POLICE BHAVAN KALABURAGI

POLICE BHAVAN KALABURAGI

20 February 2014

Gulbarga Dist Reported Crimes

ಮಟಕಾ ಜೂಜುಕೋರರ ಬಂಧನ
ಕಾಳಗಿ ಪೊಲೀಸ್ ಠಾಣೆ: ದಿನಾಂಕ 19/02/2014 ರಂದು ಕಾಳಗಿ  ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಜಗದೇವಪ್ಪ ಪಿ.ಎಸ್.ಐ ಕಾಳಗಿ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಕಾಳಗಿ  ಗ್ರಾಮದ ಸನ್ನಿ ಟೇಲರ ಅಂಗಡಿಯ ಮುಂದಿನ ಸಾರ್ವಜನಿಕ ರಸ್ತೆಯ ಹತ್ತಿರ  ಹೋಗಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುತ್ತೆನೆ ಅಂತಾ ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಆತ ತನ್ನ ಹೆಸರು ಲಕ್ಷ್ಮಣ ತಂದೆ ತುಕಾರಾಮ ಸಾ: ಕಾಳಗಿ ಅಂತಾ ತಿಳಿಸಿದ್ದು . ಸಂಗಡ ಇದ್ದ ಪಂಚರ ಸಮಕ್ಷಮ ನಗದು ಹಣ 2015ರೂಪಾಯಿಗಳು, ಒಂದು ಬಾಲ ಪೆನ್ನುಒಂದು ಮಟಕಾ ನಂಬರ ಬರೆದ ಚೀಟಿ ಜಪ್ತಿ ಮಾಡಿಕೊಂಡು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಪೊಲೀಸ್ ಠಾಣೆ:  ದಿನಾಂಕ 19.02.2014 ರಂದು  ರೇಲ್ವೆ ಸ್ಟೇಷನ ಹತ್ತಿರ ಇರುವ ನಾಗರ ಕಟ್ಟಾ ಗಿಡದ ಕೆಳಗೆ ಕಟ್ಟೆಯ ಮೇಲೆ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ದೈವ ಲೀಲೆ ಆಟ ಆಡುತ್ತಿರುವ ಖಚಿತ ಬಾತ್ಮಿ ಬಂದ ಮೇರೆಗೆ  ಠಾಣೆಯ ಸಿಬ್ಬಂದಿಯವರಾದ  1) ಧನಸಿಂಗ ಹೆಚ್.ಸಿ.-45, 2) ತಮ್ಮಣ್ಣ ಸಿಪಿಸಿ-201, ನಾಗೇಂದ್ರ ಸಿಪಿಸಿ-651, 4) ಬಸವರಾಜ ಸಿಪಿಸಿ 799 5) ಅರ್ಜುನರಾವ ಸಿಪಿಸಿ -1075 ಹಾಗೂ ಇಬ್ಬರು ಪಂಚರಾದ 1) ಶ್ರೀ ರಜನಿಕಾಂತ ತಂದೆ ಮೋಹನರಾವ ಗಾಯಕವಾಡ ಸಾ: ಶಹಾಬಾದ  2) ಪರಶುರಾಮ ತಂದೆ ಶರಣಪ್ಪಾ ಬಡಿಗೇರ ಸಾ: ಶಹಾಬಾದ ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 1) ಮೋಹನ ತಂಧೆ ಕಿಶನ ನಾಯಕ ಸಾ: ಹನುಮಾನ ತಾಂಡಾ ಶಹಾಬಾದ 2) ರಂಗಪ್ಪಾ ತಂದೆ ಯಲ್ಲಪ್ಪಾ ಮಾನೆ ಸಾ: ಸುಭಾಸ ಚೌಕ ಶಹಾಬಾದ 3) ಮಲ್ಲೇಶಿ ತಂದೆ ಹೊನ್ನಪ್ಪಾ ಭಂಢಾರಿ ಸಾ:ಕೊಳಸಾ ಫೈಲ ಶಹಾಬಾದ 4) ಬಿಜು ತಂದೆ ಅರ್ಜುನ ಕಮಾನೆ ಸಾ: ಶಹಾಬಾದ 5) ಶರಣು ತಂದೆ ಶಿವಪ್ಪಾ ಭಂಡಾರಿ ಸಾ: ಶಹಾಬಾದ  6) ಯಶವಂತ ತಂಧೆ ಪ್ರಕಾಶ ಸುಮನ ಸಾ: ಶಹಾಬಾದ 7) ಆಬೀದ ಹುಸೇನ ತಂದೆ ಅಬ್ದುಲ ಮಜೀದ ಸಾ: ಶಹಾಬಾದ ರವರನ್ನು ದಸ್ತಗೀರ ಮಾಡಿ ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ ಒಟ್ಟು 4080/-ರೂ ನಗದು ಹಣ ಮತ್ತು ಸ್ಥಳದಲ್ಲಿದ್ದ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ:  
