POLICE BHAVAN KALABURAGI

POLICE BHAVAN KALABURAGI

29 June 2013

GULBARGA DISTRICT REPORTED CRIME

ಅಟೋ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:07/06/2013 ರಂದು ಕೆಎ-32 ಎ-6272 ನೇದ್ದು ಅಟೋ ಗುಲಬರ್ಗಾ ಬಸ್ ನಿಲ್ದಾಣದ ಮುಂದುಗಡೆ ಇರುವ ಆಟೋ ಸ್ಟ್ಯಾಂಡದಲ್ಲಿ ಪಾಳಿ ಪ್ರಕಾರ ಆಟೋವನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ದಾಣದ ಒಳಗಡೆ ಇರುವ ಶೌಚಾಲಯಕ್ಕೆ ಹೋಗಿದ್ದು, ಮರಳಿ ಬಂದು ನೋಡುವಷ್ಟರಲ್ಲಿ ಅಂದರೆ 5-10  ನಿಮಿಷದಲ್ಲಿ  ಆಟೋ ಕಾಣಿಸಲಿಲ್ಲ, ಬಸ್ ಸ್ಟ್ಯಾಂಡ ಹತ್ತಿರ ಹುಡಕಾಡಿ ಸ್ಟ್ಯಾಂಡದಲ್ಲಿರುವ ಆಟೋ ಚಾಲಕರಿಗೆ ವಿಚಾರಿಸಿದ್ದರು ಆಟೋ ಸಿಗಲಿಲ್ಲ. 7:30 ಪಿಎಮ್  ಸುಮಾರಿಗೆ ಆಟೋ ಕಳೆದ ಬಗ್ಗೆ ಆಟೋದ ಮಾಲಿಕರಾದ ವಸಂತಕುಮಾರ ಇವರಿಗೆ  ಪೋನ ಮಾಡಿ ಮಾಹಿತಿ ತಿಳಿಸಿ ಅಂದಿನಿಂದ ಇಲ್ಲಿಯವರೆಗೆ ನಾನು ಮತ್ತು ಆಟೋದ ಮಾಲಿಕ ವಸಂತಕುಮಾರ ಇಬ್ಬರು ಕೂಡಿಕೊಂಡು ನಮ್ಮ ಪರಿಚಯಸ್ಥರಲ್ಲಿ, ಬಸ್ ನಿಲ್ದಾಣದ ಆಟೋ ಚಾಲಕರಲ್ಲಿ ಎಲ್ಲಾಕಡೆ ಹೂಡಕಾಡಿದರು ಆಟೋ ಸಿಕ್ಕಿರುವದಿಲ್ಲ . ಆಟೋರಿಕ್ಷಾ ನಂ; ಕೆಎ-32 ಎ-6272 ಇಂಜಿನ ನಂ: AEMBNL50313  ಚೆಸ್ಸಿ ನಂ: MD2AA24ZZNWL31818 ಒಟ್ಟು ಅ.ಕಿ 42,000/- ಬೆಲೆಬಾಳುವ  ಆಟೋ ರಿಕ್ಷಾವನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ.ಕಳುವಾದ ಆಟೋರಿಕ್ಷಾವನ್ನು ಪತ್ತೆ ಮಾಡಿ ಕೋಡಬೇಕು ಅಂತಾ ಸುನೀಲಕುಮಾರ ತಂದೆ ಭಗವಾನ ಸಾಳೊಂಕಿ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT

ಸಂಚು ರೂಪಿಸಿ ಸುಲಿಗೆ ಮಾಡಿದ ಸುಲಿಗೆಕೊರರ ಬಂಧನ, 2.5 ಲಕ್ಷ್ಯ ರೂ. ಮೌಲ್ಯದ ಆಭರಣ, ನಗದು ಹಣ, ಮೊಟಾರ ಸೈಕಲ ಹಾಗೂ ಇತರೆ ವಸ್ತುಗಳು ವಶ.

ಮಾನ್ಯ ಶ್ರೀ ಎನ್. ಸತೀಶಕುಮಾರ ಐಪಿಎಸ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಕಾಶಿನಾಥ ತಳಕೇರಿ ಅಪರ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ (ಬಿ) ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ:24-06-2013 ರಂದು ರಾತ್ರಿ ಗುಲಬರ್ಗಾ ನಗರದ ಧನ್ವಂತ್ರಿ ಆಸ್ಪತ್ರೆಯ ಎದುರುಗಡೆ ರಿಂಗ್ ರೋಡಿನ ಮೇಲೆ ಶ್ರೀಕಾಂತ ತಂದೆ ಅಶೋಕ ಚವ್ಹಾಣ ಹಾಗೂ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರು ತಮ್ಮ ಮೊಟಾರ ಸೈಕಲ ಮೇಲೆ ಬಂದು ಮೂತ್ರ ವಿಸರ್ಜನೆಗೆಂದು ನಿಂತಾಗ ಯಾರೋ ಇಬ್ಬರೂ ದುರ್ಷ್ಕಮಿಗಳು ಚಾಕು ತೊರಿಸಿ ಹೆದರಿಸಿ ಅವರ ಹತ್ತಿರ ಇದ್ದ ಬಂಗಾರದ ಆಭರಣಗಳು, ನಗದು ಹಣ ಹಾಗೂ ಇತರೆ ಸಾಮಾನುಗಳನ್ನು ಜಭರದಸ್ತಿಯಿಂದ ದೊಚಿಕೊಂಡು ಹೋಗಿದ್ದರ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಗುನ್ನೆ ನಂ:247/2013 ಕಲಂ,392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ಪತ್ತೆಗಾಗಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ಗುಲಬರ್ಗಾರವರ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ತನಿಖೆ ವಹಿಸಿಕೊಂಡ ಸಿಪಿಐ ಎಂ.ಬಿ.ನಗರ ವೃತ್ತ ರವರು ತನಿಖೆ ವೇಳೆ ಪಿರ್ಯಾದಿ ಶ್ರೀಕಾಂತ ನೀಡಿದ ಹೇಳಿಕೆಗೂ ಹಾಗೂ ಸುಲಿಗೆಗೆ ಒಳಗಾದ ನೊಂದ ಶ್ರೀ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರ ಹೇಳಿಕೆಗೆ ಬಹಳಷ್ಟು ಅಂಶಗಳು ವ್ಯಕ್ತಿರಿಕ್ತವಾಗಿ ಕಂಡುಬಂದಿದ್ದು ಮತ್ತು ಇಬ್ಬರ ಹೇಳಿಕೆಗಳು ಒಂದಕ್ಕೊಂದು ಹೊಂದಾಣಿಕೆ ಆಗುತ್ತಿರಲಿಲ್ಲ. ಶ್ರೀಕಾಂತ ಇತನಿಗೆ ದಾಳಿ ಮಾಡಿ ಸುಲಿಗೆ ಮಾಡಿದಾಗ ಆತನಿಗೆ ಯಾವುದೇ ಗಾಯ ಆಗದೇ ಮತ್ತು ಆತನಿಂದ ಯಾವುದೇ ಬಂಗಾರದ ಆಭರಣಗಳು ಕಳ್ಳತನವಾಗಿರಲಿಲ್ಲ. ಆದರೆ ಇನ್ನೊಬ್ಬ ಆನಂದ ಚವ್ಹಾಣ ಈತನ ಕೈಗೆ ಚಾಕುವಿನಿಂದ ಗಾಯವಾಗಿದ್ದು ಹಾಗೂ ಆತನಿಂದ ಸುಮಾರು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲಾಗಿತ್ತು. ಶ್ರೀಕಾಂತನ ಮೇಲೆ ಅನುಮಾನಗೊಂಡು ದಿನಾಂಕ:28-06-2013 ರಂದು ವಿಚಾರಣೆ ಮಾಡಲಾಗಿ ತನಗೆ ವಿಪರಿತ ಸಾಲವಾಗಿದ್ದರಿಂದ ಸಾಲ ತೀರಿಸುವ ಉದ್ದೇಶದಿಂದ ತಾನು ಮತ್ತು ತನ್ನ ಗೆಳೆಯರಾದ ಅಭಿಷೇಕ ಪಾಟೀಲ, ಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಸಂಗಡ ಕರೆದುಕೊಂಡು ಸಂಚು ರೂಪಿಸಿ ಹೇಗಾದರೂ ಮಾಡಿ ಆನಂದನ ಹತ್ತಿರ ಇರುವ ಬಂಗಾರ ಹಾಗೂ ನಗದು ಹಣ ಕಿತ್ತುಕೊಳ್ಳಬೇಕು ಅಂತಾ ತಿರ್ಮಾನಿಸಿ ಶ್ರೀಕಾಂತ ಹಾಗು ಅಭಿಷೇಕ ಪಾಟಿಲ ಇಬ್ಬರೂ ಕೂಡಿಕೊಂಡು ಆನಂದ ಚವ್ಹಾಣ ಇತನಿಗೆ ತಮ್ಮ ಮೊಟಾರ ಸೈಕಲಗಳ ಮೇಲೆ ಕೃಷ್ಟಲ ಪ್ಯಾಲೇಸಗೆ ಊಟಕ್ಕೆ ಕರೆದುಕೊಂಡು ಬಂದು ಸರಾಯಿ ಕುಡಿಸಿದರು. ಅಭಿಷೇಕ್ ಪಾಟೀಲ ಈತನು ಕೇವಲ ಸರಾಯಿ ಕುಡಿದು ಊಟ ಮಾಡದೇ ಎದ್ದು ಹೋಗಿ ಪಿಡಿಎ ಕಾಲೇಜನ ಹತ್ತಿರ ಕೆಲಸ ಇದೆ ನಿಮ್ಮ ಊಟ ಆದ ಮೇಲೆ ಅಲ್ಲಿಗೆ ಬನ್ನಿರಿ ಅಂತಾ ತಿಳಿಸಿ ಹೋರಟು ಹೋಗಿದ್ದನು. ಅಭಿಷೇಕ ಪಾಟೀಲ ತನ್ನ ಸ್ನೇಹಿತರಾದ ಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಕರೆದುಕೊಂಡು ರಿಂಗ್ ರೋಡಿನ ಓಜಾ ಕಾಲೋನಿ ಹತ್ತಿರ ಇರುವ ಇಂಜನಿಯರ್ಸ ಕ್ಲಬ್ ಬಳಿ ಕತ್ತಲೆಯ ಸ್ಥಳದಲ್ಲಿ ಕುಳ್ಳಿರಿಸಿ ತಾನು ಸ್ವಲ್ಪ ದೂರದಲ್ಲಿ ಕಾಣದಂತೆ ನಿಂತುಕೊಂಡಿದ್ದನು. ಶ್ರೀಕಾಂತ ಮತ್ತು ಆನಂದ ಊಟ ಆದ ಮೇಲೆ ಶ್ರೀಕಾಂತನು ಅಭಿಷೇಕನಿಗೆ ಪೋನ್ ಮಾಡಿ ಆತನನ್ನು ಕರೆಯಲು ಎಲ್ಲಿಗೆ ಬರಬೇಕು ಅಂತಾ ಕೇಳಿದಾಗ ಆತನು ರಿಂಗ್ ರೋಡ ಕಡೆಯಿಂದ ಪಿಡಿಎ ಕಾಲೇಜು ಕಡೆಗೆ ಬರಲು ತಿಳಿಸಿದನು. ಶ್ರೀಕಾಂತ ಮತ್ತು ಆನಂದ ರಿಂಗ್ ರೋಡ್ ಮಾರ್ಗವಾಗಿ ಶ್ರೀಕಾಂತನ ಬೈಕ ಮೇಲೆ ಹೊರಟರು. ಬೈಕ ಚಲಾಯಿಸುತ್ತಿದ್ದ ಶ್ರೀಕಾಂತನು ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಬೈಕನು ನಿಲ್ಲಿಸಿದನು. ಕೃಷ್ಣ ಮತ್ತು ರವಿ ಇವರು ಇಬ್ಬರನ್ನು ಹಿಂದಿನಿಂದ ದಾಳಿ ಮಾಡಿ ಕೆಳಗೆ ಬೀಳಿಸಿ ಅದರಲ್ಲಿ ಶ್ರೀಕಾಂತನು ಆರೋಪಿತರಾದ ಕೃಷ್ಣ ಮತ್ತು ರವಿಯೊಂದಿಗೆ ಶಾಮೀಲು ಇದ್ದು ಬೇಕಂತಲೇ ನಟಿಸಿ ಆನಂದನಿಂದ ಒಟ್ಟು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲು ಒಳಸಂಚಿನಿಂದ ಸಹಕರಿಸಿದ್ದನು. ಈ ವೇಳೆ ಆನಂದನಿಗೆ ತನ್ನ ಬಲಗೈಗೆ ಚಾಕುವಿನಿಂದ ದಾಳಿ ಮಾಡಿದಾಗ ಗಾಯವುಂಟಾಗಿರುತ್ತದೆ. ಶ್ರೀಕಾಂತ ತಂದೆ ಅಶೋಕ ಚವ್ಹಾಣ, ವಃ23 ವರ್ಷ, ಸಾ|| ಅಯ್ಯರವಾಡಿ ಗುಲಬರ್ಗಾ, ಅಭೀಷೇಕ ತಂದೆ ಜಗದೀಶ ಪಾಟೀಲ, ವಯಾ||23 ವರ್ಷ, ಸಾ|| ಗಂಜ ಕಾಲೋನಿ ಗುಲಬರ್ಗಾ, ಕೃಷ್ಣ ತಂದೆ ದೊಂಡಿಭಾ ಜಾಧವ, ವಯಾ||24  ವರ್ಷ ಸಾ|| ಅಯ್ಯರವಾಡಿ ಗುಲಬರ್ಗಾ, ರವಿ ತಂದೆ ಅರ್ಜುನ ಕಂಡೇಕರ್, ವಯಾ||42 ಅಯ್ಯರವಾಡಿ ಗುಲಬರ್ಗಾರವರಿಂದ ಸುಲಿಗೆ ಮಾಡಲಾದ ಬ್ರಾಸಲೈಟ್ 25 ಗ್ರಾಂ, ಚೈನ್ 20, ಗ್ರಾಂ, ಎರಡು ಉಂಗುರುಗಳು 10 ಗ್ರಾಂ, ಕೃತ್ಯಕ್ಕೆ ಬಳಸಿದ ಎರಡು ಬೈಕ್, ಎರಡು ಚಾಕು, ಒಂದು ದಸ್ತಿ ಹೀಗೆ ಒಟ್ಟು ಸುಮಾರು 2.5 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚಾರಣೆಯಲ್ಲಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ರವರ ನೇತೃತ್ವದಲ್ಲಿ  ಶ್ರೀ. ಪ್ರದೀಪ ಬೀಸೇ ಪಿ.ಎಸ್.ಐ, ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ, ಶ್ರೀ,ತಿಮ್ಮಣ್ಣ ಚಾಮನೂರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ,ಶ್ರಿ ಪರುಶುರಾಮ ಮನಗೂಳಿ ಪಿ.ಎಸ್.ಐ ಫರಹತಾಬಾದ ಹಾಗೂ ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ, ಶಂಕರ, ಅಣ್ಣಪ್ಪ, ಮನೋಹರ, ರಪಿಕ್, ಅಶೋಕ, ಆನಂದ, ಮಶಾಕ, ಅರ್ಜುನ, ವೀರಶೇಟ್ಟಿ, ಹಣಮಂತ, ಮಲ್ಲಿನಾಥ, ವೇದರತ್ನಂ, ತಾರಾಸಿಂಗ್ ರವರು ಭಾಗವಹಿಸಿದ್ದರು.   

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪಾರ್ವತಿ ಗಂಡ ಬಸವರಾಜ ಜಮಾದಾರ ವಯಾ:35 ವರ್ಷ ಸಾ:ಸಿದ್ದಾರೂಡ ಕಾಲೋನಿ ಕಪನೂರ ತಾ:ಜಿ:ಗುಲಬರ್ಗಾ ರವರು ನಾನು ಬಸವರಾಜ ಇತನೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, 4 ವರ್ಷಗಳಿಂದ ನಂತರ ಮನೆಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ದೈಹಿಕವಾಗಿ ಮತ್ತು ಮಾನಸಿಕ ವಾಗಿ ಹಿಂಸೆ ಕೊಟ್ಟು ಹೊಡೇ ಬಡೇ ಮಾಡಲು ಆರಂಬಿಸಿದನು. ನನ್ನ ಗಂಡನ ಕಿರುಕುಳ ತಾಳದೇ ನನ್ನ ತವರು ಮನೆಯಾದ ಮಾಡಗಿ ಗ್ರಾಮಕ್ಕೆ ಮಕ್ಕಳೊಂದಿಗೆ ಹೋಗಿರುತ್ತೆನೆ. 2-3 ದಿವಸಗಳ ನಂತರ ನನ್ನ ಗಂಡ ನನ್ನ ತವರು ಮನೆಗೆ ಬಂದು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಒಪ್ಪಿಕೊಂಡು ಮರಳಿ ಕರೆದುಕೊಂಡು ಹೋಗಿ ಮತ್ತೆ ಮೊದಲಿನಂತೆ ತೊಂದರೇ ಕೊಡಲು ಪ್ರಾರಂಬಿಸಿದ,ದಿನಾಂಕ:-28/06/2013 ರಂದು ಬೆಳ್ಳಿಗೆ 8:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗ ನನ್ನ ಗಂಡ ಬಸವರಾಜ ಇತನು ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:324/2013 ಕಲಂ. 324/2013 ಕಲಂ 498 (ಎ) 323 504 506 ಐ.ಪಿ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಾಣೆಯಾದ ಬಗ್ಗೆ: :
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:19-6-2013 ರಂದು ಮುಂಜಾನೆ ನಾನು  ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ನನ್ನ ಮಗಳು ಸಿದ್ದಮ್ಮಾ ಮತ್ತು ನನ್ನ ತಾಯಿ ಪ್ರೇಮಲಾಬಾಯಿ ನನ್ನ ಮಕ್ಕಳಾದ  ವೀರೇಶ , ಅಂಬರೀಷ , ಹಾಗೂ  ಗೋಧಾವರಿ ಎಲ್ಲರೂ ಮನೆಯಲ್ಲಿದ್ದರೂ . ಸಾಯಂಕಾಲ 6-00 ಗಂಟೆಗೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನನ್ನ ತಾಯಿಯು ಮಧ್ಯಾಹ್ನ 4-00 ಗಂಟೆಯ ಸುಮಾರಿಗೆ  ಪಕ್ಕದ ಮನೆಗೆ  ಟಿ.ವಿ.ನೋಡಲು ಹೋಗಿ ಬರುತ್ತೇನೆ ಅಂತಾ  ಮನೆಯಿಂದ ಹೋದಳು ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದಳು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಅಂತಾ ಶ್ರೀಮತಿ ಜಗದೇವಿ ಗಂಡ  ನಾಗಯ್ಯಾ ದಿಂಡೆನವರ  ಸಾ||  ಕೆರೂರ  ತಾ||ಜಿ||ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:325/2013 ಕಲಂ, ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:28-06-2013 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಕಲ್ಲಹಂಗರಗಾ ಗ್ರಾಮದ ರಂಗ ಮಂದಿರ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಹೋಗು-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಸಿದ್ಧಲಿಂಗ ತಂದೆ ಅಣ್ಣಾರಾಯ ಹಡಪದ ಸಾ:ಕಲ್ಲಹಂಗರಗಾ ತಾ: ಜಿ: ಗುಲಬರ್ಗಾ ಇತನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1515 ರೂ. ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:326/2013 ಕಲಂ, 78 (3) ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ:ದಿನಾಂಕ 28-06-2013 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ರಾಧಾಬಾಯಿ ತಮ್ಮ ಸುದೇಶ ತಿವಾರಿ ಎಲ್ಲರೂ ಹೊಲ ಸರ್ವೆ ನಂ. 25/2-1 ರಲ್ಲಿ  7 ಎಕರೆ  13 ಗುಂಟೆ ರಲ್ಲಿ ಬಿತ್ತನೆ ಮಾಡಬೇಕೆಂದು ಹೊಲಕ್ಕೆ ಹೋದಾಗ ಮಾಹಾದೇವಪ್ಪ ತಂದೆ ರೇವಣಸಿದ್ಧಪ್ಪ ವಠಾರ ಆತನ ಮಗ ಪ್ರಕಾಶ ಹಾಗೂ ಅವನ ಇಬ್ಬರು ಹೆಣ್ಣು ಮಕ್ಕಳು ಕೂಡಿಕೊಂಡು ನನ್ನ ತಾಯಿ, ತಮ್ಮನಿಗೆ ಅವಾಚ್ಯವಾಗಿ ಬೈದು ಇನ್ನೊಂದು ಸಲ ಈ ಹೊಲದಲ್ಲಿ  ಕಾಲು ಇಟ್ಟರೆ  ನೋಡು ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ ಅನುರಾಧ ಗಂಡ ಶಂಕರಸಿಂಗ ಠಾಕೂರ ಸಾ: ಜಿಡಿಎ ಕಾಲೋನಿ ಗೋಕುಲ ನಗರ ಶಹಾಬಜಾರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 327/13 ಕಲಂ 447 504 506 (2) ಸಂಗಡ 34 ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

28 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ :ಶ್ರೀಮತಿ ಶಹಿದಾ ಬೇಗಂ ಗಂಡ ದಿ. ಸೈಯ್ಯದ ಗೌಸ್, ಸಾಃ ಸಂತ್ರಾಸವಾಡಿ ಗುಲಬರ್ಗಾ ರವರು ನಾನು ದಿನಾಂಕ:27-06-2013 ರಂದು 7-30 ಪಿ.ಎಮ್ ಕ್ಕೆ ಡಂಕಾ ಕ್ರಾಸ್ ಹತ್ತಿರ ಅಟೋರಿಕ್ಷಾ ನಂ. ಕೆಎ-32 ಬಿ-3099 ನೇದ್ದನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಬರುತ್ತಿದ್ದ ಒಂದು ಅಟೋರಿಕ್ಷಾಕ್ಕೆ ಒಮ್ಮೆಲೆ ಕಟ್ ಹೊಡೆದು ಮಹ್ಮದ ಅಕ್ತರಖಾನ  ಇತನು ಅಟೋ ರಿಕ್ಷಾ ಪಲ್ಟಿ ಮಾಡಿದ್ದರಿಂದ ಒಳಗೆ ಕುಳಿತು ಪ್ರಯಾಣಿಸುತ್ತಿದ್ದ ನನಗೆ ಬಲಗಾಲು ಮೊಳಕಾಲಿಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಶ್ರೀಮತಿ ಶಹಿದಾ ಬೇಗಂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ.39/2013 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಾಚಾರ ಪ್ರಕರಣ:
ಸೇಡಂ ಪೊಲೀಸ ಠಾಣೆ: ನಮ್ಮ ಮನೆಯ ಪಕ್ಕದಲ್ಲಿ ಸ್ಯಾಮುವೆಲ್ ಎಂಬುವವರು ವಾಸವಿದ್ದು, ಆತನಿಗೆ ಇಬ್ಬರ ಹೆಂಡತಿಯರು ಹಾಗೂ ಮಕ್ಕಳಿರುತ್ತಾರೆ. ಆರು ತಿಂಗಳ ಹಿಂದೆ ಕ್ರಿಸ್-ಮಸ್ ಹಬ್ಬಕ್ಕಿಂತ 2-3 ದಿವಸದ ಮುಂಚೆ, ಸ್ಯಾಮುವೆಲ್ ಇವರ ಮನೆಯಲ್ಲಿ ಕ್ರಿಸ್-ಮಸ್ ಹಬ್ಬದ ತಯಾರಿ ನಡೆದಿತ್ತು.  ಅದನ್ನು ನೋಡಲು ಅವರ ಮನೆಗೆ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಹೋದಾಗ ಸ್ಯಾಮುವೆಲ್ ಮನೆಯಲ್ಲಿ ಒಬ್ಬನೆ ಇದ್ದನು. ನನ್ನನ್ನು ನೋಡಿ ಟಿ.ವಿ ನೋಡುಬಾ ಅಂತ ಕರೆದು ನಾನು ಟ.ವಿ ನೋಡುತ್ತಿರುವಾಗ ಹಿಂದಿನಿಂದ ಬಂದು ನನಗೆ ಎತ್ತಿಕೊಂಡು ಬಾಯಿ ಒತ್ತಿ ಹಿಡಿದು ಜಬರಿ ಸಂಭೋಗ ಮಾಡಿರುತ್ತಾನೆ. ನಾನು ಅಳುತ್ತಿರುವಾಗ ನನಗೆ ಸಮಾಧಾನ ಮಾಡಿ ನಮ್ಮ ಮನೆಗೆ ಕಳುಹಿಸಿದ್ದನು. 6 ತಿಂಗಳ ಕಳೆದ ನಂತರ ನನ್ನ ತಾಯಿ ನನ್ನ ಹೊಟ್ಟೆ ಬೆಳೆಯುತ್ತಿದ್ದುದ್ದು ಕಂಡು ನನಗೆ ಹೊಡೆ-ಬಡೆ ಮಾಡಿ ಬೆದರಿಸಿ ಕೇಳಿದಾಗ ಮೇಲಿನ ಸಂಗತಿ ಹೇಳಿರುತ್ತೇನೆ. ನನಗೆ ಜಬರಿ ಸಂಭೋಗ ಮಾಡಿದ ಸ್ಯಾಮುವೆಲ್ ತಂದೆ ಡೇನಿಯಲ್ ಸಂಜೀವನವರ ಜಾ:ಕ್ರಿಶ್ಚಿಯನ್ ಸಾ:ಬೆನಕನಳ್ಳಿ ಹಾ.ವ:ಇಂದಿರಾ ನಗರ ಸೇಡಂ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ನೊಂದ ಹುಡಗಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-158/2013 ಕಲಂ-376 ಐಪಿಸಿ ಸಂಗಡ 3(1) (XII) SC/ST P.A Act 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ನೆಲೋಗಿ ಪೊಲೀಸ್ ಠಾಣೆ:ಶ್ರೀಶೈಲ್ ಹಾಗೂ ಶಿವಪ್ಪ ಮುರಡಿ ಇಬ್ಬರೂ ಕೂಡಿಕೊಂಡು ಘತ್ತರಗಿ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಮೋಟಾರ್ ಸೈಕಲ್ ಮೇಲೆ ಹೋದರು, ಘತ್ತರಗಿಗೆ ಹೋಗಿ ಬರುವಾಗ ಮಂದೇವಾಲ ಕೇನಾಲ್ ದ ಹತ್ತೀರ ಮಡಿವಾಳಪ್ಪ ಗಾಣಿಗೇರ ಇವರ ಹೊಲದ ಬಾಜು ಇರುವ ರಾಷ್ಟ್ರೀಯ ಹೇದ್ದಾರಿ 218 ರ ಮೇಲೆ ಶ್ರೀಶೈಲ್ ಅಪಘಾತದಿಂದ ಮೃತ ಪಟ್ಟಿರುತ್ತಾನೆ. ಅವನ ಸಂಗಡ ಇದ್ದ ಶಿವಪ್ಪನಿಗೂ ಯಾರೋ ಜೀಪಿನಲ್ಲಿ ಹಾಕಿ ಮಂದೇವಾಲ ಆಸ್ಪತ್ರೆಗೆ ಕಳುಸಿರುತ್ತಾರೆ ಅಂತಾ ಹೇಳಿದ್ದರಿಂದ ನಾವು ನಮ್ಮೂರಿನಿಂದ ಮಂದೇವಾಲ ಕೇನಾಲ್ ಹತ್ತಿರ ಬಂದು ನೋಡಲು  ನನ್ನ ಮಗ ರೋಡಿನ ಹತ್ತಿರ ಮೃತ ಪಟ್ಟಿದ್ದನು. ಎದುರಿನಿಂದ ಲಾರಿ ಚಾಲಕನು ಅತೀವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ತಲೆಗೆ, ಕಾಲಿಗೆ ಕೈಗೆ ಭಾರಿ ಪೆಟ್ಟಾಗಿ ಮೃತ ಪಟ್ಟಿರುತ್ತಾನೆ ಅವನ ಹಿಂದೆ ಕುಳಿತ ಶಿವಪ್ಪನಿಗೂ ಕಾಲಿಗೆ ಗಾಯಗಳಾಗಿರುತ್ತವೆ, ಅಪಘಾತಪಡಿಸಿದ ಲಾರಿಯನ್ನು ಪತ್ತೆ ಮಾಡಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಭೀಮರಾಯ ತಂದೆ  ಮಲ್ಕಪ್ಪ ಯಳಸಂಗಿ ಸಾ:ವಸ್ತಾರಿ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2013 ಕಲಂ 279,337, 304(J).ಐಪಿಸಿ ಸಂಗಡ 187 ಐ.ಎಮ್.ವ್ಹಿ.ಆಕ್ಟ  ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.      

GULBARGA DISTRICT

:: ಗುಲಬರ್ಗಾ ನಗರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಚಾರಣೆ ಆಚರಣೆ ಮಾಡಿದ ಬಗ್ಗೆ:
ಗುಲಬರ್ಗಾ ನಗರದ ಸಂಚಾರಿ ಮತ್ತು ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆಯ ವತಿಯಿಂದ ದಿನಾಂಕ:26-06-2013 ರಂದು ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನವನ್ನಾಗಿ ಆಚರಿಸಿದ್ದು ಈ ದಿನದ ಅಂಗವಾಗಿ ಸಂಚಾರಿಪೊಲೀಸಠಾಣೆಯಲ್ಲಿಸಾರ್ವಜನಿಕರನ್ನುಬರಮಾಡಿಕೊಂಡು ತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಸಭೆ ಕೈಕೊಂಡಿದ್ದು, ಸಭೆಯಲ್ಲಿ ಸಾರ್ವಜನಿಕರಿಗೆ ಮಾದಕ ದ್ರವ್ಯ ಸೇವನೆಯಿಂದ ಆಗುವ ತೊಂದರೆಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಲಾಯಿತು. ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮಾದಕ ದ್ರವ್ಯ ಸೇವನೆಯಿಂದ ಆಗಬಹುದಾದ ತೊಂದರೆ ಮತ್ತು ದುಷ್ಪರಿಣಾಮಗಳ ಬಗ್ಗೆ ಬಿತ್ತಿ ಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. 

27 June 2013

GULBARGA DISTRICT REPORTED CRIME

ಕಳ್ಳತನ ಪ್ರಕರಣ:

ಶಹಾಬಾದ ನಗರ ಠಾಣೆ: ದಿನಾಂಕ:27/06/2013 ರಂದು ಬೆಳಗ್ಗೆ 4.30 ಸುಮಾರಿಗೆ ನನ್ನ ಹೆಂಡತಿಯಾದ ನಸೀಮಾ ಇವಳು ಎದ್ದಾಗ ಮನೆಯ ಬಾಗಿಲು (ಮುಖ್ಯ ದ್ವಾರ ) ತೆರೆದಿದ್ದು ನೋಡಿ ನನಗೆ ಎಬ್ಬಿಸಿ ಮನೆಯ ಮನೆಯ ಬಾಗಿಲು ತೆರೆದಿದೆ ಅಂತಾ ತಿಳಿಸಿದಾಗ ನಾನು ಗಾಬರಿಯಾಗಿ ಮನೆಯ ಬಾಗಿಲು ನೋಡಲು ಬಾಗಿಲಿನ ಒಳಗಿನ ಬೋಲ್ಟ  ತೆಗೆದು ಒಳಗಡೆ ಬಂದು ಬೆಡರೂಮ ಪಕ್ಕದ ರೂಮಿನಲ್ಲಿ ಕಟ್ಟಿಗೆ ಪೆಟ್ಟಿಗೆಯಲ್ಲಿ ಇಟ್ಟಿದ್ದ 3,00,000/-ರೂ ನಗದು ಹಣ ಮತ್ತು ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ 10,000/- ರೂ ನಗದು ಹಣ ಯಾರೋ ಕಳ್ಳರು ಮಧ್ಯರಾತ್ರಿ ಸಮಯದಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಸೈಯದ ಮಸೂದ ತಂದೆ ಸೈಯದ ಅಹ್ಮದ ಉ:ಒಳ್ಳೆಣ್ಣೆ  ವ್ಯಾಪಾರ ಸಾ:ಗಾಂಧಿಚೌಕ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:129/2013  ಕಲಂ:457, 380 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಪುತಳಾಬಾಯಿ ಗಂಡ ಫೀರಪ್ಪಾ ಸಾ:ಜೋಗೂರು ರವರು ನನ್ನ ಗಂಡ ಪೀರಪ್ಪಾ ಇತನು ನಮ್ಮೂರ ಸಾಯಬಣ್ಣಾ ಮ್ಯಾಕೇರಿ ಇವನ ಅಕ್ಕಳಾದ ಶರಣಮ್ಮ ಇವಳ 2 ಎಕರೆ ಜಮೀನನ್ನು ನಮ್ಮ ಗ್ರಾಮದ ಬಂಡಪ್ಪಾ ಗಾಣೂರ ಈತನು ಖರೀದಿ ಮಾಡಿದ್ದು, ನನ್ನ ಗಂಡ ಸಾಕ್ಷಿ ಇರುತ್ತಾನೆ. ದಿನಾಂಕ:26-06-2013 ರಂದು 10-00 ಗಂಟೆ ಸುಮಾರಿಗೆ ಸಾಯಬಣ್ಣಾ ಮ್ಯಾಕೇರಿ ಈತನು ಮೊಟಾರ ಸೈಕಲ ನಂ:ಕೆಎ-32 ಇಬಿ-6367 ನೇದ್ದರ ಮೇಲೆ ನನ್ನ ಗಂಡನಿಗೆ ಹಿಂದೆ ಕೂಡಿಸಿಕೊಂಡು ಗುಲಬರ್ಗಾಕ್ಕೆ ಹೋಗಿ ಹಣ ಕೊಟ್ಟ ಬಗ್ಗೆ ನೋಟರಿ ಮಾಡಿಸಿಕೊಂಡು ಬರಲು ಮನೆಯಿಂದ ಕರೆದುಕೊಂಡು ಹೋದರು. ಸಾಯಂಕಾಲ 5-00 ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ಊರಿಗೆ ಬರುತ್ತಿರುವಾಗ ಸಾಯಬಣ್ಣಾ ಈತನ ಮೋಟಾರ ಸೈಕಲ ಚಲಾಯಿಸಿ ಸಿರನೂರ ಗ್ರಾಮದ ನಂತರ ಗೀತಾಂಜಲಿ ಪ್ಯಾಕ್ಟರಿ ಹತ್ತಿರ ತಿರುವಿನಲ್ಲಿ ತನ್ನ ಮೊಟಾರ ಸೈಕಲ ನಂ:ಕೆಎ-32 ಇಬಿ-6367 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಆಯ ತಪ್ಪಿ ರಸ್ತೆಯ ಗುಟಗಲ್ಲಿಗೆ ಡಿಕ್ಕಿ ಪಡಿಸಿದ್ದರಿಂದ ಸಾಯಬಣ್ಣಾ ಈತನಿಗೆ ಭಾರಿರಕ್ತಗಾಯಗಳಾಗಿದ್ದು, ಹಿಂದೆ ಕುಳಿತ ನನ್ನ ಗಂಡ ಪೀರಪ್ಪಾ ಈತನಿಗೆ ತಲೆಗೆ ಮೈಯಲ್ಲಾ ಭಾರಿರಕ್ತಗಾಯವಾಗಿರುತ್ತದೆ,ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುವಾಗ ದಾರಿಯ ಮಧ್ಯ ಪೀರಪ್ಪಾ ಈತನು ಮೃತಪಟ್ಟಿರುತ್ತಾನೆ, ಕಾರಣ ಸಾಯಬಣ್ಣ ಮ್ಯಾಕೇರಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:92/2013 ಕಲಂ, 279, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ನನ್ನ ಸೋದರ ಸೊಸೆಯು ದಿನಾಂಕ:25/06/2013 ರಂದು ಮಧ್ಯಾಹ್ನ 2-00 ಗಂಟೆಗೆ ಹೊರಗಡೆ ಹೋಗಿ ಮನೆಗೆ ಮರಳಿ ಬರುತ್ತಿರುವಾಗ ಸೂರ್ಯಕಾಂತ ತಂದೆ ಮಾರುತಿ ಪಾಲಪೂರೆ ಇವನು ಜಬರದಸ್ತಿಯಿಂದ ಕೈ ಹಿಡಿದು ಹಿಡಿದುಕೊಂಡು ಹೋಗುತ್ತಿದ್ದಾಗ ಅವಳು ಬಿಡಿಸಿಕೊಂಡು ಮನೆಗೆ ಬಂದು ತಿಳಿಸಿದ್ದರಿಂದ ನಾವು ಅವರ ರವರ ಮನೆಗೆ ಹೋಗಿ ಸೂರ್ಯಕಾಂತ ಇತನು ಚುಡಾಯಿಸಿರುತ್ತಾನೆ ಅವನಿಗೆ ಬುದ್ದಿವಾದ ಹೇಳಿರಿ ಅಂತಾ ಸೂರ್ಯಕಾಂತನ ಹೆಂಡತಿಗೆ ಹೇಳಿ ಮರಳಿ ಮನೆಗೆ ಬಂದಿರುತ್ತೆವೆ. ಸಾಯಂಕಾಲ 6:30 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿರುವಾಗ ಸೂರ್ಯಕಾಂತ ತಂದೆ ಮಾರುತಿ ಪಾಲಪೂರೆ, ಸೋಮಲಿಂಗ ತಂದೆ ಭೀಮಶ್ಯಾ ಪಾಲಪೂರೆ, ಮಾರುತಿ ತಂದೆ ಭೀಮಶ್ಯಾ ಪಾಲಪೂರೆ, ದತ್ತಾ ತಂದೆ ಸೊಮಲಿಂಗ ಪಾಲಪೂರೆ, ಶರಣು ತಂದೆ ಸೋಮಲಿಂಗ ಪಾಲಪೂರೆ, ಸುಭಾಷ ತಂದೆ ಬಲಭೀಮ ಕೊಳಿ  ರವರು ನನ್ನ ಮನೆಯೊಳಗೆ ಬಂದು ಜಾತಿ ಎತ್ತಿ ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ ಬಡಿಗೆಯಿಂದ ಹೊಡೆ ಮಾಡಿರುತ್ತಾರೆ ಅಂತಾ  ಶ್ರೀ. ಸೋಮಲಿಂಗ ಸಾ: ಹಿರೋಳಿ   ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ:54/2013 ಕಲಂ:143,147,148,323,324,448,354,504,506 ಸಂಗಡ 149 ಐಪಿಸಿ. ಮತ್ತು 3(X),(XI) SC/ST P.A Act.1989.  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

26 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ ಸುಶಿಲಾಬಾಯಿ ಗಂಡ ಚಂದ್ರಕಾಂತ ಕಲಾಲ ಅವರಾದ (ಬಿ) ತಾ: ಜಿ: ಗುಲಬರ್ಗಾ ರವರು  ನಾನು ಮತ್ತು ರವಿಕುಮಾರ ತಂದೆ ಸೋಮಶೇಖರ ವ: 13 ಜಾ: ಲಿಂಗಾಯತ ಸಾ: ಮಹಾಗಾಂವ ರವರು ದಿನಾಂಕ:25/06/2013 ರಂದು ಮಧ್ಯಾಹ್ನ ಆಟೋ ಟಂ ಟಂ ನಂಬರ ಕೆಎ-32 ಬಿ-8613 ನೇದ್ದರಲ್ಲಿ ಅವರಾದ (ಬಿ) ಗ್ರಾಮದಿಂದ ಕುಳಿತುಕೊಂಡು ಆಲಗೂಡ ಕ್ರಾಸ ಹತ್ತಿರ ಹೋಗುತ್ತಿರುವಾಗ ಟಂಟಂ ಚಾಲಕ ತನ್ನ ಟಂಟಂ ಅತೀವೇಗ ಅಲಕ್ಷತನದಿಂದ ನಡೆಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಟಂಟಂ ವೇಗದ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ನನಗೆ ಮತ್ತು ಅಟೋದಲ್ಲಿರುವ ಹುಡಗನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 319/2013 ಕಲಂ. 279 337 338 ಐಪಿಸಿ ಸಂ/ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ನನ್ನ ಗಂಡನ ಮನೆಯವರು ತವರು ಮನೆಯಿಂದ  ಕಾರು ಖರೀದಿ ಮಾಡುವ ಕುರಿತು 1 ಲಕ್ಷ ರೂಪಾಯಿಗಳು ತೆಗೆದುಕೊಂಡು ಬಾ  ಅಂತಾ  ಬಾತ ರೂಮಿನಲ್ಲಿ ಕರೆದುಕೊಂಡು ಕೈಯಿಂದ ಮತ್ತು ಬೆಲ್ಟದಿಂದ ಹೊಡೆ ಬಡೆ ಮಾಡುತ್ತಿದ್ದರು. ನನ್ನ   ಗಂಡನು ಕುಡಿದ ಅಮಲಿನಲ್ಲಿ ಬಂದು ಹಣ ತೆಗೆದುಕೊಂಡು ಬಾ ಹೇಳಿ ಕೈಯಿಂದ ಬೆಲ್ಟ್ ದಿಂದ ಹೊಡೆ ಬಡೆ ಮಾಡುತ್ತಿದ್ದು, ಎಷ್ಟು ಹೊಡೆ ಬಡಿ ಮಾಡಿದರೂ ತವರು ಮನೆಯಿಂದ ಹಣ ತರಿಸದಿದಕ್ಕೆ ಅಗಷ್ಟ ತಿಂಗಳಲ್ಲಿ ರಮಜಾನ ಹಬ್ಬ ಇನ್ನೂ 12 ದಿವಸಗಳು ಬಾಕಿ ಇರುವಾಗ ನನಗೆ ಮುಂಬೈ ಯಿಂದ ನನ್ನ ತವರು ಮನೆಗೆ ನನ್ನ ಮೈದನ ಸೈಯ್ಯದ ಮಹೆಬೂಬ ಇವರ ಜೊತೆಯಲ್ಲಿ ಕಳುಹಿಸಿಕೊಟ್ಟಿರು. ನನ್ನ ತಂದೆ ತಾಯಿಯವರು  ನಮ್ಮ ಗಂಡನ ಮನೆಯವರಿಗೆ ಪೋನ ಮಾಡಿ ನನ್ನ ಮಗಳಿಗೆ ಯಾಕೇ ಹೊಡೆ ಬಡಿ ಮಾಡುತ್ತಿದ್ದೀರಿ ವರದಕ್ಷಿಣೆ ರೂಪದಲ್ಲಿ ಎಲ್ಲಾ ಕೊಟ್ಟಿರುತ್ತೇವೆ. ಇನ್ನೂ 1 ಲಕ್ಷ ರೂ. ಎಲ್ಲಿಂದ ಕೊಡಬೇಕು ಅಂತಾ ಕೇಳಿದರು. ನಾನು ಮತ್ತು ನನ್ನ ತಂದೆ, ತಾಯಿ ಎಲ್ಲರೂ ಕೂಡಿಕೊಂಡು 2012 ನೇ ಸಾಲಿನ ಅಕ್ಟೋಬರ ತಿಂಗಳಲ್ಲಿ ಮುಂಬೈಯಲ್ಲಿ ವಾಸವಾಗಿರುವ ನನ್ನ ಗಂಡನ ಮನೆಗೆ ಕರೆದುಕೊಂಡು ಹೋದಾಗ ನನ್ನ ತಂದೆ, ತಾಯಿಗೆ ಅವಾಚ್ಯವಾಗಿ ಬೈದು  1 ಲಕ್ಷ ರೂ.ತೆಗೆದುಕೊಂಡು ಬಂದರೆ ನಿನ್ನ ಮಗಳಿಗೆ  ಮನೆಯಲ್ಲಿಟ್ಟು ಕೊಳ್ಳುತ್ತೇವೆ ಇಲ್ಲದಿದ್ದರೆ ಮನೆಯಲ್ಲಿ ಬರಬೇಡಿರಿ ಅಂತಾ ಬೈದು ಹೊರೆಗೆ ಹಾಕಿರುತ್ತಾರೆ. ಅಲ್ಲದೇ ದಿನಾಂಕ 14-04-2013 ರಂದು ನನ್ನ ಗಂಡ ಇರಫಾನ ಈತನು ಮನೆಗೆ ಬಂದು ಕಾರು ಖರೀದಿ ಕುರಿತು 1 ಲಕ್ಷ ರೂ. ತೆಗೆದುಕೊಂಡು ಬಾ ಅಂತಾ ಹೇಳಿ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಶ್ರೀಮತಿ  ತಾಯಬಾ ಸುಲ್ತಾನ  ಗಂಡ ಸೈಯ್ಯದ ಇರಫಾನ ಸಾ|| ಬುಲಂದ ಪರವೇಜ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 320/2013 ಕಲಂ 143, 147, 148, 498 (ಎ), 504, 506 ಸಂ. 149 ಐಪಿಸಿ  ಮತ್ತು 3 ಮತ್ತು 4 ಡಿ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಅಲ್ಲಾವೂದ್ದಿನ ತಂದೆ ಸುಲ್ತಾನ ಪಟೇಲ ಸಾ:ಸ್ಲಂ ಬೋರ್ಡ ಕಾಲೋನಿ ಜೆ.ಟಿ.ಟಿ.ಸಿ ಕಾಲೇಜ ಹಿಂದುಗಡೆ ಸಂತ್ರಾಸವಾಡಿ ಗುಲಬರ್ಗಾ ರವರು ನನ್ನ ಅಕ್ಕ ಪರವೀನ ಬೇಗಂ ವಯಾ||35 ವರ್ಷ ಇವಳನ್ನು ಶೇಖ ಮಹಿಬೂಬ ಹಜ್ ಕಮಿಟಿ ನಯಾಮೊಹಲ್ಲಾ ಗುಲಬರ್ಗಾ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೆವೆ. ಅವಳಿಗೆ ನದೀಮ ವಯಾ|| 8 ವರ್ಷದ ಮಗನಿರುತ್ತಾನೆ. ನಮ್ಮ ಅಕ್ಕ ಪರವೀನ ಬೇಗಂ ಮತ್ತು ಅವಳ ಗಂಡ ಹಾಗೂ ಮಗ ಕೂಡಿಕೊಂಡು  ಚಾಂದಬೀಬಿ ಬಿ.ಎಡ್.ಕಾಲೇಜ ಎದರುಗಡೆ ಮಿಲ್ಲತ ನಗರ ಕಾಲೂನಿ ಹೊರ ಬಡಾವಣೆಯಲ್ಲಿ ಒಂದು ರೂಮಿನಲ್ಲಿ ವಾಸವಾಗಿರುತ್ತಾರೆ. ನಮ್ಮ  ಭಾವ ರೇಶನ ತಂದುಕೊಡುತ್ತಿರಲಿಲ್ಲಾ , ಮನೆಗೆ ಕಿರಾಣಿ ಸಾಮಾನು ತೆಗೆದುಕೊಂಡು ಬಾ ಅಂತಾ ಅಂದರೆ ಹೊಡೆ ಬಡಿ ಮಾಡುತ್ತಿದ್ದ, ಹಾಗೂ ಕುತ್ತಿಗೆ ಒತ್ತಲು ಪ್ರಯತ್ನಿಸಿರುತ್ತಾನೆ ಅಂತಾ ಈಗ 8  ದಿವಸಗಳ ಹಿಂದೆ ನನ್ನ ಮನಗೆ ಬಂದಾಗ ನನ್ನ ಅಕ್ಕಾ ಹೇಳಿದಳು.  ಆದಾಗ್ಯೂ ಕೂಡಾ ಸಹಿಸಿಕೊಂಡು ಹೋಗು ಅಂತಾ ತಿಳಿ ಹೇಳಿದ್ದೆ. ನಿನ್ನೆ ದಿನಾಂಕ.24/6/2013 ರಂದು ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಮ್ಮ ಅಕ್ಕನ ಮನೆಗೆ ಹೋಗಿದ್ದು ನಮ್ಮ ಅಕ್ಕನ ಜೋತೆ ನಮ್ಮ ಭಾವ ಜಗಳ ತೆಗೆದು ಬೈಯುತ್ತಾ ನಮ್ಮ ಅಕ್ಕಳಿಗೆ ಎಳೆದಾಡಿ ಹೋಡೆಯುತ್ತಿದ್ದಾಗ  ನಾನು ಬಿಡಿಸಿಕೊಂಡಿದ್ದು , ನಮ್ಮ ಭಾವನಿಗೆ ತಿಳುವಳಿಕೆ ಹೇಳಲು ಹೋದಾಗ ಅವನು ಕೇಳಿಲಿಲ್ಲಾ ,ತೇರಿ ಬಹೇನ ಬಹುತಾ ಬಾತ ಕರತೆ, ಮೇರೆ ಸಾತ ಜಗಳ ಕರತೆ  ಇಸಕೂ ನಹಿ ಚೋಡತು ಖತಮ ಕರದಾಲತೂ ಅಂತಾ ಸಿಟ್ಟಿನಲ್ಲಿ ಒದರಾಡುತಿದ್ದನು ಆಗ ನಾನು ಇನ್ನೊಮ್ಮೆ ಇದೇ ರೀತಿ ಜಗಳ ಮಾಡಿದರೆ ನಿನ್ನ ಮೇಲೆ ಪೊಲೀಸ್ ಕೇಸ ಮಾಡಿಸುತ್ತೇನ ಅಂತಾ ನಮ್ಮ ಭಾವನಿಗೆ ಹೇಳಿ ಜಗಳ ಬಿಡಿಸಿರುತ್ತೇನ. ನಂತರ ನಮ್ಮ ಅಕ್ಕಳಿಗೆ ತಿಳುವಳಿಕೆ ಹೇಳಿ  ಊಟ ಮಾಡಿ ಮಲಗಿಕೊಳ್ಳಿ ಅಂತಾ ಹೇಳಿ ರಾತ್ರಿ ನಮ್ಮ ಮನಗೆ ವಾಪಸ ಹೋಗಿರುತ್ತೇನೆ.ರಾತ್ರಿ 9-00 ಗಂಟೆಯಿಂದ ದಿನಾಂಕ:25-6-2013 ರಂದು ಬೆಳಗ್ಗೆ 6-00 ಗಂಟೆಯ ಮದ್ಯದ ಅವಧಿಯಲ್ಲಿ ಶೇಖ ಮಹಿಬೂಬ ಇತನು ನಮ್ಮ ಅಕ್ಕ ಪರವೀನ ಬೇಗಂ ಇವಳನ್ನು ಮನಗೆ ಸಾಮಾನು ತಂದು ಕೋಡುವ ವಿಷಯದಲ್ಲಿ  ಜಗಳ ಮಾಡಿ ಕುತ್ತಿಗೆ ಒತ್ತಿ ಕೊಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 321/2013 ಕಲಂ. 302 ಐಪಿಸಿ ನೆದ್ದರ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ, ಸಿದ್ದು ತಂದೆ ತಮ್ಮಣ್ಣಾ ಕುಂಬಾರ ಸಾಃ ಬೆಣ್ಣೂರ (ಬಿ) ತಾಃ ಚಿತ್ತಾಪೂರ ರವರು  ನಾನು ದಿನಾಂಕ:24-06-2013 ರಂದು ಮಧ್ಯಾಹ್ನ 2-00 ಗಂಟೆಗೆ  ಸಿ.ಟಿ. ಬಸ್ ಸ್ಟಾಂಡ ಕಡೆಯಿಂದ ಹೆಡ್ ಪೊಸ್ಟ ಆಫೀಸ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆ.ಎ19 ಎಮ್.ಬಿ-7134 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2013 ಕಲಂ, 279, 337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ  ಪೊಲೀಸ್ ಠಾಣೆ:ಶ್ರೀ.ಶಾಂತಾಬಾಯಿ ಗಂಡ ರಾಜಶೇಖರ ಸಿಗರಕಂಠೀ ಸಾ: ನಿಂಬಾಳ  ತಾ:ಆಳಂದ ಹಾ:ವಾ:ಸೋಲಾಪೂರ ರವರು ನಾನು ನನ್ನ ಗಂಡ ರಾಜಶೇಖರ ಹಾಗೂ ಮಕ್ಕಳು ಎಲ್ಲರೂ ನಿಂಬಾಳ ಬಿಟ್ಟು ಸೋಲಾಪೂರದಲ್ಲಿ ವಾಸವಾಗಿದ್ದು, ನಿಂಬಾಳದಲ್ಲಿರುವ ಹೊಲ ನೋಡಿಕೊಳ್ಳಲು ಆಗ್ಗಾಗ್ಗೆ ನಿಂಬಾಳಕ್ಕೆ ಹೋಗಿ ಬಂದು ಮಾಡುತ್ತೆವೆ ಸದರ ಹೊಲದ ಸಂಬಂಧವಾಗಿ ನಮ್ಮ ಮೈದುನನಾದ ಲಕ್ಷ್ಮೀಪುತ್ರ ಜಗಳ ಮಾಡುತ್ತಾ ಬಂದಿರುತ್ತಾನೆ. ದಿನಾಂಕ:24/06/2013 ರಂದು 11:45 ಗಂಟೆಗೆ ನಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದಾಗ ನನ್ನ ಮೈದುನ  ಲಕ್ಷ್ಮೀಪುತ್ರ ತಂದೆ ಬಸವಣಪ್ಪ ಸಿಗರಕಂಠಿ ಇತನು ಹೊಲದಲ್ಲಿ ಬಂದು ಬಿತ್ತನೆ ಮಾಡುತ್ತಿದ್ದನ್ನು ನಿಲ್ಲಿಸಿ ನನಗೆ  ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿ ಈ ಹೊಲದಲ್ಲಿ ಬಂದರೆ ಸುಡುತ್ತೆನೆ ಅಂತಾ ಬೇದರಿಕೆ ಹಾಕಿರುತ್ತಾನೆ. ಮತ್ತು ಅವಮಾನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ: 53/2013 ಕಲಂ 323,324,341,354,447,504,506 ಐಪಿಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

24 June 2013

GULBARGA DISTRICT REPORTED CRIME

ಅಪಹರಣ ಪ್ರಕರಣ:


ಮಳಖೇಡ ಪೊಲೀಸ್ ಠಾಣೆ:ದಿನಾಂಕ 24/06/2013 ರಂದು ಮಧ್ಯಾಹ್ನ 2:00 ಗಂಟೆ ಸುಮಾರಿಗೆ  2೦ ವರ್ಷದ ಮಗಳಿಗೆ ಇವಳಿಗೆ ದಿನಾಂಕ:14/06/2013 ರಂದು ಬೆಳಿಗ್ಗೆ 5:00 ಗಂಟೆಗೆ ತನ್ನ ತಾಯಿಯೊಂದಿಗೆ ಸಂಡಾಸಕ್ಕೆ ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿರುವಾಗ ಸೋಮಶೇಖರ, ಶಿವಾನಂದ, ಪದ್ಮಣ್ಣ ಯಲ್ಲಾಲಿಂಗ, ಬೀರಪ್ಪ ಇವರೆಲ್ಲರು ಕೂಡಿಕೊಂಡು ಬಂದು ಅವರಲ್ಲಿ ಸೋಮಶೇಖರ ಮತ್ತು ಶಿವಾನಂದ ಇವರು ನನ್ನ ಮಗಳ ಬಾಯಿಯನ್ನು ಒತ್ತಿ ಹಿಡಿದು ಮೋಟಾರು ಸೈಕಲ್ ಮೇಲೆ ಕೂಡಿಸಿಕೊಳ್ಳುತ್ತಿರುವದನ್ನು ಕಂಡು ಅವಳಿಗೆ ಬೀಡಿ ಅಂತಾ ನನ್ನ ಹೆಂಡತಿ ಚೀರಾಡುತ್ತಿರುವಾಗ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಯುವತಿಯ ತಂದೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:63/2013 ಕಲಂ 147. 366. 504. ಸಂಗಡ 149 ಐಪಿಸಿ ಮತ್ತು 3 (1) (X)ಎಸ್.ಸಿ  ಎಸ್.ಟಿ  ಪಿ.ಎ ಆಕ್ಟ್-1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ರಮೇಶ ತಂದೆ ಭೀಮಸಿಂಗ ರಾಠೋಡ  ಉ|| ಕಿರಾಣಿ ವ್ಯಾಪಾರ  ಜಾ|| ಲಂಬಾಣಿ ಸಾ|| ಏತೆಬಾರಪೂರ ರಾಮಶೆಟ್ಟಿನಾಯಕ  ತಾಂಡಾ ತಾ|| ಚಿಂಚೋಳಿ ರವರು ನಮ್ಮ ತಾಂಡಾದ ರಾವುಲ ತಂದೆ ಭಾವಸಿಂಗ ರಾಠೋಡ ವ|| 10 ವರ್ಷ ಇತನು ದಿನಾಂಕ 22-06-2013 ರಂಧು ಸಾಯಾಂಕಾಲ 04.30 ಗಂಟೆಗೆ ಸುಮಾರಿಗೆ ನಮ್ಮ ಕಿರಾಣಿ ಅಂಗಡಿಗೆ ಬಂದು ಪಾಪಡ ಕರಿದಿ ಮಾಡಿಕೊಂಡು ನಮ್ಮ ಕಿರಾಣಿ ಅಂಗಡಿಯ ಸಮಿಮ ವಿರುವ ಸರಕಾರಿ ಶಾಲೆಯ ಮುಂದೆ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಆಟವಾಡುತ್ತಿರುವಾಗ ರಾಹುಲ ಇತನು ಪಾಪಡ ತಿನ್ನುತ್ತಾ ಆಟವಾಡುವದನ್ನು ನೋಡತ್ತಾ ನಿಂತಿದ್ದನು. ಆಗ ಬಾಬು ತಂದೆ ಭೀಮಸಿಂಗ ಇತನು ಕಲ್ಲುಗಳನ್ನು ಹೊಡೆಯುತ್ತಾ ನಮ್ಮ ಕಿರಾಣಿ ಅಂಗಡಿಯ ಕಡೆಗೆ ಬಂದನು ಆಗ ನಾನು ಸದರಿ ಬಾಬು ಇತನಿಗೆ ಈ ರೀತಿ ಕಲ್ಲುಗಳು ಹೊಡೆಯಬೇಡಾ? ಯಾರಿಗಾದರೂ ಕಲ್ಲು ಬಡೆದು ಅನಾಹುತಾ ಮಾಡುತ್ತಿ ಅಂತ ಹೇಳಲು ನೀ ಏನು ಹೇಳುತ್ತಿ ಅಂತ ಪುನಃ  ಆಟವಾಡುತ್ತಿದ್ದ ಹುಡಗರ ಕಡೆಗೆ ಕಲ್ಲು ಹೊಡೆದನು ಹಾಗೆ ಕಲ್ಲು ಹೊಡೆದರೆ ಹುಡುಗರು ಸಾಯುತ್ತಾರೆ ಅಂತಾ ಹೇಳಿದರು ಉದ್ದೇಶಪೂರ್ವಕವಾಗಿ ಒಂದು ಕಲ್ಲನ್ನು ತೆಗೆದುಕೊಂಡು ಜೋರಾಗಿ ರಾಹುಲ ತಂದೆ ಭಾವಸಿಂಗ ರಾಠೋಡ ಇವನಿಗೆ ತಲೆಗೆ ಹೊಡೆದನು. ಇದರಿಂದ ತಲೆಗೆ ಪೆಟ್ಟಾಗಿ ರಕ್ತ ಬರುತ್ತಿತ್ತು ಅಷ್ಟರಲ್ಲಿ ಭಾವಸಿಂಗ ರಾಠೋಡ, ಶಾಂತಬಾಯಿ ಗಂಡ ಭಾವಸಿಂಗ ,ನಾರಾಯಣ ತಂಧೆ ದಾಮಲಾ ರಾಠೋಡ, ಶಾಮರಾವ್ ತಂಧೆ ಅಂಬುನಾಯಕ ಮತ್ತು ರಾಮು ತಂದೆ ಮೋತು ರಾಠೋಡ ಇವರು ಸಹ ಸದರಿ ಸ್ಥಳಕ್ಕೆ ಬಂದು ನಾವೆಲ್ಲರೂ ಕೂಡಿಕೊಂಡು ಸದರಿ ರಾವುಲ ಇವನಿಗೆ ಉಪಚಾರ ಕುರಿತು  ಸರಕಾರಿ ಆಸ್ಪತ್ರೆ ಚಂದಾಪೂರಕ್ಕೆ ತಂಧು ಸೆರಿಕೆ ಮಾಡಿದ್ದು ವೈಧ್ಯಾಧಿಕಾರಿಗಳು ಸದರಿ ರಾವುಲನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೋಟ್ಟಿರುತ್ತಾರೆ. ಸದರಿ ರಾವುಲ ಇತನು ಪ್ರಜ್ಞಾಹಿನಾ ಸ್ಥಿತಿಯಲ್ಲಿರುತ್ತಾನೆ. ಭಾಬು ತಂಧೆ ಬೀಮಸಿಂಗ ಪವಾರ ಇತನು ಉದ್ದೇಶಪೂರ್ವಕವಾಗಿ ರಾವುಲ ಇತನ ತಲೆಗೆ ಕಲ್ಲಿನಿಂದ ಹೊಡೆದು ಬಾರಿ ರಕ್ತಗಾಯಪಡಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:153/2013 ಕಲಂ 307 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:23-06-2013 ರಂದು ಮಧ್ಯಾಹ್ನ  ಪಿಎಸ್ಐ ಕಮಲಾಪೂರ ಮತ್ತು ಅವರ ಸಿಬ್ಬಂದಿಯವರು ಪಟವಾದ ಗ್ರಾಮದಲ್ಲಿ ಸಂತೋಷ ತಡೋಳಗಿ ಇವರ ಹೋಟೆಲ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಮೇಲೆ ದಾಳಿ ಜೂಜಾಟದಲ್ಲಿ ನಿರತರಾದ ಸಂತೋಷ ತಂದೆ ಶ್ಯಾಮರಾವ ತಡೋಳಗಿ,ರವಿ ತಂದೆ ಹಣಮಂತ ಜಮಾದಾರ,ಸತೀಷ ತಂದೆ ಮಲ್ಲಿಕಾಜರ್ುನ ಖಾನಾಪೂರ, ಶಂಕರ ತಂದೆ ನಾಗಶೆಟ್ಟೆಪ್ಪಾ ಪಾಟೀಲ,ಸಂತೋಷ ತಂದೆ ರಾಜಪ್ಪಾ ರಾಮಾ,ಅಮೃತ ತಂದೆ ನಾಗಪ್ಪಾ ಜಮಾದಾರ,ರಮೇಶ ತಂದೆ ನರಸಪ್ಪಾ ಜಮಾದಾರ,ರಮೇಶ ತಂದೆ ಹಣಮಂತಪ್ಪಾ ಜಮಾದಾರ,ಅನೀಲ ತಂದೆ ರೇವಣಸಿದ್ದಪ್ಪಾ ರಂಜೇರಿ  ಸಾಃ ಎಲ್ಲರೂ ಪಟವಾದ ತಾಃಜಿಃ ಗುಲಬರ್ಗಾ ರವರಿಂದ ನಗದು ಹಣ 3150-00 ರೂಪಾಯಿಗಳು ಹಾಗೂ ಜೂಜಾಟ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 61/2013 ಕಲಂ, 87 ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಚೌಕ ಪೊಲೀಸ ಠಾಣೆ: ಶ್ರೀ ಬಾಲಚಂದ್ರ ತಂದೆ ಸಂತಾನ ಕೃಷ್ಣ ನಾಯ್ಡು ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ರವರು ತಾನು ನೇತಾಜಿ ಚೌಕ ಹತ್ತಿರ ಎಸ್.ವಿ ಮಠಪತಿ ಬಿಲ್ಡಿಂಗನಲ್ಲಿ ಎಲೆಕ್ಟ್ರಿಕಲ್ ಹೊಲಸೆಲ್ ಅಂಗಡಿ ಇಟ್ಟುಕೊಂಡಿದ್ದು, ದಿನಾಂಕ:21.06.2013 ರಂದು ಎಂದಿನಂತೆ ವ್ಯಾಪಾರ ಮಾಡಿಕೊಂಡು ರಾತ್ರಿ 10 ಗಂಟೆಗೆ ಅಂಗಡಿ ಮುಚ್ಚಿಕೊಂಡು ಹೋಗಿದ್ದು ದಿನಾಂಕ:22.06.2013 ರಂದು ಬೆಳಗ್ಗೆ 07-00 ಗಂಟೆಗೆ ಪಕ್ಕದ ಬೇಕರಿಯ ಅಶೋಕ ಉಡಗಿಯವರು ಪೋನ ಮಾಡಿ ನಿಮ್ಮ ಅಂಗಡಿ ರಾತ್ರಿಯ ಸಮಯದಲ್ಲಿ ಕಳ್ಳತನವಾಗಿರುತ್ತದೆ ಅಂತಾ ತಿಳಸಿದ್ದರಿಂದ ಹೋಗಿ ನೋಡಲು ಅಂಗಡಿಯಲ್ಲಿದ್ದ 12-13 ಎಲೆಕ್ಟ್ರಾನಿಕ್ ಪ್ಲಕೇಜಿಬಲ್ ಹಾಗೂ ಕಾಪರ ವೈಯರ್ ಬಂಡಾಲ ಸಾಮಾನುಗಳು ಅಃಕಿಃ 99,000/- ರೂಪಾಯಿ ಬೆಲೆಬಾಳುವವು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಅಂತಾ ಠಾಣೆ ಗುನ್ನೆ ನಂ:136/2013 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

