POLICE BHAVAN KALABURAGI

POLICE BHAVAN KALABURAGI

22 June 2013

GULBARGA DISTRICT REPORTED CRIME

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 22-06-2013 ರಂದು ಮುಂಜಾನೆ ಕರುಣೇಶ್ವರ ನಗರದ ನಮ್ಮ ಅಕ್ಕನ ಮನೆಯ ಹತ್ತಿರದ ವಿಶ್ವಾಸ ಮೊಘಜರ ಇವರು ಪೋನ ಮಾಡಿ ನಿಮ್ಮ ಅಕ್ಕನವರ ಮನೆಯ ಬಾಗಿಲ ಕೀಲಿ ಮುರಿದು ಯಾರೋ ಕಳ್ಳರು ಕಳುವು ಮಾಡಿದ ಹಾಗೇ ಕಂಡು ಬರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲು ನಮ್ಮ ಅಕ್ಕ ಮತ್ತು ಅಕ್ಕನ ಮನೆಯವರು ಮನೆಗೆ ಕೀಲಿ ಹಾಕಿಕೊಂಡು ಪೂನಾಕ್ಕೆ ಹೋಗಿರುತ್ತಾರೆ ನಮ್ಮ ಅಕ್ಕನ ಮನೆಯ ಮುಖ್ಯ ಬಾಗಿಲದ ಕೀಲಿಕೊಂಡಿ ಮುರಿದು ಬೆಡರೂಮಿನಲ್ಲಿಯ ಅಲಮಾರದ ಕೀಲಿ ಮುರಿದು ಲಾಕರದಲ್ಲಿಯ 40,000 ನಗದು ಹಣ ಎರಡೂವರೆ ತೊಲೆ ಬಂಗಾರ 1 ಕೆ.ಜಿ ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 1,30,000=00 ರೂ ಬೆಲೆಬಾಳುವ ಹಣ ಬಂಗಾರ ಬೆಳ್ಳಿ ಕಳವುವಾಗಿರುತ್ತದೆ  ಅಂತಾ ಶ್ರೀ ಶಶಾಂಕ ತಂದೆ ಗೋಪಾಲ ಕೃಷ್ಣ ಹೆರೋರ ಸಾ:ಬ್ರಹ್ಮಪೂರ ಗುಲಬರ್ಗಾ ರವರು ತನ್ನ ಅಕ್ಕನ ಮನೆ ಕಳವುವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ;98/2013 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ . 

No comments: