POLICE BHAVAN KALABURAGI

POLICE BHAVAN KALABURAGI

31 October 2012

GULBARGA DISTRICT REPORTED CRIMES


: ಪತ್ರಿಕಾ ಪ್ರಕಟಣೆ:
ಗುಲಬರ್ಗಾ ನಗರದ ರೋಜಾ ಪೊಲೀಸ ಠಾಣೆ ಗುನ್ನೆ ನಂ:77/2012 ಕಲಂ,406,419,420 ಸಂ. 149 ಐಪಿಸಿ ನೇದ್ದರಲ್ಲಿ 395 ಜನರ ಪಾಸ್ ಪೋರ್ಟಗಳನ್ನು ತೆಗೆದು ಕೊಂಡು ಹೊರದೇಶಕ್ಕೆ (ಹಜ್ ಯಾತ್ರೆಗೆ) ಹೋಗಲು ಪರವಾನಿಗೆ ಕೊಡಿಸುತ್ತೇವೆಂದು,  ಐದು ಜನರಾದ  ಮಹ್ಮದ ಜಾಫರ ತಂದೆ ಮಹ್ಮದ ಶಲಾರೋದ್ದೀನ್, ಮಹ್ಮದ ರಹೀಮತುಲ್ಲಾ ತಂದೆ ಮಹ್ಮದ ಅಸಾದುಲ್ಲಾ, ಶೇಖ ಅಕ್ತರ ಫಾತೀಮಾ ಗಂಡ ಶೇಖ ಮಹ್ಮದ ಸಲೀಂ ಇವರುಗಳನ್ನು ದಿನಾಂಕ:21.09.2012 ರಂದು ದಸ್ತಗಿರ ಮಾಡಿ ಅವರಿಂದ 19 ಮೂಲ ಪಾಸಪೋರ್ಟಗಳು ಹಾಗೂ ಅವರಿಂದ 6,69,500/- ರೂಪಾಯಿಗಳ ನಗದು ಹಣ ವಶಪಡಿಸಿಕೊಳ್ಳಲಾಗಿತ್ತು. ದಿನಾಂಕ:08.10.2012 ರಂದು ಶೇಖ ಮಹ್ಮದ ಸಲೀಮ ಇತನಿಗೆ  ದಸ್ತಗಿರ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಕೊಡಲಾಗಿರುತ್ತದೆ. ಸದರಿ ಪ್ರಕರಣದಲ್ಲಿ  ಗುಲಬರ್ಗಾ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್, ಅಪರ ಪೊಲೀಸ್ ಅಧೀಕ್ಷಕರು, ಶ್ರೀ ಕಾಶಿನಾಥ ತಳಕೇರಿ, ಗುಲಬರ್ಗಾ (ಬಿ) ಉಪ-ವಿಭಾಗದ ಡಿ.ಎಸ್.ಪಿ.ರವರಾದ ಶ್ರೀ, ಎ.ಡಿ.ಬಸಣ್ಣವರ ರವರ ಮಾರ್ಗದರ್ಶನದಲ್ಲಿ  ತನಿಖಾಧಿಕಾರಿ ಶ್ರೀ ಎಂ.ನಾರಾಯಣಪ್ಪ ಪಿ.ಐ. ರೋಜಾ ಪೊಲೀಸ ಠಾಣೆ ಹಾಗೂ ತನಿಖಾ ತಂಡದಲ್ಲಿರುವ ಡಾ:ಸುಧಾಕರ್ ಪಿ.ಎಸ್.ಐ. ಡಿ.ಸಿ.ಆರ್.ಬಿ. ರವರು ಮತ್ತು  ಅವರ ಸಿಬ್ಬಂದಿಯವರು ಸದರಿ ಪ್ರಕರಣದಲ್ಲಿಯ 336 ಮೂಲ ಪಾಸಪೋರ್ಟಗಳನ್ನು ಮುಂಬೈ ನಗರದ ಶಿವಾಜಿ ನಗರ ಪೊಲೀಸ ಠಾಣೆ ರವರು ತಮ್ಮ ಪ್ರಕರಣದಲ್ಲಿ ಜಪ್ತ  ಮಾಡಿ ತಾಬಾಕ್ಕೆ ತೆಗೆದು ಕೊಂಡು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಅವುಗಳನ್ನು ನ್ಯಾಯಾಲಯದಿಂದ ಮುಂದಿನ ತನಿಖೆಗಾಗಿ ತಂದು ಹಾಜರ ಪಡಿಸಿದ್ದು ಈಗಾಗಲೆ ತನಿಖೆಯಲ್ಲಿ 355 ಪಾಸಪೋರ್ಟ ಹಾಗೂ 6,69,500/- ರೂಪಾಯಿಗಳನ್ನು ವಶಪಡಿಸಿಕೊಂಡಿದ್ದು ಇವುಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗುವುದು ಸಂಬಂಧ ಪಟ್ಟವರು ತಮ್ಮ ಮೂಲ ದಾಖಲಾತಿಗಳನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಾಲಯದಿಂದ ಪಡೆದು ಕೊಳ್ಳಬಹುದು. 
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:30-10-2012 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ನನ್ನ ಖಾಸಗಿ ಕೆಲಸದ ನಿಮಿತ್ಯ ನಮ್ಮೂರಿನಿಂದ ಕಮಲಾಪೂರಕ್ಕೆ ಬಂದಿದ್ದು, ಗುಲಬರ್ಗಾದಲ್ಲಿರುವ ಮ್ಮ ಸಂಭಂದಿಕರನ್ನು ಮಾತನಾಡಿಸಿಕೊಂಡು ಕ್ರೂಜರ್ ಜೀಪ್ ನಂ: ಎಪಿ-11ಡಬ್ಲೂ-8061 ನೇದ್ದರಲ್ಲಿ ಕುಳಿತುಕೊಂಡಿದ್ದು ತನ್ನಂತೆ ಈ ಮೊದಲು ಕ್ರೂಜರ್ ಜೀಪಿನಲ್ಲಿ ಕೆಲವು ಪ್ರಯಾಣಿಕರು ಕುಳಿತಿದ್ದರು. ರಾತ್ರಿ 7-45 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 218 ಸಾನದಗಿ ಸೇತುವೆ ಸಮೀಪ ಹೋಗುತ್ತಿರುವಾಗ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಎದುರುಗಡೆಯಿಂದ ಟಿಪ್ಪರ್ ವಾಹನ ನಂ:ಕೆಎ-56-0133 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತ ಕ್ರೂಜರ್ ಜೀಪ್ ಮತ್ತು ಟಿಪ್ಪರ್ ವಾಹನ ಒಂದಕ್ಕೊಂದು ಡಿಕ್ಕಿ ಹೊಡೆದು ಜೀಪಿನಲ್ಲಿ ಕುಳಿತ ನನಗೆ ಮತ್ತು ಕಲ್ಯಾಣಿ ತಂದೆ ಸಂಭಣ್ಣ ಮಾಂಗ ಸಾ||ತಡಕಲ್ ಮತ್ತು ಶ್ರೀಮಂತರಾವ ತಂದೆ ಯಶ್ವಂತರಾವ ಪಟ್ಟಣಕರ ಕಮಲಾಪೂರ ಎ.ಎಸ್.ಐ ಎಲ್ಲರಿಗೂ  ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಅಲ್ಲದೇ ಕ್ರೂಜರ್ ಜೀಪಿನಲ್ಲಿ ಕುಳಿತ ಇತರ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ. ಕಾರಣ ವಾಹನಗಳ ಚಾಲಕರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದಶರಥ ತಂದೆ ದೇವಪ್ಪ ಜಾನ್ ಸಾ:ಜೀವಣಗಿ ಗ್ರಾಮ ತಾ:ಜಿ: ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:113/2012 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಮಾಡಿ ಕೊಲೆಗೆ ಪ್ರಯತ್ನ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ, ಕಾಶಿಬಾಯಿ ಗಂಡ ಸುನೀಲ್ ಗೌರ ವ:20 ವರ್ಷ ಸಾ; ನವನಿಹಾಳ ತಾ;ಜಿ;ಗುಲಬರ್ಗಾ ನನಗೆ ಒಂದೂವರೆ ವರ್ಷದ ಹಿಂದುಗಡೆ ಸುನೀಲ ತಂದೆ ಶಂಕರ ಗೌರೆ ಸಾ: ನವನಿಹಾಳ ಇತನೊಂದಿಗೆ ನವನಿಹಾಳ ಗ್ರಾಮದಲ್ಲಿ ಗುರುಹಿರಿಯರ ಸಮಕ್ಷಮ ಬಂಗಾರ ಮತ್ತು ನಗದು ಹಣ ಮನೆಯ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು, ಮದುವೆಯಾಗಿ 2 ತಿಂಗಳ ನಂತರ ಮನೆಯಲ್ಲಿ ಅತ್ತೆಯಾದ ಗುಂಡಮ್ಮ, ಮೈದುನರಾದ ಸಂಜೀವ, ಮತ್ತು ವಿಜಯ ಇವರೆಲ್ಲರೂ ಕೂಡಿಕೊಂಡು ನನಗೆ ತವರು ಮನೆಯಿಂದ ಬಂಗಾರ ಮತ್ತು ಖರ್ಚು ಮಾಡಲು ಹಣ ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತೊಂದರೆ ನೀಡುತ್ತಿದ್ದರು.ಈ ವಿಷಯವನ್ನು ನನ್ನ ತವರು ಮನೆಯಲ್ಲಿ ತನ್ನ ಅಣ್ಣ ತಮ್ಮಂದಿರಿಗೆ ಮತ್ತು ಸಂಭಂದಿಕರಿಗೆ ತಿಳಿಸಿದ್ದು, ಅವರೆಲ್ಲರೂ ಕೂಡಿಕೊಂಡು ನನ್ನ ಗಂಡ, ಅತ್ತೆ ಮತ್ತು ಮೈದುನರನ್ನು ಊರಿಗೆ ಕರೆಯಿಸಿ ಬುದ್ದಿಮಾತು ಹೇಳಿ ನನ್ನ ಗಂಡನ ಮನೆಗೆ ಕೊಟ್ಟು ಕಳುಹಿಸಿರುತ್ತಾರೆ. ದಿನಾಂಕ:29/10/2012 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಗಂಡ, ಅತ್ತೆ ಗುಂಡಮ್ಮ ಹಾಗೂ ಮೈದುನರಾದ ಸಂಜೀವ ಮತ್ತು ವಿಜಯ ಇವರೆಲ್ಲರೂ ಕೂಡಿಕೊಂಡು ವಿನಾಃಕಾರಣ ಅವಾಚ್ಯವಾಗಿ ಬೈದು ಅತ್ತೆ ಗುಂಡಮ್ಮ ಇವಳು ಮನೆಯಲ್ಲಿದ್ದ ಸೀಮೇ ಎಣ್ಣೆಯನ್ನು ತಂದು ನನ್ನ ಮೈ ಮೇಲೆ ಹಾಕಿದ್ದು, ನಾನು ಅವರಿಂದ ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮೈದುನರಾದ ಸಂಜೀವ ಮತ್ತು ವಿಜಯ ಇವರೂ ಕೂಡ ಅಲ್ಲಿಗೆ ಬಂದು ಮನೆಯ ಬಾಗಿಲು ಹಾಕಿದ್ದು, ನನ್ನ ಗಂಡ ಸುನೀಲ್ ಇತನು ಒಂದು ಕಡ್ಡಿ ಪೆಟ್ಟಿಗೆಯಿಂದ ಬೆಂಕಿ ಕೊರೆದು ನನ್ನ ಮೈಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ನಾನು ಚಿರಾಡುತ್ತಾ ಮನೆಯ ಹೊರಗಡೆ ಬಂದಾಗ ಜನರು ಜಮಾವಣೆಗೊಂಡು ಉಪಚಾರ ಕುರಿತು ಹುಮನಾಬಾದಕ್ಕೆ ಕರೆ ತಂದು ನಂತರ ಹೆಚ್ಚಿನ ಉಪಚಾರ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ, ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:111/2012 ಕಲಂ 498 (ಎ), 307, 504.506.ಸಂಗಡ 34 ಐ.ಪಿ.ಸಿ ಸಂಗಡ ಕಲಂ 3 ಮತ್ತು 4 ಡಿ.ಪಿ. ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ, ತಾನಾಜಿ ತಂದೆ ಸಂಬಾಜಿ ಜಾಧವ ಉ||ಲಾರಿ ಡ್ರೈವರ ಸಾ; ಮಂಗಲವೇಡ ಜಿ||ಸೋಲಾಪೂರ ರವರು ನನ್ನ ಲಾರಿ ನಂ ಎಮ್ ಹೆಚ್ 13 ಆರ್ 4363 ನೇದ್ದು ನಾನೆ ಚಲಾಯಿಸುತ್ತಾ ಬಾಡಿಗೆ ಹೊಡೆಯುತ್ತಾ ನನ್ನ ಹೆಂಡತಿ ಮಕ್ಕಳೊಂದಿಗೆ ಜೀವಸುತ್ತೇನೆ ದಿನಾಂಕ:30/10/2012 ರಂದು ಸಾಯಂಕಾಲ 5.00 ಗಂಟೆಗೆ ರಾವೂರ ಗ್ರಾಮದಲ್ಲಿ ಪರ್ಸಿ ಲೋಡ ತುಂಬಿಕೊಂಡು ಬರುವಾಗ ಆಳಂದ ಮಾರ್ಗವಾಗಿ ಮಂಗಲಮೇಡ ಗ್ರಾಮಕ್ಕೆ ಹೋಗುತ್ತಿರುವಾಗ ರಾತ್ರಿ 10-00 ಗಂಟೆ ಸುಮಾರಿಗೆ ಆಳಂದ ಪಟ್ಟಣದ ಸಮೀಪದಲ್ಲಿಯ ಡೋಗಿ ನಾಲಾ ಚಡಾಣದಲ್ಲಿ ನನ್ನ ಲಾರಿ ಆಕಸ್ಮಿಕವಾಗಿ ಕೆಟ್ಟ ನಿಂತಿತು ನಾನು ಲಾರಿಯಿಂದ ಕೆಳಗೆ ಇಳಿದು ನೋಡುತ್ತಿದ್ದಾಗ 6 ಜನರ ಗುಂಪು ನನ್ನ ಬಳಿ ಬಂದವರೇ ನನಗೆ ಹಿಡಿದು ಪಕ್ಕದ ಸೂರ್ಯಪಾನ ಬೆಳೆ ಇರುವ ಹೊಲದಲ್ಲಿ ಒಯ್ದು ನನ್ನ ಮೈಲೆಲಿನ ಅಂಗಿ ಪ್ಯಾಂಟ ಕಳಚಿ ಅಂಗಿ ಜೇಬಿನಲ್ಲಿದ್ದ 2000/- ರೂ ನಗದು ಹಣ ಹಾಗೂ ಒಂದು ಹಳೆಯ ಮೋಬೈಲ್  ಅ||ಕಿ|| 1000 ರೂ ಇದ್ದು ಜಬರ ದಸ್ತಿಯಿಂದ ತಗೆದುಕೊಂಡು ಹೋದರು ಸದರಿಯವರು ಮುಖಕ್ಕೆ ಮತ್ತು ತಲೆಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರು ನಂತರ ನಾನು ನನ್ನ ಲಾರಿಗೆ ನೋಡಲಾಗಿ ಲಾರಿಯ ಡೀಜಲ್ ಪೈಪ ಲಿಕೇಜ ಆಗಿದ್ದು ನೋಡಿ ಸರಿಪಡಿಸಿಕೊಂಡು ಆಳಂದಕ್ಕೆ ಬಂದಿದ್ದೇನೆ. ಆದಕಾರಣ ನನ್ನಿಂದ ಹಣ ಮತ್ತು ಮೋಬೈಲ ಆಲ್ಲದೇ ನನ್ನ ಮೈಮೇಲಿನ ಬಟ್ಟೆಗಳು ತಗೆದುಕೊಂಡು ಕಸಿದುಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 211/2012 ಕಲಂ ಐಪಿಸಿ 395 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 October 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಹರೀಶಕುಮಾರ ತಂದೆ ರಾಮು ಸಾ:ಹೆಚ್‌ಎಮ್‌‌ಪಿ ಕಾಲೋನಿ ಶಹಾಬಾದ ರವರು  ನಾನು ದಿನಾಂಕ:28/10/2012 ರಂದು 6.00 ಪಿಎಂ ಸುಮಾರಿಗೆ ನಮ್ಮ  ಕಾಲೋನಿಯ ಟೇನಿಸನ್‌ ರವರ ಸಿಟಿ-100 ಮೋಟಾರ ಸೈ ನಂ.ಕೆಎ-32 ಆರ್‌-1540 ನೇದ್ದನ್ನು ತೆಗೆದುಕೊಂಡು ನನ್ನ ಗೆಳೆಯ ರಮೇಶನೊಂದಿಗೆ, ರಮೇಶನ ಹೊಲಕ್ಕೆ ಹೋಗಿ ಮರಳಿ ಶಹಾಬಾಕ್ಕೆ ಬರುವಾಗ ಮೊಟಾರ ಸೈಕಲ ರಮೇಶ ಇತನು ಚಲಾಯಿಸುತ್ತಿದ್ದನು. ನಾನು ಹಿಂದುಗಡೆ ಕುಳಿತಿದ್ದೆ.  ಅಂದಾಜು 7.30 ಪಿಎಂ ಸುಮಾರಿಗೆ ನಾವು ಕಾಗಿಣಾ ಬ್ರೀಜ ದಾಟಿ ವೇಟ ಬ್ರೀಜ ಹತ್ತಿರ ಮೋಟಾರ ಸಿಲ್ಲಿಸಿ ಮೋಟಾರ ಸೈಕಲದಿಂದ ಇಳಿಯುತ್ತಿರುವಾಗ ಹಿಂದುಗಡೆಯಿಂದ ಒಬ್ಬ ಟಂಟಂ ಚಾಲಕನು ತನ್ನ ಟಂಟಂ ಅನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಲಗಾಲಿಗೆ ಡಿಕ್ಕಿ ಪಡಿಸಿ ಭಾರಿ ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:136/2012 ಕಲಂ:279,337,338 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌‌   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ: ಶ್ರೀ ಮಾರುತಿ ತಂದೆ ಮಾಣಿಕರಾವ ಪಿಂಪಲೆ ಸಾಃ ಎಂ.ಬಿ ನಗರ ಹೊಸ ಬಡಾವಣೆ ಗುಲಬರ್ಗಾ ರವರು ದಿನಾಂಕ:28/10/2012 ರಂದು ರಾತ್ರಿ 11:00 ಪಿ.ಎಮ. ಕ್ಕೆ ಎಂ.ಬಿ ನಗರ ಹೊಸ ಬಡಾವಣೆಯಲ್ಲಿರುವ ಖಾನ್ ಕಾಂಪ್ಲೆಕ್ಸ ನಲ್ಲಿರುವ ಅಲ್ಟ್ರಾಟೆಕ್ ಸಿಸ್ಟಮ್ ಗೋದಾಮಿನ ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕಃ29/10/2012 ರಂದು 10:00 ಎ.ಎಂ ಕ್ಕೆ ಗೋದಾಮಿಗೆ ಬಂದು ನೋಡಲು ಗೋದಾಮ ಬಾಗಿಲಿನ ಕೀಲಿ ಮುರಿದು ಯಾರೋ ಕಳ್ಳರು ಗೋದಾಮಿನಲ್ಲಿರುವ ಹಾವೆಲ್ಸ್ ಕಂಪನೀಯ  ಕಾಪರ್ ವೈರ್ ಗಳು ಅ||ಕಿ|| 2,95,060/- ನೇದ್ದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:114/2012 ಕಲಂ 457, 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಧರ್ಮಿಂದ್ರಕುಮಾರ ತಂದೆ ರಾಮಲಾಲ ಠಾಕೂರ ಸಾ|| ಠಾಕೂರ ಗೌರಿ (ಯುಪಿ) ಹಾ.ವ|| ಕೋಡ್ಲಾ ಕ್ರಾಸ ವಿ.ಎಸ್.