POLICE BHAVAN KALABURAGI

POLICE BHAVAN KALABURAGI

28 July 2016

Kalaburagi District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತ ದರೋಡೆಕೊರರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 27/07/2016 ರಂದು ಬೆಳಗ್ಗೆ ಮುಂಜಾನೆ 5:30 ಎ.ಎಂ.ಕ್ಕೆ ಹೀರಾಪೂರ ರೈಲ್ವೆಗೇಟ ದಾಟಿದ ನಂತರ ಬಬಲಾದ ರೋಡಿಗೆ ಒಂದು ಸಣ್ಣ ಬ್ರೀಡ್ಜ ಹತ್ತಿರ ಗಿಡಗಟ್ಟಿಗಳ ಮರೆಯಲ್ಲಿ ಕೆಲವು ಜನರು ತಮ್ಮ ಮುಖಕ್ಕೆ  ಬಟ್ಟೆ ಕಟ್ಟಿಕೊಂಡು ನಿಂತುಕೊಂಡು ಸದರ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ  ಹಾಗೂ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಕಾಸ್ರ್ತಗಳನ್ನು ತೋರಿಸಿ ಬೆದರಿಕೆ ಹಾಕಿ  ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ ಚಂದ್ರಶೇಖರ ಪಿ.ಎಸ್.ಐ. (ಕಾ&ಸೂ.) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಗೆ ಮಾನ್ಯ .ಎಸ್.ಪಿ ಸಾಹೇಬ ಕಲಬುರಗಿ, ಮಾನ್ಯ ಅಪರ ಎಸ.ಪಿ.ಸಾಹೇಬರು ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ. ಸಾಹೇಬರು  ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹೀರಾಪೂರ ಬಬಲಾದ ರೋಡಿಗೆ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಬಬಲಾದಕ್ಕೆ ಹೋಗುವ ರೋಡಿಗೆ ಮರೆಯಲ್ಲಿ ನಿಂತು ನೋಡಲಾಗಿ ಹೀರಾಪೂರ ಸೀಮಾಂತರದ ಕಮಲಾಕರ ದೇಶಮುಖ ಇವರ ತೋಟದ ಹತ್ತಿರ ಇರುವ ಒಂದು ಸಣ್ಣ ಬ್ರೀಡ್ಜನ ಹತ್ತಿರ  ಬಲಭಾಗದ ಮರೆಯಲ್ಲಿ 06 ಜನರು ಮುಖಕ್ಕೆ ದೊಡ್ಡ ದಸ್ತಿಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗಾ,್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 06 ಜನರನ್ನು ನನ್ನ ನಿದೆರ್ಶನದಂತೆ ಬೆಳಗ್ಗೆ  06:00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು 04 ಜನರು ಸಿಕ್ಕಿ ಬಿದಿದ್ದು, ಅವರಲ್ಲಿ ಇಬ್ಬರು ನಮ್ಮ ಸಿಬ್ಬಂದಿಯವರಿಂದ ಕೊಸರಿಕೊಂಡು ಓಡಿ ಹೋಗುವಾಗ ತಮ್ಮ ಕೈಯಲ್ಲಿದ್ದ ಖಾರದ ಪುಡಿ, ಬಡಿಗೆ, ಮುಖಕ್ಕೆ ಕಟ್ಟಿಕೊಂಡ ದಸ್ತಿಗಳನ್ನು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 04 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಸಚಿನ ತಂದೆ ಮನೋಹರ ಜೀವಣಗಿ ಸಾ; ಕೆ.