POLICE BHAVAN KALABURAGI

POLICE BHAVAN KALABURAGI

31 August 2014

Gulbarga District Reported Crimes

ಅಫಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಶಾಂತಯ್ಯಾ ತಂದೆ ರಾಮಯ್ಯಾ ಕಲಾಲ  ಸಾಃ. ವಿಜಯ ನಗರ ಕಾಲೋನಿ ಗುಲಬರ್ಗಾ ರವರು ತಮ್ಮ  ಮೋಟಾರ ಸೈಕಲ ನಂ. ಕೆ.ಎ 32 ಎಸ್ 1882 ನೇದ್ದನ್ನು ವಿಜಯ ನಗರ ಕಾಲೂನಿ ಕ್ರಾಸ್ ಹತ್ತಿರ ಇರುವ ಎಸ್.ಬಿ.ಐ ಬ್ಯಾಂಕ ಹತ್ತಿರ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಆಗಿ ತನ್ನಿಂದ ತಾನೆ ಬ್ಯಾಲನ್ಸ ತಪ್ಪಿ ಬಿದ್ದು ತಲೆಗೆ ರಕ್ತಗಾಯ ಮಾಡಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಸರಸಂಬಾ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ:196/3 ನೇದ್ದರಲ್ಲಿ ನಿರ್ಮಿಸಿದ ಏರಟೇಲ್ ಟಾವರ RPSAR-01 IN-1096310 ಇದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24 ಬ್ಯಾಟ್ರಿಗಳು ಅ.ಕೀ.24,000=00 ಸಾವಿರದ್ದು ಯಾರೋ ಅಪರಿಚಿತ ಕಳ್ಳರು ದಿನಾಂಕ:22-07-2014 ರಂದು ರಾತ್ರಿ 10;00 ಪಿ.ಎಂ.ದಿಂದ ದಿ:23/07/2014 ರಂದು 05;30 ಎ.ಎಂ ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ. ಮಲ್ಲಿಕಾರ್ಜುನ. ಎಸ್. ಕಲಬುರ್ಗಿ ಸಾ: ಕಾವೇರಿ ನಗರ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 August 2014

Gulbarga District Reported Crimes

ಅಂತರ ಜಿಲ್ಲಾ ಕಳ್ಳರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ:-25/05/2014 ರಿಂದ ದಿನಾಂಕ:-16/08/2014 ರ ಅವದಿಯಲ್ಲಿ ಮಹಗಾಂವ ಪೊಲೀಸ ಠಾಣೆ  ಮತ್ತು ಕಮಲಾಪುರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪೊಟೋ ಸ್ಟಡಿಯೋ , ಕಿರಾಣಾ ಅಂಗಡಿ ಮತ್ತು ವೈನಶಾಪಗಳಲ್ಲಿ ಕಳ್ಳತನ ಆಗಿರುವ ಹಿನ್ನಲೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದು ಮಾನ್ಯ ಎಸ್.ಪಿ ಸಾಹೇಬರು ಗುಲಬರ್ಗಾ , ಮಾನ್ಯ ಅಪರ ಎಸ್.ಪಿ ಸಾಹೇಬರು ಗುಲಬರ್ಗಾ ಮತ್ತು ಎ.ಎಸ್.ಪಿ ಗ್ರಾಮಾಂತರ ಉಪವಿಬಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಶ್ರೀ ಡಿ.ಜಿ. ರಾಜಣ್ಣ ಸಿಪಿಐ ಗ್ರಾಮೀಣ ವೃತ್ತ ಇವರ ನೇತ್ವತ್ವದಲ್ಲಿ ಶ್ರೀ ಬಾಪುಗೌಡ ಪಿಎಸ್.ಐ ಮಹಾಗಾಂವ ಪೊಲೀಸ ಠಾಣೆ ಮತ್ತು ಶ್ರೀ ಸಿದ್ರಾಮಪ್ಪ ಎ.ಎಸ್.ಐ ಕಮಲಾಪುರ ಠಾಣೆ ಸಿಬ್ಬಂದಿ ಜನರಾದ ಕೃಷ್ಣಾರೆಡ್ಡಿ, ವೆಂಕಟ ರೆಡ್ಡಿ, ಖತಲಶಾ, ಸೋಮಶೇಖರ, ಮತ್ತು ದತ್ತಾತ್ರೇಯನ್ನೊಳಗೊಂಡ ತಂಡ ರಚಿಸಿದ್ದು ಸದರಿ ತಂಡವು ನಿನ್ನೆ ದಿನಾಂಕ:-28/08/2014 ರಂದು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ 1) ಮಾಣಿಕ ತಂದೆ ರಾಮಲು ಸಿಣಗೇರಿ 2) ಬಾಬು ತಂದೆ ರಮೇಶ ರೆಡ್ಡಿ, 3) ಅಶೋಕ ತಂದೆ ಮಾದುರಾವ ದೋಬಿ ಎಂಬುವರನ್ನು ವಿಚಾರಣೆಗೆ ಒಳಪಡಿಸಿದ್ದು ಆರೋಪಿತರು ಕಳ್ಳತನ ಮಾಡಿದ 1) ಒಂದು ವಿಡಿಯೋ ಕ್ಯಾಮರಾ 2) ಒಂದು ಕಂಪ್ಯೂಟರ್ ಮಾನಿಟರ್, ಒಂದು ಸಿಪಿಯು 3)  ಎರಡು ನಿಕ್ಕನ ಪೊಟೋ ಕ್ಯಾಮರಾ 4) ಕಿರಾಣಿ ಅಂಗಡಿಯಲ್ಲಿ ಕಳ್ಳತನ ಮಾಡಿದ ಸಿಗರೇಟ 400 ಡಬ್ಬಿಗಳು  ಸೇರಿದಂತೆ ಸದರಿ ಆಪಾದಿತರಿಂದ 2,16,000/-ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.  
ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ರೋಜಾ ಠಾಣೆ : ಗುಲಬರ್ಗಾ ನಗರದ ನೂರ ಬಾಗ್ ಪ್ರದೇಶದಲ್ಲಿ ಈ ಹಿಂದೆ ಕಲ್ವರ್ಟ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ದಿನಾಂಕ: 28/08/2014, 27/08/2014 ಮತ್ತು 28/08/2014 ರಂದು ಭಾರಿ ಮಳೆಯಾಗಿದ್ದರಿಂದ ನೂರ ಬಾಗ ಪ್ರದೇಶದಲ್ಲಿ ಕಲ್ವರ್ಟ ಪರಿವೀಕ್ಷಣೆ ಮಾಡುವ ಸಮಯದಲ್ಲಿ 3 ದಿವಸದಿಂದ ಭಾರಿ ಮಳೆಯಿಂದ ಪ್ರಭಾವ ಉಂಟಾಗಿರುವ ಪ್ರಯುಕ್ತ ನೂರಬಾಗ ಬಡಾವಣೆಯಲ್ಲಿ ಮಳೆಯ ನೀರು ಮನೆಗೆ ನುಗ್ಗುವ ಸಂಬವ ಇರುವದನ್ನು ಪರಿಗಣಿಸಿದ ಇಂದು ದಿನಾಂಕ: 29/08/2014 ರಂದು 11:00 ಎಎಮ್ ಸುಮಾರಿಗೆ ಪಾಲಿಕೆಯ ಸಿಬ್ಬಂದಿಗಳಾದ ಶ್ರೀ ಆರೀಫ ಹುಸೇನ ಕಿರಿಯ ಅಭಿಯಂತರರು, ಶ್ರೀ ಪೀರಪ್ಪಾ ಪೂಜಾರಿ ನೈರ್ಮಲ್ಯ ನಿರೀಕ್ಷಕರು, ಶ್ರೀ ಎಸ.ಬಿ. ಕಟ್ಟಿಮನಿ ಆಯುಕ್ತರು ಮಹಾನಗರ ಪಾಲಿಕೆ ಗುಲಬರ್ಗಾ ರವರು ಸದರಿ ಸ್ಥಳ ಪರಿವೀಕ್ಷಣೆ ಮಾಡಲು ಹೋದಾಗ ಸ್ಥಗಿತಗೊಂಡ ಕಲ್ವರ್ಟನ್ನು ಒಡೆದು ನೀರು ಹರಿದು ಹೋಗಲು ಕಲ್ವರ್ಟ ಒಡೆದಿರುವ ಬಗ್ಗೆ ವಿಚಾರಿಸಿದಾಗ ಬಡಾವಣೆಯ ನಂ.1] ಸೈಯ್ಯದ ಖುಬುಲುಲ್ಲಾ ಹುಸೇನಿ @ ಸಾಜೀದ 2] ಹನ್ನಾ ಪಟೇಲ 3] ಕಮ್ಮು ತಂದೆ ಸೈಯ್ಯದ ಖುಬುಲುಲ್ಲಾ ಹುಸೇನಿ 4] ಅರ್ಶದ ಪಟೇಲ ಈ ನಾಲ್ಕು ಜನ ಪಾಲಿಕೆಯ ಸಿಬ್ಬಂದಿಗಳಿಗೆ ಹಾಗೂ ಆಯುಕ್ತರವರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೆಲಸದಲ್ಲಿ ಅಡೆತಡೆ ಉಂಟು ಮಾಡಿರುತ್ತಾರೆ. ಅಂತಾ ಶ್ರೀ ಮಹ್ಮದ ಹಾಜಿ ತಂದೆ ಮಹ್ಮದ ಇಬ್ರಾಹಿಮ ವಲಯ ಆಯುಕ್ತರು ಮಹಾನಗರ ಪಾಲಿಕೆ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಮಸಣಪ್ಪ ಪರೀಟ ಸಾ: ಧಂಗಾಪೂರ ಇವರು ಸುಮಾರು 6 ತಿಂಗಳ ಹಿಂದೆ ಬಸವನಗೌಡ ತಂದೆ ಮಲ್ಲಣಗೌಡ ಪಾಟೀಲ @ ನಾಗೂರ ಸಾ: ಧಂಗಾಪೂರ ಇವರ ಆಕಳು ನಮ್ಮ ಹೊಲದಲ್ಲಿ ನುಗ್ಗಿದ ಬಗ್ಗೆ ವಿಚಾರಿಸಿದ್ದಕ್ಕೆ ಜಗಳವಾಗಿದ್ದು ಅದೇ ದ್ವೇಷ ಕಟ್ಟಿಕೊಂಡು ಸದರಿ ಆರೋಪಿತನು ದಿನಾಂಕ 28-08-2014 ರಂದು ರಾತ್ರಿ 10 ಗಂಟೆಗೆ  ಫೀರ್ಯಾದಿ ಹಾಗೂ ಆಕೆಯ ಕೇರಿಯವರು ಶ್ರೀ ಮಲ್ಲಿಕಾರ್ಜುನ ದೇವರ ಗುಡಿಯಲ್ಲಿ ಭಜನೇ ಮಾಡುತ್ತಿದ್ದಾಗ ಸದರಿ ಆರೋಪಿತನಾದ ಬಸವನಗೌಡ ತಂದೆ ಮಲ್ಲಣಗೌಡ ಪಾಟೀಲ @ ನಾಗೂರ ಇತನು ಫೀರ್ಯಾದಿಗೆ ಏ ರಂಡಿ ನಿನಗೆ ಸೊಕ್ಕು ಬಹಳ ಬಂದಿದೆ  ಅಂತಾ ಅವಾಚ್ಯ ಶಬ್ದಗಳಿಂದ ಬೈದು ಸಿದ್ದಣ್ಣ ತಂದೆ ಬಸಣ್ಣ ಆಳಂದ ಇವರ ಹತ್ತಿರ ಇದ್ದ ತಬಲಾ ತಗೆದುಕೊಂಡು ಕುದಲು ಹಿಡಿದು ಜಗ್ಗಾಡಿ  ಫೀರ್ಯಾದಿಯ ತಲೆಯ ಮೇಲೆ ಹೊಡೆದು ಗುಪ್ತ  ಗಾಯ ಮಾಡಿ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಶಾಹೀದ ಕರೀಮಖಾನ ತಂದೆ ಸರ್ದಾರ ಕರೀಮಖಾನ, ಸಾಃ ಮ. ನಂ. 7-798, ಮಿಜಗುರಿ ನಯಾಮುಲ್ಲಾ ಗುಲಬರ್ಗಾ ರವರ ಮಹಿಂದ್ರಾ ಸೆಂಟ್ರೊ ಮೋಟಾರ ಸೈಕಲ ಇದ್ದು ದಿನಾಂಕ 29-08-2014 ರಂದು ಬೆಳಗ್ಗೆ ತನ್ನ ಮಗ ಓಯಿಜ ಅಹ್ಮದ ಖಾನ ವಃ 16 ಈತನು ಮನೆಯಿಂದ ಯಾರಿಗೂ ಹೇಳದೆ ಮನೆಯಿಂದ ಹೊಸ ಮಹಿಂದ್ರಾ ಸೆಂಟ್ರೊ ಮೋಟಾರ ಸೈಕಲ ಟ್ಯೂಷನಕ್ಕೆ ತೆಗೆದುಕೊಂಡು ಹೋಗಿ 8-30 ಎ.ಎಮ್ ಕ್ಕೆ ಬಿ.ಬಿ ಕಾಲೇಜ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನಿಂದ ತಾನು ಬಿದ್ದು ಗಾಯ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆ ನೀರಿನಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾದ ಪ್ರಕರಣ :
ಮುಧೋಳ ಠಾಣೆ : ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಖಂಡೇರಾಯನಪಲ್ಲಿ ಗ್ರಾಮದ ಸುತ್ತಮುತ್ತಲು ದಿನಾಂಕ: 28-08-14 ರಂದು 4:30 ಪಿ ಎಮ್ ಸುಮಾರಿಗೆ ಧಾರಕಾರವಾಗಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ಪ್ರವಾಹ ಬಂದು ಗ್ರಾಮದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳು ಹಾಗೂ ಹೊಟೇಲಗಳು ಹಾಗೂ ಗ್ರಾಮಸ್ಥರ ಮನೆಗಳಲ್ಲಿ ನೀರು ಹೋಗಿ ಮನೆಯಲ್ಲಿದ್ದ ದವಸ ದಾನ್ಯಗಳು ಹಾಗೂ ಇನ್ನಿತರ ಬೆಲೆ ಬಾಳುವ ಸಾಮಾನುಗಳು ಮಳೆ ನೀರಿನಿಂದ ಹಾನಿಗಿಡಾಗಿ ಲುಕಸಾನ ಆಗಿದ್ದು ಇದರ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಮುಧೋಳ ಠಾಣೆಯ ಸಿಬ್ಬಂದಿಯವರು ಕೂಡಿ ಸದರಿ ಸ್ಥಳಕ್ಕೆ ಬೇಟಿ ಕೊಟ್ಟಿದ್ದು ಹಾಗೂ ಚಿಂಚೋಳಿ ಉಪ ವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಂಚೋಳಿ ರವರು ಕೂಡ ಬೇಟಿ ಕೊಟ್ಟಿರುತ್ತಾರೆ.  ಮತ್ತು ಕಂದಾಯ ಇಲಾಖೆಯ ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರು ಹಾಗೂ ಮಾನ್ಯ ತಹಸೀಲ್ದಾರರೂ ಸೇಡಂ ರವರು ಹಾಗೂ ಅವರ ಸಿಬ್ಬಂದಿಯವರು ಕೂಡ ಸ್ಥಳಕ್ಕೆ ಆಗಮಿಸಿ ಜನರ ಆಸ್ತಿಗೆ ಹಾಗೂ ಪ್ರಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗದಂತೆ ಪರಿಹಾರ ಉಪಾಯಗಳನ್ನು ಮಾಡಿ ಸೌರಂಕ್ಷಣೆ ಮಾಡಿದ್ದು ಹಾಗೂ ಸದರಿ ಸ್ಥಳಕ್ಕೆ ಮಾನ್ಯ ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಇವರು ಕೂಡ ಸ್ಥಳಕ್ಕೆ ಬೇಟಿ ನೀಡಿರುತ್ತಾರೆ. ಸದರಿ ಘಟನೆಯಲ್ಲಿ ಒಟ್ಟು 35 ಜನರ ಆಸ್ತಿ ಪಾಸ್ತಿಗೆ ಹಾಗೂ ದವಸ ಧಾನ್ಯಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿರುತ್ತದೆ

29 August 2014

Gulbarga District Reported Crimes

                                                  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ವೆಂಕಟೇಶ ತಂದೆ ಮಲಕಪ್ಪ ಸೂಲದೋರ ಸಾ : ಗಾಜಿಪೂರ ಗುಲಬರ್ಗಾರವರು  ದಿನಾಂಕ:-28/08/2014 ರಂದು ಸಂಜೆ 06:15 ಗಂಟೆ ಸುಮಾರಿಗೆ ಗುಲಬರ್ಗಾ ಅಫಜಲಪುರ ರೋಡಿನ ಶರಣಸಿರಸಗಿ ಗ್ರಾಮ ದಾಟಿ ಎಸ್.ಬಿ ಡೈರಿ ಹತ್ತಿರ ರೋಡಿನ ಎಡಗಡೆಯಿಂದ ಗುಲಬರ್ಗಾದಿಂದ ಅಫಜಲಪುರ ಕಡೆಗೆ ಹೋಗುವಾಗ ಎದರಿನಿಂದ ಮೃತ ಅಮರಸಿಂಗ ಇತನು ತನ್ನ ವಶದಲ್ಲಿದ್ದ ಇನೋವಾ ಕಾರ ನಂ ಕೆಎ-04 ಡಿ-2626 ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತದಿಂದ ಚಲಾಯಿಸಿಕೊಂಡು ಬಂದವನೇ ತನ್ನ ಮುಂದೆ ಇದ್ದ ಒಂದು ವಾಹನಕ್ಕೆ ಸೈಡ ಹೋಡೆಯಲು ಹೋಗಿ ಓವರಟೇಕ ಮಾಡಿ ಎದರಿಗೆ ಬರುತ್ತಿದ್ದ ಫಿರ್ಯಾದಿ ಬುಲೆರೋ ಜೀಪಗೆ  ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿಗೆ ಬಲಗೈ ಮತ್ತು ಬಲತೊಡೆಗೆ ಭಾರಿ ಒಳಪೆಟ್ಟಾಗಿ ಮುರಿದಂತೆ ಆಗಿದ್ದು ಮೆಕ್ಯಾನಿಕನಿಗೆ ಮುಖಕ್ಕೆ ತಚಿದ ರಕ್ತಗಾಯವಾಗಿದ್ದು ಚಾಲಕ ಅಮರಸಿಂಗ ಇತನಿಗೆ ಎಡಗಣ್ಣಿನ ಹುಬ್ಬಿನ ಮೇಲೆ ಗದಕ್ಕೆ ಹಾಗು ತಲೆಗೆ ಹಾಗು ಇತರೇ ಕಡೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.             
