POLICE BHAVAN KALABURAGI

POLICE BHAVAN KALABURAGI

12 May 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸಲು ನಿಂತಿದ್ದ ಟಿಪ್ಪರ ಟ್ರ್ಯಾಕ್ಟರ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 07-05-2017 ರಂದು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ಇವರ ನೀರ್ದೇಶನದ ಮೇರೆಗೆ ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ, ತಹಶೀಲ್ದಾರರು ಅಫಜಲಪೂರ, ಕಂದಾಯ ನೀರಿಕ್ಷಕರು, ಗ್ರಾಮ ಲೇಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಪೊಲೀಸ್ ಸಿಬ್ಬಂದಿಗಳು ಜಂಟಿಯಾಗಿ ಅಫಜಲಪೂರ ತಾಲೂಕಿನ ಶಿವಪೂರ, ಬನ್ನೆಟ್ಟಿ, ಗುಡ್ಡೇವಾಡಿ ಗ್ರಾಮಗಳಿಗೆ ಬೇಟಿ ನೀಡಿ ಸ್ಥಳ ತನಿಖೆ ಮಾಡಿ ಪರೀಶಿಲಿಸಲಾಗಿ ಭಾರತ್ ಬೇಂಜ್ ಟಿಪ್ಪರ ನಂ ಕೆಎ-32-ಸಿ 5587 ನೇದ್ದು ನದಿ ತೀರದ ಹತ್ತಿರ ಅಕ್ರಮವಾಗಿ ಮರಳು ಸಾಗಣಿಕೆ ಮಾಡಲು ಸಂಶಯಾಸ್ಪದವಾಗಿ ನಿಂತಿದ್ದಾಗ ಸದರಿ ವಾಹನವನ್ನು ಜಪ್ತಿ ಮಾಡಿಕೊಂಡು ವಾಹನದ ಮೇಲೆ ಕ್ರೀಮಿನಲ್ ಮೋಕದ್ದಮೇ ದಾಖಲಿಸಲು ಸೂಚಿಸಿದ ಮೇರೆಗೆ ಮಾನ್ಯ ಶಶೀಕಲಾ ಜಿ ಪಾದಗಟ್ಟಿ ತಹಶೀಲ್ದಾರರು ಅಫಜಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶಾಹಾಬಾದ ನಗರ ಠಾಣೆ : ದಿನಾಂಕ: 11/05/2017 ರಂದು ಮುತ್ತಗಾ  ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಶ್ರೀ ಅಸ್ಲಾಂ ಪಾಷಾ ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಮುತ್ತಗಾ ಗ್ರಾಮದ ಕಾಗಿಣಾ ಬ್ರಿಡ್ಜ ಹತ್ತಿರ ಹೋಗಿ ನೋಡಲಾಗಿ ಬ್ರಿಡ್ಜ ಕಂ ಬ್ಯಾರೇಜ ಪಕ್ಕದ ನದಿಯ  ರಸ್ತೆಯಿಂದ ಒಂದು ಮರಳು ತುಂಬಿದ ಟ್ಯಾಕ್ಟರ ಅದರ ಮುಂದೆ ಒಬ್ಬ ಮೊ/ಸೈ ಚಲಾಯಿಸಿಕೊಂಡು  ಬರುವುದುನ್ನು ನೋಡಿ ದಾಳಿ ಮಾಡಿದಾಗ  ಮೊ/ಸೈ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು.  ಟ್ಯಾಕ್ಟರದಲ್ಲಿದ್ದ ಎರಡು ಜನರಿಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1] ಸೂರ್ಯಕಾಂತ ತಂದೆ ಬಸವರಾಜ ಮಳ್ಳಿ ಸಾ:ಮುತ್ತಗಾ. 2] ಶರಣು ತಂದೆ ಬಸವರಾಜ ಮಾವೂರ ಸಾ:ಮುತ್ತಗಾ ಅಂತಾ ತಿಳಿಸಿದರು.  ಓಡಿ ಹೋದವನ ಬಗ್ಗೆ ವಿಚಾರಿಸಲು ಆತನ ಹೆಸರು ಮಹೇಂದ್ರ ಕೂರಿ ಸಾ:ಮುತ್ತಗಾ ಅಂತಾ ಇದ್ದು ಸ್ಥಳದಲ್ಲಿದ್ದ ಟ್ಯಾಕ್ಟರ ನಂ  ಪರಿಶೀಲಿಸಲು ಕೆ.ಎ. 36 ಟಿ.ಎ 9082 -9083  ಅ.ಕಿ. 2 ಲಕ್ಷ ರೂ ಮತ್ತು ಮೋ/ಸೈ ನಂ ಪರಿಶೀಲಿಸಲು ಕೆ.ಎ. 32 ಇ.ಡಿ 5570 ಇದ್ದು ಅ.ಕಿ. 15,000/- ರೂ ಸದರಿ ಟ್ಯಾಕ್ಟರದಲ್ಲಿ ಮರಳು ತುಂಬಿದ್ದು  ಅದರ ಅ.ಕಿ 1000/- ಇರುತ್ತದೆ.   ಸದರಿವರಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಮರಳು ಮುತ್ತಗಾ  ಗ್ರಾಮದ ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಬರುತ್ತಿದ್ದೇವೆ ಅಂತಾ ತಿಳಿಸಿದರು. ನಂತರ ಮರಳು ತುಂಬಿದ ಟ್ಯಾಕ್ಟರ ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸರಕಾರದ ಅನುದಾನದ ಹಣ ದುರ್ಬಳಕೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಸರೋಜ ಪಾಟೀಲ ರವರು ಪೌರಾಯುಕ್ತರಾಗಿ ದಿನಾಂಕ: 21/05/2015 ರಿಂದ 13/03/2017 ರವರೆಗೆ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.  ನಂತರ ನಮ್ಮ ಯೋಜನಾ ನಿರ್ದೇಶಕರು, ಜಿಲ್ಲಾ ನಗರ ಅಭಿವೃದ್ದಿ ಕೋಶ ಕಲಬುರಗಿ ರವರು ನಗರ ಸಭೆ ಶಹಾಬಾದನ ಕಾರ್ಯವೈಖರಿ ಮತ್ತು ಸರಕಾರದ ಅನುದಾನ ಖರ್ಚು ಮಾಡಿರುವ ಬಗ್ಗೆ ಒಂದು ತನಿಖಾ ತಂಡವನ್ನು ರಚಿಸಿ ಆ ತಂಡದಲ್ಲಿ 1) ಶ್ರೀ ಮದರ ಹುಸೇನ  ಪ್ರಥಮ ದರ್ಜೆ ಸಹಾಯಕ  2) ಶ್ರೀ ರಮೇಶ ಸಿಂಗ ನೊಡಲ ಅಧಿಕಾರಿ ಇವರಿಬ್ಬರು ಜಿಲ್ಲಾ ನಗರಾಭಿವೃದ್ದಿ ಕೋಶ ಕಲಬುರಗಿ  3) ಶ್ರೀಮತಿ ಕ್ರಾಂತಿದೇವಿ ಅಕೌಂಟೆಂಟ ಕನ್ಸಲಟೆಂಟ ಪುರಸಭೆ ಚಿತ್ತಾಪೂರ ರವರಿಗೆ ನೇಮಕ ಮಾಡಿ ದಿನಾಂಕ: 19/04/2017 ರಂದು ಯೋಜನಾ ನಿರ್ದೇಶಕರು ಆಧೇಶ ಹೊರಡಿಸಿದ್ದು ಈ ಆದೇಶದ ಪ್ರಕಾರ ದಿನಾಂಕ:20/04/2017 ರಂದು  ತನಿಖಾ ತಂಡವು ತನಿಖೆಯನ್ನು ನಿರ್ವಹಿಸಿ ವರದಿಯನ್ನು ನೀಡಿದ್ದು ಅವರ ವರದಿಯ ಆಧಾರ ಮೇರೆಗೆ  ಶ್ರೀಮತಿ ಸರೋಜಾ ಪಾಟೀಲ ರವರು ಶಹಾಬಾದ ನಗರ ಸಭೆಯಲ್ಲಿ ವಿವಿಧ ಕಾಮಾಗಾರಿಗಳನ್ನು ಅನುಷ್ಟಾನಗೊಳಿಸದೆ ನೇರವಾಗಿ ಹಣ ಖಜಾನೆಯಿಂದ ಗುತ್ತೆಗೆದಾರರಿಗೆ 2016 ಮತ್ತು 2017 ನೇ ಸಾಲಿನಲ್ಲಿ ಖಜಾನೆ ಖಾತೆ ಸಂಖ್ಯೆ 844800102-29 ರಲ್ಲಿ ಲಭ್ಯವಿರುವ ಅನುದಾನವನ್ನು ದುರೋಪಯೋಗ ಪಡಿಸಿಕೊಂಡಿದ್ದು  ಶ್ರೀಮತಿ ಸರೋಜಾ ಪಾಟೀಲ ರವರು ತಮ್ಮ ಅಧಿಕಾರಾವದಿಯಲ್ಲಿ ಸರಕಾರ ಅನುದಾನದ ಹಣವನ್ನು ಮೇಲ್ಕಂಡ ತನಿಖಾ ತಂಡದ ವರದಿಯ ಪ್ರಕಾರ ದಿನಾಂಕ: 05/11/2016 ರಿಂದ ದಿನಾಂಕ: 22/02/2017 ರವರಿಗೆ  ಒಟ್ಟು ಹಣ 63, 71, 875-00 ರೂಪಾಯಿಗಳು ದುರೊಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ಶ್ರೀ ಶರಣಬಸಪ್ಪಾ ತಂದೆ ಗೊಲಪ್ಪ ಪ್ರಭಾರಿ ಆಯ್ತುಕರುನಗರ ಸಭೆ ಶಹಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರುವ ಬಗ್ಗೆ ಸೂಕ್ತ ಕಾನೂನಿನ ಕ್ರಮ ಜರುಗಿಸಲು ನೀಡಿದ ಅರ್ಜಿಸಾರಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮುಧೋಳ ಠಾಣೆ : ಶ್ರೀಮತಿ  ಬಸ್ಸಮ್ಮ ಗಂಡ ರಾಮುಲು ಜಡೇಲಾ ಸಾ|| ಯಾನಾಗುಂದಿ ಇವರ ಮಗ ಶ್ರೀನಿವಾಸ ಇತನು ಟ್ರಾಕ್ಟರ ಚಾಲಕ ಕೆಲಸಮಾಡಿಕೊಂಡಿದ್ದು ನಮ್ಮೂರ ರಾಜುರೆಡ್ಡಿ ಇವರ ಟ್ರಾಕ್ಟರ ಚಾಲನೆಮಾಡಿಕೊಂಡಿರುತ್ತಾನೆ. ನಮ್ಮೂರ ಮೋಗಲಮ್ಮ ಗಂಡ ಮೋಗಲಪ್ಪ ಸಿದ್ದಪ್ಪೋಳ ಇವರ ಹೋಲವನ್ನು ಇಷಾದಲಿ ತಂದೆ ಅಮೀರಲಿ ಮುಜಾವರ ಇವರು ಲೀಜಿಗೆ ಹಾಕಿಕೋಂಡಿದ್ದು ಸದರಿ ಹೊಲದ ಪಕ್ಕದಲ್ಲಿ ಮೋಗಲಮ್ಮಾ ಇವರ ಅಣ್ಣ ತಮ್ಮಕ್ಕೀಯ ಮಾಣಿಕೆಪ್ಪಾ ತಂದೆ ಭೀಮಪ್ಪಾ ದೊಡ್ಲಾ ಇವರ ಹೊಲವಿರುತ್ತದೆ ಈಗ ಸುಮಾರು 5-6 ದಿವಸಗಳ ಹಿಂದೆ ಸದರಿ ಇಷಾದಲಿ ತಂದೆ ಅಮೀರಲಿ ಮುಜಾವರ ಇವರು ಲೀಜಿಗೆ ಹಾಕಿಕೋಂಡಿದ್ದ ಮೋಗಲಮ್ಮಾ ಇವರ ಹೊಲಕ್ಕೆ ಟ್ರಾಕ್ಟರ ನೇಗಿಲು ಹೋಡೆಯಲು ನನ್ನ ಮಗ ಶ್ರೀನಿವಾಸ ಇತನು ಚಾಲನೆಮಾಡುವ ಟ್ರಾಕ್ಟರನ್ನು ತೆಗೆದುಕೊಂಡು ಹೋಗಿದ್ದು ನನ್ನ ಮಗನು ಸದರಿ ಹೊಲದಲ್ಲಿ ಇಷಾದಲಿ ಹೇಳಿದಂತೆ ನೇಗಿಲು ಹೋಡೆದು ಬಂದಿದ್ದು ಈಗ 2 ದಿವಸಗಳ ಹಿಂದೆ ನಮ್ಮೂರ ಮಾಣೀಕೆಪ್ಪಾ ತಂದೆ ಭೀಮಪ್ಪಾ ದೊಡ್ಲಾ ಮತ್ತು ಮೋನಪ್ಪಾ ತಂದೆ ಸೈಬಣ್ಣ ದೊಡ್ಲಾ ಇವರುಗಳು ನನ್ನ ಮಗನಿಗೆ ಬೋಸುಡಿ ಮಗನ್ಯಾ ನೀನು ಟ್ರಾಕ್ಟರ ನೇಗಿಲು ಹೋಡೆಯುವಾಗ ನಮ್ಮ ಹೊಲದ ಬಂದಾರಿಯನ್ನು ಟ್ರಾಕ್ಟರ ನೇಗಿಲು ಹೋಡೆದು ಹಾಳು ಮಾಡಿದ್ದೀಯಾ ಅಂತಾ ಬೈಯುತ್ತಿದ್ದಾಗ ನನ್ನ ಮಗನು ನಾನೇಕೆ ನಿಮ್ಮ ಬಂದಾರಿಯು ಹಾಳು ಮಾಡಲೀ ನಾನು ಟ್ರಾಕ್ಟರ ಚಾಲಕ ಇದ್ದು ಹೊಲದವರು ಹೇಳಿದಂತೆ ನೇಗಿಲು ಹೋಡೆದಿದ್ದೇನೆ ಟ್ರಾಕ್ಟರದಿಂದ ನೇಗಿಲು ಹೋಡೆಯುವಾಗ ಸ್ವಲ್ಪ ಬಂದಾರಿಯು ಹಾಳಾಗಿದ್ದರೇ ಹೊಲದವರಿಗೆ ಹೇಳಿ ಸರಿ ಮಾಡಿಸುತ್ತೇನೆ ಅಂತಾ ಹೇಳಿದ್ದು ಅದಕ್ಕೆ ಅವರುಗಳು ನಿನಗೆ ಇನ್ನೂ ಎರಡು ದಿವಸ ಟೈಮು ಕೋಡುತ್ತೇವೆ ಅಷ್ಟರಲ್ಲಿ ಸರಿಮಾಡಿಕೊಡದಿದ್ದರೇ ನಿನಗೆ ಜೀವ ಸಹೀತ ಬಿಡುವದಿಲ್ಲಾ ಅಂತಾ ಬೈದಿದ್ದು ಅದಕ್ಕೆ ನನ್ನ ಮಗನು ಆಯ್ತು ಹೊಲದರಿಗೆ ಹೇಳಿ ಸರಿಮಾಡಿಸುತ್ತೇನೆ ಅಂತಾ ಹೇಳಿ ಬಂದಿದ್ದು ಇರುತ್ತದೆ.  ದಿನಾಂಕ 10-05-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ಮಗ ಹಾಗು ನಮ್ಮ ಮನೆಯವರು ನಮ್ಮ ಮನೆಯಲ್ಲಿ ಕುಳಿತುಕೊಂಡಿದ್ದಾಗ ಅದೇ ಸಮಯಕ್ಕೆ ನಮ್ಮೂರ 1) ಮಾಣೀಕೆಪ್ಪಾ ತಂದೆ ಭೀಮಪ್ಪಾ ದೊಡ್ಲಾ 2) ಮೋನಪ್ಪಾ ತಂದೆ ಸೈಬಣ್ಣ ದೊಡ್ಲಾ 3) ಸೈಬಣ್ಣ ತಂದೆ ಭೀಮಣ್ಣ ದೊಡ್ಲಾ 4) ಬುಗ್ಗಪ್ಪಾ ತಂದೆ ಭೀಮಪ್ಪಾ ದೊಡ್ಲಾ 5) ದೊಡ್ಡ ಮೊಗಲಪ್ಪಾ ತಂದೆ ನಿಂಗಪ್ಪಾ ದೊಡ್ಲಾ 6) ಬಾಬು ತಂದೆ ದೊಡ್ಡ ಮೋಗಲಪ್ಪಾ ದೊಡ್ಲಾ 7) ಮೋಗಲಪ್ಪಾ ತಂದೆ ಬುಗ್ಗಪ್ಪಾ ದೊಡ್ಲಾ 8) ಶರಣಪ್ಪಾ ತಂಧೆ ನಿಂಗಪ್ಪಾ ದೊಡ್ಲಾ ಸಾ|| ಹೀಗೆಲ್ಲರೂ ಕೂಡಿಕೊಂಡು ಕೈಯಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ನನ್ನ ಮಗನಿಗೆ ಲೇ ಬೋಸುಡಿ ಮಗನ್ಯಾ ಶೀನ್ಯಾ ಹೊರಗಡೆ ಬಾ ನೀನು ನಮ್ಮ ಹೊಲದ ಬಂದಾರಿಯನ್ನು ಸರಿಮಾಡಿಕೊಡುತ್ತೀನಿ ಅಂತಾ ಹೇಳಿ ಹೋಗಿದ್ದು ಇನ್ನೂ ಯಾಕೇ ಸರಿಮಾಡಿಲ್ಲಾ ನಿನಗೆ ಸೊಕ್ಕು ಬಂದಿದೆ ಅಂತಾ ಬೈಯುತ್ತಿದ್ದಾಗ ನನ್ನ ಮಗನು ಹೊಲದವರಿಗೆ ಹೇಳಿದ್ದೇನೆ ಇನ್ನೂ ಎರಡು ದಿನದಲ್ಲಿ ಸರಿ ಮಾಡುತ್ತೇವೆ ಅಂತಾ ಹೇಳಿದ್ದಾರೆ ಇನ್ನೂ ಎರಡು ದಿನದಲ್ಲಿ ಸರಿಮಾಡಿಸಿಕೊಡುತ್ತೇನೆ ಯಾಕೆ ಜಗಳ ತೆಗೆಯುತ್ತೀರಿ ಅಂತಾ ಅವರಿಗೆ ಹೇಳಿ ನನ್ನ ಮಗನು ಮನಯಲ್ಲಿ ಬಂದಾಗ ಸದರಿಯವರು ನನ್ನ ಮಗನಿಗೆ ಬೋಸುಡೀ ಮಗನ್ಯಾ ನಾವು ಮಾತನಾಡುತ್ತೀದ್ದರೂ ನೀನು ಮನೆಯಲ್ಲಿ ಹೋಗುತ್ತೀಯಾ ಅಂತಾ ಬೈಯುತ್ತಾ ಎಲ್ಲರೂ ನಮ್ಮ ಮನೆಯಲ್ಲಿ ಅಕ್ರಮವಾಗಿ ಬಂದು ನನ್ನ ಮಗನಿಗೆ ಮನೆಯಿಂದ ಎಳೆದುಕೊಂಡು ಹೊರಗೆ ಹೋಗಿ ನಮ್ಮ ಮನೆಯ ಹಿಂದುಗಡೆ ದೊಡ್ಡಿಯಲ್ಲಿ ಎಳೆಕೊಂಡು ಹೋಗಿ ಕೈಯಿಂದ ಹೊಡೆಬಡೆಮಾಡುತ್ತಾ ಮಾಣಿಕೆಪ್ಪಾ ಇತನು ಬೋಸುಡಿ ಮಗನ್ಯಾ ನಮ್ಮ ಹೋಲದ ಬಂದಾರಿಯು ಸರಿ ಮಾಡಿಕೊಡುತ್ತೇನೆ ಅಂತಾ ಹೇಳಿ ಎರಡು ದಿವಸ ಆದರೂ ಇನ್ನೂ ಸರಿ ಮಾಡಿಕೊಟ್ಟಿರುವದಿಲ್ಲಾ ನೀನೇ ಉದ್ದೇಶ ಪುರ್ವಕವಾಗಿ ಬಂದಾರಿಯು ಹಾಳು ಮಾಡಿದ್ದಿಯಾ ನಿನಗೆ ಸೊಕ್ಕು ಬಂದಿದೆ ಇವತ್ತು ನಿನಗೆ ಬಿಡುವದಲ್ಲಾ ಸಾಯಿಸುತ್ತೇವೆ ಅಂತಾ ಬೈಯುತ್ತಾ ಕೊಲೆಮಾಡುವ ಉದ್ದೇಶ ಇಟ್ಟುಕೊಂಡು ಮಾಣಿಕೆಪ್ಪಾ ಇತನು ತಮ್ಮ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಮಗನ ತಲೆಯ ಹಿಂದುಗಡೆ ಹೋಡೆದು ಭಾರಿ ರಕ್ತಗಾಯ ಪಡಿಸಿದ್ದು ಮತ್ತು ಮೈಕೈಗೆ ಹೊಡೆಬಡೆಮಾಡಿದ್ದು ಅಲ್ಲದೇ ಮೋನಪ್ಪಾ ತಂದೆ ಸೈಬಣ್ಣ ದೊಡ್ಲಾ ,ಸೈಬಣ್ಣ ತಂದೆ ಭೀಮಣ್ಣ ದೊಡ್ಲಾ, ಮತ್ತು ಬುಗ್ಗಪ್ಪಾ ತಂದೆ ಭೀಮಪ್ಪಾ ದೊಡ್ಲಾ ಇವರುಗಳು ನನ್ನ ಮಗನಿಗೆ ಕಟ್ಟಿಗೆಯಿಂದ ಕೈಕಾಲುಗಳಿಗೆ ಎದೆಗೆ ಬೆನ್ನೆಗೆ ಹೊಡೆಬಡೆಮಾಡಿ ರಕ್ತಗಾಯ ಮತ್ತು ಗುಪ್ತಗಾಯಮಾಡಿದ್ದು ನನ್ನ ಮಗನು ಕೆಳಗಡೆ ಬಿದ್ದಾಗ ಅವನಿಗೆ ದೊಡ್ಡ ಮೊಗಲಪ್ಪಾ ತಂದೆ ನಿಂಗಪ್ಪಾ ದೊಡ್ಲಾ, ಬಾಬು ತಂದೆ ದೊಡ್ಡ ಮೋಗಲಪ್ಪಾ ದೊಡ್ಲಾ, ಮತ್ತು ಮೋಗಲಪ್ಪಾ ತಂದೆ ಬುಗ್ಗಪ್ಪಾ ದೊಡ್ಲಾ ಈ ಬೋಸುಡೀ ಮಗನಿಗೆ ಸೊಕ್ಕು ಬಂದಿದೆ ಅಂತಾ ಕೈಯಿಂದ ಹೋಡೆಬಡೆಮಾಡುತ್ತಿದ್ದಾಗ ಅಲ್ಲೇ ಇದ್ದ ನಾನು ಮತ್ತು ನನ್ನ ಗಂಡ ರಾಮುಲು ಜಡೇಲಾ ನನ್ನ ಸೋಸೆ ಮಂಜುಳಾ ನನ್ನ ಮಗಳು ಲಕ್ಷ್ಮೀ ಗಂಡ ಹುಸೇನಪ್ಪಾ ಹಾಗು ನಮ್ಮ ಅಕ್ಕಪಕ್ಕದ ಮನೆಯವರಾದ ಚಂದ್ರಪ್ಪಾ ತಂದೆ ಬುಗ್ಗಪ್ಪಾ ಕುರುಬ,ಮೌಲಾಲಿ ತಂದೆ ಇಷಾದಲಿ ಮುಜಾವರ ಹೀಗೆಲ್ಲರೂ ಸೇರಿ ನನ್ನ ಮಗನಿಗೆ ಹೋಡೆಯುವದನ್ನು ಬಿಡಿಸಿಕೊಳ್ಳಲು ಹೋದಾಗ ಸದರಿಯವರು ನನಗೂ ಮತ್ತು ನನ್ನ ಗಂಡನಿಗೆ ಕೈಯಿಂದ ಹೋಡೆಬಡೆಮಾಡಿದ್ದು ನಂತರ ಅವರೆಲ್ಲರೂ ನನ್ನ ಮಗನು ಸತ್ತು ಹೋಗಿದ್ದಾನೆ ಅಂತಾ ತಿಳಿದು ಅಲ್ಲೇ ಬಿಟ್ಟು ಹೋಗಿದ್ದು, ನನ್ನ ಮಗನಿಗೆ ತಲೆಗೆ ಮೈಕೈಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿ ಬೇವಾಸಾಗಿ ಬಿದ್ದಿದ್ದು ನಂತರ ನನ್ನ ಮಗನಿಗೆ ಉಪಚಾರ ಕುರಿತು ನಾನು ಮತ್ತು ನನ್ನ ಗಂಡ ಹಾಗು ನಮ್ಮೂರ ರಾಜುರೆಡ್ಡಿ ಮತ್ತು ವೆಂಕಟರೆಡ್ಡಿ ಹೀಗೆಲ್ಲರೂ ಸೇರಿ ಒಂದು ಖಾಸಗಿ ವಾಹನದಲ್ಲಿ ಇಲ್ಲಿಗೆ ತಂದೆ ಸೇರಿಕೆಮಾಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡೆ ಬಡೆ ಮಾಡಿದ್ದರಿಂದ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಅಸ್ಮಾಬೇಗಂ ಗಂಡ ಮಹ್ಮದ್ ವಾಸೀಮ್ ಅಲಿ ಸಾ: ಚಾಂದಬಾಡ ಶಹಾಬಾದ ಇವರ ಗಂಡ ಹಾಗೂ ಗೆಳೆಯನಾದ ಬಿಲಾಲ ಕೊಲಾರಕರ್ ಇಬ್ಬರೂ ಕೂಡಿ ಕಲ್ಲಿನ ಪರ್ಶಿ ವ್ಯಾಪಾರ ಮಾಡಿಕೊಂಡು ಬಾಂಬೆಗೆ ಹೋಗಿ ಮಾರಿಕೊಂಡುಬರುತ್ತಿದ್ದರು.  ವ್ಯಾಪಾರಕ್ಕೆ ನನ್ನ ಗಂಡ ಬಾಜುಖಾನ ತಂದೆ ಫತ್ರುಖಾನ ಇತನ ಹತ್ತಿರ ಹಣ ಪಡೆದು ಮರಳಿಸುತ್ತಿದ್ದನು.  ಹೀಗೆ 2 ತಿಂಗಳ ಹಿಂದೆ ನನ್ನ ಗಂಡ ಪತ್ರುಖಾನ ಇತನ ಹತ್ತಿರ 20,000/- ರೂ ಪಡೆದುಕೊಂಡು ಬಿಲಲ ಇಬ್ಬರೂ ಕೂಡಿ ತೆಗೆದುಕೊಂಡು ಬಾಂಬೆಗೆ ಹೋದಾಗ ನನ್ನ ಗಂಡ ಮರಳಿ ಬಂದಿದ್ದನು.  ವ್ಯಾಪಾರದ ಹಣ ಬಿಲಾಲ ಇತನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರಿಂದ ಬಾಜುಖಾನ ನನ್ನ ಗಂಡನಿಗೆ ತೆಗೆದುಕೊಂಡ ಹಣ ಕೊಡಲು  ಆಗಾಗ ನಮ್ಮ ಮನಗೆ ಬಂದು ಬೈದು ಹೋಗಿದ್ದನು. ನಾವು ಅವನಿಗೆ ಸಮಜಾಯಿಸಿ ಹೇಳಿದೆವು.  ನಿನ್ನೆ ದಿನಾಂಕ 09/05/2017 ರಂದು ರಾತ್ರಿ ನಮ್ಮ ಮನೆಗೆ ಬಂದು ನನಗೆ ಕಾಹಾ ಹೈ ವಾಸಿಂ ರಾಂಡಕಾ ಬೇಟಾ ಪೈಸಾ ಕಬ ದೇತಾ ಅಂತಾ ಬೈದು ನನ್ನ ಗಂಡನಿಗೆ ಕೈಯಿಂದ ಕಪಾಳ ಮೇಲೆ ಹೊಡೆದು ಅದಕ್ಕೆ ನಾನು ಯಾಕೆ ಹೊಡೆಯುತ್ತಿ ಹೊಡೆಯಬೇಡ ಅಂತಾ ಹೇಳೀದರೂ ಕಲ ಶಾಮ ತಕ ಮೇರಾ ಪೈಸಾ ನಹಿ ದಿಯಾತೋ ದೋನೋ ಲೊಗೋಕೋ ಗರಸೈ ಲೇಜಾತಾ ಅಂತಾ ಬೈದು ಸುಮನೆ ಬಿಡುವುದಿಲ್ಲಾ ಅಂತಾ ತಕರಾರು ಮಾಡುತ್ತಿರುವಾಗ ಬಾಜು ಮನೆಯ ಮಹ್ಮದ ಇಸ್ಮಾಯಿಲ್ ಹಾಗೂ ಮಾವನಾದ ಮಹ್ಮದ ರಫೀಕ ಇವರು ಬಂದು ಸಮಜಾಯಿಸಿ ಕಳುಹಿಸಿದರು.  ಬಾಜುಖಾನ ಇತನು ಹಣ ಕೊಡುವ ವಿಷಯದಲ್ಲಿ ನಮ್ಮ ಮನೆಗೆ ಬಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಹಣ ಕೊಡದಿದ್ದರೆ ಎತ್ತಿಕೊಂಡು ಹೊಗುತ್ತೇನೆಅಂತಾ ಹೇಳಿದ್ದರಿಂದ ಅದನ್ನೆ ನನ್ನ ಗಂಡ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಅವನು ಕೊಟ್ಟ ದುಷ್ಪ್ರೆರಣೆಯಿಂದ ರಾತ್ರಿವೇಳೆ ಮನೆಯಿಂದ ಹೋಗಿ ಶರಣಬಸವೇಶ್ವರ ಗುಡಿಯ ಆವರಣದ ಬೇವಿನ ಮರಕ್ಕೆ ಪ್ಲಾಸ್ಟಿಕ ವೈರ ದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ನನ್ನ ಗಂಡನ ಸಾವಿಗೆ ಕಾರಣನಾದ ಬಾಜುಖಾನ ಸಾ:ಬೆಂಡಿಬಜಾರ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.