POLICE BHAVAN KALABURAGI

POLICE BHAVAN KALABURAGI

06 June 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 05-06-2018 ರಂದು ಅಫಜಲಪೂರ ಪಟ್ಟಣದ ಭೂತಾಳಿ ಸಿದ್ದ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಪಟ್ಟಣದ ಭೂತಾಳಿ ಸಿದ್ದ ಗುಡಿ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ಖಾಸಗಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಭೂತಾಳಿ ಸಿದ್ದ ಗುಡಿ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಎಲ್ಲಾ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ರವಿ ತಂದೆ ಸುರೇಶ ಪರೀಟ್ ಸಾ||ಅಕ್ಕ ಮಹಾದೇವಿ ಗುಡಿ ಹತ್ತಿರ ಅಫಜಲಪೂರ 2) ಮಾಳಪ್ಪ ತಂದೆ ಸೈಬಣ್ಣ ಕಲ್ಲೂರ ಸಾ||ಅಮೋಗಿಸಿದ್ದ ಗುಡಿ ಹತ್ತಿರ ಅಫಜಲಪೂರ 3) ಯಲ್ಲಪ್ಪ ತಂದೆ ವಿಠ್ಠಲ ಜಮಾದಾರ ಸಾ||ಅಂಬಿಗರ ಚೌಡಯ್ಯ ನಗರ ಅಫಜಲಪೂರ 4) ಬಸವರಾಜ ತಂದೆ ಸೈಬಣ್ಣ ಕೋರಿ ಸಾ|| ಅಫಜಲಪೂರ ಅಂತ ತಿಳಿಸಿದ್ದು ಅವರಿಂದ ಇಸ್ಪೀಟ ಜೂಜಾಟಕ್ಕೆ ಬಳಸಿದ 52 ಇಸಪೀಟ ಎಲೆಗಳನ್ನು ಮತ್ತು ನಗದು ಹಣ  7160/- ರೂಪಾಯಿಗಳನ್ನು  ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 04-06-2018 ರಂದು ಉಡಚಾಣ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಉಡಚಾಣ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ಖಾಸಗಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 09 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಜಾಜಾಡುತಿದ್ದ ಎಲ್ಲಾ 09 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಲ್ಲಪ್ಪ ತಂದೆ ಧರೇಪ್ಪ ಮೇತ್ರೆ 2) ಶ್ರೀನಿವಾಸ  ತಂದೆ ವೆಂಕಟೇಶ್ವರಲೂ ಬತ್ತಲು 3) ಬಸವರಾಜ ತಂದೆ ಗೊಲ್ಲಾಳಪ್ಪ ಮೇತ್ರೆ 4) ವಿಜಯಕುಮಾರ ತಂದೆ ಸುಭಾಷ ಹೊರ್ತಿ  5) ಬಾಬುರಾವ ತಂದೆ ಬಸವರಾಜ ಕುಂಬಾರ 6) ಸಂಜೀವ @ ಸಂಜು ತಂದೆ ಗುರುಶಾಂತ ನರಳೆ 7) ಪರಶುರಾಮ ತಂದೆ ಹಣಮಂತ ಬೈಚಬಾಳ, 8) ಪುಂಡಲಿಕ ತಂದೆ ಕಲ್ಲಪ್ಪ ಮಾಂಗ 9) ಹಣಮಂತ ತಂದೆ ವಿಠಲ ಮಿರಗಿ ಸಾ|| ಎಲ್ಲರು ಉಡಚಾಣ ಗ್ರಾಮ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ  9100/- ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 04-06-2018 ರಂದು ಮಾಶಾಳ ಗ್ರಾಮದ ಧರ್ಮ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಧರ್ಮ ಶಾಲೆ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ಖಾಸಗಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಧರ್ಮ ಶಾಲೆ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 05 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಎಲ್ಲಾ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶ್ರೀ ಮಂತ ತಂದೆ ಪುಲೇಪ್ಪ ಮುಗಳೆ 2) ರಾಜಕುಮಾರ ತಂದೆ ರೇವಣ್ಣಪ್ಪ ನಾಗಠಾಣ 3) ಮಹಿಬೂಬ ತಂದೆ ಮಹ್ಮದಸಾಬ ಅಳ್ಳಗಿ 4) ಜೈಭೀಮ ತಂದೆ ಸದಾಶಿವ ಸಿಂಗೆ ಸಾ : ಎಲ್ಲರು ಮಾಶಾಳ ಗ್ರಾಮ ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ  1800/- ರೂ  ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಪ್ಪ ತಂದೆ ಕಲ್ಯಾಣಪ್ಪ ನಂದಿಕೋಲ, ಸಾ||ಪ್ಲಾಟ್ ನಂ.94, ಶಿವಲಿಂಗ ನಗರ, ಆಳಂದ ಚೆಕ್ ಪೋಸ್ಟ್ ಹತ್ತಿರ, ಆಳಂದ ರೋಡ, ಕಲಬುರಗಿ ಇವರು ದಿನಾಂಕ:31/05/2018 ರಂದು ರಾತ್ರಿ ಅಂದಾಜು 10-30 ಗಂಟೆ ಸುಮಾರಿಗೆ ಮಾರ್ಕೆದಿಂದ ನನ್ನ ಮನೆಗೆ ನನ್ನ ದ್ವೀಚಕ್ರ ವಾಹನ ಸಂ:ಕೆಎ-32-ಇಎ-277 (ಟಿವಿಎಸ್ ಎಕ್ಸ್ಎಲ್ ಹೇವಿ ಡ್ಯೂಟಿ) ನೇದ್ದರ ಮೇಲೆ ಹೋಗುತ್ತಿರುವಾಗ ಮಳೆ ಬರುತ್ತಿದ್ದರಿಂದ ಸ್ವಲ್ಪ ಹೊತ್ತು ಖಾದ್ರಿ ಚೌಕ ಹತ್ತಿರ ನಿಂತುಕೊಂಡಿದ್ದು, ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾದ ನಂತರ ಮತ್ತೇ ನನ್ನ ದ್ವೀಚಕ್ರ ವಾಹನದ ಮೇಲೆ ಮನೆಗೆ ಹೊರಟಿದ್ದು, ಆಳಂದ ರೋಡ ಮೇನ್ ರಸ್ತೆ ದಾಟಿ ಒಳಗಡೆ ನಮ್ಮ ಕಾಲೋನಿಯ ಸಿ.ಸಿ. ರಸ್ತೆಯ ಮೇಲೆ ಹಡಲಗಿ ಎಂಬುವವರ ಮನೆಯ ಮುಂದೆ ಹೋಗುತ್ತಿರುವಾಗ ರಾತ್ರಿ 11-00 ಗಂಟೆ ಸುಮಾರಿಗೆ ಸಣ್ಣ ಮಳೆ ಬರುತ್ತಿದ್ದು, ಕರೆಂಟ್ ಹೋಗಿದ್ದು ಕತ್ತಲಲ್ಲಿ ನನ್ನ ಹಿಂದಿನಿಂದ ಯಾವುದೋ ಒಂದು ದ್ವೀಚಕ್ರ ವಾಹನದ ಮೇಲೆ ಇಬ್ಬರೂ ಬಂದು ಒಮ್ಮಿಂದೊಮ್ಮಲೇ ನನ್ನ ದ್ವೀಚಕ್ರ ವಾಹನಕ್ಕೆ ಅಡ್ಡಗಟ್ಟಿದ್ದು, ಹಿಂದಿನಿಂದ ಕುಳಿತಿದ್ದ ವ್ಯಕ್ತಿ ಇಳಿದು ಮುಷ್ಠಿಯಿಂದ ಒಮ್ಮಲ್ಲೇ ನನ್ನ ಮುಖಕ್ಕೆ ಜೋರಾಗಿ ಹೊಡೆದಿದ್ದು, ಯಾಕೆ ಹೊಡೆತಾ ಇದ್ದೀರಿ ಅಂತಾ ಕೇಳುವಷ್ಟರಲ್ಲಿ ಮತ್ತೊಂದು ಏಟು ಮುಷ್ಠಿಯಿಂದ ನನ್ನ ಬಾಯಿ ಮೇಲೆ ಹೊಡೆದಿದ್ದರಿಂದ ನಾನು ನನ್ನ ದ್ವೀಚಕ್ರ ವಾಹನದಿಂದ ಕೆಳಗೆ ಬಿದ್ದಾಗ ಸದರಿಯವನು ನನ್ನ ಕೊರಳಲ್ಲಿದ್ದ 1 ತೊಲೆ ಬಂಗಾರದ ಚೈನು ಅ.ಕಿ. ರೂ.30,000/- ಮತ್ತು ನನ್ನ ಪ್ಯಾಂಟಿನ ಹಿಂದಿನ ಜೇಬಿನಲ್ಲಿಟ್ಟಿದ್ದ ರೂ.1,600/- ಗಳನ್ನು ಕೈ ಹಾಕಿ ಕಸಿದುಕೊಂಡಿದ್ದು, ಮತ್ತು ನನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾಗ ಉಂಗುರು ಬರದೇ ಇದ್ದಾಗ ಮೋಟಾರ ಸೈಕಲ್ ಮೇಲೆ ಕುಳಿತಿದ್ದ ವ್ಯಕ್ತಿಯು ಸಾಕು ನಡಿ ಸಿಕ್ಕಷ್ಟು ಸಿಕ್ಕಿತು ಮತ್ತೇ ಯಾರಾದರೂ ಬರಂಗಿದ್ದಾರೆ ಅಂತಾ ಅನ್ನಲು ಇಬ್ಬರೂ ಕೂಡಿ ಮೋಟಾರ ಸೈಕಲ್ ಮೇಲೆ ಓಡಿ ಹೋದರು.  ರಾತ್ರಿ ಕತ್ತಲು ಆಗಿದ್ದರಿಂದ ಸಣ್ಣ ಮಳೆ ಬರುತ್ತಿದ್ದು ಕರೆಂಟ್ ತೆಗೆದಿದ್ದರಿಂದ ಅವರ ಮುಖ ನೋಡಿರುವುದಿಲ್ಲ ಮತ್ತು ಅವರ ಮೋಟಾರ ಸೈಕಲ್ ನಂಬರ ನೋಡಿರುವುದಿಲ್ಲ. ಅವರು ಕನ್ನಡದಲ್ಲಿ ಮಾತನಾಡಿರುವುದು ಕೇಳಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 04-06-18 ರಂದು ಶ್ರೀಮಂತ ತಂದೆ ಕೊನ್ನಪ್ಪ ಸಾ|| ನಾಮವಾರ, ತಾ|| ಸೇಡಂ  ಹಾಗು ಆತನ ಹೆಂಡತಿ ಮಕ್ಕಳು ಚಿಂಚೋಳಿ ತಾಲ್ಲೂಕಿನ ಯಾಕಾಪೂರ ಗ್ರಾಮಕ್ಕೆ ಹೋಗಿ ಮರಳಿ ಊರಿಗೆ ಹೋಗಬೇಕೆಂದು ಸೇಡಂ ಬಸನಿಲ್ದಾಣದ ಹತ್ತಿರ ಇದ್ದಾಗ ಶಂಕರ ತಂದೆ ಮಲ್ಕಪ್ಪ ಸಾ|| ರೋಜಾ ಎರಿಯಾ ಕಲಬುರಗಿ. ಇತನು ಫಿರ್ಯಾದಿಗೆ ಹಾಗು ಆತನ ಹೆಂಡತಿ ಮಕ್ಕಳಿಗೆ ತಡೆದು ನಿಲ್ಲಿಸಿ ಮನೆಯ ಮುಂದಿನ ಅಂಗಳದ ಜಾಗದ ಸಂಬಂಧ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ  ಶ್ರೀಮತಿ ಹಲಿಮಾಬಿ ಗಂಡ ಅಹ್ಮದಅಲಿ ಜಮಾದಾರ ಸಾ|| ಕರಜಗಿ ತಾ|| ಅಫಜಲಪೂರ ಇವರು  ಈಗ 20 ದಿವಸಗಳ ಹಿಂದೆ ನನ್ನ ತಾಯಿ ವಸ್ಸಾಗಿ ಮೃತಪಟ್ಟಿದ್ದರಿಂದ ನಾನು ಕೆಲವು ದಿನಗಳವರೆಗೆ  ನನ್ನ ತಾಯಿಯ ಮನೆಯಲ್ಲಿ ಹೋಗಿ ಇದ್ದಿರುತ್ತೇನೆ. ದಿನಾಂಕ 26-05-2018 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ನಾನು ಕರಜಗಿ ಗ್ರಾಮದಲ್ಲಿ ನನ್ನ ತಾಯಿಯ ಮನೆಯಲ್ಲಿದ್ದಾಗ ನನ್ನ ಅತ್ತಿಗೆಯಾದ ರುಕ್ಸಾನಾ ಮತ್ತು ಅವಳ ಅಕ್ಕ ರಿಯಾನಾ ಇವರು ನನಗೆ ಇನ್ನು ಎಷ್ಟು ದಿನ ಇಲ್ಲೆ ಇರ್ತಿ ನಿನ್ನ ಮನೆಗೆ ಹೋಗು ಎಂದು ಯಾಸಿ ಯಾಸಿ ಮಾತಾಡುತ್ತಿದ್ದರು. ಆಗ ನಾನು ಸದರಿಯವರಿಗೆ ನಾನು ಇಲ್ಲೆ ಇದ್ದರೆ ನಿಮಗೇನು ಆಗುತ್ತದೆ ಎಂದು ಕೇಳಿದಾಗ ಇಬ್ಬರು ಕೂಡಿ ನನಗೆ ರಂಡಿ ನಮ್ಮ ಮನೆಯಲ್ಲೆ ಇದ್ದು ನಮಗೆ ಯಾಕ ಅಂತ ಕೇಳ್ತಿ ಎಂದು ಇಬ್ಬರು ಬೈಯುತ್ತಿದ್ದರು, ಆಗ ನಾನು ಬೈ ಬ್ಯಾಡ್ರಿ ಎಂದು ಹೇಳಿ ಮನೆಯಿಂದ ಹೊರಗೆ ಹೋಗುತ್ತಿದ್ದಾಗ ರುಕ್ಸಾನಾ ಮತ್ತು ರಿಯಾನಾ ಇಬ್ಬರು ನನಗೆ ಮನೆಯಿಂದ ಹೊರಗೆ ಹೊಗದಂತೆ ಹಿಡಿದುಕೊಂಡು ಇಬ್ಬರು ಕೂಡಿ ನನಗೆ ಕೈಯಿಂದ ಹೊಟ್ಟೆಗೆ ಬೆನ್ನಿಗೆ, ಮೈ ಕೈಗೆ ಹೊಡೆಯುತ್ತಿದ್ದರು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಮಗನಾದ ಅಬ್ದುಲಕರೀಂ ಹಾಗೂ ಬಾಜು ಮನೆಯವರಾದ ಕಾಂತು ತಂದೆ ಸಿದ್ದಣ್ಣ ಸುಲ್ತಾನಪೂರ, ಅರ್ಜುನ ತಂದೆ ಪಾಂಡು ಸುಲ್ತಾನಪೂರ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಸದರಿಯವರು ಹೊಡೆದರಿಂದ ನನ್ನ ಹೊಟ್ಟೆಗೆ ಈಗಾಗಲೆ ಆಗಿದ್ದ ಆಫರೇಷನ್ ಗಾಯದ ಮೇಲೆ ಒಳಪೆಟ್ಟು ಹಾಗೂ ಮೈ ಕೈಗೆ ಒಳಪೆಟ್ಟು ಆಗಿರುತ್ತದೆ. ನಂತರ ನಾನು ಅವರ ಮನೆಯಿಂದ ಬಂದು ನನ್ನ ಮನೆಯಲ್ಲಿ ಇದ್ದಿರುತ್ತೇನೆ.  ನನಗೆ ನನ್ನ ತಾಯಿಯ ಮನೆಯಲ್ಲಿದ್ದುದ್ದಕ್ಕೆ ನನಗೆ ಮನೆ ಬಿಟ್ಟು ಹೋಗು ಅಂತಾ ನನ್ನ ಅತ್ತೆಗೆಯಾದ 1) ರುಕ್ಸಾನಾ ಗಂಡ ಚಾಂದಸಾಬ ಜಮಾದಾರ ಸಾ|| ಕರಜಗಿ ಹಾಗೂ ಅವರ ಅಕ್ಕ 2) ರಿಯಾನಾ ಗಂಡ ಸಲೀಂ ಮುಲ್ಲಾ ಸಾ|| ಹಡಗೀಲ ತಾ|| ಜಿ|| ಕಲಬುರಗಿ ಇವರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ನನ್ನನ್ನು ಹೋಗದಂತೆ ಹಿಡಿದುಕೊಂಡು ಕೈಯಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 05-06-18 ರಂದು ಶ್ರೀಮತಿ ಭೀಮಾಬಾಯಿ ಗಂಡ ಭೀಮರಾಯ ರಾಯಚೂರ ಸಾ|| ಸಟಪಟನಳ್ಳಿ, ತಾ|| ಸೇಡಂ. ರವರ  ಗಂಡನಾದ ಭೀಮರಾಯ ಇತನು ತಾನು ಕಟ್ಟುತ್ತಿದ್ದ ಮನೆ ಸಲುವಾಗಿ ಕೈಗಡ ಸಾಲ ಮಾಡಿ ಮನೆ ಕಟ್ಟುತ್ತಿದ್ದು, ಅದರ ಸಾಲ ಹೇಗೆ ತೀರಿಸಬೇಕು ಎಂದು ಮಾನಸಿಕ ಮಾಡಿಕೊಂಡು ಇಂದು ದಿನಾಂಕ: 05-06-18 ರಂದು 04:00 ಎ.ಎಮ್ ದಿಂದ 06:00 ಎ.ಎಮ್ ದ ಮಧ್ಯದ ಅವಧಿಯಲ್ಲಿ ಈಶ್ವರಪ್ಪ ತಳವಾರ ಇವರ ಹೊಲದಲ್ಲಿ ಇರುವ ಅರುಗ್ಯಾನ ಗಿಡಕ್ಕೆ ಪ್ಲಾಸ್ಟೀಕ್ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು, ಈ ಘಟನೆ ಆಕಸ್ಮಿಕವಾಗಿ ಜರುಗಿದ್ದು, ಯಾರ ಮೇಲೆ ಯಾವುದೆ ವಗೈರೆ ಏನು ಸಂಶಯ ಇರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ  ಬಾಬು ತಂದೆ ಚಂದ್ರಕಾಂತ ಸೋನಕಾಂಬಳೆ ಸಾ: ಮಾಶಾಳ ಇವರ ಅಣ್ಣನಾದ ಅಂಬಾಜಿ ತಂದೆ ಚಂದ್ರಕಾಂತ ಸೋನಕಾಂಬಳೆ ಇವರು ಮತ್ತು ನನ್ನ ಅಕ್ಕಳಾದ ತಿಪ್ಪವ್ವ ತಂದೆ ಚಂದ್ರಕಾಂತ ಸೋನಕಾಂಬಳೆ ವಯ|| 68 ವರ್ಷ ಉ|| ಕೂಲಿ ಇವರು ಮಾಶಾಳ ಗ್ರಾಮದಲ್ಲಿಯೆ ಒಂದು ಪತ್ರಾಸ ಶೇಡ್ಡ ಹಾಕಿಕೊಂಡು ವಾಸವಾಗಿರುತ್ತಾರೆ. ನನ್ನ ಅಣ್ಣನ ಮಕ್ಕಳಾದ ಚಂದ್ರಕಾಂತ ಹಾಗೂ ಸುನೀಲ ಇವರದು ಮದುವೆ ಆಗಿದ್ದು, ಇಬ್ಬರು ತಮ್ಮ ತಮ್ಮ ಹೆಂಡತಿ ಮಕ್ಕಳೊಂದಿಗೆ ಮುಂಬಯಿ ನಗರದಲ್ಲಿ ಕೆಲಸ ಮಾಡಿಕೊಂಡು ಅಲ್ಲೆ ವಾಸವಾಗಿರುತ್ತಾರೆ. ನಿನ್ನೆ ದಿನಾಂಕ 04-06-2018 ರಂದು ಸಂಜೆ 7:30 ಗಂಟೆಗೆ ನಾನು ಪುಣೆಯಲ್ಲಿರುವ ನನ್ನ ಮನೆಯಲ್ಲಿದ್ದಾಗ ನಮ್ಮ ಸಂಭಂದಿಕನಾದ ಮರೇಪ್ಪ ತಂದೆ ಹುಲೆಪ್ಪ ಮುಗಳೆ ಸಾ|| ಮಾಶಾಳ ಈತನು ನನಗೆ ಪೋನ ಮಾಡಿ ನಿನ್ನ ಅಣ್ಣನಾದ ಅಂಬಾಜಿ  ಮತ್ತು ನಿನ್ನ ಅಕ್ಕನವರಾದ ತಿಪ್ಪವ್ವ ಇವರಿಗೆ ಅವರ ಮನೆಯಲ್ಲಿಯೆ ಕರೆಂಟ ಶಾಟ್ ಹೊಡೆದು ಮೃತಪಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ, ನಾನು ಪುಣಾದಿಂದ ಮಾರ್ಗ ಮದ್ಯ ಬರುತ್ತಿದ್ದಾಗ ಪುನ ಪೋನ ಮಾಡಿ ನಾವು ಶವಗಳನ್ನು ಅಫಜಲಪೂರಕ್ಕೆ ತಗೆದುಕೊಂಡು ಹೋಗುತ್ತಿದ್ದೇವೆ ನೀನು ನೇರವಾಗಿ ಅಫಜಲಪೂರಕ್ಕೆ ಬಾ ಎಂದು ತಿಳಿಸಿದ ಮೇರೆಗೆ ನಾನು ಇಂದು ದಿನಾಂಕ 05-06-2018 ರಂದು ಬೆಳಿಗ್ಗೆ 06:00 ಗಂಟೆಗೆ ಅಫಜಲಪೂರಕ್ಕೆ ಬಂದು, ಅಫಜಲಪೂರದ ಸರ್ಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ನನ್ನ ಅಣ್ಣ ಹಾಗೂ ಅಕ್ಕನವರ ಮೃತದೆಹಗಳನ್ನು ನೋಡಲಾಗಿ, ನನ್ನ ಅಣ್ಣ ಅಂಬಾಜಿಯ ಹೊಟ್ಟೆಯ ಮೇಲೆ ಬಲಗೈ ಬುಜದ ಮೇಲೆ, ಎದೆಯ ಮೇಲೆ ಕರೆಂಟ ಶಾಟ್ ಹತ್ತಿದ ಗುರುತುಗಳು ಇದ್ದಿರುತ್ತವೆ. ನನ್ನ ಅಕ್ಕ ತಿಪ್ಪವ್ವ ಇವಳಿಗೆ ಸೊಂಟ ಹಾಗೂ ಹೊಟ್ಟೆಯ ಬಾಗ ಕಪ್ಪು ಬಣ್ಣಕ್ಕೆ ತಿರುಗಿ ಕರೆಂಟ ಶಾಟ್ ಹೊಡೆದ ಗುರುತು ಇದ್ದಿರುತ್ತವೆ. ನಂತರ ನಮ್ಮ ಸಂಭಂದಿಕರಿಗೆ ವಿಚಾರಿಸಲಾಗಿ ಅವರು ತಿಳಿಸಿದ್ದೆನೆಂದರೆ, ಅಂಬಾಜಿ ಮತ್ತು ತಿಪ್ಪವ್ವ ಇವರು ತಮ್ಮ ಮನೆಗೆ ತಗೆದುಕೊಂಡ ಕರೆಂಟ ವಾಯರ ಗಾಳಿಗೆ ಅಲುಗಾಡುತ್ತಾ ಪತ್ರಾಸಿಗೆ ತಗುಲಿ ಅದರ ಮೇಲೆ ಪ್ಲಾಸ್ಟಿಕ್ ಹರಿದು ತಂತಿ ಮನೆಯ ಪತ್ರಾಸಿಗೆ ತಗುಲಿ ಪತ್ರಾಸ ಶೆಡ್ಡಿಗೆ ಕರೆಂಟ ಇಳಿದಿರುತ್ತದೆ. ಇದರಿಂದ ಮನೆಯಲ್ಲಿದ್ದ ಅಂಬಾಜಿ ಮತ್ತು ತಿಪ್ಪವ್ವ ಇವರು ಪತ್ರಾಸ ಶೇಡ್ಡಿಗೆ ಮುಟ್ಟಿದಾಗ ಕರೆಂಟ ಶಾಟ್ ಹೊಡೆದು ಮೃತಪಟ್ಟಿರುತ್ತಾರೆ. ಸದರಿಯವರ ಮನೆ ಊರ ದಂಡೆಯಲ್ಲಿರುವುದರಿಂದ ತಕ್ಷಣಕ್ಕೆ ಯಾರಿಗೂ ಗೊತ್ತಾಗದೆ ಸಂಜೆ ಯಾರೋ ಹುಡುಗರು ನೋಡಿ ಮರೆಪ್ಪ ಮುಗಳೆ ಈತನಿಗೆ ತಿಳಿಸಿರುತ್ತಾರೆ. ಮರೆಪ್ಪ ಮುಗಳೆ ಈತನು ನೋಡಿ ಇನ್ನು ಕೆಲವು ಜನರೊಂದಿಗೆ ಕೂಡಿ ಶವಗಳನ್ನು ಅಫಜಲಪೂರ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತಂದು ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಸುಮಾರು ತಿಂಗಳಿಂದ ನಮ್ಮೂರಿನಲ್ಲಿ ಅಂದಾಜು 50-55 ವರ್ಷ ವಯಸ್ಸಿನ ಒಬ್ಬ ಕಾವಿ ದರಿಸಿದ ವ್ಯೆಕ್ತಿ ಬೀಕ್ಷೆ ಬೇಡುತ್ತಾ ತಿರುಗಾಡುತ್ತಿದ್ದನು. ಸದರಿ ಮೃತ ವ್ಯೆಕ್ತಿ ಪ್ರತಿ ದಿನ ಸಂಜೆ ನಮ್ಮೂರಿನ ಭಿಮಾ ನದಿಯ ಹತ್ತಿರ ಇರುವ ಕಾಳಿಕಾದೇವಿಯ ಗುಡಿಯ ಮುಂದೆ ಮಲಗುತ್ತಿದ್ದನು.  ದಿನಾಂಕ 05-06-2018 ರಂದು ಬೆಳಿಗ್ಗೆ 08:00 ಗಂಟೆಗೆ ಕಾಳಿಕಾದೇವಿಯ ಗುಡಿಯ ಪೂಜಾರಿಯಾದ ನಮ್ಮೂರಿನ ಹಾಲಯ್ಯ ತಂದೆ ಸಂಗಯ್ಯ ಹಿರೇಮಠ ಈತನು ನನ್ನ ಹತ್ತಿರ ಬಂದು ಪ್ರತಿದಿನ ಕಾಳಿಕಾಧೇವಿಯ ಗುಡಿಯ ಮುಂದೆ ಮಲಗುತ್ತಿದ್ದ ವ್ಯೆಕ್ತಿ ಮೃತಪಟ್ಟಿರುತ್ತಾನೆ. ನಾನು ನಿನ್ನೆ ಸಂಜೆ ಪೂಜೆ ಮುಗಿಸಿಕೊಂಡು ಬರುವಾಗ ಮಾತನಾಡಿಸಿಯೆ ಬಂದಿರುತ್ತೇನೆ. ಆದರೆ ಇಂದು ಬೆಳಿಗ್ಗೆ ಪೂಜೆ ಮಾಡಲು ಹೋಗಿ ನೋಡಿದಾಗ ಸದರಿ ಅಫರಿಚಿತ ವ್ಯೆಕ್ತಿ ಮೃತಪಟ್ಟಿರುವುದು ಗೊತ್ತಾಗಿರುತ್ತದೆ. ಸದರಿ ವ್ಯೆಕ್ತಿ ಬಹುಷ ಹೃದಾಯಾಘಾತದಿಂದ ಮೃತಪಟ್ಟಿರಬಹುದು ಎಂದು ತಿಳಿಸಿರುತ್ತಾನೆ. ನಾನು ಸಹ ಹೋಗಿ ನೋಡಲಾಗಿ ಸದರಿ ವ್ಯೆಕ್ತಿಯ ಮೂಗಿನಿಂದ ಸ್ವಲ್ಪ ರಕ್ತಸ್ರಾವ ಆಗಿದ್ದು ಗೊತ್ತಾಗಿರುತ್ತದೆ. ಸದರಿ ಅಂದಾಜು 50-55 ವಯಸ್ಸಿನ ಗಂಡು ವ್ಯೆಕ್ತಿಯು ಹೃದಯಾಘಾತದಿಂದ ಮೃತಪಟ್ಟಿದ್ದು, ಅವನ ವಾರಸುದಾರರು ಗೊತ್ತಾಗದ ಕಾರಣ ನಾನು ಪಂಚಾಯತಿಯ ವತಿಯಿಂದ ದೂರನ್ನು ಸಲ್ಲಿಸುತ್ತಿರುತ್ತೇನೆ. ಅಂತಾ ಶ್ರೀ ಕಲ್ಲಪ್ಪ ತಂದೆ ಗಡ್ಡೇಪ್ಪ ಬೇನೂರ ಸಾ: ಮಣೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.