POLICE BHAVAN KALABURAGI

POLICE BHAVAN KALABURAGI

10 December 2016

Kalaburagi District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ದಿನಾಂಕ: 09-12-2016 ರಂದು ರಾತ್ರಿ ವಿಶೇಷ ಗಸ್ತು ಕತ್ರ್ವವ್ಯದಲ್ಲಿದ್ದಾಗ ಬೆಳಗಿನ ಗ್ರಾಮಿಣ ಪೊಲೀಸ  ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ-ಆಳಂದ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಭೀಮಳ್ಳಿ ಕ್ರಾಸನಲ್ಲಿ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ತಡೆದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಪೋನ ಮುಖಾಂತರ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಭೀಮಳ್ಳಿ ಕ್ರಾಸದಲ್ಲಿ ಇರುವ ಬಸಸ್ಟಾಂಡದ ಪೂರ್ವದ ದಿಕ್ಕಿನ ಗೋಡೆಯ ಮರೆಯಲ್ಲಿ ನಿಂತು ಜೀಪಿನ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ ಬಸಸ್ಟಾಂಡದಿಂದ ಸ್ವಲ್ಪ ಅಂತರದಲ್ಲಿ ಒಂದು ಆಟೋ ಮತ್ತು ಎರಡು ಮೋಟಾರ ಸೈಕಲ್ ನಿಲ್ಲಿಸಿದ್ದು ಬಸಸ್ಟಾಂಡ ಗೋಡೆಯ ಮರೆಯಲ್ಲಿ 05 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ತಲವಾರ, ಖಂಚಚರ್, ಹಗ್ಗಾ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು 02 ಜನರು ಸಿಕ್ಕಿ ಬಿದಿದ್ದು, ಉಳಿದ 03 ಜನರು ನಮ್ಮನ್ನು ನೋಡಿ ತಮ್ಮ ಕೈಯಲ್ಲಿದ್ದ ತಲವಾರ ಮತ್ತು ಖಂಚರ್ ಹಾಗು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 02 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1. ಸಿದ್ದು ತಂದೆ ಲಕ್ಷ್ಮಣ @ ಅಪ್ಪರಾಯ ಗೋಳಾ ಸಾ:ಕೇರಿ ಭೋಸಗಾ ತಾ:ಜಿ:ಕಲಬುರಗಿ ಅಂತಾ ತಿಳಿಸಿದನು ಇತನ ಹತ್ತಿರ ಒಂದು ಖಂಚರ್ ಒಂದು ನಾಡ ಪಿಸ್ತೂಲ್ ಹಾಗು 8 ಜೀವಂತ ಗುಂಡುಗಳು ಅಕಿ-25,000/-ರೂ. ಮತ್ತು ಒಂದು ಹಿರೋ ಹೊಂಡಾ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ಅಕಿ-25,000/- ರೂ ದೊರೆಯಿತು. ಸದರಿ ನಾಡ ಪಿಸ್ತೂಲನ್ನು ನನ್ನ ಗೆಳೆಯ ಗುರಲಿಂಗಪ್ಪ @ ಗುರನಾಥ ಇತನು ಕೃತ್ಯವೆಸಗಲು ನನ್ನ ಹತ್ತಿರ ಇಟ್ಟಿಕೊಳ್ಳಲು ಕೊಟ್ಟಿದನ್ನು ನಾನು ಇಟ್ಟಿಕೊಂಡಿದ್ದು ಈ ಪಿಸ್ತೂಲ್ ನಾಡ ಪಿಸ್ತೂಲ ಆಗಿದ್ದು ಅದನ್ನು ಇಟ್ಟುಕೊಳ್ಳಲು ನನ್ನ ಹತ್ತಿರವಾಗಲಿ ಹಾಗು ನನ್ನ ಗೆಳಯ ಗುರಲಿಂಗಪ್ಪನ ಹತ್ತಿರವಾಗಲಿ ಯಾವುದೇ ಲೈನಸ್ ವಗೈರೇ ಇರುವುದಿಲ್ಲಾ ಅನಧೀಕೃತವಾಗಿ ಇಟ್ಟಿಕೊಂಡಿರುತ್ತೇವೆ ಅಂಥಾ ತಿಳಿಸಿದ್ದು 2. ವಿನೋದ ತಂದೆ ಗುಂಡಪ್ಪ ಗುತ್ತೆದಾರ ಸಾ:ಇಂದಿರಾ ನಗರ ಚಿತ್ತಾಪುರ ಅಂತಾ ತಿಳಿಸಿದನು ಇತನ ಹತ್ತಿರ ಒಂದು ಖಂಚರ್ ಮತ್ತು ಒಂದು ಆಟೋ ನಂ ಕೆಎ-32 ಸಿ-6816 ಅಕಿ-40,000/-ರೂ, ಅದರಲ್ಲಿ ಶೀಟಿನ ಹಿಂದುಗಡೆ ಒಂದು ಖಂಚರ್  ದೊರೆಯಿತು, ಸಿಕ್ಕಿ ಬಿದ್ದ ಜನರಿಗೆ ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ವಿನೋದ ತಂದೆ ಗುಂಡಪ್ಪ ಗುತ್ತೆದಾರ ಇತನು ಓಡಿ ಹೋದವರ ಹೆಸರು 3. ಗುರಲಿಂಗಪ್ಪ @ ಗುರನಾಥ ತಂದೆ ಮಚೆಂದ್ರ ಹಡಪಾದ ಸಾ:ಜಳಕಿ ತಾ:ಆಳಂದ. 4. ಲಕ್ಷ್ಮಣ ತಂದೆ ಅರ್ಜುನ ಕಾಂಬಳೇ ಸಾ:ಇಂಡಸ್ಟ್ರೀಯಲ್ ಏರಿಯಾ ಚಿತ್ತಾಪುರ  5. ಅಂಬರೀಶ ಸಾ:ಚಿತ್ತಾಪುರ ಅಂತಾ ತಿಳಿಸಿದನು. ನೀವು 5 ಜನರು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ ವಿನೋದ ಇತನು ನಾನು ಮತ್ತು ಲಕ್ಷ್ಮಣ ಕಾಂಬಳೇ ಮತ್ತು ಅಂಬರೀಶ 3 ಜನರು ಕೂಡಿಕೊಂಡು ನನ್ನ ಆಟೋ ನಂ ಕೆಎ-32 ಸಿ-6816 ನೇದ್ದರಲ್ಲಿ ಮತ್ತು ಸಿದ್ದು ಗೋಳಾ ಇತನು ತನ್ನ ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ನೇದ್ದರ ಮೇಲೆ, ಹಾಗು ಮೋಟಾರ ಸೈಕಲ್ ಬಿಟ್ಟು ಓಡಿ ಹೋದ ಗುರಲಿಂಗಪ್ಪಾ @ ಗುರನಾಥ ಇತನ ಮೋಟಾರ ಸೈಕಲ್ ನಂ ಕೆಎ-32 ಇಸಿ-7366 ನೇದ್ದರ ಮೇಲೆ ಕುಳಿತುಕೊಂಡು ಭೀಮಳ್ಳಿ ಕ್ರಾಸ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಸಸ್ಟಾಂಡದ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ತಲವಾರ ಮತ್ತು ಖಂಚರ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಮೋಟಾರ ಸೈಕಲಗಳ ಮತ್ತು ಆಟೋದಲ್ಲಿ ಓಡಿ ಹೋಗಲು ತಂದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮಗೆ ಹಿಡಿದುಕೊಂಡಿರುವಿರಿ ಅಂತಾ ತಿಳಿಸಿದರು ಆಗ ನಾನು ಪಂಚರ ಸಮಕ್ಷಮದಲ್ಲಿ ಕೇಸಿನ ಪುರಾವೆಗೋಸ್ಕರ ಮೊದಲು 2 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 3 ದಸ್ತಿಗಳು ಮತ್ತು 2 ಖಾರದ ಪುಡಿ, 3 ತಲವಾರಗಳು ಹಾಗು 20 ಪೀಟಿನ ಹಗ್ಗಾ, ದೊರೆತ್ತಿದ್ದ್ದು ಅವುಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಪಂಚರ ಸಮಕ್ಷಮದಲ್ಲಿ  ಒಂದು ಸಣ್ಣ ಪ್ಲಾಸ್ಟೀಕ್ ಚೀಲದಲ್ಲಿ ಹಾಕಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು. ಮತ್ತು ದೂರದಲ್ಲಿ ಕೃತ್ಯಕ್ಕೆ ಉಪಯೋಗಿಸಲು ತಂದು ನಿಲ್ಲಿಸಿದ  ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ಅಕಿ-25,000/-ರೂ 2) ಆಟೋ ನಂ ಕೆಎ-32 ಸಿ-6816 ಅಕಿ-40,000/-ರೂ ಮತ್ತು 3) ಮೋಟಾರ ಸೈಕಲ್ ನಂ ಕೆಎ-32 ಇಸಿ-7366 ಅಕಿ-25,000/-ರೂ ನೇದ್ದವುಗಳನ್ನು ಕೂಡಾ ಜಪ್ತಿ ಮಾಡಿಕೊಂಡು ಸದರಿ ಈ ಮೇಲ್ಕಂಡ 5 ಜನರು ದರೋಡೆ ಮಾಡಲು ಪ್ರಯತ್ನದಲ್ಲಿ ನಿರತರಾಗಿದ್ದು ಖಚಿತಪಟ್ಟಿದ್ದರಿಂದ್ದ ಸಿಕ್ಕಿ ಬಿದ್ದ 2 ಜನರನ್ನು ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಗ್ರಾಮೀಣ ಠಾಣೆಗೆ ತೆಗೆದುಕೊಂಡು ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 09-12-2016 ರಂದು ಬೆಳಗ್ಗೆ ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಗ್ರೀನ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿ ಬಗ್ಗೆ ಖಚೀತ ಮಾಹೀತಿ  ಮೇರೆಗೆ ಶ್ರೀ ಸಂಜೀವಕುಮಾರ ಡಿ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮದೀನಾ ಕಾಲೋನಿಯ ಗ್ರೀನ ಸರ್ಕಲ ಹತ್ತಿರ ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ತನ್ನ ಹತ್ತಿರ ಇಟ್ಟುಕೊಂಡು ಇನ್ನೊಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಾ ನಂಬಿಸಿ ಮೋಸ ಮಾಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು  ಇದನ್ನು ನೋಡಿ ನಾನು  ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಹಸನ ತಂದೆ ರುಕ್ಮೋದ್ದಿನ ಶೇಖ ಸಾ|| ದಿಲ್ಲದಾರ ಕಾಲೋನಿ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದ್ದನು  ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1870=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 09-12-2016 ರಂದು ಮಧ್ಯಹ್ನ ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಜೀಲಾನಾಬಾದ ಬಡಾವಣೆಯ ಪಪೂಲರ ಎಗ್ಗಪಾಯಿಂಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿ ಬಗ್ಗೆ ಖಚೀತ ಮಾಹೀತಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಡಿ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಜೀಲಾನಬಾದ ಬಡಾವಣೆಯ ಪಪೂಲರ ಎಗ್ಗ ಪಾಯಿಂಟ ಅಂಗಡಿ  ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ಸಾರ್ವಜಕರಿಗೆ ಕೊಟ್ಟು  ಇನ್ನೊಂದು ಚೀಟಿ ತನ್ನ ಹತ್ತಿ ಇಟ್ಟುಕೊಳ್ಳುತ್ತಿದ್ದನು  ಇದನ್ನು ನೋಡಿ ನಾನು  ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಇಸ್ಮಾಯಿಲ ತಂದೆ ಮೈನೋದ್ದಿನ ಶೇಖ  ಸಾ|| ಮದೀನಾ ಕಾಲೋನಿ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದ್ದನು  ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1510=00 ರೂ ಮತ್ತು 8 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ  09.12.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಬೂಟ್ನಾಳ ರೋಡಿಗೆ ಇರುವ ಪೀರಸಾಬ ದರ್ಗ ಪಕ್ಕದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ.ಎಮ್ ಇಂಗಳೇಶ್ವರ ಸಿಪಿಐ ಸಾಹೇಬರ ನೆತ್ರತ್ವದಲ್ಲಿ ದರ್ಗದ ಗೊಡೆಯ ಮರೆಯಾಗಿ ನಿಂತು ನೋಡಲು  ಸದರಿ  ದರ್ಗಾದ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗೆಯಲ್ಲಿ ಕಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಹುಸೇನ ತಂದೆ ಚಾಂದಪಾಶಾ ಯಳವಾರ ಸಾ: ಖಾಜಾಕಾಲೂನಿ 2)  ಬಾಬಾ ತಂದೆ ಮಹಿಬೂಬ ಹರಕಾರ ಸಾ: ಲಕ್ಕಪ್ಪ ಲೇಔಟ ಜೇವರಗಿ. 3) ದೇವು ತಂದೆ ಶರಣಪ್ಪ ತಳವಾರ ಸಾ: ಖಾಜಾಕಾಲೂನಿ ಜೇವರಗಿ 4) ಅಶೋಕ ತಂದೆ ಹಣಮಂತ ಶಹಾಬಾದಿ ಸಾ: ಖಾಜಾಕಾಲೂನಿ ಜೇವರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1440=00ರೂ 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.        
ಜೇವರಗಿ ಠಾಣೆ : ದಿನಾಂಕ 09.12.2016 ರಂದು ಮದ್ಯಾಹ್ನ  ಜೇವರಗಿ ಪಟ್ಟಣದ ರದ್ದೆವಾಡಗಿ ಪೆಟ್ರೋಲ ಪಂಪ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ  ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ್.ಎಮ್ ಇಂಗಳೇಶ್ವರ ಸಿಪಿಐ ಸಾಹೇಬರ ನೇತ್ತ್ವದಲ್ಲಿ ಮದ್ಯಾಹ್ನ ಬಾತ್ಮಿ ಇದ್ದ ಸ್ಥಳದ ಸಮೀಪ ಹೋಗಿ ರದ್ದೆವಾಡಗಿ ಪೆಟ್ರೋಲ ಪಂಪ  ಗೊಡೆಯ ಮರೆಯಾಗಿ ನಿಂತು ನೋಡಲು  ಸದರಿ ಪೆಟ್ರೋಲ ಪಂಪ ಪಕ್ಕದ ಖುಲ್ಲಾ ಸಾರ್ವಜನಿಕ  ಜಾಗೆಯಲ್ಲಿ ಕಲವು  ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಮಡಿವಾಳ ತಂದೆ ಕಲ್ಯಾಣಪ್ಪ ಜವಳಿ ಸಾ: ಜಗತ ಕಲಬುರಗಿ 2) ಪವನಕುಮಾರ ತಂದೆ ಧರ್ಮಣ್ಣ ಹೊಲಸೂರ ಸಾ: ಸ್ವಾಮಿವಿವೇಕನಂದ ಕಾಲೂನಿ ಕಲಬುರಗಿ 3) ಖಾಜಾಹುಸೇನು ತಂದೆ ದಸ್ತಗಿರಸಾಬ ಧಖ್ನಿ ಸಾ: ಜನತಾ ಕಾಲೂನಿ ಜೇವರಗಿ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 7240=00ರೂ 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.                    
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ಸಲೀಮ ತಂದೆ ಮೈನೊದ್ದಿನ ಶೇಖ ಸಾ;ಪಟ್ಟಣ ತಾ;ಜಿ;ಕಲಬುರಗಿ  ಇವರ ಅಜ್ಜ  ಮಹಬೂಬ ಶೇಖ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರಲ್ಲಿ  ಮೈನೊದ್ದಿನ ಶೇಖ ಮತ್ತು ಇನ್ನೊಬ್ಬ ಅಬ್ದುಲರಹೀಮ ಅಂತಾ ಇಬ್ಬರು  ಮಕ್ಕಳಿದ್ದು ಅವರಲ್ಲಿ  ಮೈನೋದ್ದಿನ ಶೇಖ  ಹಿರಿಯವರಿದ್ದು ಇವರು ನನ್ನ ತಂದೆಯಾಗಿರುತ್ತಾರೆ.  ಇನ್ನೋಬ್ಬ ಅಬ್ದುಲ ರಹೀಮ ಅಂತಾ ಇರುತ್ತಾರೆ. ನಮ್ಮ ಅಜ್ಜನವರು ಹಿರಿಯವರ ಆಸ್ತಿಯಲ್ಲಿ  ಪಟ್ಟಣ ಜಮೀನ ಸರ್ವೆ ನಂ. 244 ನೆದ್ದರಲ್ಲಿ 14 ಎಕರೆ ಜಮೀನಿನಲ್ಲಿ ಇಬ್ಬರಿಗೂ  ತಲಾ 7 ಎಕರೆ ಜಮೀನು ಹಂಚಿಕೊಟ್ಟಿರುತ್ತಾರೆ . ಇನ್ನೊಂದು ಜಮೀನ ಸರ್ವೆ ನಂ.246 ನೆದ್ದರಲ್ಲಿ 6 ಎಕರೆ 22 ಗುಂಟೆ ಜಮೀನ ಇದ್ದು  ಇದನ್ನು ನಮ್ಮ ಅಜ್ಜ  ಮಹೇಬೂಬ ಶೇಖ ಇವರು ಇಟ್ಟುಕೊಂಡಿದ್ದು ಅವರು ತೀರಿದ ನಂತರ ಇಬ್ಬರು ಮಕ್ಕಳಿಗೆ ಸಮನಾಗಿ ಹಚ್ಚಿಕೊಳ್ಳುವದಾಗಿ ಮಾತು ಆಗಿರುತ್ತದೆ. ಕಳೆದ 3 ತಿಂಗಳ ಹಿಂದೆ ನಮ್ಮ ಅಜ್ಜ ಮಹೇಬೂಬ ಶೇಖ ಇವರು ತೀರಿಕೊಂಡಿದ್ದು  ಈಗ ಅವರ ಹೊಲದಲ್ಲಿ ತೋಗರಿ ಬೆಳೆ ಇರುತ್ತದೆ. ನಮ್ಮ ಚಿಕ್ಕಪ್ಪ ಅಬ್ದುಲ ರಹಿಮ ಇವರ ಮಗ ಮಹಮ್ಮದ ಖಾಲಿದ ಇತನು ಆಗಾ ಹೊಲಕ್ಕೆ ಬಂದು ನಮ್ಮ ಅಜ್ಜ ಮಹೇಬೂಬ ಶೇಖ ಇತನು ಸದರಿ 6 ಎಕರೆ ಜಮೀನು ನನಗೆ ಕೊಟ್ಟಿರುತ್ತಾನೆ  ನಿಮಗೆ ಕೊಡುವದಿಲ್ಲಾ ಅಂತಾ ನಮ್ಮೊಂದಿಗೆ  ತಕರಾರು ಮಾಡಿದ್ದು  ಅಲ್ಲದೆ ಹಿಸ್ಸಾ ಕೇಳಿದವರಿಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ  ಜೀವ ಬೆದರಿಕೆ ಹಾಕಿ ಹೋಗಿದ್ದನು  ದಿನಾಂಕ. 9-12-2016 ರಂದು 9-00 ಎ.ಎಂ.ಕ್ಕೆ.  