POLICE BHAVAN KALABURAGI

POLICE BHAVAN KALABURAGI

13 August 2013

GULBARGA DIST REPORTED CRIMES

ಕಳ್ಳ ಸಾಗಾಣಿಕೆ:
ಶಹಾಬಾದ  ಪೊಲೀಸ ಠಾಣೆ:
ದಿನಾಂಕ:12/08/2013  ರಂದು ಶ್ರೀ ಕಾಶಿನಾಥ ಎಎಸ್‌ಐ ರವರು ವರದಿ ಹಾಜರಪಡಿಸಿದ್ದು ಸಾರಾಂಶವೇನಂದರೆ,  ನಿನ್ನೆ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ಸಂಗಡ ಸಿಪಿಸಿ.306 ರವರೊಂದಿಗೆ ಮುಗಿಸಿಕೊಂಡು ಮರಳಿ ಠಾಣೆಗೆ 5 ಎಎಮ್‌ ಸುಮಾರಿಗೆ ಬಂದು ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನಂದರೆ,ಕಾಗೀಣಾ ಮತ್ತು ಇತರೆ ನದಿ ಪ್ರದೇಶಗಳಿಂದ ಟ್ರಾಕ್ಟರಗಲ್ಲಿ ಮರಳನ್ನು ತುಂಬಿಕೊಂಡು ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಮತ್ತು ಮರಳು ಸಾಗಾಣಿಕೆ ಪರವಾನನಿಗೆ ಇಲ್ಲದೇ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ರವರೊಂದಿಗೆ ಮಾನ್ಯ ಡಿಎಸ್‌ಪಿ ಸಾಹೇಬರು ಶಹಾಬಾದ ಮತ್ತು ಮಾನ್ಯ ಪಿಐ ಶಹಾಬಾದ ರವರಿಗೆ ಸದರಿ ವಿಷಯವನ್ನು ತಿಳಿಸಿ ಠಾಣೆಯಿಂದ ವಾಡಿ ಕ್ರಾಸ ಹತ್ತಿರ ಬಂದಾಗ ಚಿತ್ತಾಪೂರ ಕಡೆಯಿಂದ ಒಂದರ ಹಿಂದೆ ಒಂದು ಮೂರು ಟ್ರ್ಯಾಕ್ಟರಗಳು  ಮತ್ತು ಒಂದು ಲಾರಿ ಬರುತ್ತಿದ್ದುದ್ದನ್ನು ನಾನು ಮತ್ತು ಸಿಬ್ಬಂದಿಯವರು ಸದರಿ ವಾಹನಗಳನ್ನು ನಿಲ್ಲಿಸಿ ನೋಡಲಾಗಿ ಟ್ರಾಕ್ಟರಗಳಲ್ಲಿ ಮತ್ತು ಲಾರಿಯಲ್ಲಿ ಉಸಕು ತುಂಬಿದ್ದು ಕಂಡುಬಂದಿದ್ದು, ಸದರಿ ಟ್ರ್ಯಾಕ್ಟರ  ಮತ್ತು ಲಾರಿ ನಂಬರ ನೋಡಲಾಗಿ 1] ಟಾಟಾ ಲಾರಿ ನಂ.ಕೆಎ-23/5438 ಲಾರಿಯ ಅಂದಾಜು ಕಿಮ್ಮತ್ತು 2,50,000/- ಅದರಲ್ಲಿಯ ಉಸಕಿನ ಕಿಮ್ಮತ್ತು. 8,000/- ರೂಪಾಯಿ  2] ಟ್ರ್ಯಾಕ್ಟರ ನಂ. ಕೆಎ-32 / 5495 ನೇದ್ದರ ಕಿಮ್ಮತ್ತು. 2,00000/- ಅದರಲ್ಲಿ ಉಸಕಿನ ಕಿಮ್ಮತ್ತು. 2500/-  3] ಟ್ರ್ಯಾಕ್ಟರ ನಂ. ಕೆಎ-32 ಟಿಎ-3144 ನೇದ್ದರ ಟ್ಯಾಕ್ಟರ5 ಕಿಮ್ಮತ್ತು. 2,00000/- ಅದರಲ್ಲಿಯ ಉಸಕಿನ ಕಿಮ್ಮತ್ತು. 2.500/- 4] ಟ್ರ್ಯಾಕ್ಟರ ನಂ. ಕೆಎ-32 ಟಿಎ-5297  ನೇದ್ದರ ಟ್ಯಾಕ್ಟರ್ ಅ.ಕಿ. 2,00000/- ಅದರಲ್ಲಿ ಉಸಕಿನ ಕಿಮ್ಮತ್ತು. 2500/-  ಇದ್ದು ಸದರಿ ವಾಹನಗಳ ಚಾಲಕರ ಹೆಸರು ಕ್ರಮವಾಗಿ  1] ಅರುಣ ತಂದೆ ಅಂಬಣ್ಣಾ ಮಹಾಗಾಂವ ವ:25 ಜಾ:ಹರಿಜನ ಉ:ಟಾಟಾ ಲಾರಿ ನಂ.ಕೆಎ-23 / 5438 ನೇದ್ದರ ಚಾಲಕ ಸಾ:ಹುಳಗೇರಾ ತಾ:ಚಿತ್ತಾಪೂರ ಹಾ:ವ: ವಿಶ್ವವಿದ್ಯಾಲಯ ಎದರುಗಡೆ ಗುಲಬರ್ಗಾ ಅಂತಾ ಹೇಳಿದನು.