕ್ತಿಯು ಅನಾರೋಗ್ಯದಿಂದ ಬಳಲುತಿದ್ದು, ನಡೆದುಕೊಂಡು ಹೋಗುವುದಕ್ಕೆ ಆಗದ ನಿಶಕ್ತನಾಗಿದ್ದು , ಅಲ್ಲದೆ ಬಿಸಲು ತಾಪ ತಾಳಲಾರೆದೆ ದಿ.22-4-2016 ರಂದು ಸಾಯಂಕಲ 6 ಗಂಟೆಯಿಂದ ಇಂದು ದಿ. 23-4-2016 ರಂದು ಮುಂಜಾನೆ 9-30 ಎ.ಎಂ.ದ ಮಧ್ಯದ ಅವಧಿಯಲ್ಲಿ ಮೃತ ಪಟ್ಟಂತೆ ಕಂಡು ಬಂದಿದ್ದು.. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ,ಮತ್ತು ಕಾರಣ ಸದರಿ ವ್ಯಕ್ತಿಯ ಅಪರಿಚಿತನಾಗಿದ್ದು , ಈ ಬಗ್ಗೆ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

26 April 2016

KALABURAGI DISTRICT REPORTED CRIMES.

ರಾಘವೇಂದ್ರ ನಗರ  ಠಾಣೆ : ದಿ|| 25/04/16 ರಂದು ರಾತ್ರಿ 9.30 ಗಂಟೆಗೆ ನೀಲಮ್ಮ ಪಿ,ಎಸ್,ಐ ಜಿಲ್ಲಾ ವಿಶೇಷ ಅಪರಾಧ ವಿಭಾಗ ಕಲಬುರಗಿ ರವರು ಠಾಣೆಗೆ ಬಂದು ಒಬ್ಬ ಯುವಕನನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲು ಜಪ್ತಿಪಂಚನಾಮೆ ಹಾಜರಪಡಿಸಿ ಸರ್ಕಾರಿ ತರ್ಪೆಯಾಗಿ ಒಂದು ವರದಿ ಸಲ್ಲಿಸಿದ್ದು ಅದರ ಸಾರಂಶವೇನಂದರೆ ಇಂದು ದಿ|| 25/04/16 ರಂದು ಸಾಯಂಕಾಲ 7.00  ಗಂಟೆಯ  ಕಲಬುರಗಿ ನಗರದ ರಾಘವೇಂದ್ರ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿಯ ಗ್ರೀನ ಸರ್ಕಲ ಹತ್ತಿರ ಒಬ್ಬ ಯುವಕನು ಮಟಕಾ ಜೂಜಾಟ ನಡೆಸುತ್ತಿರುವ ಮಾಹೀತಿ ಮೇರೆಗೆ ದಾಳಿ ಮಾಡುವಗೋಸ್ಕರ ನನ್ನ ಜೋತೆಯಲ್ಲಿ ಸಿಬ್ಬಂದಿ ಜನರಾದ ಅಂಬದಾಸ ಹೆಚ್,ಸಿ, 222 ನಾಗೇಂದ್ರ ಪಿ,ಸಿ, 777 ಸಂತೋಶ ಪಿ,ಸಿ, 900 ನಾಗೇಂದ್ರ ಪಿ,ಸಿ, 386 ಮತ್ತು ಜೀಪ ಚಾಲಕ ಮಂಜುನಾಥ ಎ,ಪಿ,ಸಿ,151 ರವರನ್ನು ಮತ್ತು ಇಬ್ಬರೂ ಪಂಚರನ್ನು ಬರಮಾಡಿಕೊಂಡು ಮಾನ್ಯ ಡಿ,ಎಸ್,ಪಿ, ಡಿಸಿಅರ್,ಬಿ ಮತ್ತು ಪಿ,ಐ ಸಾಹೇಬರು ಡಿಸಿಬಿ ರವರ ಮಾರ್ಗದರ್ಶನದಲ್ಲಿ ಘಟನಾ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಖಾಜಾ ತಂದೆ ರಸೂಲಸಾಬ ವ|| 27 ಉ||ಗೌಂಡಿಕೆಲಸ ಸಾ|| ಮದೀನಾ ಕಾಲೋನಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 11120=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೋರೆತಿದ್ದು ಮತ್ತು ಮಟಕಾ ಜೂಜಾಟ ಕೃತ್ಯ ಕ್ಕೆ ಉಪಯೋಗಿಸಲು ತಂದಿದ ಒಂದು ಹೀರೊ ಹೊಂಡಾ ಮೋಟಾರ ಸೈಕಲ ನಂ ಕೆ,,32 ವಾಯ 3988 ಅದರ ಅ||ಕಿ|| 15000/-ರೂ ಬೆಲೆಬಾಳುವುದನ್ನು ದೊರೆತ್ತಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಂಚನಾಮೆ ಮುಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಸದರಿ ಅರೋಪಿ ಹಾಗೂ ಮುದ್ದೆಮಾಲು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಒಪ್ಪಿಸಿದ್ದು ಸದರಿ ಆರೋಪಿತರ ಮೇಲೆ ಕಲಂ: 78(3) ಕೆ.ಪಿ ಆಕ್ಟ್‌‌ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳತಕ್ಕದ್ದು ಅಂತಾ ವರದಿಯಾಗಿರುತ್ತದೆ.
ರಾಘವೇಂದ್ರ ನಗರ ಠಾಣೆ : ದಿ|| 25/04/16 ರಂದು ಮದ್ಯಾನ 1.00 ಗಂಟೆಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಸಿದ್ದಣ್ಣ ಪೂಜಾರ ವ|| 40 ಉ|| ಸರಕಾರಿ ಶಾಲೆ ಶಿಕ್ಷಕ ಸಾ|| ವಿವೇಕಾನಂದ ಕಲಬುರಗಿರವರು ಠಾಣೆಗೆ ಹಾಜರಾಗಿ ಒಂದು ಲೀಖಿತ ದೂರು ಸಲ್ಲಿಸಿದ್ದು ಅದರಲ್ಲಿ ದಿನಾಂಕ 13/03/16 ರಂದು ಬೆಳಗ್ಗೆ 8.00 ಗಂಟೆಗೆ ಮನೆಗ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ಸುನೀತಾ ಇಬ್ಬರೂ  ಕಲಬುರಗಿ ನಗರದ ಬನ್ನಾಳೆ ದವಾಖಾನೆಗೆ ಹೋಗಿದ್ದು ದಿ|| 14/03/16 ರಂದು ಬೆಳಗ್ಗೆ 9.00 ಗಂಟೆಗೆ ಮನೆಗೆ ಬಂದಿದ್ದು ಮುಂದಿನಾ ಬಾಗೀಲು ಕೀಲಿ ತೆಗೆದು ನೋಡಲು ಬಾಗೀಲು ತೆರೆಯಲಿಲ್ಲಾ ಹಿಂದಿನ ಬಾಗೀಲು ಕಡೆ ಹೋಗಿ ನೋಡಿದ್ದಾಗ ಬಾಗೀಲ ಕೊಂಡಿ ಮುರದಿದ್ದು ಬಾಗೀಲು ತೆರೆದಿದ್ದು ಇದ್ದು ಮನೆಯ ಒಳಗೆ ಹೋಗಿ ನೋಡಲು ಅಲಮಾರ ತೆರೆದಿದ್ದು ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ ಅಲಮಾರದಲ್ಲಿದ್ದ ತಲಾ 5 ಗ್ರಾಂ ಬಂಗಾರದ 2 ಉಂಗೂರುಗಳು 6 ಗ್ರಾಂ ಬಂಗಾರದ ಕೀವಿಯ ಒಲೆಗಳು 10 ಗ್ರಾಂ ಬಂಗಾರದ 2 ಜೋತೆ ಕೀವಿ ಓಲೆ ಹೀಗೆ ಒಟ್ಟು 65000/- ರೂ ಬಂಗಾರದ ಆಭರಣಗಳು ಹಾಗೂ ನಗದು ಹಣ 10000=00 ರೂ ಇರಲಿಲ್ಲಾ ಯಾರೋ ಕ ಳ್ಳರು ಕಳವು  ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಬಗ್ಗೆ ನಾನು ಪೊಲೀಸ ಠಾಣೆಯಲ್ಲಿ ದೂರುಕೊಟ್ಟು ಕೋರ್ಟ ಕಛೇರಿ ಎಲ್ಲಿ ಓಡಾಡಬೇಕು ಅಂತಾ ಪ್ರಕರಣ ದಾಖಲಿಸಿರಲಿಲ್ಲಾ ನಿನ್ನೆ ದಿನಾಂಕ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಕಳ್ಳರೂ ಸಿಕ್ಕಿಬಿದ್ದು ಕಳವು ಮಾಡಿರುವ ಮನೆಗಳು ತೋರಿಸುತ್ತಿದ್ದಾರೆ ನಾನು ಮನೆಯಲ್ಲಿ ಇಲ್ಲದ್ದಾಗ ನಮ್ಮ ಮನೆ ಕೂಡಾ ಅರೋಪಿತರು ಪೊಲೀಸರಿಗೆ ತೋರಿಸಿದ್ದಾರೆ ಎಂದು ಮಾಹಿತಿ ಗೊತ್ತಾಗಿರುತ್ತದೆ ಕಾರಣ ನನ್ನ ಮನೆ ಕೀಲಿ ಮುರಿದು ಓಳಗೆ ಪ್ರವೇಶ ಮಾಡಿ ಬಂಗಾರದ ಆಭರಣ ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಪಿರ್ಯಾದಿಯ ದೂರಿನ ಸಾರಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ ನಂ 63/16 ಕಲಂ 454,457,380 ಐ,ಪಿ,ಸಿ, ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನೀಖೆ ಕೈಕೊಳ್ಳಲಾಗಿದೆ
ನಿಂಬರ್ಗಾ  ಠಾಣೆ : ದಿನಾಂಕ 23/04/2016 ರಂದು  ಮನೆಯ ಜಾಗೆಯ ಸಂಭಂಧ ದ್ವೇಶ ಕಟ್ಟಿಕೊಂಡು ಆಪಾದಿತರೆಲ್ಲರೂ ಭೂತಾಳಿ ತಂದೆ ಶಂಕ್ರೇಪ್ಪ ನಡಗೇರಿ ವ|| 64 ವರ್ಷ, ಜಾ|| ಹೊಲೆಯ, || ಒಕ್ಕಲುತನ, ಸಂಗಡ 3 ಜನರು ಸಾ|| ಮಾಡಿಯಾಳ ಸೇರಿ ಫಿರ್ಯಾದಿಗೆ ಶ್ರೀ ಜೈಕುಮಾರ ತಂದೆ ಪ್ರಭು ನಡಗೇರಿ ವ|| 40 ವರ್ಷ, ಜಾ|| ಹೊಲೆಯ, || ಸಮಾಜ ಸೇವೆ, ಸಾ|| ಮಾಡಿಯಾಳ ಮತ್ತು ಆತನ ಕಡೆಯವರಿಗೆ ಅವಾಚ್ಯವಾಗಿ  ಬೈದು ಕೈಯಿಂದ ಹೊಡೆ ಬಡೆ ಮಾಡಿ ಹಲ್ಲೆ ಮಾಡಿ ಜೀವ ಭಯಪಡಿಸಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಲಿಖೀತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.  