ಎಫ್. ಸೇಡಂ ರವರು ನಾನು ದಿನಾಂಕ:29-10-2012 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ ಪ್ರತಿ ದಿವಸದಂತೆ ಲೈನ್ ಒನ್ನ ಇ,ಎಸ್,ಪಿ ವಿ,ಸಿ ಎಫ್, ಸೇಡಂದಲ್ಲಿ ಕೆಲಸ ಮಾಡಲು ಹೋದೆನು ನನ್ನ ಹಾಗೆಯ ನಬಬುಲ್ ತಂದೆ ಶೀರಾಜೊದ್ದಿನ್, ಬಿಂದ ಯಾದವ್, ಫತ್ರು ಚವ್ಹಾಣ ಕೂಡಿಕೊಂಡು ಪ್ಯಾನೇಲ್ ಡಿಸ ಮೇಂಟಲಿಂಗ ಕಟಿಂಗ ಕೆಲಸ ಮಾಡುತ್ತಿದ್ದೆವು, ಮದ್ಯಾಹ್ನ 14-10 ಗಂಟೆ ಸುಮಾರಿಗೆ ನಾನು ಕೆಲಸ ಮಾಡುವಾಗ ನಬಬುಲ್ ಇತನು ಸೇಪಟಿ ವಸ್ತುಗಳನ್ನು ಹಾಕಿಕೊಳ್ಳದೆ ಇದ್ದುದ್ದರಿಂದ ಕೆಲಸ ಮಾಡುವಾಗ ಆತನ ಕಾಲು ಜಾರಿ ಮೇಲಿಂದ ಕೆಳಗೆ ಮುಖಮಾಡಿ ಬಿದ್ದನು ಆಗಾ ಆತನೊಂದಿಗೆ ಕೆಸಲ ಮಾಡುತ್ತಿರುವ ನಾವೆಲ್ಲರು ಕೆಳಗೆ ಬಂದು ನೋಡಲು ಆತನ ಹಾಣೆಯ ಬಲಬಾಗಕ್ಕೆ ಹಾಗೂ ಬಲಗೈ ಮಣ ಕೈಕೆಳಗೆ ಭಾರಿ ರಕ್ತಗಾಯಾಗಳಾಗಿದ್ದವು. ಉಪಚಾರ ಕುರಿತು ಹೈದ್ರಾಬಾದ ಗ್ಲೋಬಲ್  ಆಸ್ಪತ್ರೆಗೆ ಸೇರಿಕೆ ಮಾಡಿದ್ದು,  ಉಪಚಾರ ಫಲಕಾರಿಯಾಗದೆ ಸಾಯಂಕಾಲ ಮೃತ್ತ ಪಟ್ಟಿರುತ್ತಾನೆ, ನಬಬುಲ್ ಇತನು ಕೆಲಸ ಮಾಡುವಾಗ ಆತನಿಗೆ ಸೇಫ್ಟಿ ಸಲುವಾಗಿ ಗುತ್ತೇದಾರನಾದ ಸಂದೀಪ ನಾಯರ ಎಂ.ಡಿ ಹಾಗೂ ಸೈಟ್ ಇಂಜನೀಯರ ಖತೀರ ವೇಲ್ ತಂದೆ ಶೇಲ್ವಂ ಹಾಗೂ ಪ್ಯಾಕ್ಟರಿಯ ಜನರಲ್ ಮ್ಯಾನೇಜರ ಆರ್,ಎಸ್,ಪಾಟೀಲ ರವರ ಅತೀವ ನೀಷ್ಕಾಳಜಿತದಿಂದ ಈ ಘಟನೆ ಜರಗಿರುತ್ತದೆ, ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:222/2012 ಕಲಂ 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಮಂಗಳ ಸೂತ್ರ ಸುಲಿಗೆಗೆ ಪ್ರಯತ್ನ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಜಟಾ ಶಂಕರ ತಂದೆ ಕೆ.ಪಿ. ಶುಕ್ಲಾ ವ: 40 ಉ: ಅಸಿಸ್ಟೆಂಟ ಸ್ಟೇಶನ ಮಾಸ್ಟರ ಹುಣಸಿಲ ಹಡಗಿಲ್ ಸಾ:ಸುಲ್ತಾನಪೂರ ಉತ್ತರ ಪ್ರದೇಶ ರಾಜ್ಯ ಹಾ.ವ ಚೆನ್ನಾರೆಡ್ಡಿ ರವರ ಮನೆಯಲ್ಲಿ ಬಾಡಿಗೆ ಮಾಹಾವೀರ ನಗರ ಕೋಠಾರಿ ಭವನ ಹಿಂದೆ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಮೀನು ಶುಕ್ಲಾ  ನಮ್ಮ ಮಕ್ಕಳ ಹೋಮ್ ವರ್ಕ ಪ್ರೋಜೇಕ್ಟ ಸಲುವಾಗಿ ಗೋದುತಾಯಿ ನಗರದ ಮದರ ತೇರಿಸಾ ಶಾಲೆ ಹತ್ತಿರ ಇರುವ ಬುಕ ಸ್ಟಾಲ ಅಂಗಡಿಗೆ ದಿನಾಂಕ:28-10-2012 ರಂದು ಸಾಯಂಕಾಲ 6-45 ಗಂಟೆ ಸುಮಾರಿಗೆ ಹೋಗಿದ್ದಾಗ ಸ್ಪೇಶನರಿ ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿರುವಾಗ ಯಾವನೋಬ್ಬ ಸಾದಾಗಪ್ಪು ಬಣ್ಣದ ಹುಡಗನು ಎದುರುಗಡೆಯಿಂದ ಬಂದವನೇ ನನ್ನ ಹೆಂಡತಿ ಮೀನು ಶುಕ್ಲಾ ಇವಳ ಕೋರಳಲಿ ಕೈ ಹಾಕಿ ಸರ್ ಕಿತ್ತುಕೊಳ್ಳಲು ಪ್ರಯತ್ನಿಸಿದನು. ಆಗ ನನ್ನ ಹೆಂಡತಿ ಒಮ್ಮೇಲೆ ಚೀರಾಡಲಿಕ್ಕೆ ಹತ್ತಿದಾಗ ರೇಲ್ವೆ ಪಟರಿ ದಾಟಿ ಎನ್.ಜಿ.ಓ ಕಾಲೋನಿ ಕಡೆಗೆ ಓಡಿ ಹೋಗುತ್ತಿರುವಾಗ ಆತನಿಗೆ ನಾನು ಎನ್.ಜಿ.ಓ ಕಾಲೋನಿಯವರೆಗೆ ಬೆನ್ನು ಹತ್ತಿ ಹೋಗಿದ್ದು ಅಲ್ಲಿಯ ಕೆಲವು ಸಾರ್ವಜನಿಕರು  ಹಿಡಿಯಲು ಪ್ರಯತ್ನ ಮಾಡಿದ್ದು ಅವರಿಂದಲೂ ಸಹ ತಪ್ಪಿಸಿಕೊಂಡು ಹೋಗಿರುತ್ತಾನೆ. ಆಗ ಅಲ್ಲಿದ್ದ ಜನರು ಆ ವ್ಯಕ್ತಿಯ ಹೆಸರು ಆಶ್ಪಾಕ ಅಹ್ಮದ ರಹೆಮತ ನಗರ ಪಿ.ಎನ್.ಟಿ ಕಾಲೋನಿ ಗುಲಬರ್ಗಾ ಅಂತಾ ಮಾತನಾಡುತ್ತಿರುವುದನ್ನು ಕೇಳಿರುತ್ತೆನೆ.ಕಾರಣ ಸದರಿ ಅಶ್ಪಾಕ ಅಹ್ಮದ ಸಾ: ರಹೆಮತ ನಗರ ಪಿ.ಎನ್.ಟಿ ಕಾಲೋನಿ ಗುಲಬರ್ಗಾ ಇತನು ನನ್ನ ಹೆಂಡತಿಯ ಕೊರಳಲಿಯ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಸದರಿಯವನಿಗೆ ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಠಾಣೆ ಗುನ್ನೆ ನಂ:96/2012 ಕಲಂ, 393 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾನಸಿಕ ಹಿಂಸೆ ಕೊಟ್ಟಿದ್ದರಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ವಿಜಯಲಕ್ಷ್ಮಿ ಗಂಡ ರಾಜಶೇಖರ ಸೇಡಂ ಸಾ|| ರೇವಣಸಿದ್ದೇಶ್ವರ ಕಾಲೋನಿ  ನನ್ನ ಮಗನಾದ ಲಕ್ಷ್ಮೀಕಾಂತನಿಗೆ  ಅಗಸ್ಟ ತಿಂಗಳಲ್ಲಿ ನಮ್ಮ ಮನೆಯ ಪಕ್ಕದವರಾದಕಲ್ಯಾಣಯ್ಯ ಸ್ವಾಮಿ ಸಾ: ಜಯ ನಗರ ಗುಲಬರ್ಗಾ ರವರು ಒಂದು ಕನ್ಯ ತೋರಿಸಿದ್ದರು, ಹುಡುಗಿ ಮೆಳ್ಳಗಣ್ಣು ಇದ್ದುದರಿಂದ ನಾವು ಒಪ್ಪಿಗೆ ಬಾರದ ಕಾರಣ ಆ ಕನ್ಯ ನಮಗೆ ಇಷ್ಟ ವಿಲ್ಲವೆಂದು ಸದರಿ ಕಲ್ಯಾಣಯ ಸ್ವಾಮಿಗೆ ತಿಳಿಸಿದ್ದು.  ಅದಕ್ಕೆ ಕಲ್ಯಾಣಯ ಸ್ವಾಮಿ ನನ್ನ ಗಂಡನಿಗೆ ತಾನು ತೋರಿಸಿದ ಕನ್ನೆಯ  ಲಗ್ನ ಮಾಡಿರಿ ಎಂದು ಪದೇ ಪದೇ ಫೋನ ಮುಖಾಂತರ ನನ್ನ ಗಂಡನಿಗೆ ಒತ್ತಾಯಿಸಿದ್ದು ನಾವು  ಒಪ್ಪದ್ದೇ ಇದುದ್ದಕ್ಕೆ ಕಲ್ಯಾಣಯ್ಯ ಸ್ವಾಮಿ ಇತನು ನನ್ನ ಮಾತಿಗೆ ಒಪ್ಪದೆ ಇದ್ದರೆ ಜೇವರ್ಗಿ ಪ್ಲಾಟಗಳ ಕೇಸನಲ್ಲಿ ನಾನೆ ಸಾಕ್ಷಿ ಇದ್ದು. ನಿಮ್ಮ ಕೇಸ ಬಗ್ಗೆ ಸಾಕ್ಷಿ ಹೇಳುವದಿಲ್ಲ ಅಂತಾ ಮಾನಸಿಕ ಹಿಂಸೆ ಕೊಟ್ಟಿದ್ದರಿಂದ ನನ್ನ ಗಂಡನಾದ ರಾಜಶೇಖರ ಇತನು  ದಿನಾಂಕ: 29-10-2012 ರಂದು ಸಾಯಂಕಾಲ 4 ಗಂಟೆಯಿಂದ 5 ಗಂಟೆ ಮಧ್ಯದ ಅವಧಿಯಲ್ಲಿ ತನ್ನ ಮನಸೊಂದು ತನ್ನ ಮನೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮೈಯಿಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ತಲೆಯಿಂದ ಎರಡು ಮೊಳಕಾಲವರೆಗೆ ಪೂರ್ತಿ ಸುಟ್ಟಿದ್ದು ಇರುತ್ತದೆ. ಈ ಘಟನೆ ಕಲ್ಯಾಣಯ ಸ್ವಾಮಿಯವರೇ ಕಾರಣಿಭೂತನಾಗಿರುತ್ತಾನೆ. ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:343/2012 ಕಲಂ 506,306, 511 ಐಪಿಸಿ ಪ್ರಕಾರ . ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

