POLICE BHAVAN KALABURAGI

POLICE BHAVAN KALABURAGI

20 May 2014

Gulbarga District Reported Crimes

ವರದಕ್ಷಣೆಗಾಗಿ ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗುರಬಸಪ್ಪ ತಂದೆ ಅಣ್ಣಾರಾವ ಮಾಣಿಕ ಸಾ:ಗೋಳಾ (ಕೆ) ತಾ:ಚಿತ್ತಾಪುರ ಜಿ:ಗುಲಬರ್ಗಾ ರವರ ಮಗಳಾದ ಕಸ್ತೂರಿಬಾಯಿ ಇವಳಿಗೆ ಎರಡು ತಿಂಗಳ ಹಿಂದೆ ದಿನಾಂಕ:-19/02/2014 ರಂದು ಸಿದ್ದಾರಾಮ ಇತನಿಗೆ 1 ಲಕ್ಷ ರೂ ಹಾಗು 11 ತೋಲಿ ಬಂಗಾರ ಕೊಟ್ಟು ಮದುವೆ ಮಾಡಿದ್ದು ತನ್ನ ಮಗಳಾದ ಕಸ್ತೂರಿಬಾಯಿ ಇವಳಿಗೆ ಕೆಲವು ದಿವಸಗಳವರೆಗೆ ಸರಿಯಾಗಿ ನೋಡಿಕೊಂಡು ನಂತರ ಅವಳ ಗಂಡ ಸಿದ್ದಾರಾಮ, ಮಾವ ಗುಂಡಪ್ಪ, ಅತ್ತೆ ಪಾರ್ವತಿ, ನಾದಿನಿ ನಿರ್ಮಲಾ, ರುಕ್ಮಿಣಿ, ಅನ್ನಪೂರ್ಣ ಹಾಗು ಸಿದ್ದಾರಾಮನ ಸೊದರತ್ತೆಯರಾದ ಮಲ್ಲಮ್ಮಾ ಪಾಟೀಲ, ಜಗದೇವಿ ಟೆಂಗಳಿ, ಹಾಗು ಅವನ ಕಾಕಾ ಯಲ್ಲಾಲಿಂಗ ಇವರು ಇನ್ನು ತವರು ಮನೆಯಿಂದ 1 ತೋಲಿ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ ಹಿಂಸೆ ನೀಡಿ ದಿನಾಂಕ:-15/04/2014 ರಂದು ಮದ್ಯಾಹ್ನ 01:00 ಗಂಟೆ ಸುಮಾರಿಗೆ ಅವರೆಲ್ಲರೂ ಹೊಡೆದು ಕೊಲೆ  ಮಾಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 20/05/2014 ರಂದು 12:15 ಎ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಬಸವೇಶ್ವರ ಕಾಲೋನಿಯಲ್ಲಿ ಬಸವಣ್ಣ ದೇವರ ಗುಡಿಯ ಮುಂದೆ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಮೇರೆಗೆ ಪಿ.ಎಸ್.ಐ. ಎಮ.ಬಿ. ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 07 ಜನರನ್ನು ಹಿಡಿದು ವಿಚಾರಿಸಲು 1. ವಿಜಯಕುಮಾರ ತಂದೆ ಸುರೇಶ ಜೈನ್ ಸಾಃ ಗಾಜಿಪೂರ ಗುಲಬರ್ಗಾ 2. ಅಂಬ್ರೀಷ ತಂದೆ ಗುರುಶಾಂತಪ್ಪಾ ಕಡಗಂಚಿ ಸಾಃ ಚ್ರಕಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 3. ರೇವಣಸಿದ್ದ ತಂದೆ ಸಂಗಪ್ಪಾ ಹತ್ತಿ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ  4. ರಾಜೇಂದ್ರ ತಂದೆ ದಸ್ತಯ್ಯ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 5. ರೋಹಿತ ತಂದೆ ಅಂಬು ವಳಕೇರಿ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 6. ಮಲ್ಲಿಕಾರ್ಜುನ ತಂದೆ ಚನ್ನಪ್ಪಾ ಫರತಾಬಾದ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 7. ವಿನೋದ ತಂದೆ ಮಲ್ಲಪ್ಪ ಸಿದ್ದಗೋಳ ಸಾಃ ಶಿವ ಮಂದಿರ ಹತ್ತಿರ ಎಂ.ಬಿ ನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ಒಟ್ಟು 10,000/- ರೂ. ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Press Note

ಪತ್ರಿಕಾ ಪ್ರಕಟಣೆ
ಕುಖ್ಯಾತ ೫ ಜನ ರೌಡಿಗಳ ಮೇಲೆ ಗುಲಬರ್ಗಾ ಪೊಲೀಸರ ಕಾರ್ಯಾಚರಣೆ
ಗುಲಬರ್ಗಾ ಜಿಲ್ಲೆಯ ೫ ಜನ ಕುಖ್ಯಾತ ರೌಡಿಗಳ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾ ರವರು ಆದೇಶಿಸಿರುತ್ತಾರೆ.
ಗುಲಬರ್ಗಾ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಗುಲಬರ್ಗಾ ಜಿಲ್ಲೆಯಲ್ಲಿ ಅಶಾಂತಿ, ಭಯದ ವಾತಾವರಣವುಂಟು ಮಾಡುತ್ತಿದ್ದು, ಹಾಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತಹ ಕೃತ್ಯದಲ್ಲಿ ಭಾಗಿಯಾಗಿರುವ ಐವರು ಕುಖ್ಯಾತ ರೌಡಿ ಶೀಟದಾರರ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾ ರವರು ಆದೇಶಿಸಿರುತ್ತಾರೆ.
1.      ವಿಶಾಲ ತಂದೆ ಸುಭಾಷ @ ಸುಭಾಶ್ಚಂದ್ರ ನವರಂಗ್ ಸಾ|| ಮನೆ ನಂ ೨-೬೦೪ ಎಸ.ಟಿ/ಬಿ.ಟಿ ಕ್ರಾಸ್    ಸೇಡಂ ರೋಡ ಗುಲಬರ್ಗಾ,
2.     ಪ್ರಸಾದ @ ಲಾಲ್ಯಾ @ ಕೆಂಪ್ಯಾ ತಂದೆ  ಮಲ್ಲಿಕಾರ್ಜುನ ಅಳಂದಕರ್ ವ|| ೨೧, ಸಾ|| ಡೊಹರ ಗಲ್ಲಿ ಸುಂದರ ನಗರ ಗುಲಬರ್ಗಾ,
3.     ಸಂಜೀವ @ ಬಾಂಬೆ ಸಂಜ್ಯಾ ತಂದೆ ಪರಶುರಾಮ ಹೋಳಕರ್ ವ|| ೩೨, ಸಾ|| ವಿಜಯ ನಗರ ಬ್ರಹ್ಮಪೂರ ಗುಲಬರ್ಗಾ,
4.    ಸತೀಶ @ ಸಂಗಮ್ ಸತೀಶ @ ಸಂಗಮ್ ಸತ್ಯಾ ತಂದೆ ವೆಂಕಟಸ್ವಾಮಿ ವ|| ೩೦,|| ಬಟ್ಟೆ ವ್ಯಾಪಾರ, ಸಾ|| ಯಾಕೂಬ ಮನಿಯಾರ ಚಾಳ, ಎಲ್.ಐ.ಸಿ ಆಫೀಸ್ ಎದುರುಗಡೆ ಗುಲಬರ್ಗಾ
5.     ಮಲ್ಲಿಕಾರ್ಜುನ ತಂದೆ ಈಶ್ವರಪ್ಪ ನಾಟಿಕಾರ್ ವ|| ೪೫, ಸಾ|| ಹೊರಟೂರು ತಾ|| ಶಹಾಪೂರ ಜಿಲ್ಲಾ ಯಾದಗಿರಿ ಹಾ|||| ಅಂಬೇಡ್ಕರ್ ಕಾಲೋನಿ ವಾಡಿ, ತಾ|| ಚಿತ್ತಾಪೂರ, ಜಿ|| ಗುಲಬರ್ಗಾ ಈ ೫ ಜನ ಆರೋಪಿತರನ್ನು ೩ ತಿಂಗಳುಗಳ ಕಾಲಾವಧಿವರೆಗೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾರವರು ಆದೇಶಿಸಿದ್ದು, ಗುಲಬರ್ಗಾಜಿಲ್ಲೆ ಪೊಲೀಸ್ ನವರು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ೫ ಜನರ ಆರೋಪಿತರಿಗೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ  ಬೆಳಗಾಂವ, ಗುಲಬರ್ಗಾ, ಬಿಜಾಪೂರ, ಬಳ್ಳಾರಿ ಕೇಂದ್ರ ಕಾರಾಗೃಹಗಳಿಗೆ ರವಾನಿಸಲಾಗಿರುತ್ತದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ವಿಜಯಕುಮಾರ ತಂದೆ ಶರಣಬಸಪ್ಪಾ ಮಾಲಗತ್ತಿ ಸಾ : ಭರತನಗರ, ಸಂಜೀವ ನಗರ ತಾ. ಜಿ. ಗುಲಬರ್ಗಾ ಇವನು  ಫರಹತಬಾದ ಗ್ರಾಮದ ಸೋಂಶೇಖರ ಕಲಬುರ್ಗಿ ಇತನ ಬ್ಯಾಳಿ ದಾಲ್‌ ಮೀಲ್‌ನಲ್ಲಿ  ಕೆಲಸ ಮಾಡಿಕೊಂಡು ದಿನಾಲು ಗುಲಬರ್ಗಾದಿಂದ ತನ್ನ ಮೊಟರ್‌ ಸೈಕಲ್‌ ನಂ. ಕೆಎ 32 ಜೆ 7857 ನೇದ್ದರ ಮೇಲೆ ಹೋಗಿ ಬಂದು ಮಾಡುತ್ತಾನೆ. ಎಂದಿನಂತೆ ದಿನಾಂಕ:18/05/2014 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಗುಲಬರ್ಗಾ ದಿಂದ ಫರಹಾತಾಬಾದ ಗ್ರಾಮಕ್ಕೆ ಕೆಲಸಕ್ಕೆಂದು ಹೊಗಿದ್ದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮಫರಹತಾಬಾದ ಗ್ರಾಮದ ಸೋಮಶೇಖರ ಕಲಬುರ್ಗಿ ಇವರು ಫೊನ್‌ ಮಾಡಿ ತಿಳಿಸಿದ್ದೆನಂದರೆ. ರಾತ್ರಿ 8:30 ಗಂಟೆಯ ಸುಮಾರಿಗೆ ನಿಮ್ಮ ತಮ್ಮ ವಿಜಯಕುಮಾರ ಇವರು ಫರಹತಬಾದಲ್ಲಿದ್ದ ನಮ್ಮ ದಾಲ್‌ ಮೀಲ್‌ದಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತೆನೆ ಅಂತಾ ತನ್ನ ಮೊಟರ್‌ ಸೈಕಲ್‌ ನಂ ಕೆಎ 32 ಜೆ 7857 ನೇದ್ದರ ಮೇಲೆ ಹೊಗಿರುತ್ತಾನೆ.  ಮುಂದೆ ರಾತ್ರಿ  9 ಗಂಟೆಗೆ ಎನ್‌ ಹೆಚ್‌218 ರಸ್ತೆಯ ಭಾರತಿ ವಿದ್ಯಾ ಮಂದಿರದ ಹತ್ತಿರ ಲಾರಿ ನಂ. ಕೆಎ 39/4641  ನೇದ್ದು  ರೋಡಿನ ಮೇಲೆ ಇಂಡಿಕೇಟ್‌ ಹಾಕದೆ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಿಲ್ಲಿಸಿದ್ದರಿಂದ ಸದರಿ ವಿಜಯಕುಮಾರನು ಲಾರಿ ನಿಂತಿದ್ದು ಕಾಣಿಸದೆ  ಅವನ ಗಾಡಿ  ಲಾರಿಗೆ ಹಿಂಬದಿಗೆ   ಡಿಕ್ಕಿಯಾಗಿ  ಹಣೆಗೆ ಗಾಯವಾಗಿ ಬಿದ್ದಿರುತ್ತಾನೆ.