POLICE BHAVAN KALABURAGI

POLICE BHAVAN KALABURAGI

30 September 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಮಾಹಾದೇವಪ್ಪಾ ತಂದೆ ಶಿವರಾಯ ಸಂಕಾಲಿ ಸಾ: ಕುಮ್ಮನಶಿರಸಗಿ  ರವರು ನಮ್ಮ ತಾಯಿ ಮತ್ತು ನನ್ನ ತಂದೆಯವರು ದಿನಾಂಕ 09-09-2012 ರಂದು ಖೈನೂರ ಗ್ರಾಮದ ಸಂಬಂಧಿಕರ ಶವ ಸಂಸ್ಕಾರಕ್ಕೆ ಹೋಗಿ ಮರಳಿ ಊರಿಗೆ ಬರುವ ಕುರಿತು ಯತ್ನಾಳ ಕ್ರಾಸ್ ದಲ್ಲಿ ವಾಹನ ಕಾಯುತ್ತಾ ನಿಂತಾಗ ಜೀಪ ನಂ ಕೆಎ-32-ಎ-9596 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಾಯಿಯಾದ ಶಿವಮ್ಮ ಇವಳಿಗೆ ಡಿಕ್ಕಿ ಪಡಿಸಿದ್ದು, ತಲೆಗೆ ಭಾರಿ ಪೆಟ್ಟಾಗಿದ್ದು ಉಪಚಾರ ಕುರಿತು ಸೋಲಾಪೂರ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಲಾಗಿತ್ತು, ಉಪಚಾರದಲ್ಲಿ ಫಲಕಾರಿಯಾಗದೆ ದಿನಾಂಕ:29-09-2012 ರಂದು ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:104/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಬಗ್ಗೆ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಸೋಮು ತಂದೆ ಧಾನು ಪವಾರ ಸಾ: ಜಮಖಂಡಿ ತಾಂಡಾ  ತಾ: ಜೇವರ್ಗಿ ವರು ನಾನು ಈಗ 2 ವರ್ಷಗಳ ಹಿಂದೆ ಜೈಶ್ರೀ ಇವಳೊಂದಿಗೆ ಮದುವೆಯಾಗಿದ್ದು ನನಗೆ ಒಂದು ವರ್ಷದ ಹೆಣ್ಣು ಮಗುವಿದೆ. ದಿನಾಂಕ:27-09-2012 ರಂದು ಗುರುವಾರ ಮುಂಜಾನೆ 11-00 ಗಂಟೆ ಸುಮಾರಿಗೆ ರೇಷನ್ ಕಾರ್ಡ ಫೋಟೊ ತಗೆಸುವ ಸಲುವಾಗಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ಬಿಳವಾರ ಗ್ರಾಮಕ್ಕೆ ಹೋಗುವ ಕುರಿತು ಮನೆಯಿಂದ ಹೋರಗೆ ಬರುವಾಗ ನನ್ನ ಹೆಂಡತಿಯು ನೀನು ಮಗುವನ್ನು ತಗೆದುಕೊಂಡು ಬಸ್ ಸ್ಟ್ಯಾಂಡ್ ಕಡೆಗೆ ನಡೆ,ನಾನು ಹಿಂದಿನಿಂದ ಬರುತ್ತೆನೆ ಅಂತಾ ಹೇಳಿದಳು,ಅದರಂತೆ ನಾನು ನನ್ನ ಮಗಳನ್ನು ಎತ್ತಿಕೊಂಡು ನಮ್ಮೂರಿನ ಬಸ್ ನಿಲ್ದಾಣಕ್ಕೆ ಬಂದು ಕುಳಿತೆನು ಸುಮಾರು 2 ಗಂಟೆ ಕಳೆದರು, ನನ್ನ ಹೆಂಡತಿ ಬರದೆ ಇರುವದನ್ನು ಕಂಡು ನೋಡಿ ನಾನು ಮರಳಿ ಮನೆಗೆ ಬಂದು ನನ್ನ ಮಾವನಾದ ಶಾಂತಕುಮಾರ ಇತನಿಗೆ ವಿಚಾರಿಸಲು ಒಂದು ಗಂಟೆ ಹಿಂದೆ ನಿನ್ನ ಹೆಂಡತಿ ಬಿಳವಾರ ಸ್ವಾಮಿ ಜೀಪಿನಲ್ಲಿ ಶಾಹಾಪೂರ ಕಡೆಗೆ ಹೋಗಿರುತ್ತಾಳೆ ಅಂತಾ ಹೇಳಿದನು ನಾನು ನನ್ನ ಹೆಂಡತಿಯನ್ನು ಹುಡುಕಲು ನಾನು ನಮ್ಮೂರಿನಿಂದ ಬಿ. ಗುಡಿ ಹಾಗೂ ಶಾಹಾಪೂರಕ್ಕೆ ಹೋಗಿ ಹುಡುಕಿದರು ಸಿಕ್ಕಿರುವುದಿಲ್ಲಾ ನನ್ನ ಹೆಂಡತಿಯು ಎಲ್ಲಿ ಹೋಗಿರುತ್ತಾಳೆ ಅಂತಾ ಗೋತ್ತಾಗಿರುವದಿಲ್ಲ. ಕಾಣೆಯಾದ ನನ್ನ ಹೆಂಡತಿಯ ವಿವರ: ಎತ್ತರ: 4 ಪೀಟ 6 ಇಂಚು,  ಸಾದರಣ ಮೈಕಟ್ಟು,ಕೆಂಪು ಬಣ್ಣ, ಹಸಿರು ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ಕುಪ್ಪಸ ತೋಟ್ಟಿರುತ್ತಾಳೆ ಸದರಿಯವಳು ಕನ್ನಡ, ಹಿಂದಿ, ಲಂಬಾಣಿ, ಮರಾಠಿ ಭಾಷೆ ಬಲ್ಲವಳಾಗಿರುತ್ತಾಲೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ ಮಹಿಳೆ ಕಾಣೆಯಾದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಯಡ್ರಾಮಿ ಪೊಲೀಸ ಠಾಣೆ ದೂರವಾಣಿ ಸಂ:08442-226233 ನೇದ್ದಕ್ಕೆ ಅಥವಾ ಕಂಟ್ರೋಲ್ ರೂಮ್ ದೂರವಾಣೆ ಸಂ: 08372-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

GULBARGA DISTRICT REPORTED CRIME


ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ :ಶ್ರೀ ಮಲ್ಲಿಕಾರ್ಜುನ ತಂದೆ ಹಣಮಂತ ಕಟ್ಟಿಮನಿ  ಸಾ:  ಬಸವ ನಗರ ಸೇಡಂ ತಾ:ಸೇಡಂ ರವರು ನಾನು ಮತ್ತು ಶಾಂತಪ್ಪ ದೊಡ್ಡಮನಿ ಇಬ್ಬರೂ ಕೂಡಿಕೊಂಡು  ಅಳ್ಳೊಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಸೇಡಂಕ್ಕೆ ಬರುವ ಸಲುವಾಗಿ ಅಳ್ಳೊಳ್ಳಿ ಗೇಟ್ ಹತ್ತಿರ ಟಂಟಂ ನಂ ಕೆಎ- 32 ಬಿ 4082 ನೇದ್ದರಲ್ಲಿ ಕುಳಿತುಕೊಂಡು ಟಂಟಂನಲ್ಲಿ ಸೇಡಂಕ್ಕೆ ಬರುತ್ತಿದ್ದಾಗ ಟಂಟಂ ಚಾಲಕ ಸಂಬಣ್ಣ ತಂದೆ ಶಿವರಾಯ ಯಡಗಾ ಸಾ:ಕಲಕಂಬಾ ಇತನು  ತನ್ನ ಟಂಟಂನ್ನು ಅತೀವೇಗ ಹಾಗೂ ನಿಸ್ಕಾಳಜೀತನದಿಂದ ನಡೆಸುತ್ತಾ ಸೇಡಂ ಮುಖ್ಯ ರಸ್ತೆಯ ಬಾಬಾ ಸೇಠ ಮನಿಯಾರ್ ಇವರ ಪೆಟ್ರೋಲ್ ಬಂಕನಿಂದ ಮುಖ್ಯ ರಸ್ತೆಯ ಕಡೆಗೆ ಬರುತ್ತಿದ್ದಾಗ ನಮ್ಮ ಟಂಟಂ ಚಾಲಕ ಸಂಬಣ್ಣ ಇತನು ತನ್ನ ಟಂಟಂ ನೇದ್ದಕ್ಕೆ ಒಮ್ಮಲೇ ಬ್ರೆಕ್ ಹಾಕಿದ್ದರಿಂದ ನಾವು ಕುಳಿತ ಟಂಟಂ ಪಲ್ಟಿ ಆಯಿತು.ನನಗೆ ಎಡಗೈ ಮೊಳಕೈಗೆ ಎಡಗೈಗೆ ತರಚಿದ ಗಾಯ ಹಾಗೂ ಬಲಗೈ ಮುಂಗೈಯಿಗೆ ತರಚಿದ ಗಾಯವಾಗಿರುತ್ತದೆ ಶಾಂತಪ್ಪ ದೊಡ್ಡಮನಿ ಇತನಿಗೆ ಗುಪ್ತ ಗಾಯವಾಯಿತು, ಶಿವಪುತ್ರ ತಂದೆ ಸಣ್ಣ ಚಂದ್ರಪ್ಪ ಬಂಟನಳ್ಳಿ ಸಾ|| ಕಲಕಂಬಾ ಇತನಿಗೆ ಭಾರಿಗಾಯವಾಗಿ ಬಾಯಿಂದ ಹಾಗೂ ಮೂಗಿನಿಂದ ರಕ್ತ ಬರುತ್ತಿತ್ತು, ಮತ್ತು ಮಾಹಾದೇವ ಹೊನ್ನಪ್ಪನವರ, ನಿರ್ಮಾಲ ಹೊನ್ನಪ್ಪನವರ, ಚಿಂಟು ಹೊನ್ನಪ್ಪನವರ ಇವರಿಗೆ ಗುಪ್ತ ಗಾಯವಾಗಿರುತ್ತವೆ . ಶಿವಪುತ್ರ ಇತನು ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:206/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

29 September 2012

GULBARGA DISTRICT REPORTED CRIME


