POLICE BHAVAN KALABURAGI

POLICE BHAVAN KALABURAGI

10 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ರೇವಣಸಿದ್ದಪ್ಪಾ ತಂದೆ ಚನ್ನವೀರಪ್ಪಾ ಹತ್ತಿ  ಸಾಃ ಹಸರಗುಂಡಗಿ ತಾ|| ಚಿಂಚೋಳಿ,  ರವರಿಗೆ ದಿನಾಂಕ 09-01-2015 ರಂದು ಹಳೆ ಮಾರ್ಕೆಟ ರಸ್ತೆಯ ಆಸೀಫ ಗಂಜ ಶಾಲೆ ಎದುರಿನ ರಸ್ತೆ ಮೇಲೆ.ಆರೋಪಿ ತನ್ನ ಬುಲೇರೊ ಗುಡ್ಸ ವಾಹನ ಸಂಖ್ಯೆ ಕೆ ಎ 32 ಬಿ 4830, ನೆದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದಾ ಫಿರ್ಯಾದಿಗೆ ಡಿಕ್ಕಿ ಪಡೆಸಿಸಿ ಕಾಲಿಗೆ ಗಾಯವಾಗಿದ್ದು ಆರೋಪಿತನು ಫಿರ್ಯಾದಿಗೆ ಉಪಚಾರ ಕುರಿತು ತನ್ನ ವಾಹನದಲ್ಲಿ ಬಿ ಸಿ ಪಾಟೀಲ ಆಸ್ಪತ್ರೆಗೆ ಕರೆದುಕೊಂಡು ತಂದು ಕುಡಿಸಿ ತನ್ನ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಕುಮಾರ ತಂದೆ ಚಂದ್ರಕಾಂತ ಮುಗಡಿ ಸಾ: ಅಂಜನೇಯ ನಗರ ಆರ್.ಟಿ.ಓ ಆಫೀಸ ಎದುರುಗಡೆ ಕಲಬುರಗಿ  ದಿನಾಂಕ 08-01-2015 ರಂದು ರಾತ್ರಿ ತನ್ನ ಮೋ/ಸೈಕಲ್ ನಂ: ಕೆಎ 32 ಇಇ 0339 ನೆದ್ದನ್ನು ಟೌನ ಹಾಲ ಕ್ರಾಸ್ ದಿಂದ ಜಿ.ಜಿ.ಹೆಚ್.ಸರ್ಕಲ್ ಕಡೆಗೆ ರೋಡ ಎಡಗಡೆಯಿಂದ  ಚಲಾಯಿಸಿಕೊಂಡು ಹೋಗುತ್ತಿದ್ದಾಗ ವೆಟರನರಿ ಆಸ್ಪತ್ರೆಯ ಎದುರಿನ ರೋಡ ಮೇಲೆ ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಹೆಚ್. 1055 ರ ಸವಾರನಾದ ರಜತ ಈತನು ತನ್ನ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಎದುರಿನಿಂದ  ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೂ ಗಾಯಗೊಳಿಸಿ ತಾನು ಕೂಡ ಗಾಯಹೊಂದಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿರ್ಲಕ್ಷತನದಿಂದ ಸಾವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಮರೆಮ್ಮಾ ಗಂಡ ಶಿವಕುಮಾರ  ಮಾಡಬೂಳ ಸಾ : ದೇವನತೆಗೆನೂರ ಇವರ ಗಂಡ ಜೇಸ್ಕಾಂ ಇಲಾಖೆಯ ಗುತ್ತಿಗೆದಾರನಾಧ  ವೆಂಕಟೇಶ ಈತನ ಹತ್ತಿರ ಕೂಲಿ ಕೆಲಸ ಮಾಡುತ್ತಿದ್ದನು.  