POLICE BHAVAN KALABURAGI

POLICE BHAVAN KALABURAGI

02 December 2017

KALABURAGI DISTRICT REPORTED CRIMES.

gÁWÀªÉÃAzÀæ £ÀUÀgÀÀ oÁuÉ : ದಿನಾಂಕ:01/12/2017 ರಂದು ಮಧ್ಯಾನ 2.30 ಪಿ.ಎಂಕ್ಕೆ ಎಎಸ್‌‌ ಮಲ್ಲಿನಾಥರವರು ಜಪ್ತಿಮಾಡಿದ ಮರಳು ತುಂಬಿದ 2 ಟಿಪ್ಪರಗಳು ಮತ್ತು ಇಬ್ಬರೂ ಚಾಲಕರನ್ನು ಠಾಣೆಗೆ ತಂದು ಹಾಜರ ಪಡಿಸಿ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 01.12.2017 ರಂದು ಇದ್ ಮೀಲಾದ ಹಬ್ಬರದ ಪ್ರಯುಕ್ತ ಬೆಳ್ಳಿಗ್ಗೆ 8:30 ಗಂಟೆಗೆ ನಾನು ನಮ್ಮ ಠಾಣೆ ಶ್ರೀ ಶಿವಲಿಂಗಪ್ಪ ಹೆಚ್.ಸಿ 06. ಶ್ರೀ ಗಂಗಾಧರ ಪಿಸಿ 642 ಮತ್ತು ಕೀಶೊರ ಪಿಸಿ 1010 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೇಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಬೆಳ್ಳಿಗ್ಗೆ 10:15 ಗಂಟೆಗೆ ನಾನು ಸಿಬ್ಬಂದಿಯವರು ಕೂಡಿಕೊಂಡು ಠಾಣಾ ವ್ಯಾಪ್ತಿಯ ದೇವರದಾಸಿಮಯ್ಯ ಬಡಾವಣೆಯಲ್ಲಿ ಹೋದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ತಿಳಿಹೇಳಿ ಅವರು ದಾಳಿಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿಕೂಡಲು ಒಪ್ಪಿಕೊಂಡಿದ್ದು ನಂತರ ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬೆಳ್ಳಿಗ್ಗೆ 11:15 ಗಂಟೆಗೆ ಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದು ಬೆಳ್ಳಿಗ್ಗೆ 11:45 ಗಂಟೆಯ ಸುಮಾರಿಗೆ ಎರಡು ಟಿಪ್ಪರಗಳು ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬರುತ್ತಿರುವದನ್ನು ನೋಡಿ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಎರಡು ಟಿಪ್ಪರಗಳನ್ನು ನಿಲ್ಲಿಸಿ ನೋಡಲು ಅವುಗಳ ನಂಬರ ಜಿ.ಜೆ 12 ಎಟಿ 8619 ಅಂತ ಇದ್ದು ಇನ್ನೂಂದರ ನಂಬರ ಎಮ್.ಹೆಚ್.13 ಆರ್ 1618 ಅಂತ ಇದ್ದು ನಂತರ ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲು ಅವುಗಳಲ್ಲಿ ಕೆಂಪು ಮರಳು ಇದ್ದು ಸದರಿ ಟಿಪ್ಪರ ಚಾಲಕರಿಗೆ ಹೆಸರು ವಿಳಾಸ ವಿಚಾರಿಸಲು ಟಿಪ್ಪರ ನಂ ಜಿ.ಜೆ 12 ಎಟಿ 8619 ನೇದ್ದರ ಚಾಲಕ ಅಯುಬ @ ಅಯುಬ ಖಾನ ತಂದೆ ಚಾಂದಸಾಬ ವಯ: 30 ವರ್ಷ : ಚಾಲಕ ಜಾತಿ: ಮುಸ್ಲಿಂ ಸಾ: ಬಂದರವಾಡ ಹಾ:: ಪಟೇಲ ಕಾಲೋನಿ ಡಬರಾಬಾದ ಕ್ರಾಸ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಮತ್ತು ಟಿಪ್ಪರ ನಂ ಎಮ್.ಹೆಚ್. 13 ಆರ್ 1618 ನೇದ್ದರ ಚಾಲಕ ತನ್ನ ಹೆಸರು ಆಸೀಬ ಅಲಿ ತಂದೆ ಸಾಭೀರ ಅಲಿ ವಯ: 29 ವರ್ಷ : ಚಾಲಕ ಜಾತಿ: ಮುಸ್ಲಿಂ ಸಾ: ಡಬರಾಬಾದ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿ ಇಬ್ಬರು ಟಿಪ್ಪರ ಚಾಲಕರಿಗೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಿಲು ಸೂಚಿಸಿದ್ದು. ಸದರಿ ಇಬ್ಬರು ಚಾಲಕರು ತಮ್ಮ ಹತ್ತಿರ ಯಾವುದೆ ದಾಖಲಾತಿಗಳು ಇರುವದಿಲ್ಲ ತಮ್ಮ ಮಾಲಿಕರಾದ ಜಾವೀದ ಸಾ:ಹುಸೇನ ಗಾರ್ಡನ ಇವರು ಹೇಳಿದಂತೆ ಕಳ್ಳತನ ದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು ಬಗ್ಗೆ ತಿಳಿಸಿದ್ದು ಅದರಂತೆ ಸದರಿಯವರ ಸ್ವ-ಖುಷಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಟಿಪ್ಪರ ನಂ ಜಿ.ಜೆ 12 ಎಟಿ 8619 :ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಇದ್ದ ಅಂದಾಜ 3 ಬ್ರಾಸ ಕೆಂಪು ಮರಳು :ಕಿ: 6,000/-ರೂ ಮತ್ತು ಟಿಪ್ಪರ ನಂ ಎಮ್.ಹೆಚ್.13 ಆರ್ 1618 :ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಅಂದಾಜ 3 ಬ್ರಾಸ ಕೆಂಪು ಮರಳು :ಕಿ: 6,000/-ರೂ ಇದ್ದು ಸದರಿ ಎರಡು ಕೆಂಪು ಮರಳು ತುಂಬಿದ ಟಿಪ್ಪರಗಳನ್ನು ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ. ಜಪ್ತಿ ಪಂಚನಾಮೆ, ಜಪ್ತಿ ಮಾಡಿದ ಟಿಪ್ಪರಗಳು ಮರಳು ಸಮೇತ ಅವುಗಳ ಚಾಲಕರನ್ನು ತಮ್ಮ ಮುಂದೆ ಹಾಜರ ಪಡಿಸಿದ್ದು ಸದರಿಯವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ.ನಂ.224/2017 ಕಲಂ:379 ಐಪಿಸಿ ಮತ್ತು ಕಲಂ:21 ಎಮ್‌‌ಎಮ್‌‌ಆರ್‌‌ಡಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ .
C¥sÀd®¥ÀÆgÀ oÁuÉ : ದಿನಾಂಕ 01-12-2017 ರಂದು 1:00 ಪಿ ಎಮ್ ಕ್ಕೆ ಧರ್ಮಣ್ಣ ತಂದೆ ಲಾಲಮಾನ್ ಭೋವಿ ಸಾ|| ಶೇಷಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನೀಡಿದ್ದು, ಸದರ ದೂರಿನ ಸಾರಾಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಮೀನು ಹಿಡಿಯುವ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿರುತ್ತೇನೆ. ನನಗೆ ಒಟ್ಟು 1) ರಾದಾಬಾಯಿ 2) ಮಂಜುಬಾಯಿ 3) ಮಚೀಂದ್ರ 4) ಅಶೋಕ ಅಂತಾ 2 ಗಂಡು ಮತ್ತು 2 ಹೆಣ್ಣು ಮಕ್ಕಳಿರುತ್ತಾರೆ. ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಮಾಡಿಕೊಟ್ಟಿರುತ್ತೇನೆ. ಮಚೀಂದ್ರ ಈತನು ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಅಶೋಕ ಈತನು ನನ್ನ ಜೋತೆಗೆ ಮೀನು ಹಿಡಿಯುವ ಕೆಲಸ ಮಾಡುತ್ತಾನೆ. ನನ್ನ ಮೊದಲನೆ ಮಗಳಾದ ರಾದಾಬಾಯಿ ವಯ|| 30 ವರ್ಷ ಇವಳಿಗೆ 15 ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ದತ್ತು ತಂದೆ ಚಂದಪ್ಪ ಭೋವಿ ಈತನೊಂದಿಗೆ, ಕೋಳಕೂರ ಗ್ರಾಮದ ಬಸವಣ್ಣಪ್ಪನ ಗುಡಿಯ ಮುಂದೆ ಮದುವೆ ಮಾಡಿಕೊಟ್ಟಿದ್ದು, ಈಗ ಅವರಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ. ನನ್ನ ಮಗಳ ಗಂಡನ ಮನೆಯವರು ಈಗ ಒಂದು ವರ್ಷದ ಹಿಂದೆ ಒಂದು ಖಾಲಿ ಜಾಗ ಖರೀದಿ ಮಾಡಿದ್ದು, ಅದರ ಹಣ ಕೊಡುವುದಕ್ಕಾಗಿ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಮಾವನವರು ಖರೀದಿ ಮಾಡಿದ ಜಾಗಕ್ಕೆ ಹಣ ಕೊಡಬೇಕು ನೀನು ನಿನ್ನ ತವರು ಮನೆಯಿಂದ ಹಣ ತಗೆದುಕೊಂಡು ಬಾ ಅಂತ ಹೇಳಿದ್ದಾರೆ ಎಂದು ನನ್ನ ಮಗಳು ನಮ್ಮ ಮನೆಗೆ ಬಂದಾಗ ನಮಗೆ ತಿಳಿಸಿರುತ್ತಾಳೆ. ನಾವು ಸಹ ಬಡವರಾಗಿದ್ದರಿಂದ ನಮ್ಮ ಹತ್ತಿರ ಹಣ ಇಲ್ಲ ಎಲ್ಲಿಂದ ತಂದು ಕೊಡೊಣು ಅಂತಾ ನನ್ನ ಮಗಳಿಗೆ ಹೇಳಿ ಕಳುಹಿಸಿರುತ್ತೇವೆ. ಆದರೆ ನನ್ನ ಮಗಳ ಗಂಡ ಮತ್ತು ಅತ್ತೆ ಮಾವ ಇವರು ನನ್ನ ಮಗಳಿಗೆ ನೀನು ಹಣ ತಗೆದುಕೊಂಡು ಬರೊವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ನಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿರುತ್ತಾರೆ. ನಮ್ಮ ಮಗಳು ನಮ್ಮ ಮನೆಗೆ ಬಂದರಿಂದ ನಮ್ಮ ಮಗಳನ್ನು ನ್ಯಾಯ ಪಂಚಾಯತಿ ಮಾಡಿ ಅವಳ ಗಂಡನ ಮನೆಗೆ ಬಿಟ್ಟು ಬರಬೇಕು ಎಂದು ನಿನ್ನೆ ದಿನಾಂಕ 30-11-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿಯಾದ ತುಳಸಾಬಾಯಿ, ನನ್ನ ಮಗನಾದ ಅಶೋಕ ಹಾಗೂ ನಮ್ಮ ಸಂಭಂದಿಕರಾದ ಗನಸಿಂಗ ಭೋವಿ, ಚಂದಪ್ಪ ಭೋವಿ, ಅರ್ಜುನ ಭೋವಿ, ಮಹಾಧೇವ ಭೋವಿ, ತುಳಜಾರಾಮ ಭೋವಿ, ಭಗವಾನ ಭೋವಿ ಇನ್ನು ಕೆಲವು ಜನರು ಕೂಡಿ ನಮ್ಮ ಮಗಳನ್ನು ಕರೆದುಕೊಂಡು ನನ್ನ ಮಗಳ ಗಂಡನ ಮನೆಗೆ ಹೋಗಿರುತ್ತೇವೆ. ಅಲ್ಲಿ ನನ್ನ ಮಗಳಿಗೆ ಅವಳ ಗಂಡನಾದ ದತ್ತು ಹಾಗೂ ಮಾವ ಚಂದಪ್ಪ, ಅತ್ತೆ ರೂಪಾಬಾಯಿ ಮೂರು ಜನರು ನನ್ನ ಮಗಳಿಗೆ ನೀನು ಹಣ ತಗೆದುಕೊಂಡು ಬರೊವರೆಗೂ ನಮ್ಮ ಮನೆಗೆ ಬರಬೇಡಾ, ಅಲ್ಲಿ ಒರೆಗೂ ನಮಗೆ ಮುಖ ತೋರಿಸಬೇಡ ಎಂದು ಬೈಯುವುದು ಮಾಡಿರುತ್ತಾರೆ. ನ್ಯಾಯ ಪಂಚಾಯತಿ ಮಾಡಲು ಬಂದ ನಮ್ಮಲ್ಲೆರ ಮಾತನ್ನು ಸಹ ಕೇಳದೆ ನನ್ನ ಮಗಳಿಗೆ ಇಲ್ಲವಾದರೆ ನೀನು ಸಾಯಿ, ನಾವು ನಮ್ಮ ಮಗನಿಗೆ ಬೇರೆ ಮದವೆ ಮಾಡುತ್ತೇವೆ ಎಂದು ಹಾಗೂ ನನ್ನ ಮಗಳ ಗಂಡನು ಸಹ ನೀನು ಸತ್ತರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಎಂದು ನನ್ನ ಮಗಳಿಗೆ ಸಾಯಿ ಸಾಯಿ ಅಂತಾ ಪದೆ ಪದೆ ಸಾಯಲು ದುಸ್ಪ್ರೇರಣೆಯನ್ನು ನೀಡಿರುತ್ತಾರೆ. ಸದರಿ ನನ್ನ ಮಗಳ ಗಂಡ ಮತ್ತು ಅತ್ತೆ ಮಾವ ಮೂರು ಜನರು ನ್ಯಾಯ ಪಂಚಾಯತಿಗೆ ಒಪ್ಪದೆ ನನ್ನ ಮಗಳ ಇಬ್ಬರು ಗಂಡು ಮಕ್ಕಳನ್ನು ಸಹ ನಮ್ಮ ಜೋತೆಗೆ ಕಳುಹಿಸದೆ ನಮ್ಮ ಮಗಳನ್ನು ಮನೆಯಿಂದ ತಳ್ಳಿ ಮನೆಯಿಂದ ಕಳುಹಿಸಿರುತ್ತಾರೆ. ಅದರಂತೆ ಇಂದು ದಿನಾಂಕ 01-12-2017 ರಂದು ನಸುಕಿನಜಾವ 05:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಅಶೋಕ ಇಬ್ಬರು  ಮೀನು ಹಿಡಿಯಲು ಹೋಳೆಗೆ ಹೋಗಿರುತ್ತೇವೆ. ನನ್ನ ಹೆಂಡತಿಯಾದ ತುಳಸಾಬಾಯಿ ಇವಳು ನಮ್ಮ ಸಂಭಂದಿಕರಲ್ಲಿ ತೀರಿಕೊಂಡಿದ್ದರಿಂದ ಅವಳ ತೀರಿಕೊಂಡ ಸುದ್ದಿಗೆ ಹೋಗಿರುತ್ತಾಳೆ. ಮನೆಯಲ್ಲಿ ನನ್ನ ಮಗಳಾದ ರಾದಾಬಾಯಿ ಒಬ್ಬಳೆ ಅವಳ 06 ತಿಂಗಳ ಹೆಣ್ಣು ಮಗುವಿನೊಂದಿಗೆ ಮನೆಯಲ್ಲಿ ಒಬ್ಬಳೆ ಇದ್ದಿರುತ್ತಾಳೆ. ಬೆಳಿಗ್ಗೆ 08:30 ಗಂಟೆಗೆ ನಮ್ಮ ಅಣ್ಣ ತಮ್ಮಕಿಯ ನೀಲಪ್ಪ ಭೋವಿ ಈತನು ನಮಗೆ ಪೋನ ಮಾಡಿ, ನಿನ್ನ ಮಗಳು ರಾದಾಬಾಯಿ ಇವಳು ಮನೆಯಲ್ಲಿ ನೇಣುಹಾಕಿಕೊಂಡಿದ್ದಾಳೆ ಎಂದು ತಿಳಿಸಿದ ಮೇರೆಗೆ ನಾವು ಮನೆಗೆ ಬಂದು ನೋಡಲಾಗಿ ನನ್ನ ಮಗಳು ನಮ್ಮ ಮನೆಯ ಜಂತಿಗೆ ಇರುವ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಳು, ನಂತರ ನನ್ನ ಮಗಳನ್ನು ನೇಣಿನಿಂದ ಬಿಡಿಸಿ ಒಂದು ಖಾಸಗಿ ವಾಹನದಲ್ಲಿ ನನ್ನ ಮಗಳ ಶವವನ್ನು ಹಾಕಿಕೊಂಡು ಅಫಜಲಪೂರದ ಸರ್ಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ನನ್ನ ಮಗಳ ಗಂಡನಾದ ದತ್ತು ತಂದೆ ಚಂದಪ್ಪ ಭೋವಿ ಹಾಗೂ ಮಾವನಾದ ಚಂದಪ್ಪ ತಂದೆ ಮರೇಪ್ಪ ಭೋವಿ ಅತ್ತೆಯಾದ ರೂಪಾಬಾಯಿ ಗಂಡ ಚಂದ್ಪಪ ಭೋವಿ ಸಾ|| ಮೂರು ಜನರು ಕೋಳಕೂರ ತಾ|| ಜೇವರ್ಗಿ ಇವರು ನನ್ನ ಮಗಳಾದ ರಾದಾಬಾಯಿ ಗಂಡ ದತ್ತು ಭೋವಿ ವಯ|| 30 ವರ್ಷ ಜಾ|| ಭೋವಿ ಉ|| ಕೂಲಿ ಸಾ|| ಕೋಳಕೂರ ತಾ|| ಜೇವರ್ಗಿ ಹಾ|| || ಶೇಷಗೀರಿ ಇವಳಿಗೆ ತವರು ಮನೆಯಿಂದ ಹಣ ತಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು, ನನ್ನ ಮಗಳು ತವರು ಮನೆಯಿಂದ ಹಣ ತಗೆದುಕೊಂಡು ಬರಲು ಒಪ್ಪದೆ ಇದ್ದಾಗ ಅವಳನ್ನು ಸಾಯಿ ಸಾಯಿ ಅಂತಾ ಆತ್ಮಹತ್ಯ ಮಾಡಿಕೊಳ್ಳುವಂತೆ ದುಸ್ಪ್ರೇರಣೆ ನೀಡಿದ್ದರಿಂದ ನನ್ನ ಮಗಳು ನಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇಂದು ದಿನಾಂಕ 01-12-2017 ರಂದು ಬಳಿಗ್ಗೆ 05:00 ಗಂಟೆಯಿಂದ ಬೆಳಿಗ್ಗೆ 08:30 ಗಂಟೆಯ ಮದ್ಯದಲ್ಲಿ ನಮ್ಮ ಮನೆಯ ಜಂತಿಗೆ ಇರುವ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಕಾರಣ ನನ್ನ ಮಗಳು ಸಾಯುವಂತೆ ದುಸ್ಪ್ರೇರಣೆ ನೀಡಿದ ನನ್ನ ಮಗಳ ಗಂಡ ಹಾಗೂ ಗಂಡನ ಮನೆಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು  ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .
C¥sÀd®¥ÀÆgÀ oÁuÉ : ದಿನಾಂಕ 01-12-2017  ರಂದು 3.30 ಪಿ ಎಮ್ ಕ್ಕೆ ನಮ್ಮ ಠಾಣೆಯ ಶ್ರೀ ರಮೇಶ ಸಿಪಿಸಿ 596 ರವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ 01-12-2017 ರಂದು 9:30 ಎ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪೊಲೀಸ ಠಾಣಾ ಸುಧಾರಿತ ಬೀಟ್ ನಂ 40 ನೇದ್ದರ ಗೌರ (ಬಿ) ಗ್ರಾಮಕ್ಕೆ  ಗಸ್ತು ಕರ್ತವ್ಯ ಕುರಿತು  ಠಾಣೆಯಿಂದ ಹೊರಟು, ಗ್ರಾಮದ ಹನುಮಾನ ದೇವರ ದೇವಸ್ಥಾನದ ಹತ್ತಿರ 11.30 ಎಎಮ್ ಕ್ಕೆ ಹೋದಾಗ ನಮ್ಮ ಬಾತ್ಮಿದಾರರು ತಿಳಿಸಿದ್ದೆನೆಂದರೆ  ಗ್ರಾಮದ 1) ಶ್ರೀಕಾಂತ ತಂದೆ ಪುಂಡಪ್ಪ ನಿಂಬರ್ಗಿ ವ||34 ವರ್ಷ ಜಾ|| ಕಬ್ಬಲಿಗ ಉ||ಒಕ್ಕಲುತನ ಸಾ|| ಗೌರ(ಬಿ) ತಾ||ಅಫಜಲಪೂರ  ಇವರು  ಗ್ರಾಮದಲ್ಲಿನ ಸಾರ್ವಜನಿಕರಿಗೆ ಹೆದರಿಸುತ್ತಾ ದಬ್ಬಾಳಿಕೆ ತೊರಿಸಿ ಗ್ರಾಮದ ಇತರರಿಗೆ ಹೆದರಿಸಿ ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿ ಹಾಳಾಗುವ & ಜಗಳ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಗ್ರಾಮದಲ್ಲಿ ಅನದಿಕೃತ ಚಟುವಟಿಕೆಗಳನ್ನು ಮಾಡಿ ಸಾರ್ವಜನಿಕರಿಗೆ ಹೆದರಿಸುವ ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಭವ ಇರುತ್ತದೆ. ಹಾಗೂ ಗ್ರಾಮದಲ್ಲಿ ಅಹಿತಕರ ಘಟನೆಗಳು ಜರಗುವ ಸಂಭವ ಇರುತ್ತದೆ ಅಂತಾ ಗ್ರಾಮದ ಬಾತ್ಮಿದಾರರು ತಿಳಿಸಿರುತ್ತಾರೆ.  ಇವತನಿಂದ ಅಹಿತಕರ ಘಟನೆಗಳು ಜರುಗಿ ಗ್ರಾಮದಲ್ಲಿ ಸಾರ್ವಜನಿಕರ ಶಾಂತಿ ಭಂಗವಾಗುವ ಸಂಭವ ಇರುವುದರಿಂದ ಹಾಗೂ ಸದರಿಯವನು ನಮ್ಮ ಠಾಣೆಯ ಚುರುಕಾದ ರೌಡಿ ಆಸಾಮಿ ಇರುವದರಿಂದ ಮರಳಿ ಠಾಣೆಗೆ  ಬಂದು 3:30 ಪಿ.ಎಂ ಕ್ಕೆ ಸದರಿಯವನ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಎಂದು ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .

C¥sÀd®¥ÀÆgÀ oÁuÉ : ದಿನಾಂಕ 01/12/2017 ರಂದು 6.00 ಪಿಎಮ್ ಕ್ಕೆ  ಫೀರ್ಯಾದಿದಾರನಾದ ಶ್ರೀ ಗುರಣ್ಣ ತಂದೆ ಬನ್ನೇಪ್ಪ ಪೂಜಾರಿ ಸಾ|| ಮಲ್ಲಾಬಾದ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೇನೆಂದರೆ ನಾನು ಮೇಲ್ಕಾಣಿಸಿದ ವಿಳಾಸದಲ್ಲಿ ಕೂಲಿಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ  ಇದ್ದುಸ ಜೀವನ ಸಾಗಿಸುತ್ತೇನೆ.ನಮಗೆ ಮೂರು ಜನ ಮಕ್ಕಳಾದ 1) ತ್ರಿವೇಣಿ 2) ಪೂಜಾ 3) ಓಂಕಾರ ವ||09 ವರ್ಷ ಅಂತ ಇರುತ್ತಾರೆ ದಿನಾಂಕ 25/11/2017 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಕೂಲಿಕೆಲಸಕ್ಕೆ ಹೊಲಕ್ಕೆ ಹೊಗುವಾಗ ನಮ್ಮ ಮಗ ಓಂಕಾರ ಈತನು ಹೊಲಕ್ಕೆ  ಬರುತ್ತೇನೆ ಅಂತ ಜಗಳ ಮಾಡುತಿದ್ದರಿಂದ ನಾವು ನಮ್ಮ ಸಂಗಡ ನಮ್ಮ ಮಗನಿಗೆ ಹೊಲಕ್ಕೆ ಕರೆದುದೊಂಡು ಹೋಗಿ ಮರಳಿ ನಡೆದುಕೊಂಡು ಮನೆಗೆ ಬರುವಾಗ ಸಾಯಂಕಾಲ 6.30 ಗಂಟೆ ನಾವು ನಮ್ಮ ಗ್ರಾಮದ ಕಲಬುರಗಿ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಇದ್ದಾಗ ನಮ್ಮ ಮಗ ಓಂಕಾರ ಈತನು ನಮಗಿಂತ ಸ್ವಲ್ಪ ಮುಂದೆ ಹೋಗುತಿದ್ದನು ನಮ್ಮ  ಎದುರಿನಿಂದ ಒಂದು ತವೇರಾ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ತನ್ನ ವಾಹನ ಚಲಾಯಿಸಿಕೊಂಡು ಬಂದು ನಮ್ಮ ಮಗನಿಗೆ ಡಿಕ್ಕಿ ಪಡಿಸಿದ ನಾವು ಚಿರಾಡುತ್ತಾ ನಮ್ಮ ಮಗನ ಹತ್ತಿರ ಓಡಿ ಹೋಗುವಾಗ ಸದರಿ ವಾಹನದ ಚಾಲಕ ತನ್ನ ತವೇರಾ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು ನಮ್ಮ  ಮಗನಿಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯ ಮೈ ಕೈ ಗೆ ತರಚಿತ ಗಾಯಗಳಾಗಿ ನಮ್ಮ ಮಗನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ ಆಗ  ಅಲ್ಲೆ  ಲಕ್ಷ್ಮಿ ಗುಡಿ ಹತ್ತಿರ ಕುಳಿತಿದ್ದ ನಮ್ಮ ಗ್ರಾಮದ ಶರಣಪ್ಪ ತಂದೆ ಈರಪ್ಪಾ ಪೂಜಾರಿ, ಲಕ್ಕಪ್ಪ ತಂದೆ ಶರಣಪ್ಪ ಪೂಜಾರಿ ರವರು ಓಡಿ ಬಂದಿದ್ದು ನಮ್ಮ ಮಗನಿಗೆ ಅಫಘಾತ ಪಡಿಸಿದ ವಾಹನದ ನಂಬರ ನೋಡಲಾಗಿ ಎಮ್ ಹೆಚ್ 14 ಸಿಎಕ್ಸ 7993 ಅಂತ ಇದ್ದಿರುತ್ತದೆ ನಾವೇಲ್ಲರು ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಕಲಬುರಗಿಯ ವಾತ್ಸಲ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಸೊಲಾಪೂರದ ಗಂಗಾಮಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಈಗ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ತವೇರಾ ವಾಹನ ನಂಬರ ಎಮ್ ಹೆಚ್ 14 ಸಿಎಕ್ಸ 7993 ನೇದ್ದರ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ವಾಹನ ಚಲಾಯಿಸಿ ನನ್ನ ಮಗನಿಗೆ ಡಿಕ್ಕಿ ಪಡಿಸಿ ತಲೆಗೆ ಭಾರಿ ರಕ್ತಗಾಯ ಹಾಗು ತರಚಿದ ಗಾಯ ಪಡಿಸಿದವನ ಮೇಲೆ  ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದರ ಮೇರೆಗೆ ಠಾಣೆ ಗುನ್ನೆ ನಂ 311/2017 ಕಲಂ 279, 337, 338 ಐಪಿಸಿ ಸಂ 187 ಐಎಮ್ ವ್ಹಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .