POLICE BHAVAN KALABURAGI

POLICE BHAVAN KALABURAGI

10 March 2014

Gulbarga District Reported Crimes

                                  ಸರಗಳ್ಳತನ ಮಾಡಿದ ಕಳ್ಳನ ಬಂಧನ :
ಅಶೋಕ ನಗರ ಠಾಣೆ : ಶ್ರೀಮತಿ ಪಾರ್ವತಿ ಗಂಡ ಶಾಂತಮಲ್ಲಪ್ಪ ಶಿವಕೇರಿ ಸಾ|| ಪ್ಲಾಟ ನಂ. 163 ಕಾಂತ ಕಾಲೋನಿ ಗುಲಬರ್ಗಾ ಇವರು ಒಬ್ಬರೆ ಮನೆಯಲಿದ್ದಾಗ  ಒಬ್ಬ ಗಂಡು ಮತ್ತು ಹೆಣ್ಣು ಇಬ್ಬರು ಮೊಟಾರ ಸೈಕಲ ಮೇಲೆ ಬಂದು ಬಾಡಿಗೆ ಮನೆ ಬೇಕಾಗಿದೆ ಅಂತಾ ಕೇಳಲು ಬಂದು ಚಾಕು ತೊರಿಸ ಹೇದರಿಸಿ ಹಲ್ಲೆಮಾಡಿ, ಪಿರ್ಯಾದಿ ಪಾರ್ವತಿ ಇವಳ ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಶ್ರೀ ಕಾಶಿನಾಥ ತಳಿಕೇರಿ, ಅಪರ ಎಸ್.ಪಿ.ಗುಲಬರ್ಗಾ, ಮತ್ತು ಶ್ರೀ ಸವಿಶಂಕರ ನಾಯಕ್ ಡಿವೈಎಸ್.ಪಿ ಉಪ ವಿಬಾಗ ಗುಲಬರ್ಗಾ ರವರು ಸ್ಥಳಕ್ಕೆ ಭೇಟಿ ನೀಡಿ ಸರಗಳ್ಳರ ಬಂಧನ ಕುರಿತು ಅಶೋಕನಗರ ಪೊಲೀಸ ಠಾಣೆಯ ಶ್ರೀಮತಿ ವಿಜಯಲಕ್ಷ್ಮಿ ಪಿಐ, ಕೆ.ಎಸ್.ಕಲ್ಲದೇವರು ಪಿ.ಎಸ್.ಐ (ಕಾ.ಸು), ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಸಿಬ್ಬಂದಿಜನರಾದ ಸೇವುನಾಯಕ ಹೆಚ್.ಸಿ 250,ಸುರೇಶ ಪಿಸಿ 534,  ರಫಿಯೊದ್ದಿನ್ ಪಿಸಿ 370, ಗುರುಮೂರ್ತಿ ಪಿಸಿ 269, ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ಪ್ರವಿಣ ಪಿಸಿ 907,  ಬಸವರಾಜ ಪಿಸಿ 765, ಉಮ್ಮಣ್ಣ ಪಿಸಿ 998, ಡ್ರೈವರ ಶಿವಯ್ಯ ಎಪಿಸಿ  ರವರ ಒಳಗೊಂಡ ತಂಡವನ್ನು ರಚನೆ ಮಾಡಿದ್ದು ಈ ತಂಡವು ಮಾನ್ಯ ಎಸ್‌.ಪಿ ಗುಲಬರ್ಗಾ, ಅಪರ ಎಸ್‌.ಪಿ ಗುಲಬರ್ಗಾ, ಡಿ.ಎಸ್‌.ಪಿ  ಎ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ,  ಕಮಲಾಪೂರ, ಹುಮನಾಬಾದ ಕಡೆ ಹೋಗಿ ಸರಗಳ್ಳತನ ಮಾಡಿದ ಆರೋಪಿ ಮುಜೀಬ ತಂದೆ ಶೇಖ ಮಸ್ತಾನ ಮಚಕುರಿ ವಯಾ: 34 ವರ್ಷ ಸಾ:ಹುಡಗಿ ಗ್ರಾಮ ತಾ:ಹುಮನಾಬಾದ ಜಿ:ಬಿದರ ಇತನನ್ನು ದಸ್ತಗಿರಿ ಮಾಡಿ ಒಂದು ಹೀರೊಹೊಂಡಾ ಫ್ಯಾಶನ್ ದ್ವಿ ಚಕ್ರ  ವಾಹನ ನಂ: ಕೆಎ-32 ಎಸ್-9068, ಬಂಗಾರದ ಮಂಗಳಸೂತ್ರ, ಒಂದು ಮೊಬೈಲ್, ಒಂದು ಬಟನ್ ಚಾಕು ಹೀಗೆ ಒಟ್ಟು ಅ.ಕಿ. 