POLICE BHAVAN KALABURAGI

POLICE BHAVAN KALABURAGI

20 September 2014

Gulbarga District Reported Crimes

ಗ್ರಾಮೀಣ ಠಾಣೆ :

ಇಂದು ಭಿಮಶ್ಯಾ ಭಾಗಣ್ಣ ಹಿಂಚಗೇರಿ ವಯಸ್ಸು 65 ವರ್ಷ ಜಾತಿ ಕಬ್ಬಲಿಗ ಉದ್ಯೋಗ ಕೂಲಿ ಕೆಲಸ ವಿಳಾಸ ಅವರಾಧ (ಬಿ) ಗ್ರಾಮ ತಾ:ಜಿ: ಗುಲಬರ್ಗಾ ಇವರು ಪೊಲೀಸ್‌ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರುಪಡಿಸಿದ್ದೇನೆಂದರೆ, ನನ್ನ ಮಗ ಲಿಂಗರಾಜು ಈತನು ತನ್ನ ಹೋಂಡಾ ಸ್ಪಲೆಂಡರ್ ಕೆಎ 32 ಇಸಿ 7311 ಇದರ ಮೇಲೆ ಪ್ರತಿ ದಿವಸದಂತೆ ಅವರಾಧ (ಬಿ) ಯಿಂದ ಗುಲಬರ್ಗಾ ಕ್ಕೆ ಹೋಗಿದನು ರಾತ್ರಿ 11-00 ಗಂಟೆಯಾದರೂ ಕೂಡಾ ಮನೆಗೆ ಬಂದಿರಲಿಲ್ಲ ಅವನ ಹಾದಿ ಕಾದು ಕುಳಿತಿರುವಾಗ ನಮ್ಮ ಗ್ರಾಮದ ಅಜ್ಮೀರ ತಂದೆ ಚಾಂದ ಸಾಬ್ ಮತ್ತು ಚಂದು ಕುಂಬಾರ ಿವರು ನಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ, ನಿಮ್ಮ ಮಗನಾದ ಲಿಂಗರಾಜ ಹಿಂಚಗೇರಿ ಮತ್ತು ನಾವು ಇಬ್ಬರು ಪ್ರತ್ಯಕವಾಗಿ ಮೋ.ಸೈಕಲ್ ಮೇಲೆ ಅವರಾಧ (ಬಿ) ಗ್ರಾಮಕ್ಕೆ ಬರುತ್ತಿರುವಾಗ ಗುಲಬರ್ಗಾಹುಮನಾಬಾದ ರೋಡಿನ ಸಾಲಾಮ ಟೇಕಡಿಯಹೊಡ್ಡಿನ ಕರವಿಗೆ ಅದೇ ವೇಳಗೆ ಹುಮನಾಬಾದ ಕಡೆಯಿಂದ ಒಂದು ವಾಹನ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿ ನಡೆಸಿಕೊಂಡು ನಮ್ಮ ಮುಂದೆ ಮೋಟರ್ ಸೈಕಲ್ ನಡೆಸಿಕೊಂಡು ಹೋಗುತ್ತಿದ್ದ ಲಿಂಗರಾಜನಿಗೆ ಡಿಕ್ಕಿ ಹೊಡೆದು ಮೈಮೇಲಿಂದ ಹಾಯಿಸಿಕೊಂಡು ಹೋದನು ಆಗ ನಾನು ಮತ್ತು ಚಂದು ಕುಂಬಾರ ಇಬ್ಬರು ಅಪಘಾತ ಪಡಿಸಿದ ವಾಹನಕ್ಕೆ ಮೋಟರ್ ಸೈಕಲ್ ಮೇಲೆ ಬೆನ್ನು ಹತ್ತಿ ಮೋ.ಸೈಕಲ್ ಬೆಳಕಿನಲ್ಲಿ ವಾಹನವನ್ನು ನೋಡಲು ಅದು ಟಿಪ್ಪರ್ ಇದ್ದು ಕೆಎ 28 1892 ಇತ್ತು ಅದು ವೇಗವಾಗಿ ಗುಲಬರ್ಗಾ ಕಡೆಗೆ ಹೋಯಿತು ಆಗ ನಾವು ಗಾಬರಿಗೊಂಡು ಲಿಂಗರಾಜನಿಗೆ ನೋಡಲು ತಲೆ ಮುಖ ೆದೆ ಬೆನ್ನು, ಹೊಟ್ಟೆಗೆ, ಭಾರಿ ಗಾಯವಾಗಿ ಮಾಂಸ ಖಂಡಗಳು ಹೊರಗೆ ಬಂದಿದ್ದು ಸ್ಥಳದಲ್ಲೆ ಮೃತಪಟ್ಟಿದ್ದನು. ನಾವು ಇಬ್ಬರು ಗಾಬರಿಗೊಂಡು ಊರಿಗೆ ಬಂದು ವಿಷಯ ತಿಳಿಸಿದ್ದೇವೆ ಎಂದು ಹೇಳಿದರು ಆಗ ನಾವು ಮನೆಯಲ್ಲಿ ಎಲ್ಲರು ಗಾಬರಿಯಾಗಿ ದು:ಖದಲ್ಲಿದ್ದು ನಂತರ ನಾನು ಮತ್ತ ನನ್ನ ತಮ್ಮನಾದ ಶಿವಾರಾಜ ಹಿಂಚಗೇರಿ ಕೂಡಿಕೊಂಡು ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ಲಿಂಗರಾಜನ ಶವ ನೋಡಲು ತಲೆ ಮುಖ ಚಪ್ಪಟೆಯಾಗಿದ್ದು ಎದೆ ಬೆನ್ನು, ಹೊಟ್ಟೆ, ಭಾರಿ ಗಾಯಗಳಾಗಿ ಮಾಂಸಗಳು ಹೊರಬಂದಿರುತ್ತವೆ. ಈ ವಿಷಯವನ್ನು ನಮ್ಮ ಎಲ್ಲಾ ಸಂಬಂದಿಕರಿಗೆ ತಿಳಿಸಿ ಹಾಗೂ ನನ್ನ ಹೆಂಡತಿ ಹಾಗೂ ಸೊಸೆ ಮೊಮ್ಮಕ್ಕಳನ್ನು ಸಮಾಧಾನ ಪಡಿಸಿ ಈಗ ತಡವಾಗಿ ಬಂದು ತಮ್ಮಲ್ಲಿಗೆ ಬಂದು ಕಂಪ್ಲೇಂಟ್ ಅರ್ಜಿ  ಸಲ್ಲಿಸುತ್ತಿದ್ದೇನೆ. ಕಾರಣ ನನ್ನ ಮಗ ಲಿಂಗರಾಜ ವಯಾ: 32 ವರ್ಷ ಈತನಿಗೆ ಅಪಘಾತಪಡಿಸಿದ ಟಿಪ್ಪರ್ ನಂ ಕೆಎ 28 1892 ವಾಹನ ಮತ್ತು ಅದರ ಚಾಲಕನ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ಫಿರ್ಯಾದಿ ಆಧಾರದ ಮೇಲಿಂದ ನಮ್ಮ ಠಾಣೆ ಗುನ್ನೆ ಧಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