POLICE BHAVAN KALABURAGI

POLICE BHAVAN KALABURAGI

08 July 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ: 06/07/2019 ರಂದು  ಅಫಜಲಪೂರ  ಠಾಣಾ ವ್ಯಾಪ್ತಿಯ  ಬಳೂರ್ಗಿ ಗ್ರಾಮದ ಅಂಬಾ ಭವಾನಿ ದೇವರ ಗುಡಿಯ ಮುಂದೆ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಳೂರ್ಗಿ ಗ್ರಾಮಕ್ಕೆ ಹೋಗಿ  ಅಂಭಾಭವಾನಿ ದೆವರ ಗುಡಿಯಿಂದ ಸ್ವಲ್ಪ ದೂರು ಜಿಪ ನಿಲ್ಲಿಸಿ ಕಾಲ ನಡಿಗೆಯ ಮೂಲಕ ಹೋಗಿ ಮರೆಯಾಗಿ ನಿಂತು ನೋಡಲು ಗುಡಿಯ ಮುಂದೆ 05 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ದಾಳಿ ಮಾಡಿ ಜೂಜಾಡುತ್ತಿದ್ದ 05 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ನೀಲಾದಾರ ತಂದೆ ಅಮೃತ ಪಡಶೇಟ್ಟಿ  2) ಬಸವರಾಜ ತಂದೆ ಮಹಾದೇವಪ್ಪ ನಂದಿಕೋಲ 3) ರಾಜು ತಂದೆ ಗೋಪಾಲ ರಾಠೋಡ 4) ಪ್ರಕಾಶ ತಂದೆ ಕೀರು ರಾಠೋಡ  5) ಸುನೀಲ ತಂದೆ ಬಿಲ್ಲು ರಾಠೋಡ ಸಾ||  ಎಲ್ಲರು ಬಳೂರ್ಗಿ  ಮತ್ತು ಬಳ್ಳುರ್ಗಿ ತಾಂಡಾ ಅಂತಾ ತಿಳಿಸಿದ್ದು, ಸದರಿಯವರಿಂದ ಜೂಜಾಟಕ್ಕೆ ಬಳಸಿದ  ಒಟ್ಟು 2720/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳನ್ನು  ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ  ಗುನ್ನೆ ನಂ 119/2019 ಕಲಂ 87 ಕೆ.ಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಲಾಡ್ಲೇಮಶಾಕ ತಂದೆ ಚಾಂದಸಾಬ ಮುಲ್ಲಾ ಸಾ: ಕರಜಗಿ ರವರಿಗೆ 2015 ನೇ ಸಾಲಿನಲ್ಲಿ ನಮ್ಮ ಗ್ರಾಮದ ಈರಪ್ಪ ತಂದೆ ಗಂಗಾಧರ ನಾಯಕೋಡಿ ಈತನಿಗೆ ನಮ್ಮ ಗ್ರಾಮದ ಪುಂಡಲಿಕ ತಂದೆ ಭೀಮಶ್ಯಾ ಲಾಳಸಂಗಿ ಈತನು ಮತ್ತು ಅವನ ಅಣ್ಣಂದಿರರು ಹಾಗೂ ತಮ್ಮ ಕೂಡಿಕೊಂಡು ಕೊಲೆಗೆ ಪ್ರಯತ್ನಿಸಿದ್ದರಿಂದ ಸದರಿಯವರ ಮೇಲೆ ಈರಣ್ಣ ಈತನು ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾನೆ ಅದರ ಅಪರಾಧ ಸಂಖ್ಯೆ 167/2015 ಇರುತ್ತದೆ.ಸದರಿ ಪ್ರಕರಣದ ಗುನ್ನೆ ಸ್ಥಳದ ಪಂಚನಾಮೆ ಕಾಲಕ್ಕೆ ಅಫಜಲಪೂರ ಪೊಲೀಸ್ ಠಾಣೆಯ ಪೊಲೀಸರು ಕರಜಗಿ ಗ್ರಾಮಕ್ಕೆ ಬಂದು ಪಂಚನಾಮೆ ಕಾಲಕ್ಕೆ ನನಗೆ ಪಂಚರಾಗುವಂತೆ ಕೋರಿಕೊಂಡ ಮೇರೆಗೆ ನಾನು ಗುನ್ನೆ ಸ್ಥಳದ ಪಂಚನಾಗಿ ನನ್ನ ಸಾಕ್ಷಿ ಕೊಟ್ಟಿರುತ್ತೇನೆ.ಪುಂಡಲಿಕ ಈತನು ಕೇಲವು ದಿನಗಳಿಂದ ನನಗೆ ಕೋರ್ಟಿನಲ್ಲಿ ಸಾಕ್ಷೀ ಹೇಳಿದರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಹೇದರಿಸಿರುತ್ತಾನೆ.  ಅಲ್ಲದೆ ಸದರಿ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯವು ದಿನಾಂಕ:08/07/2019 ರಂದು ಸಾಕ್ಷಿ ಮುದ್ದತ್ತು ನಿಡಿ ಸಮನ್ಸ ಹೋರಡಿಸಿರುತ್ತದೆ. ವಿಷಯ ತಿಳಿದ ಪುಂಡಲಿಕ ಈತನು ನಿನ್ನೆ ದಿನಾಂಕ:05/07/2019 ರಂದು ಸಾಯಂಕಾಲ 6-30 ಪಿ,ಎಮ್,ಸುಮಾರಿಗೆ ನಾನು ಕರಜಗಿ ಗ್ರಾಮದ ಅಫಜಲಪೂರ ರೋಡಿಗಿರುವ ಪೆಟ್ರೋಲ ಪಂಪ ಹತ್ತೀರ ಅಫಜಲಪೂರ ರೋಡಿಗೆ ನಿಂತಿದ್ದಾಗ ಪುಂಡಲಿಕ ತಂದೆ ಭೀಮಶಾ ಲಾಳಸಂಗಿ ಮತ್ತು ಅವನ ತಮ್ಮ ಶ್ರೀಶೈಲ ತಂದೆ ಭೀಮಶ್ಯಾ ಲಾಳಸಂಗಿ  ಸಾ: ಇಬ್ಬರು ಕರಜಗಿ ಮತ್ತು ಪುಂಡಲಿಕನ ಅಳಿಯನಾದ ಅಣ್ಣಪ್ಪ ಸಾ: ಕಲಬುರಗಿ ಮೂರು ಜನರು ಕೂಡಿಕೊಂಡು ಬಂದು ಅವರಲ್ಲಿ ಪುಂಡಲಿಕನು ನನಗೆ ತಡೆದು ನಿಲ್ಲಿಸಿ ರಂಡಿ ಮಗನೆ ಮುಸುಲಾ  ಎಂದು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ವಿರುದ್ದ ಕೋರ್ಟಿನಲ್ಲಿ ಸಾಕ್ಷೀ ಹೇಳಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಅಂದು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನನ್ನ ಮೈಗೆ ಹೊಡೆದನು ಆಗ ನಾನು ಬಡಿಗೆ ಕಸಿದುಕೊಂಡು ಕೆಳಗೆ ಒಗೆದೆನು ನಂತರ ತನ್ನ ಬಲಗೈ ಮುಸ್ಠೀಯಿಂದ ನನ್ನ ಬಾಯಿ ಮೇಲೆ ಹೊಡೆದನು ಆಗ ಶ್ರೀಶೈಲನು ನನಗೆ ತನ್ನ ತೆಕ್ಕಿಯಲ್ಲಿ ಬಿಗಿಯಾಗಿ ಹಿಡಿದನು ಆಗ  ಅಣ್ಣಪ್ಪನು ನನ್ನ ಹೊಟ್ಟೆಯಲ್ಲಿ ಗುಸಾ ಹೊಡೆದು ದುಖಾಪತ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ  ನಂ 118/2019 ಕಲಂ 341, 323, 324, 195 (), 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ವಾಡಿ ಠಾಣೆ : ಶ್ರೀ ಸಯ್ಯದ ಜಾಫರ ತಂದೆ ಮೌಲಾನಾ ಅಖ್ತರ ಸಾ : :ಜೆ.ಎಸ್.ಕ್ಯೂ.ಡಿ 13/2 ಎಸಿಸಿ ಕಾಲೋನಿ ವಾಡಿ ರವರು ಎಸಿಸಿ ಘಟಕ 2 ರಲ್ಲಿ ಪ್ಲಾನಿಂಗ ಸೆಲ್ ಡೆಪ್ಯೂಟಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿದ್ದು ನನ್ನ ಮನೆ ಎಸಿಸಿ ಕಾಲೋನಿಯ ಜೆ.