POLICE BHAVAN KALABURAGI

POLICE BHAVAN KALABURAGI

22 October 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ತುಳಿಸಿರಾಮ್ ತಂದೆ ಬಿಕ್ಕು ರಾಠೋಡ್ ಸಾ:ದಣ್ಣೂರತಾಂಡಾ ರವರು   ದಿನಾಂಕ:20/10/2018 ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ ನನ್ನ ಮಗನಾದ ಸುನಿಲ್ ಹಾಗೂ ನಮ್ಮತಾಂಡಾದ ಕನ್ನಿರಾಮ್ ತಂದೆ ರತ್ನು ಜಾದವ್ ಇಬ್ಬರು ಕೂಡಿ ದಣ್ಣೂರ ಗ್ರಾಮ ಪಂಚಾಯಿತಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾರೆ. ನಂತರ ಮೂರು 3-45 ಪಿ.ಎಂ ಸುಮಾರಿಗೆ ಕನ್ನಿರಾಮ್ ಇವರು ಫೋನ್ಮಾಡಿ ತಾನು ಹಾಗೂ ಸುನೀಲ ಇಬ್ಬರು ಕೂಡಿ ನಡೆದುಕೊಂಡು ನಮ್ಮ ತಾಂಡಾದಿಂದ ದಣ್ಣೂರ ಗ್ರಾಮದ ಕಡೆಗೆ ಹೋಗುವಾಗ ಹಿಂದಿನಿಂದ ನಮ್ಮ ತಾಂಡಾದ ಪ್ರೆಮಸಿಂಗ್ ತಂದೆ ಭೀಮಶ್ಯಾ ಜಾದವ್ ಹಾಗೂ ಇವರು ತಮ್ಮ ಮೊಟಾರ್ ಸೈಕಲ್ ಸಂಖ್ಯೆ ಕೆಎ32ಡಬ್ಲ್ಯೂ4937 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುನೀಲಗೆ ಜೋರಾಗಿ ಡಿಕ್ಕಿಹೊಡೆದ್ದರಿಂದ ಸುನೀಲ್ ತೆಲೆಗೆ ಭಾರಿಪೆಟ್ಟಾಗಿ ಪ್ರಜ್ಞಾತಪ್ಪಿ ಬಿದ್ದಿದ್ದಾನೆ. ನೆಲ್ಲೂರ ಹೈಸ್ಕೂಲ್ ಹತ್ತಿರ ರಸ್ತೆ ಮೇಲೆ ಆಗಿದ್ದು ಪ್ರೆಮಸಿಂಗನು ಮೊಟಾರ್ ಸೈಕಲ್ ಸಮೇತವಾಗಿ ಓಡಿ ಹೋಗಿರುತ್ತಾನೆ ಅಂತಾ  ತಿಳಿಸಿದ ಮೇರೆಗೆ ನಾನು ಹಾಗೂ ನನ್ನ ಅಳಿಯನಾದ ಅನೀಲ್ ತಂದೆ ಬನ್ಸಿ ಜಾದವ್ ಕೂಡಿ ಸ್ಥಳಕ್ಕೆ ಹೋಗಿ ನೋಡಿ ನನ್ನ ಮಗನ ತಲೆಗೆ ಭಾರಿಪೆಟ್ಟಾಗಿದ್ದು ಅಲ್ಲದೇ ಬಲಗಡೆ ಭುಜಕ್ಕೆ ಬಲಗೈ ಬಾಲಗಾಲಿಗೆ ಮತ್ತು ಮುಂಗಾಲಿಗೆ ಅಲ್ಲಲ್ಲಿ ಚೆರಚಿದ ಗಾಯಗಳಾಗಿದ್ದು ನಾವುಗಳು ಮಾತನಾಡಿಸಿದರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ತಕ್ಷಣ ನಾನು ನಮ್ಮ ತಾಂಡಾದ ಕಿಶೋರ ರಾಠೋಡ ಇವರ ಜೀಪ ತರಿಸಿ ಅದರಲ್ಲಿ ನನ್ನ ಮಗನಿಗೆ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನನ್ನ ಮಗನು ಸದ್ಯ ಉಪಚಾರ ಹೊಂದುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಲಕ್ಷ್ಮಣ ತಂದೆ ಕಲ್ಯಾಣಿ ಕಡಬಿನ ಸಾ|| ಬಜಾರ ಏರಿಯಾ ಅಫಜಲಪೂರ ರವರದು ಅಫಜಲಪೂರ ಸೀಮಾಂತರದಲ್ಲಿ ಡಿಗ್ರಿ ಕಾಲೇಜ ಹಿಂದುಗಡೆ  1 ಎಕರೆ 13 ಗುಂಟೆ ಜಮೀನು ಇರುತ್ತದೆ. ನನ್ನದು ಒಂದು ಆಕಳು ಇದ್ದು ಸದರಿ ಆಕಳನ್ನು ಪ್ರತಿ ದಿನ ಸಂಜೆ ಡಿಗ್ರಿ ಕಾಲೇಜ ಹಿಂದೆ ಇರುವ ನಮ್ಮ ಹೊಲದಲ್ಲಿ ಕಟ್ಟಿ ಮನೆಗೆ ಬರುತ್ತೇನೆ.  ಅದರಂತೆ ನಿನ್ನೆ ದಿನಾಂಕ 20-10-2018 ರಂದು ಸಂಜೆ 07:00 ಗಂಟೆಗೆ ಸದರಿ ನಮ್ಮ ಆಕಳನ್ನು ಹೊಲದಲ್ಲಿ ಕಟ್ಟಿ ಮನೆಗೆ ಬಂದಿರುತ್ತೇನೆ. ದಿನಾಂಕ 21/10/2018 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಎಂದಿನಂತೆ ನಾನು ಹೆಂಡಿಕಸ ಮಾಡಿ ಹಾಲನ್ನು ಹಿಂಡಿಕೊಂಡು ಬರಲು ನಮ್ಮ ಹೊಲಕ್ಕೆ ಹೋಗಿ ನೋಡಲು ನನ್ನ ಆಕಳು ಕಟ್ಟಿದ ಜಾಗದಲ್ಲಿ ಇರಲಿಲ್ಲ. ನಂತರ ನಾನು ನನ್ನ ತಮ್ಮ ಸುರೇಶ ಕಡಬಿನ್ ಹಾಗೂ ಮಹೇಶ ಮೂಲಿಮನಿ ಮೂರು ಜನರು ಕೂಡಿ ನಮ್ಮ ಹೊಲದಲ್ಲಿ ಹಾಗು ಆಜು-ಬಾಜು ರವರ ಹೊಲದಲ್ಲಿ ಹುಡುಕಾಡಿ ಎಲ್ಲಾ ಕಡೆ ಹುಡುಕಾಡಿದರು ನಮ್ಮ ಆಕಳು ಎಲ್ಲಿಯೂ ಸಿಕ್ಕಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರು ಎಲ್ಲಿಯೂ ನನ್ನ ಆಕಳು ಸಿಕ್ಕಿರುವುದಿಲ್ಲಾ  ಕಾರಣ ದಿನಾಂಕ 20/10/2018 ದಿಂದ 21/10/2018 06.00 ಎಮ್ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಹೊಲದಲ್ಲಿ ಬೆವಿನ ಗಿಡಕ್ಕೆ ಕಟ್ಟಿದ ಅಂದಾಜು 40,000 ರೂಪಾಯಿ ಕಿಮ್ಮತ್ತಿನ ಒಂದು ಆಕಳನ್ನು