POLICE BHAVAN KALABURAGI

POLICE BHAVAN KALABURAGI

24 April 2012

GULBARGA DIST REPORTED CRIMES


ಕೊಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಶಿವರಾಮ ತಂದೆ ಚಂದಪ್ಪ ಸೂರ್ಯವಂಶಿ ಸಾ: 14 ನೇ ಕ್ರಾಸ ತಾರಫೈಲ ಗುಲಬರ್ಗಾರವರು ನನಗೆ 3 ಜನ ಗಂಡು ಮಕ್ಕಳಿದ್ದು,  ಒಬ್ಬಳು ಹೆಣ್ಣು ಮಗಳು ಇದ್ದು ರಮೇಶ ಈತನು ಹಿರಿಯವನಾಗಿರುತ್ತಾನೆ. ದಿನಾಂಕ 23-04-12 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಜೇವರ್ಗಿಯಿಂದ ನನ್ನ ಬಾಳೆ ಹಣ್ಣಿನ ಬಂಡೆಯ ಹತ್ತಿರ ಬಂದು ತನ್ನಲ್ಲಿದ್ದ 1000/- ರೂ ಗಳನ್ನು ನನಗೆ ಇಟ್ಟುಕೊಳ್ಳು ಅಂತಾ ಹೇಳಿದಾಗ ನಾನು ಮನೆಗೆ ಹೋಗಿ ನಿನ್ನ ತಾಯಿಗೆ ಕೊಡುಅಂತಾ ಹೇಳಿದೇನು. ಆಗ ರಮೇಶ ಈತನು ನನ್ನಲ್ಲಿಂದ ಮನೆಗೆ ಹೋಗುವಾಗ ರಾತ್ರಿ 9-00 ಗಂಟೆ ಆಗಿತ್ತು. ದಿನಾಂಕ 24-4-12 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನನ್ನ ಮೂರನೇ ಮಗನಾದ ಚಂದ್ರಕಾಂತ ಈತನು ಬಂದು ರಮೇಶ ಅಣ್ಣನಿಗೆ ರೈಲ್ವೆ ಕ್ವಾಟರ್ಸ ಹತ್ತಿರ ಯಾರೋ ಹೊಡೆದು ಕೊಲೆ ಮಾಡಿ ರಸ್ತೆಯ ಪಕ್ಕದ ಗಟಾರದಲ್ಲಿ ಬಿಸಾಕಿ ಹೋಗಿರುತ್ತಾರೆ.ಅಂತಾ ಹೇಳಿದ ತಕ್ಷಣ ನಾನು, ನಮ್ಮ ಮನೆಯವರೆಲ್ಲರೂ ಹೋಗಿ ನೋಡಲು ನನ್ನ ಮಗ ರಮೇಶನ ಶವವು ಗಟಾರದಲ್ಲಿ ಬಿದ್ದಿದ್ದು, ಯಾರೋ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಎಳೆದು ಹಾಕಿದ ರಕ್ತದ ಕಲೆಗಳು ಬಿದ್ದಿದ್ದು ಮತ್ತು ಅಲ್ಲೆ ಪಕ್ಕದಲ್ಲಿ ಒಂದು ರಕ್ತ ಹತ್ತಿದ ಪರಸಿ ಕಲ್ಲು ಬಿದ್ದಿರುವದನ್ನು ನೋಡಿರುತ್ತೇನೆ.     ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ನನ್ನ ಮಗನಿಗೆ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 55/12 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಮಾಡಿದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಕ್ರಿಶ್ನಾಥ ಪವಾರ ವ್ಯವಸ್ಥಾಪಕರು ಲಕ್ಷ್ಮಿ ಭವಾನಿ ವಾಚ್ ಕಂಪನಿ, ಹೆಚ್.ಎಮ್.ಟಿ ಶೋ ರೂಮ್, 12 ಸುಪರ ಮಾರ್ಕೆಟ ಗುಲಬರ್ಗಾ ರವರು ನಮ್ಮ ಅಂಗಡಿಗೆ ದೀಪಕ ಜೈನ ಶ್ರೀನಾಥ ಟ್ರೇಡಿಂಗ, 363/64, ಆಶಾ ಕಾಂಪ್ಲೇಕ್ಸ ರವಿವಾರ ಪೇಠ ಪಿ.ಎಮ್.ಸಿ ಬ್ಯಾಂಕ ಕರಾಡಾ ಜಿ|| ಸತಾರಾ, ಮಹಾರಾಷ್ಟ್ರ ರಾಜ್ಯ ಫೋನ್ ನಂ: 08551024757 ನೇದ್ದವನು ಸುಪರ ಮಾರ್ಕೆಟನಲ್ಲಿರುವ ನಮ್ಮ ಅಂಗಡಿಗೆ ದಿನಾಂಕ: 18/04/2012 ರಂದು ಬಂದು ಟೈಟಾನ ಕೈ ಗಡಿಯಾರಗಳನ್ನು ಪರಿಶೀಲಿಸಿ ಸುಮಾರು 20 ಬೆಲೆಬಾಳುವ ಗಡಿಯಾರಗಳನ್ನು ಅ||ಕಿ|| 1,09,960/- ನೇದ್ದವುಗಳನ್ನು ಸರಿಯಾಗಿವೇ ಅಂಯಾ ಹೇಳಿ ಹೋಗಿ ದಿನಾಂಕ: 21/04/2012 ರಂದು ಸಾಯಂಕಾಲ 6-30 ಗಂಟೆಗೆ ಆ ವ್ಯಕ್ತಿ ನಮ್ಮ ಅಂಗಡಿಗೆ ಬಂದು ತಾನು ಈ ಮೊದಲು ನೋಡಿದ 20 ಗಡಿಯಾರಗಳು ತೆಗೆದುಕೊಂಡು 1,09,960/- ರೂಪಾಯಿಯ  ಡಿಡಿ ಕೊಟ್ಟು ಹೋಗಿದ್ದು, ನಾನು ಸದರಿ ಡಿ.ಡಿ ಯನ್ನು ಕ್ಲೀಯರಿಂಗ ಗೋಸ್ಕರ ದಿನಾಂಕ: 23/04/2012 ರಂದು ಸುಪರ ಮಾರ್ಕೆಟನಲ್ಲಿರುವ ಯೂಕೋ ಬ್ಯಾಂಕಿಗೆ ಹಾಕಿದಾಗ ಸದರಿ ಡಿ.ಡಿಯು ನಕಲಿ (ಫೇಕ) ಡಿ.ಡಿ ಅಂತಾ ಪರಿಗಣಿಸಿ ಯೂಕೋ ಬ್ಯಾಂಕಿನವರು ವಾಪಸ್ಸ ನಮ್ಮ ಅಂಗಡಿಗೆ ಕಳುಹಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ: 406, 420 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಲೀನಾ ಮುನ್ನಾಡೆ ಭೊರಶಿಯನ್ ಸಾ|| ಮುನಿರ ಪಾಷಾ ಕಟ್ಟಡ ಐವಾನ- -ಶಾಹಿ ಕಾಲೋನಿ ಗುಲಬರ್ಗಾರವರು ದಿನಾಂಕ:08.02.2012 ರಿಂದ ಇಲ್ಲಿಯವರೆಗೆ ಸುವರ್ಣಾ ಗಂಡ ನಾಮದೇವ ಸಾ|| ಶಹಬಾಜ ಕಾಲೋನಿ ಗುಲಬರ್ಗಾ ಇವಳು ಆಗಾಗ ನಮ್ಮ ಮನೆಗೆ ಬಂದು ನಮ್ಮೊಂದಿಗೆ ಸಲುಗೆಯಿಂದ ಇದ್ದು ನಮ್ಮ ಮನೆಯಲ್ಲಿಯ 8000/-ರೂ ಕಳ್ಳತನ ಮಾಡಿಕೊಂಡು ಹೋಗಿದ್ದು, ಆಕೆಯನ್ನು  ವಿಚಾರಿಸಿದಾಗ ಆಕೆಯ ಗಂಡ ಹಾಗೂ ಇನ್ನೂ 4 ಜನರು ಬಂದು ಬೆದರಿಸಿ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 56/12 ಕಲಂ 380, ,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES

ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ :ಶ್ರೀ ಕಿಶನ ತಂದೆ ಧಾದರ ಸಾಳುಂಕೆ ಸಾ: ಹೆಬ್ಬಾಳ ರೋಡ ಆಳಂದ ತಾ: ಆಳಂದ ರವರು ನಾನು ಮತ್ತು ಜೈಸಿಂಗ ದಿನಾಂಕ: 23/4/2012 ರಂದು ಮೋಟಾರ ಸೈಕಲ ನಂ ಕೆಎ 32 ಕೆ 7706 ನೇದ್ದರ ಮೇಲೆ ಗುಲಬರ್ಗಾಕ್ಕೆ ಬಂದು ಮದುವೆ ಮುಗಿಸಿ ಕೊಂಡು ಮರಳಿ ಆಳಂದಕ್ಕೆ ಹೋಗುವಾಗ ಕೆರೆ ಬೋಸ್ಗಾ ಕ್ರಾಸ ಹತ್ತಿರ ತಿರುವಿನಲ್ಲಿ ಅತಿವೇಗ ಅಲಕ್ಷತನದಿಂದ ನಡೆಯಿಸಿದ್ದರಿಂದ ನಿಯಂತ್ರಣ ತಪ್ಪಿ ಮೋಟಾರ ಸೈಕಲ ಮೇಲಿಂದ ಬಿದ್ದು ರಕ್ತಗಾಯ ಗುಪ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 125/2012 ಕಲಂ 279 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:
ಶ್ರೀ ಶಿವಕುಮಾರ ತಂದೆ ವಸಂತರಾವ ಮಾಲಿ ಪಾಟೀಲ & ಬಿರಾದಾರ ಸಾ|| ನಾವದಗಿ (ಬಿ) ತಾ|| ಗುಲಬರ್ಗಾರವರು ನಾನು ದಿನಾಂಕ: 23/4/2012 ರಂದು ಗುಲಬರ್ಗಾ ಕ್ಕೆ ಮೋಟರ ಸೈಕಲ ನಂ ಕೆಎ 32 ಇ 2373 ನೇದ್ದರ ಮೇಲೆ ಬಂದು ಮದುವೆ ಕಾರ್ಡಗಳನ್ನು ಹಂಚಿ ಮರಳಿ 5:30 ಪಿಎಮ ಸುಮಾರಿಗೆ ಸ್ವಾಮಿ, ಸರ್ಮಥ ಗುಡ್ಡದ ಇಳಕಲಿನಲ್ಲಿ ಹೊರಟಾಗ ಇಂಡಿಕಾ ಕಾರ ನಂ ಎಪಿ 28 ಎಎಲ್‌ 3552 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಓವರ ಟೇಕ ಮಾಡಲು ಹೋಗಿ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತ ಬಿದ್ದು ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆ ಪ್ರಕರಣ:

