POLICE BHAVAN KALABURAGI

POLICE BHAVAN KALABURAGI

25 May 2019

KALABURAGI DISTRICT REPORTED CRIMES

ಮೊಸ ಮಾಡಿ ಸರಕಾರದ ಹಣ ದುರುಪಯೋಗಪಡಿಸಿಕೊಂಡ ಪ್ರಕರಣ :
ರಾಘವೇಂದ್ರ ನಗರ ಠಾಣೆ : ನಿರ್ಮತಿ ಕೇಂದ್ರವು ಒಂದು ನೊಂದಾಯಿತ ಸಂಸ್ಥೆಯಾಗಿದ್ದು ಇದರ ಅಧ್ಯಕ್ಷರು ಮಾನ್ಯ ಜಿಲ್ಲಾಧಿಕಾರಿಗಳಾಗಿರುತ್ತಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ಮತ್ತು ಇತರೆ ಕಾಮಗಾರಿಗಳನ್ನು ನಿರ್ವಹಿಸಿಕೊಂಡುತ್ತಾರೆ. ಅದರೆಂತೆ ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ವಿವಿಧ ಕಾಮಗಾರಿಗಳನ್ನು ನಿರ್ಮಿತಿಕೇಂದ್ರಕ್ಕೆ ವಹಿಸಿಕೊಟ್ಟಿರುತ್ತಾರೆ. ವಿವರಗಳನ್ನು ಅನುಬಂದ ಅ ದಲ್ಲಿ ಕಾಣಬಹುದು ಅ ಅನುಬಂದದಲ್ಲಿ ವಿವರಿಸಿದ ಕಾಮಗಾರಿಗಳನ್ನು  ನಿರ್ಮಿತಿ ಕೇಂದ್ರ ಕಲಬುರಗಿ ಯೋಜಾನ ವವ್ಯಾಸ್ದಾಪಕರಿಂದ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ  ಕೇಂದ್ರ ಕಲಬುರಗಿ ರವರಿಗೆ ವಹಿಸಿಕೊಡಲಾಗಿದೆ. ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ಕಲಬುರಗಿ ರವರಿಗೆ ಒಟ್ಟು ಕಾಮಗಾರಿಗಳಲ್ಲಿ (33) ಸುಮಾರು ರೂ 1,52,58,430 ರೂ ( ಒಂದು ಕೋಟಿ ಐವತ್ತೆರಡು ಲಕ್ಷ ಐವತ್ತೆಂಟು ಸಾವಿರದ ನಾಲ್ಕನೂರಾ ಮುವತ್ತು ರೂ) ಹೆಚ್ಚಿನ ಹಣವನ್ನು ಸಾಮಾಗ್ರಿಗಳ ಖರೀದಿ ಮತ್ತು ಕೂಲಿ  ಕಾರ್ಮಿಕರ ಓಚರಗಳನ್ನು ಸಲ್ಲಿಸಿ ಹಣ ಸಂದಾಯಿಸಿದೆ ಆದರೆ ಕಾಮಗಾರಿ ಪೋರ್ಣಗೊಂಡಿಲ್ಲಿ ಸದರಿ ಕಾಮಗಾರಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಡಿಎಂಎಫ್ ಕೋಶದ ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಅಧಿಕಾರಿಗಳಿಂದ ಖುದ್ದಾಗಿ ಪರಿಶೀಲಿಸಲಾಗಿದೆ. ಸಂಬಂದಿಸಿದ ಕಾಮಗಾರಿಗಳಿಗೆ ತಾಂತ್ರಿಕ ಅಧಿಕಾರಿಗಳೊಂದಿಗೆ ಶ್ರೀ ಶಿವಯೋಗಿ ಯಳವಾರರವರಿಗೆ ಸ್ಥಳಗಳಿಗೆ ಹೋಗಲು ಸೂಚಿಲಾಗಿತ್ತು. ಅದರಂತೆ ಶ್ರೀವಯೋಗಿ ಮೇಲ್ವಿಚಾರಿಕರಿಗೆ ಕೆಲವು ಸ್ಥಳಗಳಿಗೆ ಹೋಗಿರುತ್ತಾರೆ. ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಿಕೊಟ್ಟಿರುವ ವರದಿ ಪರಿಶೀಲಿಸಲಾಗಿ ಕಾಮಾಗಾರಿ ಪರೆಬಾರಿಯವರು ಕೈಕೊಂಡ ಕಾಮಗಾರಿಗಳು ಹಾಗೂ ನಿರ್ಮಿತಿ ಕೇಂದ್ರದಿಂದ ಸಂದಾಯಿಸಿದ ಮೊತ್ತಕ್ಕೂ ಬಹಾಳಷ್ಟು ವ್ಯತ್ಯಾಸ ಇರುತ್ತದೆ. ಆದುದ್ದರಿಂದ ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ಸದರಿ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಹಣ ವಸೂಲಿ (ರಿಕವರಿ)  ಮಾಡಲು ಆದೇಶಿಸುರುತ್ತಾರೆ. ಇದರೊಂದಿಗೆ ಲಗತ್ತಿಸಿದ ಅನುಂಬದದಲ್ಲಿನ ಕಾಮಗಾರಿಗಳನು ಪೂರ್ಣಗೋಳ್ಳಿಸಲು ಸಾಕಷ್ಟು ಸಲ ಸೂಚಿಸಿದರು ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ಕಾಮಗಾರಿಗಳನ್ನು ಪೂರ್ಣಗೋಳಸಿರುವದಿಲ್ಲ ಮತ್ತು ಸಂದಾಯಿಸಿರುವ  ಹಣ ಮರುಪಾವತಿಸಿರುವದಿಲ್ಲ. ಇದರಿಂದ ಸರ್ಕಾರದಹಣ ದುರ್ಬಳಿಕೆ ಮಾಡಿಕೊಂಡಂತಾಗಿದ್ದು ಬ್ರೀಚ್ ಆಪ್ ಟ್ರಸ್ಟ್  ಕೂಡಾ ಆಗಿರುತ್ತದೆ. ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ಉಲ್ಲೇಖಿತ ಪತ್ರದ ಮೂಲಕ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ರವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಲು ಮತ್ತು ಕೋಟ್ಯಾಂತರ ಹಣ ಮರುಪಾವತಿಸಿ ಕೋಳ್ಳಲು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರಿಗೆ ಸೂಚಿಸಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಅಧ್ಯಕ್ಷರು ನಿರ್ಮಿತಿ ಕೇಂದ್ರ ಕಲಬುರಗಿರವರು ನಿರ್ಮತಿ ಕೇಂದ್ರ ಕಡತದಲ್ಲಿ ಸದರಿ ಶಿವಯೋಗಿ ಯಳವಾರ ಮೇಲ್ವಿಚಾರಕರು ಇವರ ವಿರುದ್ಧ ಕ್ರೀಮಿನಲ್ ಪ್ರಕರಣವನ್ನು ದಾಖಲಿಸಲು ಮತ್ತು ಹಣ ವಸೂಲಿ ಕ್ರಮ ಕೈಕೋಳ್ಳಲು ಆದೇಶಿಸುರುತ್ತಾರೆ. ಆದದ್ದರಿಂದ ದಯಾ ಮಾಡಿ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ಕಲಬುರಗಿ ರವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಕೋಳ್ಳಬೇಕು ಅಂತಾ  ಶ್ರೀ ವಾಮನರಾವ ತಂದೆ ಮಾಣಿಕರಾವ ದೇಶಪಾಂಡೆ ಉಃ ಇಂಜನಿಯರ  ನಿರ್ಮಿತಿ ಕೇಂದ್ರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 