ಎಂದಿನಂತೆ ದಿ: 08.01.2015 ರಂದು ಬೆಳಿಗ್ಗೆ 8.00 ಗಂಟೆ ಸುಮರಿಗೆ ನನ್ನ ಗಂಡನು ಶಹಾಬಾದದ ಜೇಸ್ಕಾಂ ಇಲಾಖೆಯ ಗುತ್ತಿಗೆದಾರನಾದ ವೆಂಕಟೇಶ ಈತನ ಹತ್ತಿರ ಕೂಲಿ ಕೆಲಸಕ್ಕೆ ಅಂತಾ ಹಗಿದ್ದು ನನ್ನ  ಮೈದುನನಾದ ಮಲ್ಲಿಕಾರ್ಜುನ ಈತನು ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನನ್ನ ಅಣ್ಣ ಶಿವಕುಮಾರ ಈತನು ಇಂದು 4.30 ಪಿ.ಎಮ್. ಸುಮಾರಿಗೆ  ಶಹಾಬಾದದ ಹಾಜಿ ಪೀರ ದರ್ಗಾದ ಹತ್ತಿರ ಇರುವ ಜೆಕ್ಕಮ್ಮ  ಗುಡಿಯ ಹತ್ತಿರ ಇರುವ ಜೇಸ್ಕಾಂ ಇಲಾಖೆಯ ಲೈಟಿನ ಕಂಬ ಹತ್ತಿ ಕೆಲಸ ಮಡುವಾಗ ಕರೆಂಟ  ಹತ್ತಿ ಕೆಳಗೆ ಬಿದ್ದಿರುತ್ತಾನೆ . ಆತನಿಗೆ  ಸರಕಾರಿ ಆಸ್ಪತ್ರೆ ಶಹಾಬಾದದಲ್ಲಿ ಸೇರಿಕೆ ಮಾಡಿರುತ್ತೇವೆ. ನೀನು ಆಸ್ಪತ್ರೆಗೆ ಬಾ ಅಂತಾ ಜೇಸ್ಕಾಂ ಇಲಾಖೆಯ ಗುತ್ತಿಗೆ ದಾರ ವೆಂಕಟೇಶ ಇತನು ನನಗೆ ಫೋನ ಮಾಡಿ ತಿಳಿಸಿದ್ದರಿಂದ  ನಾನು ಮತ್ತು ಸಿಕಿಂದರ  ತಂಧೆ ಬಾಬು ಪವಾರ  ಕೂಟಿ ಶಹಾಬಾದದ ಸರಕಾರಿ ಆಸ್ಪತ್ರೆಗೆ ಹೋಗುತ್ತಿದ್ದೇವೆ ಅಂತಾ ನನ್ನ ಮೈದುನ ಮಲ್ಲಿಕಾರ್ಜುನ ಇತನು ತಿಳಿಸಿದ್ದರಿಂದ ನಾನು ಮತ್ತು ನನ್ನ ಭಾವಂದಿರಾದ  ಶರಣಪ್ಪ, ಶಿವಯೋಗಿ, ಹಾಗೂ ನಮ್ಮೂರ  ಶಂಕರ ಚೌವ್ಹಾಣ ಹಾಗು ಸಾಯಿಬಣ್ಣ ದಳಪತಿ , ಮರೆಪ್ಪಾ ಬಣಮಿಕರ್ ಹಾಗೂ ಹಣಮಂತರಾವ ಶಂಕರವಾಡಿ ಕೂಡಿ 6.30 ಪಿ.ಎಮ್. ಸುಮಾರಿಗೆ ಸರಕಾರಿ ಆಸ್ಪತ್ರೆ ಶಹಾಬಾದಕ್ಕೆ ಬಂದು ನನ್ನ ಗಂಡನಿಗೆ  ನೋಡಲಾಗಿ ನನ್ನ ಗಂಡನಿಗೆ  ಬಲ ಮಗ್ಗಲಿಗೆ ಮತ್ತು ಟೊಂಕಕ್ಕೆ ಹಾಗೂ ಎಡ ಭುಜದ ಕೆಳಗೆ ಕರೆಂಟ ಹತ್ತಿ ಸುಟ್ಟಗಾಯಗಳಾಗಿ ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸೇಡಂ ಠಾಣೆ : ದಿನಾಂಕ:09-01-2015 ರಂದು ಬೆಳಗ್ಗೆ ನನ್ನ ಮಗ ನರೇಶ ಮತ್ತು ಹುಸೇನಪ್ಪ ಅಕ್ಕಮಾಳ ಇಬ್ಬರೂ ಕೂಡಿ ನಮ್ಮೂರ ಸೀಮಾಂತರದಲ್ಲಿದ್ದ ನಮ್ಮ ಹೊಲದ ಕಡೆಗೆ ಎತ್ತು ಮೇಯಿಸಲು ಅಂತ ಹೋಗಿದ್ದರು ನಂತರ ಇಂದು ಮದ್ಯಾಹ್ನ ಹುಸೇನಪ್ಪ ಈತನು ಮನೆಗೆ ಬಂದು ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ನರೇಶ ಇಬ್ಬರೂ ಕೂಡಿ ನಿಮ್ಮ ಅಗಸರ ಹೊಲದ ದಂಡೆಯ ಮೇಲೆ ಎತ್ತು ಮೇಯಿಸುತ್ತಿದ್ದಾಗ ನಿಮ್ಮ ಮಗನ ಎತ್ತುಗಳು ಪಕ್ಕದ ತೆಗ್ಗಿನ ಹೊಲದಲ್ಲಿ ಹೋದಾಗ ಆ ಹೊಲದ ಮಾಲಿಕರಾದ ಚಂದ್ರಶೇಖರ ತಂದೆ ಚಿನ್ನಯ್ಯ ಆಡಕಿ ಮತ್ತು ಮೊಗಪ್ಪ ತಂದೆ ಚಿನ್ನಯ್ಯ ಆಡಕಿ ಜಾ:ಗೊಲ್ಲರ, ಇಬ್ಬರೂ ಸಾ:ದುಗನೂರ ಗ್ರಾಮ ಇವರು ಬಂದವರೇ ನಮ್ಮ ಹೊಲದಲ್ಲಿ ಎತ್ತುಗಳು ಯಾಕೆ ಬಿಟ್ಟಿದ್ದಿ ಅಂತ ನಿಮ್ಮ ಮಗ ನರೇಶನಿಗೆ ರಂಡಿ ಮಗನೇ ಏ ಮಾದಿಗ ಸೂಳೇ ಮಗನೇ ಅಂತ ಜಾತಿ ಎತ್ತಿ ಅಬಾಚ್ಯ ಬೈದು ಕುಸ್ತಿಗೆ ಬಿದ್ದು ಬಡಿಗೆಯಿಂದ ಹಾಗೂ ಕೈಯಿಂದ ಹೊಟ್ಟೆಗೆ ಬೆನ್ನಿಗೆ, ರಟ್ಟೆಗೆ ಮೊಳಕಾಲಿಗೆ ಕಂದು ಗಟ್ಟಿದ ಹಾಗೆ ಚಂದ್ರಶೇಖರ ಮತ್ತು ಮೊಗಲಪ್ಪ ಇಬ್ಬರೂ ಕೂಡಿ ಹೊಡೆದಿದ್ದಲ್ಲದೇ, ಇವತ್ತು ನಮ್ಮ ಕೈಯಾಗ ಉಳಿದಿದ್ದಿ ಮತ್ತೊಮ್ಮೆ ನಮ್ಮ ಹೊಲದಾಗ ಎತ್ತುಗಳು ಬಿಟ್ಟರೆ ಖಲಾಸ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ  ಶ್ರೀ ನರಸಪ್ಪ ತಂದೆ ನರಸಪ್ಪ ಇಟಕಲ್, ಸಾ:ದುಗನೂರ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಸೈಯದ್ ಮೀರ್ ಹುಸೇನ ತಂದೆ ಸೈಯದ್ ಇನಾಯತ್ ಹುಸೇನ್ ಸಾ : ಆಂದೊಲ ರವರಿಗೆ  ದಿನಾಂಕ 31.12.2014 ರಂದು ತನ್ನ ಓಣಿಯಲ್ಲಿ ನಿಂತಿದ್ದಾಗ 1) ರವಿ ತಂದೆ ರಾಜು ಭೀಮಳ್ಳಿ 2) ಈರಪ್ಪ ತಂದೆ ಮರೆಪ್ಪ ನಾಯಕೋಡಿ  3) ಮಲ್ಲಪ್ಪ ತಂದೆ ಭೀಮರಾಯ ಗುಂಡಳ್ಳಿ 4) ತಿಮ್ಮಯ್ಯ ತಂದೆ ದುರ್ಗಯ್ಯ ವಡ್ಡರ್  5) ರಮೇಶ ತಂದೆ ಬಾಲಪ್ಪ ದರ್ಶನಾಪುರ ಸಾ|| ಎಲ್ಲರು ಆಂದೋಲಾ ಗ್ರಾಮ ಇವರು ಕೂಡಿಕೊಂಡು ಬಂದು ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಚಪ್ಪಲಿಯಿಂದ, ಕೈಯಿಂದ ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀಮತಿ ಸಹೋದರಿ ಗಂಡ ಶರಣಪ್ಪಾ ಕುರಿಕೋಟಿ ಉ: ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಳಕುಂದಾ ಸಾ:ಕಣ್ಣೂರ ಹಾ:ವ:ನಾಗೂರ ಇವರು ಹೊಳಕುಂದಾ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಗಳು ಅಂತಾ ಕೆಲಸ ಮಾಡುತ್ತಾ ಬಂದಿದ್ದು. ದಿನಾಂಕ: 07/01/2015 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಶಾಲೆಯ ಬಿಸಿ ಊಟ ಕೋಣೆಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಬಿಸಿ ಊಟಕ್ಕೆ ಸಂಬಂಧಿಸಿದ 1) 50 ಕೆ.ಜಿ ಅಕ್ಕಿ. 2) 15 ಕೆ.ಜಿ ತೊಗರಿ ಬೇಳೆ  3) 11 ಕೆ.ಜಿ. ಅಡುಗೆ ಎಣ್ಣೆ. ಹಾಗು 4) 2 ಕೆ.ಜಿ ಹಾಲಿನ ಪೌಡರ ಹೀಗೆ ಒಟ್ಟು 2200-00 ರೂ. ಬೆಲೆ ಬಾಳುವ ವಸ್ತುಗಳು ಬಿಸಿ ಊಟದ ದಾಖಲಾತಿಯೊಂದಿಗೆ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 09/01/2015 ರಂದು ಅಮೋಘಸಿದ್ದ ದೇವರ ಗುಡಿಯ ಎದುರು ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮದ ಅಮೋಘಸಿದ್ದ ದೇವರ ಗುಡಿಯ ಹತ್ತಿರ ಹೋಗಿ ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಪ್ರಭಾಕರ ತಂದೆ ಬಾಬು ಬೆಣ್ಣೆಶಿರೂರ ಸಾ|| ಮಾಡಿಯಾಳ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 510/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 09/01/2015 ರಂದು ಅಮೋಘಸಿದ್ದ ದೇವರ ಗುಡಿಯ ಎದುರು ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮದ ಅಮೋಘಸಿದ್ದ ದೇವರ ಗುಡಿಯ ಹತ್ತಿರ ಹೋಗಿ ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಕಲ್ಯಾಣಿ ತಂದೆ ಸಿದ್ದಪ್ಪ ಆಳಂದ ಸಾ|| ಮಾಡಿಯಾಳ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 630/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಕೆಂಪು ಬಣ್ಣದ ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.