POLICE BHAVAN KALABURAGI

POLICE BHAVAN KALABURAGI

27 May 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:27/05/2012 ರಂದು  ಮುಂಜಾನೆ 6:30 ಎ.ಎಮ ಕ್ಕೆ ಕಮಲಾಪೂರ ದಿಂದ ಗುಲಬರ್ಗಾಕ್ಕೆ  ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೆಎ.39-2286 ನೇದ್ದರ ಲಾರಿ ಚಾಲಕ ಮದರ ಸಾಬ ತಂದೆ ನಬಿ ಸಾಬ ಸಾ: ತಿಪರಾಂತ  ಈತನು ತನ್ನ  ಲಾರಿ ಯನ್ನು ಯಾವುದೇ ಮುನ್ಸೂಚನೆ ನೀಡದೆ ರೋಡಿನ ಮೇಲೆ ನಿಲ್ಲಿಸಿದ್ದು ಅದರ ಹಿಂದಿನಿಂದ ಲಾರಿ ನಂ ಎಮ್‌ ಹೆಚ್‌ 22-ಎನ್-410 ನೇದ್ದರ ಚಾಲಕ ದಿಗಂಬರ ತಂದೆ ದೇವರಾವ ಕದಂ ಸಾ: ದೊಡ್ಡಗಾಂವ ಈತನು ತನ್ನ ಲಾರಿಯನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದು ರೊಡಿನ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದನು. ಎಮ್ ಹೆಚ್ 22-ಎನ್-410 ನೇದ್ದರ ಲಾರಿಯಲ್ಲಿ ಕುಳಿತ ಕ್ಲೀನರ ಲಿಂಬಾಜಿ ತಂದೆ ನಿವೃತ್ತಿ ಈತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಾರಿಯ ಚಾಲಕ ದಿಗಂಬರ ಈತನಿಗೆ ಗಾಯಗಳಾಗಿರುತ್ತವೆ. ಕಾರಣ ಎರಡು ಲಾರಿ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಸಲಾವುದ್ದಿನ ತಂದೆ ಜಾಫರ ಶೇಖ ಸಾ: ಕಮಲಾಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 61/12 ಕಲಂ: 279,337,283, 304(ಎ) ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ನೆಲೋಗಿ ಪೊಲೀಸ ಠಾಣೆ:ಶ್ರೀ ಶೆಂಕ್ರೇಪ್ಪ ತಂದೆ ರುದ್ರಗೌಡ ರವರು ನನ್ನ ಹೆಂಡತಿ ಭಾರತಿ ಮತ್ತು  ಮಲ್ಲಪ್ಪ ಮೋರಟಗಿ ಇಬ್ಬರೂ ನಡುವೆ ಅನೈತಿಕ ಸಂಬಂಧ ಹೊಂದಿದ್ದು ಅವರಿಬ್ಬರೂ ದಿನಾಂಕ 25-05-2012 ರಂದು ರಾತ್ರಿ 1-00 ಗಂಟೆಗೆ ಇಬ್ಬರೂ ಮಲಗಿದನ್ನು ನಾನು ನೋಡಿದ್ದರಿಂದ ಮುಂಜಾನೆ 6-00 ಗಂಟೆಗೆ ಸುಮಾರಿಗೆ ನಾನು ಮನೆಯಲ್ಲಿ ಮಲಗಿದ್ದಾಗ ನನ್ನ ಹೆಂಡತಿ ಭಾರತಿ ನಮ್ಮ ಅತ್ತೆ ಗೋದಾಬಾಯಿ ಇಬ್ಬರೂ ಬಂದು ನನಗೆ ಹೊರಗೆ ಏಳೆದುಕೊಂಡು ಬಂದು ಅವಾಚ್ಯವಾಗಿ ಬೈದು  ನನಗೆ ಹಾದರ ಹೊಂದುಸ್ತಿ ಅಂತ ಮಲ್ಕಪ್ಪ ಮುಗಾನೂರ ಇವರ ಮನೆಯ ಮುಂದೆ ಏಳೆದು   ಕೊಂಡು ಹೋಗಿ ಹೊಡೆದರು. ಮತ್ತು ಮಲ್ಲಪ್ಪ ಮೋರಟಗಿ, ವಿಠಲ ಮೋರಟಗಿ. ಕಮಲಾಬಾಯಿ ಮೋರಟಗಿ. ಯಲ್ಲವ್ವ  ಮೋರಟಗಿ ಇವರೆಲ್ಲರೂ ಕೂಡಿ ವಿಷದ ಬಾಟಲಿಯನ್ನು ನನ್ನ ಬಾಯಿಯಲ್ಲಿ ಹಾಕಿದನು ವಿಠಲ ಇವನು ನನ್ನ ಎರಡು ಕೈಗಳನ್ನು ಹಿಡಿದು ಎದೆಯ ಮೇಲೆ ಕುಳಿತು ಹೊಡದೆನು ಯಲ್ಲವ್ವ, ಕಮಲಾಬಾಯಿ ಇವರು ನನ್ನ ಕಾಲುಗಳನ್ನು ಒತ್ತಿ ಹಿಡಿದರು ಸತ್ತು ಹೊಡೆಯಿರಿ ಅಂತ ಬೈಯುತ್ತಿದರು ಆರು ಜನರು ವಿಷ ಕುಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 66/12 ಕಲಂ .143,147,148,323,504,307,ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಗಂಡನ ಮಾನಸಿಕ ಹಿಂಸೆಯಿಂದ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಮೃತಪಟ್ಟ ಗೃಹಿಣೆ:

ಚಿತ್ತಾಪೂರ ಪೊಲೀಸ್ ಠಾಣೆ:ಶ್ರೀಮತಿ ಸುನಂದ ಗಂಡ ಬಸಪ್ಪ @ಬಸವರಾಜ ನಾಯಕಲ್ ಸಾ|| ಇಟಗಾ ರವರು  ನನಗೆ ಒಂದು ವರ್ಷದ ಹಿಂದೆ ಇಟಗಾ ಗ್ರಾಮದ  ಬಸಪ್ಪ ತಂದೆ ಮರೆಪ್ಪ ನಾಯಕಲ್ ಇವರಿಗೆ  ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಗಂಡ ಬಸಪ್ಪ ನಾಯಕಲ್ ಮತ್ತು ಅತ್ತೆ ಸುಭದ್ರಮ್ಮ,ಮಾವನಾದ ಮರೆಪ್ಪ, ಹಾಗೂ ಭಾವನಾದ ಪೀರಪ್ಪ, ಎಲ್ಲರು ಒಂದೆ ಮನೆಯಲ್ಲಿ ಒಟ್ಟಿಗೆ ಇರುತ್ತೇವೆ. ನನ್ನ ಗಂಡನಾದ ಬಸಪ್ಪ ಈತನು ನಾನು ಬೇರೆಯವರ ಜೊತೆ ಮಾತಡಿದ್ದಲ್ಲಿ ನೀನು ನನಗೆ ಬೇರೆಯವರ ಜೋತೆ ಮಾತಾಡುತ್ತಿ ನಾನು ನೀನಗೆ ಚೆನ್ನಾಗಿ ಕಾಣುವದಿಲ್ಲವೇನು ಅಂತಾ ಸಂಶಯ ಪಟ್ಟುಕೊಳ್ಳುತ್ತಿದ್ದನು,ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸಿದರೆ ನೀನು ನಿನ್ನ ಗಂಡನ ಮನೆಯಲ್ಲಿ ಚೆನ್ನಾಗಿ ಇರಬೇಕು ಅಂತಾ ಬುದ್ದಿಮಾತು ಹೇಳಿ ಕಳುಯಿಸುತ್ತಿದ್ದರು,ದಿನಾಂಕ 21/5/2012 ರಂದು ಸಾಯಾಂಕಾಲ 6-00 ಗಂಟೆಗೆ  ನಾನು ನಮ್ಮ ಮಾವ ಮರೆಪ್ಪ ಇವರಿಗೆ ಟಿಪಿನ್ ಕೊಟ್ಟು ಮೇಲೆ ನೋಡುತ್ತಿರುವಾಗ ನನ್ನ ಗಂಡನು ನನಗೆ ಏನು ಮೇಲೆ ನೋಡುತ್ತಿ ಅವಾಚ್ಯವಾಗಿ ಬೈದು ಮಾನಸಿಕ  ಹಿಂಸೆ ಕೊಟ್ಟನು ನಾನು ಮನಸ್ಸಿಗೆ ಬೆಜಾರು ಮಾಡಿಕೊಂಡು ಮನೆಯಲ್ಲಿದ್ದ ಸೀಮೆ ಎಣ್ಣೆ ಡಬ್ಬಾ ತಗೆದುಕೊಂಡು ಮೈಮೇಲೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡೆನು.ನನಗೆ ತಲೆಗೆ ಮತ್ತು ಎರಡು ಕೈಗಳು ಮೊಣಕೈ ವರೆಗೆ,ಮುಖಕ್ಕೆ,ಕುತ್ತಿಗೆಗೆ,ಎರಡು ಕಾಲುಗಳು ಮೊಣಕಾಲನೊವರೆಗೆ ಸುಟ್ಟು  ಗಾಯಗಳಾದವು, ನಮ್ಮ ಬಾಜು ಮನೆಯವರಾದ ಚಂದ್ರಭಾಗಮ್ಮ ,ಮರೆಮ್ಮ ಇವರುಗಳು ಒಂದು ಖಾಸಗಿ ವಾಹನದಲ್ಲಿ ಚಿತ್ತಾಪೂರ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 498(ಎ), 306,504,ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಸದರಿ ಗಾಯಾಳು ಸುನಂಧ ಇವರಿಗೆ  ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಹೊಂದುತ್ತಾ ದಿನಾಂಕ 27/5/2012 ರಂದು ಮಧ್ಯರಾತ್ರಿ 1-00 ಎ ಎಂ ಕ್ಕೆ ಗುಲಬರ್ಗಾ ಬಸವೇಶ್ವರ ಆಸ್ಪತ್ರೆಯಲ್ಲಿ  ಮೃತ ಪಟ್ಟಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಚಿದಾನಂದಯ್ಯ ತಂದೆ ಚಂದ್ರಶೇಖರಯ್ಯಾ ಹಿರೇಮಠಉಃ ಪೊಸ್ಟ ಮ್ಯಾನ ಸಾಃ ಅತ್ತರ ಕಂಪೌಂಡ ಗುಲಬರ್ಗಾರವರು ನಾನು ದಿನಾಂಕ 26-05-2014 ರಂದು ಮಧ್ಯಾಹ್ನ 12-00 ಗಂಟೆಗೆ ನನ್ನ ಟಿ.ವಿ.ಎಸ್ ನಂ. ಕೆ.ಎ 32 ಎಕ್ಸ 3245 ನೇದ್ದರ ಮೇಲೆ ಶಹಾಬಜಾರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಲಾಲ ಹನುಮಾನ ಗುಡಿ ಕಡೆಯಿಂದ ಯಾವುದೋ ಅಟೋರಿಕ್ಷಾ ಚಾಲಕ ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಎದರುಗಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ಟಿ.ವಿ.ಎಸ ಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲ  ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಉದ್ದೇಶ ಪೂರ್ವಕವಾಗಿ ಮನೆ ಸುಟ್ಟಿರುವ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಮಿತಾನಂದ  ತಂದೆ ನಾಗಪ್ಪ  ಕುಡಕೆ   ಸಾ: ಕಿಣ್ಣಿಅಬ್ಬಾಸ   ರವರು ನಮ್ಮ ಹುಲ್ಲಿನ ಜಪ್ಪರ ಮನೆಯಲ್ಲಿ ವಾಸವಾಗಿರುತ್ತೆವೆ. ದಿನಾಂಕ 26/05/2012 ರಂದು ನಾನು ಗುಲಬರ್ಗಾಕ್ಕೆ ಕೆಲಸದ ಮೇಲೆ ಬಂದಿದ್ದು, ನನ್ನ ತಂದೆ ತಾಯಿ ಅಣ್ಣ ಅತ್ತಿಗೆಯವರು ಹೊಲದಲ್ಲಿ ಸೇಂಗಾ ಬೇಳೆ ಕಿತ್ತಲು ನಮ್ಮ ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ನನ್ನ ಅಣ್ಣನ ಮಗಳು ಸಂಗೀತಾ ಒಬ್ಬಳೆ ಇದ್ದಾಗ ನಮ್ಮ ಅಣ್ಣತಮ್ಮಂದಿರು ಚಂದ್ರಭಾಗಮ್ಮ ಗಂಡ ನಾಮದೇವ ಕುಡಕೆಸಂತೋಷಕುಮಾರ ತಂದೆ ನಾಮದೇವ ಕುಡಕೆಸಂಜಕುಮಾರ ತಂದೆ ನಾಮದೇವ ಕುಡಕೆ ಮೂರು ಜನರು ಮತ್ತು ಇತರರ ಪ್ರಚೋದನೆಯಿಂದ ಮನೆಗೆ ಬೆಂಕಿ ಹಚ್ಚಿರುತ್ತಾರೆ. ಮನೆಯಲ್ಲಿಟ್ಟಿದ ದವಸ ಧಾನ್ಯಗಳು ಬಂಗಾರದ ಆಭರಣ ಇನ್ನಿತರ ಮನೆಯ ಸಾಮಾನುಗಳು ಹೀಗೆ ಒಟ್ಟು 1,50,000/- ಕೀಮ್ಮತ್ತಿನದು ಸುಟ್ಟಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2012  ಕಲಂ436 ,109, ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲ  ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:26/05/2012 ರಂದು 12-30 ಗಂಟೆ ಸುಮಾರಿಗೆ ಶಾಂತಿನಾಥ.ಬಿ.ಪಿ. ಪಿಎಸ್ಐ ಕಮಲಾಪೂರ ಪೊಲೀಸ್ ಠಾಣೆರವರು ಠಾಣೆಯ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿರುವಾಗ ಕಮಲಾಪೂರ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ತಾರಸಿಂಗ ತಂದೆ ರೂಪಸಿಂಗ್ ರಾಠೋಡ ಇತನು ಪಧವಿಧರ ಮತ ಕೇತ್ರದ ವಿಧಾನ ಪರಿಷತ್ ಚುನಾವಣೆ ನಿಮಿತ್ಯವಾಗಿ ಅವಾಚ್ಯವಾಗಿ ಬೈಯುತ್ತಾ.,ಚಿರಾಡುವುದುಹೆದರಿಸುವುದು ಮಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗ ತರುತ್ತಿದ್ದಾಗಈತನಿಗೆ ಹೀಗೇಯೇ ಬಿಟ್ಟಲ್ಲಿ ಮುಂದೆ ಯಾವುದಾದರು ಸಂಜ್ಞೆಯ ಅಪರಾಧ ಮಾಡುವುದಾಗಿ ಕಂಡು ಬಂದಿದ್ದರಿಂದ ಮತ್ತು ಏರಿಯಾದಲ್ಲಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ ಸಾಧ್ಯತೆ ಕಂಡುಬಂದಿದ್ದರಿಂದ ಠಾಣೆ ಗುನ್ನೆ ನಂ: 59/2012 ಕಲಂ 110 (ಇ) & (ಜಿ) ಸಿಆರ್.