ಅತ್ಯಾಚಾರ ಮಾಡಿ ಕೊಲೆ ಮಾಡಿದ ಬಗ್ಗೆ:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ:27-09-2012 ರಂದು ರಾತ್ರಿ ಸಮಯದಲ್ಲಿ ಭಾಸಗಿ ಗ್ರಾಮದ ರೋಡ ಬದಿಗೆ ಇದ್ದ ಭೀಮಷಾ ತಂದೆ ಮಲ್ಕಪ್ಪ ಮಾಂಗ ಸಾ|| ಉಡಚಣಹಟ್ಟಿ ಇವರ ಹೊಲದಲ್ಲಿ ಬಾಂದಾರಿದಲ್ಲಿಯ ಬೇವಿನ ಗೀಡದ ಕೆಳಗೆ 25 ರಿಂದ 30 ವರ್ಷದ ಅಪರಿಚಿತ ಹೆಣ್ಣು ಮಗಳಿಗೆ ಜಬರಿ ಸಂಭೋಗ ಮಾಡಿ, ಬಟ್ಟೆಯಿಂದ ಕುತ್ತಿಗೆಗೆ ಬೀಗಿದು ಯಾರೋ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ ಖಾಜಪ್ಪ ತಂದೆ ಮರಗು ಭಾಸಗಿ ಸಾ|| ಉಡಚಣಹಟ್ಟಿ ತಾ|| ಅಫಜಲಪೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:167/2012 ಕಲಂ, 376, 302 ಐಪಿಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 September 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ವಿರೇಶ ತಂದೆ ಅಮೃತರಾವ ಪಂಗರಗಿ ಉದ್ಯೋಗ: ವ್ಯಾಪಾರ ಸಾ: ಮನೆ ನಂ-1/730 ಸಿದ್ದೇಶ್ವರ ಕಾಲೋನಿ ಸೇಡಂ ರೋಡ ಗುಲಬರ್ಗಾರವರು  ನನ್ನ  ಟಿಪ್ಪರ ನಂ-ಕೆಎ 32 ಬಿ-2812 ವಾಹನವನ್ನು  ದಿನಾಲು  ಸಿದ್ದೇಶ್ವರ ಕಾಲೋನಿಯಲ್ಲಿಯ ಮನೆ ಮುಂದೆ ನಿಲ್ಲಿಸುತ್ತಿದ್ದು, ಎಂದಿನಂತೆ ದಿನಾಂಕ 25-09-2012 ರಂದು ರಾತ್ರಿ 9-00 ಗಂಟೆಗೆ ವಾಹನದ ಚಾಲಕ ಬಸವರಾಜ ತಂದೆ ಸಾಯಬಣ್ಣ ಇತನು ನಮ್ಮ ಟಿಪ್ಪರನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಮನಗೆ ಹೋಗಿರುತ್ತಾನೆ. ನಾವು ಊಟ ಮಾಡಿಕೊಂಡು ಮಲಗಿಕೊಂಡಿರುತ್ತೆವೆ, ದಿನಾಂಕ 26-09-2012 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನೋಡಲಾಗಿ ಮನೆಯ ಮುಂದೆ ನಿಲ್ಲಸಿದ ನಮ್ಮ ಟಿಪ್ಪರ ನಂ-ಕೆಎ 32 ಬಿ 2812 ನೇದ್ದು ಕಾಣಲಿಲ್ಲ ಆಗ ನಾನು ಗಾಬರಿಗೊಂಡು ನಮ್ಮ ಚಾಲಕ ಬಸವರಾಜ ಇತನಿಗೆ ಫೋನ್ ಮಾಡಿ ವಿಚಾರಿಸಲಾಗಿ ಅವನು ನಾನು ತೆಗೆದುಕೊಂಡು ಹೋಗಿರುವದಿಲ್ಲ ಅಂತಾ ತಿಳಿಸದನು.  ಸದರಿ ಟಿಪ್ಪರ ನಂ-ಕೆಎ-32 ಬಿ-2812 ವಾಹನವನ್ನು ಯಾರೋ ಕಳ್ಳರು ಮನೆಯ ಮುಂದೆ  ನಿಲ್ಲಿಸಿದ್ದನ್ನು ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 220/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಚಂದಾರಾವ ಪಾಟೀಲ ವಯ|| 60 ವರ್ಷ ಉ|| ನಿವೃತ್ತ ಸರಕಾರಿ ನೌಕರ ಸಾ|| ಸೇಡಂ ರವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ:18/03/2012 ರಂದು ಸ್ಟೇಷನ ಬಜಾರ ರಸ್ತೆಯಲ್ಲಿರುವ ಕಾಳಿಂಗ ಲಾಡ್ಜ ರೂಮ ನಂ: 107 ರಲ್ಲಿದ್ದಾಗ  ಬೆಳಿಗ್ಗೆ 9-00 ಸುಮಾರಿಗೆ ಮಾದೇವಪ್ಪ ಬಿರಾದಾರ ಲಾರಾ ಟೇಲರ್ ಗುಲಬರ್ಗಾ ಸಂಗಡ ಮೂರು ಜನರು ಕೂಡಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಪ್ಲಾಟ ನಂ: 49 ನೇಧ್ದನ್ನು ಬೇರೆಯವರಿಗೆ ಮಾರಿದಿಯ್ಯಾ ಅಂತಾ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಕಾರಿನಲ್ಲಿ ಹಾಕಿಕೊಂಡು ಪಿಸ್ತೂಲ್ ದಿಂದ ಜೀವದ ಬೆದರಿಕೆ ಹಾಕಿ ಖಾಲಿ ಪೇಪರಗಳ ಮೇಲೆ ರುಜು ಪಡೆದು ಮರಳಿ ಕಾಳಿಂಗ ಲಾಡ್ಜ ಹತ್ತಿರ ತಂದು ಬಿಟ್ಟು ಹೋಗಿದ್ದಾರೆ ಅಂತಾ ಮಾನ್ಯ ನ್ಯಾಯಾಲಯದ  ಆದೇಶದ ಮೇರೆಗೆ ಠಾಣೆ ಗುನ್ನೆ ನಂ 123/2012 ಕಲಂ 147,148,473,307,348,363,468,506,34,ಐ,ಪಿ.ಸಿ & 25(3) ಇಂಡಿಯನ್‌ ಆರ್ಮ್ಸ ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ:28/09/2012 ರಂದು  ಮಧ್ಯರಾತ್ರಿ 2-30 ಗಂಟೆಯಿಂದ ಬೆಳಗಿನ ಜಾವ 5-00 ಗಂಟೆಯ ಅವದಿಯಲ್ಲಿ ರಾಜಹಂಸ್ ಬಸ್ ನಂ ಕೆ.ಎ-25-ಎಫ-2595 ನೇದ್ದರ ಲಗೇಜ ಇಡುವ ಸ್ಥಳದಲ್ಲಿ ವಿ.ಐ.ಪಿ ಸೂಟಕೇಸದಲ್ಲಿ 30 ಗ್ರಾಂ ಬಂಗಾರದ ಚೈನ್ ಅ.ಕಿ-75,000/- ರೂ,  5 ಸೀರೆಗಳು 8,000/- ರೂ,  ಪ್ಯಾಂಟ ಶರ್ಟ ಅ.ಕಿ 2000/- ರೂ ಹೀಗೆ ಒಟ್ಟು 85 ಸಾವಿರ ಬೇಲೆ ಬಾಳುವ ಮೌಲ್ಯದ್ದು ವಸ್ತುಗಳು ಸೂಟಕೇಸದಲ್ಲಿಟ್ಟಿದ್ದು ಜೇವರ್ಗಿ ಬಸ್ಸ  ನಿಲ್ದಾಣದಲ್ಲಿ ನಿಂತಾಗ ಯಾರೋ ಕಳ್ಳರು ಸೂಟಕೇಸ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ: 146/12 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಸಂಜೋಗ ಕೆ ರಾಠಿ, ಸಾ|| ಪ್ಲಾಟ ನಂ:6 ಗಜಾನನ ಕುಂಜ, ಆನಂದ ನಗರ, ಎಸ್.ಬಿ ಕಾಲೇಜ ರೋಡ ಗುಲಬರ್ಗಾ ರವರು ನಾನು ದಿನಾಂಕ 27-09-2012  ರಂದು ನಗರದ ಸುಪರ ಮಾರ್ಕೆಟ ಬಡಾವಣೆ ಕಾಮತ ಹೊಟೇಲ ಆಟೋ ಸ್ಟ್ಯಾಂಡ ಹತ್ತಿರ ನನ್ನ ಜೇಬಿನಲ್ಲಿದ್ದ ಒಂದು ಬಿ-9300 ಬ್ಲಾಕಬೇರಿ ಸ್ಮಾರ್ಟ ಪೋನ್ ಅ||ಕಿ|| 15,046/- ಬೆಲೆಬಾಳುವ ಮೊಬೈಲ ಪೋನನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 109/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಚನ್ನವೀರಪ್ಪ ತಂದೆ ಕಲ್ಲಪ್ಪ ಗುಮ್ಮಾ  ಉ: ವಕೀಲ ವೃತ್ತಿ ಸಾ: ಕಲ್ಯಾಣ ನಗರ  ಗುಲಬರ್ಗಾರವರು ನನ್ನ ತಾಯಿಯಾದ ರೇವಮ್ಮ ರವರು  ದಿನಾಂಕ:27-09-2012 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಸಿದ್ದಿ ಪಾಷಾ ದರ್ಗಾಕ್ಕೆ ಬಂದು ದರ್ಶನ ಮಾಡಿಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಮೊಟಾರ ಸೈಕಲ್ ನಂ: ಕೆಎ 32 ಡಬ್ಲೂ 2848 ನೇದ್ದರ ಚಾಲಕ ರಿಜ್ವಾನ ಈತನು ತನ್ನ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಹಳೆ ಎಸ್.ಪಿ.ಆಫೀಸ್ ಕಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ತಾಯಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶೇಕ ಫಯಾಜ ತಮದೆ ಶೇಕ ಮಹೆಬೂಬ ವಕ್ಯಾನಿಕ ಕೆಲಸ ಸಾ: ತಾಜ ನಗರ ಮುಸ್ಲಿಂ ಸಂಘ ಎಕಖಾನ ಮಜೀದ ಹಿಮದೆ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಮೋಸಿನ, ವಸೀಮ ರವರು ಕೂಡಿಕೊಂಡು ದಿನಾಂಕ 27-09-2012 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಮೆಕ್ಯಾನಿಕ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ  ಮಾತಾಡುತ್ತಾ  ಬರುತ್ತಿರುವಾಗ ಎಡಕ್ಕೆ ಮೋಸಿನ ಮತ್ತು ವಸೀಮ ಇದ್ದರು.  ರೋಡ ಎಡ ಬದಿಯಿಂದ ನಾನು ನನ್ನ  ಸೈಕಲ ಹಿಡಿದುಕೊಂಡು ಹೊರಟಾಗ  ಹಿಂದಿನಿಂದ ಅಂದರೆ ಹುಮನಾಬಾದ ರಿಂಗ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಅತಿವೇಗ ಮತ್ತು ಅಲಕ್ಷತನ ನಡೆಸುತ್ತಾಬಂದು  ನನಗೆ  ಮತ್ತು ನನ್ನ ಸೈಕಲಿಗೆ ಡಿಕ್ಕಿ ಹೊಡೆದು  ಸ್ಥಳದಲ್ಲಿ ಮೋಟಾರ ಸೈಕಲ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 310/12 ಕಲಂ 279 337  ಐಪಿಸಿ  ಸಂ. 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

27 September 2012

GULBARGA DISTRICT REPORTED CRIME


ನಕಲಿ ದಾಖಲೆ ಸಲ್ಲಿಸಿ ಪಾಸಪೋರ್ಟ ಪಡೆಯುತ್ತಿದ್ದ ಆರೋಪಿತರ ಬಗ್ಗೆ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ರೇಶ್ಮಾ ಗಂಡ ಮಹ್ಮದ ರಫೀಕ ವ|| 32 ವರ್ಷ, ಸಾ|| ನಬಿ ಮೊಹಲ್ಲಾ ಎಮ್.ಎಸ್.ಕೆ ಮಿಲ್ ಗುಲಬರ್ಗಾ ಇವರು ವಿದೇಶಕ್ಕೆ ಹೋಗುವ ಕುರಿತು ಪಾಸಪೋರ್ಟ ಸಲುವಾಗಿ ಅರ್ಜಿ ಸಂಖ್ಯೆ 4272/12 ದಿನಾಂಕ 30-04-2012 ರಂದು ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿದಾರಳು ತಮ್ಮ ದಾಖಲಾತಿಗಳೊಂದಿಗೆ ಠಾಣೆಗೆ ದಿನಾಂಕ 01-06-2012 ರಂದು ಇಬ್ಬರು ಸಾಕ್ಷಿದಾರರೊಂದಿಗೆ ಠಾಣೆಗೆ ದಾಖಲಾತಿಗಳನ್ನು ಸಲ್ಲಿಸಿದ್ದು, ಹಾಗು ಇಬ್ಬರ ಸಾಕ್ಷಿ ಜನರ ಹೇಳಿಕೆ ಆಧಾರದ ಮೇಲೆ ಸದರಿಯವರ ಗುಣ ನಡತೆ ಹಾಗು ದಾಖಲಾತಿಗಳು ಸರಿಯಿದ್ದ ಬಗ್ಗೆ ವರದಿ ಸಲ್ಲಿಸಿದ್ದು ಇರುತ್ತದೆ. ನಂತರ ಅವರ ಬಗ್ಗೆ ಕೂಲಂಕೂಶವಾಗಿ ವಿಚಾರಣೆ ಮಾಡಿದ ನಂತರ ರೇಷ್ಮಾ ಇವಳು ನಕಲಿ ದಾಖಲಾತಿಗಳು ಸೃಷ್ಟಿಸಿ ಪಾಸಪೋರ್ಟ ಕುರಿತು ಅರ್ಜಿ ಸಲ್ಲಿಸಿದ್ದು, ಮತ್ತೆ ಮೂಲ ದಾಖಲಾತಿಗಳೊಂದಿಗೆ ಠಾಣೆಗೆ ಹಾಜರಾಗಲು ತಿಳಿಸಿದ ಮೇರೆಗೆ, ರೇಷ್ಮಾ ಇವಳನ್ನು ವಿಚಾರಿಸಲು ಸದರಿ ಪಾಸಪೋರ್ಟನ್ನು ಫರ್ಜಾನ ಬೇಗಂ ಹಾಗು ಅವಳ ಗಂಡ ಮತ್ತು ಗಫೂರ ಪಟೇಲ್ ಎಂಬುವವರು ತನ್ನ ಕಡೆಯಿಂದ ಹಣ ತೆಗೆದುಕೊಂಡು ನಕಲಿ ದಾಖಲಾತಿ ಸೃಷ್ಟಿಸಿ ಪಾಸಪೋರ್ಟ ಕೊಡಿಸಿದ್ದು ಇರುತ್ತದೆ ಅಂತ ತಿಳಿಸಿರುತ್ತಾಳೆ.