ಮಹಿಳಾ ಪೊಲೀಸ್ ಠಾಣೆ: ದಿನಾಂಕ:19.02.2014 ರಂದು 8 ಶ್ರೀಮತಿ ಶ್ರೀದೇವಿ ಗಂಡ ಲಕ್ಕಪ್ಪಾ ಸಾ: ಫಿಲ್ಟರಬೇಡ ಆಶ್ರಯ ಕಾಲೋನಿ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ತನ್ನ ಮಗಳು ಕು: ಇಂದುಬಾಯಿ ಯು  ದಿನಾಂಕ: 07.02.2014 ರಂದು  5.00 ಗಂಟೆಗೆ  ಮಾರ್ಕೇಟ್ ಹೋಗುತ್ತೇನೆ  ಅಂತಾ ಮನೆಯಿಂದ ಹೊದವಳು ವಾಪಸ ಮರಳಿ ಮನೆಗೆ ಬರದೇ ಇದ್ದ ಕಾರಣ ನಾವು ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಿ ಮತ್ತು ನಮ್ಮ ಸಂಭಂದಿಕರಲ್ಲಿ ವಿಚಾರಿಸದರೂ ಕೂಡಾ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳು ಕು: ಇಂದುಬಾಯಿ ಇವಳ ಪತ್ತೆ ಮಾಡಿ ಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು ;
ಮಹಾಗಾಂವ ಠಾಣೆ: ದಿನಾಂಕ 19-02-14 ರಂದು  ಶ್ರೀ ಪಂಡಿತ ತಂದೆ ತಿಪ್ಪಣ್ಣಾ ಹಾದಿಮನಿ ಸಾ: ಬಬಲಾ ಐ.ಕೆ.ಮತ್ತು ಬಾಬು  ಜಮಾದಾರ  ಇಬ್ಬರು ಹಿರೋ ಹೊಂಡಾ ಸ್ಪೆಂಡರ  ಕೆಎ 34 ಎಸ್ 2019 ನೇದ್ದರ ಮೇಲೆ ನಾಡ ತಹಸೀಲ್ದಾರ ಕಚೇರಿ ಮಾಹಾಗಾಂವಕ್ಕೆ ಹೋಗುತ್ತಿರುವಾಗ ಮಾಹಾಗಾಂವ ಕ್ರಾಸ ಮತ್ತು ಕುರಿಕೋಟಾ ಗ್ರಾಮದ ಮಧ್ಯದಲ್ಲಿ ಇರುವ ಗುಲಬರ್ಗಾ- ಹುಮನಾಬಾದ ಮುಖ್ಯ ರಸ್ತೆಯ ಕೆನಲ್ ಹತ್ತಿರ  ಹೋಗುತ್ತಿರುವಾಗ ಸುಹಾಸ ಕೆ.ಎಸ್.ಅರ್.ಟಿ.ಸಿ. ಬಸ್ಸು ನಂಬರ  ಕೆಎ 32 ಎಫ 1807 ನೇದ್ದರ ಚಾಲಕ ಶೇಕ ಮೋಬಿನ ತಂದೆ ಶೇಕ ಮಹೆತಾಬ ಡಿವಿಜನ್ ನಂ.1 ಡಿಪೋ ನಂ.1 ಗುಲಬರ್ಗಾ ಸಾ: ಹಳ್ಳಿಖೇಡ (ಬಿ) ತನ್ನ ಬಸ್ಸನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸುತ್ತಾ ಮೋಟಾರ ಸೈಕಲಗೆ  ಓವರ ಟೇಕ ಮಾಡಲು ಹೋಗಿ ಮೋಟಾರ ಸೈಕಲನ  ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದಇಬ್ಬರೂ ರೋಡಿನ ಎಡಭಾಗಕ್ಕೆ  ಮೋಟಾರ ಸೈಕಲದೊಂದಿಗೆ ಬಿದ್ದು  ರಕ್ತಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಮಾಹಾಗಾಂವ ಪೊಲೀಸ  ಠಾಣೆ : ದಿನಾಂಕ 19-02-14 ರಂದು ಶ್ರೀ ಬಸವರಾಜ ತಂದೆ ಶಿವಶೆಟ್ಟಿ @ ಶಿವಪುತ್ರಪ್ಪ  ಬೋರೆ ಸಾ: ಬಸವೇಶ್ವರ ಕಾಲನಿ ಗುಲಬರ್ಗಾ ಮತ್ತು ಆತನ ಅಣ್ಣ ಶಿವಾನಂದ ಮತ್ತು ಅತ್ತಿಗೆ ಪ್ರಿಯಾಂಕಾ ಮಕ್ಕಳಾದ ಖುಷಿ, ಶರಣು ಹಾಗೂ ತಾಯಿ ಸುಗಲಾ ಇವರು ಕಾರ ನಂ ಕೆಎ03/ ಸಿ2512 ನೇದ್ದರಲ್ಲಿ ಗುಲಬರ್ಗಾದಿಂದ ಹೋಗುತ್ತಿರುವಾಗ ಸಂಜೆ 5-30 ಗಂಟೆ ಮಾಹಾಗಾಂವ ಕ್ರಾಸನ ಕ್ಯಾನಲ ಹತ್ತಿರ ಎದುರಿಗೆ ಹುಮನಾಬಾದ ಕಡೆಯಿಂದ ಬರುತ್ತಿದ್ದ ಟಿಪ್ಪರ ಕೆಎ32/ ಬಿ3991 ನೇದ್ದರ  ಚಾಲಕ ತನ್ನ ಟಿಪ್ಪರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸುತ್ತಾ ಬಂದು ನಮ್ಮ ಕಾರಿನ  ಮುಂದಿನ ಭಾಗಕ್ಕೆ  ಅಪಘಾತ ಪಡಿಸಿದ್ದು ಅಪಘಾತದಿಂದ ಕಾರಿನಲ್ಲಿದ್ದ ಶಿವಾನಂದ, ಶರಣು, ಪ್ರಿಯಾಂಕಾ ರವರಿಗೆ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿದ್ದು.  ಉಳಿದವರಿಗೆ ಸಹ ಭಾರಿ ರಕ್ತಗಾಯಗಳಾಗಿದ್ದು ಟಿಪ್ಪರ  ಕೆಎ 32 ಬಿ 3991 ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.