ಎಸ.ಕ್ಯೂ.ಡಿ 13 ನೇದ್ದರ ಮೊದಲನೇ ಅಂತಸ್ಥಿನಲ್ಲಿ ಇರುತ್ತದೆ. ನನಗೆ ಸಾನಿಯಾ ಅಂತಾ  ಹೆಂಡತಿ ಇರುತ್ತಾಳೆ. ನಾನು ದಿನಾಲೂ ಬೆಳಗ್ಗೆ 08-00 ಗಂಟೆಯಿಂದ ಸಾಯಂಕಾಲ 07-00 ಗಂಟೆಯವರೆಗೆ ನನ್ನ ನೌಕರಿಗೆ ಹೋಗಿ ಬಂದು ಮಾಡುತ್ತೆನೆ. ಈಗ ಸುಮಾರು 08 ದಿವಸಗಳಿಂದ ನನ್ನ ಹೆಂಡತಿಗೆ ಆರಾಮವಿಲ್ಲದ್ದರಿಂದ ಎಸಿಸಿ ಕಾಲೋನಿಯಲ್ಲಿರುವ ನಮ್ಮ ಅತ್ತೆ ಮಾವನವರ ಮನೆಯಲ್ಲಿ ಇರುತ್ತಾರೆ. ನಾನು ಸಹ ಅಲ್ಲಿಗೆ ಹೋಗಿ ಬಂದು ಮಾಡುತ್ತೆನೆ. ದಿನಾಂಕ 01/07/2019 ರಂದು ನನ್ನ ಮನೆಗೆ ಹೋಗದೆ ನಮ್ಮ ಅತ್ತೆ ಮಾವನವರ ಮನೆಯಲ್ಲಿ ಉಳಿದು ನನ್ನ ನೌಕರಿ ಮುಗಿಸಿಕೊಂಡು ನಂತರ ದಿನಾಂಕ 02/07/2019 ರಂದು ಬೆಳಗ್ಗೆ  07-00 ಗಂಟೆಗೆ ನಾನು ವಾಸಿಸುವ ಮನೆಗೆ ಹೋದೆನು. ಬೆಡರೂಮನಲ್ಲಿ ಹೋದಾಗ ಒಳಗಡೆ ಇದ್ದ ಅಲಮಾರಿ ತೆರದಿದ್ದು ಕಂಡು ಲೈಟ ಹಾಕಿ ನೋಡಲಾಗಿ ಅಲಮಾರಿಯ ಒಂದು ಕಡೆ ಬಾಗಿಲು ಬೆಂಡಾಗಿ ತೆರದಂತೆ ಕಂಡು ಬಂದಿತು. ನಂತರ  ಈ ವಿಷಯವನ್ನು ನನ್ನ ಹೆಂಡತಿಗೆ ಫೋನ ಮಾಡಿ ವಿಷಯ ತಿಳಿಸಿದೆನು. ನನ್ನ ಹೆಂಡತಿಗೆ ಆರಾಮವಿಲ್ಲದರಿಂದ ದಿನಾಂಕ 03/07/2019 ರಂದು ನನ್ನ  ಮನೆಗೆ ಕರೆದುಕೊಂಡು ಬಂದೆನು. ಅಲಮಾರಿ ಒಳಗಡೆ ಲಾಕರ ಪರಿಶೀಲಿಸಿ ನೋಡಿದಾಗ ಒಂದು 07 ಗ್ರಾಂ ಬಂಗಾರದ ಲಾಕೀಟ ಮತ್ತು 02 ಜೊತೆ ಬೆಳ್ಳಿಯ ಕಾಲು ಚೈನು ಇರಲಿಲ್ಲ. ದಿನಾಂಕ 01,02/07/2019 ರ ರಾತ್ರಿಯ ವೇಳೆಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಬಾಲ್ಕನಿಯಿಂದ ಒಳಗಡೆ ಪ್ರವೇಶ ಮಾಡಿ ಬೆಡರೂಮಿನಲ್ಲಿದ್ದ ಅಲಮಾರಿಯನ್ನು ಒಡೆದು ಅದರಲ್ಲಿದ್ದ ಚಾವಿಯಿಂದ ಲಾಕರ ತೆಗೆದು ಒಳಗಡೆ ಇಟ್ಟ ಒಂದು 07 ಗ್ರಾಂ ಬಂಗಾರದ ಲಾಕೀಟ ಅಂದಾಜು ಕಿಮ್ಮತ್ತು 21 ಸಾವಿರ ಮತ್ತು 02 ಜೊತೆ ಬೆಳ್ಳಿಯ ಕಾಲು ಚೈನುಗಳು ಅಂದಾಜು ಕಿಮ್ಮತ್ತು 3500/- ರೂಪಾಯಿ  ಹೀಗೆ ಒಟ್ಟು 24,500/- ರೂಪಾಯಿ ಬೆಲೆ ಬಾಳುವ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯ ಗುನ್ನೆ ನಂಬರ 76/2019 ಕಲಂ;457,380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.