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ  ಮಹ್ಮದ ಯುಸಫ್ ತಂದೆ ಗಪೂರಸಾಬ ಸೌದಾಗರ ಉಃ ಗ್ರಾಮ ಪಂಚಾಯತ ಅಧ್ಯಕ್ಷ ಸಾಃ ಸೊಂತ ತಾಃಜಿಃ ಗುಲಬರ್ಗಾ ರವರು ದಿನಾಂಕ: 26/05/12 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಕಮಲಾಪೂರದಲ್ಲಿ ಖಾಸಗಿ ಕೆಲಸವಿದ್ದ ಪ್ರಯುಕ್ತ ಸೊಂತ ದಿಂದ ಕಮಲಾಪೂರಕ್ಕೆ ಜೀಪ ನಂ. ಕೆಎ:17, ಎ:2171 ನೇದ್ದರಲ್ಲಿ ಕುಳಿತಕೊಂಡು ಬರುತ್ತಿರುವಾಗ ಸೊಂತದ ನಾಲಾದ ಹತ್ತಿರ ಬರುತ್ತಿದ್ದಂತೆ 3-4 ಜನರು ತಮ್ಮ ತಮ್ಮ ಕೈಯಲ್ಲಿ ಹರಿತವಾದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜೀಪ ನೋಡಿ ಅಡ್ಡಗಟ್ಟಿ ನಿಲ್ಲಿಸಿ ನಮಗೆ ಜೀಪಿನಿಂದ ಕೆಳಗೆ ಇಳಿಸಿ, ನಮ್ಮ ಹತ್ತಿರ ಇದ್ದ ಹಣ ಬಂಗಾರಗಳು ಕೊಡಿ ಇಲ್ಲಿದ್ದಿದ್ದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೇದರಿಸುತ್ತಾ ನಮ್ಮೊಂದಿಗೆ ತೆಕ್ಕೆ ಕುಸ್ತಿ ಮಾಡುತ್ತಿದ್ದಾಗ ನಮ್ಮ ಗ್ರಾಮದ ವಿಠಲ ಮಾಸ್ಟರ ಮತ್ತು ಅರ್ಜುನ ಇಬ್ಬರು ತಮ್ಮ ಮೋಟಾರ ಸೈಕಲ ಮೇಲೆ ಸೊಂತದಿಂದ ಕಮಲಾಪೂರ ಕಡೆಗೆ ಬರುತ್ತಿದ್ದವರು ನಮ್ಮ ಸಹಾಯಕ್ಕೆ ಬಂದಾಗ ಅವರು ತಪ್ಪಿಸಿಕೊಂಡು ಓಡಿ ಹೋಗುತ್ತಿದ್ಧಾಗ ಅವರಿಗೆ ಬೆನ್ನು ಹತ್ತಿ ಹಿಡಿಯಲಾಗಿ 4 ಜನರಲ್ಲಿ 3 ಜನರು ಓಡಿ ಹೋಗಿದ್ದು. ಒಬ್ಬನು ನಮ್ಮೊಂದಿಗೆ ತೆಕ್ಕೆ ಕುಸ್ತಿ ಮಾಡಿ ತಪ್ಪಿಸಿಕೊಳ್ಳುತ್ತಿರುವಾಗ ಕೆಳಗೆ ಬಿದ್ದು ತಲೆಗೆ ರಕ್ತಗಾಯ ಮಾಡಿಕೊಂಡಿರುತ್ತಾನೆ. ಅವನ ಹತ್ತಿರ ಇದ್ದ ಚಾಕು ಮತ್ತು ಓಡಿ ಹೋದವರಲ್ಲಿ ಒಬ್ಬನ ಹತ್ತಿರ ಇದ್ದ ಇನ್ನೊಂದು ಚಾಕು ಸ್ಥಳದಲ್ಲಿಯೇ ಇದ್ದವು ಆತನ ಹೆಸರು ವಿಚಾರಿಸಲಾಗಿ, ಟಕ್ಲ್ಯಾ ತಂದೆ ಶಂಕರ ಗಿರಗಿರ ವಯ: 45 ವರ್ಷ ಜಾ: ಪಾರ್ದಿ ಉಃ ಬುರಲಿ ಹೊಡೆಯುವುದು. ಸಾಃ ಗೊಬ್ಬುರ (ಕೆ) ತಾಃ ಅಫಜಲಪೂರ ಜಿಃ ಗುಲಬರ್ಗಾ ಅಂತಾ ತಿಳಿಸಿದ್ದು. ಇನ್ನೂ ಓಡಿ ಹೋದ 3 ಜನರನ್ನು ನಾವು ಗುರ್ತಿಸುತ್ತೇವೆ.  ತಮ್ಮ ಕೈಯಲ್ಲಿ ಹರಿತವಾದ ಮಾರಕ ಅಸ್ತ್ರಗಳನ್ನು ಹಿಡಿದುಕೊಂಡು ದರೋಡೆ ಮಾಡುವ ಉದ್ದೇಶದಿಂದ ನಮಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದವರ ಮೇಲೆ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 60/2012, ಕಲಂ. 398, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.