ರಟಕಲ್ ಪೊಲೀಸ್ ಠಾಣೆ:ಶ್ರೀ ದಶರಥ ತಂದೆ ತುಕಾರಾಮ ಚಿನ್ನಾ ರಾಠೋಡ ಸಾ||ರುಮ್ಮನಗೂಡ ತಾಂಡ ರವರು ನನ್ನ ತಂದೆ ಈಗ ಸುಮಾರು 8 ವರ್ಷದ ಹಿಂದೆ ತೀರಿಕೊಂಡಿದ್ದು, ಆವಾಗಿನಿಂದ ನನ್ನ ತಾಯಿ ಸೀತಾಬಾಯಿ ಇವಳು ನಮ್ಮ ತಾಂಡೆಯ ಉಮ್ಲಾ ತಂದೆ ಪೊಮು ರಾಠೋಡ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ನಮಗೆ ಸರಕಾರರಿಂದ ಒಂದು ಮನೆ ಮಂಜೂರಾಗಿದ್ದರಿಂದ ಮನೆ ಕಟ್ಟುತ್ತಿದ್ದು ಮೊನ್ನೆ ಮನೆಯ ಬಿಲ್ಲಿನ ಹಣ ಬಂದಿದ್ದರಿಂದ ನನ್ನ ತಾಯಿ ಚಿಂಚೋಳಿ ಬ್ಯಾಂಕಿಗೆ ಹೋಗಿ ಹಣ ತಂದಿದ್ದುದನ್ನು ನೋಡಿ, ಉಮ್ಲಾ ರಾಠೋಡನು ನಮ್ಮ ಮನೆಗೆ ಬಂದು ನನ್ನ ತಾಯಿಗೆ ಹಣ ಕೊಡು ಅಂತ ಜಗಳ ಮಾಡುತ್ತಿದ್ದಾಗ ನನ್ನ ಹೆಂಡತಿ ಯಮುನಾ, ನನ್ನ ತಂಗಿ ಸವಿತಾ ಕೂಡಿ ಸಮಜಾಯಿಸಿರುತ್ತೇವೆ. ದಿನಾಂಕ: 22.04.2012 ರಂದು ಉಮ್ಲಾ ನಾನು ಹೊಲಕ್ಕೆ ನಡೆದಿದ್ದೇನೆ ನೀನು ನಡಿ ಅಂತ ನನ್ನ ತಾಯಿಗೆ ಕರೆದುಕೊಂಡು ಹೋಗಿದ್ದು ರಾತ್ರಿ ಆದರೂ ಮನೆಗೆ ಬರಲಿಲ್ಲಾ ದಿನಾಂಕ:23.04.2012 ರಂದು ಮಧ್ಯಾಹ್ನ 3 ಗಂಟೆಯ ತನಕ ಹುಡುಕಾಡಿ ಉಮ್ಲಾ ರಾಠೋಡನಿಗೆ ಕೇಳಲು ಹೊಲದ ಕಡೆಗೆ ನೋಡೊಣ ಅಂತ ಕರೆದುಕೊಂಡು ಹೋಗಿ ಹುಡುಕಾಡಿದಂತೆ ಮಾಡುತ್ತಿರುವಾಗ ನಮ್ಮ ತಾಯಿ ಕಾಣಿಸಲಿಲ್ಲಾ ನನಗೆ ಸಂಶಯ ಬಂದು ನಿಜ ಹೇಳು ನನ್ನ ತಾಯಿ ನಿನ್ನ ಜೊತೆ ಬಂದವಳು ಮನೆಗೆ ಬಂದಿಲ್ಲಾ ಏನು ಮಾಡಿದ್ದಿ ಅಂದಾಗ, ನಿನ್ನ ತಾಯಿಗೆ ಹಣ ಕೇಳಿದೆ ಕೊಡುವದಿಲ್ಲಾ ಅಂದಿದ್ದಕ್ಕೆ ನನ್ನ ಹತ್ತಿರವಿದ್ದ ಬಂದೂಕಿನಿಂದ ಆಕೆಯ ತಲೆಗೆ ಹೊಡೆದಿದ್ದು ಹೊಲದ ಕೆಳಗೆ ಬಂಡಿಕೊಳ್ಳ ನಾಲಾದಲ್ಲಿ ಸತ್ತು ಬಿದ್ದಿರುತ್ತಾಳೆ, ಏನು ಮಾಡ್ತಿರಿ ಅಂತ ಅನ್ನುತ್ತಾ ಓಡಿಹೋದನು ನಾವು ಹುಡುಕಾಡಲು ಅಲ್ಲಿ ಬಂದಿಕೊಳ್ಳದ ನಾಲಾದ ಕಲ್ಲು ಬಂಡಿಯ ಹತ್ತಿರ ನಮ್ಮ ತಾಯಿಯ ಹೆಣ ಬಿದ್ದಿದ್ದು ಮೋಡಿ ಕಾನೂನು ಕ್ರಮ ಜರೂಗಿಸಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 23/12 ಕಲಂ 302, ಐಪಿಸಿ ಸಂ 27 ಆಯುಧ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.