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಪುಷ್ಪಾ ಗಂಡ ಸೊಮ್ಲು ರಾಠೋಡ  ಸಾ: ಪ್ಲಾಟ ನಂ 1 ಸರಸ್ವತಿಪೂರಂ ವಿಶ್ವವಿದ್ಯಾಲಯ ಹಿಂದುಗಡೆ ಕುಸನೂರ ರೋಡ ಗುಲಬರ್ಗಾ ರವರು . ದಿನಾಂಕ 28-08-2014 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಚಪ್ಪಲ ಬಜಾರ ಕ್ರಾಸದಿಂದ ಜನತಾ ಬಜಾರ ಕ್ರಾಸ ಕಡೆಗೆ ನಾನು ಮತ್ತು ನನ್ನ ಗಂಡ ಹಾಗು ನನ್ನ ತಂಗಿ ಪಾರ್ವತಿ ಮೂರು ಜನರು ಗಣಪತಿ ಖರಿದಿ ಮಾಡುವ ಸಲುವಾಗಿ ನಡೆದುಕೊಂಡು ಹೋಗುವಾಗ ಹಳೆ ಮಾರ್ಕೆಟ ಆಸೀಫ ಗಂಜ ಶಾಲೆ ಎದುರು ರೋಡಿನ ಮೇಲೆ ಹಿಂದಿನಿಂದ ಮೋ/ಸೈಕಲ ನಂಬರ ಎಮ್.ಹೆಚ್-12 ಇಡಿ-2691 ರ ಸವಾರ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ರೆಹಮತ ಜಹಾ ಗಂಡ ಪಪ್ಪುಖಾನ ಸಾ: ಪಲಕನಾಮ ಗಾಜಿ ಮಲಕ ಕಾಲೋನಿ ದುರ್ಜಾನಾ ಹೊಟೇಲ ಹತ್ತಿರ ಹೈದ್ರಾಬಾದ  ಆಂದ್ರಪ್ರದೇಶ ಇವರು ಮತ್ತು ಮಕ್ಕಳು ಮತ್ತು ನಮ್ಮ ಸಂಬಂಧಿಕರು ಕೂಡಿಕೊಂಡು ಗುಲಬರ್ಗಾದ ಬಂದೇನವಾಜ ದರ್ಶನಕ್ಕೆಂದು ಹೈದ್ರಾಬಾದದಿಂದ ದಿನಾಂಕ 23-8-2014 ರಂದು ಗುಲಬರ್ಗಾಕ್ಕೆ ಬಂದಿದ್ದು ದಿನಾಂಕ 24-8-2014 ರಂದು ಗುಲಬರ್ಗಾದ  ಬಂದೇ ನವಾಜ ದರ್ಗಾದ ದೇವರ ದರ್ಶನ ಮಾಡಿಕೊಂಡು ದರ್ಗಾದಲ್ಲಿ ಯೇ ಉಳಿದುಕೊಂಡೆನು  ಮದ್ಹಾನ್ಹ 3-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಸನಾ ಮತ್ತು ನಮ್ಮ ಸಂಬಂಧಿ ಮಗಳಾದ ರಾಣಿ ಇಬ್ಬರು ಕಾಣೆಯಾಗಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಸನಾ ಮತ್ತು ರಾಣಿ ಇಬ್ಬರು ಪತ್ತೆಯಾಗಿರುವುದಿಲ್ಲಾ ಕಾರಣ ಕಾಣೆಯಾದ ಸನಾ ಮತ್ತು ರಾಣಿ ಇವರಿಗೆ ಪತ್ತೆ ಮಾಡಿಕೊಡಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಮಜಾದಶೇಖ ತಂದೆ ಅಬ್ದಲ ರಜಾಕ ಸಾ|| ಮೊಮಿನಪೊರಾ ಗುಲಬರ್ಗಾ ಇವರು ದಿನಾಂಕ: 08/08/2014 ರಂದು ಸಾಯಂಕಾಲ ಫೀರೋಜಾಬಾದ ಖಲಿಫತ ರೇಹಮಾನ ದರ್ಗಾಕ್ಕೆ ಜಿಯಾರತ ಕುರಿತು ನನ್ನ ಸ್ಪೆಂಡರ ಪ್ಲಸ್ ಮೋಟಾರ ಸೈಕಲ ನಂ: ಕೆಎ-32,ಇಎಫ- 2285 ನೆದ್ದನ್ನು ತೆಗೆದುಕೊಂಡು ಹೋಗಿ ದರ್ಗಾ ಎದುರಿನ ಗೇಟ್ ಮುಂದುಗಡೆ 5-30 ಪಿಎಮ್ ಕ್ಕೆ ನಿಲ್ಲಿಸಿ ಹ್ಯಾಂಡಲ ಲಾಕ ಹಾಕಿ ದರ್ಗಾ ಒಳಗಡೆ ಹೋಗಿ ಜಿಯಾರಾತ ಮಾಡಿ 6-00 ಗಂಟೆ ಸಂಜೆ ಮರಳಿ ಬಂದು ನೋಡಲಾಗಿ ನಾನು ನಿಲ್ಲಿಸಿ ಹೋದ ಜಾಗೆಯಲ್ಲಿ ಸದರಿ ಮೋಟಾರ ಸೈಕಲ ಇರಲಿಲ್ಲಾ ದರ್ಗಾದ ಸುತ್ತ ಮುತ್ತಾ ಹುಡುಕಾಡಲಾಗಿ ಸಿಕ್ಕರಲಿಲ್ಲಾ ಯಾರೊ ಕಳ್ಳರು ಕಳವೊ ಮಾಡಿಕೊಂಡು ಹೋಗಿದ್ದು ಸದರಿ ಮೋಟಾರ ಸೈಕಲನ್ನು ಹುಡಕಲು ಶಾಹಾಬಾದ, ವಾಡಿ ,ಗುಲಬರ್ಗಾಗಳಲ್ಲಿ  ತಿರುಗಾಡಿ ಹುಡುಕಾಡಿದರು ಸಿಕ್ಕಿರುವದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗದೆ. 

27 August 2014

Gulbarga District Reported Crimes


ಮೂರು ಜನ ಅಂತರ್ ರಾಜ್ಯ ಮೋಟಾರ ಸೈಕಲ್ ಕಳ್ಳರ ಬಂದಿಸಿ ಅವರಿಂದ 16 ಮೋಟಾರ ಸೈಕಲಗಳನ್ನು ವಶಪಡಿಸಿಕೊಂಡಿದ್ದು
ಮಾನ್ಯ ಶ್ರೀ ಅಮೀತಸಿಂಗ್ ಎಸ್.ಪಿ.ಸಾಹೇಬ ಗುಲಬರ್ಗಾ,  ಮಾನ್ಯ ಶ್ರೀ ಬಿ. ಮಹಾಂತೇಶ ಅಪರ ಎಸ್.ಪಿ.ಸಾಹೇಬ ಗುಲಬರ್ಗಾ ಮತ್ತು ಮಾನ್ಯ ಶ್ರೀ ಉದಯಕುಮಾರ ಎಂ.ಬಿ. ಡಿ.ಎಸ್.ಪಿ. ಸಾಹೇಬ (ಬಿ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಚೌಕ ಪೊಲೀಸ ಠಾಣೆಯ ಪಿ.ಐ. ಶ್ರೀಉಮಾಶಂಕರ.ಬಿ. ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಅಂತರ್ ರಾಜ್ಯ ಮೋಟಾರ ಸೈಕಲ್ ಕಳ್ಳರ ಮಾಹಿತಿ ಸಂಗ್ರಹಿಸಿ ಚೌಕ ಠಾಣೆಯ ಶ್ರೀ ಪ್ರದೀಪಕೊಳ್ಳಾ ಪಿ.ಎಸ್.ಐ.(ಕಾ&ಸು). ಶ್ರೀ ಅಪ್ಪಾರಾವ ಎ.ಎಸ್.ಐ. ಶ್ರೀಬಸವರಾಜ. ಎ.ಎಸ್.ಐ. ಮತ್ತು ಸಿಬ್ಬಂದಿಯವರಾದ ಶಿವಾರಾಜ ಪಾಟೀಲ ಹೆಚ್.ಸಿ. ಮಹಾಂತೇಶ ಪಿಸಿವಿಶ್ವನಾಥ ಪಿಸಿ, ಶಿವಾನಂದ ಯಡ್ರಾಮಿ ಪಿಸಿ, ಬಂದೇನವಾಜ ಪಿಸಿ, ಪ್ರೇಮಸಿಂಗ್ ಪಿಸಿ, ಕೂಡಿಕೊಂಡು ಅಂತರ್ ರಾಜ್ಯ ಮೋಟಾರ ಸೈಕಲ್ ಕಳ್ಳರಾದ 1) ಅಮೂಲ ತಂದೆ ಆನಂದ ಕ್ಷೇತ್ರಿ ಸಾ ಕಿಣ್ಣಿ  ತಾಃ ಅಕ್ಕಲಕೋಟ್ ಜಿಃ ಸೋಲಾಪೂರ, 2) ಪರಶುರಾಮ @ ಪ್ರಶಾಂತ ತಂದೆ ಶಿವಾಜಿ ಸಾಸ್ವಿ ಸಾಃ ಕಿಣ್ಣಿ ತಾಃ ಅಕ್ಕಲಕೋಟ್ ಜಿಃ ಸೋಲಾಪೂರ, ಹಾಗೂ 3) ರಾಜೇಂದ್ರ @ ರಾಜು ತಂದೆ ಪ್ರಭುಲಿಂಗ್ ಸಾಃ ಧರ್ಮವಾಡಿ ತಾಃ ಆಳಂದ ಜಿಃ ಗುಲಬರ್ಗಾ ಇವರನ್ನು ದಿನಾಂಕ 27.08.2014 ರಂದು ದಸ್ತಗಿರ ಮಾಡಿ ಸದರಿಯವರು ಕಳ್ಳತನ ಮಾಡಿದ ಅಂದಾಜ 7 ಲಕ್ಷ 85 ಸಾವಿರ ರೂಪಾಯಿ ಬೆಲೆಬಾಳುವ ಒಟ್ಟು 16 ಮೋಟಾರ ಸೈಕಲಗಳನ್ನು ಜಪ್ತಿ ಮಾಡಿಕೊಂಡು ಸದರಿ ಮೂರು ಜನ ಮೋಟಾರ ಸೈಕಲ್ ಕಳ್ಳರಿಗೆ ದಸ್ತಗಿರ ಮಾಡಿ ನ್ಯಾಯಾಂಗ ಬಂಧನ ಕುರಿತು ಕಳುಹಿಸಲಾಗಿದೆ.