ನನ್ನ ಅಜ್ಜನ ಹೊಲಕ್ಕೆ ನಮ್ಮ ಚಿಕ್ಕಪ್ಪಾ ಅಬ್ದು ಲ್ ರಹೀಮ ಇತನ ಮಗ ಮಹಮ್ಮದ ಖಾಲೀದ ಇತನು ಬಂದು ನಮ್ಮ ಅಜ್ಜನ ಜಮೀನನಲ್ಲಿ  ಹಿಸ್ಸಾ ಕೇಳುತ್ತಾರೆ ಅಂತಾ ತಿಳಿದು ನನ್ನ ತಂದೆಯನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ ತಂದಿದ್ದ  ಒಂದು ಹಾಕಿ ಸ್ಟೀಕ್ ಬಡಿಗೆ  ತೆಗೆದುಕೊಂಡು ಬಂದು  ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ,  ನನ್ನ ತಂದೆಯ ತಲೆಗೆ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 07-12-2016 ರಂದು ಗುಂಡು ತಂದೆ ಶರಣಪ್ಪಾ ರಾಠೋಡ ಈತನು ತನ್ನ ಮೋಬೈಲ ಎಲ್ಲಿಯೋ ಕಳೆದುಕೊಂಡಿದ್ದು ಅದನ್ನು ಕುಮಾರಿ ಮಹಾದೇವಿ ತಂದೆ ಕಾಶೀನಾಥ ರಾಠೋಡ ಸಾ: ಹಡ ಗಿಲ ಹಾರುತಿ ತಾಂಡಾ (ಬಿ) ತಾ:ಜಿ: ಕಲಬುರಗಿ  ರವರು ಕಳವು ಮಾಡಿತ್ತಾರೆ ಅಂತಾ 08-12-2016 ರಂದು 10 ಎಎಮಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಜಗಳ ತಗೆದು ಅವ್ಯಾಚ್ಛವಾಗಿ ಬೈಯುತ್ತಿದ್ದಾಗ ಜಗಳ ಬಿಡಿಸಲುಬಂದ ಫಿರ್ಯಾದಿಗೆ ಅವ್ಯಾಚ್ಛ ವಾಗಿ ಬೈದು ಕಲ್ಲಿನಿಂದ ತಲೆಗೆ ಹೋಡೆದು ರಕ್ತಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ನಸೀರೋದ್ದಿನ್ ತಂದೆ ಮೌಲಾಸಾಬ ಮುಜಾವರ ಸಾ: ರಾಚಣ್ಣಾ ವಾಘ್ದರಗಿ ಇವರು ಈಗ ಸುಮಾರು 15 ದಿವಸಗಳಿಂದ ಕೇಂದ್ರಿಯ ವಿಶ್ವವಿದ್ಯಾಲಯ ಕಡಗಂಚಿಯಲ್ಲಿ ನಾನು ಗೌಂಡಿ ಕೆಲಸ ಮಾಡುತ್ತಾ ಬಂದಿದ್ದೇನೆ ನನ್ನಂತೆ ನಮ್ಮ ಗ್ರಾಮದ ಸಂತೋಷ ತಂದೆ ತಿಪ್ಪಣ್ಣ ಕಾಂಬಳೆ ಇವರು ಕೂಡಾ ಗೌಂಡಿ ಕೆಲಸ ಮಾಡುತ್ತಿದ್ದು ದಿನಾಂಕ:-  08-12-2016 ರಂದು  ಬೆಳಿಗ್ಗೆ ನಾನು ಈಗ ಸುಮಾರು 1 ತಿಂಗಳ ಹಿಂದೆ ಹೊಂಡಾ ಕಂಪನಿಯ ಮೋಟಾರ ಸೈಕಲ್ ಖರೀದಿ ಮಾಡಿದ್ದು ಅದರ ನಂ. ಬಂದಿರುವುದಿಲ್ಲ ಟೆಂಪುರ್ವರಿ ನಂ. ಕೆಎ32 ಟಿಪಿ 26663 ಇರುತ್ತದೆ ಅದನ್ನು ಕಡಗಂಚಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಗೌಂಡಿ ಕೆಲಸ ನಡೆದಿದ್ದು ಕಾರಣ ನನ್ನ ಮೊಟಾರ ಸೈಕಲ್ ನ್ನು ತೆಗೆದುಕೊಂಡು