80,000/- ರೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಅಬ್ದುಲ್ ಸತ್ತಾರ್ ಅಬ್ದುಲ್ ರಹಿಮಾನ್ ಮುಜಾವರ ಸಾ;ಕಮಲಾಪೂರ ರವರು ಮುಕ್ರಾಮ ದಾಬಾದಲ್ಲಿ è ಊಟ ಮುಗಿಸಿಕೊಂಡು ದಾಬಾದ ಮುಂದುಗಡೆ ನಮ್ಮೂರ ಹರೀಶ್ ಪಟ್ನಾಯಕ  ಮತ್ತು ದಾಬಾದ ಮಾಲಿಕ ಮುಕ್ರಂ ರವರೊಂದಿಗೆ ಮಾತನಾಡುತ್ತಾ ಕುಳಿತುಕೊಂಡಿದ್ದಾಗ  ನಮ್ಮ ಪರಿಚಯದವರಾದ ಶಿವಪ್ಪ ತಂದೆ ಗುಂಡಪ್ಪ ಪಟ್ನಾಯಕ ಇವರು ನಾವು ಕುಳಿತಲ್ಲಿಗೆ ಬಂದು ಕಮಲಾಪೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎದುರುಗಡೆ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯಾವುದೋ ಒಬ್ಬ ಅಪರಿಚಿತ ಹೆಣ್ಣುಮಗಳಿಗೆ  ಯಾವುದೋ ಒಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದುಆಗ ನಾವು ಹೋಗಿ ನೋಡಲಾಗಿ ಅವಳು ಸ್ವಲ್ಪ ಸಮಯದ ಹಿಂದೆ ಮುಕ್ರಂ  ದಾಬಾದಲ್ಲಿ ಊಟ ಮಾಡಿ ಹೋದ ಅಪರಿಚಿತ ಹೆಣ್ಣು ಮಗಳಿದ್ದುಅವಳ ಬಲಗೈ ಭುಜದ ಹತ್ತಿರ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ತೆಲೆಗೆ ರಕ್ತಗಾಯವಾಗಿತ್ತು ಮತ್ತು ಮೈ-ಕೈಗಳಿಗೆ ಭಾರಿ ಗುಪ್ತಗಾಯವಾಗಿದ್ದುರಸ್ತೆಯಲ್ಲಿ ನರಳಾಡುತ್ತಾ ಬಿದ್ದಿದ್ದಳು. ಆಗ ನಾವು  108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿದ್ದುನಾನು ಮತ್ತು ಶಿವಪ್ಪ ಪಟ್ನಾಯಕ ಕೂಡಿಕೊಂಡು ಸದರಿ ಅಪರಿಚಿತ ಗಾಯಾಳು ಹೆಣ್ಣುಮಗಳನ್ನು ಉಪಚಾರ ಕುರಿತು  ಗುಲಬರ್ಗಾ ಸಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಕಪನೂರ ಗ್ರಾಮದ ಹತ್ತಿರ ರಾತ್ರಿ 11-50 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ಮೃತಳು ಅಂದಾಜು 65-70 ವರ್ಷ ವಯಸ್ಸಿನ ಹೆಂಗಸು ಇದ್ದುನೋಡಲು ಮಾನಸಿಕ ಅಸ್ವಸ್ಥಳಂತೆ ಕಂಡು ಬರುತ್ತಿದ್ದುಆಕೆಯ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ ಮತ್ತು ಅವಳ ವಾರಸುದಾರರ ಪತ್ತೆ ಇರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 06-03-2014  ರಂದು 5-30 ಪಿಎಮ್‌ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಫರಹತಾಬಾದ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಬರುತ್ತಿರುವಾಗ ಸದರಿ ಲಾರಿ ನಂ ಕೆಎ 28 ಎ-7221 ನೇದ್ದರ ಚಾಲಕನಾದ ನಾಗರಾಜ ಇತನು ಲಾರಿಯನ್ನು ಅತೀವೆಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಸುರಬಿ ದಾಬಾದ ಎದುರುಗಡೆಯಲ್ಲಿ ರೋಡಿನ ಮೇಲೆ ಇರುವ ಗುಟದ ಕಲ್ಲಿಗೆ ಗುದ್ದಿ ಲಾರಿಯನ್ನು ಪಲ್ಟಿಗೊಳಿಸಿರುತ್ತಾನೆ. ಇದರಿಂದ ಲಾರಿಯಲ್ಲಿದ್ದ ಯುಎಸ್‌ ಕಂಪನಿಯ ಸರಾಯಿ ಬಾಟಲಿಯ ಕಾಟುನ್‌ಗಳು ಬಿದ್ದು ಒಡೆದು ಹಾಳಾಗಿದ್ದಲ್ಲದೆಪಿರ್ಯಾಧಿಗೆ ಹಣೆಗೆ ಬಾರಿ ರಕ್ತಗಾಯವಾಗಿರುತ್ತದೆ. ಸದರಿ ಲಾರಿ ಚಾಲಕನಾದ ನಾಗರಾಜ ಇತನಿಗೆ ಬಲಗಾಲಿನ ಹಿಂಬಡಿಗೆಎಡಗಾಲಿನ ಪಾದದ ಮೇಲೆ ಕೊಯ್ದಂತೆಯಾಗಿ ಬಾರಿ ರಕ್ತಗಾಯವಾಗಿದ್ದಲ್ಲದೆ ಎಡಗಡೆಯ ಕಣ್ಣಿನ ಹತ್ತಿರ ತರಚಿದ ಗಾಯವಾಗಿ ರುತ್ತವೆ. ಅಂತಾ ಶ್ರೀ ಚಂದ್ರಶಾ @ ಚಂದ್ರಕಾಂತ ತಂದೆ ಮೊನಪ್ಪಾ ಗಂಜಿ ಸಾ: ನಾಗಾ ಇದ್ಲಾಯಿ ತಾ:ಚಿಂಚೋಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪಾರೂಬಾಯಿ ಗಂಡ ರಾಘವೇಂದ್ರ  ರಾಠೋಡ ಉ:ಮಹಿಳಾ ಪೇದೆ ಸಾ:ಪೊಲೀಸ ಕಾಲೋನಿ ಗುಲಬರ್ಗಾ ಇವರು ದಿನಾಂಕ 07-11-2011 ರಂದು ರಾಘವೇಂದ್ರ ಡಿ.ಎ.ಆರ್ ಪೊಲೀಸ ಪೇದೆ ಇತನ್ನೊಂದಿಗೆ ಹಿರಿಯರೆಲ್ಲರೂ ಸೇರಿಕೊಂಡು ಸಂಪ್ರದಾಯದಂತೆ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 50,000 ರೂ. ಹಣ ,4 ತೊಲೆ ಬಂಗಾರ ಹಾಗೂ ಗೃಹ ಬಳಕೆಯ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆಯಾದ 1 ವರ್ಷದವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ಅದರ ಫಲವಾಗಿ ನನಗೆ ಒಂದು ಗಂಡು ಮಗು ಹುಟ್ಟಿರುತ್ತದೆ. ತದನಂತರ ನನ್ನ ಗಂಡನ ಅಕ್ಕಳಾದ ಸುಜಾತಾ ಮತ್ತು ಸುನೀತಾ , ತಂದೆ ತುಕಾರಾಮ ,ತಾಯಿ ಸೀತಾಬಾಯಿ ,ಭಾವಂದಿರಾದ ಸುರೇಶ, ಸುರೇಂದ್ರ, ಹಾಗೂ ನಾದಿನಿಯ ಮಗನಾದ ಮಂಜುನಾಥ ಇವರೆಲ್ಲರೂ ಸೇರಿ ಪ್ಲಾಟ ಖರೀದಿಸಲು ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತರುವಂತೆ ಕಿರುಕುಳ ಕೊಟ್ಟಿರುತ್ತಾರೆ  ದಿನಾಂಕ 08-03-2014 ರಂದು ಸಾಯಂಕಾಲ ಸುಮಾರು 7-00 ಗಂಟೆ ಸುಮಾರಿಗೆ ನನ್ನ ಚಿಕ್ಕಪ್ಪ ಗಂಗಾರಾಮ ಚಿಕ್ಕಮ್ಮ ಕಮಲಾಬಾಯಿ ನನ್ನ ತಾಯಿ ಸೀತಾಬಾಯಿ ಇವರೊಂದಿಗೆ ಮನೆಯಲ್ಲಿ ಮಾತಾಡುತ್ತಾ ಕುಳಿತಿರುವಾಗ ನನ್ನ ಗಂಡ ರಾಘವೇಂದ್ರ , ನಾದಿನಿ ಸುಜಾತಾ ,ಅತ್ತೆ ಸೀತಾಬಾಯಿ , ಮಾವ ಸೀತಾರಾಮ, ನಾದಿನಿಯ ಮಗನಾದ ಮಂಜುನಾಥ ಇವರೆಲ್ಲರೂ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು  ನೀನು  ತವರು ಮನೆಯಿಂದ 2 ಲಕ್ಷ ರೂ. ಹೆಚ್ಚಿನ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರು ತರುತ್ತಿಲ್ಲ. ಮತ್ತು ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂತಾ. ಭಾವ ಸುರೇಶ, ಸುರೇಂದ್ರ, ಮತ್ತು ನಾದಿನಿ ಸುನೀತಾ, ಹಾಗೂ ಸುಜಾತಾ ಇವರ ಪ್ರಚೋದನೆಯಿಂದ ನನಗೆ ಕೈಯಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕೆ ಹಿಂಸೆ ನೀಡಿದ್ದು, ಅಲ್ಲದೇ ನೀನು ನಮಗೆ ಮಹಿಳಾ ಪೊಲೀಸ ಠಾಣೆಗೆ ಮೇಲಿಂದ ಮೇಲೆ ಕರೆಯಿಸಿ ನಮ್ಮ ಮನೆತನದ ಮರ್ಯಾದೆ ತೆಗೆಯುತ್ತಿದೀ ನಿನಗೆ ಇಂದು ಜೀವಂತವಾಗಿ ಬಿಡುವುದಿಲ್ಲ. ಅಂತಾ ಒಮ್ಮೇಲೇ ಒಳಗೆ ಬಂದು ಕುತ್ತಿಗೆ ಒತ್ತುತ್ತಿರುವಾಗ ನಾನು ಚಿರಾಡುವುದನ್ನು ಕೇಳಿ ನನ್ನ ತಾಯಿ, ನಮ್ಮ ಚಿಕ್ಕಮ್ಮ, ಚಿಕ್ಕಪ್ಪ ಇವರು ಓಡಿ ಬಂದು ನನ್ನನ್ನು  ನನ್ನ ಗಂಡ ಹಾಗೂ ನಾದಿನಿ ಸುಜಾತಾ ರಿಂದ ಬಿಡಿಸಿಕೊಂಡರು ಇಲ್ಲವಾದರೆ ಅವರು ನನ್ನ ಕುತ್ತಿಗೆ ಹಿಸುಕಿ ಖಲಾಸ ಮಾಡುತ್ತಿದ್ದರು. ಮತ್ತು ನನ್ನ ಗಂಡನ ದೊಡ್ಡಪ್ಪನ ಮಗನಾದ ಗಂಗಾರಾಮ ಮೆಂಬರ್ ಸಾ:ನಾಗಾವಿ ಹಾಗೂ ನನ್ನ ಗಂಡನ ಸಂಬಂಧಿಕನಾದ ಸೋಮು ತಂದ ಸುಬ್ಬು ರಾಠೋಡ ಸಾ:ನಾಗಾವಿ ತಾ:ಸಿಂಧಗಿ ಇವರು  ಕೂಡ ನನಗೆ ಗುಲಬರ್ಗಾದಲ್ಲಿ ಹೇಗೆ ನೌಕರಿ ಮಾಡುತೀ ನಿನಗೆ ಮತ್ತು ನಿನ್ನ ತಮ್ಮನಾದ ರಾಜೇಂದ್ರ ಹಾಗೂ ತಾಯಿ ಸೀತಾಬಾಯಿರವರಿಗೆ ಅಪಹರಿಸಿ ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಹಿಳಾ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ಜಗನಾಥಯ್ಯಾ ಮಠಮತಿ ರವರ ಮದುವೆ ದಿನಾಂಕ: 08.06.2012 ರಂದು ಗುಲಬರ್ಗಾ ಶಹಾಬಜಾರದ ನಿವಾಸಿಯಾದ ಜಗನಾಥಯ್ಯಾ ಎಂಬುವನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ 51 ಸಾವಿರ 1 ತೊಲೆ ಬಂಗಾರ ಮತ್ತು ಗೃಹ ಬಳಕೆ ಸಾಮಾನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ನನ್ನ ಗಂಡನು ಸುಮಾರು 4-5 ತಿಂಗಳು ನನ್ನೊಂದಿಗೆ ಚೆನ್ನಾಗಿದ್ದು  ನಂತರ ದಿನಾಲು  ಕುಡಿದು ಬಂದು ಸಣ್ಣ  ಪುಟ್ಟ ವಿಷಯಗಳಿಗೆ ಜಗಳ ತೆಗೆದು ಹಿಂಸೆಕೊಡುತ್ತಿದ್ದನು.ಹೀಗಿದ್ದು ದಿನಾಂಕ: 08.03.2014 ರಂದು ರಾತ್ರಿ 11.00 ಗಂಟೆಗೆ ನನ್ನ ಗಂಡ ತನ್ನ ತಂದೆ ತಾಯಿಯ ಜೊತೆಗೆ ಜಗಳವಾಡುತ್ತಿದ್ದ ನಾನು ಸುಮ್ಮನೆ ಯಾಕೆ ಜಗಳ ಮಾಡುತ್ತಿದ್ದಿಯಾ ಅಂತಾ ಕೇಳಿದ್ದರಿಂದ  ನನ್ನ ತಂದೆ ತಾಯಿಯ ಜೊತೆ ನಾನು ಜಗಳವಾಡುತ್ತೇನೆ ನಿನಗೇನು ಅಂತಾ ನನಗೆ ಹೊಡೆದು ಕುತ್ತಿಗೆ ಒತ್ತಲಿಕ್ಕೆ ಬಂದನು . ನಾನು ಚೀರಾಡಿ ಅವನಿಂದ  ಬಿಡಿಸಿಕೊಂಡೆ ನಾನು ನನ್ನ ಗಂಡನಿಗೆ ಹೆದರಿಸಬೇಕು ಅಂತಾ ಸೀಮೆ ಎಣ್ಣೆ ಡಬ್ಬಾ ತೆಗೆದುಕೊಂಡು ಎಣ್ಣೆ ಹಾಕಿಕೊಳ್ಳಲು ಪ್ರಯತ್ನಿಸಿದಾಗ ಸ್ವಲ್ಪ ಯಾಕೆ ಹಾಕಿಕೊಳ್ಳುತ್ತಿಯಾ   ಪೂರ್ತಿ ಹಾಕಿಕೋ ಅಂತಾ ಡಬ್ಬಿಯಲ್ಲಿದ್ದ ಪೂರ್ತಿ ಎಣ್ಣೆ ನನ್ನ ಮೇಲೆ  ಸುರಿದು ಕಡ್ಡಿ ಕೊರೆದು ಬೆಂಕಿ ಹಚ್ಚಿದನು  ಆಗ ನನ್ನ ಅತ್ತೆ ಚಂದ್ರಕಲಾ ಹೊರಗಿನಿಂದ ಬಂದು ಬೆಂಕಿ ಹಾರಿಸಿದರು ನಂತರ ನನ್ನ ಅತ್ತೆ,ಮಾವ ನನಗೆ ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ದಿನಾಂಕ: 08-03-2014 ರಂದು 01:30 ಪಿ.ಎಮ್.ಕ್ಕೆ ಶ್ರೀ.ಅಣ್ಣಾರಾಯ ತಂದೆ ಶರಣಪ್ಪ ಆರಿ ಸಾ:ಝಳಕಿ[ಕೆ] ತಾ:ಆಳಂದ ಇವರು ದಿನಾಂಕ: 07-03-2014 ರಂದು ಸಾಯಂಕಾಲ ನನ್ನ ತಮ್ಮ ನಾದ ಜಯಾನಂದ ಇತನು ನಮ್ಮ ಗೌಠಾಣ ಖುಲ್ಲಾ ಜಾಗದಲ್ಲಿ ಆಕಳು ಹಾಲು ಹಿಂಡುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನ ಹಳೇ ದ್ವೇಷದಿಂದ ನಮ್ಮ ಅಣ್ಣ-ತಮ್ಮಕೀಯವರಾದ 1. ಮಲ್ಲಿನಾಥ ತಂದೆ ನಾಗಪ್ಪ ಆರಿ 2. ಶಿವಾನಂದ ತಂದೆ ನಾಗಪ್ಪ ಆರಿ 3. ಲಕ್ಷ್ಮಿಬಾಯಿ ಗಂಡ ನಾಗಪ್ಪ ಆರಿ 4. ರೇಖಾ ತಂದೆ ನಾಗಪ್ಪ ಆರಿ ಸಾ:ಎಲ್ಲರೂ ಝಳಕಿ[ಕೆ] ಇವರೆಲ್ಲರೂ ಕೂಡಿಕೊಂಡು ಬಂದು ಅವರಲ್ಲಿ ಮಲ್ಲಿನಾಥ ಇತನು ನನ್ನ ತಮ್ಮ ಜಯಾನಂದನಿಗೆ ಅವಾಚ್ಯ ಶಬ್ದಗಳಿಂದ ಬೈದು ನಾನು ಹಿಡಿದ ಜಾಗದಲ್ಲಿ ದನಗಳು ಯಾಕೆ ಕಟ್ಟಿದೆ  ಅಂತಾ ಬೈದು ಕಟ್ಟಿಗೆಯಿಂದ ನನ್ನ ತಮ್ಮನ ಬಲಗೈ ಅಂಗೈ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಗಳ ಬಂಧನ :