ಸದರಿಯವಳು ಈ ಮುಂಚೆ ಹಾಜರುಪಡಿಸಿದ್ದ ರೇಷನ ಕಾರ್ಡ ನಂ 415669 ನೇದ್ದನ್ನು ಪರಿಶೀಲಿಸಲು ಸದರಿ ರೇಷನ ಕಾರ್ಡ ತಿದ್ದುಪಡಿ ಮಾಡಿದ್ದರ ಬಗ್ಗೆ ವಿಚಾರಿಸಲು ಆತನ ಹೆಸರು ಸಮೀರ ಅಂತ ಇದ್ದು, ಅವನು ಪೇಂಟರ್ ಕೆಲಸ ಮಾಡಿಕೊಂಡಿರುತ್ತಾನೆ ಅವನಿಗೂ  ಮತ್ತು ನನಗೆ ಯಾವ ಸಂಬಂಧ ಇರುವದಿಲ್ಲಾ ಅಂತ ತಿಳಿಸಿರುತ್ತಾಳೆ. ಕಾರಣ ರೇಷನ ಕಾರ್ಡ ಪರಿಶೀಲನೆ ಕುರಿತು ಮಾನ್ಯ ಸಹಾಯಕ ನಿರ್ದೇಶಕರು ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗುಲಬರ್ಗಾ ರವರಿಗೆ ರೇಷನ ಕಾರ್ಡ ಸಂಖ್ಯೆ 415669 ನೇದ್ದನ್ನು ಪರಿಶೀಲಿಸಿ ಸದರಿ ಕಾರ್ಡ ಮೂಲದ್ದಾಗಿರುತ್ತದೆ ಅಥವಾ ಖೊಟ್ಟಿಯಾಗಿರುತ್ತದೆ ಎಂಬ ಬಗ್ಗೆ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯ ವರದಿಗಾಗಿ ಕೋರಿಕೊಂಡಿದ್ದರಿಂದ ಸದರಿಯವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ರೇಷ್ಮಾ ಇವಳಿಗೆ ಪಾಸಪೋರ್ಟ ಸಂಖ್ಯೆ ಕೆ 3238346 ನೇದ್ದನ್ನು ಕೊಡಿಸಿದ ಫರ್ಜಾನ ಬೇಗಂ ಹಾಗು ಅವಳ ಗಂಡ ಮಹ್ಮದ ಯುನೂಸ್ ಮತ್ತು ಗಫೂರ ಪಟೇಲ್ ಇವರುಗಳು ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಮೋಸ ಮಾಡಿದ್ದು ಕಂಡು ಬಂದಿರುವದರಿಂದ ಸದರಿಯವರ ವಿರುದ್ಧ ಪಿ.ಎಸ.ಐ ರಾಘವೇಂದ್ರ ನಗರ ಠಾಣೆ ರವರು ಠಾಣೆ  ಗುನ್ನೆ ನಂ: 70/2012 ಕಲಂ 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.


GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ನಂದು ತಂದೆ ದೇಸು ರಾಠೋಡ ಸಾಃ ಕೌನಳ್ಳಿ ತಾಂಡಾ ನಾನು ದಿನಾಂಕ:25-09-2012 ರಂದು ಸಾಯಾಂಕಾಲ 6-00  ಗಂಟೆ ಸುಮಾರಿಗೆ ನಮ್ಮ  ಮನೆಯಲ್ಲಿ ದೇವರ ಕಾರ್ಯಕ್ರಮಕ್ಕಾಗಿ ಪೂಜೆ ಸಾಮಾನು ತೆಗೆದುಕೊಂಡು ಮನೆಗೆ ಬರುತ್ತಿರುವಾಗ ಮನೆಯ ಮುಂದಿನ ರಸ್ತೆಯ ಮೇಲೆ ಹರಿಶ್ಚಂದ್ರ ತಂದೆ ರೂಪ್ಲಾ ಪವಾರ ಸಂಗಡ 6 ಜನರು ಸಾ|| ಎಲ್ಲರೂ ಕೌನಳ್ಳಿ ತಾಂಡಾ ತಾಃಜಿಃಗುಲಬರ್ಗಾರವರು ಗುಂಪು ಕಟ್ಟಿಕೂಂಡು ಬಂದು ಮೊನ್ನೆ ನಮ್ಮ ಅಪ್ಪನ ಸಂಗಡ ತಕರಾರು ಮಾಡಿದೆ ನಿನ್ನಗೆ ಎಷ್ಟು ಸೂಕ್ಕು ಇದೆ ಅಂತಾ ಅವಾಚ್ಯವಾಗಿ ಬೈದು ನನ್ನ ತಂದೆಗೆ ಮತ್ತು ನನ್ನ ತಮ್ಮನಿಗೆ  ಹೊಡೆಬಡೆ ಮಾಡಿ, ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 103/2012 ಕಲಂ. 143,147, 148, 341, 323, 324, 504, 506, ಸಂ.149 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಹರಿಶ್ಚಂದ್ರ ತಂದೆ ರೂಪ್ಲಾ ಪವಾರ ಸಾಃ ಕೌನಳ್ಳಿ ತಾಂಡಾ ನಾನು ಮತ್ತು ನನ್ನ ಮಗ ಅಶೋಕ ಇಬ್ಬರು ಕೂಡಿಕೊಂಡು ದಿನಾಂಕ: 25-09-2012 ರಂದು ಸಾಯಾಂಕಾಲ 6-00 ಗಂಟೆ ಸುಮಾರಿಗೆ ಸೇವಲಾಲ ದೇವರ ಗುಡಿ ಮುಂದೆ ಕುಳಿತಾಗ ನಂದು ರಾಠೋಡ ಈತನು ತಕರಾರು ಮಾಡಿದ್ದು, ನಂತರ ನಾನು ಮನೆಗೆ ಕಡೆಗೆ ಹೋಗುತ್ತಿರುವಾಗ ದೇಸು ತಂದೆ ಭೋಜು ರಾಠೋಡ ಸಂಗಡ 4 ಜನರು ಸಾಃಎಲ್ಲರೂ ಕೌನಳ್ಳಿ ತಾಂಡಾ ತಾಃಜಿಃ ಗುಲಬರ್ಗಾ ರವರು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಗುಂಪು ಕಟ್ಟಿಕೂಂಡು ಬಂದು ನಿಮಗೆ ಸೂಕ್ಕು ಬಂದಿದೆ  ಅಂತಾ ಅವಾಚ್ಯ ಶಬ್ದಗಳಿಂದ ಬೈದು  ನನಗೆ ನನ್ನ ಮಗನಿಗೆ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 104/2012 ಕಲಂ. 