ಎಂ.ಬಿ.ನಗರ ಠಾಣೆ :     ದಿನಾಂಕ 25/04/2016 ರಂದು 5.00 ಎ.ಎಮಕ್ಕೆ ಬಸವೇಶ್ವರ ಆಸ್ಪತ್ರೆ ಕಲಬುರಗಿಯಯಿಂದ ನಿಸ್ತಂತು ಮೂಲಕ ಠಾಣೆ ಗುನ್ನೆ ಗುನ್ನೆ ನಂ 45/2016 ನೇದ್ದರಲ್ಲಿನ ಗಾಯಾಳು ಮಹೇಂದ್ರ ತಂದೆ ನೀಲಕಂಠರಾವ ಕುಲಕರ್ಣಿ ಈತನು ಮೃತ ಪಟ್ಗ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು, ಆಸ್ಪತ್ರೆಗೆ ಬೇಟ್ಟಿ ನೀಡಿ, ಪ್ರಕರಣದಲ್ಲಿ ಮೃತ ಮಹೇಂದ್ರ ಈತನ ತಾಯಿಯಾದ ಶ್ರೀ ಸುಧಾಬಾಯಿ ಗಂಡ ನೀಲಕಂಠ ಕುಲಕರ್ಣಿ ಇವರಿಗೆವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೇ, ದಿನಾಂಕ 24/04/2016 ರಂದು 11.00 ಪಿ.ಎಮ ದಿಂದ ದಿನಾಂಕ 25/04/2016 ರಂದು 00.05 ಎ.ಎಮ್ ಅವಧಿಯಲ್ಲಿ ವಿರೇಂದ್ರ ಪಾಟೀಲ ಬಡಾವಣೆಯ ಕಮಾನ ಎದುರುಗಡೆ ರೋಡಿನ ಮೇಲೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಕತನದಿಂದ ಚಲಾಯಿಸಿಕೊಂಡು ಬಂದು ರಾತ್ರಿ ಡ್ಯೂಟಿಗೆ ಎಂ.ಬಿ ನಗರ ಪೊಲೀಸ ಠಾಣೆಗೆ ಸೈಕಲ ಮೇಲೆ ಹೋಗುತ್ತಿದ್ದ ನನ್ನ ಮಗ ಮಹೇಂದ್ರ ಈತನಿಗೆ ಡಿಕ್ಕಿಪಡಿಸಿದ ಪರಿಣಾಮ ನನ್ನ ಮಗ ಮಹೇಂದ್ರ ಈತನ ತಲೆಗೆ ತಲೆಗೆ ಭಾರಿ ರಕ್ತಗಾಯಗಳಾಗಿದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25/04/2016 ರಂದು 4.30 ಎ.ಎಮಕ್ಕೆ ಮೃತಪಟ್ಟಿರುತ್ತಾನೆ ಕಾರಣ ಮುಂದಿನ ಕ್ರಮ ಜರೂಗಿಸಬೆಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.ದಿನಾಂಕಃ  25/04/2016 ರೆಂದು 1.00 ಎ.ಎಮಕ್ಕೆ ಶ್ರೀ ಮಂಜುನಾಥ ಸಿಪಿಸಿ-1072 ಎಂ.ಬಿ ನಗರ ಪೊಲೀಸ ಠಾಣೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಸಲ್ಲಿಸಿದ್ದು, ಅದರ ಸಂಕ್ಷಿಪ್ತ ಸಾರಾಂಶವೆನಂದರೆ, ದಿನಾಂಕ 24/04/2016 ರಂದು 11.00  ಪಿ.ಎಮ್ ದಿಂದ ದಿನಾಂಕ 25/04/2016 ರಂದು 00.05 ಎ.ಎಮ್ ಅವಧಿಯಲ್ಲಿ ವಿರೆಂದ್ರ ಪಾಟೀಲ ಬಡಾವಣೆಯ ಕಮಾನ ಎದುರುಗಡೆ ಸೇಡಂ ಕಡೆಗೆ ಹೋಗುವ ರಸ್ತೆಯ ಮೇಲೆ ರಾತ್ರಿ ಗಸ್ತು ಕರ್ತವ್ಯಕ್ಕೆ ಎಂ.ಬಿ ನಗರ ಪೊಲೀಸ ಠಾಣೆಗೆ ಸೈಕಲ್ ಮೇಲೆ ಹೋಗುತ್ತಿದ್ದ ಮಹೇಂದ್ರ ಹೋಮಗಾರ್ಡ ನಂ.119 ಈತನಿಗೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಹೇಂದ್ರ ಈತನಿಗೆ ಡಿಕ್ಕಿಪಡಿಸಿ ಹಾಗೆಯೇ ತನ್ನ ವಾಹನವನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಮಹೇಂದ್ರ ಈತನಿಗೆ ಡಿಕ್ಕಿಪಡಿಸಿದ ಪರಿಣಾಮ ಆತನ ತಲೆಗೆ ಭಾರಿ ರಕ್ತಗಾಯ, ಮೂಗಿನಿಂದ & ಕಿವಿಯಿಂದ ರಕ್ತ ಸೋರುತ್ತಿತ್ತು ಮತ್ತು ಎಡಗೈ ಮುಂಗೈ ಹತ್ತಿರ ತರಚಿದ ರಕ್ತಗಾಯಗವಾಗಿತ್ತು. ಸದರಿಯವನು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ಬೇಹೂಷ ಆಗಿದನು. ಕಾರಣ ಸದರ ಅಪರಿಚಿತ ವಾಹನದ ಚಾಲಕನು ವಿರುದ್ದ ಸೂಕ್ರ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ವಗೈರೆಯಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2016 ಕಲಂ 279,338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

25 April 2016

KALABURAGI DISTRICT REPORTED CRIMES.

