POLICE BHAVAN KALABURAGI

POLICE BHAVAN KALABURAGI

25 November 2019

KALABURAGI DISTRICT PRESS NOTE


ಪತ್ರಿಕಾ ಪ್ರಕಟಣೆ
                                                                                                         ದಿನಾಂಕ:-25-11-2019

           ಕಲಬುರಗಿ ನಗರದಲ್ಲಿ ಪೊಲೀಸ ಆಯುಕ್ತಾಲಯವು ಅಸ್ತಿತ್ವಕ್ಕೆ ಬಂದಿದ್ದು, ಕಲಬುರಗಿ ನಗರಕ್ಕೆ ಸಂಭಂದಿಸಿದಂತೆ ಅಂದರೆ ಪೊಲೀಸ ಆಯುಕ್ತಾಲಯದ ವ್ಯಾಪ್ತಿಗೊಳಪಡುವ 13 ಪೊಲೀಸ ಠಾಣೆಗಳಾದ 1) ಅಶೋಕ ನಗರ 2) ಸ್ಟೇಶನ ಬಜಾರ 3) ಬ್ರಹ್ಮಪೂರ 4) ರಾಘವೇಂದ್ರ ನಗರ ಠಾಣೆ 5) ಚೌಕ ಪೊಲೀಸ ಠಾಣೆ 6) ರೋಜಾ ಠಾಣೆ 7) ಎಂ.ಬಿ.ನಗರ ಠಾಣೆ 8) ವಿಶ್ವವಿದ್ಯಾಲಯ ಠಾಣೆ 9) ಗ್ರಾಮೀಣ ಠಾಣೆ 10) ಫರಹತಾಬಾದ ಠಾಣೆ ಮತ್ತು 11) ನಗರ ಮಹಿಳಾ ಪೊಲೀಸ ಠಾಣೆ 12) ಸಂಚಾರಿ ಪೊಲೀಸ ಠಾಣೆ ನಂ:1 ಮತ್ತು 13)  ಸಂಚಾರಿ ಪೊಲೀಸ ಠಾಣೆ ನಂ:2  ವ್ಯಾಪ್ತಿಯಲ್ಲಿ ಯಾವುದೆ ವಿಷಯಕ್ಕೆ ಸಂಭಂದಿಸಿದಂತೆ ಸಾರ್ವಜನಿಕರು ಕಲಬುರಗಿ ನಗರ ಪೊಲೀಸ ಆಯುಕ್ತಾಲಯಕ್ಕೆ ಸಂಪರ್ಕಿಸುವುದು. (ಪೊಲೀಸ ಉಪ-ಆಯುಕ್ತರು  (ಕಾನೂನು & ಸುವ್ಯವಸ್ಥೆ) ಮೊಬೈಲ ಸಂಖ್ಯೆ 9480803612) ಮತ್ತು ಕಲಬುರಗಿ ನಗರ ಕಂಟ್ರೋಲ ರೂಂ: ಸಂಖ್ಯೆ: 08472-228112)

         ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಸೇಡಂ ಮತ್ತು ಚಿಂಚೋಳಿ ತಾಲ್ಲೂಕಾಗಳಿಗೆ ಸಂಭಂದಿಸಿದಂತೆ ಪೊಲೀಸ ಇಲಾಖೆಗೆ ಸಂಭಂದಿಸಿದಂತೆ ಯಾವುದೆ ವಿಷಯದಲ್ಲಿ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿರವರ ಕಾರ್ಯಾಲಯಕ್ಕೆ ಸಂಪರ್ಕಿಸುವುದು.
                                                                                          ಸಹಿ/-
                                                                                  ಪೊಲೀಸ ಅಧೀಕ್ಷಕರು,
                                                                                        ಕಲಬುರಗಿ
ಇವರಿಗೆ,
ಕಲಬುರಗಿ ನಗರದ ಎಲ್ಲಾ ಮಾದ್ಯಮ ಮತ್ತು ಪತ್ರಿಕಾ ವರದಿಗಾರರಿಗೆ.


KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಸುರೇಶ ತಂದೆ ತಿಮ್ಮಯ್ಯ ದೊಡಮನಿ ಸಾ; ಬೇಲೂರ ಗ್ರಾಮ ತಾ; ಜೇವರ್ಗಿ  ರವರ ಮಾವನಾದ ಮಲ್ಲಪ್ಪ ಮಂದೇವಾಲ ಇವರು ದಿನಾಂಕ; 23/11/2019 ರಂದು ಸಾಯಂಕಾಲ ತನ್ನ ಮಗಳಾದ ಕಾವೇರಿ ಇವಳನ್ನು ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ತಮ್ಮ ಬಜಾಜ್ ಡಿಸ್ಕವರಿ ಮೋಟಾರ ಸೈಕಲ್ ನಂ; ಕೆ.-32-.ಬಿ-3735 ನೇದ್ದರ ಮೇಲೆ ಬೇಲೂರದಿಂದ ಜೇರಟಗಿ ಕಡೆಗೆ ಹೋದರು. ನಂತರ ನನಗೆ ಸಾಯಂಕಾಲ 7-30 ಘಂಟೆ ಸುಮಾರಿಗೆ ವಿಷಯ ಗೊತ್ತಾಗಿದ್ಧೇನೆಂದರೆ ಜೇರಟಗಿ - ಯಾತನೂರ ರೋಡಿನ ಮೇಲೆ ನಮ್ಮ ಮಾವನವರಿಗೆ ಕಾರ್ ಅಪಘಾತ ಆಗಿರುತ್ತದೆ ಅವರಿಗೆ 108 ಅಂಬುಲೆನ್ಸದಲ್ಲಿ ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ಎಂದು ವಿಷಯ ಕೇಳಿ ನಾನು ಮತ್ತು ನಮ್ಮ ಅಣ್ಣನಾದ ಯಂಕಪ್ಪ ದೊಡಮನಿ, ಹಾಗು ವಿಕ್ರಮ ತಂದೆ ಪೀರಪ್ಪ ದೊಡಮನಿ ಇವರು ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನಮ್ಮ ಮಾವನವರ ಮೋಟಾರ ಸೈಕಲ್ ನಂ; ಕೆ.-32-.ಬಿ-3735 ಇದ್ದು ಹೊಲದಲ್ಲಿ ಒಂದು ಬಿಳಿ ಬಣ್ಣದ ಕಾರ್ ಇದ್ದು ಅದರ ನಂ; ಎಮ್ ಹೆಚ್.-06-.