POLICE BHAVAN KALABURAGI

POLICE BHAVAN KALABURAGI

04 August 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 03-08-2014 ರಂದು ಅವರಳ್ಳಿ ಗ್ರಾಮದ ಬಸವಣ್ಣ ದೇವರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಮತ್ತು ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತಿದ್ದವರನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ 1] ಕಲ್ಯಾಣಿ ತಂದೆ ಯಲ್ಲಪ್ಪ ಮಾಂಗ 2] ನಿಂಗಣ್ಣ ತಂದೆ ಸಿದ್ದಪ್ಪ ಮ್ಯಾಕೇರಿ 3] ಸೋಮರಾಯ ತಂದೆ ಈರಣ್ಣ ಪರತಾಪೂರ 4] ಶರಣಪ್ಪ ತಂದೆ ಚಂದ್ರಶ್ಯಾ ಯರಗಲ್  5] ನಾಗಪ್ಪತಂದೆ ಧರ್ಮಣ್ಣ ತಮಟಾಪೂರ 6] ರಾಜು ತಂದೆ ದೇವಿಂದ್ರ ಪರತಾಪೂರ 7] ಹಣಮಂತರಾಯ ತಂದೆ ಅಣ್ಣಾರಾಯ ಪಾಟೀಲ ಸಾ|| ಎಲ್ಲರೂ ಅವರಳ್ಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ಒಟ್ಟು 1670-00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ದೇವಲ ಗಾಣಗಾಪೂರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಮತಿ ಗಂಗಮ್ಮ ಗಂ ದಿ: ನಾಗೇಂದ್ರಪ್ಪ ಅಲಗೂಡ  ಸಾ|| ಅಲಗೂಡ ಹಾ|||| ಹೀರಾಪೂರ ತಾ|| ಗುಲಬರ್ಗಾ ರವರು ದಿನಾಂಕ 03-08-2014 ರಂದು ತನ್ನ ಸಂಬಂದಿಕ ಮಾವನಾದ ಚಿತಂಬರಾಯ ಸಾವಳಗಿ, ಹಾಗೂ ಪರಿಚಯ ದವನಾದ ಬಸವರಾಜ ತಂ ಸಂಬಾಜಿ ಇವರಿಗೆ ತಿಳಿಸಿ ಹೋಲದಲ್ಲಿ ಹುಲ್ಲು ಬೆಳದಿದ್ದರಿಂದ ಕುರಿಕೋಟಾ ಗ್ರಾಮದ ಶಿವಪ್ಪ ತಂ ಜಯಣ್ಣ ಇತನಿಗೆ ಕೂಲಿಯಿಂದ ಯಡಿ ಹೊಡೆಯಲು ಹಚ್ಚಿದ್ದು ಬೆಳಗ್ಗೆ 10.00 ಗಂಟೆಯಿಂದ ಮದ್ಯಾನ 2.00 ಗಂಟೆಯವರೆಗೆ ಹೋಲದಲ್ಲಿ ಕೆಲಸ ಮಾಡಿ ಇನ್ನೆನು ಊಟಮಾಡಬೇಕು ಎನ್ನುವಷ್ಟರಲ್ಲಿ ಕಲ್ಯಾಣರಾವ ಪಾಟೀಲ ಇತನು ತನ್ನ ಹೋಲದಲ್ಲಿ ಅತಿಕ್ರಮೇಣ ಪ್ರವೇಶ ಮಾಡಿ ಅವಾಚ್ಯ ಶಬ್ದ್ಗಳಿಂದ ಬೈದು ನೀನು ನಾನು ಖರೀದಿಸಿದ ಈ ಹೋಲದಲ್ಲಿ ಯಾಕೇ ಬಂದಿದ್ದಿ ಅಂತಾ ಅಂದು ನಾನು ಎಡಗಾಲಿನಿಂದ ಅಂಗವಿಕಲನಾ ಗಿದ್ದೇನೆ ಅಂತಾ ಗೊತ್ತಿದ್ದರು ನನ್ನ ಎಡಗೈ ಹಿಡಿದು ತಿರುವಿ ಬಲಗೈ ಬುಜದ ಹತ್ತಿರದ ನನ್ನ ಬ್ಲೋಜ ಹರಿದು ಹಾಕಿ ಶೀರೆ ಹಿಡಿದು ಎಳೆದಾಡಿ  ಮಾನಬಂಗ ಮಾಡಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪದ್ಮಣ್ಣ ತಂದೆ ನಾಗಪ್ಪಾ ಸಗರೆ ಸಾ : ಕರಜಗಿ ರವರು ದಿನಾಂಕ -24/03/2014 ರಂದು ಬೆಳಿಗ್ಗೆ 09:00 ಗಂಟೆಗೆ ಕರಜಗಿ ಸೀಮಾಂತರದ ಹೊಲ ಸರ್ವೆ ನಂ- 406 ಮತ್ತು ದಿನಾಂಕ:- 03/06/2014 