ಅಫಜಲಪೂರ ಠಾಣೆದಿನಾಂಕ 24-04-2016 ರಂದು 2:45 ಪಿಎಮ್ ಕ್ಕೆ ನಮ್ಮ ಠಾಣೆಯ ಪಿಸಿ-801 ಸುರೇಶ ಇವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶವೆನೆಂದರೆ  ನಾನು ಸುರೇಶ ಸಿಪಿಸಿ-801 ಅಫಜಲಪೂರ ಪೊಲೀಸ್ ಠಾಣೆ ಆದ ನಾನು ವಿನಂತಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ 24-04-2016 ರಂದು 2:00 ಪಿ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯ ಹಾಗೂ ಗುಪ್ತ ಮಾಹಿತಿ ಸಗ್ರಹಿಸಲು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ 2:30 ಪಿಎಮ್ ಕ್ಕೆ ಬಂದಾಗ, ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲಿಂದ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುವುದು ಅಸಬ್ಯ ರೀತಿಯಿಂದ ವರ್ತಿಸುವುದು ಹಾಗೂ ಒದರಾಡುವುದು ಕೂಗಾಡುವುದು ಮಾಡಿ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದನು. ಹಾಗೂ ಸದರಿಯವನು ತನ್ನ ಕೈಗಳನ್ನು ಹಾಗೂ ತನ್ನ ಕಾಲುಗಳನ್ನು ಬಸ್ ನಿಲ್ದಾಣದ ಕಂಪೌಂಡ ಗೊಡೆಗೆ ಹೊಡೆದುಕೊಳ್ಳುವುದು ಮಾಡುತ್ತಿದ್ದನು. ಸದರಿಯವನಿಂದ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಹಾಗೂ ಅಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಕೊಟ್ಟು ಸ್ಥಳದಲ್ಲಿ ಉದ್ದಿಗ್ನ ವಾತಾವರಣ ಉಂಟು ಮಾಡುತ್ತಿದ್ದನು. ಮತ್ತು ತನ್ನ ಬಟ್ಟೆಗಳನ್ನು ಬಿಚ್ಚಿಕೊಳ್ಳುವುದು ಮಾಡಿ ಅಸಬ್ಯವಾಗಿ ವರ್ತಿಸುತ್ತಿದ್ದನು, ಸದರಿಯವನು ಸಾರ್ವಜನಿಕರ ಶಾಂತಿ ಭಂಗವನ್ನುಂಟು ಮಾಡುತ್ತಿದ್ದರಿಂದ, ಸದರಿಯವನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವಾನಂದ ತಂದೆ ಚಂದ್ರಕಾಂತ ಹಡಪದ ವಯಾ|| 21 ವರ್ಷ ಜಾ|| ನಾವಿ ಉ|| ವಿದ್ಯಾರ್ಥಿ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ ಅಂತಾ ಏರು ಧ್ವನಿಯಲ್ಲಿ ಹೇಳಿದನು. ಸದರಿಯವನನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪುನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಹಾಗೂ ತನ್ನ ಮೈಗೆ ತಾನೆ ಹೊಡೆದುಕೊಳ್ಳುತ್ತಿದ್ದರಿಂದ ಮತ್ತು ಸದರಿಯವನಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗುವ ಸಂಭವ ಇರುವುದರಿಂದ ಸದರಿಯವನನ್ನು ಹಿಡಿದುಕೊಂಡು ಠಾಣೆಗೆ 2:45 ಪಿ.ಎಂ ಕ್ಕೆ ಬಂದು ಸದರಿಯವನ ವಿರುದ್ದ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ವರದಿ ಸಲ್ಲಿಸಿದ್ದು ಇರುತ್ತದೆ. ಅಂತ ನಿಡಿದ ಸದರಿ ಸಾರಂಶದ ಪ್ರಕಾರ ಪ್ರಕರಣ  ವರದಿಯಾಗಿರುತ್ತದೆ..
ಅಫಜಲಪೂರ ಠಾಣೆ : ದಿನಾಂಕ 24-04-2016 ರಂದು 1:40 ಪಿ ಎಮ್ ಕ್ಕೆ ಮಾನ್ಯ ಪಿಎಸ್ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರ ಮತ್ತು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಹಾಜರ ಪಡಿಸಿದ್ದು, ಸದರ ವರದಿಯ ಸಾರಂಶವೆನೆಂದರೆ ನಾನು ಸಿದರಾಯ ಭೋಸಗಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ಈ ಮೂಲಕ ವರದಿಯನ್ನು ಗಣಕಿಕರಿಸಿ ಕೊಡುವುದೇನೆಂದರೆ. ಇಂದು ದಿನಾಂಕ 24-04-2016 ರಂದು 11:30 ಎ ಎಮ್ ಕ್ಕೆ ಸಂಗಡ ನಮ್ಮ ಸಿಬ್ಬಂದಿಯವರಾದ  ಗುಂಡಪ್ಪ ಪಿಸಿ-339, ಸುರೇಶ ಸಿಪಿಸಿ-801 ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೇಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಿವಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮರಳಿ ಠಾಣೆಗೆ ಬಂದು  ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ: ಇಬ್ಬರು ಅಫಜಲಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು ವಿಷಯವನ್ನು ತಿಳಿಸಿದ್ದು ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಪಂಚರು ಮತ್ತು ನಮ್ಮ ಸಿಬ್ಬಂದಿಯವರಾದ ಗುಂಡಪ್ಪ ಪಿಸಿ-339, ಸುರೇಶ ಪಿಸಿ 801 ರವರೇಲ್ಲರು ಕೂಡಿ ನಮ್ಮ ಪೊಲೀಸ್ ವಾಹನದಲ್ಲಿ 11:45 ಎ ಎಮ್ ಕ್ಕೆ ಠಾಣೆಯಿಂದ ಹೊರಟು. 12:05 ಪಿ ಎಮ್ ಕ್ಕೆ ಬನ್ನಟ್ಟಿ ಕ್ರಾಸ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ಯಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು. ಅದನ್ನು ನೋಡಿ ನಾವು ಸದರಿ ಟ್ಯಾಕ್ಟರನ್ನು ನಿಲ್ಲಿಸಿ. ಟ್ಯಾಕ್ಟರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಳೆಂದ್ರ ತಂದೆ ಮಲಕಯ್ಯ ಮಠ ವಯಾ|| 25 ವರ್ಷ ಜಾ|| ಜಂಗಮ ಉ|| ಟ್ಯಾಕ್ಟರ ನಂ ಕೆಎ-28 ಟಿಬಿ-6391 ನೇದ್ದರ ಚಾಲಕ ಸಾ|| ಶಿವಪೂರ ತಾ|| ಅಫಜಲಪೂರ ಅಂತ ತಿಳಿಸಿದನು ಆಗ ನಾನು ಪಂಚರ ಸಮಕ್ಷಮ ಸೆದರಿ ಟ್ಯಾಕ್ಟರನ್ನು ಚೆಕ್ ಮಾಡಲಾಗಿ, ಸದರಿ ಟ್ಯಾಕ್ಟರನಲ್ಲಿ ಮರಳು ತುಂಬಿದ್ದು ಇತ್ತು, ಅದರ ನಂಬರ ಚೆಕ್ ಮಾಡಲಾಗಿ ಟ್ಯಾಕ್ಟರ ಇಂಜೆನ್ ಮುಂದೆ ಇದ್ದ ನಂಬರ ಕಾಣದಂತೆ ಅದಕ್ಕೆ ಕಪ್ಪು ಬಣ್ಣದ ಸ್ಟೀಕ್ಕರ ಹಚ್ಚಿತ್ತು, ನಂತರ ಇಂಜೆನ್ ಹಿಂದೆ ನೋಡಲು ಅದರ ಮೇಲೆ ನಂಬರ ಬರೆದಿದ್ದು ನಂ ಕೆಎ-28 ಟಿಬಿ-6391 ಅಂತಾ ಇತ್ತು. ಸದರಿ ಟ್ಯಾಕ್ಟರ ಅ.ಕಿ 2,00,000/-ರೂ ಅಂತಾ ಇರಬಹುದು. ಸದರಿ ಟ್ಯಾಕ್ಟರನಲ್ಲಿದ್ದ ಮರಳು ಅಂದಾಜು 3,000/- ರೂ ಕಿಮ್ಮತ್ತಿನದು ಇರಬಹುದು. ಸದರಿ ಟ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಭಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟ್ಯಾಕ್ಟರ ಮಾಲಿಕನ ಹೆಸರು ಚಾಲಕನಿಗೆ ವಿಚಾರಿಸಿದಾಗ ರುದ್ರಯ್ಯ ತಂದೆ ಮಲಕಯ್ಯ ಮಠ ಸಾ|| ಶಿವಪೂರ ಅಂತ ಇದ್ದು, ಸದರಿ ಟ್ಯಾಕ್ಟರ ಮಾಲಿಕನೊಂದಿಗೆ ಕೂಡಿ, ಅವನು ತಿಳಿಸಿದ ಮೇರೆಗೆ ಮರಳು ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದನು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆಗೆ ಉಪಯೋಗಿಸಿದ ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ 12:15 ಪಿ ಎಮ್ ದಿಂದ 1:15 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು ನಂತರ ನಮ್ಮ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟಿಪ್ಪರ ಮತ್ತು ಆರೋಪಿತನೊಂದಿಗೆ ಮರಳಿ ಠಾಣೆಗೆ 1:40 ಪಿ ಎಮ್ ಕ್ಕೆ ಬಂದು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಚಾಲಕ ಮಳೆಂದ್ರ ತಂದೆ ಮಲಕಯ್ಯ ಮಠ ವಯಾ|| 25 ವರ್ಷ ಜಾ|| ಜಂಗಮ ಉ|| ಟ್ಯಾಕ್ಟರ ನಂ ಕೆಎ-28 ಟಿಬಿ-6391 ನೇದ್ದರ ಚಾಲಕ ಸಾ|| ಶಿವಪೂರ ಹಾಗೂ ಟ್ಯಾಕ್ಟರ ಮಾಲಿಕನಾದ ರುದ್ರಯ್ಯ ತಂದೆ ಮಲಕಯ್ಯ ಮಠ ಸಾ|| ಶಿವಪೂರ ಇವರ  ಮೇಲೆ ಕಾನೂನು ಕ್ರಮ ಕೈಗೊಳ್ಳವಂತೆ ಸೂಚಿಸಿ ವರದಿ ನಿಡಿದ್ದು ಸದರಿ ಸಾರಂಶದ  ಪ್ರಕಾರ ಪ್ರಕರಣ ವರದಿಯಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 24/04/2016 ರಂದು 1300 ಗಂಟೆಗೆ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ ಮನೆಯ ಜಾಗೆಯ ಸಂಭಂಧ ದ್ವೇಶ ಕಟ್ಟಿಕೊಂಡು ದಿನಾಂಕ 23/04/2016 ರಂದು 2100 ಗಂಟೆಗೆ ಆಪಾದಿತರೆಲ್ಲರೂ ಸೇರಿ ಫಿರ್ಯಾದಿಗೆ ಮತ್ತು ಆತನ ಮಗಳಿಗೆ ಅವಾಚ್ಯವಾಗಿ  ಬೈದು ಕೈಯಿಂದ ಮತ್ತು ಕಾಲಿನಿಂದ ಒದ್ದು ಹಲ್ಲೆ ಮಾಡಿ ಜೀವ ಭಯಪಡಿಸಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಲಿಖೀತ ಫಿರ್ಯಾದಿ ಸಾರಾಂಶದ ಪ್ರಕಾರ  ಪ್ರಕರಣ ವರದಿಯಾಗಿರುತ್ತದೆ.

23 April 2016

KALABURAGI DISTRICT REPORTED CRIMES.

ಅಫಜಲಪೊರ ಠಾಣೆ : ದಿನಾಂಕ 22-04-2016 ರಂದು 10:30 ಎ ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಮುದ್ದೆ ಮಾಲು ಮತ್ತು ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶವೆನೆಂದರೆ ನಾನು ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ ಈ ಮೂಲಕ ವರದಿ ಕೊಡುವುದೇನೆಂದರೆ. ಇಂದು ದಿನಾಂಕ 22-04-2016 ರಂದು 08:00 ಎ ಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರಾದ ಸುರೇಶ ಪಿಸಿ-801, ಜಗನ್ನಾಥ ಪಿಸಿ-530, ವಿಠ್ಠಲ ಪಿಸಿ-820,ರವರೊಂದಿಗೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ಪಟ್ಟಣದ ತಹಸಿಲ ಕಾರ್ಯಾಲಯದ ಹತ್ತಿರ ಇದ್ದಾಗ ಬಾತ್ಮಿ ಬಂದಿದ್ದೇನೆಂದರೆ, ಘತ್ತರಗಾ ಗ್ರಾಮದಲ್ಲಿ ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ|| ಇಬ್ಬರು ಅಫಜಲಪೂರ ಇವರನ್ನು ಅಫಜಲಪೂರ ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ, ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರು ಹಾಗು ಪಂಚರೊಂದಿಗೆ 08:15 ಎ ಎಮ್ ಕ್ಕೆ ನಮ್ಮ ಇಲಾಖಾ ವಾಹನದಲ್ಲಿ ಹೊರಟು. 08:45 ಎ ಎಮ್ ಕ್ಕೆ ಘತ್ತರಗಾ ಗ್ರಾಮದ  ಅಂಬೇಡ್ಕರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೇಡ್ಕರ ಸರ್ಕಲ ಹತ್ತಿರ ಶ್ರೀ ಭಾಗ್ಯವಂತಿ ಧೇವಿಯ ಗುಡಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ದೇವಸ್ಥಾನಕ್ಕೆ ಹೋಗಿ ಬರುವ ಭಕ್ತಾದಿಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿ ವ್ಯಕ್ತಿ ಹಣ ಕೇಳುತ್ತಿದ್ದರು, ಆಗ ಸದರಿ ವ್ಯಕ್ತಿ ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದನು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ನೀಜಾಮ @ ನೀಜಾಮ ಪಟೇಲ ತಂದೆ ಖಾದರಸಾಬ ಅತ್ತರ ವ: 38 ವರ್ಷ ಜಾ: ಮುಸ್ಲೀಂ ಉ: ಕೂಲಿ ಸಾ: ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 20,300/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವುಸದರಿಯವುಗಳನ್ನು ಪಂಚರ ಸಮಕ್ಷಮ 09:00 ಎ.ಎಮ್ ದಿಂದ 10:00 ಎ.ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ ಮರಳಿ ಠಾಣೆಗೆ 10:30 ಎ.ಎಮ್ ಕ್ಕೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದು ಅದರ  ಪ್ರಕಾರ ಗುನ್ನೆ ವರದಿಯಾಗಿರುತ್ತದೆ.
ಸೇಡಂ ಪೊಲೀಸ್ ಠಾಣೆ : ದಿನಾಂಕ : 22-04-2016 ರಂದು ಬೆಳಿಗ್ಗೆ 11 ಎ.ಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದ್ದು ಅದರ ಸಂಕ್ಷಿಪ್ತ ಸಾರಾಂಶ ಏನೆಂದರೆ ದಿನಾಂಕ : 15-02-2016 ರಂದು ಬಾಗಲಕೊಟದಲ್ಲಿ ನಮ್ಮ ಕಾಕನ ಮಗಳ ಮದುವೆ ಇದ್ದ ಪ್ರಯುಕ್ತ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಮದುವೆಗೆ ಹೊಗಿದ್ದೆವು ನಂತರ ದಿನಾಂಕ : 17-02-2016 ರಂದು ನಮ್ಮ ಪಕ್ಕದ ಮನೆಯವರಾದ ಚಂದ್ರಯ್ಯ ಎಂಬುವವರು ನಮಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ನೀವು ವಾಸವಾಗಿರುವ ಮನೆಯ ಬಾಗಿಲು ಕೀಲಿಯ ಕೊಂಡಿ ಮುರಿದು ಬಾಗಿಲು ತೆರೆದಿರುತ್ತದೆ ನೀವು ಬೆಗ ಬನ್ನಿರಿ ಅಂತಾ ತಿಳಿಸಿದರು ನಂತರ ನಾನು ಮತ್ತು ನನ್ನ ಹೆಂಡತಿ ದಿನಾಂಕ : 18-02-2016 ರಂದು ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯಲ್ಲಿದ್ದ ಅಲಮಾರಿಯ ಕೀಲಿಯ ಸಹ ಮುರಿದು ಅದ್ರೊಳಗೆ ಇದ್ದ ಮೂರು ತೊಲೆಯ ಬಂಗಾರದ ಬೆಂಡೊಳಿ, ಸಾಕಳಿ, ಜುಮಕಿ ಅಕಿ 75000/- ರೂ. ಅರ್ಧ ತೊಲೆಯುಳ್ಳ ಬಂಗಾರದ ಎರಡು ಉಂಗುರಗಳು ಅಕಿ 25000/- ಅರ್ಧ ತೊಲೆಯ ಬಂಗಾರದ ಲಾಕೆಟ ಅ.ಕಿ 10,000/- ಹಾಗೂ 12 ತೊಲೆಯ ಬೆಳ್ಳಿಯ ಆರತಿ ತಟ್ಟೆ ಅ.ಕಿ 3600/-  8 ತೊಲೆಯ ಬೆಳ್ಳಿಯ ಹಾಲಗಡಗ ಅ.ಕಿ 2400/- ಮತ್ತು ನಗದು ಹಣ 2000/- ರೂ. ಹೀಗೆ ಒಟ್ಟು 1,18,000/- ರೂ. ಬೆಲೆಬಾಳುವ ಬಂಗಾರ, ಬೆಳ್ಳಿಯ, ಸಾಮಾನುಗಳು ಹಾಗೂ ನಗದು ಹಣವನ್ನು ಯಾರೊ ಕಳ್ಳ್ರರು ದಿನಾಂಕ : 16-02-2016 ರ ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಕಳ್ಳರನ್ನು ಪತ್ತೆಮಾಡಲು ವಿನಂತಿ ಅಂತಾ ಕೊಟ್ಟ ವಗೈರೆ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ವರದಿಯಾಗಿರುತ್ತದೆ..
 ಅಫಜಲಪೊರ ಠಾಣೆ : ನಾನು ಬಸವಂತಪ್ಪ ಮಲ್ಲಪ್ಪ ಹೂಗಾರ ಡಿ.ಜಿ.ಎಮ್ (ಎಸ್.ವಿ) ಶ್ರೀ ರೇಣುಕಾ ಶುಗರ್ಸ ಲಿಮಿಟೇಡ್ ಹವಳಗಾ ಘಟಕ ಕಂಪನಿಯ ವತಿಯಿಂದ ಬರೆದುಕೊಡುವ ಪಿರ್ಯಾದಿ ಏನೆಂದರೆ, ನಮ್ಮ ಕಾರ್ಖಾನೆಯಲ್ಲಿ ಉಳಿದಂತಹ ಪ್ಲಾಸ್ಟಿಕ ಚೀಲಗಳನ್ನು ನಾವು ಮಾರಾಟ ಮಾಡುತ್ತೇವೆ. ಅದರಂತೆ ಸದ್ಯ ಈಗ ಖಾಲಿ ಪ್ಲಾಸ್ಟಿಕ ಚಿಲಗಳನ್ನು ನಿಜಾಮಪಾಶಾ ತಂದೆ ಮೈಹಿಬೂಬಪಾಶಾ ಮುಕಾಸಿ ಸಾ|| ದೇಸುಣಗಿ ತಾ|| ಜೇವರ್ಗಿ ಹಾ|| || ದಿನರ್ ಸ್ಟೀಲ್ ಪತ್ತೆ ನಗರ, ಪಿಪೇ ಲೈನ ರೋಡ್ ನನ್ನತ ನಗರ (ಐ.ಇ) ಹೈದ್ರಾಬಾದ ಎನ್ನುವವರಿಗೆ ಟೆಂಡರ ಆಗಿದ್ದು ಇರುತ್ತದೆ. ಸದರಿ ಪ್ಲಾಸ್ಟಿಕ್ ಚೀಲಗಳು ನಮ್ಮ ಕಾರ್ಖಾನೆಯ ಆವರಣದಲ್ಲಿ ಇಟ್ಟಿರುತ್ತೇವೆ. ಸದರಿ ಪ್ಲಾಸ್ಟಿಕ್ ಚೀಲಗಳ ಬಾಜು ಸಕ್ಕರೆ ಮಾಡಲು ಉಪಯೋಗಿಸವಂತಹ ನಿಕ್ಕಿಲ್ ಸ್ಕ್ರೀನ್ ತಗಡಗಳನ್ನು ಇಟ್ಟಿರುತ್ತೇವೆ.     