ಸದರಿ ಲಾರಿ ಚಾಲಕನು ಸ್ಥಳದಲ್ಲಿ ಇರದೆ ಲಾರಿಯನ್ನು ಆಲ್ಕಷ್ಯತನದಿಂದ ರೋಡಿನ ಮೇಲೆ ನಿಲ್ಲಿಸಿ ಹೋಗಿರುತ್ತಾನೆ. ಅಂತಾ ಶ್ರೀ ಸಿದ್ದಣ್ಣಾ ತಂದೆ ಶರನಬಸಪ್ಪಾ ಮಾಲಗತ್ತಿರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 18-05-2014 ರಂದು ರಾತ್ರಿಯ 8 ಘಂಟೆಯ ಸಮಯದಲ್ಲಿ ಮಹ್ಮದ ಶಹಜಾದ ತಂದೆ ಮಹ್ಮದ ಹನೀಫ ಸಾ : ಹುಸೇನಿ ಚಿಲ್ಲಾ ಎಂ.ಎಸ್.ಕೆ.ಮಿಲ್ಲ ಗುಲಬರ್ಗಾ ರವರು ನಡೆಸುತ್ತಿದ್ದ ಮೋಟರ ಸೈಕಿಲ್ ನಂಬರ KA 32 S - 5948 ನೇದ್ದರ ಮೇಲೆ ಫಿರ್ಯಾಧಿ ಹಾಗೂ ಆತನ ಗೆಳೆಯ ಜಾಕೀರ ಹಿಂದೆ ಕುಳಿತು ಜಗತ್ತ ಗಾರ್ಡನ್ ದಿಂದ STBT ರಸ್ತೆಯ ಮೂಲಕ ಮನೆಯ ಕಡೆಗೆ ಹೋಗುತ್ತಿರುವಾಗ ನಾವು ಮೂವರು ಕುಳಿತುಕೊಂಡು ಹೋಗುತ್ತಿದ್ದ ಮೋಟರ ಸೈಕಿಲ್ ನ್ನು ಚಲಾಯಿಸುತ್ತಿದ್ದ ಮಹ್ಮದ ಶಹಾಬಾಜ ಈತನು ಮೋಟರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಸಾತ ಗುಂಬಜ ಹತ್ತಿರ ತಿರುವಿನಲ್ಲಿ ಮಕಬೂಲ ಆಝಾದ ಇವರ ಲಾರಿ ಸ್ಕ್ರ್ಯಾಪ ಅಂಗಡಿ ಎದುರುಗಡೆ ಜಾಗದ ಎದುರುಗಡೆ ರೋಡಿನ ಮಧ್ಯದಲ್ಲಿ ಇರುವ ರೋಡ ಡಿವೈಡರ ಕಟ್ಟೆಗೆ ಜೋರಾಗಿ ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದರಿಂದ ಅಪಘಾತದಲ್ಲಿ ಮೂವರೂ ಸಹ ಮೋಟರ ಸೈಕಲ ಸಮೇತ ಕೆಳಗೆ ಬಿದ್ದು ಸಾದಾ ಮತ್ತು ಭಾರಿ ಗಾಯಗೊಂಡಿರುತ್ತೆವೆ ಅಂತಾ ಶ್ರೀ ಮಹ್ಮದ ಟಿಪ್ಪು ತಂದೆ ಮಹ್ಮದ ಲಿಯಾಖತ ಅಲಿ ಸಾ : ತರಕಾರಿ ಮಾರ್ಕೆಟ ಕೆ.ಬಿ.ಎನ್. ದರ್ಗಾದ ಹತ್ತಿರ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಪಾರ್ವತಿ ಗಂಡ ಪಿರ್ಯಾ ನಾಯಕ ಜಾಧವ, ಸಾ: ಜಾಕನಪಲ್ಲಿ ತಾಂಡಾ ಇವರು ಸುಮಾರು 5-6 ವರ್ಷಗಳ ಹಿಂದೆ  ಪಾರ್ವತಿ ಇವಳ ಚಿಕ್ಕ ಮಾವನ ಮಗಳಾದ ಸಾವಿತ್ರಿಬಾಯಿಗೆ ಜಾಕನಪಲ್ಲಿ ತಾಂಡಾದ ಮಾರುತಿ ತಂದೆ ಮಾಣಿಕ್ಯಾ ನಾಯಕ ರಾಠೋಡ ಇವನು ಒಡಿಸಿಕೊಂಡು ಹೊಗಿ ಮದುವೆಯಾಗಿದ್ದು, ಆಗ ಫೀರ್ಯಾದಿಯ ಗಂಡ ಮಾರುತಿಗೆ ಅವಚ್ಚಾ ಶಬ್ದಗಳಿಂದ ಬೈದು ಹೊಡೆದಿರುತ್ತಾನೆ. ಆಗಿನಿಂದ ಇಲ್ಲಿಯವರೆಗೆ ಫೀರ್ಯಾದಿ ಗಂಡನಿಗು ಮತ್ತು ಆರೋಪಿತನಾದ ಮಾರುತಿ ತಂದೆ ಮಾಣಿಕ್ಯಾ ನಾಯಕ ಇತನಿಗು ವೈಮನಸ್ಸಿನಿಂದ ದಿನಾಂಕ: 19-05-2014 ರಂದು ಮಧ್ಯಾಹ್ನ 01:00 ಗಂಟೆ ಸುಮಾರಿಗೆ ಫಿರ್ಯಾದಿಯ ಗಂಡನಾದ ಪಿರ್ಯಾ ನಾಯಕ ಇತನಿಗೆ ಮಾರುತಿಯ ಸಂಬಂದಿಕರಾದ ಧೂಳ್ಯಾ ನಾಯಕ ತಂದೆ ತೇಜ್ಯಾ ನಾಯಕ ರಾಠೋಡ ಮತ್ತು ಬುಜಿಬಾಯಿ ಗಂಡ ಧೋಳ್ಯಾ ನಾಯಕ ರಾಠೋಡ ಇವರು ಒಳ ಸಂಚು ಮಾಡಿ, ಅವರ ಮನಗೆ ಬಾ ಅಂತಾ ಕರೆದಿದ್ದು, ನನ್ನ ಗಂಡ ಅವರ ಮನೆಗೆ ಹೊದಾಗ, ಅಲ್ಲೇ ಇದ್ದ, ಮಾರುತಿ ತಂದೆ ಮಾಣಿಕ್ಯಾ ನಾಯಕ ಹಳೆ ವೈಶಮ್ಯಾ ದಿಂದ ಪಿರ್ಯಾ ನಾಯಕನಿಗೆ ಜಗಳಾ ತೆಗೆದು, ಏ ಭೋಸಡಿ ಮಗನೆ 5-6 ವರ್ಷಗಳ ಹಿಂದೆ ನಿಮ್ಮ ಚಿಕ್ಕಪ್ಪನ ಮಗಳಿಗೆ ಏತ್ತಿಕೊಂಡು ಮದುವೆ ಮಾಡಿಕೊಂಡಾಗ ನನಗೆ ಹೊಡೆದು ಅವಮಾನ ಮಾಡಿದ್ದಿ, ನಿನಗೆ ಖಲಾಸ ಮಾಡುತ್ತೇನೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ಅವನ ಕೈಯಲ್ಲಿದ್ದ, ಚಾಕುವಿನಿಂದ ಫೀರ್ಯಾ ನಾಯಕ ಎಡಗಡೆ ಮೇಲುಕಿಗೆ, ಎಡಗಡೆ ಹೇಡಕಿಗೆ, ಮತ್ತು ಎಡಗಡೆ ಕಿವಿಗೆ ಮತ್ತು ಎಡಗಡೆ ಬೆನ್ನಿಗೆ ಚಾಕುನಿಂದ ಹೊಡೆದು ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.