143,147, 148, 341, 323, 324, 504, 506, ಸಂ.149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ: 25/09/2012 ರಂದು ರಾತ್ರಿ 7 ಗಂಟೆಯಿಂದ ದಿನಾಂಕ: 26/7/2012 ರ ಮುಂಜಾನೆ 7-00  ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಪನೂರ ಇಂಡಸ್ಟ್ರೀಯಲ್‌ ಏರಿಯಾದಲ್ಲಿರುವ ಟ್ರಾನಕಾಂ ಸಿಸ್ಟಮ  ಕ್ಯೂ 44 ಕೆಎಸ್‌‌ಐಡಿಸಿ ಎಸ್ಟೇಟ ಗುಲ್ಬರ್ಗಾದ ಬೀಗ ಮುರಿದು 1- Motor 1HP-2 Nos. RS=6000=00, 2- Hilti Beaker TE-706-4 Nos- RS- 80,000=00 3- Hilti Dri9lling Machine TE-1-4 Nos. Rs 16,000/- 4- Hot Press-2Nos. RS 2000=00 IN All worth Rs 1,04,000/- ಕಿಮ್ಮತ್ತಿನದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಜಶೇಖರ ತಂದೆ ಈರಣ್ಣಾ ಸಾ:ಕೆಹೆಚ್‌‌ಬಿ ಕಾಲೋನಿ ರಾಜಾಪೂರ ರೋಡ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 308/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:ಶ್ರೀಮತಿ ಜಮುನಾಬಾಯಿ ಗಂಡ ದೇವಿದಾಸ ಪವ್ಹಾರ ಸಾಃ ಬೆಡಸೂರ ಎಮ್. ತಾಂಡಾ ಹಾ||ವ|| ಇಂದಿರಾ  ನಗರ ಸೇಡಂ ರವರು  ನನ್ನ ಗಂಡನಾದ ದೇವಿದಾನ ಇತನು ದಿನಾಂಕಃ 24/09/2012 ರಂದು ಬೆಳಿಗ್ಗೆ 7:30 ಗಂಟೆಯ ಸುಮಾರಿಗೆ ಪೇಪರ್ ಜೀಪ ನಂ. ಕೆಎ-39 6347 ನೇದ್ದರ ವಾಹನದಲ್ಲಿ ಕುಳಿತುಕೊಂಡು ಸುಲೇಪೇಟ ದಿಂದ ತಮ್ಮೂರ ಕಡೆಗೆ ಹೋಗುತ್ತಿರುವಾಗ ಸದರಿ ಜೀಪ ಚಾಲಕ ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಜಂಪ ಮಾಡಿಸಿದ್ದರಿಂದ ಜೀಪನಲ್ಲಿ ಕುಳಿತ ದೇವಿದಾಸ ಇತನು ಕೆಳಗೆ ಬಿದ್ದು ತಲೆಗೆ ಭಾರಿ ಗುಪ್ತಗಾಯ, ಮುಖಕ್ಕೆ ತೆರಚಿದ ಗಾಯ ಮತ್ತು ಟೊಂಕಕ್ಕೆ ಗುಪ್ತಗಾಯವಾಗಿದ್ದು ಉಪಚಾರ ಕುರಿತು ಸಾರ್ವಜನಿಕ ಆಸ್ಪತ್ರೆ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ದಿನಾಂಕಃ 26/09/2012 ರಂದು ಮದ್ಯಾಹ್ನ 3:00 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 78/2012 ಕಲಂ. 279, 304 [ಎ] ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 

26 September 2012

GULBARGA DISTRICT REPORTED CRIME