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂದನ :
ಅಫಜಲಪೂರ ಠಾಣೆ : ದಿನಾಂಕ:- 26/08/2014 ರಂದು ಬೆಳಿಗ್ಗೆ ಉಡಚಾಣ ಗ್ರಾಮದ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ್ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1. ದೀಲಿಪ ತಂದೆ ಅಬುಬಕರ ಬಡದಾಳ 2. ಶಿವಾನಂದ ತಂದೆ ಅಣ್ಣಪ್ಪಾ ಮೇತ್ರ 3. ವಿಠಲ ತಂದೆ ಗಣಪತಿ ಕಡಲಗಿ 4. ಸಿದ್ಧರ್ಥ ತಂದೆ ನಿಂಗಪ್ಪ ದೊಡ್ಡಮನಿ 5. ಲಗಮಣ್ಣ ತಂದೆ ಕಾಸಣ್ಣಾ ಪೂಜಾರಿ 6. ಮಕ್ತುಮ ತಂದೆ ವಜೀರಸಾಬ ಮುಜಾವರ ಸಾ : ಎಲ್ಲರು ಉಡಚಣ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ 1290/- ರೂ ಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ಮಾಣಿಕಪ್ಪ ತಂದೆ ಈರಣ್ಣ ಕುಂದೇಲ್ ಸಾ: ಕುರಕುಂಟಾ ಇವರ ಮಗಳಾದ ವೀಣಾ ಇವಳು ದಿನಾಂಕ 18-07-2014 ರಂದು ಶಾಲೆಗೆ ಹೋದವಳು ಮನೆಗೆ ಬಂದಿಲ್ಲಾ ಅಂತ ಗೊತ್ತಾಗಿ  ನಾನು ಮತ್ತು ನನ್ನ ಹೆಂಡತಿ ಕೂಡಿ ಶಾಲೆಯ ಕಡೆಗೆ ಹೋಗಿ ಹುಡುಕಾಡಿದರೂ ಎಲ್ಲಿಯು ಅವಳ ಸುಳಿವು ಸಿಗಲಿಲ್ಲದ್ದರಿಂದ, ಮರುದಿವಸ ದಿನಾಂಕ: 19-07-2014 ರಂದು ಅವಳ ಶಾಲೆಗೆ ಹೋಗಿ ಮುಖ್ಯ ಗುರುಗಳಿಗೆ  ವಿಚಾರಿಸಲು ಆಗ ಅವರು ತಿಳಿಸಿದ್ದೇನೆಂದರೆ ನಿಮ್ಮ ಮಗಳಾದ ವೀಣಾ ಇವಳು ನಿನ್ನೆ ದಿವಸ ಮದ್ಯಾಹ್ನ 1230 ಗಮಟೆಯ ಸುಮಾರಿಗೆ ಆರಾಮ ಇರದ ಕಾರಣ ಮನೆಗೆ ಹೋಗುವುದಾಗಿ ಹೇಳಿ ಹೋದಳು ಅಂತ ತಿಳಿಸಿದರು. ಆಗ ನಾನು ಅವಳ ಗೆಳತಿಯರಿಗೆ ವಿಚಾರಿಸಿದಾಗ ಅವರು ಕೂಡ 1230 ಗಂಟೆಯ ಸುಮಾರಿಗೆ ಮನೆಗೆ ಹೋಗಿತ್ತೇನೆ ಅಂತ ಹೇಳಿ ಹೋದ ಬಗ್ಗೆ ತಿಳಿಸಿದರು. ನಂತರ ನಾವು ಇಲ್ಲಿಯ ವರೆಗೆ  ಎಲ್ಲಾ ಕಡೆಗೆ  ಹುಡುಕಾಡಿದರೂ ಮತ್ತು ನಮ್ಮ ಸಂಭಂದಿಕರಿಗೆ ಪೋನ್ ಮಾಡಿ ವಿಚಾರಿಸಿದರು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ  ಇದನ್ನು ನೋಡಿದಾಗ ನಮ್ಮ ಮಗಳಾದ ವೀಣಾ ಇವಳಿಗೆ  ದಿನಾಂಕ: 18-07-2014 ರಂದು ಮದ್ಯಾಹ್ನ 1300 ಗಂಟೆಯ ಸುಮಾರಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಜಗದೇವಿ ಗಂಡ ಬಸಣ್ಣಾ ರೋಡಗಿ ಸಾ|| ನಿಂಬರ್ಗಾ ರವರ ತಂಗಿಯಾದ ಶಿವಲಿಲಾ ಇವರ ಮಗನಾದ ವೀರೆಶ @ ಕಿರಣ ತಂದೆ ಸಿದ್ದಣ್ಣ ಪೆದ್ದಿ ವ|| 17 ವರ್ಷ, ಇವನು 6 ವರ್ಷಗಳಿಂದ ನಮ್ಮ ಮನೆಯಲ್ಲಿಯೆ ಮತ್ತು ನಮ್ಮ ಊರಲ್ಲಿಯೆ ಶಿಕ್ಷಣ ಕಲಿಯುತ್ತಾ ಇದ್ದನು, ಈ ವರ್ಷ ಎಸ್.ಎಸ್.ಎಲ.