ದೇವಲ ಗಾಣಗಾಪೂರ ಠಾಣೆ : ದಿನಾಂಕ: 08-03-2014 ರಂದು  ಚವಡಾಪೂರದ ಬಸ್ಸ ನಿಲ್ದಾಣದ ಮುಂದೆ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ಕೊಟ್ಟು ಮಟಕಾ ಜೂಜಾಟ ನಡೆಸುತಿದ್ದಾನೆಂದು ಖಚೀತವಾದ ಬಾತ್ಮಿ ಮೇರೆಗೆ ಸಿಬ್ಬಂದಿ ಹಾಗು ಪಂಚರೋಂದಿಗೆ  ಚವಡಾಪೂರ ಗ್ರಾಮದ ಉಡುಪಿ ಹೊಟೇಲ ಹತ್ತಿರ ಬೆಳಿಗ್ಗೆ 11-10 ಗಂಟೆಗೆ ಬಸ್ಸ ಸ್ಟ್ಯಾಂಡ ಹತ್ತಿರ ಹೋಗಿ ನೋಡಲಾಗಿ ಬಸ್ಸ ಸ್ಟ್ಯಾಂಡ ಮುಂದೆ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಜನರಿಗೆ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಜನರಿಗೆ ಕೂಗಿ ಹೇಳುತ್ತಾ ಜನರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ಕೊಡುತ್ತಿದ್ದಾಗ ದಾಳಿ ಮಾಡಿ ಮಟಕಾ ಜೂಜಾಟ ನಡೆಸುತ್ತಿದವನನ್ನು ಹಿಡಿದು ಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ ತನ್ನ ಹೆಸರು ದತ್ತಪ್ಪ ತಂದೆ ಶಾಂತಪ್ಪ ಜಮಾದಾರ ಸಾ|| ದಣ್ಣೂರ ತಾ|| ಅಫಜಲಪೂರ ಅಂತಾ ತಿಳಿಸಿದನು ಅವನ ವಶದಲ್ಲಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ ನಗದು ಹಣ 235=00 ರೂಪಾಯಿ ಎರಡು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಒಂದು ಬಾಲ ಪೆನ್ನ ದೊರೆತಿದ್ದುಅವುಗಳನ್ನು ಬೆಳಿಗ್ಗೆ 11-15 ಗಂಟೆಯಿಂದ ಮದ್ಯಾಹ್ನ 12-00 ಗಂಟೆಯ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಬಂದು  ಸದರಿಯವನ  ವಿರುದ್ಧ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ  08-03-2014 ರಂದು ನಿಂಬರ್ಗಾ ಗ್ರಾಮದ ಬಸ ನಿಲ್ದಾಣದ ಎದುರುಗಡೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನಿಂಬರ್ಗಾ ಗ್ರಾಮದ ಬಸ ನಿಲ್ದಾಣದ ಮರೆಯಾಗಿ ನಿಂತು ನೋಡಲಾಗಿ ಬಸ ನಿಲ್ದಾಣದ ಎದುರುಗಡೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಏಕನಾಥ ತಂದೆ ಮುಕ್ಕಣ್ಣಾ ಮೂಲಿಮನಿ ಸಾ|| ನಿಂಬರ್ಗಾ, ಸದರಿಯವನಿಂದ  ನಗದು ಹಣ 700/-ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ,  ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 08-03-2014 ರಂದು ಚಿನಮಳ್ಳಿ ಗ್ರಾಮದ ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು  ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ  ಮೇರೆಗೆ  ಸಿಬ್ಬಂದಿ ಹಾಗು ಪಂಚರೊಂದಿಗೆ ಚಿನಮಳ್ಳಿ ಗ್ರಾಮಕ್ಕೆ 3-30 ಪಿಎಂಕ್ಕೆ ತಲುಪಿ ಚಿನಮಳ್ಳಿ ಗ್ರಾಮದ ಜುಮ್ಮಾ ಮಶೀದಿ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರು ಜನರು ದುಂಡಾಗಿ ಕುಳಿತು ಹಣ ಪಟಕ್ಕೆ ಹಚ್ಚಿ ಇಸ್ಪೇಟ ಎಲೆಗಳಿಂದ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿರುವುದನ್ನು ನೋಡಿ ದಾಳಿ ಮಾಡಿ ಹಿಡಿದು ಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ರವಿ ತಂದೆ ಶಿವಲಿಂಗಪ್ಪ ಗುಜ್ಜಾ    2. ಮಹಾಂತೇಶ ತಂದೆ ಗುತ್ತಪ್ಪ ತಳವಾರ   3. ಮಲ್ಕಪ್ಪ ತಂದೆ ಶೇಖಪ್ಪ ತಳವಾರ 4. ಬೀಮಾ ತಂದೆ ಕಾಮಣ್ಣ ಬೋಯಿ 5. ಶಂಕರ ತಂದೆ ದೋಂಡಿಬಾ ಬೋಯಿ 6. ಭೀಂರಾಯ ತಂದೆ ಸಾಯಬಣ್ಣ ಪೂಜಾರಿ ಸಾ : ಎಲ್ಲರು ಚಿನಮಳ್ಳಿ ಅಂತಾ ತಿಳಿಸಿದ್ದು ಸದರಿಯವರಿಂದ ಹೀಗೆ ಒಟ್ಟು 4440-00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 08-03-2014 ರಂದು ಕವಲಗಾ ಗ್ರಾಮದ ಅಲಾಬ ದೇವರು ಕುಡುವ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ ಐ ಹಾಗು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ  ಕವಲಗಾ ಗ್ರಾಮಕ್ಕೆ ಹೋಗಿ ಬಾತ್ಮಿ ಬಂದ ಸ್ಥಳವಾದ ಅಲಾಬ ದೇವರು ಕುಡುವ ಕಟ್ಟೆಯ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ 05 ಜನ ವ್ಯಕ್ತಿಗಳು ಅಲಾಬ ದೇವರು ಕುಡುವ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ  ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರು ವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 05 ಆಸಾಮಿ ಜನರನ್ನು ಹಿಡಿದು ಒಬ್ಬೋಬ್ಬ ರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 1. ನಾಗೇಂದ್ರಪ್ಪ ತಂದೆ ಕಲ್ಯಾಣಿ ನಿಂಬಾಳ 2. ಈರಯ್ಯ ತಂದೆ ಸಂಗಯ್ಯ ಮಠಪತಿ 3. ಮಹಾದೇವ ತಂದೆ ಸಿದ್ದಣ್ಣ ಹಡಪಾದ 4. ರಮೇಶ ತಂದೆ ವಿಶ್ವನಾಥರಾವ ಶಿರಗೇರಿ 5. ಮೈಬೂಬಸಾಬ ತಂದೆ ಜಮಾಲಸಾಬ ಮಕಾನದಾರ ಸಾ : ಎಲ್ಲರು ಕವಲಗಾ ರವರುಗಳಿಂದ  ಒಟ್ಟು 5645/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.