29 October 2012

GULBARGA DISTRICT REPORTED CRIMES


ಹಲ್ಲೆ ಮತ್ತು ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಸಂತೋಷ ತಂದೆ ರುಕ್ಕಪ್ಪಾ ಹಂಗರಗಿ ಸಾ:ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:28/10/2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಹೆಂಡತಿ ಸುಮಲತಾ ನಾನು ಇಬ್ಬರು ಮೋಟರ ಸೈಕಲ ಮೇಲೆ ಸಾಯಿ ಮಂದಿರಕ್ಕೆ ಹೊಗಿ ಮರಳಿ ಮನೆಗೆ ಬರುತ್ತಿರುವಾಗ ಸಾಯಿ ಮಂದಿರ ಕ್ರಾಸಿನ ಹತ್ತಿರ  ಚಂದ್ರಕಾಂತ ತಂದೆ ಕ್ರಿಷ್ಣಪ್ಪಾ ಫತ್ತೆ ನಾಯಕ  ಮತ್ತು ಅತನ ಸಂಗಡ 2-3 ಜನರು ನಮ್ಮನ್ನು ಅಡ್ಡಗಟ್ಟಿ ಚಂದ್ರಕಾಂತನು   ಎಷ್ಟು ದುಡ್ಡ ಆದಲೇ ರಂಡಿ ಮಗನೇ, ನನಗೆ ದುಡ್ಡ ಕೇಳತ್ತಿ ಭೋಸಡಿ ಮಗನೇ ಅಂತಾ ಅವಾಚ್ಯವಾಗಿ ಬೈದು ರಾಡಿನಿಂದ  ಎಡಗೈ ರಟ್ಟೆಗೆ ಹೊಡೆದಿದ್ದರಿಂದ  ಭಾರಿ ಪೆಟ್ಟಾಗಿ ಕೈ ಮುರಿದಿರುತ್ತದೆ. ಉಳಿದವರು  ಕೈಯಿಂದ  ಮುಖಕ್ಕೆ, ಮೈ-ಕೈ ಮೇಲೆ ಹೊಡೆದಿದ್ದರಿಂದ ಬಲಗಣ್ಣಿನ ಉಬ್ಬಿಗೆ ಗಾಯವಾಗಿ ಉಬ್ಬಿರುತ್ತದೆ. ಮತ್ತು ಸದರಿಯವರು ಜೇಬಿನಲ್ಲಿ ಕೈ ಹಾಕಿ  ಎರಡು ಮೊಬೈಲ ಫೋನಗಳು, ನಗದು ಹಣ 10,000/- ರೂಪಾಯಿ ಮತ್ತು ಕೊರಳಲ್ಲಿಯ ಒಂದು ತೊಲೆ ಬಂಗಾರದ ಚೈನ ಅ:ಕಿ: 20,000/- ರೂ ನೇದ್ದನ್ನು  ಜಬರದಸ್ತಿಯಿಂದ  ಕಸಿದುಕೊಂಡಿದ್ದು ಹೋಗಿರುತ್ತಾರೆ. ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಸುಮಲತಾಳಿಗೂ  ಕೈಯಿಂದ ಹೊಡೆದು ದಬ್ಬಿಕೊಟ್ಟಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:95/2012 ಕಲಂ. 341, 323, 324, 326, 504, 397 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಗುರುಶಾಂತ ತಂದೆ ವಿಜಯಕುಮಾರ ಪಾಟೀಲ ಉ|| ಗುತ್ತಿಗೆದಾರರು ಸಾ|| ಭೂಸನೂರ ಗ್ರಾಮ ರವರು ಬೂಸನೂರದಿಂದ  ಮಾಡಿಯಾಳಕೆ ಹೋಗುವ ದೇವಮತಗಿ ಹಳ್ಳದ ಬ್ರಿಜ ನಿರ್ಮಾಣದ ಕಾಮಗಾರಿಯ ಕೆಲಸವನ್ನು ದಿನಾಂಕ:07/10/2012 ರಂದು ಪರಿಶೀಲನೆ ಮಾಡಿ ಮರಳಿ ಸಾಯಾಂಕಾಲ ಗುಲಬರ್ಗಾಕೆ ಹೋಗಿರುತ್ತೆನೆ. ದಿನಾಂಕ: 08/10/2012 ರಂದು ಮುಂಜಾನೆ 09-30 ಗಂಟೆ ಸುಮಾರಿಗೆ ಬ್ರಿಜ್ಗೆ ನೀರು ಹಾಕುವ ಸಿದ್ರಾಮ ಇವನು  ಪೋನ ಮಾಡಿ ಬ್ರಿಜ ಮೇಲ್ ಛಾವಣಿ ನಿರ್ಮಾಣ ವೇಳೆಯಲ್ಲಿ ಜೋಡಿಸಿರುವ ಶೆಂಟ್ರಿಂಗ ಪ್ಲೆಟಗಳು  ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಬಂದು ನೋಡಲು ಮೇಲ್ ಛಾವಣಿಗೆ ಜೋಡಿಸಿದ 82 ಕಬ್ಬಿಣದ ಪ್ಲೆಟಗಳು ಅ||ಕಿ|| 65600/- ರೂಪಾಯಿಗಳದ್ದು ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೇ ಇದಕ್ಕಿಂತ ಮುಂಚೆ ಸೈಟಿನ ಪಕ್ಕದಲ್ಲಿ  ಇರುವ ಶೇಡ್ಡಿನ ಹೋರಗೆ ಇಟ್ಟಿದ 10, ಎಮ ಎಮ,ಕಬ್ಬಿಣದ ರಾಡು ಡಿಗ್ಗಿಯಲ್ಲಿ ಅಂದಾಜು 1 ಟನ್ನ  ರಾಡನ್ನು ಅ,ಕಿ, 45000/- ಮತ್ತು ಒಂದು ಸ್ಟೀಲ ಕಟರ ಮಷಿನ ಅಂದಾಜು ಕಿಮ್ಮತ್ತು 4900/-ನೇದ್ದವುಗಳು ಕಳವು ಮಾಡಿರುತ್ತಾರೆಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ 454,457,380,379  ಐಪಿಸಿ   ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳದಿಂದ ಗೃಹಿಣೆ ಆತ್ಮಹತ್ಯೆ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ ಚಂದ್ರಕಲಾ ಗಂಡ ಪ್ರಕಾಶ ಗುಡ್ಡ ಟೋಸ್ನೆ ವಾಲೇ ಲೇಔಟ ನವಜೀವನ ಏರಿಯಾ ಗುಲಬರ್ಗಾ ರವರು ನನ್ನ ಮಗಳಾದ ಪ್ರತಿಭಾ @ ಸೌಮ್ಯ ಇವಳಿಗೆ ದಿನಾಂಕ:20.02.2010 ರಂದು ಗಾಂದಿನಗರದ ಮಲ್ಲಿಕಾರ್ಜುನ ತಂದೆ ಸಂಗಪ್ಪ ಬ್ಯಾದಿ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ 2 ವರ್ಷದ ಗಂಡು ಮಗವಿರುತ್ತದೆ. ನನ್ನ ಮಗಳಿಗೆ ಮದುವೆಯಾದಾಗಿನಿಂದ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ನನ್ನ ಗಂಡ  ಮಲ್ಲಿಕಾರ್ಜುನ, ಅತ್ತೆಯಾದ ಇಮಲಾಬಾಯಿ ಹಾಗೂ ಮೈದುನರಾದ ಶ್ರೀಶೈಲ ಶ್ರೀನಾಥ ರವರು ಕಿರುಕುಳ ನೀಡುತ್ತಿದ್ದಾರೆಂದು ನನ್ನ ಮಗಳು ತವರು ಮನಗೆ ಬಂದಾಗ ಹೇಳುತ್ತಿದ್ದಳು. ದಿನಾಂಕ 28.10.2012 ರಂದು ಮುಂಜಾನೆ 10-00 ಗಂಟೆಗೆ ನನ್ನ ಮಗಳು ಪೋನ ಮಾಡಿ, ನಾನು ತವರು ಮನೆಗೆ ಬರಬೇಕು ಅಂತಾ ಹೇಳಿದರೆ ನನ್ನ ಗಂಡನು ಕಳುಹಿಸುತ್ತಿಲ್ಲಾ ನನ್ನ ಗಂಡನಿಗೆ 1 ಲಕ್ಷ ರೂಪಾಯಿ ಕೊಟ್ಟರೆ ತವರು ಮನೆಗೆ ಕಳುಹಿಸುತ್ತೆನೆಂದು ಹೇಳುತ್ತಿದ್ದಾನೆ ಅಂತಾ ತಿಳಿಸಿರುತ್ತಾಳೆ. ದಿನಾಂಕ 28.10.2012 ರಂದು 7-00 ಗಂಟೆಗೆ ನಾನು ನನ್ನ ಮೋಬೈಲದಿಂದ ನನ್ನ ಮಗಳ ಮೊಬೈಲ ನಂಬರಿಗೆ ಪೋನ ಮಾಡಿದಾಗ ನನ್ನ ಮಗಳ ಅತ್ತೆಯಾದ ಇಮಲಾಬಾಯಿ ಪೋನನಲ್ಲಿ ಮಾತಾಡಿ ನಿನ್ನ ಮಗಳು ಬೆಂಕಿ ಹಚ್ಚಿಕೊಂಡಿದ್ದಾಳೆ ಅಂತಾ ಹೇಳಿದ್ದರಿಂದ ನಾವು ಮನೆಯವರೆಲ್ಲರೂ ಕೂಡಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗಳು ನನಗೆ ತಿಳಿಸಿದ್ದೆನೆಂದರೆ ನನ್ನ ಗಂಡ, ಅತ್ತೆ, ನಾದಿನಿಯರೂ ಹಾಗೂ ಮೈದುನರರೂ ಕೂಡಿ ನನಗೆ  3 ಲಕ್ಷ ರೂಪಾಯಿ ತೆಗೆದುಕೊಂಡು ಬರುವ ವಿಷಯದಲ್ಲಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ತಿಳಿಸಿದಳು ನನ್ನ ಮಗಳು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು  ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ:77/2012 ಕಲಂ 498(ಎ) 304(ಬಿ) 302 ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 October 2012

GULBARGA DISTRICT REPORTED CRIME

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:-27/10/2012 ರಂದು ಸಾಯಂಕಾಲ ಅವರಾದ (ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ಪಾಪಖಾನ ಇವರ ಹೊಲದ ಗಿಡದ ಕೆಳಗೆ ದುಂಡಾಗಿ ಕುಳಿತು ಅಂದರ ಬಾಹರ ದೈವದ ಜೂಜಾಟ ಆಡುತ್ತಿದ್ದಾಗ ಆನಂದರಾವ ಎಸ್‌ ಎನ್‌ ಪಿಎಸ್‌ಐ ಮತ್ತು ಸಿಬ್ಬಂದಿಯವರು 5 ಜನರಾದ ನಾಗರಾಜ ತಂದೆ ಮಲ್ಲಿಕಾರ್ಜುನ ಭಾಸಗಿ  ವ:27 ಸಾ: ಶಿವಾಜಿ ನಗರ ಗುಲ್ಬರ್ಗಾ,ಮಲ್ಲಿಕಾರ್ಜುನ ತಂದೆ ಚಂದ್ರಕಾಂತ  ಮರಪಳ್ಳಿ  ವ:23 ಸಾ: ಶಿವಾಜಿ ನಗರ ಗುಲ್ಬರ್ಗಾ,ಶರಣು@ಶರಣಬಸಪ್ಪ ತಂದೆ ಶಾಮರಾವ ಚೇಗಂಟಾ ವ:24 ವರ್ಷ ಸಾ:ಭವಾನಿ ನಗರ,ಶರಣಬಸಪ್ಪ ತಂದೆ ಗುರುಲಿಂಗಪ್ಪ ಹುಬ್ಬಳ್ಳಿ ವ:38 ವರ್ಷ ಸಾ:ಶಿವಾಜಿ ನಗರ ಗುಲ್ಬರ್ಗಾ,ಮಲ್ಲಿಕಾರ್ಜುನ ತಂದೆ ಬಂಡೆಪ್ಪ ನಾಟೀಕರ ವ:36 ವರ್ಷ ಸಾ: ಶಿವಾಜಿ ನಗರ ಗುಲ್ಬರ್ಗಾ ರವರನ್ನು ವಶಕ್ಕೆ ಜೂಜಾಟಕ್ಕೆ ಬಳಸಿದ ಹಣ 3080/- ರೂ ಹಾಗೂ  ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಠಾಣೆ ಗುನ್ನೆ ನಂ: 342/2012 ಕಲಂ 87 ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ

27 October 2012

GULBARGA DISTRICT REPORTED CRIMES

ಮನೆ ಕಳ್ಳತನ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶ್ರೀಮತಿ, ಭಾರತಿ ಗಂಡ ಮಲ್ಲಿಕಾರ್ಜುನ ಪಾಟೀಲ ಉ: ವಕೀಲವೃತ್ತಿ ಸಾ|| ಶಂಕರಲಿಂಗ ಗುಡಿ ಹತ್ತಿರ ಶಾಂತನಗರ ಬಂಕೂರ ನಾನು ದಿನಾಂಕ:23/10/2012 ರಂದು ನಮ್ಮ ಅಕ್ಕನ ಊರಾದ ಸಾವಳಗಿಗೆ ಹೋಗಿ  ಇಂದು ಸಾಯಂಕಾಲ 6-50 ಗಂಟೆಗೆ ಬಂದು ನೋಡಲಾಗಿ ಬಾಗೀಲ ಚೀಲಕ ಮೇಲೆ ಬಟ್ಟೆ ಹಾಕಿದ್ದು, ಇರುತ್ತದೆ. ನಮ್ಮ ಕೆಲಸದವಳೇ ಹಾಕಿರಬೇಕಂತ ಬಟ್ಟೆ ತೆಗೆದು ನೋಡಿದಾಗ ಕೀಲಿ ಕಪ್ಪೆ ಚಚ್ಚಿದ್ದು ಬಾಗಿಲ ಕೊಂಡಿ ಕೂಡಾ ಚಚ್ಚಿದ್ದು ಕಂಡುಬಂದಿತು. ಮನೆಯಲ್ಲಿ ನೋಡಲಾಗಿ ಅಲಮಾರದಲ್ಲಿಟ್ಟಿದ್ದ ಮೂರು ತೋಲಿ ಬಂಗಾರದ ಪಾಟಲಿ ಅ.ಕಿ. 90.000/- ರೂ. ಒಂದು ತೋಲಿ ಬಂಗಾರ ನೆಕಲೆಸ್‌ ಅ.ಕಿ.30.000/-, ಮಕ್ಕಳ ಕೀವಿಯಲ್ಲಿರುವ ಎರಡು ಜೊತೆ ಕಿವಿಯೊಲೆ [4 ½ ಗ್ರಾಂ ] ಅ.ಕಿ.14.000/-,ನನ್ನ ಕಿವಿಯಲ್ಲಿಯ ಅಷ್ಟಪೈಲಿ ಟಾಪ ಒಂದು ಜೋತೆ 2 ಗ್ರಾಂದ್ದು ಅ.ಕಿ. 6000/- ರೂ. ಮೂರು ಜೋತೆ ಬೆಳ್ಳಿಯ ಚೈನುಗಳು ಅ.ಕಿ. 6000/- 6] ಬೆಳ್ಳಿಯ ಆರತಿ ಸಟ್‌ ಅ.ಕಿ. 15.000/- ಹೀಗೆ ಒಟ್ಟು 1.61.000/- ರೂಪಾಯಿಗಳ ಸಾಮಾನುಗಳನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗೀಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 135/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                
ಮಟಕಾ ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:26/10/2012 ರಂದು ವಡ್ಡರವಾಡಿಯ ರಾಚಯ್ಯ ಮಠದವರ ಕಿರಾಣಿ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶಹಾಬಾದ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ ಶ್ರೀ ಶರಣಪ್ಪಾ ಹಿಪ್ಪರಗಿ ರವರು ಮತ್ತು ಅವರ ಸಿಬ್ಬಂದಿಯವರಾದ ಗುಂಡಪ್ಪಾ, ಬಸವರಾಜ,ಯೇಜಕಲ್‌,ಪರಶುರಾಮ, ಜೀಪ ಚಾಲಕ ಎಹೆಚ್‌ಸಿ ಹಣಮಂತರಾಯ ರವರೊಂದಿಗೆ  ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ರಾಚಯ್ಯ ತಂದೆ ಮಹಾದೇವಯ್ಯ ಮಠದವರ  ಇತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದುದು ಖಚಿತ ಪಡಿಸಿಕೊಂಡು ಆತನ ಹತ್ತಿರ 2060/- ರೂಪಾಯಿ,ಒಂದು ಮಟಕಾ ಚೀಟಿ,ಒಂದು ಬಾಲ ಪೆನ್ನು ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 134/2012 ಕಲಂ, 78 (3) ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಅನೈಸರ್ಗಿಕ ಸಂಭೋಗ  ಮಾಡಿ ಕೊಲೆ ಮಾಡಿದ ಬಗ್ಗೆ :
ಮಿರಿಯಾಣ ಪೊಲೀಸ್ ಠಾಣೆ: ಶ್ರೀಮತಿ ಸುಭದ್ರಮ್ಮಾ ಗಂಡ ಪ್ರಬು ಮೇತ್ರೆ ವಯಾ|| 36 ವರ್ಷ ಜಾತಿ|| ಹರಿಜನ ಉದ್ಯೋಗ|| ಕೂಲಿ ಕೇಲಸ ಸಾ|| ಚಿಕ್ಕನಿಂಗದಳ್ಳಿ ತಾ|| ಚಿಂಚೊಳ್ಳಿ ರವರು ನನ್ನ ಮಗನಾದ  ಸೂರ್ಯಕಾಂತ ವಯ|| 14 ವರ್ಷ  ಇತನು ದಿನಾಂಕ:24-10-2012 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ದಸರಾ ಹಬ್ಬದ ಕುರಿತು ಬನ್ನಿ ಹಂಚಲು ಊರಲ್ಲಿ ಹೋಗಿರುತ್ತಾನೆ. ಊರಲ್ಲಿ ಗೊಂದಲ ಕಾರ್ಯಕ್ರಮ ಇರುವದರಿಂದ ನನ್ನ ಮಗನು ಅಲ್ಲಿಗೆ ಹೋಗಿರಬೇಕು ಅಂತಾ ನಾನು ತಿಳಿದು ಸುಮ್ಮನಾಗಿ ರಾತ್ರಿ  ಎಲ್ಲಿ ಹುಡಕಾಡಿರುವುದಿಲ್ಲಾ ನಿನ್ನೆ ದಿನಾಂಕ:25-10-2012 ರಂದು ಬೆಳಿಗ್ಗೆ ನನ್ನ ಮಗ ಮನಿಗೆ ಬರಲಿಲ್ಲಾ ಎಲ್ಲಿ ಹೋಗಿದ್ದಾನೆ ಅಂತಾ ಊರಲ್ಲಿ ಕೇರೆ ಬಾವಿ ಕಡೆ ಮತ್ತು ಚಂದಾಪೂರ ಚಿಂಚೊಳ್ಳಿ ಕಡೆ ಹುಡಕಾಡಿದೆನು ಪತ್ತೆ ಆಗಿರುವುದಿಲ್ಲಾ. ದಿನಾಂಕ:26-10-2012 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಕಲಬಾವಿ ತಾಂಡಾದ ಒಬ್ಬ ಅಟೋ ರೀಕ್ಷಾ ಚಾಲಕನು ನಿನ್ನ ಮಗ ಊರ ಹತ್ತಿರ ಇರುವ ನೀರಿನ ಟ್ಯಾಂಕ ಪಕ್ಕದಲ್ಲಿ ಗುಡದಲ್ಲಿ ಸತ್ತು ಬಿದ್ದಿದ್ದಾನೆ ಅಂತಾ ಜನ ಅಂದು ಕೊಳ್ಳುತ್ತಿದ್ದಾರೆ ಅಂತಾ ತಿಳಿಸಿದನು. ಕೂಡಲೆ ನಾನು ನನ್ನ  ಮಾವ ಚಂದ್ರಪ್ಪಾ ಇತನಿಗೆ ಕರೆದುಕೊಂಡು ಚಿಕ್ಕನಿಂದಳಿಗೆ ಹೋಗಿ ನೋಡಲು ನೀರಿನ ಟ್ಯಾಂಕ ಹತ್ತಿರ ದೌಲ ಮಲೀಕ ಗುಡ್ಡದ ಗಿಡದ ಕಂಟಿಯಲ್ಲಿ ಸತ್ತು ಬಿದ್ದಿದ್ದನ್ನು ಕಂಡು ಬಂತು ನನ್ನ ಮಗ ಸೂರ್ಯಕಾಂತ ಶವವು ಅರೆ ಬೆತ್ತಲೆ ಆಗಿ ಬಿದ್ದಿದ್ದು ತಲೆಗೆ ರಕ್ತ ಗಾಯವಾಗಿ ಹುಳ ಮತ್ತು ಇರುವೆಗಳು ಹತ್ತಿರುತ್ತವೆ. ಮುಖ ಕೂಡಾ ಜಜ್ಜಿದಂತೆ ಕಂಡು ಬಂದಿರುತ್ತದೆ. ಗುದದ್ವಾರಕ್ಕೆ ರಕ್ತ ಗಾಯ ಆದಂತೆ ಕಂಡು ಬಂದಿರುತ್ತದೆ. ಅಕ್ಕ ಪಕ್ಕದಲ್ಲಿ ಕ್ವಾಟರ ಬಾಟಲಗಳು ಮತ್ತು ಚುಡವಾ ಪಾಪಡ ತಿಂದು ಉಳಿದಿದ್ದ ಪ್ಲಾಸ್ಟಿಕ ಕವರ ಕಂಡು ಬಂದಿರುತ್ತದೆ.ಯಾರೋ ದುಶ್ಕರ್ಮಿಗಳು ನನ್ನ ಮಗ ಸೂರ್ಯಕಾಂತನಿಗೆ ಅನೈಸರ್ಗಿಕ ಸಂಬೋಗ ಮಾಡಿ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ಠಾಣಾ ಗುನ್ನೆ ನಂ:37/2012 ಕಲಂ 377,302 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 


26 October 2012

GULABARGA DISTRICT REPORTD CRIMES


ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ:26-10-2012 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ನಮ್ಮ ಊರಿನ ಪಂಚಾಯಿತಿ ಕಟ್ಟೆ ಹತ್ತಿರ ಇದ್ದಾಗ ಗ್ರಾಮದ ಜನರು ಹೀರಿಯಾಳ ರಸ್ತೆಯ ಹಿರೀಗೆಪ್ಪ ಪೂಜಾರಿ ಇವರ ಹೊಲದ ಹತ್ತಿರ ನೀರು ಹರಿಯುವ ಪೈಪಿನ ಜಾಗದಲ್ಲಿ ಅಪರಿಚಿತ ಹೆಣ್ಣು ಮಗಳ ಕೊಲೆಯಾಗಿ ಬಿದ್ದಿರುವ ಬಗ್ಗೆ ಮಾತುಡುವದನ್ನು ಕೇಳಿ ಸ್ಥಳಕ್ಕೆ ಹೋಗಿ ನೋಡಲು ಅಪರಿಚಿತ ಹೆಣ್ಣು ಮಗಳು ವಯಸ್ಸು ಅಂದಾಜು 35 ರಿಂದ 40 ವರ್ಷ, ಎತ್ತರ 5  ಪೀಟ 3 ಇಂಚ್,  ಕೆಂಪು ಬಣ್ಣ, ದಪ್ಪ ಮೈಕಟ್ಟು , ಹೂವಿನ ಸೀರೆ, ನೀಲಿ ಬಣ್ಣದ ಲಂಗ, ಕಾಲಿನಲ್ಲಿ ಕಾಲುಂಗರ ಹೊಂದಿರುವ ಅಪರಿಚಿತ ಹೇಣ್ಣು ಮಗಳು ಬಾಳೆ ಗೀಡದ ಸೀಪ್ಪೆ ಕೆಳಗೆ ಕೊಲೆಯಾಗಿ ಬಿದ್ದಿದ್ದು ಕಂಡು ಬಂದಿರುತ್ತದೆ. ಈ ಕೊಲೆಯು ದಿನಾಂಕ:25-10-2012 ರ ರಾತ್ರಿ 10-00 ಗಂಟೆಯಿಂದ ದಿನಾಂಕ:26-10-2012 ರ ಬೆಳಿಗಿನ ಜಾವದಲ್ಲಿ ನಡೆದಿರಬಹುದು ಅಂತಾ ಶ್ರೀ ರಾಜಶೇಖರ ತಂದೆ ಭೀರಣ್ಣ ಬಂಡಗಾರ ಉ|| ತಾ.ಪಂ. ಸದಸ್ಯ ಸಾ|| ಉಡಚಣಹಟ್ಟಿ ಗ್ರಾಮ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:186/2012 ಕಲಂ. 302, 201 ಐ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಮೋಟಾರ ಸೈಕಲ ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ರಾಜಶೇಖರ ತಂದೆ ಗುರಲಿಂಗಪ್ಪ ಹೊಸಮನಿ ಸಾ|| ವಿವೇಕಾನಂದ ನಗರ ಅಳಂದ ರೋಡ ಗುಲಬರ್ಗಾವರು ನಾನು ದಿನಾಂಕ:14-10-2012 ರಂದು ರಾತ್ರಿ 7-30 ಗಂಟೆಯ ಸಮಯದಲ್ಲಿ ನ್ನ ಮನೆಯ ಮುಂದೆ ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬರ ಕೆಎ-32/ಎಲ್-709, ನೇದ್ದನ್ನು ನಿಲ್ಲಿಸಿದ್ದು  ಊಟ ಮಾಡಿಕೊಂಡು ರಾತ್ರಿ 8 ಗಂಟೆ ಸುಮಾರಿಗೆ ಹೊರಗಡೆ ಬಂದಾಗ ನನ್ನ ಮೊಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಕಾಣಿಸಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ ನ್ನ ಮೊಟಾರ್ ಸೈಕಲ್ ಪತ್ತೆಯಾಗಿರುದಿಲ್ಲ ಯಾರೋ ಕಳ್ಳರು ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ ಶ್ರೀ ಆಕಾಶ ತಂದೆ ಅನಿಲಕುಮಾರ ಕಲಶಟ್ಟಿ ವ||18,ಸಾ|| ಅಳಂದ ಕಾಲೋನಿ ಗುಲಬರ್ಗಾ ನಾನು ದಿನಾಂಕ 24-10-12 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ದೇವಿ ನಗರ ಬಡಾವಣೆಯಲ್ಲಿ ದೇವಿ ಮೆರವಣಿಗೆ ಇದ್ದ ಪ್ರಯುಕ್ತ,ಡ್ಯಾನ್ಸ್ ಮಾಡುತ್ತಿದ್ದಾಗ, ನಮ್ಮ ಬಡಾವಣೆಯ ಕಿರಣ ತಂದೆ ಮಲ್ಲಿಕಾರ್ಜುನ,ರವಿ,ಅನಿಲ್  ಮೂವರು ಕೂಡಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ನನ್ನ ಮೈಮೇಲೆ ಬೀಳುತ್ತಿದ್ದಾಗ ನಾನು ಯಾಕೆ ಮೈಮೇಲೆ ಬೀಳುತ್ತಿದ್ದರಿ ಅಂತ ಕೇಳಿದ್ದಕ್ಕೆ, ಕಿರಣ, ರವಿ ಮತ್ತು ಅನಿಲ್ ಮೂವರು ಕೂಡಿಕೊಂಡು ಕೈಮುಷ್ಠಿ ಮಾಡಿ ನನಗೆ ಎದೆಯ ಮೇಲೆ, ಕುತ್ತಿಗೆಯ ಮೇಲೆ ಹಾಗು ಬೆನ್ನಿನ ಮೇಲೆ ಹೊಡೆಯುತ್ತಿದ್ದಾಗ, ಅದೇ ಸಮಯಕ್ಕೆ ಅಲ್ಲಿಯೇ ಇದ್ದ ನಮ್ಮ ಕಾಲೋನಿಯ ಶಿವು ಯಲಗಾರ ಹಾಗು ರಾಜು ಇವರುಗಳು ಜಗಳ ಬಿಡಿಸಿ ಕಳುಹಿಸಿದ್ದು, ಸದರಿ ಮೂರು ಜನರು ನನಗೆ ಹೊಡೆದಿದ್ದರಿಂದ ನನಗೆ ಗುಪ್ತಗಾಯಗಳಾಗಿದ್ದು,ನನಗೆ ಕೈಯಿಂದ ಹೊಡೆಬಡೆ ಮಾಡಿದ ಕಿರಣ ತಂದೆ ಮಲ್ಲಿಕಾರ್ಜುನ,ರವಿ,ಅನಿಲ್  ಇವರುಗಳ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:77/2012 ಕಲಂ 323,324,ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ರೇಣುಕಾದೇವಿ ಗಂಡ ಗಣಪತಿ ಬಬಲಾದ ವ:  35 ವರ್ಷ ಜಾತಿ: ಹರಿಜನ ಉ: ಮನೆ ಕೆಲಸ ಸಾ: ಕರ್ನಾಟಕ ಹೈ ಸ್ಕೂಲ್ ಹತ್ತಿರ ಘಾಟಗೇ ಲೇಔಟ ಗುಲಬರ್ಗಾ ರವರು ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿಕೊಂಡು ದಿನಾಂಕ:25-12-2012 ರಂದು ರಾತ್ರಿ  8-50  ಗಂಟೆ ಸುಮಾರಿಗೆ ನಮ್ಮ ಚಿಕ್ಕಮ್ಮಾ ಜಯಶ್ರೀ ರವರಿಗೆ ಬನ್ನಿ ಕೊಟ್ಟು ಮರಳಿ ಮನೆಗೆ ಹೋಗುತ್ತಿರುವಾಗ  ಘಾಟಗೇ ಲೇಔಟ ಬುದ್ದ ವಿಹಾರದ ಹತ್ತಿರ ಸಿ.ಸಿ ರಸ್ತೆ ಮೇಲೆ ಸೀರೆ ಸೆರಗು ಸರಿಪಡಿಸುತ್ತಿರುವಾಗ ಎದುರುಗಡೆಯಿಂದ ಒಬ್ಬ ಮೋಟಾರ ಸೈಕಲ್ ಸವಾರನು ಮುಖಕ್ಕೆ ಬಟ್ಟಿ ಕಟ್ಟಿಕೊಂಡು ಬಂದವನೇ ಒಮ್ಮೇಲೆ ಕೊರಳಲ್ಲಿ ಕೈ ಹಾಕಿ 4 ತೊಲೆ ಬಂಗಾರದ ಎರಡು ಎಳೆವುಳ್ಳ ಮಂಗಳಸೂತ್ರವನ್ನು ಕಿತ್ತುಕೊಂಡು ಹೋಗಿರುತ್ತಾನೆ.ಬಡಾವಣೆಯಲ್ಲಿ ಕರೆಂಟಹೋಗಿರುವುದ್ದರಿಂದ ಕತ್ತಲಲ್ಲಿ ಮೋಟಾರ ಸೈಕಲ್ ನಂಬರ,ಅವನ ಮುಖ ಸರಿಯಾಗಿ ಕಾಣಿಸಿರಲಿಲ್ಲಾ. ತೆಳ್ಳನೆ ಮೈಕಟ್ಟಿನವನಿದ್ದು ಬಿಳಿ ಶರ್ಟ ಧರಿಸಿದ್ದನು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:91/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 October 2012