ಮತ್ತು ಟ್ರ್ಯಾಕ್ಟರ ಚಾಲಕರಾದ 2] ಆನಂದ ತಂದೆ ಶಂಕ್ರೆಪ್ಪಾ ಪೂಜಾರಿ ವ:28 ಜಾ:ಕುರುಬರು ಉ:ಟ್ರ್ಯಾಕ್ಟರ ನಂ. ಕೆಎ3-32 / 5495 ನೇದ್ದರ ಚಾಲಕ 3] ಬಾಬು ತಂದೆ ರಾಮು ಮಡಿವಾಳ ವ:19 ಜಾ:ಮಡಿವಾಳ ಉ:ಟ್ರ್ಯಾಕ್ಟರ ನಂ. ಕೆಎ-32 ಟಿಎ-3144 ನೇದ್ದರ ಚಾಲಕ 4] ರೇವಣಸಿದ್ದ ತಂದೆ ನಾಗಣ್ಣಾ ಪೂಜಾರಿ ವ:18 ಜಾ:ಕುರುಬರು ಉ:ಟ್ರ್ಯಾಕ್ಟರ ನಂ. ಕೆಎ-32 ಟಿಎ-5297 ನೇದ್ದರ ಚಾಲಕ ಸಾ:ಮೂವರುಶಂಕರವಾಡಿ ಗ್ರಾಮ ಅಂತಾ ಹೇಳಿದರು. ಸದರಿವರಿಗೆ ಉಸುಕು ತೆಗೆದುಕೊಂಡು ಹೋಗಲು ಸರಕಾರದ ವತಿಯಿಂದ ಪರವಾನಿಗೆ ಇದೆಯೇ ಅಂತಾ ಕೇಳಲಾಗಿ ತಮ್ಮ ಹತ್ತಿರ ಯಾವುದೇ ಸರಕಾರದ ವತಿಯಿಂದ ಉಸುಕು ತೆಗೆದುಕೊಂಡು ಹೋಗಲು ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಅಂತಾ ತಿಳಿಸಿದರು.ಸದರಿ ಈ ಮೇಲೆ ನಮೂದಿಸಿದ ಎಲ್ಲಾ ಟ್ರ್ಯಾಕ್ಟರಗಳಿಗೆ ಮತ್ತು ಲಾರಿಗೆ ಉಸುಕು ತುಂಬಿದ ಸದರಿ 4 ವಾಹನಗಳಲ್ಲಿ ತುಂಬಿದ ಒಟ್ಟು ಉಸಕಿನ ಕಿಮ್ಮತ್ತು, 15,500/- ನೇದ್ದು ಆಗುತ್ತಿದ್ದು ಸದರಿ ಮರಳಿನ ಬಗ್ಗೆ ಸರ್ಕಾರದ ವತಿಯಿಂದ ಉಸುಕು ತುಂಬಿ ಸಾಗಿಸಲು ಯಾವುದೇ ದಾಖಲಾತಿಗಳು ಇರುವದಿಲ್ಲಾ. ಇವರೆಲ್ಲರೂ ಸರಕಾರದ ಸ್ವತ್ತನ್ನು ಕಾನೂನು ಬಾಹಿರವಾಗಿ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ ಅಂತಾ ಕಂಡುಬಂದಿರುತ್ತದೆ.ಕಾರಣ ಮಾನ್ಯರವರ ಮುಂದೆ ಒಂದು ಲಾರಿ ಮತ್ತು 3 ಟ್ರ್ಯಾಕ್ಟರಗಳು  ಹಾಗೂ ಸದರಿ ವಾಹನಗಳ ಚಾಲಕರನ್ನು ತಂದು ಮುಂದಿನ ಕ್ರಮಕ್ಕಾಗಿ ತಮ್ಮ ಮುಂದೆ ಹಾಜರಪಡಿಸಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ನಿಂಬರ್ಗಾ ಪೊಲೀಸ ಠಾಣೆ
ಬೆಂಕಿ ಪ್ರಕರಣ:
ದಿನಾಂಕ 12/08/2013 ರಂದು  ಯಾರೋ ದುಷ್ಕರ್ಮಿಗಳು ಗ್ರಾಮ ಪಂಚಾಯತ ಸುಂಟನೂರದ ಸಭಾಂಗಣದಲ್ಲಿರುವ ಬಿಲ ಕಲೆಕ್ಟರ ಅಲಮಾರಿಯಲ್ಲಿದ್ದ ರಜಿಸ್ಟರ ಮತ್ತು ದಾಖಲಾತಿಗಳನ್ನು ಅಲಮಾರಿ ಕೀಲಿ ಮುರಿದು ಹೊರಗಡೆ ಹಾಕಿ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದು ಇದರಿಂದ ಅಲಮಾರಿ ಸುಟ್ಟಿದ್ದು ಅದರಲ್ಲಿದ್ದ ದಸ್ತಾವೇಜು ಸುಟ್ಟಿದ್ದು ಅಲ್ಲದೆ ಸಭಾಂಗಣದಲ್ಲಿದ್ದ ಫೋಟೊ,ಗಡಿಯಾರ, ಟೇಬಲ ಮತ್ತಿತರ ವಸ್ತುಗಳು ಸುಟ್ಟಿದ್ದು ಇದರಿಂದ ಸುಮಾರು 5,000/-ರೂಪಾಯಿಯಷ್ಟು ಲುಕ್ಸಾನ ಆಗಿರುತ್ತದೆ. ಆರೋಪಿತರ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿರ್ಯಾದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡಿದ್ದು  ಇರುತ್ತದೆ.