ಯು-9779 ಇತ್ತು ನಂತರ ನಮ್ಮ ಮಾವ ಮತ್ತು ಸೊಸೆ ಇವರಿಗೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು ವಿಷಯ ಕೇಳಿ ನಾವು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಅಲ್ಲಿ ನಮ್ಮ ಮಾವ ಮಲ್ಲಪ್ಪ ಮಂದೇವಾಲ ಇವರಿಗೆ ಬಲ ಕಾಲಿನ ತೊಡೆಯ ಮೇಲೆ ಭಾರಿ ರಕ್ತ ಘಾಯವಾಗಿ ಮೂಳೆ ಮುರಿದು ಮೂಳೆ ಹೊರ ಬಂದಿದ್ದು ಮತ್ತು ಗುಪ್ತಾಂಗಕ್ಕೆ ತಲೆಯ ಮೇಲೆ ರಕ್ತ ಘಾಯ ಮತ್ತು ಭಾರಿ ಗುಪ್ತಗಾಯವಾಗಿ ಮೃತಪಟ್ಟಿದ್ದರು.   ನಂತರ ಅಲ್ಲಿಯೇ ಇದ್ದ ನಮ್ಮ ಸೊಸೆ ಕಾವೇರಿ ಇವಳಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ., ಇಂದು ದಿನಾಂಕ; 23/11/2019 ರಂದು ಸಾಯಂಕಾಲ 6-00 ಘಂಟೆಯ ಸುಮಾರಿಗೆ ನನಗೆ ಜ್ವರ ಬರುತ್ತಿದ್ದರಿಂದ ಇಂಜೀಕ್ಷನ್ ಮಾಡಿಸಿಕೊಳ್ಳುವ ಸಲುವಾಗಿ ನಾನು ಮತ್ತು ನನ್ನ ತಂದೆ ಕೂಡಿ ನಮ್ಮ ಮೋಟಾರ ಸೈಕಲ್ ನಂ; ಕೆ.-32-.ಬಿ-3735 ನೇದ್ದರಲ್ಲಿ ಕುಳಿತುಕೊಂಡು ಜೇರಟಗಿಗೆ ಬಂದಿರುತ್ತೇವೆ. ನಂತರ ಆಸ್ಪತ್ರೆಗೆ ತೋರಿಸಿಕೊಂಡು ಇಬ್ಬರು ಕೂಡಿ ಮತ್ತೆ ಅದೇ ಮೋಟಾರ ಸೈಕಲ್ ಮೇಲೆ ನಾನು ಹಿಂದೆ ಕುಳಿತು ನಮ್ಮ ತಂದೆಯವರು ಮೋಟಾರ ಸೈಕಲ್ ಚಲಾಯಿಸಿಕೊಂಡು ಬೆಲೂರ ಕಡೆಗೆ ಹೋಗುತ್ತಿರುವಾಗ ಸಾಯಂಕಾಲ 7-00 ಘಂಟೆಯ ಸುಮಾರಿಗೆ ಜೇರಟಗಿ-ಯಾತನೂರ ಮದ್ಯದಲ್ಲಿ ರೊಡಿನ ಮೇಲೆ ಮೆಣಸಿಗಿಡದ ಹೊಲದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಗಾಣಗಾಪೂರ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ್ ಚಾಲಕನು ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದವನೆ ರೋಡಿನ ಪಕ್ಕದಲ್ಲಿ ಹೋಗುತ್ತಿದ್ದ ನಮ್ಮ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದನು. ಆಗ ನಾವು ಕೆಳಗಡೆ ಬಿದ್ದಿದ್ದು.ಕಾರ್ ಕೂಡ ಸ್ವಲ್ಪ ಮುಂದೆ ಹೋಗಿ ಒಂದು ಹೊಲದಲ್ಲಿ ನಿಂತಿರುತ್ತದೆ. ಇದರಿಂದ ನನಗೆ ಬಲ ಕಾಲಿನ ತೊಡೆ ಮೇಲೆ ಸೊಂಟಕ್ಕೆ ಭಾರಿ ಗುಪ್ತಘಾಯ ಮತ್ತು ರಕ್ತ ಘಾಯವಾಗಿದ್ದು ನಮ್ಮ ತಂದೆಯವರಿಗೆ ತೊಡೆಯ ಮೇಲೆ ಭಾರಿ ರಕ್ತಘಾಯವಾಗಿ ತೊಡೆಯ ಮೂಳೆ ಮುರಿದು ಹೊರ ಬಂದಿರುತ್ತದೆ. ಮತ್ತು ತಲೆಗೆ ಎದೆಗೆ ಗುಪ್ತಾಂಗಕ್ಕೆ ರಕ್ತಘಾಯ ಮತ್ತು ಗುಪ್ತ ಘಾಯವಾಗಿ ಬೇಹೋಸ್ ಆಗಿ ಬಿದ್ದಿದ್ದರು.ನಾನು ಅಲ್ಲಿಯೇ ಹೊಲದಲ್ಲಿ ಹೋಗಿ ನಿಂತಿದ್ದ ಬಿಳಿ ಬಣ್ಣದ ಕಾರ್ ಇದ್ದು ನಂಬರ್ ನೋಡಲಾಗಿ ಎಮ್ ಹೆಚ್.-06-.ಯು-9779 ಇದ್ದು ಅದರ ಚಾಲಕನು ಅಲ್ಲಿಂದ ಓಡಿ ಹೋಗಿದ್ದನು. ನಂತರ ಯಾರೋ 108 ಅಂಬುಲೆನ್ಸಗೆ ಪೋನ್ ಮಾಡಿದ್ದರಿಂದ ಅಂಬುಲೆನ್ಸ ಬಂದು ನಮಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಜೇವರಗಿ ಕರದುಕೊಂಡು ಬರುವಾಗ ಮಾರ್ಗ ಮದ್ಯದಲ್ಲಿ ಜೇವರಗಿ ಸಮೀಪ ಓಂ ನಗರ ಹತ್ತಿರ ಬಂದಾಗ ಸಾಯಂಕಾ; 7-30 ಘಂಟೆಯ ಸುಮಾರಿಗೆ ನಮ್ಮ ತಂದೆಯವರು ಮೃತಪಟ್ಟಿರುತ್ತಾರೆ. ಅಂತಾ ತಿಳಿಸಿದ್ದರ ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಭಾಳಪ್ಪ ತಂದೆ ರಾಮಗೊಂಡ ಸಂಬಾಳೆ ಸಾ: ಮಣೂರ ರವರು ಗ್ರಾಮದಲ್ಲಿರುವ ಯಲ್ಲಮ್ಮ ದೇವಸ್ಥಾನದ ಕಾರ್ಯಾಲಯದಲ್ಲಿದ್ದಾಗ ಶಂಕರ ತಂದೆ ಮುತ್ತಪ್ಪ ಸಿನ್ನೂರ ಇವರು ಕರೆ ಮಾಡಿ ನದಿಯಲ್ಲಿರುವ ಗುಡಿಯ ಹತ್ತಿರ ಬ್ರೀಡ್ಜ ಸಮೀಪ ನದಿಯ ದಡದಲ್ಲಿ ಒಂದು ಯಾವುದೋ ಪ್ರಾಣಿ ಸತ್ತು ಬಿದ್ದು ವಾಸನೆ ಬರುತ್ತಿದೆ ಅದು ಮನುಷ್ಯನದೋ ಯಾವ ಪ್ರಾಣಿದೋ ಗೋತ್ತಾಗುತ್ತಿಲ್ಲ ಅಂತಾ ತಿಳಿಸಿದ ಮೇರೆಗೆ ನಾನು ನದಿಯಲ್ಲಿದ್ದ ದೇವಸ್ಥಾನದ ಹತ್ತಿರ ಹೋಗಿ ನಾನು ಮತ್ತು ಶಂಕರ ಕೂಡಿಕೊಂಡು ಶವದ ಹತ್ತಿರ ಹೋಗಿ ನೋಡಲಾಗಿ ಅಂದಾಜು 10 ರಿಂದ 15 ವಯಸ್ಸಿನ ಮನುಷ್ಯನ ಶವ ಇತ್ತು ಸದರಿ ಶವವು ಯಲ್ಲಿಯೋ ಸುಟ್ಟು ನದಿ ನೀರಿನಲ್ಲಿ ಹರಿದುಕೊಂಡು ನದಿಯಲ್ಲಿರುವ ಯಲ್ಲಮ್ಮ ದೇವಸ್ಥಾನದ ಬ್ರೀಡ್ಜ್ ಪಕ್ಕ ನದಿಯ ದಡದಲ್ಲಿ ಬಿದ್ದಿದ್ದು ಇರುತ್ತದೆ. ಸದರಿ ಶವದ ಎರಡು ಕೈಗಳು ಮುಂಗೈದವರೆಗೆ ಮತ್ತು ಒಂದು ಕಾಲು ಇರುವುದಿಲ್ಲಾ ಇನ್ನೊಂದು ಕಾಲಿನ ಅರ್ಧ ಭಾಗ ಮತ್ತು ಹೊಟ್ಟೆಯ ಭಾಗ ಪೂರ್ತಿ ಸುಟ್ಟಿದ್ದು ಸ್ವಲ್ಪ ಮಾಂಸ ಕಂಡಗಳು ಉಳಿದಿರುತ್ತವೆ. ದೇಹದ ಮೇಲಿನ ಚರ್ಮ ಮತ್ತು ಮಾಂಸ ಹಾಗೂ ತಲೆಯ ಮೇಲಿನ ಕೂದಲು ಇರುವುದಿಲ್ಲಾ ತಲೆ ಡೋಗಿ ಮಾತ್ರ ಇರುತ್ತದೆ ಸದರಿ ಶವವು ಹೆಣ್ಣೊ ಅಥವಾ ಗಂಡೊ ಅಂತಾ ಗೊತ್ತಾಗಿರುವುದಿಲ್ಲಾ ಮತ್ತು ವಯಸ್ಸು ನಿಖರವಾಗಿ ಗೊತ್ತಾಗಿರುವುದಿಲ್ಲಾ ಸದರಿ ಶವವು ಸುಮಾರು 15-20 ದಿನಗಳ ಹಿಂದ ಸತ್ತಿದ್ದು ಇರಬಹುದು ಅಂತಾ ಕಂಡು ಬಂದಿರುತ್ತದೆ.       