GULBARGA DISTRICT REPORTED CRIME

ಅಪಘಾತ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಮಡಿವಾಳಪ್ಪ ತಂದೆ ಬಸಪ್ಪ ಲಕ್ಕಣಗಾಂವ ಸಾ:ಸಿದ್ರಾಮೇಶ್ವರ ನಗರ ಬಿಜಾಪೂರ ರವರು ನಾನು ಮತ್ತು ನನ್ನ ಮಗ ಅರವಿಂದ ಸೊಸೆಯಾದ ಕಾಂಚನಾ ಮೊಮ್ಮಕ್ಕಳಾದ ಅನುಪ, ಅಂಕಿತ ಐದು ಜನರು ಕೂಡಿಕೊಂಡು ನಮ್ಮ ಹೊಸ ಕಾರ ಟಿಆರ್ ನಂ, ಕೆಎ-29-ಟಿಸಿಆರ್-06 ನೇದ್ದರಲ್ಲಿ  ಬಿಜಾಫೂರದಿಂದ ಹುಮನಾಬಾದಕ್ಕೆ ಹೋಗುತ್ತಿದ್ದಾಗ ಬೆಳಿಗ್ಗೆ 8-30 ಗಂಟೆಯ ಸಮಾರಿಗೆ ಜೇವರ್ಗಿ ಸಮೀಪದ ಲಕ್ಷ್ಮೀ ಗುಡಿ ಹತ್ತಿರ ನನ್ನ ಮಗ ಅರವಿಂದನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಮುಂದೆ ಹೋಗುತ್ತಿದ್ದ ಲಾರಿಗೆ ಓವರ ಟೆಕ್ ಮಾಡಲು ಹೋಗಿ ಒಮ್ಮೇಲೆ ಕಟ್ ಹೊಡೆದುದಕ್ಕೆ ಕಾರ ಪಲ್ಟಿಯಾಗಿ ಅರವಿಂದ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ಸೊಸೆ ಹಾಗು ಮೊಮ್ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 159/2012 ಕಲಂ 279,337,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಕಿರಣ ತಂದೆ ಮಲ್ಲಿಕಾರ್ಜುನ ಪಂಚಕಟ್ಟಿ, ವ|| 17 ವರ್ಷ, ಸಾ|| ದೇವಿ ನಗರ ಗುಲಬರ್ಗಾ ನಾನು ದಿನಾಂಕ:24-10-2012 ರಂದು ದೇವಿ ನಗರ  ಬಡಾವಣೆಯ ದೇವಿ ಮೆರವಣಿಗೆ ಇದ್ದ ಪ್ರಯುಕ್ತ, ಡ್ಯಾನ್ಸ್ ಮಾಡುತ್ತಿದ್ದಾಗ, ನಮ್ಮ ಬಡಾವಣೆಯ ಆಕಾಶ ತಂದೆ ಅನಿಲ ಈತನು ಬಂದವನೇ ಭೋಸಡಿ ಮಗನ್ಯಾ ಇಲ್ಲಿ ಯಾಕೆ ಡ್ಯಾನ್ಸ್ ಮಾಡುತ್ತಿ ಅಂತ ಅವಾಚ್ಯದಿಂದ ಬೈಯುತ್ತಾ ಅಲ್ಲಿ ಬಿದ್ದ ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿದನು. ವಿನಾಃಕಾರಣ ನನಗೆ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಬೆದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:76/2012 ಕಲಂ 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶಿವಪುತ್ರ ತಂದೆ ಚಂದ್ರಶಾ ಕುಂಬಾರ ಸಾ|| ಕಿಣ್ಣಿ ಸಡಕ, ಹಾ|| ವ|| ರಾಮತೀರ್ಥ ಗುಡಿಯ ಹತ್ತಿರ ಚೆಕ್ ಪೋಸ್ಟ್ ಅಳಂದ ರೋಡ ಗುಲಬರ್ಗಾ ರವರು ನಮ್ಮ ಅಣ್ಣ ಮೃತ ಲಕ್ಷ್ಮಿಕಾಂತ ಈತನು ಪ್ರತಿ ದಿವಸ ಕುಡಿದು ಮನೆಗೆ ಬರುತ್ತಿದ್ದು, ದಿನಾಂಕ:20-10-2012 ರಂದು ಬೆಳಿಗ್ಗೆ ಮನೆಯಿಂದ ಹೋದವನು, ಮನೆಗೆ ಬರದೇ ಇರುವದರಿಂದ ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲಾ. ಎಲ್ಲಾ ಸಂಬಂಧಿಕರಿಗೆ ವಿಚಾರಿಸಿದರು  ಮಾಹಿತಿ ಸಿಗಲಿಲ್ಲ. ದಿನಾಂಕ 24-10-2012 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಅಳಂದ ಚೆಕ್ ಪೋಸ್ಟ್ ಹತ್ತಿರ ಚಿಂಚೋಳಿ ಲೇಔಟ್ ನಲ್ಲಿರುವ ಹಾಳು ಭಾವಿಯಲ್ಲಿ ಒಂದು ಶವ ಬಿದ್ದಿದೆ, ಅಂತ ಜನರು ಮಾತಾಡುವದನ್ನು ಕೇಳಿ, ನಾನು ಅಲ್ಲಿಗೆ ಹೋಗಿ ನೋಡಲು, ಭಾವಿಯಲ್ಲಿದ್ದ ಶವವು ತನ್ನ ಅಣ್ಣ ಲಕ್ಷ್ಮಿಕಾಂತನ ಶವ ಆಗಿದ್ದು, ಸದರಿಯವನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 17/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