ಸಿ ಪರೀಕ್ಷೆಯಲ್ಲಿ ಪಾಸಾಗಿರುತ್ತಾನೆ. ದಿನಾಂಕ 23/07/2014 ರಂದು ಬೆಳಿಗ್ಗೆ 1100 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ವೀರೆಶನು ನನ್ನ ತಂದೆ ತಾಯಿಯ ಜೀವ ನೆನಸುತ್ತಿದ್ದು ಊರಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ. ಸಾಯಂಕಾಲ 0600 ಗಂಟೆ ಸುಮಾರಿಗೆ ಅವನ ತಂದೆಯಾದ ಸಿದ್ದಣ್ಣಾ ಇವರಿಗೆ ನಾನು ಫೊನ ಮುಖಾಂತರ ವಿಚಾರಿಸಲಾಗಿ ವೀರೆಶ @ ಕಿರಣನು ಇಲ್ಲಿಗೆ ಬಂದಿರುವದಿಲ್ಲ ಅಂತ ತಿಳಿಸಿರುತ್ತಾರೆ. ಗಾಬರಿಯಾಗಿ ನಾನು ನಿಂಬರ್ಗಾ ಗ್ರಾಮದ ಬಸ ನಿಲ್ದಾಣ ಹಾಗೂ ಊರಿನ ಇತರೆ ಕಡೆಗಳಲ್ಲಿ ವಿಚಾರಿಸಲಾಗಿ ಅವನ ಬಗ್ಗೆ ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಂತೋಷ ಕುಮಾರ ತಂದೆ ಬಾಬುರಾವ ಬನಶಟ್ಟಿ ಸಾ:ಸಂತೋಷ ಕಾಲೋನಿ ಅಳಂದ ರಸ್ತೆ ಗುಲಬರ್ಗಾ ಇವರು ದಿನಾಂಕ:  26-08-2014 ರಂದು ಬೆಳಗ್ಗೆ ತನ್ನ ಹೆಂಡತಿ ಶೋಭಾವತಿ ಇವಳು ಕೆಲಸಕ್ಕೆಂದು  ಜೋಗುರ ಗ್ರಾಮಕ್ಕೆ ಹೋಗಿದ್ದು ನಾನು ನನ್ನ ಕೆಲಸಕ್ಕೆ 10 ಗಂಟೆಗೆ ಮನೆಯ ಬೀಗ ಹಾಕಿ ಹೋಗಿ ಮರಳಿ 2 ಗಂಟೆಗೆ ಮನೆಗೆ ಬಂದು ಊಟ ಮಾಡಿಕೊಂಡು ಮತ್ತೆ ಮನೆಗೆ ಬೀಗ ಹಾಕಿ ನನ್ನ ಕೆಲಸಕ್ಕೆ ಹೋಗಿದ್ದು ಮಧ್ಯಾನ 2-45 ಗಂಟೆ ಸುಮಾರಿಗೆ ನನ್ನ ಅಣ್ಣ ಸಂಜೀವಕುಮಾರ ಇವರು ನನಗೆ ಪೋನ ಮುಖಾಂತರ ತಿಳಿಸಿದ್ದೇನೆಂದರೆ ನಿಮ್ಮ ಮನೆಯ ಬಾಗಿಲು ತೆರೆದಿದ್ದು ಇರುತ್ತದೆ. ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗಿಲು ತೆರೆದಿದ್ದು ಇದ್ದು ನಾನು ಮನೆಯ ಒಳಗೆ ಹೋಗಿ ನೋಡಲು ಮನೆಯ ಹಾಲಿನಲ್ಲಿದ್ದ 1 ಎಲ್‌.ಜಿ ಕಂಪನಿಯ ಎಲ್‌‌‌.ಸಿ.ಡಿ ಟಿ ವಿ ಮತ್ತು ಅಡಿಗೆ ರೂಮೀನಲ್ಲಿ ಹೋಗಿ ನೋಡಲು ಅಡಿಗೆ ರೂಮೀನಲ್ಲಿದ್ದ ಅಲಮಾರ ತೆರೆದಿದ್ದು ಅಲಮಾರದಲ್ಲಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ  ಒಟ್ಟು 1,86,716/-ರೂ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸೈಯದ ಅಹ್ಮದ ನೆಂದರೆ ದಿನಾಂಕ 23-08-2014 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ತನ್ನ ಹೆಂಡತಿ ಚಿಟಿ ದುಡ್ಡು ತರುತ್ತೇನೆಂದು ಹೇಳಿ ರಾತ್ರಿ ಮನೆಗೆ ಬರದೇ ಮಗನಾದ ಫರೀದ ಈತನಿಗೆ ಪಕ್ಕದ ಮನೆಯಲ್ಲಿ ಮಲಗಿಕೊಳ್ಳುವಂತೆ ತಿಳಿಸಿದ್ದರಿಂದ ಫರೀದ ಈತನು ಪಕ್ಕದ ಮನೆಯ ಮಾಣಿಕ ಇವರ ಮನೆಯಲ್ಲಿ ಮಲಗಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಅರುಣಾ ಇವಳು ಮನೆಯ ಮುಂದೆ ಮಲಗಿಕೊಂಡಿದ್ದು ಅವಳಿಗೆ ಗಾಯವಾಗಿದ್ದು ಅವಳನ್ನು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಗಾಯಾಳು ಮನೆಗೆ ಬರುತ್ತಿರುವಾಗ ಯಾವುದೋ ವಾಹನ ಡಿಕ್ಕಿ ಪಡಿಸಿ ಹೋಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ನಾಗರತ್ನಾ ಗಂಡ ಶರಣಬಸವ ನಡುವಿನಮನಿ ಸಾ: ಮಲದಕಲ್ಲು