ದಿನಾಂಕ 16-04-2016 ರಂದು ಬೆಳಿಗ್ಗೆ 9:30 ಗಂಟೆಗೆ ನಾನು ಕಾರ್ಖಾನೆಯಲ್ಲಿದ್ದಾಗ, ಸದರಿ ನಿಜಾಮಪಾಶಾ ಈತನು ನಮ್ಮ ಕಾರ್ಖಾನೆಯಲ್ಲಿ ಸ್ಕ್ರ್ಯಾಪ ಸಾಮಾನುಗಳನ್ನು ತಗೆದುಕೊಂಡು ಹೊಗಲು ಕ್ಯಾಂಟರ ನಂಬರ ಎಪಿ-28 ಟಿಸಿ-8493 ನೇದ್ದು ತಗೆದುಕೊಂಡು ಹಸನಸಾಬ ತಂದೆ ಸೈಪನಸಾಬ ಸಾ|| ದೇಸುಣಗಿ ತಾ|| ಜೇವರ್ಗಿ ಈತನೊಂದಿಗೆ ಕಾರ್ಖಾನೆಗೆ ಬಂದು ತಾನು ಟೆಂಡರ ಪಡೆದುಕೊಂಡಂತಹ ಪ್ಲಾಸ್ಟಿಕ್ ಚೀಲಗಳನ್ನು ಸದರಿ ವಾಹನದಲ್ಲಿ ನಿಜಾಮಪಾಶಾ ಮುಕಾಸಿ ಮತ್ತು ಅವನ ಜೋತೆಗೆ ಬಂದಿದ್ದ ಹಸನಸಾಬ ಬತ್ತನಾಳ ಇಬ್ಬರು ತುಂಬುತ್ತಿರುತ್ತಾರೆ. ಸದರಿಯವರು ಕ್ಯಾಂಟರ ವಾಹನದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತುಂಬುವಾಗ, ನಿಜಾಮಪಾಶಾ ಮುಕಾಸಿ ಹಾಗೂ ಹಸನಸಾಬ ಬತ್ತನಾಳ ಇಬ್ಬರು ಅಲ್ಲೆ ಇಟ್ಟಿದ್ದ ಬೆಲೆ ಬಾಳುವ ನಿಕ್ಕಿಲ್ ಸ್ಕ್ರೀನ ತಗಡುಗಳನ್ನು ಕಳ್ಳತನ ಮಾಡಿಕೊಂಡು ಹೋಗಬೆಕೆಂದು  ಇಬ್ಬರು ಕೂಡಿ ಸದರಿ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಮಡಚಿ  ಇಬ್ಬರು ಒಂದೊಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಯಾರಿಗೂ ಗೊತ್ತಾಗದಂತೆ ಕ್ಯಾಂಟರ ವಾಹನದಲ್ಲಿ ಹಾಕಿ ಕಳ್ಳತನ ಮಾಡುತ್ತಿದ್ದರು. ಆಗ ನಾನು ಮತ್ತು ನಮ್ಮ  ಸೆಕ್ಯೂರ್ಟಿ ಸಿಬ್ಬಂದಿಯವರಾದ ಪಕೀರಪ್ಪ ತಂದೆ ರೇವಪ್ಪ ಮುಕಾಸಿ ಹಾಗೂ ರೇವಣಸಿದ್ದ ತಂದೆ ಮಲ್ಲಪ್ಪ ದೇಗಿಲ ಮೂರು ಜನರು ಕೂಡಿ ಅವರಿಗೆ ಹಿಡಿಯಲು ಹೋದಾಗ ಸದರಿಯವರು ಕಳ್ಳತನ ಮಾಡಿದ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಅಲ್ಲೆ ಬಿಸಾಕಿ ಕ್ಯಾಂಟರ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿಯವರು ಕಳ್ಳತನ ಮಾಡಿದ ನಿಕ್ಕಿಲ್ ಸ್ಕ್ರೀನ್ ತಗಡುಗಳು ಅಂದಾಜು 30 ಕೆ.ಜಿ ತೂಕವಿದ್ದು, ಅಂದಾಜು 15,000/- ರೂ ಕಿಮ್ಮತ್ತಿನವುಗಳು ಇರುತ್ತವೆ. ಸದರಿಯವರು ಪ್ಲಾಸ್ಟಿಕ್ ಸಾಮಾನುಗಳನ್ನು ತಗೆದುಕೊಂಡು ಹೊಗಲು ತಂದಂತಹ ಹಾಗೂ ಕಳ್ಳತನ ಮಾಡಿದ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಹಾಕಿದ ಕ್ಯಾಂಟರ ನಂಬರ ಎಪಿ-28 ಟಿಸಿ-8493 ನೇದ್ದು ನಮ್ಮ ಕಾರ್ಖಾನೆಯಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾರೆ. ಇಂದು ಕಾರ್ಖಾನೆಯ ಮುಖ್ಯೆಸ್ಥರ ಆದೇಶದ ಮೇಲೆ ನಾನು ಸದರಿಯವರು ಕಳ್ಳತನ ಮಾಡಿದ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕ್ಯಾಂಟರ ವಾಹನವನ್ನು ಕಾರ್ಖಾನೆಯ ಮುಖ್ಯಸ್ಥರು ಹಾಗೂ ಉನ್ನತ ಅದಿಕಾರಿಗಳ ಸೂಚನೆ ಮೇರೆಗೆ ಇಂದು ತಡವಾಗಿ ಠಾಣೆಗೆ ತಂದು ತಮ್ಮ ಮುಂದೆ ಹಾಜರು ಪಡಿಸಿರುತ್ತೇನೆ. ಕಾರಣ ಸದರಿ 1) ನಿಜಾಮಪಾಶಾ ತಂದೆ ಮೈಹುಬೂಬ ಪಾಶಾ ಸಾ|| ದೇಸುಣಗಿ ತಾ|| ಜೇವರ್ಗಿ 2) ಹಸನಸಾಬ ತಂದೆ ಸೈಫನಸಾಬ ಬತ್ತನಾಳ ಸಾ|| ದೇಸುಣಗಿ ತಾ|| ಜೇವರ್ಗಿ ಇವರು ಟೆಂಡರ ಮೂಲಕ ನಮ್ಮ ಕಾರ್ಖಾನೆಯಲ್ಲಿ ಉಳಿದ ಪ್ಲಾಸ್ಟಿಕ್ ಚೀಲಗಳನ್ನು ಖರಿದಿ ಮಾಡಿ, ಅವುಗಳನ್ನು ತಗೆದುಕೊಂಡು ಹೋಗಲು ಟ್ಯಾಂಕರ ವಾಹನ ತಗೆದುಕೊಂಡು ಬಂದು, ಸದರಿ ಪ್ಲಾಸ್ಟಿಕ್ ಚೀಲಗಳನ್ನು ತಗೆದುಕೊಂಡು ಹೋಗದೆ ನಮ್ಮ ಕಾರ್ಖಾನೆಯ ಬೆಲೆ ಬಾಳುವ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಕಳ್ಳತನ ಮಾಡಿರುತ್ತಾರೆ. ಕಾರಣ ಸದರಿ ಕಳ್ಳತನ ಮಾಡಿ ನಾವು ನೋಡಿದ ನಂತರ ಸದರಿ ಬೆಲೆ ಬಾಳುವ ತಗಡುಗಳನ್ನು ಅಲ್ಲೆ ಬಿಸಾಕಿ ಓಡಿ ಹೊದವರ ಮೇಲೆ ಗುನ್ನೆ ವರದಿಯಾಗಿರುತ್ತದೆ.