ಹೋಗುತ್ತಿದ್ದು ನನ್ನಂತೆ ನಮ್ಮ ಗ್ರಾಮದ ಸಂತೋಷ ಕಾಂಬಳೆ ಈತ ಕೂಡಾ ತನ್ನ ಮೊಟಾರ ಸೈಕಲ್ ಮೇಲೆ ನನ್ನ ಹಿಂದೆ ಬರುತ್ತಿದ್ದು ಮುಂದೆ ಕಡಗಂಚಿಗೆ ಬಂದಾಗ ನಾನು ಹಾಗೂ ನನ್ನ ಹಿಂದೆ ಬರುತ್ತಿದ್ದ ನನ್ನ ಗೆಳೆಯ ಸಂತೋಷ ಕಾಂಬಳೆ ಇಬ್ಬರು ಕೂಡಿ ಕಡಗಂಚಿ ಬಸ್ ನಿಲ್ದಾಣದ ಎದುರುಗಡೆ ಒಂದು ಹೊಟೇಲ್ನಲ್ಲಿ ಚಹಾ ಕೂಡಿದು ಮತ್ತೆ ಅಲ್ಲಿಂದ ನನ್ನ ಮೊಟಾರ ಸೈಕಲ್ ಮೇಲೆ ಕೇಂದ್ರಿಯ ವಿಶ್ವವಿದ್ಯಾಲಯದ ಕಡೆಗೆ ಹೋಗುತ್ತಿದ್ದು ಹಿಂದೆ ನನ್ನ ಗೆಳೆಯ ಸಂತೋಷ ಕಾಂಬಳೆ ಈತನು ಕೂಡಾ ಬರುತ್ತಿದ್ದು ಮುಂದೆ ಕಡಗಂಚಿ ಪೆಟ್ರೋಲ್ ಬಂಕ್ ಕ್ರಾಸಿನ ಹತ್ತಿರ ಜಂಪಿನಲ್ಲಿ ನಾನು ನಿಧಾನವಾಗಿ ನನ್ನ ಮೊಟಾರ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ನನ್ನ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸವಾರನು ತನ್ನ ಬಸ್ಸನ್ನು ಅತೀವೇಗ ದಿಂದ ಹಾಗೂ ಅಲಕ್ಷತನದಿಂದ ನನ್ನ ಮೊಟಾರ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದು ಅದರಿಂದ ನಾನು ನನ್ನ ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಅದನ್ನು ನೋಡಿ ನನ್ನ ಹಿಂದೆ ಬರುತ್ತಿದ್ದ ನನ್ನ ಗೆಳೆಯ ಸಂತೋಷ ಕಾಂಬಳೆ ಇದನ್ನು ನೋಡಿ ನನಗೆ ಎಬ್ಬಿಸಿದ್ದು ನನಗೆ ಅಪಘಾತದಿಂದ ಬಲಗಾಲ ತೊಡೆಯ ಮೇಲೆ ತರಚಿದ ಗಾಯ ಹಾಗೂ ಬಲಗಾಲ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ಬಲ ಮುಂಗೈಗೆ ಗುಪ್ತಗಾಯವಾಗಿರುತ್ತದೆ, ನಂತರ ಅಪಘಾತ ಪಡಿಸಿದ ಬಸ್ಸ್ ಚಾಲಕನು ಸ್ವಲ್ಪ ಮುಂದಕ್ಕೆ ಹೋಗಿ ತನ್ನ ಬಸ್ಸನ್ನು  ನಿಲ್ಲಿಸಿದ್ದು ಇರುತ್ತದೆ. ಸದರಿ ಕೆ.ಎಸ್.ಆರ್.ಟಿ.ಸಿ ಬಸ್ಸ್ ನೋಡಲಾಗಿ ಅದರ ನಂ. ಕೆಎ32 ಎಫ್-1702 ಇದ್ದು ಅದರ ಚಾಲಕನು ಜನರು ಸೇರುವುದನ್ನು ಕಂಡು ಬಸ್ಸ್ ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.