POLICE BHAVAN KALABURAGI

POLICE BHAVAN KALABURAGI

12 May 2016

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಜಯಶ್ರೀ ಗಂಡ ಶಂಕರ ಜಮಾದಾರ ಸಾಃ ಸುಲ್ತಾನಪೂರ ಹಾಃವಃ ರಾಜೀವಗಾಂದಿ ನಗರ ಫಿಲ್ಟರ್ ಬೇಡ ಕಲಬುರಗಿ ಇವರ ಗಂಡ ಶಂಕರ ತಂದೆ ಬಾಬುರಾವ ಜಮಾದಾರ ಇವರು ದಿನಾಂಕಃ 11.05.2016 ರಂದು ಬೆಳಿಗ್ಗೆ 7.30 ಗಂಟೆಯ ಸುಮಾರಿಗೆ ನನ್ನ ಗಂಡ ನಾನು ಕೆಲಸಕ್ಕೆ ಹೋಗಿ ಸೈಟ ನೋಡಿಕೊಂಡು  ಬರುತ್ತೇನೆ ಅಂತಾ ಹೇಳಿ ಹೋಗಿದ್ದು ಅಂದಾಜು 12.30 ಗಂಟೆಯ ಸುಮಾರಿಗೆ ಮತ್ತೆ ಮರಳಿ ಮನೆಗೆ ಬಂದು ಊಟ ಮಾಡಿ ಮತ್ತೆ ಅಂದಾಜು 1.00 ಗಂಟೆಯ ಸುಮಾರಿಗೆ ನಾನು ಹೋಟೆಲ್ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾರೆ. ನಾನು ನನ್ನ ಮಕ್ಕಳೊಂದಿಗೆ ನಮ್ಮ ಮನೆಯಲ್ಲೆ ಇದ್ದೆನು.  ಹೀಗೆ ಇರುವಾಗ  ಸುಮಾರ 15-20 ದಿವಸಗಳ ಹಿಂದೆ ನನ್ನ ಗಂಡನ ಗೆಳೆಯರೆ ಆಗಿರುವ ತಾಂಡ ಶಿವುಚಂಡುಲ, ಉಮೇಶ, ಸೈನಿಕ  ಹಾಗೂ ಅವರ ಇತರೆ 3-4 ಜನರೊಂದಿಗೆ ಯಾವದೂ ಹಳೆ ವೈಮನಸ್ಸಿನಿಂದ ಜಗಳ ಮಾಡಿಕೊಂಡು ನಂತರ ತಮ್ಮ ತಮ್ಮಲ್ಲೇ ರಾಜಿ ಮಾಡಿಕೊಂಡು ಸಹ ನನ್ನ ಗಂಡನ ಮೇಲೆ ಹಗೆತನ, ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ.  ದಿನಾಂಕಃ 11.05.2016 ರಂದು ಸಾಯಾಂಕಾಲ 6.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ನೀರು ತುಂಬುತ್ತಿರುವಾಗ ನಮ್ಮ ಬಡಾವಣೆಯ ಕೆಲವು ಜನರು ಓಡುತ್ತಾ ಬಂದು ಶಂಕರ ಇತನಿಗೆ ಕೊಲೆ ಮಾಡಿರುತ್ತಾರೆ ಅಂತಾ ನನಗೆ ಹೇಳಿದ್ದರಿಂದ ಒಮ್ಮೇಲೆ ನಾನು ಗಾಭರಿಯಾಗಿ ನನ್ನ  ನಾದಿನಿ ನಾಗಮ್ಮ ಇವರಿಗೂ ನಾನು ವಿಷಯ ತಿಳಿಸಿ ಅವಳೊಂದಿಗೆ ತಾಜ ನಗರದ ಗುಮ್ಮಾಸಾಬ ಮಜೀದ ಹಿಂದೆಗಡೆ ಇರುವ ಒಂದು ಮನೆಯಲ್ಲಿ ನನ್ನ ಗಂಡನಿಗೆ ಹೊಡೆದ ಜಾಗಕ್ಕೆ ಹೋಗಿ ನೋಡಲಾಗಿ, ನನ್ನ ಗಂಡನಿಗೆ ಮಾರಾಕಸ್ತ್ರಗಳಿಂದ ಎದೆಯ ಮೇಲೆ, ಕೈಗಳ ಮೇಲೆ ಹೊಡೆದು ಮತ್ತು ಕಲ್ಲುಗಳಿಂದ  ತೆಲೆಯ ಮೇಲೆ ಎತ್ತಿ ಹಾಕಿ ಬಾರಿ ರಕ್ತಗಾಯಪಡಿಸಿ ಕೊಲೆ ಮಾಡಿ ನನ್ನ ಗಂಡನ ಶವ ಅಲ್ಲೇ ಬಿಟ್ಟು ಹೋಗಿರುತ್ತಾರೆ. ಸದರಿ ನನ್ನ ಗಂಡನಿಗೆ ಈ ರೀತಿ ಕೊಲೆ ಮಾಡಲು ಕಾರಣವೆಂದರೆ ಸುಮಾರ 15-20 ದಿವಸಗಳ ಹಿಂದೆ ಆದ ಜಗಳದ ವೈಮನಸಿನಿಂದಲ್ಲೇ ನನ್ನ ಗಂಡನ ಗೆಳೆಯರಾದ ತಾಂಡ ಶಿವುಚಂಡುಲ, ಉಮೇಶ, ಸೈನಿಕ ಹಾಗೂ ಅವರ ಇತರೆ 3-4 ಸ್ನೇಹಿತರು ಕೂಡಿಕೊಂಡು ನನ್ನ ಗಂಡ ಶಂಕರ ಇತನಿಗೆ ಮಾರಾಕಸ್ತ್ರಗಳಿಂದ ಎದೆಯ ಮೇಲೆ, ಕೈಗಳ ಮೇಲೆ ಹೊಡೆದು ಮತ್ತು ಕಲ್ಲುಗಳಿಂದ  ತೆಲೆಯ ಮೇಲೆ ಎತ್ತಿ ಹಾಕಿ ಬಾರಿ ರಕ್ತಗಾಯಪಡಿಸಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ದರೊಡೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅನೀಲ ತಂದೆ ಬಾಲು ರಾಠೋಡ ಸಾ: ಹೋತಪೇಠ ತಾ: ಶಹಾಪೂರ ಜಿ: ಯಾದಗೀರ ಹಾ: :ಮನಂ 784 ಪಲ್ಸಪೇ ಗಣೇಶವಾಡಿ ತಾ:ಪನವೇಲ ಜಿ:ರಾಯಘಡ.ಮಹಾರಾಷ್ಟ್ರ ರಾಜ್ಯ ರವರು ತನ್ನ ತಂಗಿ ಮಂಜುಳಾ ಕುಡಿಕೊಂಡು ನಮ್ಮ ಮಾವನ ಊರಾದ ಗೂಡುರ ಗ್ರಾಮಕ್ಕೆ ದೇವಿಯ ಪೂಜೆಗೆ ಹೋಗಿ ಪೂಜೆ ಮುಗಿಸಿಕೊಂಡು ದಿನಾಂಕ 11-05-2016 ರಂದು ಬೆಳಗಿನ ಜಾವ 4 ಗಂಟೆಗೆ ನನ್ನ ಮೊಟಾರ ಸೈಕಲ್ ನಂ ಎಮ್ ಎಚ್ -46 ಎಎಸ್-1127 ನೇದ್ದರ ಮೇಲೆ ನಾನು ಮತ್ತು ನ್ನ ತಂಗಿ ನಮ್ಮೂರಾದ ಹೂತಪೇಟದಿಂದ ಮಾಹಾರಾಷ್ಟ್ರ ರಾಜ್ಯದ ಪನವೇಲಗೆ ಹೊರಟಿದ್ದು ಬೆಳಗಿನ ಜಾವ 5-30 ಗಂಟೆಯ ಸುಮಾರಿಗೆ  ಎನ್ ಎಚ್ 218 ರಸ್ತೆಯಲ್ಲಿ  ಸರಡಗಿ ಕ್ರಾಸ ದಾಟಿ ಹೊಗುತ್ತಿರುವಾಗ ಒಂದು ಸಿಲ್ವರ ಕಲರ ಕಾರ ಬಂದು ನಮ್ಮ ಮೋಟಾರ ಸೈಕಲ್ ಗೆ ಅಡ್ಡ ನಿಲ್ಲಿಸಿ ಕಾರಿನಿಂದ ಇಳಿದು ಬಂದ 4-5 ಜನರು ನನ್ನ ಹೆಲ್ಮೇಟ ತೆಗೆದು ಕೈಯಿಂದ ಕಪಾಳಕ್ಕೆ ಹೊಡೆದು ನನಗೆ ಮತ್ತು ನನ್ನ ತಂಗಿಗೆ ಕಾರ ಮೇ ಬೈಟ ಅಂತಾ ಅಂದರು ಆಗಾ ನಾನು ಅವರಿಗೆ ಏಲ್ಲಿಗೆ ಹೋಗಬೇಕು ಅಂತಾ ಕೇಳಿದಾಗ ಅವರು ನೀನು ಮೊದಲು ಕಾರಲ್ಲಿ ಕುಳಿತಿಕೋ ಅಂತಾ ಕೈಯಿಂದ ಹೊಡೆದು ನಮ್ಮಿಬ್ಬರನ್ನು ಕಾರಿನಲ್ಲಿ ಕೂಡಿಸಿದಾಗ ನಾನು ನನ್ನ ಮೊಟಾರ ಸೈಕಲ್ ಅಂತಾ ಕೆಳಲು  ಅವರು ನನಗೆ ನಿನ್ನ ಮೋಟಾರ ಸೈಕಲ ಹಿಂದೆ ಬರುತ್ತದೆ ಅಂತಾ ಹೇಳಿ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಇಳಿದು ಹೋಗಿ ನಮ್ಮ ಹಿಂದೆ ಮೋಟಾರ ಸೈಕಲ ತೆಗೆದುಕೊಂಡು ಬರುತ್ತಿದ್ದನು ನಮ್ಮನ್ನು ಅವರ ಕಾರಿನಲ್ಲಿ ಮಧ್ಯದ ಶೀಟನಲ್ಲಿ ಕೂಡಿಸಿದ್ದು ದಾರಿ ಮಧ್ಯದಲ್ಲಿ ನಮಗೆ ಚಾಕು ತೋರಿಸಿ ಹೆದರಿಸಿ ನಮ್ಮ ಹತ್ತಿರ ಇದ್ದ ನಗದು ಹಣ 7,500/- ರೂ, ಎರಡು ಮೊಬೈಲ್, ಒಂದು ಯಮಹಾ ಮೋಟರ ಸೈಕಲ್  ಕಸಿದುಕೊಂಡು ನಮಗೆ ಹಾಗೆ ವಾಹನದಲ್ಲಿ ಸಿಂದಗಿ ತಾಲೂಕಿನ ಇಬ್ರಾಹಿಂಪೂರ ಸಿಮಾಂತರದಲ್ಲಿ ಇರುವ ಒಂದು ಖನಿ ಹತ್ತಿರ ಬಿಟ್ಟು ಅಲ್ಲಿಂದ ಹೋಗುವಾಗ ನಿವು ಯಾರಿಗಾದರು ಹೇಳಿದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೆದರಿಸಿ ಹೋಗಿರುತ್ತಾರೆ ಸದರ ಕಾರ ನಂಬರ ಕೆಎ – 36 ಎನ್ – 3957 ಇದ್ದು ಸದರಿಯವರು 25 ರಿಂದ 30 ವರ್ಷ ವಯಸ್ಸಿನವರಿದ್ದು  ಹಿಂದಿ ಮರಾಠಿ ಭಾಷೆ ಮಾತನಾಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.   
