POLICE BHAVAN KALABURAGI

POLICE BHAVAN KALABURAGI

20 June 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 19-06-2015 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿ.ಪಿ.ಐ ಸಾಹೇಬರಾದ ಸಂಗಮೇಶ ಪಾಟೀಲ ಹಾಗೂ ಪಿ.ಎಸ್.ಐ. ಅಫಜಲಪೂರ  ಮತ್ತು ನಮ್ಮ ಸಿಬ್ಬಂದಿ ಹಾಗು ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪ  ದೂರು ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಧರೆಪ್ಪ ತಂದೆ ಶ್ರೀಕಾಂತ ಡಾಂಗೆ ಸಾ: ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿ ವ್ಯಕ್ತಿ ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಮಹಾರಾಷ್ಟ್ರದ ದುಧನಿ, ಅಕ್ಕಲಕೋಟ ಪಟ್ಟಣಗಳಿಗೆ ಹೋಗಿ, ಬಸ್ ನಿಲ್ದಾಣಗಳಲ್ಲಿ ತಿರುಗಾಡಿ ಮಟಕಾ ತಗೆದುಕೊಳ್ಳುವ ಬಗ್ಗೆ ಕೇಳಿ ಅವರಿಗೆ ಮಟಕಾ ಬರೆದುಕೊಂಡ ನಂಬರಗಳನ್ನು ಹಾಗೂ ಹಣವನ್ನು ಕೊಟ್ಟು ಬರುತ್ತೆನೆ. ಸದರಿಯವರ ಹೆಸರು ವಿಳಾಸದ ಬಗ್ಗೆ ನನಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿರುತ್ತಾನೆ. ನಂತರ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ, ಒಂದು ಮೋಬೈಲ ಪೋನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 18.06.2015 23:00 ಗಂಟೆಯಿಂದ ದಿನಾಂಕ 19.06.2015 ರ ೦೦:೦೦ ಮಧ್ಯದ ಅವಧಿಯಲ್ಲಿ ನನ್ನ ಮಗ ಪವನಕುಮಾರ ಈತನು  ಮೋಟಾರು ಸೈಕಲ್ ನಂ ಕೆ.ಎ32ಎಸ್6699 ನೇದ್ದರ ಮೇಲೆ ದೇವಿಂದ್ರಪ್ಪ ಚಾಕರೆ ಈತನಿಗೆ ಕೂಡಿಸಿಕೊ0ಡು ಕಲಬುರಗಿಯಿಂದ ಗೋಗಿ ಕೆ ಕಡೆಗೆ ಜೇವರಗಿ ಪಟ್ಟಣದ ಬೂತಪುರ ಕಲ್ಯಾಣ ಮಂಟಪದ ಎದುರು ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ರೋಡಿನ ಸೈಡಿನಿಂದ ಹೋಗುತ್ತಿದ್ದ ವೇಳೆಗೆ ಶಹಾಪುರ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಎದುರುಗಡೆಯಿಂದ ಡಿಕ್ಕಿ ಪಡೆಸಿ ಅವರಿಗೆ ಭಾರಿ ರಕ್ತ ಗಾಯಗೊಳಿಸಿ ನನ್ನ ಮಗ ಪವನಕುಮಾರ ಈತನು ಸ್ಥಳದಲ್ಲಿಯೆ ಮೃತಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ  ಶ್ರೀಮತಿ ಮಾಪಮ್ಮ ಗಂಡ ರಮೇಶ ನಾಮಾನವರ ಸಾ|| ಮುರಡಿ ತಾ|| ಆಳಂದ  ರವರು ಸಲ್ಲಿಸಿದ  ದೂರು  ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ : ಶ್ರೀ ಅಮರನಾಥ ತಂದೆ ಬಾಬುರಾವ ದುಲಂಗೆ ಸಾ:ರವರಿವಾರ ಪೇಟ ಶೇಳ್ಳಗಿ ಸೊಲ್ಲಾಪುರ ಮತ್ತು ಹೆಂಡತಿ ಮಿನಾಕ್ಷಿ ಕೂಡಿ ದಿನಾಂಕ: 16-06-2015 ರಂದು ಮದ್ಯಾನ ಸೊಲ್ಲಾಪುರದಿಂದ ನಮ್ಮ ಮನೇಯ ದೇವರ ಊರಾದ ಸಾವಳೇಶ್ವರಕ್ಕೆ ಹೊಗಿ ಬರುವದಕ್ಕಾಗಿ ಮೋಟರ ಸೈಕಲ ನಂ ಎಮ್ ಹೆಚ್, 13 ,ಯು 7374 ಹೊಂಡಾ ಶೈನ ಮೇಲೆ ಕುಳಿತು ಅಕ್ಕಲಕೊಟ ಮಾರ್ಗವಾಗಿ ಸಾವಳೆಶ್ವರ ಕ್ಕೆ ಬರುವಾಗ ನಾವು ಸಾಯಂಕಾಲ ಹಾಸು ದಾಬಾದ ಹತ್ತಿರದಲ್ಲಿ ರಸ್ತೇಯ ಮೇಲೆ ನಾವೂ ಹೊಗುವಾಗ ನಮ್ಮ ಎದುರಿನಿಂದ ಮೋಟರ ಸೈಕಲ್ ನಂ ಎಮ್ ಹೆಚ್ 25 6845 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದನು ಆಗ ನಾನು ಮತ್ತು ನನ್ನ ಹೆಂಡತಿ ಮಿನಾಕ್ಷಿ ಇಬ್ಬರು ನಮ್ಮ ಮೋಟರ ಸೈಕಲ ಮೇಲಿಂದ ಹಾರಿ ಕೆಳಗೆ ಬಿದ್ದೆವೂ. ಆಗ ನಾನು ನೋಡಲಾಗಿ ನನ್ನ ಎಡಗಾಲಿನ ಮೊಳಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತ ಬರುತಿದ್ದು ಅಲ್ಲದೆ ಎರಡು ಹಸ್ತಕ್ಕೆ ಮತ್ತು ಬಲಗೈ ಮುಂಗೈಗೆ ಸಹ ಗಾಯಗಳಾಗಿ ರಕ್ತ ಬರುತಿತ್ತು ಆಗ ನನ್ನ ಹೆಂಡತಿಗೆ ನೊಡಲಾಗಿ ಆಕೇಯ ಬಲ ಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತ ಗಾಯವಾಗಿದ್ದು ಮತ್ತು ಬಲಗಾಲಿನ ಪಾದದ ಮೇಲಿನ ಕಾಲು ಸಹ ಮುರಿದಿದ್ದು ಅಲ್ಲದೆ ಎಡಗಾಲು ಮೊಳಕಾಲಿಗೆ ರಕ್ತ ಗಾಯ ವಾಗಿದ್ದು ಮತ್ತು ಎಡಗೈ ಮುಂಗೈ ಮತ್ತು ಎಡ ಗಲ್ಲ, ಗದ್ದಕ್ಕೆ ಸಹ ಬಡಿದು ತೇರಚಿದ ಹಾಗು ರಕ್ತ ಗಾಯ ವಾಗಿ ನನ್ನ ಹೆಂಡತಿ ಚಿರಾಡುತಿದ್ದನ್ನು ನೊಡಿ ಅಲ್ಲಿಯೆ ದಾಬಾದಲಲ್ಲಿದ್ದ ಎರಡು ಮೂರು ಜನರು ಒಡಿ ಬಂದು ನಮಗೆ ನೀರು ಕುಡಿಸಿ ರಸ್ತೇಯಲ್ಲಿ ಹೊಗುತಿದ್ದ ಒಂದು ಖಾಸಗಿ ಜೀಪಿನಲ್ಲಿ ನನಗೆ ಮತ್ತು ನನ್ನ ಹೆಂಡತಿಗಹೆ ಕುಡಿಸಿ ಉಪಚಾರಕ್ಕಾಗಿ ನಮಗೆ ಸೊಲ್ಲಾಪುರಕ್ಕೆ ಕಳುಹಿಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.