ರಂದು ಬೆಳಿಗ್ಗೆ 10:00 ಗಂಟೆಗೆ ಕರಜಗಿ ಸೀಮಾಂತದ ಹೊಲ ಸರ್ವೆ ನಂ- 417/2 ನೇದ್ದರ ಫಿರ್ಯಾದಿ ಹೊಲದಲ್ಲಿ ಆರೋಪಿತರು ಅತೀಕ್ರಮ ಪ್ರವೇಶ ಮಾಡಿ ಸಾಗುವಳಿ ಮಾಡುತ್ತಿದ್ದಾಗ ಫಿರ್ಯಾದಿ ವಿರೋದ ವ್ಯಕ್ತಿ ಪಡಿಸಿದ್ದಕ್ಕೆ ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾರೆ, ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರೋಜಾ ಠಾಣೆ : ಶ್ರೀ ನೂರ ಅಹ್ಮದ ತಂದೆ ಖಾಜಾ ಹುಸೇನ ಖನಿವಾಲೆ ಸಾ: ಮನೆ ನಂ. 5-993/177 ನಿಯರ ಮಜ್ಜೀದ ಎ ನಯೀಮ ಮೆಹಬೂಬ ನಗರ ಕಾಲೋನಿ ಗುಲಬರ್ಗಾ ಇವರು ದಿನಾಂಕ: 03/08/2014 ರಂದು ನನ್ನ ಸಡಕನ ನಾದ ಮಹ್ಮದ ರೈಸ್ ತಂದೆ ಇಸಮಿಯಾ ಸಾ: ಟಿಪ್ಪು ಚೌಕ್ ಗುಲಬರ್ಗಾದಲ್ಲಿ ಇವರು ಒಂದು ಜುಮಾಗಿ ಫಂಕ್ಷನ ಇಟ್ಟುಕೊಂಡಿದ್ದರಿಂದ ನಾನು ನನ್ನ ಹೆಂಡತಿ ಮಕ್ಕಳು ಮತ್ತು ನನ್ನ ಅಳಿಯನ ಮಗ ಮಹ್ಮದ ಜಕಿತಬರೆಜ ಇವರೆಲ್ಲರೂ ಸೇರಿಕೊಂಡು ಸಮಾರಂಬಕ್ಕೆ ಹೋಗಲು ತಯ್ಯಾರಾಗಿ ಮದ್ಯಾನ 2:30 ಪಿಎಮ್ ಕ್ಕೆ ನನ್ನ ಮನೆಗೆ ಬಾಗಿಲಿಗೆ ಕೀಲಿಹಾಕಿಕೊಂಡು ಹೋಗಿದ್ದು ಸಾಯಂಕಾಲ 4:30 ಗಂಟೆಗೆ ಸಮಾರಂಬ ಮುಗಿಸಿಕೊಂಡು ಮನೆಗೆ ಬಂದು ಮುಖ್ಯ ದ್ವಾರದ ಗೇಟು ತೆರೆದು ಕಂಪೌಂಡದಿಂದ ಒಳಗಡೆ ಹೋಗಿ ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಗಾಬರಿಯಾಗಿ ಒಳಗಡೆ ಹೋಗಿ ನೋಡಿದಾಗ ಕೊಣೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪೆಲ್ಲಿಯಾಗಿದ್ದು ಮನೆಯ ಅಲಮಾರಿಗಳು ಸಹ ಮುರಿದಿದ್ದು  ಅದರಲ್ಲಿದ್ದ ಬಂಗಾರದ ಆಭರಣಗಳು ಹಾಗು ನಗದು ಹಣ ನನ್ನ ಅಳಿಯನ ಮನೆಯ ಕಿಲಿ ಸಹ ಮುರಿದು ಒಳಗೆ ಪ್ರವೇಶಮಾಡಿ ಯಾರೋ ಕಳ್ಳರು ಅಲಮಾರಿಯನ್ನು ಮುರಿದು ಅಲಮಾರಿಯಲ್ಲಿ ಇಟ್ಟಿದ್ದ ಒಂದುತೊಲಿಯ ಬಂಗಾರದ ರಾಣೆಹಾರು ಅ.ಕಿ. 28 ಸಾವಿರ ಹಾಗೂ 10 ಸಾವಿರ ರೂಪಾಯಿ ನಗದು ಇರುವದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳ್ಳರು ನಮ್ಮ ಮನೆಯನ್ನು ಕಳವು ಮಾಡಲು ನೇರವಾಗಿ ಮನೆಯ ಮುಖ್ಯದ್ವಾರದಿಂದ ಬರದೇ ನಮ್ಮ ಮನೆಯ ಪಕ್ಕದಲ್ಲಿ ಇರುವ ಮಜ್ಜೀದ ಮೇಲೆ ಹತ್ತಿ ನಮ್ಮ ಮನೆಯ ಚೆತ್ತಿನ ಮೇಲೆ ಏರಿ ಸಿಡಿಗಳ ಮುಖಾಂತರ ಒಳಗಡೆ ಬಂದು ಬಾಗಿಲಿಗೆ ಹಾಕಿದ ಕೀಲಿಗಳು ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಒಟ್ಟು ಎರಡುವರೆ ತೋಲಿ ಬಂಗಾರ ಅ.ಕಿ. 70ಸಾವಿರ ರೂಪಾಯಿ ಮತ್ತು ನಗದು ಹಣ 30 ಸಾವಿರ ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.