24-05-2019 ರಂದು ಸೊನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬಳೂಂಡಗಿ ಮಾರ್ಗವಾಗಿ ಕರಜಗಿ ರೋಡಿನ ಕಡೆಗೆ ಬರುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಕರಜಗಿ ರೋಡಿಗೆ ಹೋಗುತ್ತಿದ್ದಾಗ ಅಳ್ಳಗಿ (ಕೆ) ಕ್ರಾಸ ದಾಟಿ ಮುಂದೆ ಇರುವ ಕ್ಯಾನಾಲ ರೋಡಿಗೆ ಬಳೂಂಡಗಿ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ಬ್ರೀಜ್ ಹತ್ತಿರ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು, ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಅರ್ಜುನ ಮಹೇಂದ್ರಾ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ನಂಬರ ಕೆಎ-32 ಟಿಎ-4575 ಅಂತಾ ಬರೆದಿದ್ದು, ಸದರಿ ಟ್ಯಾಕ್ಟರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ Engine NO :- NJCU3835 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ 07:00 ಎಎಮ್ ದಿಂದ 08:00 ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-24/05/2019 ರಂದು ಬೆಳಿಗ್ಗೆ ಜಿಜಿಹೆಚ್ ಸರ್ಕಲ ದಿಂದ ಸೇಡಂ ರಿಂಗ್ ರೋಡ ನಲ್ಲಿ ಬರುವ ಬಸವೇಶ್ವರ ಆಸ್ಪತ್ರೆ ಎದುರಿನ ರೋಡ ಬದಿಯಲ್ಲಿ ಶ್ರೀ ಮಹಮ್ಮದ ರಫೀಕ ತಂದೆ ಮಹ್ಮದ ಖಾಸಿಂ ಸಾ ಉಮರ ಕಾಲೋನಿ ಅಜಾದಪೂರ ರೋಡ ಕಲಬುರಗಿ ರವರ ಹೆಂಡತ್ತಿಯಾದ ಸುಲ್ತಾನಾ ಬೇಗಂ ಇವರು ತನ್ನ ಮಗಳಾದ ಇನಶೀರಾ ಮಹ್ಮದಿ ವ: 4 ತಿಂಗಳು ಇವಳಿಗೆ ಎತ್ತಿಕೊಂಡು  ಮೆಡಿಕಲಗೆ ಹೋಗಿ ಮಾತ್ರೆ ತೆಗೆದುಕೊಂಡು ಫಿರ್ಯಾಧಿ ನಿಲ್ಲಿಸಿದ ಮೋಟಾರ ಸೈಕಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಆರ್.ಟಿ.ಓ ಕ್ರಾಸ್ ಕಡೆಯಿಂದ ಮಹಾನಗರ ಪಾಲಿಕೆಯ ಟ್ರಕ್ ನಂ ಕೆಎ-32 ಸಿ-5692 ನೇದ್ದರ ಚಾಲಕ  ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಹೆಂಡತ್ತಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸುಲ್ತಾನಾ ಬೇಗಂ ಇವಳ ತೆಲೆಯ ಮೇಲಿಂದ ಹಿಂದಿನ ಟೈರ್ ಹಾಯಿಸಿ ಫಿರ್ಯಾಧಿ ಮಗಳ ತೆಲೆಗೆ ಭಾರಿಗಾಯಗೊಳಿಸಿ ಹಾಗೆ ಟ್ರಕ್ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಫಿರ್ಯಾಧಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಫಿರ್ಯಾಧಿ ಮಗಳಾದ ಸಾಯಮಾ ನಾಜಾ ಇವಳಿಗೆ ಭಾರಿಗಾಯಗೊಳಿಸಿದ್ದು ಸದರ ಘಟನೆಯಿಂದ ಸುಲ್ತಾನಾ ಬೇಗಂ ಇವರ ತೆಲೆಗೆ ಮತ್ತು ಮುಖಕ್ಕೆ ಭಾರಿ ಪೆಟ್ಟಾಗಿ ತೆಲೆಯಿಂದ ಮೆದಳು ಹೋರಗೆ ಬಂದು ಸ್ಥಳದಲ್ಲಿ ಮೃತ ಪಟ್ಟಿದ್ದು ಅವರ ಮಗಳಾದ ಇನಿಶೀರಾ ಮಹ್ಮದಿ ಇವಳ ತೆಲೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಟ್ರಕ್ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 24-05-2019 ರಂದು ಮುಂಜಾನೆ  ನಾನು ಮತ್ತು ನನ್ನ ಅಣ್ಣನ ಮಗನಾದ ರಾಹುಲ ಇಬ್ಬರೂ ಮನೆಯಿಂದ ಪಬ್ಲಿಕ ಗಾರ್ಡನನಲ್ಲಿ  ವಾಕಿಂಗ ಮಾಡಲು ನಮ್ಮ ಬಡಾವಣೆಯ ರಸ್ತೆಯಿಂದ ಏಷಿಯನ ಮಹಲ ಕಡೆಗೆ ಹೋಗುವ ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಎನಫಿಲ್ಡ್ ಮೋಟಾರ ಸೈಕಲ ನಂ ಕೆಎ-32/ಇಎನ್-2636 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ರಾಹುಲ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಚಂದ್ರಶೇಖರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಆಕಾಶ ತಂದೆ ಧೂಳಪ್ಪ ಹಂಚನಾಳ ಸಾ: ಖುದ್ದಿ ಹೋಟೆಲ ಹಿಂದುಗಡೆ ಶಿವಾಜಿ ನಗರ ಕಲಬುರಗಿ ಈ  ಮೇಲ್ಕಾಣಿಸಿದ ವಿಳಾಸದ ನಿವಾಸಿತನಿದ್ದು ಸಂದೀಪ ಇವನು ನಮ್ಮ ಶಿವಾಜಿನಗರದಲ್ಲಿ ವಾಸವಾಗಿದ್ದು ಈತನ ಪರಿಚಯ ಇರುತ್ತದೆ ಈತನ ಗೆಳೆಯರಾಗಿರುವ ಅಜೇಯ ಅನ್ನುವನು ಸಂದೀಪ ಈತನಿಗೆ ಮೊಬೈಲದಲ್ಲಿ ಫೋಟೋ ಹಾಕಿ ಸ್ಟೇಟಸ್ ಇಟ್ಟುಕೊಂಡಿದ್ದು ಈ ವಿಷಯದಲ್ಲಿ ಸಂದೀಪ ಈತನೊಂದಿಗೆ ತಕರಾರು ಆಗಿರುತ್ತದೆ. ದಿನಾಂಕ: 24.05.2019 ರಂದು ಸಾಯಂಕಾಲ ನಾನು ಮನೆಯಿಂದ ಬಂದು ಶಿವಾಜಿ ನಗರದ ಮಸೂದಿಯ ಹತ್ತಿರ ಇರುವ ಶಾಂತು ಹೋಟೆಲ ಎದುರುಗಡೆ ನಿಂತಾಗ ಆ ವೇಳೆಯಲ್ಲಿ ಅಜೇಯ ಮತ್ತು ಅಭಿ ಇಬ್ಬರೂ ಬಂದವರೆ ನಿಂತಿದ್ದ ನನಗೆ ಅಜೇಯ ಈತನು ನನಗೆ ಬಾ ಅಂತಾ ಕರೆದನು ಅದಕ್ಕೆ ನಾನು ಯಾಕೇ ಅಂತಾ ಕೇಳಿದೆನು ನೀನು ಸಂದೀಪ ಈತನಿಗೆ ಸ್ಟೇಟಸ್ ಹಾಕಿದ್ದರಿಂದ ಅವನಿಗೆ ಯಾಕೆ ಬೈದಿರುವಿ ಅಂತಾ ಕೇಳಿದ್ದು ಅದಕ್ಕೆ ನಾನು ಯಾರಿಗೂ ಕೂಡಾ ಬೈದಿಲ್ಲ ಅಂತಾ ಹೇಳಿದೆ ಅದಕ್ಕೆ ಅಜೇಯ ಮತ್ತು ಅಭಿ @ ಅಭ್ಯಾ ಇಬ್ಬರೂ ನಿನಗೆ ಶಿವು ಅಣ್ಣ ಕರೆಯುತ್ತಿದ್ದಾನೆ ಅವನ ಹತ್ತಿರ ನಡೆ ಅಂತಾ ಹೇಳಿದ್ದರಿಂದ ನಾನು ಸದರಿ ಶಾಂತು ಈತನ ಹೋಟೆಲ ಎದುರುಗಡೆಯಿಂದ ಅವರ ಜೊತೆಯಲ್ಲಿಯೇ ರಾಜೀವ ಗಾಂಧಿನಗರ ಹತ್ತಿರ ಇರುವ ನೀರಿನ ಟಾಕಿಯ ಖುಲ್ಲಾ ಜಾಗೆಯಲ್ಲಿ ಹೋಗಿದ್ದು ಅಲ್ಲಿ ಆಗಲೇ ಸೈನಿಕ, ಶಿವು, ಲಚ್ಯಾ @ ಲಕ್ಷ್ಮಿಕಾಂತ, ಇಸ್ಮಾಯಿಲ್, ಇತರ ಜನರು ಗ್ರೌಂಡದಲ್ಲಿ ಕೈಯಲ್ಲಿ ಬ್ಯಾಟ, ಸ್ಟಂಪ, ಬಡಿಗೆ, ಹಿಡಿದುಕೊಂಡು ನಿಂತಿದ್ದು ನಾನು ಅಲ್ಲಿ ಹೋದ ಕೂಡಲೆ ಲಚ್ಯಾ @ ಲಕ್ಷ್ಮಿಕಾಂತ ಈತನು ಕೈಯಿಂದ ನನ್ನ ಬಲ ಕಣ್ಣಿನ ಹುಬ್ಬಿನ ಮೇಲೆ ಮುಷ್ಟಿ ಮಾಡಿ ಜೋರಾಗಿ ಹೊಡೆದನು ಮತ್ತು ತನ್ನ ಕೈಯಲ್ಲಿದ್ದ ಬ್ಯಾಟಿನಿಂದ ಬೆನ್ನಿಗೆ ಹೊಡೆದನು ನಂತರ ಶಿವು ಈತನು ರಂಡಿ ಮಗನೇ ನಿನಗೆ ಬಹಳ ಸೊಕ್ಕು ಬಂದಿದೆ ಮಗನೇ ನೀನು ಸಂದೀಪ ಈತನಿಗೆ ಅಂಜಿಸುತ್ತಿ ಸೂಳೆ ಮಗನೇ ಅಂತಾ ಅಂದವನೆ ಅವನ ಕೈಯಲ್ಲಿ ಇದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮಾಡಿದನು ಸೈನಿಕ ಈತನು ಕೈಯಿಂದ ಹೊಟ್ಟೆಯಲ್ಲಿ ಮತ್ತು ಬೆನ್ನಿನ ಮೇಲೆ ಮುಷ್ಟಿಮಾಡಿ ಹೊಡೆದನು ಇಸ್ಮಾಯಿಲ್ ಈತನು ಸ್ಟಂಪದಿಂದ ನನ್ನ ಎಡಗಾಲಿನ ತೊಡೆಯ ಮೇಲೆ ಹೊಡೆದು ಭಾರಿ ಗುಪ್ತಗಾಯ ಪಡಿಸಿದ್ದು ಇದರಿಂದ ಒಮ್ಮೇಲೆ ನನ್ನ ಕಾಲಿಗೆ ಬಾವು ಬಂದಿದೆ ನಂತರ ಇನ್ನುಳಿದ 8-10 ಜನ ಹುಡುಗರು ಎಲ್ಲರೂ ಸೇರಿಕೊಂಡು ಕೈಯಿಂದ ಕಾಲಿನಿಂದ ನನಗೆ ನೆಲಕ್ಕೆ ಕೆಡವಿ ಹಾಕಿ ಸಿಕ್ಕಾ ಪಟ್ಟೆಯಾಗಿ ಹೊಡೆ-ಬಡೆ ಮಾಡಿದ್ದು ಇವರೆಲ್ಲರೂ ನನಗೆ ಸುತ್ತುಗಟ್ಟಿ ಹೊಡೆಯುವುದನ್ನು ಕಂಡು ನನ್ನ ಗೆಳೆಯನಾದ ಸಾಗರ ತಂದೆ ಪ್ರಭಾಕರ ಹಾಗೂ ಅಲ್ಲಿಂದ ಬರುತ್ತಿದ್ದ ಅನೀಲ ತಂದೆ ಶಿವಾನಂದ ಎನ್ನುವವರು ಓಡಿ ಬಂದು ಜಗಳ ಬಿಡಿಸಿರುತ್ತಾರೆ ಇಲ್ಲದಿದ್ದರೆ ಅವರು ನನಗೆ ಇನ್ನೂ ಹೆಚ್ಚಿಗೆ ಹೊಡೆಯುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.