ಸಾಮಾನ್ಯವಾಗಿ ನನ್ನ ಗ್ರಾಮದ ಸುತ್ತಮುತ್ತಲಿನ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಯಾವುದಾದರೂ ಊರಲ್ಲಿ ಮೃತಪಟ್ಟರೆ ನದಿಯ ಪಕ್ಕದಲ್ಲು ಸುಡುವುದು ರೂಡಿ ಇರುತ್ತದೆ ಹೀಗಾಗಿ ಸದರಿ ಶವ ಎಲ್ಲೋ ಸುಟ್ಟಿರುವುದು ನೀರಿನಲ್ಲಿ ತೇಲಿ ಬಂದಿರುವುದು ಕಂಡು ಬಂದಿರುತ್ತದೆ. ಕಾರಣ ಸದರಿ ಶವದ ಸಾವಿನ ಬಗ್ಗೆ ಸಂಶಯ ಸದರಿ ಘಟನೆ ಬಗ್ಗೆ ದೇವಸ್ಥಾನದ ಮಂಡಳಿಯವರೊಂದಿಗೆ ಚರ್ಚಿಸಿ ತಡವಾಗಿ ದೂರು ಸಲ್ಲಿಸಿದ್ದು ಇರುತ್ತದೆ.  ತಾವು ಮುಂದಿನ ಕ್ರಮ ಕೈಕೊಳ್ಳಬೇಕೆಂದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ;13.11.2019 ರಂದು ಸಾಯಂಕಾಲ ಫಿರ್ಯಾದಿ ನೀಡಿದ ದೂರಿನ ಸಾರಂಶವೇನೆಂದರೆ;“ನನ್ನ ಮಗಳಾದ ಕುಮಾರಿ ಇವಳನ್ನು ಅವಳ ಅಜ್ಜ ಅಜ್ಜಿಯ ಹತ್ತಿರ ಬಿಟ್ಟಿದ್ದು, ಅವಳು ಶಹಾಪೂರದ ಚರ ಬಸವೇಶ್ವರ ಕಾಲೇಜಿನಲ್ಲಿ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು ಪ್ರತಿದಿನ ಬಿಳವಾರದಿಂದ ಶಹಾಪೂರಕ್ಕೆ ಕಾಲೇಜಿಗೆ ಹೋಗಿ ಬಂದು ಮಾಡುತ್ತಾಳೆ. ಆಗಾಗ ನಮ್ಮ ಊರಿಗೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ಕೆಲವು ದಿನಗಳಿಂದ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ನಾನು ಹೋದಲೆಲ್ಲ ನನ್ನ ಹಿಂದೆ ಬಂದು ನನಗೆ ಕಣ್ಣು ಹೊಡೆಯುವದು, ಹುಬ್ಬು ಹಾರಿಸುವದು, ಕೈ ಸನ್ನೆ ಮಾಡಿ ಕರೆಯುವದು, ಮತ್ತು ನಿನಗೆ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ನನಗೆ ಚುಡಾಯಿಸುತ್ತಾ ಬಂದು ತೊಂದರೆ ಕೊಡುತ್ತಿದ್ದಾನೆ ಎಂದು ಊರಿಗೆ ಬಂದಾಗ ನಮ್ಮ ಮಗಳು ನನಗೆ ತಿಳಿಸಿರುತ್ತಾಳೆ. ನಂತರ ನಾನು ಮತ್ತು ನನ್ನ ಅಣ್ಣ , ತಮ್ಮ  ಕೂಡಿ ಬಿಳವಾರ ಗ್ರಾಮದಲ್ಲಿ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನಿಗೆ ಭೇಟಿಯಾಗಿ ನಮ್ಮ ಮಗಳ ತಂಟೆಗೆ ಬರಬೇಡ, ಅವಳಿಗೆ ತೊಂದರೆ ಕೊಡಬೇಡ ಎಂದು ಬುದ್ದಿವಾದ ಹೇಳಿ ಬಂದಿರುತ್ತೇವೆ. ಆದರು ಕೂಡ ಅವನು ಅದೇ ಚಾಳಿ ಮುಂದುವರೆಯಿಸಿರುತ್ತಾನೆ. ಆಗ ನಾವು ಕೊಡು-ತಗೊ ಮಗಳು ಇದ್ದಾಳೆ ,ಅಲ್ಲಿರುವದು ಸರಿ ಇರುವದಿಲ್ಲ ಎಂದು ಮರ್ಯಾದೆಗೆ ಅಂಜಿ ಇತ್ತೀಚೆಗೆ ದೀಪಾವಳಿ ಹಬ್ಬದ ಸಲುವಾಗಿ ಆಂದೋಲಾಕ್ಕೆ ಕರೆದುಕೊಂಡು ಬಂದಿರುತ್ತೇವೆ. ದಿನಾಂಕ; 09/11/2019 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿ ನಮ್ಮ ಮಾವನವರು ಅನಾರೋಗ್ಯದಿಂದ ನಿಧನವಾಗಿರುತ್ತಾರೆ. ನಾವೆಲ್ಲರು ಅವರ ಅಂತ್ಯ ಕ್ರಿಯೆ ಕುರಿತು ಭಾಗವಹಿಸಿದ್ದು ನಮ್ಮ ಮಗಳು ಮತ್ತು ಇತರ ಮಕ್ಕಳೆಲ್ಲರು ಮನೆಯಲ್ಲಿಯೇ ಇದ್ದರು, ಬಿಳವಾರದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಅನ್ನುವವನು ಕೂಡ ಅಲ್ಲಿಗೆ ಬಂದು ಅಂತ್ಯಕ್ರಿಯೆಯಲ್ಲಿ ಓಡಾಡುತ್ತಿದ್ದನು. ಅವನಿಗೆ ನೋಡಿ ನಮ್ಮ ಅಣ್ಣ ಇವರು ಖೂನ (ಗುರುತು) ಹಿಡಿದಿರುತ್ತಾರೆ. ನಾವು ನಮ್ಮ ಮಾವನ ಅಂತ್ಯ ಕ್ರಿಯೆ ಮಾಡಿ ಸಾಯಂಕಾಲ  5-30 ಘಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು ಮಲ್ಲಮ್ಮ ಇರಲಿಲ್ಲ. ಅಲ್ಲಿಯೇ ಇದ್ದ ಚಿಕ್ಕ ಮಳಿಗೆ ವಿಚಾರಿಸಲು ಅವಳು ತಿಳಿಸಿದ್ದೇನೆಂದರೆ; ಇಂದು ಮದ್ಯಾಹ್ನ 3-00 ಘಂಟೆಯ ಸುಮಾರಿಗೆ ನಮ್ಮ ಮನೆಯ ಹಿಂದೆ ದಾರಿಯಲ್ಲಿ ಬಿಳವಾರದ ನಮ್ಮಅಜ್ಜಿಯ ಮನೆಯ ಹತ್ತಿರ ಇರುವ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಬಂದು ಅಕ್ಕ ಮಲ್ಲಮ್ಮಳಿಗೆ ಕೈ ಮಾಡಿ ಕರೆಯುತ್ತಿದ್ದನು.  ಮತ್ತು ಅವಳು ಅಲ್ಲಿ ಹೋದಾಗ ಅವಳಿಗೆ ತನ್ನ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿರುತ್ತಾನೆ. ಎಂದು ತಿಳಿಸಿದಳು ದಿ; 09.11.19 ರಂದುಮದ್ಯಾಹ್ನ 3-00 ಘಂಟೆಯ ಸುಮಾರಿಗೆ ಬಿಳವಾರದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಆಂದೋಲಾ ಗ್ರಾಮಕ್ಕೆ ಬಂದು ನಮ್ಮ ಅಪ್ರಾಪ್ತ ವಯಸ್ಸಿನ ಮಗಳನ್ನು ಪುಸಲಾಯಿಸಿ ಅವಳ ತೆಲೆ ಕೆಡಿಸಿ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಅವಳಿಗೆ ನಂಬಿಸಿ ಒತ್ತಾಯ ಪೂರ್ವಕವಾಗಿ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ 21.11.2019 ರಂದು ಸದರಿ ಪ್ರಕರಣದ ತನಿಖೆ ಮುಂದುವರೆಯಿಸಿ ಸದರಿ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ಇವಳಿಗೆ ಮತ್ತು  ಮತ್ತು ಆರೋಪಿ ಭೀಮಾಶಂಕರ ತಂದೆ ಮಲ್ಕಾಜಪ್ಪ ಕೂಡಿ ಸಾಃ ಬಿಳವಾರ   ಇವರ ಪತ್ತೆ ಕುರಿತು ನಾನು ಮತ್ತು ನಮ್ಮ ಠಾಣೆಯ ಶ್ರೀಮತಿ ನಿರ್ಮಲಾ ಮ.ಹೆಚ್.ಸಿ. 443, ಶ್ರೀ ಪರಮೇಶ್ವರ ಹೆಚ್.ಸಿ. 36  ಶ್ರೀ ವಿಜಯಕುಮಾರ ಸಿಪಿಸಿ 691 ರವರಿಗೆ ನೇಮಿಸಿ ಕೊಟ್ಟು ಕಳಿಸಿದ್ದು ಇರುತ್ತದೆ. ದಿನಾಂಕ 23/11/2019 ರಂದು ಮದ್ಯಾಹ್ನ 2.00 ಗಂಟೆಗೆ  ಸದರಿ ಪ್ರಕರಣದಲ್ಲಿ ಪತ್ತೆ ಕುರಿತು ಹೋದ ನಮ್ಮ ಠಾಣೆಯ ಸಿಬ್ಬಂದಿಯವರು ಠಾಣೆಗೆ ಬಂದು  ಸದರಿ ಪ್ರಕರಣದಲ್ಲಿನ  ಅಪಹರಣಕ್ಕೋಳಗಾದ ಬಾಲಕಿ ಮತ್ತು ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಿ  ಬೆಂಗಳೂರಕ್ಕೆ ಹೋಗಿ ದೇವನಹಳ್ಳಿ ಬೆಂಗಳೂರದಲ್ಲಿ ಸದರಿ ಪ್ರಕರಣದಲ್ಲಿನ ಮತ್ತು ಅಪಹರಣಕ್ಕೊಳಗಾದ ಬಾಲಕಿ ಇವಳಿಗೆ ದಿ. 22/11/2019 ರಂದು ರಾತ್ರಿ 10 ಗಂಟೆಗೆ ವಶಕ್ಕೆ ಪಡೆದುಕೊಂಡು ಇಂದು ದಿ. 23/11/2019  ರಂದು ಮದ್ಯಾಹ್ನ  2.00  ಗಂಟೆಗೆ ಠಾಣೆಗೆ ಬಂದಿದ್ದು  ನಂತರ ಸದರಿ ಪ್ರಕರಣದಲ್ಲಿ ನೊಂದ ಬಾಲಕಿ ಇವಳಿಗೆ ವಿಚಾರಿಸಿ ನಮ್ಮ ಠಾಣೆಯ ಶ್ರೀಮತಿ ನಿರ್ಮಲಾ  .ಹೆಚ್.ಸಿ. 443 ರವರ ಸಮಕ್ಷಮದಲ್ಲಿ ಹೇಳಿಕೆ ಪಡೆಯಲಾಗಿ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಆಂದೋಲಾದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತೇನೆ. ನಂತರ ನಾನು ಬಿಳವಾರಕ್ಕೆ ಹೋಗಿ ಅಲ್ಲಿ ನಮ್ಮ ಆಯಿ ಮುತ್ಯಾ ರವರ ಹತ್ತಿರ ವಾಸವಾಗಿದ್ದುಕೊಂಡು ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸರಕಾರಿ ಪ್ರೌಢ ಶಾಲೆ ಬಿಳವಾರದಲ್ಲಿ ವ್ಯಾಸಂಗ ಮಾಡಿರುತ್ತೇನೆ. ನಾನು ಶಹಾಪೂರದ ಸಿ.ಬಿ (ಚರ ಬಸವೇಶ್ವರ) ಕಾಲೇಜಿನಲ್ಲಿ ಪಿ.ಯು.ಸಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಶಹಾಪೂರದ ಬಿ.ಸಿ.ಎಮ್ ವಸತಿ ನಿಲಯದಲ್ಲಿ ಕೆಲವು ದಿನಗಳು ಇದ್ದು ಆಗಾಗ ಬಿಳವಾರದಿಂದ ಕಾಲೇಜಿಗೆ ಹೋಗಿ ಬಂದು ಮಾಡುತ್ತೇನೆ. ನಾನು ಬಿಳವಾರ ಗ್ರಾಮದಲ್ಲಿ ಓದುತ್ತಿದ್ದಾಗ ನಮ್ಮ ಅಜ್ಜಿಯ ಮನೆಯ ಹತ್ತಿರ ಇರುವ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಅವನು ಆಗಿನಿಂದ ನನಗೆ ನೋಡಿ ನಗುವದು, ನನ್ನ ಹಿಂದೆ ಬರುವದು, ನನಗೆ ಕಣ್ಣು ಹೊಡೆಯುವದು, ಹುಬ್ಬು ಹಾರಿಸುವದು, ಮಾಡುತ್ತಿದ್ದನು. ನಾನು ಈ ವಿಷಯ ಮನೆಯಲ್ಲಿ ಹೇಳಿದರೆ ನನಗೆ ಶಾಲೆ ಬಿಡಿಸುತ್ತಾರೆ ಎಂದು ನಾನು ಯಾರಿಗೂ ಹೇಳಿರುವದಿಲ್ಲ.  