POLICE BHAVAN KALABURAGI

POLICE BHAVAN KALABURAGI

20 November 2013

Gulbarga District Reported Crimes

ಹಾವು ಕಚ್ಚಿ ಮಹಿಳೆ ಸಾವು :
ಫರತಾಬಾದ ಠಾಣೆ : ದಿನಾಂಕ 17-11-2013 ರಂದು ಬೆಳಗ್ಗೆ 8-00 ಗಂಟೆಯ ಸುಮಾರಿಗೆ ನಮ್ಮ ಅಕ್ಕ ನಾಗಮ್ಮ  ಇವಳು ನಮ್ಮೂರಿನ ರಾಮಣ್ಣ ಸುಬೇದಾರ ಇವರ ಹೊಲದಲ್ಲಿನ ಹತ್ತಿ ಬೆಳೆ ಬಿಡಿಸಲು ಹೋಗಿ ಬರುತ್ತೆನೆ ಅಂತಾ ಹೇಳಿ ಹೋದಳು. ನಂತರ ನಾನು ಮನೆಯಲ್ಲಿದಾಗ ನಮ್ಮೂರಿನ ಗುರಬಾಯಿ ಕಲಶೇಟ್ಟಿ ಇವಳು ಬಂದು ತಿಳಿಸಿದ್ದೆನಂದರೆ ರಾಮಣ್ಣ ಸುಬೇದಾರ ಇವರ ಹೊಲ ಅರ್ವೆ ನಂ. 214 ನೇದ್ದರಲ್ಲಿ ನಾನು, ನಿಮ್ಮ ಅಕ್ಕ ನಾಗಮ್ಮ ಮತ್ತು ರಾಮಣ್ಣ ಸುಬೇದಾರ ಎಲ್ಲರೂ ಕೂಡಿಕೊಂಡು ಹತ್ತಿ ಬೆಳೆಯನ್ನು ಬಿಡಿಸುತ್ತಿರುವಾಗ ಬೆಳಗ್ಗೆ 9-30 ಗಂಟೆಯ ಸುಮಾರಿಗೆ ನಿಮ್ಮಕ್ಕನ ಎಡಗಾಲಿನ ಪಾದದ ಮೇಲೆ ಹಾವು ಕಚ್ಚಿದ್ದರಿಂದ ನಿಮ್ಮ ಅಕ್ಕ ತಲೆ ಸುತ್ತು ಬಂದು ಕೆಳಗೆ ಬಿದ್ದಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಗೊಂಡು ಕೂಡಲೆ ರಾಮಣ್ಣ ಇವರ ಹೊಲಕ್ಕೆ ಹೋಗಿ ನೋಡಿ ನಾನು, ಗುರಬಾಯಿ ಮತ್ತು ರಾಮಣ್ಣ ಸುಬೇದಾರ ಎಲ್ಲರೂ ಕೂಡಿಕೊಂಡು ಒಂದು ಟಂ-ಟಂನಲ್ಲಿ ಹಾಕಿಕೊಂಡು ಉಪಚಾರ ಕುರಿತು ಗುಲಬರ್ಗಾದ ಸರಕಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತೆವೆ.  ಸದರಿ ನಮ್ಮ ಅಕ್ಕ ನಾಗಮ್ಮ ಇವಳಿಗೆ ಹಾವು ಕಚ್ಚಿ ಸರಕಾರಿ ಅಸ್ಪತ್ರೆ ಗುಲಬರ್ಗಾದಲ್ಲಿ ಉಪಚಾರ ಹೊಂದುತ್ತಾ ಉಪಚಾರದಿಂದ ಗುಣಮುಖವಾಗದೆ ಇಂದು ದಿನಾಂಕ 19-11-2013 ರಂದು ಬೆಳಗ್ಗೆ 7-30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಕರಬಸಪ್ಪ ತಂದೆ ಗುರಪ್ಪ ಕಲಶೇಟ್ಟಿ  ಸಾ:ಕವಲಗಾ(ಬಿ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಶಿವಕುಮಾರ  ತಂದೆ ಪಂಚಾಕ್ಷರಯ್ಯಾ ಕುಡ್ಡಳ್ಳಿ ಸಾ|| ಪೊಲಕಪಳ್ಳಿ ತಾ|| ಚಿಂಚೋಳಿ ಜಿ|| ಗುಲ್ಬರ್ಗಾ  ರವರು ದಿನಾಂಕ 18-11-2013 ರಂಧು ಬೆಳೆಗ್ಗೆಯೇ ಸದರಿ ನನ್ನ ಅಕ್ಕ ಹಾಗೂ ಭಾವನವರಾದ ಅಮೃತಯ್ಯಾ ಮಠಪತಿ  ಇವರು ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮಕ್ಕೆ  ಸಂಭಂದಿಕರಿಗೆ ಮಾತಾನಾಡಿಸಿಕೊಂಡು  ಬರಲು ಹೀರೋ ಹೋಂಡಾ ಪ್ಯಾಶನ್ ಪ್ಲಸ್ ಮೋಟಾರ ಸೈಕಲ್ ನಂ ಎ ಪಿ-28, 8317 ನೇದ್ದರ ಮೇಲೆ ಕುಳಿತುಕೊಂಡು  ಹೋಗಿದ್ದು  ಹಸರಗುಂಡಗಿಯಿಂದ ವಾಪಾಸ್ಸು ಬರುತ್ತಿರಬೇಕಾದರೆ  ಸದರಿ ಮೋಟಾರ ಸೈಕಲ್ ನ್ನು  ಸವಾರಿ ಮಾಡುತ್ತಿದ್ದ ಸದರ ನನ್ನ ಭಾವನವರು ತನ್ನ  ಮೋಟಾರ ಸೈಕಲ್ ನ್ನು ಅತೀ ವೇಗ, ನಿಷ್ಕಳಿಜೀತನದಿಂದ ಹಾಗೂ ಮಾನವ ಜೀವಕ್ಕೆ  ಅಪಾಯವಾಗುವಂತೆ ಚಲಾಯಿಸಿ ಚಿಮ್ಮನಚೋಡ- ಚಿಂಚೋಳಿ  ಮುಖ್ಯ ರಸ್ತೆಯ ಮೇಲೆ  ಚಿಮ್ಮಾ ಇದಲಾಯಿ  ಕ್ರಾಸ್ ಮೋದಲು ಗೌನಳ್ಳಿ ಮಠದ ಹತ್ತೀರ ತನ್ನ ಮೋಟಾರ ಸೈಕಲ್  ಸಮೇತ ಸದರ ಮೋಟಾರ ಸೈಕಲ್ ಹಿಂದೆ ಕುಳಿತ್ತಿದ್ದ ನನ್ನ ಅಕ್ಕಳಾದ ಬಂಡೆಮ್ಮಾ ಇವಳಿಗೆ ಬಿಳಿಸಿದ್ದು. ಸದರ ಘಟನೆಯಿಂದಾಗಿ ನನ್ನ ಅಕ್ಕಳಿಗೆ ಬಲಕಿನ ಭಾಗಕ್ಕೆ ಭಾರಿ ಗುಪ್ತಗಾಯವಾಗಿದ್ದು, ಆ ಸಮಯದಲ್ಲಿಯೇ ನನ್ನ ಭಾವನವಾರಾದ ಅಮೃತಯ್ಯಾ ಇವರು 108 ಅಂಬ್ಯೂಲೆನ್ಸ ವಾಹನಕ್ಕೆ ಕರೆ ಮಾಡಿ ಘಟನಾ ಸ್ಥಳಕ್ಕೆ  ಅಂಬ್ಯೂಲೆನ್ಸ ಕರೆಯಿಸಿಕೊಂಡು ಉಪಚಾರ ಕುರಿತು  ಸದರ  ನನ್ನ ಅಕ್ಕಳಿಗೆ  ಸದರಿ ಅಂಬ್ಯೂಲೆನ್ಸನಲ್ಲಿ ಹಾಕಿಕೊಂಡು  ಸರಕಾರಿ ಆಸ್ಪತ್ರೆ ಚಿಂಚೋಳಿಗೆ ತಂದು  ಸೇರಿಕೆ ಮಾಡಿರುತ್ತಾರೆ. ಸದರ ಘಟನೆಯು ನನಗೂ ಫೋನ್  ಮುಖಾಂತರ  ಗೋತ್ತಾಗಿ ನಾನು ನನ್ನ  ಅಕ್ಕನವರಿಗೆ ಸದರ ಘಟನೆಯಿಂದಾಗಿ ಬಲ ತಲೆಯ ಮೇಲಿನ ಭಾಗಕ್ಕೆ ಭಾರಿ ಪ್ರಮಾಣದ ಗುಪ್ತಗಾಯವಾಗಿ ಕೋಮಾಸ್ಥತಿಯಲ್ಲಿ ಇರುವುದನ್ನು ನೋಡಿದೆವು, ನಂತರ ಹೆಚ್ಚಿನ ಉಪಚಾರ ಕುರಿತು ನಿನ್ನೆ ದಿನವೇ  ನನ್ನ ಅಕ್ಕನವರಿಗೆ ನಿಖಿಲ್ ಆಸ್ಪತ್ರೆ ಹೈದ್ರಾಬಾದನಲ್ಲಿ ತಂದು ಸೇರಿಕೆ ಮಾಡಿರುತ್ತೇವೆ ಇನ್ನೂ ನನ್ನ ಅಕ್ಕ ಕೋಮಾ ಸ್ಥತಿಯಲ್ಲಿ ಇರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 18-11-2013 ರಂದು 12-30 ಗಂಟೆಯ ಸುಮಾರಿಗೆ ಶ್ರೀ ಗಂಗಾಧರ ತಂದೆ ನಾಗಶೆಟ್ಟೆಪ್ಪಾ ಪಾಟೀಲ ಸಾ : ಪಟವಾದ ಇವರ ಹೊಲದಲ್ಲಿ ಬಂದಾರಿಯ ಗಿಡ ಗಂಟಿಗಳನ್ನು ಕಡಿಯುವ ವಿಷಯದಲ್ಲಿ ಅಣ್ಣಪ್ಪಾ ತಂದೆ ನಾಗಶೆಟ್ಟೆಪ್ಪಾ ಪಾಟೀಲ ಮತ್ತು ಆಶಾ ಗಂಡ ಅಣ್ಣಪ್ಪಾ ಇಬ್ಬರು ಕುಡಿಕೊಂಡು ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಕೊಯಿತಾದಿಂದ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.