ತಾ: ದೇವದುರ್ಗ ಜಿ: ರಾಯಚೂರ ಸದ್ಯ ಹಾ: ವ: ಐಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ರವರಿಗೆ ಮಲ್ಲದಕಲ್ಲು ಗ್ರಾಮದ ಗಂಗಪ್ಪ ತಂದೆ ಬಸಪ್ಪ ನಡುವಿನಮನಿ ಇವರ ಮಗನಾದ ಶರಣಬಸವನ ಜೊತೆ ನಮ್ಮ ಮನೆಯ ಹಿರಿಯರು ಗಂಡನ ಮನೆಯವರು ಎಲ್ಲರೂ ಕೂಡಿಕೊಂಡು ಮಾತುಕತೆ ಆಡಿ ಮಾತುಕತೆ ಸಮಯದಲ್ಲಿ ಮದುವೆಯ ವರದಕ್ಷಿಣೆಯಾಗಿ 14 ತೊಲೆ ಬಂಗಾರ ಹಾಗೂ ನಗದು ಹಣ 5 ಲಕ್ಷ ರೂ ನಗದು ಹಣ ಹಾಗೂ ಹುಡುಗನ ಮದುವೆ ಬಟ್ಟೆಗಾಗಿ 20 ಸಾವಿರ ರೂಪಾಯಿಗಳು ಹಾಗೂ ಸಂಪ್ರದಾಯದಂತೆ ಹಾಂಡೆ ಬಾಂಡೆ ಕೊಡಬೇಕು ಮದುವೆ ಮಾತ್ರ ಹುಡಗನ ಮನೆಯವರು ಮಾಡಿಕೊಳ್ಳಬೇಕು ಅಂತ ಮಾತುಕತೆ ಆಡಿ ದಿನಾಂಕ 25-01-2012 ರಂದು ಮದುವೆಯು ನಿಶ್ಚಿಯ ಮಾಡಿದ್ದು ಇರುತ್ತದೆ. ಸದರಿ ನಮ್ಮ ಹಿರಿಯರು ಹಾಗೂ ಗಂಡನ ಮನೆಯ ಹಿರಿಯರು ಮದುವೆ ನಿಶ್ಚಯದ ಸಮಯದಲ್ಲಿ ಮಾತುಕತೆ ಆಡಿದಂತೆ ಈ ಮೇಲಿನ ಬಂಗಾರ, ನಗದು ಹಣ ಹುಡುಗನ ಅಕ್ಷತಾ ಬಟ್ಟೆಯ ಹಣ ಎಲ್ಲವನ್ನು ಕೊಟ್ಟು ಅದರೊಂದಿಗೆ ವರೋಪಾಚಾರ ಅಂತಾ ಪಲಂಗ, ಅಲ್ಮಾರಿ, ಫ್ಯಾನು ಪ್ರೀಡ್ಜು, ಏರಕೂಲರ ಹಾಗೂ ದಿನ ನಿತ್ಯದ ವಸ್ತುಗಳಾದ ಹಾಂಡೆ, ಬಾಂಡೆ ಇನ್ನಿತರ ಸಾಮಾನುಗಳು ಒಟ್ಟು 2 ಲಕ್ಷ ಕಿಮ್ಮತ್ತಿನವುಗಳು ಹೀಗೆ ಒಟ್ಟು ಎಲ್ಲಾ ಸೇರಿ 11,34,000/- ರೂಪಾಯಿಗಳು ಕೊಟ್ಟು ಗಂಡನ ಮನೆಯ ಊರಾದ ಮಲದಕಲ್ಲ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದಿನಾಂಕ 25-01-2012 ನೇ ಸಾಲಿನಲ್ಲಿ ನಮ್ಮ ಸಂಪ್ರದಾಯದಂತೆ ನಮ್ಮ ಮತ್ತು ಗಂಡನ ಮನೆಯವರ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿದ್ದು ದಿನಾಂಕ: 16-08-2014 ರಂದು ರಾತ್ರಿ 9-45 ಗಂಟೆಯ ಸುಮಾರಿಗೆ ನಾನು ಕರ್ತವ್ಯ ಮುಗಿಸಿಕೊಂಡು ನಾನು ವಾಸವಾಗಿರುವ ಮನೆಯ ಹತ್ತಿರ ಇರುವ ಮರಗಮ್ಮ ಗುಡಿಯ ಮುಂದೆ ನಡೆದುಕೊಂಡು ಹೋಗುವಾಗ ಅಲ್ಲಿ ಒಮ್ಮೇಲೆ ಎದುರಿಗೆ ಬಂದ ನನ್ನ ಗಂಡ ಶರಣಬಸವನು ನನಗೆ ಕೈ ಹಿಡಿದು ಜಗ್ಗಿ ರಂಡಿ ಕರಿ ಮೋತಿಯಕ್ಕೆ ನನ್ನ ಮನೆಗೆ ಪೊಲೀಸರಿಗೆ ಹ್ಯಾಂಗ ಕಳುಹಿಸಿದ್ದಿ ನಿನಗ ಎಷ್ಟು ಸೊಕ್ಕ ಅದೆ, ಯಾರೋ ಬಂದರು ನಾನು ನಿನ್ನ ಜೊತೆ ಸಂಸಾರ ಮಾಡಲ್ಲಾ, ನಾನು ತಿರುಗಾಡಲಿಕ್ಕೆ ಗಾಡಿ ತೊಗೋಬೇಕು ಅಂತ ಹಣ ತೊಗೊಂಡು ಬಾ ಅಂದರ ತಂದಿಲ್ಲಾ, ನೀನು ಗಾಡಿ ಮ್ಯಾಗ ಓಡಾಡತ್ತಿ ಸೂಳಿ ಅಂತಾ ಅವ್ಯಾಚ್ಛವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ನನ್ನ ಕೂದಲು ಹಿಡಿದು ಏಳೆದಾಡಿ ನನಗೆ ನೋಕಿಕೊಟ್ಟು ಇನ್ನೊಮ್ಮೆ ನೀನು ಪೊಲೀಸರಿಗೆ ನನ್ನ ಮನೆಗೆ ಕಳುಹಿಸಿದರೆ ನಿನಗೆ ಜೀವ ಸಹಿತ ಇಡುವುದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.