ಕಳ್ಳತನ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರುಇ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಪ್ರಭುರಾವ ತಂದೆ ಸಿದ್ದಪ್ಪಾ ಟೆಂಗಳಿ ವಿಳಾಸ;ಉಪಳಾಂವ ಗ್ರಾಮ ತಾ;ಜಿ;ಕಲಬುರಗಿ  ರವರು  ದಿನಾಂಕ.21-10-2018  ರಂದು ಮುಂಜಾನೆ 10-00 ಘಂಟೆಯ ಸುಮಾರಿಗೆ ಪ್ರತಿದಿವಸದಂತೆ ನಮ್ಮ ಹೊಲಕ್ಕೆ ಬಂದು  ಬದುವಿನತ್ತ ತಿರುಗಾಡುತ್ತಾ ಹೋಗುತ್ತಿರುವಾಗ ನಮ್ಮ ಹೊಲದ ಹಳ್ಳ ದಂಡೆಗೆ ಇರುವ ಮಾವಿನ ಮರದ ಟೊಂಗೆಗೆ ಯಾರೋ ಒಬ್ಬ ಮಹಿಳೆ ನೇಣು ಹಾಕಿಕೊಂಡಂತೆ ಕಂಡು ಬಂದಿತ್ತು ಆಗ ನಾನು ಮತ್ತು ಮಚೆಂದ್ರ ತಂದೆ ಮಲಕಪ್ಪಾ ಕಾಳನೂರ ಇಬ್ಬರು ಕೂಡಿಕೊಂಡು ಮಾವಿನ ಮರದ ಹತ್ತಿರ ಹೋಗಿ ನೋಡಲಾಗಿ ಒಬ್ಬ ಮಹಿಳೆಯು ಮಾವಿನ ಗಿಡದ ಟೊಂಗೆಗೆ ಒಂದು ಕೆಂಪು ವೈರಿನ ಹಗ್ಗದ ಸಹಾಯದಿಂದ ನೇಣು ಹಾಕಿಕೊಂಡು ಎರಡು ಮೊಣಕಾಲು ನೆಲಕ್ಕೆ ಹತ್ತಿದ್ದು ಪಕ್ಕದಲ್ಲಿ ಒಂದು ಕಟ್ಟಿಗೆ ಸ್ಟೂಲ ಇರುತ್ತದೆ. ಈ ಮಹಿಳೆಯು ಅಪರಿಚಿತಳಾಗಿದ್ದು ಹೆಸರು ವಿಳಾಸ ಗೊತ್ತಾಗಿರುವದಿಲ್ಲ ವಯಸ್ಸು ಅಂದಾಜು 35 ರಿಂದ 40 ವಯಸ್ಸಿನವಳಾಗಿದ್ದು ಉದ್ದನೆಯ ಮುಖ, ತೆಳ್ಳನೆ ಸದೃಢ ಮೈಕಟ್ಟು ಹೊಂದಿದ್ದವಳಾಗಿದ್ದು ಒಂದು ಚಾಕಲೇಟ ಕಲರ ಕುಪ್ಪಸ , ಕೆಂಪು ನೀಲಿ ಡಿಜೈನ ಇರುವ ಸೀರೆ ಧರಿಸಿರುತ್ತಾಳೆ. ಸದರಿ ಮಹಿಳೆಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ಸದರಿ ಮಹಿಳೆಯು ದಿನಾಂಕ.20-10-2018 ರಂದು ರಾತ್ರಿ ವೇಳೆಯಿಂದ ದಿನಾಂಕ. 21-10-2018 ರಂದು ಬೆಳಗ್ಗೆ 10-00 ಘಂಟೆಯ ಮದ್ಯದ ಅವಧಿಯಲ್ಲಿ ತನ್ನ ಯಾವುದೋ  ವಯಕ್ತಿಕ  ಸಮಸ್ಯೆಯಿಂದ ಮನಸಿನ ಮೇಲೆ ದುಷ್ಪರಿಣಾಮ ಮಾಡಿಕೊಂಡು ನಮ್ಮ  ಹೊಲದ ಮಾವಿನ ಗಿಡಕ್ಕೆ ವೈರಿನ ಹಗ್ಗದದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ .ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.