22 April 2016

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ:-  ದಿನಾಂಕ 22/04/2016 ರಂದು ಶ್ರೀ ಸಂಜು ತಂದೆ ಲಕ್ಷ್ಮಣ ದಂಡನಕರ ಸಾ: ಭಟ್ಟರ್ಗಾ ರವರು ಠಾಣೆಗೆ ಹಾಜರಾಗಿ ನಮಗೂ ಮತ್ತು ನಮ್ಮೂರಿನ ಮಲೀಕಪ್ಪ ತಂದೆ ಹಸನಪ್ಪ ಇವರಿಗೂ ಈ ಹಿಂದೆ ಜಗಳಗಳು ಆಗಿ ವೈಷಮ್ಯ ಬೆಳೆದಿದ್ದು. ದಿನಾಂಕ 12/04/2016 ರಂದು ರಾತ್ರಿ 0800 ಗಂಟೆ ಸುಮಾರಿಗೆ ನನ್ನ ತಾಯಿ ಮುಕ್ತಾಬಾಯಿ ಮತ್ತು ನನ್ನ ತಂದೆ ಲಕ್ಷ್ಮಣ ಇಬ್ಬರೂ ಮನೆಯಲ್ಲಿ ಇರುವಾಗ 01) ರವಿ ತಂದೆ ಮಲೀಕಪ್ಪ, 02) ಪುಟ್ಟು ತಂದೆ ಮಲೀಕಪ್ಪ, 03) ಸುನೀಲ ತಂದೆ ಮಲೀಕಪ್ಪ ಇವರು ನಮ್ಮ ಮನೆಯ ಮುಂದೆ ನಿಂತು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನನ್ನ ರವಿ ಇತನು ಕಲ್ಲಿನಿಂದ ಜೋರಾಗಿ ಹೊಟ್ಟೆಗೆ ಹೊಡೆದಿದ್ದು. ಪುಟ್ಟು ಎಂಬಾತ ಕೈಯಿಂದ ಹೊಟ್ಟೆಯ ಮೇಲೆ ಗುದ್ದಿ ನೆಲಕ್ಕೆಹಾಕಿ ಹೊಡೆಯುತ್ತಿರುವಾಗ ಬಿಡಿಸಲು ಬಂದ ನನ್ನ ತಂದೆಗೆ ಸುನೀಲನು ಕೈಯಿಂದ ಕಪಾಳ ಮೇಲೆ ಹೊಡೆದಿದ್ದು. ಆ ದಿನ ನನ್ನ ತಾಯಿಗೆ ಉಪಚಾರ ಕುರಿತು ನಿಂಬರ್ಗಾ ಸರ್ಕಾರಿ ಆಸ್ಪತ್ರೆಗೆ ತಂದು ಉಪಚಾರ ಕೊಡಿಸಿ ಮರಳಿ ನಮ್ಮೂರಿಗೆ ಕರೆದುಕೊಂಡು ಹೋಗಿದ್ದು. ದಿನಾಂಕ 20/04/2016 ರಂದು ನನ್ನ ತಾಯಿಗೆ ಎದೆ ನೋವು ಜಾಸ್ತಿಯಾದ ಕಾರಣ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ. ಈ ಬಗ್ಗೆ ನನ್ನ ತಾಯಿಯ ಸೂಚನೆ ಮೇರೆಗೆ ಇಂದು ಪ್ರಕರಣ ದಾಖಲಿಸುತ್ತಿದ್ದು. ನನ್ನ ತಂದೆ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಭಯಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 21/04/2016 ರಂದು ಶ್ರೀ ಪುನ್ನು ತಂದೆ ಸೀತಾರಾಮರಾಠೋಡ ಸಾ:ಮಾಡಿಯಾಳ ತಾಂಡಾ ಇವರು ಠಾಣೆಗೆ ಹಾಜರಾಗಿ ನಮ್ಮ ಮನೆಯ ಮುಂದೆ ನೀರಿಗಾಗಿ ನಳದ ಗಾರಿ ಮಾಡಿದ್ದಕ್ಕಾಗಿ ಶ್ರೀ ಬಾಬು ತಂದೆ ರತ್ನು ರಾಠೋಡ, ಇನ್ನು 04 ಜನರು ಎಲ್ಲಾರೊ ಸಾ|| ಮಾಡಿಯಾಳ ತಾಂಡಾರವರುಗಳು ದ್ವೇಶದಿಂದ ದಿನಾಂಕ 20/04/2016 ರಂದು ಬೆಳಿಗ್ಗೆ 0800 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನನಗೆ ಮತ್ತು ನನ್ನ ಹೆಂಡತಿ ಮಗನಿಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯಪಡಿಸಿದ್ದು.  ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.