POLICE BHAVAN KALABURAGI

POLICE BHAVAN KALABURAGI

06 December 2017

KALABURAGI DISTRICT REPORTED CRIMES

ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05.12.2017 ರಂದು ಸಮತಾ ಕಾಲೋನಿಯಲ್ಲಿ ಕಾಲೋನಿಯಲ್ಲಿ ವಾಸವಾಗಿರುವ ಮೀನಾಕ್ಷಿ ಗಂಡ ಬಾಳಪ್ಪ ಗುತ್ತೇದಾರ ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಕಲಬುರಗಿ ಇವಳು ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್‌‌.  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸಮತಾ ಕಾಲೋನಿ ನೀರಿನ ಟ್ಯಾಂಕ ಹತ್ತಿರ ನೀರಿನ ಟ್ಯಾಂಕ ಹತ್ತಿರ ಹೋಗುತ್ತಿದ್ದಂತೆ ನೀರಿನ ಟ್ಯಾಂಕ ಪಕ್ಕದ ಮನೆಯ ಮುಂದೆ ಒಬ್ಬ ಹೆಣ್ಣು ಮಗಳು ರಟ್ಟಿನ ಬಾಕ್ಸದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟು ಕೊಂಡು ಮಧ್ಯ ಮಾರಾಟ ಮಾಡುತ್ತಿದ್ದು ಸದರಿಯವಳು ನಮ್ಮ ಪೊಲೀಸ ಜೀಪನ್ನು ನೋಡಿ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು ನಂತರ ಸದರಿಯವಳು ಮಧ್ಯ ಮರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ್ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 60 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 1687.ರೂ 80 ಪೈಸೆ. ಕಿಮ್ಮತ್ತಿನ ಮಾಲು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮೀನಾಕ್ಷಿ ಗಂಡ ಬಾಳಪ್ಪ ಗುತ್ತೇದಾರ ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಕಲಬುರಗಿ ಇವಳ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ದಿಪಿಕಾ ಗಂಡ ಮಲ್ಲಿಕಾರ್ಜುನ ಬನ್ನೂರಕರ ಸಾ|| ಎನ್.ಜಿ..ಕಾಲೋನಿ  ಕಲಬುರಗಿ ಹಾ|| || ವಿಜಯ ನಗರ ಕಾಲೋನಿ ಬಸವಕಲ್ಯಾಣ ತಾ|| ಬಸವಕಲ್ಯಾಣ ಜಿ|| ಬೀದರ ಇವರು ದಿನಾಂಕ 23-04-2016 ರಂದು ಮಲ್ಲಿಕಾರ್ಜುನ ತಂದೆ ಶಂಕರರಾವ ಬನ್ನೂರಕರ ಈತನ ಜೊತೆಯಲ್ಲಿ ನನ್ನ ತಾಯಿಯವರು ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯಲ್ಲಿ 5 ಲಕ್ಷ ರೂಪಾಯಿ 10ತೊಲೆ ಬಂಗಾರ ಹಾಗೂ ಸುಮಾರು 5 ಲಕ್ಷ ರೂಪಾಯಿ ಮನೆಬಳಕೆ ಸಾಮಾನುಗಳನ್ನು ಕೊಟ್ಟಿರುತ್ತಾರೆ. ನನ್ನ ಗಂಡನು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ 2-3 ತಿಂಗಳು ಉಳಿದಿದ್ದು  ಹೀಗಿದ್ದು ನನ್ನ ಗಂಡ ಮಲ್ಲಿಕಾರ್ಜುನ ಈತನು ನನ್ನ ಮೇಲೆ ವಿನಾಕಾರಣ ಸಂಶಯ ಮಾಡಿ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದನು ವಿಷಯವನ್ನು ನಾನು ನನ್ನ ಅತ್ತೆಯವರಾದ ಕುಸುಮಾವತಿ ಇವರಿಗೆ ತಿಳಿಸಿದಾಗ ಅವಳು ನೀನು ಬೆಂಗಳೂರಿನ್ಲಿ ಇರಬೇಡಾ ಅಂತಾ ಹೇಳಿದಾಗ ಕಲಬುರಗಿಗೆ ಬಂದು ನನ್ನ ಗಂಡನ ಮನೆಯಲ್ಲಿ ಅತ್ತೆಯ ಜೊತೆಯಲ್ಲಿಯೆ ಮನೆಯಲ್ಲಿ ಉಳಿದಿರುತ್ತೇನೆ ನನಗೆ ಒಂದು ಗಂಡು ಮಗು ಹುಟ್ಟಿರುತ್ತದೆ ಆದ ನಂತರ ನನ್ನ ಗಂಡ ಮಲ್ಲಿಕಾರ್ಜುನ ಈತನು 15 ದಿವಸಗಳಿಗೊಮ್ಮೆ ಕಲಬುರಗಿಗೆ ಮನೆಗೆ ಬಂದು ಹೋಗುತ್ತಿದ್ದನು ನನ್ನ ಗಂಡ ಮತ್ತು ನನ್ನ ಅತ್ತೆಯಾದ ಇಬ್ಬರು ಕೂಡಿಕೊಂಡು ನೀನು ನಿನ್ನ ತವರು ಮನೆಯಿಂದ ಕಡಿಮೆ ವರದಕ್ಷಿಣೆ ತೆಗೆದುಕೊಂಡು ಬಂದಿದ್ದಿ ಇನ್ನು ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ ಪದೇ ಪದೇ ನನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು ಆಗ ನಾನು ನನ್ನ ತಂದೆಯವರು ಇರುವದಿಲ್ಲಾ ತಾಯಿ ಒಬ್ಬಳೆ ಇರುವದರಿಂದ ನನಗೆ ತವರು ಮನೆಯಿಂದ ಹಣ ತರಲು ಆಗುವದಿಲ್ಲಾ ಅಂತಾ ಹೇಳಿದಾಗ ನನ್ನ ಗಂಡ ಮಲ್ಲಿಕಾರ್ಜುನ ಹಾಗೂ ನಾದಿನಿಯರಾದ ರಾಘವೇಣಿ, ಗೀತಾ, ಶೈಲಶ್ರೀ, ಇವರಿಗೆ ಕರೆಯಿಸಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ನೀನು ತವರು ಮನೆಯಿಂದ ಇನ್ನು 2 ಲಕ್ಷ ರೂಪಾಯಿ ಹಣ ತರದೆ ಇದ್ದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಭಯ ಹಾಕಿರುತ್ತಾರೆ ದಿನಾಂಕ 17-10-2016 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ಅತ್ತೆಯಾದ ಕುಸುಮಾವತಿ ಮತ್ತು ನನ್ನ ನಾದಿನಿಯರಾದ ರಾಘವೇಣಿ ಮತ್ತು ಸದರಿ ರಾಘವೇಣಿ ಇವರ ಗಂಡನಾದ ವಿಜಯಕುಮಾರ ಮತ್ತು ಗೀತಾ ಮತ್ತು ಗೀತಾ ಇವಳ ಗಂಡ ಈಶ್ವರಚಂದ್ರ ಮತ್ತು ಶೈಲಶ್ರೀ ಹಾಗೂ ಸದರಿ ಶೈಲಶ್ರೀ ಇವಳ ಗಂಡ ವಿಠ್ಠಲ್ ಇವರೆಲ್ಲರೂ ಕೂಡಿಕೊಂಡು ನೀನು ನಮ್ಮ ತವರು ಮನೆಯಿಂದ ಇನ್ನು 2 ಲಕ್ಷ ರೂಪಾಯಿ ತಂದರೆ ಉಳಿಯುತ್ತಿ ಅಂತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡಲು ಪ್ರಾರಂಭಿಸಿದರು ಆಗ ನಾನು ನನ್ನ ತಾಯಿಯ ಹತ್ತಿರ ಹಣ ಇರುವದಿಲ್ಲಾ ನಾನು ಎಲ್ಲಿಂದ ಹಣ ತರಬೇಕು ಅಂತಾ ಕೇಳಿದಾಗ ನನ್ನ ಗಂಡ ಮಲ್ಲಿಕಾರ್ಜುನ ಈತನು ನಿನಗೆ ಖಲಾಸ ಮಾಡುತ್ತೇನೆ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಜೊರಾಗಿ ಒತ್ತಿದಾಗ ನಾನು ಚೀರಾಡಲು ಅಕ್ಕ ಪಕ್ಕದ ಮನೆಯವರು ಬಂದು ಬಿಡಿಸಿರುತ್ತಾರೆ ಇಲ್ಲದಿದ್ದರೆ ನನಗೆ ಕೊಲೆ ಮಾಡಿಯೆ ಬಿಡುತ್ತಿದ್ದರು. ವಿಷಯ ನನ್ನ ತಾಯಿಗೆ ತಿಳಿಸಿದಾಗ ನನ್ನ ತಾಯಿ ಬಂದು ನನಗೆ ಕರೆದುಕೊಂಡು ಹೋಗಿರುತ್ತಾಳೆ. ನನ್ನ ಸಂಸಾರ ಇಂದಲ್ಲಾ ನಾಳೆ ಸರಿ ಹೋಗುತ್ತದೆ ಅಂತಾ ಇಲ್ಲಿಯವರೆಗೆ ನಾನು ನನ್ನ ತವರು ಮನೆಯಲ್ಲಿಯೆ ಉಳಿದಿರುತ್ತೇನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.