ಸಿ.ಇ.ಡಿ.ಟಿ ಗಲ್ಸ ಸ್ಕೂಲ ಹತ್ತಿರ ಆದರ್ಶನಗರ ಕಲಬುರಗಿ 2) ವೈಜನಾಥ ತಂದೆ ಮಲ್ಲಿಕಾರ್ಜುನ ಬೋನಾಳ ಸಾ; ಪ್ರಶಾಂತನಗರ (ಬಿ) ರಿಂಗರೋಡ  ಕಲಬುರಗಿ. 3) ಪ್ರಶಾಂತ @ ಡಾಬರ @ ಸೋನು ತಂದೆ ಮಹೇಶ ಹಳ್ಳಿ ಸಾ; ವಾಟರ ಟ್ಯಾಂಕ ಹತ್ತಿರ ಪಿಎನ್ಟಿ. ಕಾಲೂನಿ  ಹಳೆ ಜೇವರಗಿ ಕಾಲೂನಿ ಕಲಬುರಗಿ.. 4) ರಾಜು @ ಕೊಡ್ಲಿ ರಾಜು ತಂದೆ ಸಿಮರಪ್ಪಾ ಜಗನೂರ  ಸಾ; ಕವಸೂರ ತಾ;ಜಿ;ಯಾದಗಿರಿ ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಆಶೀಫ್ ಸಾ;ಬಸವೇಶ್ವರ ಕಾಲೂನಿ ಕಲಬುರಗಿ.2) ಇಸಾಮೊದ್ದಿನ ಸಾ; ವಿದ್ಯಾನಗರ ಕಲಬುರಗಿ  ಅಂತಾ ತಿಳಿಸಿದರು  ನೀವು 06 ಜನ ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 04 ಜನರು ಕಪಲಾಕರ ದೇಶಮುಖ ಇವರ ಹೊಲದ ಹತ್ತಿರ ಬಬಲಾದ ರೋಡಿಗೆ ಗಿಡಗಂಟಿಗಳ  ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಸದರಿಯವರಿಂದ ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು ಎರಡು ದಸ್ತಿಗಳು ಮತ್ತು ಖಾರದ ಪುಡಿ, ಬಡಿಗೆ ಮತ್ತು ಸಚೀನ ಜೀವಣಗಿ  ಇತನ ಕೈಯಲ್ಲಿದ್ದ ಒಂದು ಚಾಕು, ಮತ್ತು ವೈಜನಾಥ ಗೋನಾಳ  ಇತನ ಕೈಯಲ್ಲಿದ್ದ ಒಂದು ಬಡಿಗೆ, ಹಾಗು ಪ್ರಶಾಂತ @ಡಾಬರ ಹಳ್ಳಿ  ಇತನ ಕೈಯಲ್ಲಿದ್ದ ಒಂದು 15 ಫೀಟನ ಉದ್ದ ನೂಲಿನ ಹಗ್ಗಾ ಹಾಗೂ ರಾಜು @ ಕೊಡ್ಲಿ ರಾಜ ಇತನ ಹತ್ತಿರ ಒಂದು ಕಾರದಪುಡಿಯನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಪಂಚರ ಸಮಕ್ಷಮದಲ್ಲಿ  ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ 27-07-2015 ರಂದು ಮಹಾಗಾಂವ ಕ್ರಾಸದಿಂದ ಮಹಾಗಾಂವ ಗ್ರಾಮಕ್ಕೆ ಹೋಗುವ ರೈಲ್ವೇ ಓವರ ಬ್ರಿಜ್ ಹತ್ತಿರ ಕೆಲವು ಜನರು ಬೈಕ್ ಸವಾರರಿಗೆ ಮತ್ತು ಸಾರ್ವಜನಿಕರಿಗೆ ದರೋಡೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿ ತಲವಾರ, ರಾಡು, ಬ್ಯಾಟರಿ ಇತ್ಯಾದಿ ಮಾರಕಾಸ್ತ್ರಗಳನ್ನು ಹಿಡಿದು ರೋಡಿಗೆ ಮೋಟಾರ ಸೈಕಲ್ ನಿಲ್ಲಿಸಿ ಹೊಂಚುಹಾಕಿ ಕುಳಿತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದಿದ್ದರ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೈಲ್ವೆ ಓವರ್ ಬ್ರಿಡ್ಜ್ ಹತ್ತಿರ ಸುಮಾರು ಐದು ಜನರು ಕುಳಿತುಕೊಂಡು ಒಮ್ಮೇಲೆ ರೋಡಿಗೆ ಹೋಗಿ ಒಮ್ಮೇಲೆ ರೋಡಿಗೆ ಬರುವುದು, ಹೋಗುವುದು ಮಾಡುತ್ತಿದ್ದು ಹಾಗು ಸಾರ್ವಜನಿಕರು ಮತ್ತು ಬೈಕ ಸವಾರರು ಬರುತ್ತಿದ್ದನ್ನು ಗಮನಿಸುತ್ತಿದ್ದನ್ನು ಖಚಿತಪಡಿಸಿಕೊಂಡು 04-15 ಎಮ್.ಕ್ಕೆ ದಾಳಿ ಮಾಡಲಾಗಿ ನಾಲ್ಕು ಜನರು ಸಿಕ್ಕಿದ್ದು, ಒಬ್ಬ ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಸುಮೀತ ತಂದೆ ರೇವಣಸಿದ್ದಪ್ಪಾ ಭಾವಿ 2) ಮಾಪಣ್ಣಾ ತಂದೆ ಬಂಡಪ್ಪಾ ಮಾವಿನಕರ್ 3) ರಾಹುಲ ತಂದೆ ವಿಠಲ ಮಾವಿನಕರ 4) ರವಿಶಂಕರ ತಂದೆ ಶಿವಬಸಪ್ಪಾ ಹಲಕಟ್ಟಿ ಸಾ:ಎಲ್ಲರೂ ಚಿಂಚನಸೂರ ತಾ:ಅಳಂದ ಜಿ_ಕಲಬುಗಿ ಅಂತಾ ತಿಳಿಸಿದ್ದು ನಂತರ ಓಡಿ ಹೋದವನ ಹೆಸರು ವಿಳಾಸ ವಿಚಾರಸಿಲಾಗಿ ರಾಕೇಶ ತಂದೆ ಲಕ್ಷ್ಮಣ ಬಾವಿ ಸಾ:ಚಿಂಚನಸೂರ ತಾ:ಅಳಂದ ಅಂತಾ ತಿಳಿಸಿದ್ದು ಒಬ್ಬೊಬ್ಬರಿಗೆ ಚೆಕ್ಕಮಾಡಲಾಗಿ ಸುಮೀತ ಇವನ ಹತ್ತಿರ ಒಂದು ಬಡಿಗೆ ಸಿಕ್ಕಿದ್ದು, ಮಾಪಣ್ಣ ಇವನ ಹತ್ತಿರ ಒಂದು ತಲವಾರ ಮತ್ತು ಒಂದು ಬ್ಯಾಟರಿ ಸಿಕ್ಕಿದ್ದು, ರಾಹುಲ ಇತನ ಹತ್ತಿರ ಇಂದು ಉದ್ದವಾದ ಹಾರಿ ದೊರೆತಿದ್ದು, ರವಿಶಂಕರ  ಇವನ ಹತ್ತಿರ ಒಂದು ಉದ್ದವಾದ ಬಡಿಗೆ ದೊರೆತ್ತಿದ್ದು, ನಂತರ ರೋಡಿಗೆ ಅಡ್ಡವಾಗಿ ನಿಲ್ಲಿಸಿದ 1) ಹೊಂಡಾ ಶೈನ್ ಕಂಪನಿ ಮೋಟಾರ ಸೈಕಲ್ ನಂ:ಕೆಎ-32-ಇಇ-2706 2) ಹಿರೋ ಹೊಂಡಾ ಸ್ಪೆಲೆಂಡರ್ ಮೋಟಾರ ಸೈಕಲ್ ನಂ;ಕೆಎ-29-ಕ್ಯೂ-5175 3) ಯಮಾಹಾ ಮೋಟಾರ ಸೈಕಲ್ ನಂಬರ ಇರುವುದಿಲ್ಲ ಬಾಸ್ ಅಂತಾ ಬರೆದಿದ್ದು ಇದೆ. ಸದರಿ ವಸ್ತುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 27/07/2016 ರಂದು ಬೆಳಿಗ್ಗೆ ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಉದಂಡಪ್ಪ ಮಣ್ಣೂರಕರ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಎಲ್ಲರೂ ಸೇರಿ ಬಸ ನಿಲ್ದಾಣದ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಬಸ ನಿಲ್ದಾಣದ ಮುಂದಿನ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರಿಗೆ ಕೂಗತ್ತಾ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಆತನು ತನ್ನ ಹೆಸರು ಪ್ರಭಾಕರ ತಂದೆ ಬಾಬು ಬೆಣ್ಣೆಶಿರೂರ ಸಾ|| ಮಾಡಿಯಾಳ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 3500/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಾವು ಕಡಿದು ಬಾಲಕಿ ಮೃತಪಟ್ಟ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 26/07/2016 ರಂದು ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನನ್ನ ಅಣ್ಣ ಈರಯ್ಯಾ ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ. ಇಂದು 0300 ಗಂಟೆಯ ಸುಮಾರಿಗೆ ನಿನ್ನ ಮಗಳು ಕಾವೇರಿ ಮನೆಯಲ್ಲಿ ನಮ್ಮ ತಾಯಿಯೊಂದಿಗೆ ಮಲಗಿಕೊಂಡಾಗ ಅವಳ ಬಲಗಡೆ ಗಲ್ಲಕ್ಕೆ ಹಾವು ಕಡಿದಿದ್ದು ಅವಳಿಗೆ ನಾನು ಮತ್ತು ನನ್ನ ತಾಯಿ ಶಾಂತಾಬಾಯಿ ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದೇವೆ ಅಂತ ತಿಳಿಸಿದಾಗ ನಾನು ನನ್ನ ಹೆಂಡತಿ ಶ್ರೀದೇವಿ ಇಬ್ಬರೂ ಗಾಬರಿಯಾಗಿ ವಾತ್ಸಲ್ಯ ಆಸ್ಪತ್ರೆಗೆ ಬಂದು ನೊಡಲಾಗಿ ನನ್ನ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು ನನ್ನ ತಾಯಿಗೆ ವಿಚಾರಿಸಲಾಗಿ ಮನೆಯಲ್ಲಿ ಮಲಗಿಕೊಂಡಾಗ ಹಾವು ಕಡಿದಿದೆ ಅಂತಾ ತಿಳಿಸಿದ್ದು ನಾನು ನೋಡಲಾಗಿ ನನ್ನ ಮಗಳ ಬಲಗಡೆ ಗಲ್ಲದ ಮೇಲೆ ಕಚ್ಚಿದ ಗಾಯ ಇತ್ತು ನನ್ನ ಮಗಳು ವಾತ್ಸಲ್ಯ ಆಸ್ಪತ್ರೆಯಲ್ಲಿ ಉಪಚಾರ ಪಡೆದು ಹೆಚ್ಚಿನ ಉಪಚಾರಕ್ಕೆ ಕರೆದುಕೊಂಡು ಇಂದು ದಿನಾಂಕ: 27/07/2016 ರಂದು ಹೊಗುತ್ತಿರುವ ಸೊನ್ನ ಕ್ರಾಸ ಹತ್ತಿರ 9-00 ಎ.ಎಂಕ್ಕೆ ನನ್ನ ಮಗಳು ಹಾವಿನ ವಿಷದ ಬಾದೆಯಿಂದ ಮೃತಪಟ್ಟಿದ್ದು ಇರುತ್ತದೆ  ಅಂತಾ ಶ್ರೀ ಚಿದಾನಂದ ತಂದೆ ಮಾಂತಯ್ಯಾ ಮಠ ಸಾ|| ಯಾತನೂರ ತಾ|| ಜೇವರ್ಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.