ಕೊಲೆ  ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶಿವಪುತ್ರ ತಂದೆ ಚಂದ್ರಶಾ ಕ್ಯಾರ, ವಯ|| 27 ವರ್ಷ, ಉ|| ಒಕ್ಕಲುತನ, ಸಾ|| ಕಡಗಂಚಿ ರವರು ನಾನು ಮತ್ತು ಅರವಿಂದ ನರೋಣಿ, ಶರಣು ನರೋಣಿ, ಚಿದಾನಂದ ಢೊಳ್ಳಿ, ಎಲ್ಲರೂ ಕೂಡಿಕೊಂಡು ದಿನಾಂಕ:25-09-2012 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಕಡಗಂಚಿಯಿಂದ ಗುಲಬರ್ಗಾ ನಗರದ ಚಿಂಚೋಳಿ ಲೇಔಟನಲ್ಲಿ ಬರುವ ಅರವಿಂದ ನರೋಣಿ ಇವರ ಕಟ್ಟಡ ನಡೆಯುತ್ತಿರುವ ಕಾಂಪ್ಲೇಕ್ಸಗೆ ಬಂದಿರುತ್ತೇವೆ. ಕಾಂಪ್ಲೇಕ್ಸದಲ್ಲಿ ನಡೆಯುತ್ತಿರುವ ಕೆಲಸವನ್ನು ನೋಡಿ ಸಾಯಂಕಾಲ 6-30 ಗಂಟೆಯ ಸುಮಾರಿಗೆ ನಾವೆಲ್ಲರೂ ಕಡಗಂಚಿಗೆ ಹೋಗಬೇಕೆಂದು ಕಾಂಪ್ಲೇಕ್ಸ ಎದುರುಗಡೆ ನಿಂತಿದ್ದೇವು. ಅಷ್ಟರಲ್ಲಿ ಕಡಗಂಚಿ ಗ್ರಾಮದ ಯೋಗೇಶ ಹೊಸಕುರುಬರ, ಬೀರಣ್ಣ ವಗ್ಗಿ, ಭೀಮರಾಯ ಹೊಸಕುರುಬರ, ಮಲ್ಲಪ್ಪ ವಗ್ಗಿ, ಸೋಮಯ್ಯ ಸ್ವಾಮಿ, ಶ್ರೀಶೈಲ ಅಲ್ದಿ, ಜಗಪ್ಪ ಹೊಸಕುರುಬರ ವಿಠಲ ಹೊಸಕುರುಬರ ಹಾಗೂ ಇತರರು ಕೂಡಿಕೊಂಡು ಬಂದು ಇವರಲ್ಲಿ ಮಲ್ಲಪ್ಪ ವಗ್ಗಿ ಈತನು ಅರವಿಂದ ನರೋಣಿ ಇವರ ಎದೆಯ ಮೇಲೆ ಪಿಸ್ತೂಲದಿಂದ ಗುಂಡು ಹಾರಿಸಿದನು. ಯೋಗೇಶ, ಶ್ರೀಶೈಲ ಮತ್ತು ವಿಠಲ ಇವರು ಅರವಿಂದ ನರೋಣಿ ಇವರಿಗೆ ಹಿಡಿದುಕೊಂಡಿದ್ದು ಭೀಮರಾಯ ಈತನು ತಾನು ತಂದ ತಲವಾರದಿಂದ ಕುತ್ತಿಗೆಯ ಮುಂಭಾಗದಲ್ಲಿ ಮತ್ತು ಎದೆಯ ಮೇಲೆ ಹೊಡೆಯುತ್ತಿದ್ದನು. ಆಗ ನಾನು ಓಡಿ ಹೋಗಿ ಮಲ್ಲಪ್ಪ ವಗ್ಗಿ ಈತನಿಗೆ ಹಿಡಿದಾಗ ಅವನು ನನ್ನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ನಾನು ಅವನ ಕೈಯಿಂದ ಪಿಸ್ತೂಲನ್ನು ಕಸಿದುಕೊಳ್ಳುವಾಗ ಅವನು ಅಲ್ಲಿ ಬಿಸಾಕಿ ಓಡಿ ಹೋದನು. ನಾನು, ಚಿದಾನಂದ ಡೊಳ್ಳಿ ಮತ್ತು ಶರಣು ನರೋಣಿ ಎಲ್ಲರೂ ಕೂಡಿ ಜಗಳ ಬಿಡಿಸಲು ಹೋದಾಗ ಬೀರಣ್ಣ ವಗ್ಗಿ, ಮತ್ತು ಸೋಮಯ್ಯ ಸ್ವಾಮಿ ಇವರು ಬಿಡಬೇಡರಿ ಇವನಿಗೆ ಖಲಾಸ ಮಾಡಿರಿ ಅಂತಾ ಅಂದಾಗ ಜಗಪ್ಪ ಇವನು ಅರವಿಂದ ನರೋಣಿ ಇವರ ಟೊಂಕದಲ್ಲಿ ಇದ್ದ ಲೈಸನ್ಸ ಪಿಸ್ತೂಲ್ ತೆಗೆದುಕೊಂಡು ಶರಣು ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ಗುಂಡು ಹಾರಿಸಿದ್ದು ಅವನ ಬಲಗಾಲ ತೊಡೆಯ ಮೇಲೆ ಹತ್ತಿ ಭಾರಿಗಾಯವಾಗಿದ್ದು ಇರುತ್ತದೆ. ನಂತರ ನಾವು ಚೀರಾಡುವದನ್ನು ನೋಡಿ ನೆರೆ ಹೊರೆಯ ಜನರು ಬರುವದನ್ನು ನೋಡಿ ಅವರು ಓಡಿ ಹೋದರು.     ಕಾರಣ ಅರವಿಂದ ನರೋಣಿ ಇವರಿಗೆ ಕೊಲೆ ಮಾಡಿದ ಮತ್ತು ಶರಣು ಇವರಿಗೆ ಕೊಲೆ ಮಾಡಲು ಪ್ರಯತ್ನಪಟ್ಟವರ  ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ: 143, 147, 148, 325, 307, 302 ಸಂಗಡ 149 ಐ.ಪಿ.ಸಿ ಮತ್ತು 25 & 27 ಆಯುಧ ಅಧಿನಿಯಮ ಕಾಯ್ದೆ ಪ್ರಕಾರ ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.