ನಂತರ ನಾನು ಶಹಾಪೂರದಲ್ಲಿ ಕಾಲೇಜು ಮಾಡಿರುತ್ತೇನೆ. ಆಗಾಗ ನಾನು ಕಾಲೇಜಿಗೆ ಹೋಗುವಾಗ ನನ್ನ ಹಿಂದೆ ಬಂದು ನನಗೆ ಕೈ ಸನ್ನೆ ಮಾಡಿ ಕರೆಯುವದು, ಮತ್ತು ನಿನಗೆ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ನೀನು ನನಗೆ ತುಂಬಾ ಇಷ್ಟವಾಗಿದ್ದಿ ಎಂದು ಹೇಳಿ ನನಗೆ ಚುಡಾಯಿಸುತ್ತಾ ಬಂದು ತೊಂದರೆ ಕೊಡುತ್ತಿದ್ದನು. ಅವನ ಕಾಟ ತಾಳಲಾರದೆ ನಾನು ಈ ವಿಷಯವನ್ನು ನಮ್ಮ ತಂದೆ ತಾಯಿಗೆ ಮತ್ತು ಮಾವನವರಿಗೆ  ತಿಳಿಸಿರುತ್ತೇನೆ. ನಂತರ ಅವರು ಬೀಮಾಶಂಕರ್ ಈತನಿಗೆ ಬುದ್ದಿವಾದ ಹೇಳಿರುತ್ತಾರೆ. ಆದರು ಕೂಡ ಅವನು ಅದೇ ಚಾಳಿ ಮುಂದುವರೆಯಿಸಿ ನನ್ನ ಹಿಂದೆ ಬಿದ್ದು ಅವನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ನಿನಗೆ ಬಿಟ್ಟು ಇರಲು ಆಗುತ್ತಿಲ್ಲ ನೀ ಸಿಗದಿದ್ದರೆ ನಾನು ಸತ್ತೆ ಹೋಗುತ್ತೇನೆ ನಿನಗೆ ಕೈ ಬಿಡುವದಿಲ್ಲ ಎಂದು ಹೇಳಿ ನನಗೆ ತಲೆ ಕೆಡಿಸಿರುತ್ತಾನೆ. ನಂತರ ನಮ್ಮ ಮನೆಯವರು ನನಗೆ ಕಾಲೇಜು ಬಿಡಿಸಿ ಆಂದೋಲಾ ಗ್ರಾಮಕ್ಕೆ ಕರೆದುಕೊಂಡು ಬಂದಿರುತ್ತಾರೆ. ನಾನು ಆಂದೋಲಾದಲ್ಲಿಯೇ ನಮ್ಮ ತಂದೆ ತಾಯಿಯ ಹತ್ತಿರ ವಾಸವಾಗಿರುತ್ತೇನೆ. ದಿನಾಂಕ; 09/11/2019 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿ ನಮ್ಮ ಮುತ್ಯಾ ಅನಾರೋಗ್ಯದಿಂದ ನಿಧನವಾಗಿರುತ್ತಾರೆ. ಮನೆಯವರೆಲ್ಲರು ಅವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದು ಅದೇ ವೇಳೆಗೆ ಅಲ್ಲಿಗೆ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಅನ್ನುವವನು ಕೂಡ ಅಲ್ಲಿಗೆ ಬಂದಿದ್ದನು. ಮದ್ಯಾಹ್ನ 3-00 ಘಂಟೆಯ ಸುಮಾರಿಗೆ ಭೀಮಾಶಂಕರ್ ಕೂಡಿ ಇತನು ನಮ್ಮ ಮನೆಯ ಹಿಂದೆ ಬಂದು ನನಗೆ ಕೈ ಮಾಡಿ ಕರೆಯುತ್ತಿದ್ದನು. ಅವನು ಮೊದಲೆ ಪರಿಚಯವಿರುವದರಿಂದ ಯಾಕೆ ಕರೆಯುತ್ತಾನೆ ಎಂದು ನಾನು ಹತ್ತಿರ ಹೋದಾಗ ಅವನು ನಿನಗೆ ಕಾಲೇಜು ಬಿಡಿಸಿರುತ್ತಾರೆ, ನಿನಗೆ ಕೂಲಿ ಕೆಲಸಕ್ಕೆ ಹಚ್ಚಿರುತ್ತಾರೆ, ನೀನು ನನ್ನೊಂದಿಗೆ ಬಾ, ನಿನಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನ್ನ ಬಿಟ್ಟು ನನಗೆ ಇರಲು ಆಗುತ್ತಿಲ್ಲ ನನ್ನೊಂದಿಗೆ ನಡೆ ಹೋಗೋಣ ಎಂದು ಹೇಳಿ ನನ್ನ ತಲೆ ಕೆಡಿಸಿದನು. ಆಗ ನಾನು ಇನ್ನು ಚಿಕ್ಕವಳಿದ್ದೇನೆ ನನಗೆ ವಯಸ್ಸಾಗಿರುವದಿಲ್ಲ ಇನ್ನು ಸ್ವಲ್ಪ ದಿನ ತಾಳು ಎಂದು ಹೇಳಿದಾಗ ಅವನು ನನಗೆ ಸ್ವಲ್ಪ ಮೋಟಾರ ಸೈಕಲ್ ಮೇಲೆ ಕೂಡು ನಿನಗೆ ಎಲ್ಲಾ ಹೇಳುತ್ತೇನೆ ಎಂದು ನನಗೆ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಕೆಂಬಾವಿಯವರೆಗೆ ಕರೆದುಕೊಂಡು ಹೋದನು. ಅಲ್ಲಿಯೇ ಬಸ್ ನಿಲ್ದಾಣದಲ್ಲಿ ಮೋಟಾರ ಸೈಕಲ್ ನಿಲ್ಲಿಸಿ ಯಾರಿಗೋ ಪೋನ್ ಮಾಡಿ ಮೋಟಾರ ಸೈಕಲ್ ತೆಗೆದುಕೊಂಡು ಹೋಗಲು ತಿಳಿಸಿದನು. ನಂತರ ಅಲ್ಲಿಂದ ನನಗೆ ಒಂದು ಬಸ್ಸಿನಲ್ಲಿ ಕೂಡಿಸಿಕೊಂಡು ಸುರಪೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಕೂಡಿಸಿಕೊಂಡು ಬೆಂಗಳೂರಕ್ಕೆ ಹೋಗಿರುತ್ತಾನೆ. ಬೆಂಗಳೂರದ ದೇವನಹಳ್ಳಿಯ ಏರಿಯಾದಲ್ಲಿ ಕೆಲಸ ಮಾಡುವ ಅವನ ಗೆಳೆಯ ಮಾಳಪ್ಪ ನೇರಡಗಿ ಈತನು ವಾಸವಾಗಿರುವ ಒಂದು ಮನೆಯಲ್ಲಿ ನನಗೆ ಇಟ್ಟನು. ಅವನು ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ದಿ; 10/11/2019 ರಂದು ಬೆಂಗಳೂರದಲ್ಲಿ ಇದ್ದಾಗ ರಾತ್ರಿ 11-00 ಘಂಟೆಯ ಸುಮಾರಿಗೆ ನನಗೆ ಮಲಗಲು ಬಾ ಎಂದು ಕರೆದು ನಾನು ಬೇಡ ಎಂದರು ಕೂಡ ಜಬರದಸ್ತಿಯಿಂದ ನನಗೆ ಸಂಬೋಗ ಮಾಡಿರುತ್ತಾನೆ. ನಂತರ ಅಲ್ಲಿಯೇ ದಿನಾಲು ರಾತ್ರಿ ವೇಳೆಯಲ್ಲಿ ಹಲವು ಬಾರಿ ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಈ ಮೊದಲು ಒಂದು ವರ್ಷದ ಹಿಂದೆ ನಾನು ಬಿಳವಾರ ಗ್ರಾಮದ ನಮ್ಮ ಅಜ್ಜಿಯ ಮನೆಯಲ್ಲಿ ಇದ್ದಾಗ ಒಂದು ದಿನ ಮದ್ಯಾಹ್ನ ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಬೀಮಾಶಂಕರ್ ಈತನು ನಮ್ಮ ಮನೆಗೆ ಬಂದು ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಮತ್ತು ಈ ವಿಷಯ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ನಿನ್ನ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೆದರಿಸಿ ಹೀಗೆ 2-3 ಬಾರಿ ಸಂಬೋಗ ಮಾಡಿರುತ್ತಾನೆ. ಆದ್ದರಿಂದ ನಾನು ಮರ್ಯಾದೆಗೆ ಅಂಜಿ ಈ ವಿಷಯ ಯಾರಿಗು ಹೇಳಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 November 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ತುಕಾರಾಮ ತಂದೆ ಯಶ್ವಂತ ಬಟ್ಟರಕಿ ಸಾ||ವ್ಹಿ.