23 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ, ಭೀಮಣ್ಣ ತಂದೆ ಹಣಮಂತ ನಿಂಗಾಪೊರ ಸಾ:ವಾಲ್ಮಿಕಿ ನಗರ ಶೆಟ್ಟಿ ಹುಡಾ ಸೇಡಂ. ತಾ:ಸೇಡಂ ರವರು ತನ್ನ ಮಗನಾದ ರಾಜು ಇತನು ವಾಸವದತ್ತಾ ಕಂಪನಿಯಲ್ಲಿ ಲೊಡಿಂಗ್ ಕೆಲಸಕ್ಕೆ ಅಂತಾ ರಾತ್ರಿ 10-00  ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯವರೆಗೆ ಕರ್ತವ್ಯಕ್ಕೆ  ಹಿರೋ ಸ್ಪೆಂಡರ ಪ್ಲಸ್  ಮೋಟಾರು ಸೈಕಲ್ ಚೆಸ್ಸಿ ನಂ: MBL HA 10 AMD HE 25449 ನೇದ್ದರ ಮೇಲೆ ಮನೆಯಿಂದ ಹೋಗುವಾಗ ರೇಲ್ವೇ ಒವರ್ ಬ್ರಿಡ್ಜ ರೋಡಿನ ಮೇಲೆ ಹೋಗುತ್ತಿರುವಾಗ ಸೇಡಂ ಕಡೆಯಿಂದ ಒಂದು ಮಹೇಂದ್ರ ಮ್ಯಾಕ್ಸಿಮೋ ವಾಹನ ನಂ ಕೆಎ-32-ಬಿ-5286 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದು ಎಡಗಡೆ ಸೈಡು ಬಿಟ್ಟು ಬಲಗಡೆಗೆ ಬಂದು ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಭಾರಿರಕ್ತ ಗಾಯವಾಗಿ ಕೀವಿಯಿಂದ, ಬಾಯಿಂದ, ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ, ಭೀಮಣ್ಣ ತಂದೆ ಹಣಮಂತ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:153/2013 ಕಲಂ 279 304(ಎ) ಐಪಿಸಿ  ಸಂಗಡ 187 ಐ ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 22/06/2013 ರಂದು ನಾನು ನನ್ನ ವಕೀಲ ವೃತ್ತಿ ಕೆಲಸ ಮುಗಿಸಿಕೊಂಡು  ರಾತ್ರಿ 9-00 ಗಂಟೆಗೆ  ವರ್ದನ ನಗರದಲ್ಲಿರುವ ನಮ್ಮ ಮನೆಗೆ ಬರುತ್ತಿರುವಾಗ ನಮ್ಮ ಮನೆಯ ಹತ್ತಿರ ಇರುವ ಮಹೇಂದ್ರ ಸರ್ವಿಸ ಸೆಂಟರನ ಮುಂದೆ ನನ್ನ ಮುಂದುಗಡೆಯಿಂದ 20-25 ವಯಸ್ಸಿನ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟಾರ ಸೈಕಲ ತಂದವನೇ ನನ್ನ ಮೈ ಮೇಲೆ ತಂದು ನನ್ನ ಕೊರಳಿಗೆ  ಕೈ ಹಾಕಿ ನನ್ನ ಕೊರಳಲ್ಲಿದ್ದ ಬಂಗಾರದ ಗೊಪು  ನಮೂನೆಯ ಸರ್‌ ಅದಕ್ಕೆ ಹೃದಯದಾಕಾರದ ಪದಕವಿದ್ದು  ಎರಡುವರೆ ತೋಲೆ ಬಂಗಾರ ಮತ್ತು 1 ಗ್ರಾಂ ಹವಳದ ಪದಕ  ಅಂದಾಜು ಕಿಮ್ಮತ್ತು  ರೂ. 62,000/- ಬೆಲೆಬಾಳುವುದು ನನ್ನ ಕೊರಳನಿಂದ ಕಿತ್ತುಕೊಂಡು ಹೋಗಿರುತ್ತಾನೆ ಅಂತಾ  ಸರಸಿಜ ರಾಜನ್ ವಕೀಲ ಸಾ|| ವರ್ದನ ನಗರ ಗುಲಬರ್ಗಾ ರವರು ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:99/2013 ಕಲಂ. 392 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

22 June 2013

GULBARGA DISTRICT REPORTED CRIME

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 22-06-2013 ರಂದು ಮುಂಜಾನೆ ಕರುಣೇಶ್ವರ ನಗರದ ನಮ್ಮ ಅಕ್ಕನ ಮನೆಯ ಹತ್ತಿರದ ವಿಶ್ವಾಸ ಮೊಘಜರ ಇವರು ಪೋನ ಮಾಡಿ ನಿಮ್ಮ ಅಕ್ಕನವರ ಮನೆಯ ಬಾಗಿಲ ಕೀಲಿ ಮುರಿದು ಯಾರೋ ಕಳ್ಳರು ಕಳುವು ಮಾಡಿದ ಹಾಗೇ ಕಂಡು ಬರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲು ನಮ್ಮ ಅಕ್ಕ ಮತ್ತು ಅಕ್ಕನ ಮನೆಯವರು ಮನೆಗೆ ಕೀಲಿ ಹಾಕಿಕೊಂಡು ಪೂನಾಕ್ಕೆ ಹೋಗಿರುತ್ತಾರೆ ನಮ್ಮ ಅಕ್ಕನ ಮನೆಯ ಮುಖ್ಯ ಬಾಗಿಲದ ಕೀಲಿಕೊಂಡಿ ಮುರಿದು ಬೆಡರೂಮಿನಲ್ಲಿಯ ಅಲಮಾರದ ಕೀಲಿ ಮುರಿದು ಲಾಕರದಲ್ಲಿಯ 40,000 ನಗದು ಹಣ ಎರಡೂವರೆ ತೊಲೆ ಬಂಗಾರ 1 ಕೆ.ಜಿ ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 1,30,000=00 ರೂ ಬೆಲೆಬಾಳುವ ಹಣ ಬಂಗಾರ ಬೆಳ್ಳಿ ಕಳವುವಾಗಿರುತ್ತದೆ  ಅಂತಾ ಶ್ರೀ ಶಶಾಂಕ ತಂದೆ ಗೋಪಾಲ ಕೃಷ್ಣ ಹೆರೋರ ಸಾ:ಬ್ರಹ್ಮಪೂರ ಗುಲಬರ್ಗಾ ರವರು ತನ್ನ ಅಕ್ಕನ ಮನೆ ಕಳವುವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ;98/2013 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ . 

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ ಠಾಣೆ:ಶ್ರೀಮತಿ ಶಿವಕಾಂತಮ್ಮ ಗಂಡ ಹುಲಿಗಯ್ಯ ಗುತ್ತಧಾರ ಸಾ: ಸಾಯಿರಾಮ ನಗರ ಗುಲಬರ್ಗಾ ರವರು ನಾನಿ ಬೀದರಕ್ಕೆ ಹೋಗಿದ್ದಾಗ ದಿನಾಂಕ 20/21-06-2013 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸಾಯಿ ರಾಮ ನಗರದಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮೂರಿದು ಮನೆಯಲ್ಲಿಟ್ಟ ಬಂಗಾರದ 2 ಸುತ್ತು ಉಂಗುರ ಸಾದಾ ನಮೂನೆಯ ತಲಾ 5 ಗ್ರಾಂ ಒಟ್ಟು 10 ಗ್ರಾಂ ಅ,ಕಿ 25,000/- , ಬಂಗಾರದ ಬಿಸ್ಕಿಟ ನಮೂನೆಯ ಇದ್ದ ಬಂಗಾರ 15 ಗ್ರಾಂ ಅ.ಕಿ 45,000/- ರೂ, ಬೆಳ್ಳಿಯ ನಾಲ್ಕು ಗ್ಲಾಸಗಳು ಡಿಸೈನದ್ದು ಅ.ಕಿ 6,000/-,ಬೆಳ್ಳಿಯ ಬಟ್ಟಲುಗಳು ಸಾದಾ ಮಾಟದ್ದು 4 ಅ.ಕಿ 2000/- ,ಬೆಳ್ಳಿಯ ಪ್ಲೇಟಗಳು 5 ಅ.ಕಿ 3000/-, ನಗದು ಹಣ ಒಟ್ಟು 19,300/- ಇವುಗಳಲ್ಲಿ 500, 100 ರೂಪಾಯಿ ನೋಟುಗಳಿದ್ದವು. ಹೀಗೆ ಒಟ್ಟು  1,00,300/- ರೂ ಬೆಲೆ ಯುಳ್ಳದ್ದು ಕಳುವಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:97/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ. ಜಗದೇವಿ ಗಂಡ ಜೈಭೀಮ ಚನ್ನಗುಂಡೆ  ವಯ:26 ವರ್ಷ ಉ: ಹೊಲ-ಮನೆ ಕೆಲಸ  ಜಾತಿ:ಹೊಲೆಯ  ಸಾ: ಕೇರೂರ  ತಾ: ಆಳಂದ ರವರು ನನ್ನ ಗಂಡನಾದ ಜೈಭೀಮ ಇತನು ದಿನಾಂಕ:28/05/2013 ರಂದು ಮಧ್ಯಾಹ್ನ 2 ಗಂಟೆಗೆ ನಮ್ಮ ಕೇರೂರ ಗ್ರಾಮದಿಂದ ಮಾದನ ಹಿಪ್ಪರಗಾಕ್ಕೆ ಹೋಗಿ ಬಜಾರ ಮಾಡಿಕೊಂಡು ಬರುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಮರಳಿ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು  ಪತ್ತೆಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ.ನಂ:52/2013 ಕಲಂ: ಮನುಷ್ಯ ಕಾಣೆಯಾದ ಬಗ್ಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷೀಣೆ ಕಿರುಕುಳ ಪ್ರಕರಣ:
ಶಹಾಬಾದ ನಗರ ಠಾಣೆ;ದಿನಾಂಕ:16/04/2012 ರಂದು ಪೇಠಶಿರೂರ ಗ್ರಾಮದಲ್ಲಿ ಆನಂದರಾವ ಘಾಟೆ ಇವರ ಮಗನಾದ ರಾಜೇಶ ಇವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿರುತ್ತಾರೆ. ನನಗೆ ಆಂಧ್ರದ ವೆಲ್ಗಟೂರ ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತಾರೆ ಅಲ್ಲಿ ನನ್ನ ಗಂಡ ರಾಜೇಶ, ಮಾವ ಆನಂದರಾವ, ಅತ್ತೆ ಶಾಂತ@ಖ್ಯಾದ, ನಾದಿನಿಯರಾದ ಜ್ಯೋತಿ, ರಜಿತ, ಲತಾ ಇವರೆಲ್ಲರೂ ಸೇರಿಕೊಂಡು ನೀನು ದರಿದ್ರ ಹೆಣ್ಣು ಗಂಟು ಬಿದ್ದೀದಿ, ನಿನಗೆ ಮದುವೆ ಮಾಡಿಕೊಂಡಿದ್ದಕ್ಕೆ ಯಾವುದೆ ಲಾಭ ಆಗಿಲ್ಲ  ತವರು ಮನೆಯಿಂದ ಮದುವೆಯಲ್ಲಿ ಕೊಟ್ಟ ಸಾಮಾನುಗಳು ಯಾವುದಕ್ಕೂ ಬರುವದಿಲ್ಲಾ ನಿನಗೆ ಅಡುಗೆ ಮಾಡಲು ಬರುವದಿಲ್ಲಾ, ನಡತೆಗೆಟ್ಟವಳು ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ತವರು ಮನೆಯಿಂದ ಇನ್ನೂ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಮಾನಸಿಕ ಹಿಂಸೆ ನೀಡಿರುತ್ತಾರೆ ಹಾಗೂ ವಿಷ ಬೇರಿಸಿದ ಔಷದ ಕೊಟ್ಟು, ಗ್ಯಾಸ ಸಿಲಿಂಡೆರ ತೆರೆದು, ಭಾವಿಗೆ ನೂಕಿ ಕೊಲ್ಲಲು ಪ್ರಯತ್ನಿಸಿರುತ್ತಾರೆ, ಹಾಗೂ ಕೈಯಿಂದ ಹೊಡೆದಿರುತ್ತಾರೆ, ನಿನ್ನೆ ರಾತ್ರಿ 10-11 ಸುಮಾರಿನ ಸಮಯದಲ್ಲಿ ನನ್ನ ಗಂಡ, ಮಾವ, ಅತ್ತೆ ಮತ್ತು ಮೂವರು ನಾದಿನಿಯರು ಸೇರಿಕೊಂಡು ನನ್ನ ತವರು ಮನೆಯಾದ ಶಹಾಬಾದಕ್ಕೆ ಬಂದು ನೀನು ವಿಚ್ಛೇದನಾ ಕೊಡದಿದ್ದರೆ ನಿನಗೆ ಮತ್ತು ನಿನ್ನ ತವರು ಮನೆಯವರಿಗೆ ಖಲಾಸ ಮಾಡುವದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ ಶಿವರಂಜನಿ ಗಂಡ ರಾಜೇಶ ಗಾಟೆ ವ:19 ಜಾ:ಯಾದವ ಉ:ಮನೆಕೆಲಸ ಸಾ:ವೆಲ್ಗೆಟೂರ ಜಿಲ್ಲೆ:ಕರೀಂ ನಗರ ರಾಜ್ಯ ಆಂಧ್ರ ಪ್ರದೇಶ ಹಾ:ವ:ಹನುಮಾನ ನಗರ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2013 ಕಲಂ:323,307,498(ಎ),504,506 ಸಂ:149 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಚಾರ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ:ನಾನು ಎರಡು ಗಂಡು ಮಕ್ಕಳ ತಾಯಿಯಿದ್ದು, ನನ್ನ ನನ್ನ ಗಂಡ ಗ್ಯಾಸ ರೀಪೆರಿ ಮತ್ತು ರೀಫಿಲಿಂಗ ಸೇಂಟರ್ ಅಂಗಡಿ ಇಟ್ಟುಕೊಂಡಿರುತ್ತಾರೆ. ನನ್ನ ಗಂಡ ವ್ಯಾಪಾರ ಮಾಡುವ ಅಂಗಡಿಯಲ್ಲಿ ವಿಜಯಕುಮಾರ ತಂದೆ ನಾಗೇಂದ್ರಪ್ಪಾ ಅಣಕಲ ಎಂಬುವನು ನಾವು ಈ ಮೊದಲು ಸಿದ್ದೇಶ್ವರ ಕಾಲೋನಿಯಲ್ಲಿದ್ದಾಗ ಕೆಲಸ ಮಾಡುತ್ತಿದ್ದರು. ನನ್ನ ಗಂಡನಿಗೆ ಊಟದ ಬುತ್ತಿ ತೆಗೆದುಕೊಂಡು ಹೋದಾಗ ಅವನು ನಮ್ಮ್ಲಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಿಚಯವಾಗಿರುತ್ತದೆ ಸುಮಾರು 5-6 ತಿಂಗಳ ಹಿಂದೆ ನನ್ನ ಮನೆಗೆ ವಿಜಯಕುಮಾರ ಅಣಕಲ ಇತನು ಬಂದು ನಿನ್ನ ಗಂಡನಿಗೆ  ಮೂರು ಲಕ್ಷ ರೂಪಾಯಿ ಸಾಲ ಕೊಟ್ಟಿರುತ್ತೇನೆ ಸಾಲ ಕೊಡು ಅಂದರೆ ಅವನು ತಲೆ ಮರೆಸಿಕೊಂಡಿರುತ್ತಾನೆ ಅಂತಾ ಬೈದು ನನಗೆ ಕೂದಲು ಹಿಡಿದು ಎಳೆದಾಡಿ ಹೊಡೆ ಬಡೆ ಮಾಡುತ್ತಿರುವದನ್ನು ಕಂಡು ನಮ್ಮ ಮನೆಯ ಮಾಲಿಕರು ಜಗಳ ಬಿಡಿಸಿದರು, ನನ್ನ ಗಂಡನಿಗೆ ವಿಷಯ ತಿಳಿಸಿದೆ ಅವರು ವಿಜಯಕುಮಾರನಿಗೆ ತಮ್ಮನಿಂಗಿತ ಹೆಚ್ಚಿಗೆ ನೋಡಿರುತ್ತೇನೆ ವಿಚಾರಿಸೊಣ ಅಂತಾ ಸುಮ್ಮನಾದರು ದಿನಾಂಕ:27.05.2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ರಾಜು ಎಂಬುವನು ಮನೆಗೆ ಬಂದು ನಿಮಗೆ ವಿಜಯಕುಮಾರ ಕರೆಯುತ್ತಿದ್ದಾನೆ ಅಂತಾ ಹೇಳಿದ್ದರಿಂದ ನಾನು ಹಣದ ವಿಷಯದಲ್ಲಿ ಕರೆಯಿತ್ತಿರಬಹುದು ಅಂತಾ ನನ್ನ ಮಕ್ಕಳೊಂದಿಗೆ ರಾಜುವಿನೊಂದಿಗೆ ಹಿಂಬಾಲಿಸಿ ವಿಜಯಕುಮಾರ ಇದ್ದಲ್ಲಿಗೆ ಹೋದೆನು. ಅಲ್ಲಿ ವಿಜಯಕುಮಾರ ಹಾಗೂ ಇತರ 3-4 ಜನರು ವಿಜಯಕುಮಾರನು ಇತ್ತಿಚಿಗೆ ಕ್ರೂಜರ್ ಜೀಪ ಖರೀದಿಸಿದ ವಾಹನದಲ್ಲಿ ಆಳಂದ ಪಟ್ಟಣಕ್ಕೆ ಕರೆದುಕೊಂಡು ಹೋಗಿ ರಫೀಕ ಎಂಬುವವರ ಮನೆಯಲ್ಲಿ ಕೂಡಿ ಹಾಕಿ ದಿನಾಂಕ:27.05.2013 ರಿಂದ ದಿನಾಂಕ:21.06.2013 ರವರೆಗೆ ಪ್ರತಿ ದಿವಸ ಕುಡಿದು ಬಂದು ನನ್ನ ಮಕ್ಕಳಿಗೆ ಕೊಲೆ ಮಾಡುತ್ತೇನೆ ಅಂತಾ ಬೆದರಿಸಿ ನನ್ನೊಂದಿಗೆ ಜಬರಿ ಸಂಬೋಗ ಪ್ರತಿ ರಾತ್ರಿ ಮಾಡಿರುತ್ತಾನೆ. ಬೆಳಿಗ್ಗೆ ಅವನ ಮಿತ್ರರು ಕಾವಲು ಕಾಯುತ್ತಿದ್ದರು. ದಿನಾಂಕ:21.06.2013 ರಂದು ಮಧ್ಯಾಹ್ನ ನನ್ನ ಗಂಡನಿಗರ ಪೋನ ಮಾಡಿ ನಾ ಇರುವ ಸ್ಥಳ  ಹಾಗೂ  ನನಗೆ ಅಪಹರಿಸಿ ಜಬರಿ ಸಂಬೋಗ ಮಾಡಿದ ಬಗ್ಗೆ ತಿಳಿಸಿದರಿಂದ ನನ್ನನ್ನು ಕರೆದುಕೊಂಡು ಬಂದಿರುತ್ತಾರೆ ಅಂತಾ ನೊಂದ 28 ವರ್ಷದ ಮಹಿಳೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:37/2013 ಕಲಂ 143.147.341.366.376.504.506.ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

