POLICE BHAVAN KALABURAGI

POLICE BHAVAN KALABURAGI

02 July 2015

KAlburagi District Reported Crimes

ಸಾಲದ ಭಾದೆ ತಾಳಲಾರದೆ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಕುರಕುಂಟಾ ಠಾಣೆ : ಶ್ರೀಮತಿ ಎಂಕಟಮ್ಮ  ಗಂಡ ನಾಗೇಂದ್ರಪ್ಪಾ ತಳವಾರ ಸಾ|| ಯಡ್ಡಳ್ಳಿ ಗ್ರಾಮ ಇವರ ಗಂಡ ಹಾಗೂ ನನ್ನ ಗಂಡನ ಮೊದಲನೆ ಹೆಂಡತಿ ಮಗನಾದ ನರಸಪ್ಪ ಇಬ್ಬರೂ ಕೂಡಿ ಒಕ್ಕಲುತನ ಕೆಲಸ ಮಾಡುತ್ತಾರೆ ನಮಗೆ ಎಂಟು ಎಕರೆ ಜಮೀನು ಇದ್ದು ಬೆರೆಯವರ ಹೊಲವನ್ನು ಪಾಲಿನಿಂದ ಮಾಡಿಕೊಂಡು ಉಪ-ಜೀವನ ಸಾಗಿಸುತ್ತಿದ್ದೆವು. ಈಗ ಮೂರು ವರ್ಷಗಳಿಂದ ಮೂರುನಾಲ್ಕು ಲಕ್ಷ  ರೂಪಾಯಿ ಸಾಲ ಆಗಿದ್ದು ಅದನ್ನು ತೀರಿಸುವ ಸಲುವಾಗಿ ಬೆಂಗಳೂರಿಗೆ ಹೋದರೂ ಕೂಡಾ ಸಾಲ ತಿರಿಸಲು ಆಗದೇ ಸಾಲ ಬೇಳೆಯುತ್ತಾ ಹೋಗಿದ್ದು ನನ್ನ ಗಂಡನಿಗೆ ಸಾಲ ಮುಟ್ಟಿಸಲು ಆಗದ ಕಾರಣ ನಿನ್ನೆ ಊಟ ಮಾಡಿ ಮಲಗುವ ಮುನ್ನಾ ವಿಷ ಸೇವನೆ ಮಾಡಿ ಮಲಕೊಂಡಾಗ ರಾತ್ರಿ 12 ಗಂಟೆಗೆ ವಾಂತಿ ಮಾಡುಕೊಳ್ಳುವಾಗ  ನಾನು ಎನಾಯಿತ್ತು ಅಂತಾ ಕೇಳಲು ತಾನು ವಿಷ ಸೇವನೆ ಮಾಡಿದ್ದೆನೆ ಅಂತಾ ಹೇಳಿದಾಗ ನಾಗಪ್ಪ, ನರಸಪ್ಪ, ಜಗಪ್ಪ,ಬಸಪ್ಪ ಎಲ್ಲರೂ ಕೂಡಿಕೊಂಡು ಒಂದು ಜೀಪನಲ್ಲಿ ಸರಕಾರಿ ಅಸ್ಪತ್ರೆ ಸೇಡಂ ಕ್ಕೆ ತಂದು ಸೇರಿಕೆ ಮಾಡಿದ್ದು ದಿನಾಂಕ:- 01-07-2015 ರಂದು ಮುಂಜಾನೆ ಉಪಚಾರ ಫಲಕಾರಿಯಾಗದೇ ನನ್ನ ಗಂಡ ಮೃತಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ  23.06.2015  23:00 ಗಂಟೆಯಿಂದ 24-06-2015 ರ  6 ಗಂಟೆಯ ಮಧ್ಯದ ಅವಧಿಯಲ್ಲಿ   ಗೂಡೂರ (ಎಸ್.ಎ) ರಕಾರಿ ಪ್ರೌಡ ಶಾಲೆಯ ಕೊಣೆಯ ಬಾಗಿಲ ಕೀಲಿ ಮುರಿದು ಬಿಸಿಯೂಟ ಕೊಣೆಯಲ್ಲಿನ 13 ಕ್ವಿಂಟಾಲ್ 25 ಕೆ.ಜಿ ಅಕ್ಕಿ ಅಂ.ಕಿ 3900/-,2) 1 ಕ್ವಿಂಟಾಲ್ 65 ಕೆ.ಜಿ ಗೋಧಿ ಅಂ.ಕಿ 1980/- 3) 70 ಕೆ.ಜಿ ಬೇಳೆ ಅಂ.ಕಿ 7500/- 4) 30 ಎಣ್ಣೇ ಪಾಕೇಟುಗಳು ಅಂ.ಕಿ 1950/- 5) 50 ಕೆ.ಜಿ ಗೋಧಿ ರವ ಅಂ.ಕಿ 1500/- 6) 1 ಸ್ಟೀಲ್ ನಳದ ಪಾತ್ರೆ ಅಂ.ಕಿ 1೦೦೦/- 7) 1 ಸ್ಟೀಲ್ ಬುಟ್ಟಿ ಅಂ.ಕಿ 280/- 8) 1 ಬೋಗಣಿ ಅಂ.ಕಿ 1290/- 9) 30 ಊಟದ ಪ್ಲೇಟ್ ಅಂ.ಕಿ 3400/- 10) 12 ಸ್ಟೀಲ್ ಗ್ಲಾಸ್ ಅಂ.ಕಿ 480/- 11) 1 ಚಹಾದ ಕಿಟ್ಲಿ ಅಂ.ಕಿ 300/- 12) 1 ಗೋಡೆಯ ಗಡಿಯಾರ್ ಅಂ.ಕಿ 320/- 13) 3 ಕೆ.ಜಿ ಹಾಲಿನ ಪುಡಿ ಅಂ.ಕಿ 600/- ಹೀಗೆ ಒಟ್ಟು 24.500/- ರೂ ಕಿಮ್ಮತ್ತಿನ ಸಾಮಗ್ರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ ಸುಮೀತ್ರಾ. ಬಿ ಪಾಟೀಲ, ಮುಖ್ಯ ಗುರುಗಳು  ಸರಕಾರಿ ಪ್ರೌಡ ಶಾಲೆ ಗೂಡೂರ (ಎಸ್.ಎ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸೇಖರಿಸುತ್ತಿದ್ದ ಹಿಟ್ಯಾಚ ಜಪ್ತಿ :
ಜೇವರ್ಗಿ ಠಾಣೆ : ದಿನಾಂಕ: 1.07.2015 ರಂದು 09:00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ  01-07-2015 ರಂದು ಬೆಳಗ್ಗೆ 06-30 ಗಂಟೆಗೆ ಕೋನ ಹಿಪ್ಪರಗಾ ಸಿಮಾಂತರದ ಭಿಮಾ ನದಿಯ ದಂಡೆಯಲ್ಲಿ Hitachi EX 110 Hydralyc Excavator Sr. No 1101 6459 ನೇದ್ದರ ಚಾಲಕನು ಯಾವುದೆ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಭಿಮಾ ನದಿಯಿಂದ ಕಳ್ಳತನದಿಂದ ಮರಳು ಒಂದು ಕಡೆಗೆ ಶೇಖರಿಸುತ್ತಿರುವಾಗ ದಾಳಿ ಮಾಡಿ ಹಿಡಿಯುವಸ್ಟರಲ್ಲಿ ಅವನು ಅಲ್ಲಿಂದ ಓಡಿ ಹೋಗಿದ್ದು ಕಾರಣ ಯಾವುದೆ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಮರಳನ್ನು ಅಕ್ರಮವಾಗಿ ಶೇಖರಣೆ ಮಾಡಿ ಸಂಭಂದ ಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ಮೋಸ ಮಾಡುತ್ತದಿದ್ದ ಹಿಟಾಚಿ ಮತ್ತು ಅದರ ಚಾಲಕನ ವಿರುದ್ಧ ಕಾನೂನು ಕ್ರಮಕೈಕೊಳ್ಳಬೇಕು ಅಂತಾ ಶ್ರೀ ಮಹಾಂತಪ್ಪ ಹುಗಾರ ಗ್ರಾಮ ಲೇಖಪಾಲಕರು ಕೂಡಿ ಸಾ : ಹರವಾಳ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.