ಕೆ.ಜಿ.ನಗರ ಅಫಜಲಪೂರ ರವರು ಮಗನ ಹೆಸರಿನಲ್ಲಿ ಒಂದು ಮೋಟಾರ ಸೈಕಲ ಖರಿದಿಸಿದ್ದು ಅದರ ನೊಂದಣಿ ಸಂಖ್ಯೆ ಕೆ,ಎ-32 ಇಎಸ್-4453 (ಚೆಸ್ಸಿ ನಂ:MBLHAR073J5D14671) ನೇದ್ದು ಇರುತ್ತದೆ. ದಿನಾಂಕ : 14/11/2019 ರಂದು 5-45 ಪಿ,ಎಮ್,ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಮನೆಯಲ್ಲಿದ್ದಾಗ ನನ್ನ ಮಗನಾದ ವಿಶ್ವುನಾಥ @ ಯಶ್ವಂತನು ತನ್ನ ಮೊಟಾರ ಸೈಕಲ ತಗೆದುಕೊಂಡು ಹೊರಗಡೆ ಹೋಗಿ ಬರುತ್ತೇನೆ ಅಂತ ಹೋಗಿರುತ್ತಾನೆ.ನಂತರ 6-30 ಪಿ,ಎಮ್,ಸುಮಾರಿಗೆ ಅಫಜಲಪೂರ ಪಟ್ಟಣದ ಬಸಣ್ಣ ಆಲಮೇಲೆ ಈತನು ನಮ್ಮ ಮನೆಗೆ ಬಂದು ನಿಮ್ಮ ಮಗನಿಗೆ ಅಫಜಲಪೂರ-ಕಲಬುರಗಿ ಮುಖ್ಯ ರಸ್ತೆ ಮೇಲೆ ಶಿವಪ್ಪ ಮ್ಯಾಕೇರಿ ರವರ ಹೊಲದ ಹತ್ತಿರ ಅಪಘಾತವಾಗಿದ್ದು ಸದರಿ ಅಪಘಾತದಿಂದ ನಿಮ್ಮ ಮಗ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ನನ್ನ ತಮ್ಮನಾದ ಮನೋಹರ ಮತ್ತಿತರು ಹೋಗಿ ನೋಡಲಾಗಿ ನನ್ನ ಮಗನಿಗೆ  ತಲೆಗೆ ಮತ್ತು ಮುಖಕ್ಕೆ, ಗಂಟಲು ಹತ್ತೀರ ಭಾರಿ ರಕ್ತಗಾಯ ಹಾಗೂ ಮತ್ತು ಕಾಲು ಮುರುದಿದ್ದು ಹಾಗೂ ಹೊಟ್ಟೆಗೆ ತರಚಿದ ಗಾಯ ಮತ್ತು ಇತರೆ ಭಾರಿ ಮತ್ತು ಸಾದಾಗಾಯಗಳಾಗಿರುವದು ಕಂಡು ಬಂತು ಸದರಿ ಅಪಘಾತದಿಂದ ನನ್ನ ಮಗ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ನನ್ನ ಮಗನ ಮೋಟಾರ ಸೈಕಲಗೆ ಅಪಘಾತಪಡಿಸಿದ ಟಾಟಾ ಸುಮೋ ಚಾಲಕನು ಟಾಟಾ ಸುಮೋವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅದರ ನಂಬರ ನೋಡಲಾಗಿ ಕೆ,ಎ-32 ಎನ್-3717 ಅಂತ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 189/2019 ಕಲಂ 279 304 (ಎ) ಐಪಿಸಿ ಮತ್ತು 187  ಐ.ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟೆಂಪೂ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ:14-11-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಮಣ್ಣೂರ ಗ್ರಾಮದ ಭಿಮಾ ನದಿಯಿಂದ ಟೆಂಪೊದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಕರಜಗಿ ಗ್ರಾಮದ ಕಡೆ ಬರುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂಂರ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಶಿವೂರ ಕ್ರಾಸ್ ಹತ್ತೀರ ಹೋಗುತ್ತಿರುವಾಗ ಎದುರುಗಡೆಯಿಂದ ಒಂದು ಟೆಂಪೊ ಬಂದಿದ್ದು  ನಿಲ್ಲಿಸಲು ಸೂಚನೆ ಕೊಟ್ಟಾಗ ಅದರ ಚಾಲಕನು ನಮ್ಮನ್ನು ನೋಡಿ ಟೆಂಪೊ ನಿಲ್ಲಿಸಿ ಓಡಿ ಹೋದನು ನಾವು ಸದರಿಯವನನ್ನು ಹಿಡಿಯಲು ಬೆನ್ನು ಹತ್ತೀದರು ಸಿಕ್ಕಿರುವದಿಲ್ಲ ಆಗ ನಾವು ಪಂಚರ ಸಮಕ್ಷಮ ಸದರಿ ಟೆಂಪೊ ಚೆಕ್ಕ ಮಾಡಲು 1) ಟಾಟಾ ಕಂಪನಿಯ ಟೆಂಪೊ ಇದ್ದು ಅದರ ನೊಂದಣಿ ಸಂಖ್ಯೆ ಕೆ,ಎ-37 4248 ಅಂತ ಬರೆದಿದ್ದು ಇರುತ್ತದೆ.ಸದರಿ ಟೆಂಪೊದಲ್ಲಿ ಮರಳು ತುಂಬಿದ್ದು ಇತ್ತು ಸದರಿ ಟೆಂಪೊ ಅ.ಕಿ 2,00,000/-ರೂ  ಇರಬಹುದು ಮತ್ತು ಅದರಲ್ಲಿ ತುಂಬಿದ ಮರಳಿನ ಅ.ಕಿ 3.