21 June 2013

GULBARGA DISTRICT REPORTED CRIME

ಅಪಘಾತ ಪ್ರಕರಣ:


ವಾಡಿ ಪೊಲೀಸ್ ಠಾಣೆ:ದಿನಾಂಕ:20-06-2013 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ನನ್ನ ಮಗ ಬಾಬುಮಿಯಾ ತನ್ನ ಹೀರೊ ಹೊಂಡಾ ಪ್ಯಾಸನ್ ಮೋಟರ್ ಸೈಕಲ್ ನಂ ಕೆಎ-39 ಎಚ್-9334 ನೇದ್ದರ ಮೇಲೆ ಹಲಕಟ್ಟಾಗೆ ಬರುತ್ತಿರುವಾಗ ಚೌವಾಣ ದಾಬಾ ಹತ್ತಿರ ರಸ್ತೆಯ ಮೇಲೆ ಲಾರಿ ನಂ ಕೆಎ-32 ಬಿ-2343 ನೇದ್ದರ ಚಾಲಕ ನಿರ್ಲಕ್ಷತನದಿಂದ ರಸ್ತೆಯಲ್ಲಿ ಲಾರಿ ನಿಲ್ಲಿಸಿ ಯಾವುದೇ ಮುನ್ಸೂಚನೆ ಲೈಟ ಹಾಕದೇ ನಿಲ್ಲಿಸಿದ್ದರಿಂದ ನನ್ನ ಮಗ ತನ್ನ ಮೋಟಾರು ಸೈಕಲದೊಂದಿಗೆ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮಗನಿಗೆ ತಲೆಗೆ, ಮುಖಕ್ಕೆ ಎದೆಗೆ ಬಾರಿ ರಕ್ತಗಾಯವಾಗಿತ್ತು, ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ರಾತ್ರಿ 11.00 ಗಂಟೆಗೆ ತೆಗೆದುಕೊಂಡು ಬಂದಾಗ ವೈದ್ಯರು ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದರು. ನನ್ನ ಮಗ ಸಾವಿಗೆ ಲಾರಿಯ ಚಾಲಕನೇ ಕಾರಣನನಾಗಿರುತ್ತಾನೆ. ಅಂತಾ ಶ್ರೀ,ಮತಿ ಸಾಹೇಬಿ ಗಂಡ ಬಾಸುಮಿಯಾ ಮಲ್ಲೆವಾಲೆ ಸಾ|| ಹಲಕಟ್ಟಾ ದರ್ಗಾದ ಹತ್ತಿರ ಹಲಕಟ್ಟ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:107/2013 ಕಲಂ 279,283,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

19 June 2013

GULBARGA DISTRICT REPORTED CRIMES

ಎರಡನೆ ಮದುವೆ ಮಾಡಿಕೊಂಡ ಬಗ್ಗೆ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:18/06/2013 ರಂದು ಸಾಯಂಕಾಲ 6-00 ಗಂಟೆಗೆ ನಮ್ಮ ಠಾಣೆಯ ಕೋರ್ಟ ಸಿಬ್ಬಂದಿಯಾದ ಶ್ರೀ ಮಾಣಿಕ ಪಿಸಿ ರವರು ಮಾನ್ಯ 1ನೇ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಸಂ.2469 ದಿನಾಂಕ: 14/06/2013 ನೇದ್ದರ ಅರ್ಜಿದಾರಳಾದ ಶ್ರೀಮತಿ ಉಷಾದೇವಿ ಗಂಡ ಸಂಗಣ್ಣಾ ಕಲ್ಲೂರ ವಯ:55ವರ್ಷ ಉಃಮನೆಕೆಲಸ ಸಾಃಹೊಳಕುಂದಾ ತಾಃಗುಲಬರ್ಗಾ ಇವರು 1975 ರಲ್ಲಿ ಸಂಗಣ್ಣಾ ತಂದೆ ಬಸವಣ್ಣಪ್ಪಾ ಕಲ್ಲೂರ ವಯ:60 ವರ್ಷ ಉಃನಿವೃತ್ತ ಫಾರೆಸ್ಟ ಅಧಿಕಾರಿಯೊಂದಿಗೆ ಮದುವೆಯಾಗಿದ್ದು. ನಮಗೆ ಮಹಾನಂದ ಎಂಬ ಮಗಳು ಜನಿಸಿದ್ದು ಅವಳು 3 ವರ್ಷದ ನಂತರ ಅನಾರೋಗ್ಯದಿಂದ ಮೃತಪಟ್ಟಿದ್ದು. ಮದುವೆಯಾದ 4-5 ವರ್ಷಗಳ ನಂತರ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕವಾಗಿ ನೌಕರಿಗೆ ಸೇರಿ, ಅವರಾದ ತಾಲ್ಲೂಕಿನ ಸಂಗಮ ಫಾರೆಸ್ಟಗೆ ವರ್ಗಾವಣೆಯಾಗಿ ನಂತರ ಹುಮನಾಬಾದಕ್ಕೆ  ವರ್ಗಾವಣೆಯಾಯಿತು. ಆವಾಗಿನಿಂದ ದಿನಾಲು ಕುಡಿಯುವುದು ತಿನ್ನುವುದು ಮಜಾ ಮಾಡಿ  ಹೊಡೆಬಡೆ ಮಾಡುತ್ತಿದ್ದನು. ನಾನು ಬೇಸತ್ತು ನಾನು ನನ್ನ ತವರು ಮನೆಯಲ್ಲಿ ಬಂದು ಉಳಿದೇನು. ನಂತರ ನನಗೆ ಗೊತ್ತಾಗದಂತೆ 2000ನೇ ಸಾಲಿನಲ್ಲಿ ಕಮಲಾಪೂರ ಗ್ರಾಮದ ರಾಮತೀರ್ಥ ಗುಡಿಯಲ್ಲಿ ರೇಣುಕಾ @ ಆಶಾದೇವಿ ತಾಯಿ ನಾಗಮ್ಮಾ ಸಾಃಹೊಳಕುಂದಾ ಹಾಃವಃ ಹುಮನಾಬಾದ  (ಗಂಡ ಸಂಗಣ್ಣಾ ಕಲ್ಲೂರ ) ಇವಳೊಂದಿಗೆ 2ನೇ ಮದುವೆ ಮಾಡಿಕೊಂಡು ಮತದಾನ ಪತ್ರದಲ್ಲಿ ಹೆಸರು ಸೇರಿದ್ದು ಅಲ್ಲದೇ ತನ್ನ ಸೇವಾ ಪುಸ್ತಕದಲ್ಲಿ ನನ್ನ ಹೆಸರು ತೆಗೆದು ಹಾಕಿ 2ನೇ ಹೆಂಡತಿಯಾದ ರೇಣುಕಾ @ಆಶಾದೇವಿ ಇವಳ ಹೆಸರು ನಮೂದಿಸಿದ್ದಾರೆ.ನನ್ನ ಗಂಡ ಸಂಗಣ್ಣಾ ಈತನು 2ನೇ ಮದುವೆ ಮಾಡಿಕೊಂಡು ತನ್ನ ಸೇವಾ ಪುಸ್ತಕ ದಲ್ಲಿ 2ನೇ ಹೆಂಡತಿ ಹೆಸರು ನಮೂದಿಸಿ ನನಗೆ  ಮೋಸ ಮಾಡಿದ್ದರಿಂದ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ನ್ಯಾಯಾಲಯದ ಆದೇಶ ಪ್ರಕಾರ ದೂರು ವಸೂಲಾಗಿದ್ದರಿಂದ ಠಾಣೆ ಗುನ್ನೆ ನಂ:58/2013 ಕಲಂ. 494, 420, 465, 468, 419 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ಹೋದಾಗ ಸೂರ್ಯಕಾಂತ ಸಿಬರ್ ಈತನು ವಿನಾಃಕಾರಣ ಜಗಳ ತೆಗೆದಿದ್ದನು. ರಾತ್ರಿ 9-00 ಗಂಟೆಗೆ ಮಳಖೇಡಕ್ಕೆ ಬಂದು ಮನೆಯ ಮುಂದೆ ನಿಂತಾಗ ಸೂರ್ಯಕಾಂತ ಮತ್ತು ಅವನ ಸಂಗಡ ಅಣ್ಣ ತಮ್ಮಂದಿರು ಕೂಡಿಕೊಂಡು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಶ್ರೀ ರವಿಚಂದ್ರ ತಂದೆ ಶರಣಪ್ಪ ಸಿಬರ್ ವಯಾ|| 21 ವರ್ಷ ಜಾ|| ಕಬ್ಬಲಿಗ ಉ||  ಆರ್.ಸಿ.ಎಫ್ ಕಂಪನಿಯಲ್ಲಿ ಕೆಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:59/2013 ಕಲಂ 323. 324. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ನಾವು ಮತ್ತು ರವಿಚಂದ್ರ ತಂದೆ ಶರಣಪ್ಪ ಸಿಬರ್  2) ಸಾಬಣ್ಣ 3ನಾಗಪ್ಪ ಸಾ|| ಎಲ್ಲರು ಮಳಖೇಡ ರವರು ಜಗಳ ತೆಗೆದಿದ್ದು ಮರಳಿ ಮಳಖೇಡಕ್ಕೆ ಬಂದಾಗ ನಿಮ್ಮ ತಮ್ಮ ನಮ್ಮ ಜೋತೆ ಜಗಳ ತೆಗೆದಿದ್ದಾನೆ ನಿಮ್ಮ ಸೊಕ್ಕು ಬಹಳ ಬಂದಿದೆ ಅಂತ ಅವಾಚ್ಯವಾಗಿ ಬೈದು ಹೋಡೆ ಬಡೆ ಮಾಡಿರುತ್ತಾರೆ ಅಂತಾ ಲಕ್ಷ್ಮಿಕಾಂತ ತಂದೆ ಚಂದ್ರಪ್ಪ ಸಿಬಾನೋ ವಯಾ||23 ವರ್ಷ ಜಾ|| ಕಬ್ಬಲಿಗ ಉ|| ಆರ್.ಸಿ.ಎಫ್ ಕೇಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:60/2013 ಕಲಂ 341. 323. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

18 June 2013

GULBARGA DISTRICT REPORTED CRIME

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ:ಶ್ರೀ, ಮಹ್ಮದ ರಫೀಕ ತಂದೆ ಮಹಿಬೂಬ ಅಲಿ,  ಸಾಃ ಮೋಮಿನಪೂರ ಗುಲಬರ್ಗಾ ರವರು ನನ್ನ ಮಗ ಮಹ್ಮದ ನಬಿ ವಯಾ|| 5 ವರ್ಷ ಈತನು ತನ್ನ ತಾಯಿಯೊಂದಿಗೆ ದಿನಾಂಕ:17-06-2013 ರಂದು ರಾತ್ರಿ 8-30 ಗಂಟೆಗೆ ಮೋಮಿನಪೂರ ದಿವಾನ್ ಕಟ್ ಪೀಸ್ ಎದರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೊ ಒಂದು ಒಂದು ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಮೋಮಿನಪೂರ ಕಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 37/2013 ಕಲಂ 279, 338 ಐಪಿಸಿ ಸಂ. 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.