24 October 2012

GULBARGA DISTRICT REPORTED CRIMES


ವರದಕ್ಷಿಣೆ ಕಿರಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ, ಇಂದುಮತಿ ಗಂಡ ಅರುಣಕುಮಾರ ಚವ್ಹಾಣ ವಯ:28  ವರ್ಷ ಉ:ಸಹಶಿಕ್ಷಕಿ ಸಾ:ಅಂಬಿಕಾನಗರ  ಹಾವ: ಶರಣ ಕೃಪಾ ಕುವೆಂಪುನಗರ   ಗುಲಬರ್ಗಾ ರವರು ನನ್ನ ಮದುವೆಯು ದಿನಾಂಕ:18-11-2011 ರಂದು ಅರುಣಕುಮಾರ ತಂದೆ ಶಿವಾಜಿ ಚವ್ಹಾಣ ಸಾ|| ಅಂಬಿಕಾನಗರ ಗುಲಬಗರ್ಗಾ ಇತನ್ನೊಂದಿಗೆ ನೇರವೆರಿದ್ದು, ಲಗ್ನದ ಸಮಯದಲ್ಲಿ ಅರುಣಕುಮಾರ ನಿಗೆ  ವರದಕ್ಷಿಣೆ ಅಂತಾ  ಒಂದು ಲಕ್ಷ ರೂಪಾಯಿ ವರದಕ್ಷಿಣೆ, 5 ತೊಲೆ ಬಂಗಾರ ಮತ್ತು ನಿಶ್ಚಯ ಕಾಲಕ್ಕೆ  2 ತೊಲೆ ಬಂಗಾರ ಮತ್ತು ಒಂದು ಹೊಂಡಾ ಶೈನ ಮೋಟಾರ ಸೈಕಲ ಮತ್ತು ಮನೆ ಬಳಕೆಯ ಸಾಮಾನುಗಳು ತೆಗೆದುಕೊಂಡಿದ್ದಲ್ಲದೇ ಅರುಣಕುಮಾರ ಇತನು ಮೊದಲ ಸಲ ನಮ್ಮ ಮನೆಗೆ ಬಂದಾಗ  ಒಂದು ತೊಲೆ ಬಂಗಾರ  ಮಾಡಿಸಿಕೊಂಡಿದ್ದು ಇರುತ್ತದೆ. ನಂತರ ಗಂಡನಾದ ಅರುಣಕುಮಾರ, ಅತ್ತೆ, ಮಾವ, ಭಾವಂದಿರು ಅಶೋಕ ಹೆಂಡತಿ ಮೈದುನ ಇವರೆಲ್ಲರೂ ಇನ್ನೂ 50, ಸಾವಿರ ರೂಪಾಯಿಗಳು  ಒಮದು ತೋಲಿ  ಬಂಗಾರ ತೆಗೆದುಕೊಂಡು ಬರಬೇಕು ಮತ್ತು ಮದುವೆ ಮುಂಚಿತ 4 ವರ್ಷ ಶಿಕ್ಷಕಿ ಅಂತಾ ಕೆಲಸ ಮಾಡಿದ ಹಣ ಕೂಡಾ ತೆಗೆದುಕೊಂಡು ಬರಬೇಕು ಅಂತಾ ಹೇಳಿ  ಎಲ್ಲರೂ ಚಿತ್ರ ಹಿಂಸೆಕೊಟ್ಟು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಮ್ಮ ತಂದೆಯವರು ನನ್ನ ಗಂಡನ ಮನೆಗೆ ಬಂದು ತೊಂದರೆ ಕೋಡಬೇಡಿರಿ ಅಂತಾ ಹೇಳಿದ್ದರೂ ಕೂಡಾ ಮೇಲಿನಂತೆ ಹಣ ಬಂಗಾರ ತಂದಾಗ ಮಾತ್ರ ಮನೆಯಲ್ಲಿ ಕರೆದುಕೊಳ್ಳುವುದಾಗಿ ಚಿತ್ರಹಿಂಸೆ ಕೊಟ್ಟು ಮನೆಯಿಂದ ಹೊರಗೆ ಹಾಕಿದ್ದು ಇರುತ್ತದೆ. ದಿನಾಂಕ:07-10-2012 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ನನ್ನ ಕಾಕನಾದ ಗೋವಿಂದ ಇವರು  ಗಂಡನ ಮನೆಯಾದ  ಅಂಬಿಕಾನಗರಕ್ಕೆ ಹೋದಾಗ ನನ್ನ ಗಂಡ, ಅತ್ತೆ, ಮಾವ, ಹಾಗೂ ಭಾವ ಸೂರ್ಯಕಾಂತ ಇವರೆಲ್ಲರೂ ಗೋವಿಂದ ರಾಠೋಡ ಇವರಿಗೆ ಇಂದುಮತಿಗೆ ಯಾಕೆ ಕರೆದುಕೊಂಡು ಬಂದೆ ಅಂತಾ ಕೇಳಿದ್ದಕ್ಕೆ ನಮಗೆ ಹೆಚ್ಚಿನ ವರದಕ್ಷಿಣೆ ಕೊಡುವುದು ಆಗುವುದಿಲ್ಲಾ ಅಂತಾ ನನ್ನ  ಕಾಕ ಗೋವಿಂದ ರಾಠೋಡ ಅಂದಾಗ ನನಗೆ, ನನ್ನ  ಗಂಡ ಅತ್ತೆ ಮಾವ , ಭಾವ  ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದ್ದು ಕೈಯಿಂದ ಹೊಡೆಬಡೆ ಮಾಡಿ ವರದಕ್ಷಿಣೆ ಹಣ ತರುವಂತೆ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 76/2012 ಕಲಂ, 143, 147, 498 (ಎ) 323, 504, 506 ಐಪಿಸಿ ಸಂಗಡ 149 ಐಪಿಸಿ ಮತ್ತು 3 & 4 ಡಿಪಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪೊಲೀಸ್ ಪೇದೆ ಕೊಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀಮತಿ. ಮಂಜುಳಾ ಗಂಡ ಶರಣಬಸಪ್ಪ ಚಕ್ಕಿ, ಸಾ|| ಮಕ್ತಂಪೂರ ಗುಲಬರ್ಗಾ ರವರು ನಾನು 11 ವರ್ಷಗಳ ಹಿಂದೆ ಮಕ್ತಂಪೂರ ಬಡಾವಣೆಯ ಶರಣಬಸಪ್ಪ ಈತನೊಂದಿಗೆ ಮದುವೆಯಾಗಿದ್ದು, ನನ್ನ ಗಂಡನು ಪೊಲೀಸ ಇಲಾಖೆಯಲ್ಲಿ ಪೊಲೀಸ ಕಾನ್ಸಟೇಬಲ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ಯ ಅವರು ಗುಲಬರ್ಗಾದ ಅಬಕಾರಿ ಮತ್ತು ಲಾಟರಿ ನಿಷೇದ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ.  ಮದುವೆಯಾದ ಒಂದು ವರ್ಷದ ನಂತರ ನನ್ನ ಗಂಡನು ಕರಜಗಿ ಗ್ರಾಮದ ಕವಿತಾ ಅನ್ನುವಳೊಂದಿಗೆ ಯಾವುದೋ ಗುಡಿಯಲ್ಲಿ ಹಾರ ಬದಲಾಯಿಸಿಕೊಂಡು ನಂತರ 8-10 ವರ್ಷಗಳ ಹಿಂದ ಅವಳಿಂದ ಬೇರೆಯಾಗಿರುವ ವಿಷಯ ನನಗೆ ಗೊತ್ತಾಗಿರುತ್ತದೆ. ದಿನಾಂಕ: 24/10/2012 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ನಾದನಿ, ನಮ್ಮ ತಮ್ಮ ಎಲ್ಲರೂ ನಮ್ಮ ಮನೆಯಲ್ಲಿ ಇರುವಾಗ ಇಬ್ಬರು ಪೊಲೀಸರು ನಮ್ಮ ಮನೆಗೆ ಬಂದು ಶರಣಬಸಪ್ಪನಿಗೆ ಯಾರೋ ಹೊಟ್ಟೆಗೆ ಚಾಕುವಿನಿಂದ ಯಾವುದೋ ಸ್ಥಳದಲ್ಲಿ ಹೊಡೆದು ಶವವನ್ನು ಬ್ರಹ್ಮಪೂರ ಠಾಣೆಯ ಹಿಂದುಗಡೆ ಕಂಪೌಂಡ ಹತ್ತಿರ ತಂದು ಬಿಸಾಕಿರುತ್ತಾರೆ. ಅಂತಾ ತಿಳಿಸಿದ ಮೇರೆಗೆ ನಾವು ಮೂವರು ಗಾಬರಿಯಾಗಿ ಸ್ಥಳಕ್ಕೆ ಬಂದು ನೋಡಲು ಯಾರೋ ದುಷ್ಕರ್ಮಿಗಳು ನನ್ನ ಗಂಡನಿಗೆ ಹೊಟ್ಟೆಗೆ ಹಾಗೂ ಬಲಗಡೆ ಕಿವಿಯ ಹತ್ತಿರ ಮತ್ತು ಎಡಗಡೆ ತುಟಿಯ ಮೇಲೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಕಂಡು ಬರುತ್ತದೆ. ನನ್ನ ಗಂಡನು ನಿನ್ನೆ ದಿನಾಂಕ:23/10/2012 ರಂದು ರಾತ್ರಿ 7:00 ಗಂಟೆಗೆ ರಾತ್ರಿ ಕರ್ತವ್ಯ ಇರುತ್ತದೆ ಅಂತಾ ಮನೆಯಿಂದ ಹೇಳಿ ಹೋಗಿರುತ್ತಾರೆ. ನನ್ನ ಗಂಡನ ಶವದ ಸ್ಥಿತಿ ನೋಡಲು ಯಾರೋ ದುಷ್ಕರ್ಮಿಗಳು ದಿನಾಂಕ: 24/10/2012 ರಂದು ಬೆಳಿಗ್ಗಿನ ಜಾವ 04-00 ಗಂಟೆಯಿಂದ 06-00 ಗಂಟೆಯ ಮದ್ಯದ ಅವಧಿಯಲ್ಲಿ ಹೊಟ್ಟೆಗೆ ಮತ್ತು ಶರೀರದ ಇತರೆ ಭಾಗಗಳಲ್ಲಿ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಕಾರಣ ನನ್ನ ಗಂಡನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿಯ ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:112/2012 ಕಲಂ: 302 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

23 October 2012

GULBARGA DISTRICT REPORTED CRIMES

ಸರ್ಕಾರಿ  ಬುದ್ದಿ ಮಾಂದ್ಯ ಮಕ್ಕಳ ವಸತಿ ನಿಲಯದಲ್ಲಿ ಬೇಜವಾಬ್ದಾರಿ ತೋರಿಸಿದ, ನಿಲಯದ ಅಧಿಕಾರಿ ಮತ್ತು ಸಿಬ್ಬಂದಿಯವರ ವಿರುದ್ದ  ಪ್ರಕರಣ :
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಆನಂದರಾಜ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಗುಲಬರ್ಗಾ ಜಿಲ್ಲೆ ಗುಲಬರ್ಗಾರವರು,  ಸಂಗಿತಾ ತಂದೆ ಮಲ್ಲಪ್ಪಾ ಕಟ್ಟಿಮನಿ ಸಾ|| ಇಟಗಾ ಎಂಬ ಮಗುವನ್ನು ದಿನಾಂಕ:05-10-2012 ರಂದು ಮಗುವಿನ ಅಣ್ಣ ತಿಪ್ಪಣ್ಣಾ ಇವರು ಮಗುವನ್ನು ತಾತ್ಕಲಿಕವಾಗಿ ಸ್ವಾಗತ ಕೇಂದ್ರಕ್ಕೆ ದಾಖಲು ಮಾಡಿರುತ್ತಾರೆ, ದಿನಾಂಕ:17-10-2012 ರಂದು ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಗುಬರ್ಗಾ ಜಿಲ್ಲೆ ಇವರು ಬಾಲಕರ ಬಾಲ ಮಂದಿರ ಸಭೆ ಮುಗಿಸಿಕೊಂಡು ಅನಿರಿಕ್ಷೀತವಾಗಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದಾಗ ಮಗು ಸಂಗೀತಾ ಅಳುತ್ತಿದದ್ದನ್ನು ಕಂಡು ವಿಚಾರಿಸಿದಾಗ, ಮಗುವಿನ ಕಾಲಿನ ಮೇಲೆ ಬೆಂಕಿಯಿಂದ ಸುಟ್ಟಗಾಯ ಕಂಡುಬಂದಿತ್ತು. ಈ ಕೃತ್ಯದ ಬಗ್ಗೆ ಸಿಬ್ಬಂದಿಯವರಿಗೆ  ವಿಚಾರಿಸಿದಾಗ ಮಗು ಬಿದ್ದಿರುವುದಾಗಿ ಹೇಳಿರುತ್ತಾರೆ, ಆದರೆ ಮಗು ಸುಟ್ಟಿರುವುದಾಗಿ ಹೇಳಿಕೆ ನೀಡಿರುತ್ತದೆ. ಮಕ್ಕಳ ಆರಕ್ಷಣೆ ಪೋಷಣೆ ಆರೈಕೆಯ ಜವಾಬ್ದಾರಿ ಹೋತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯವರ ಬೇಜವಾಬ್ದಾರಿಯೇ ಈ ತರಹದ ಘಟನೆಗೆ ಕಾರಣವಾಗಿರುತ್ತದೆ ಅಂತಾ ಶ್ರೀ ಆನಂದರಾವ ರವರು ಬಾಲಕಿಯವರ ಬಾಲ ಮಂದಿರದ  ಅಧೀಕ್ಷಕರು ಹಾಗೂ ಸಿಬ್ಬಂದಿಯವರ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:75/2012 ಕಲಂ 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ. ನಿಲಕಂಠ ತಂದೆ ವಿರಯ್ಯ ಗುರುಮಿಠಕಲ ಸಾ|| ಬಸವ ಸದನ ಖುಬಾ ಪ್ಲಾಟ್  ಗುಲಬರ್ಗಾ ರವರು ನಾನು ಸಾಯಿ ವಿನಾಯಕ ಸೇರಾಮಿಕ್ ಸ್ಟೋರ ದಿನಾಂಕ.20.10.2012 ರಂದು ರಾತ್ರಿ 9.00 ಗಂಟೆಗೆ ತಮ್ಮ ಅಂಗಡಿ ಮುಚ್ಚಿಕೊಂಡು ಹೋಗಿದ್ದು, ದಿನಾಂಕ.22.10.2012 ರಂದು ಬೆಳಿಗ್ಗೆ 10.15 ಗಂಟೆಗೆ ಅಂಗಡಿ ತೆರೆದು ನೋಡಲಾಗಿ ಯಾರೋ ಕಳ್ಳರು ಅಂಗಡಿಯ ಹಿಂದಿನ ಕಿಡಕಿ ತೆರೆದು ಶೊಕೇಶಗಳಲ್ಲಿ ಇಟ್ಟ 1,98,515/- ರೂ ಕ್ಕಿಮತ್ತಿನ ಸೆನಟರಿ ವೇರ (ಸಿ.ಪಿ ಭಾತ ರೂಂ ಫಿಟಿಂಗ್ಸ) ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.129/2012 ಕಲಂ.457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 October 2012

GULBARGA DISTRICT


ಅರವಿಂದ ನರೋಣಿ ಕೊಲೆ ಮಾಡಿದ ಮೂರು ಜನ ಆರೋಪಿಗಳ ಬಂಧನ.
     ದಿನಾಂಕ:25-09-2012 ರಂದು ಸಾಯಂಕಾಲ ಗುಲಬರ್ಗಾ ನಗರದ ಆಳಂದ ರೋಡಿಗೆ ಇರುವ ಕಡಗಂಚಿ ಕಾಂಪ್ಲೇಕ್ಸ ಹತ್ತಿರ ಕಾಂಪ್ಲೇಕ್ಸ ಮಾಲಿಕರಾದ ಶ್ರೀ ಅರವಿಂದ ನರೋಣಿ, ನಿರ್ದೇಶಕರು, ಕರ್ನಾಟಕ ಹಾಲು ಒಕ್ಕೂಟ ಗುಲಬರ್ಗಾ ಸಾ|| ಕಡಗಂಚಿ ಇವರಿಗೆ, ಕಡಗಂಚಿ ಗ್ರಾಮದ ಯೋಗೇಶ ಹೊಸಕುರಬರ, ಬೀರಣ್ಣ ವಗ್ಗಿ, ಭೀಮರಾಯ ಹೊಸಕುರಬರ, ಮಲ್ಲಪ್ಪ ವಗ್ಗಿ, ಸೋಮಯ್ಯ ಸ್ವಾಮಿ, ಶ್ರೀಶೈಲ ಅಲ್ದಿ, ಜಗಪ್ಪ ಹೊಸಕುರಬರ, ವಿಠಲ ಹೊಸಕುರಬರ ಹಾಗು ಇತರರು ಕೂಡಿಕೊಂಡು ಬಂದು, ಪಿಸ್ತೂಲ್ ಹಾಗು ತಲವಾರದಿಂದ ಹೊಡೆದು ಕೊಲೆ ಮಾಡಿದ್ದಲದೇ,  ಶರಣು ನರೋಣಿ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿರುತ್ತಾರೆ ಅಂತಾ ಶಿವಪತ್ರ ತಂದೆ ಚಂದ್ರಶಾ ಕ್ಯಾರ ಇವರು ಕೊಟ್ಟ ದೂರಿನ ಮೇರೆಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
      ಸದರಿ ಪ್ರಕರಣದ ತನಿಖೆ ಮತ್ತು ಆರೋಪಿತರ ಪತ್ತೆಗಾಗಿ ಗುಲಬರ್ಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪವಾರ ಪ್ರವೀಣ ಮಧುಕರ ಐ.ಪಿ.ಎಸ್,  ಎಸ.ಪಿ ಗುಲಬರ್ಗಾ ಇವರು ಕೊಲೆ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿದ್ದು, ಸದರಿ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿತರ ಪತ್ತೆ ಮಾಡಿ ಆರೋಪಿತರಾದ 1.ಯೋಗೇಶ ತಂದೆ ಮಾಳಪ್ಪಾ ಹೊಸಕುರಬರ ಸಾ|| ಕಡಗಂಚಿ, 2.ಸೈಪನಸಾಬ ತಂದೆ ಹುಸೇನಸಾಬ ಶೇಖ ಸಾ|| ಝಳಕಿ ತಾ|| ಆಳಂದ, 3.ಮಲ್ಲಪ್ಪ ತಂದೆ ಶಾಂತಪ್ಪಾ ವಗ್ಗೆ ಸಾ|| ಕಡಗಂಚಿ ಇವರನ್ನು ರಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಮಚ್ಚು, ಎರಡು ಮೊಬೈಲಗಳು, ವಿವಿಧ ಕಂಪನಿಯ ಸಿಮ್ ಗಳು ಜಪ್ತಿ ಪಡಿಸಿಕೊಂಡಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರೋಪಿತರ ಪತ್ತೆ ಕಾರ್ಯ ಹಾಗು ತನಿಖೆ ಜಾರಿಯಲ್ಲಿರುತ್ತದೆ.  

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ನರೇಂದ್ರ ತಂದೆ ಸುರೇಂದ್ರ ಕುಲಕರ್ಣಿ  ಸಾ; ನ್ಯೂ ರಾಘವೇಂದ್ರ ಕಾಲನಿ ಗುಲಬರ್ಗಾರವರು ನಾನು ದಿನಾಂಕ:20/10/2012 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಸಂಬಂಧಿಕರಾದ ರಾಹುಲ ಪ್ರವೀಣ ಎಲ್ಲರೂ ತುಳಜಾಪುರಕ್ಕೆ ನಡೆದುಕೊಂಡು ಹೊರಟಿದ್ದೆವು. ಕೆರೆಭೋಸಗಾ ಕ್ರಾಸ ದಾಟಿ 1 ಕಿ.ಮೀ. ದೂರದಲ್ಲಿ ಎಡ ರೋಡ ಬದಿಯಿಂದ ನಡೆದುಕೊಂಡು ಹೊರಟಾಗ ಆಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು  ಡಿಕ್ಕಿ ಪಡಿಸಿ ಹಾಗೇ ಹೋಗಿರುತ್ತಾನೆ ಇದರಿಂದಾಗಿ ಎಡಗಾಲ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ.   ಅಂತಾ  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 337/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಕವಿತಾ ಗಂಡ ಶಿವಯ್ಯಾ ಮಠಪತಿ   ಸಾ: ಹಿಟ್ಟಿನ ಗಿರಣಿ  ಹತ್ತಿರ ಕುವೆಂಪು ನಗರ   ಗುಲಬರ್ಗಾ ರವರು ನಾನು ದಿನಾಂಕ:21-10-2012 ರಂದು ಮಧ್ಯಾಹ್ನ 2=45 ಗಂಟೆಯ ಸುಮಾರಿಗೆ ನಡೆದುಕೊಂಡು ಖುಬಾ ಕಲ್ಯಾಣ ಮಂಟಪ ಹತ್ತಿರ ಬಂದಾಗ ನಮಗೆ ಪರಿಚಯ ಇರುವ ಜೆಕಬ ಈತನು ತನ್ನ ಮೋಟಾರ ಸೈಕಲ ನಂ: ಕೆಎ 32 ಇಎ-927 ನೆದ್ದರ ಮೇಲೆ ಬಂದು ನಾನು ನಿಮ್ಮ ಮನೆಯ ಕೆಡೆಗೆ ಹೋಗುತ್ತಿದ್ದೇನೆ ಅಂತಾ ಹೇಳಿದಾಗ ನಾನು ಆತನ ಮೋಟಾರ ಸೈಕಲ್ ಮೇಲೆ ಹಿಂದುಗಡೆ  ಕುಳಿತುಕೊಂಡು ಲಾಹೋಟಿ ಕ್ರಾಸ್ ಮುಖಾಂತರ ಹೋಗುತ್ತಿದ್ದಾಗ ಲಾಹೋಟಿ ಪೆಟ್ರೋಲ್ ಪಂಪ್ ಸಮೀಪ ಮೋಟಾರ ಸೈಕಲ್ ನಂ: ಕೆಎ-32 ಜೆ-6786 ನೇದ್ದರ ಚಾಲಕ ಆಕೀಫ ಇತನು ತನ್ನ ಮೋಟಾರ ಸೈಕಲನ್ನು ಜಗತ ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಗೆ  ಡಿಕ್ಕಿ ಪಡಿಸಿ  ಭಾರಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 107/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಪುತಳಬಾಯಿ ಗಂಡ ದೇವಿಂದ್ರಪ್ಪಾ ಸಾಗರ ಸಾ: ಸಿಐಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 21-10-2012 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ನನ್ನ ಮಗ ಮೋಹನ ಇತನು ಮೋಟಾರ ಸೈಕಲ ನಂ ಕೆಎ-32 ಇಸಿ-630 ನೇದ್ದರ ಮೇಲೆ ಘಾಟಿಗೆ ಲೇಔಟ ದಿಂದ ರೈಲ್ವೆ ಗೇಟ ಕಡೆಗೆ ಹೋಗುತ್ತಿರುವಾಗ ಘಾಟಿಗೆ ಲೇ ಔಟ ನಲ್ಲಿರುವ ಶಿವಶಂಕರ ನಿಲಾರಿ ರವರ ಮನೆಯ ಎದುರುಗಡೆ ರೋಡಿನ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಇಬಿ-3245 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಮೋಹನ ಮೋಟಾರ ಸೈಕಲಗೆ  ಡಿಕ್ಕಿ ಪಡಿಸಿ  ನನ್ನ ಮಗನಿಗೆ  ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 108/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

21 October 2012

GULBARGA DISTRICT REPORTED CRIME


ಗುಲಬರ್ಗಾ ಜಿಲ್ಲಾ ಡಿಸಿಐಬಿ ಘಟಕ ಅಧಿಕಾರಿಗಳ ನೇತ್ರತ್ವದಲ್ಲಿ ದಾಳಿ, ಸುಮಾರು 9,901 ರೂ ಮೌಲ್ಯದ ಅನಧಿಕೃತ ಮಧ್ಯ ಜಪ್ತಿ ಒಬ್ಬ ಆರೋಪಿ ಬಂದನ :

ಗುಲಬರ್ಗಾ ಜಿಲ್ಲೆಯ ಫರತಬಾದ ಪೊಲೀಸ್ ಠಾಣೆ ವ್ಯಾಪ್ತಿಯ  ಹೊನ್ನ ಕಿರಣಗಿ ಗ್ರಾಮದಲ್ಲಿ ದಿನಾಂಕ:20-10-2012 ರಂದು ಮಧ್ಯಾಹ್ನ ಸುಮಾರಿಗೆ ಅಲ್ಲಿನ ಹೋಟೆಲದಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ  ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ.  ಗುಲಬರ್ಗಾಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ರವರ ಮಾರ್ಗದರ್ಶನದ ಮೇರೆಗೆ ದಿನಾಂಕ:20-10-2012 ರಂದು ಮದ್ಯಾಹ್ನ  ಡಿಸಿಐಬಿ ಘಟಕದ ಆಧಿಕಾರಿಯಾದ ಶ್ರೀ ಎಸ್. ಎಸ್. ಹುಲ್ಲೂರ  ಪೊಲೀಸ್ ಇನ್ಸಪೇಕ್ಟರ, ಮತ್ತು ಸಿಬ್ಬಂದಿಯವರಾದ  ಬಸವರಾಜ ಎ.ಎಸ.ಐ. ಮತ್ತು ಮುಖ್ಯ ಪೇದೆಯಗಳಾದ ಪ್ರಕಾಶ, ಅಣ್ಣಪ್ಪಾ, ವಿಜಯಕುಮಾರ, ಲಕ್ಕಪ್ಪಾ, ವೀರಣ್ಣಾ ಎಪಿಸಿ ಹಾಗು ಫರತಬಾದ ಪೊಲೀಸ್ ಠಾಣೆಯ ಪಿ.ಎಸ.ಐ ರವರಾದ ಭೋಜರಾಜ ರಾಠೋಡ,  ದೇವಿಂದ್ರಪ್ಪಾ ಪಿಸಿ ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಸಂತೋಷ ತಂದೆ ಪ್ರಭು ಬೂಸಾ ಸಾ|| ಹೊನ್ನ ಕಿರಣಗಿ ಗ್ರಾಮ ಇತನು ಯಾವದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ  ದಾಳಿ ಮಾಡಿ ಮಧ್ಯ ಮಾರಾಟ ಮಾಡಿದ ನಗದು ಹಣ 620/-, ಒಂದು ಮೊಬಾಯಿಲ್, ಹಾಗು ಮಧ್ಯದ ಬಾಟಲಿಗಳು  ಹೀಗೆ ಒಟ್ಟು 9,901/- ರೂಪಾಯಿಗಳ ಮೌಲದ್ದು ಮುದ್ದೆ ಮಾಲನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಫರತಬಾದ ಪೊಲೀಸ್ ಠಾಣೆ ಗುನ್ನೆ ನಂ:129/2012 ಕಲಂ  32, 34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ  ಮಹ್ಮದ ಇಮ್ರಾನ ಹನಿಫೋದ್ದಿನ ತಂದೆ ಮಹ್ಮದ ಅಜಮೋದ್ದಿನ ಸಾಃ ಕೆ.ಬಿ.ಎನ್ ಕಾಲೇಜ ಹತ್ತಿರ ರೋಜಾ (ಬಿ) ಗುಲಬರ್ಗಾ ರವರು ದಿನಾಂಕ:21-10-2012 ರಂದು  12-00 ಪಿ.ಎಮ್ ನಾನು ಮತ್ತು ನನ್ನ ಮಾವನಾದ ರಫೀಕ ಪಾಷಾ ಇಬ್ಬರು ಕೂಡಿಕೊಂಡು  ಕೆ.ಬಿ.ಎನ್ ದರ್ಗಾ ಕಡೆಯಿಂದ ನಡೆದುಕೊಂಡು ಬರುತ್ತಿದ್ದಾಗ ಕಾರ ನಂ. ಕೆಎ 32 ಎಮ್. 9758 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋರಟಿದ್ದ ನನಗೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2012 ಕಲಂ 279, 337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.