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟೆಂಪೊವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆಯ ಅಫರಾಧ ಸಂ 188/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಗಡ್ಡೆಪ್ಪ ತಂದೆ ಧರೆಪ್ಪ ಕುಂಬಾರ ಸಾ: ಮಣೂರ ರವರು ದಿನಾಂಕ 13-11-2019 ರಂದು ಎಂದಿನಂತೆ ಒಕ್ಕಲುತನದ ಕೆಲಸ ಮಾಡಲು ನಮ್ಮ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನೀರು ತರಲು ನಮ್ಮ ಮನೆಯ ಹತ್ತಿರ ಇರುವ ನಳಕ್ಕೆ ಹೋದಾಗ ನನ್ನ ತಮ್ಮನ ಮಕ್ಕಳಾದ ರುದ್ರಪ್ಪ ಮಾಹಾದೇವ ಕುಂಬಾರ ಮತ್ತು ಮಲ್ಲಪ್ಪ ಮಹಾದೇವ ಕುಂಬಾರ ಇವರು ಅಲ್ಲಿಗೆ ಬಂದವರೇ ಹೊಲದ ಬಾಂದಾರಿಯ ಮೇಲಿನ ಜಾಲಿಯ ಮರದ ವಿಷಯದಲ್ಲಿ ವಿನಾ ಕಾರಣ ಜಗಳ ತಗೆದು ಆ ಗಿಡಕ್ಕೆ ನಿಮ್ಮ ಎಮ್ಮಿ ಕಟ್ಟಬೇಡಿರಿ ಭೋಸಡಿ ಮಕ್ಕಳ್ಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಏಕೆ ಬೈತಿ ಆ ಗಿಡಾ ಏನು ನಿಮ್ಮದಾ ಅಂತಾ ಕೇಳಿದಕ್ಕೆ ನಮಗೆ ಎದುರು ಮಾತನಾಡುತ್ಯಾ ಅಂತಾ ನನಗೆ ಹಿಡೆದು ನಿಲ್ಲಿಸಿ ರುದ್ರಪ್ಪಾ ಇತನು ತನ್ನ ಕೈ ಮುಷ್ಟಿ ಮಾಡಿ ಎದೆಯ ಮೇಲೆ, ಹೊಟ್ಟೆಗೆ, ಬಾಯಿಯ ದವಡೆಯಮೇಲೆ  ಗುದ್ದಿ ನೆಲಕ್ಕೆ ಕೆಡವಿದರು ಮಲ್ಲಪ್ಪ ಇತನು ತನ್ನ ಕೈಯಿಂದ ಕಪಾಳ ಮೇಲೆ, ಬೆನ್ನಿನ  ಮೇಲೆ ಹೊಡೆದು ಒಳ ಪೆಟ್ಟು ಆಗಿರುತ್ತದೆ ನನಗೆ ಈ ಮೋದಲೆ ಹಾಲ್ಟ ಆಪರೇಶನ್ ಆಗಿದ್ದು ನನ್ನ ಎದೆಯ ಮೇಲೆ ಮುಷ್ಟಿ ಗುದ್ದಿದ್ದರಿಂದ ನಾನು ನೋವನ್ನು ತಾಳದೇ ಸುಂದಾಗಿ ನೆಲಕ್ಕೆ ಬಿದ್ದಿರುತ್ತೇನೆ. ನನಗೆ ಹೊಡೆಯುತ್ತಿರುವದನ್ನು ಕಂಡು ನನ್ನ ಮಗ ಮತ್ತು ಹೆಂಡತಿ ನನಗೆ ಹೊಡೆಯುತ್ತಿದ್ದಾಗ ಏಕೆ ಹೊಡೆಯುತ್ತಿದ್ದಿರಿ ಅಂತಾ ಹೇಳಿದಕ್ಕೆ ನಿನಗೆ ಹೊಡೆಯುತ್ತೇನೆ ಸುಳಿ ಮಗನೇ ಅಂತಾ ಕುತ್ತಿಗೆ ಹಿಡೆದು ಒತ್ತಿ ನಿನಗ ಖಲಾಸ ಮಾಡುತ್ತೇನೆ ಮಗನ ಅಂತಾ ಕುತ್ತಿಗೆ ಒತ್ತಿ ಹಿಡೆದು ಕುತ್ತಿಗೆಗೆ ತರಚಿದ ರಕ್ತಗಾಯವಾಗಿದ್ದು ನನ್ನ ಹೆಂಡತಿಗೆ ನುಗಿಸಿದ್ದರಿಂದ ಕಲ್ಲಿನ ಮೇಲೆ ಬೀಳಿಸಿದ್ದರಿಂದ ಮೋಣಕಾಲು ಮತ್ತು ಬಲಗೈಗೆ ತರಚಿದ ಗಾಯವಾಗಿರುತ್ತದೆ. ಈ ರೀತಿಯಾಗಿ ನಮಗೆ ಹೊಡೆ ಬಡೆ ಮಾಡುತ್ತಿದ್ದಾಗ ನಾವು ಚಿರಾಡುವುದು ಕೇಳಿ ನಮ್ಮ ಪಕ್ಕದ ಮನೆಯವರು ಬಂದು ಜಗಳವನ್ನು ಬಿಡಿಸಿರುತ್ತಾರೆ ನಮಗೆ ಹೊಡೆ ಬಡೆ ಮಾಡಿ ಹೋಗುವಾಗ ಇವರು ಬಂದು ಜಗಳ ಬಿಡಿಸಿದ್ದರಿಂದ ಉಳದಿರಿ ಮಕ್ಕಳ್ಯಾ ಇನ್ನೊಂದು ಸಲ ಸಿಕ್ಕಾಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ  190/2019 ಕಲಂ 341, 323, 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಕಾಶಿನಾಥ ಜವಳಿ ಸಾ:ಕನಗನಹಳ್ಳಿ ರವರ ಗಂಡನು ಖಾಸಗಿ ನೌಕರಿ ಮಾಡಿಕೊಂಡಿದ್ದು ನನ್ನ ಗಂಡನ ಊರು ಜೇವರ್ಗಿ ತಾಲೂಕಿನ ಜವಳಗಿ ಗ್ರಾಮವಿದ್ದು, ನನ್ನ ತವರು ಮನೆ ಕನಗನಹಳ್ಳಿ ಗ್ರಾಮವಿದ್ದು ಮದುವೆ ಆದಾಗಿನಿಂದ ನಾನು ನನ್ನ ಗಂಡ ಕನಗನಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೆವೆ. ನನ್ನ ಗಂಡನಿಗೆ 04 ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಬೇರೆಯಾಗಿರುತ್ತೆವೆ. 2009 ನೇ ಸಾಲಿನಲ್ಲಿ ನಮ್ಮ ತಂದೆಯವರು ಸನ್ನತಿ ಸೀಮಾಂತರದಲ್ಲಿರುವ ಹೊಲ ಸರ್ವೆ ನಂಬರ 117/3 ರಲ್ಲಿ 03 ಎಕರೆ 39 ಗುಂಟೆ ಜಮೀನು ಮಾರಾಟ ಮಾಡುತ್ತಿದ್ದಾಗ ಅವರ ಹೊಲವನ್ನು ನಾವೇ ಖರಿದಿ ಮಾಡಿರುತ್ತೆವೆ. ಸದರಿ ಹೊಲದ ಪಾಣಿ ಪತ್ರಿಕೆ ನನ್ನ ಹೆಸರಿನಲ್ಲಿ ಇರುತ್ತವೆ. ನಂತರ 2016 ನೇ ಸಾಲಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಮ್ಮ ಪೂರ್ತಿ ಹೊಲವನ್ನು ಸರ್ಕಾರ ಸ್ವಾಧಿನ ಪಡಿಸಿಕೊಂಡು ಅದಕ್ಕೆ ಒಟ್ಟು 25 ಲಕ್ಷ ರೂಪಾಯಿ ಮಂಜೂರು ಮಾಡಿದ್ದು ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ತಯ್ಯಾರಿಸಿ ಬಿ ಗುಡಿಯಲ್ಲಿರುವ SLO ಆಫೀಸಗೆ ಸಲ್ಲಿಸಿದ್ದು ನಂತರ ಒಟ್ಟು ಹಣ 25 ಲಕ್ಷ ರೂಪಾಯಿ ಮಂಜೂರು ಆಗಿದ್ದು ಹಣವನ್ನು ನಾವು ಪಡೆಯಬೇಕೆನ್ನುವಷ್ಟರಲ್ಲಿ ನಮ್ಮ ಭಾವ ಕೆಂಚಪ್ಪ ಇವರ 2 ನೇ ಹೆಂಡತಿಯಾದ ವಿಜಯಲಕ್ಷ್ಮೀ ಇವಳು ಸಂಬಂಧಪಟ್ಟ ಇಲಾಖೆಯಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದಳು. ನಂತರ ಅಧಿಕಾರಿಗಳು ನಿಮ್ಮ ನಿಮ್ಮಲ್ಲಿಯ ಸಮಸ್ಯೆಯನ್ನು ಬಗೆಹರಿಸಿಕೊಂಡು ಬಂದು ಅವರ ಅರ್ಜಿಯನ್ನು ವಾಪಸ್ಸು ತೆಗೆದುಕೊಂಡರೆ ನಾವು ಹಣ ನಿಮಗೆ ಮಂಜೂರು ಮಾಡುತ್ತೆವೆ ಅಂತಾ ಹೇಳಿದರು. ವಿಷಯದಲ್ಲಿ ವಿಜಯಲಕ್ಷ್ಮೀ ಇವಳಿಗೆ ವಿಚಾರಿಸಿದರೆ ನನಗೂ ಅದರಲ್ಲಿ ಪಾಲು ಕೊಡು ಅಂತಾ ತಕರಾರು ಮಾಡುತ್ತ ಬಂದಿದ್ದು ಅಲ್ಲದೇ ಸದರಿ ಹೊಲವು ಪಿತ್ರಾರ್ಜಿದ ಆಸ್ತಿ ಅಲ್ಲದೇ ನಾವು ಸ್ವಂತ ಖರೀದಿ ಮಾಡಿರುತ್ತೆವೆ ಅಂತಾ ಹೇಳಿದರು ಸಹ ತಕರಾರು ಮಾಡುತ್ತ ಬಂದಿದ್ದು ಅಲ್ಲದೇ ಅವಳಿಗೆ ಅವಳ ತಮ್ಮ ಬಸವರಾಜ ತಂದೆ ಮುದಿಗೌಡ ಸಾ:ಭಂಕೂರ, ಬಸವರಾಜ ತಂದೆ ಚಂದ್ರಶೇಖರ ಪೊಲೀಸ ಪಾಟೀಲ ಮು:ಕನಗನಹಳ್ಳಿ, ರವಿ ಕುಮಾರ ಮು:ಭಂಕೂರ ರವರು ಅವಳಿಗೆ ಆಸ್ತಿಯಲ್ಲಿ ಪಾಲು ಬೀಡಬೇಡಾ ನಾವು ನಿನ್ನ ಹಿಂದೆ ಇದ್ದೆವೆ ಅಂತಾ ಪ್ರಚೋದನೆ ಮಾಡುತ್ತ ಬಂದಿರುತ್ತಾರೆ. ಅಲ್ಲದೇ ವಿಷಯದಲ್ಲಿ ವಿನಾಕಾರಣ ಜೇರ್ವಗಿ ನ್ಯಾಯಾಲಯದಲ್ಲಿ ಖಾಸಗಿ ದೂರು ಓಎಸ್ ನಂಬರ 126/16 ನೇದ್ದನ್ನು ನೀಡಿದ್ದು ಇರುತ್ತದೆ. ಹಣದ ವಿಷಯದಲ್ಲಿ ನಾನು ಮತ್ತು ನನ್ನ ಗಂಡ ಅನೇಕ ಸಲ ವಿಜಯಲಕ್ಷ್ಮೀ ಇವಳಿಗೆ ಸಮಜಾಯಿಸಿ ಹೇಳಿದ್ದು ಅಲ್ಲದೇ ಅದರಲ್ಲಿ ಬೇಕಾದರೆ ಸ್ವಲ್ಪ ನಿನಗೆ ದುಡ್ಡು ಕೊಡುತ್ತೆವೆ ಅಂತಾ ಹೇಳಿದರು ಸಹ ನನಗೆ ವಿನಾಕಾರಣ ಸತಾಯಿಸುತ್ತ ಬಂದು ನನಗೆ ಸರ್ಕಾರದಿಂದ ಸೀಗಬೇಕಾದ 25 ಲಕ್ಷ ರೂಪಾಯಿ ಹಣವನ್ನು ಬರದಂತೆ ತಡೆ ಮಾಡಿರುತ್ತಾಳೆ.ಗ್ರಾಮದ ಕೆಲವು ಹಿರಿಯರು ಸಹ ಹೇಳಿದರು ಸಹ ಕೇಳದೆ ಬಸವರಾಜ, ರವಿಕುಮಾರ ಬಸವರಾಜ ತಂದೆ ಚಂದ್ರಶೇಖರ ರವರು ಕುಮ್ಮಕ್ಕು ನೀಡಿ ಹಣ ಬಿಡುಗಡೆ  ಮಾಡಲು ಒಪ್ಪಬೇಡಾ ಅಂತಾ ಹೇಳುತ್ತ ಬಂದಿರುತ್ತಾರೆ. ನಂತರ ದಿನಾಂಕ 22/09/2019 ರಂದು ಬೆಳಗ್ಗೆ 11-00 ಗಂಟೆ ಸುಮಾರು ನಾನು ಮನೆಯಲ್ಲಿದ್ದಾಗ ಜಯಲಕ್ಷ್ಮೀ ಗಂಡ ಕೆಂಚಪ್ಪ , ಬಸವರಾಜ ತಂದೆ ಚಂದ್ರಶೇಖರ, ರವಿಕುಮಾರ, ಬಸವರಾಜ ತಂದೆ ಮುದಿಗೌಡ ರವರು ಕೂಡಿಕೊಂಡು ನನ್ನ ಮನೆಯ ಹತ್ತಿರ ಬಂದು ವಿಜಯಲಕ್ಷ್ಮೀ ಇವಳು ನನಗೆ ಮನೆಯ ಹೊರಗೆ ಕರೆದಾಗ ನಾನು ಹೊರಗಡೆ ಬಂದು ಯಾಕೇ ಅಂತಾ ವಿಚಾರಿಸಿದ್ದಕ್ಕೆ ‘’ ರಂಡಿ ನೀನು ಹಣ ಕೊಡಿಸು ಅಂತಾ ಬೇರೆಯವರ ಎದರು ಹೇಳುತ್ತಿದ್ದಿ ಅಂತೆ ನಾನು ನಿನಗೆ ಬರುವ ಹಣವನ್ನು ಬಿಡುಗಡೆ ಮಾಡಲು ಬಿಡುವದಿಲ್ಲ ಅಂತಾ ಬೈಯುತ್ತಿದ್ದಾಗ ನಾನು ಯಾಕೇ ವಿನಾಕಾರಣ ನನ್ನೊಂದಿಗೆ ತಕರಾರು ಮಾಡುತ್ತಿ ಅಂತಾ ಕೇಳುತ್ತಿದ್ದಂತೆ ಬಸವರಾಜ ತಂದೆ ಚಂದ್ರಶೇಖರ, ಬಸವರಾಜ ತಂದೆ ಮುದಿಗೌಡ ರವರು ‘’ ರಂಡಿ ನಿನಗೆ ಹಣ ಬರಲು ಬಿಡುವದಿಲ್ಲ ನೀನು ಜೀವಂತ ಕೊರಗಿ ಕೊರಗಿ ಸಾಯಬೇಕು ಅಂತಾ ಅನ್ನುತ್ತಿದ್ದು ಆಗ ನಮ್ಮ ಮನೆಯಲ್ಲಿದ್ದ ತಾಯಿ ಮತ್ತು ದೊಡ್ಡಪ್ಪ ತಂದೆ ಮಲ್ಲಪ್ಪ ಹೋಳಿ , ಚಂದ್ರಶೇಖರ ತಂದೆ ದೇವಿಂದ್ರಪ್ಪ ಬಮಚಟ್ನಳ್ಳಿ ರವರು ಬಂದು ಜಗಳ ಬಿಡಿಸಿದರು. ಆಗ ನಾನು ಪೊಲೀಸ ಸ್ಟೇಷನಗೆ ಹೋಗುತ್ತೆನೆ ಅಂತಾ ಹೊರಟರೆ ವಿಜಯಲಕ್ಷ್ಮೀ ಇವಳು ನನಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ. ರವಿಕುಮಾರ ಇತನು ಇವಳಿಗೆ ಖಲಾಸ ಮಾಡಿ ಬೀಡು ನಾನು ಬಂದಿದ್ದು ನೋಡಿಕೊಳ್ಳುತ್ತೆನೆ ಅಂತಾ ವಿಜಯಲಕ್ಷ್ಮೀ ಇವಳಿಗೆ ಪ್ರಚೋದನೆ ನೀಡಿದ್ದು ಇರುತ್ತದೆ. ದಿನಾಂಕ 13/11/2019 ರಂದು  ಬೆಳಗ್ಗೆ 09-00 ಸುಮಾರು ನಾವು ಮನೆಯಲ್ಲಿದ್ದಾಗ ವಿಜಯಲಕ್ಷ್ಮೀ ಮತ್ತು ಬಸವರಾಜ ತಂದೆ ಚಂದ್ರಶೇಖರ ಪೊಲೀಸ ಪಾಟೀಲ ಇವರು ನಮ್ಮ ಮನೆಯ ಹತ್ತಿರ ಬಂದು ‘’ ಮಕ್ಕಳೇ ನೀವು ನಾವು ಹೇಳಿದ ಹಾಗೆ ಕೇಳದೆ ಇದ್ದರೆ ನಿಮಗೆ ಊರು ಬಿಡಿಸಿ ಓಡಿಸಿ ಹಾಕುತ್ತೆವೆ’’ ಅಂತಾ ಬೆದರಿಕೆ ಹಾಕುತ್ತ ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.