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 11-05-2016 ರಂದು ಅಫಜಲಪೂರ ಪಟ್ಟಣದ ಅಕ್ಕಮಾಹಾದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಕ್ಕ ಮಾಹಾದೇವಿಯ ಗುಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು ಅಕ್ಕಮಾಹಾದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಜೂಜಾಡುತಿದ್ದ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಬಿಂದು ತಂದೆ ಗುಂಡೇರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ 2) ರಾಜು ತಂದೆ ಶಂಕರ ಬಡಿಗೇರ ಸಾ|| ಅಫಜಲಪೂರ 3) ಮಂಜೂರ ತಂದೆ ಮುಸ್ತಾಪ್ ಪಟೇಲ ಸಾ|| ಲಿಂಬಿ ತೋಟ ಅಫಜಲಪೂರ 4) ರಾಜಶೇಖ ತಂದೆ ನೂರುದ್ದಿನ್ ಶೇಖ ಸಾ|| ಲಿಂಬಿತೋಟ ಅಫಜಲಪೂರ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 2200/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸುರಕ್ಷತಾ ಕ್ರಮ ಕೈಕೊಳ್ಳದ ಕಾರಣ ಕೂಲಿ ಕಾರ್ಮಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಉತ್ಲಾಲ ತಂದೆ ರಬಿ ಹಲಾದಾರ ಸಾ:ಪಬ್ನಾಪಾಡಾ ತಾ:ಕಿಸಮತ್ ಸುಲ್ತಾನಪುರ ಜಿ:ಮಲದಾ ರಾಜ್ಯ ಪಶ್ಚಮ ಬಂಗಾಳ ಇವರು ಮತ್ತು ತಮ್ಮ ಕಿತಿಸ್ ಹಾಗು ಪ್ರಪುಲ @ ಗೋಪಿ 03 ಜನ ಕೂಡಿ ಕೂಲಿಕೆಲಸದ ಕುರಿತು ಕಲಬುರಗಿ ನಗರದ ಹೈಕೊರ್ಟ ಮುಂದುಗಡೆ ಇರುವ ಅಶೋಕಕುಮಾರ ಇವರ ಮನೆ ಕಟ್ಟುವ ಕೆಲದ ಕುರಿತು ಬಂದಿದ್ದು ದಿನಾಂಕ 11-05-2016 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ಪ್ರತಿ ದಿವಸದಂತೆ ಕೆಲಸಕ್ಕೆ ಬಂದು ಹಾಜರಾಘಿ ನಾನು ಮತ್ತು ನನ್ನ ತಮ್ಮ ಕಿತ್ತೇಶ ಇಬ್ಬರೂ ಮೊದಲು ಸ್ಟೇರ್ ಕೇಸ್ ಏರಿ ಮೇಲಿನ ಮಹಡಿಗೆ ಹೋಗಿದ್ದು ಅನಂತರ ಪ್ರಪುಲ್ಲ @ ಗೋಪಿ ಇತನು ಹಿಂದೆ ಸಾವಕಾಶವಾಗಿ  ಸಿಡಿ ಏರಿ ಬರುತ್ತಿದ್ದನು. ಅದೇ ವೇಳೆಗೆ ಬಿಲ್ಡಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಜಯಚಂದ್ರ ರಾಠೋಡ ಇತನು ಲಿಫ್ಟ್ ಎಂಗಲ್ ಮೇಲೆ ಹತ್ತುವಾಗ ಮೇಲಿನ ಲೆಂಟಲಗೆ ತಾಗಿ ಲೆಂಟಲ್ ಉರುಳಿ ಕೆಳಗೆ ಬಿದಿದ್ದು ಈ ಲೆಂಟಲ್ ಸಿಡಿ ಏರಿ ಮೇಲೆ ಬರುತ್ತಿದ್ದ ಪ್ರಫೂಲ್ @ ಗೋಪಿಯ ತಲೆಯ ಹಿಂಬಾಗ ಯಡಕಿವಿಯ ಪಕ್ಕದಲ್ಲಿ ಪೆಟ್ಟು ಬಿದ್ದಿದ್ದು, ಆಗ ಅವನು ಚೀರಾಡುವಾಗ ನಾನು ಮತ್ತು ನನ್ನ ತಮ್ಮ ರಿತೇಶ ಓಡಿ ಬಂದೆವು ಮತ್ತು ಜಯ ಚಂದ್ರ ರಾಠೋಡ ಹಾಗೂ ಕಾಂಟ್ರೆಕ್ಟರ್ ( ಇಂಜೀನಿಯರ್) ವಿಶ್ವನಾಥ ಕಂಡೇರಪಲ್ಲಿ ಇವರೆಲ್ಲರೂ ಬಂದರು ಆಗ ಪ್ರಫೂಲ @ ಗೋಪಿಗೆ ನೋಡಲಾಗಿ ಎಡ ಕಿವಿಯ ಹಿಂದುಗಡೆ ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ಯಡ ಮತ್ತು ಬಲಗಣ್ಣಿನ ಹತ್ತಿರ ಪೆಟ್ಟಾಗಿ ರಕ್ತ ಬಂದಿರುತ್ತದೆ. ಎಡಭುಜ ಹಾಗೂ ಬಲ ಭೂಜಕ್ಕೆ ಪೆಟ್ಟಗಿರುತ್ತದೆ. ಆಗ ಸುಮಾರು 10-15 ಗಂಟೆ ಎ.ಎಂ ಆಗಿತ್ತು ನಂತರ ನಮ್ಮ ಇಂಜಿನಿಯರ್ (ಕಾಂಟ್ರೆಕ್ಟರ್ ) ಇವರು ಒಂದು ಆಂಬುಲೆನ್ಸ ತರಿಸಿ ಪ್ರಫೂಲ್ @ ಗೋಪಿಗೆ ಕರೆದುಕೊಂಡು ಉಪಚಾರ ಕುರಿತು ಕಲಬುಗರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ವೈದ್ಯಾಧಿಕಾರಿಗಳಿಗೆ ಬಂದು ತೋರಿಸಲಾಗಿ ಮೃತ ಪಟ್ಟಿರುವುದಾಗಿ ತಿಳಿಸಿದರು. ಪ್ರಫೂಲ್ @ ಗೋಪಿ ತಂದೆ ಗೋವಿಂದ ಅಲ್ದಾರ ಸದ್ಯ ನವಲಗಿ ಲೇಔಟ್, ಹೈಕೋರ್ಟ ಎದುರು ಕಲಬುರಗಿ, ಇತನು ಕೆಲಸಕ್ಕೆ ಬಂದು ಮೇಲಂತಸಕ್ಕೆ ಹೋಗುವಾಗ ಸಿಡಿ ಏರುತ್ತಿರುವಾಗ ಜಯಚಂದ್ರ ರಾಠೋಡ ಇತನು ಲಿಪ್ಟ್ ಎಂಗಲ್ ಎಳೆಯುತ್ತಿರುವಾಗ ಲಿಪ್ಟ ಎಂಗಲ್ ತಾಗಿ ಲಿಂಟಲ್ ಉರುಳಿ ಬಿದ್ದು ಪ್ರಫೂಲ್ @ ಗೋಪಿಯ ತೆಲೆಗೆ ಬಿದ್ದು, ಭಾರಿ ಘಾಯಗೊಂಡ  ಮೃತಪಟ್ಟಿರುತ್ತಾನೆ. ಸದರಿ ಜಯಚಂದ್ರನು ಲಿಪ್ಟ್ ಎಂಗಲ್ ಜಗ್ಗುವಾಗಿ ನಿಷ್ಕಾಳಜಿತನ ತೋರಿಸಿದ್ದು ಅಲ್ಲದೇ ಇಂಜೀನಿಯರ್ ಸಾಹೇಬರಾದ ವಿಶ್ವನಾಥ ಕಂಡೇರಪಲ್ಲಿ ಹಾಗೂ ಮನೆಯ ಮಾಲಿಕರಾದ ಅಶೋಕಕುಮಾರ  ತಂದೆ ಅಣ್ಣಾರಾವ ಹೋಳಕುಂದಿ ಇವರು ಕೆಲಸ ಮಾಡುವ ಕೂಲಿ ಕಾರ್ಮಿಮಕರಿಗೆ ಸರಿಯಾದ ಸುರಕ್ಷತಾ ವಿಧಾನಗಳನ್ನು ಕೈಕೊಳ್ಳದ್ದರಿಂದ   ಈ ಘಟನೆ ಸಂಭವಿಸಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.