POLICE BHAVAN KALABURAGI

POLICE BHAVAN KALABURAGI

20 May 2014

Gulbarga District Reported Crimes

ವರದಕ್ಷಣೆಗಾಗಿ ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗುರಬಸಪ್ಪ ತಂದೆ ಅಣ್ಣಾರಾವ ಮಾಣಿಕ ಸಾ:ಗೋಳಾ (ಕೆ) ತಾ:ಚಿತ್ತಾಪುರ ಜಿ:ಗುಲಬರ್ಗಾ ರವರ ಮಗಳಾದ ಕಸ್ತೂರಿಬಾಯಿ ಇವಳಿಗೆ ಎರಡು ತಿಂಗಳ ಹಿಂದೆ ದಿನಾಂಕ:-19/02/2014 ರಂದು ಸಿದ್ದಾರಾಮ ಇತನಿಗೆ 1 ಲಕ್ಷ ರೂ ಹಾಗು 11 ತೋಲಿ ಬಂಗಾರ ಕೊಟ್ಟು ಮದುವೆ ಮಾಡಿದ್ದು ತನ್ನ ಮಗಳಾದ ಕಸ್ತೂರಿಬಾಯಿ ಇವಳಿಗೆ ಕೆಲವು ದಿವಸಗಳವರೆಗೆ ಸರಿಯಾಗಿ ನೋಡಿಕೊಂಡು ನಂತರ ಅವಳ ಗಂಡ ಸಿದ್ದಾರಾಮ, ಮಾವ ಗುಂಡಪ್ಪ, ಅತ್ತೆ ಪಾರ್ವತಿ, ನಾದಿನಿ ನಿರ್ಮಲಾ, ರುಕ್ಮಿಣಿ, ಅನ್ನಪೂರ್ಣ ಹಾಗು ಸಿದ್ದಾರಾಮನ ಸೊದರತ್ತೆಯರಾದ ಮಲ್ಲಮ್ಮಾ ಪಾಟೀಲ, ಜಗದೇವಿ ಟೆಂಗಳಿ, ಹಾಗು ಅವನ ಕಾಕಾ ಯಲ್ಲಾಲಿಂಗ ಇವರು ಇನ್ನು ತವರು ಮನೆಯಿಂದ 1 ತೋಲಿ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ ಹಿಂಸೆ ನೀಡಿ ದಿನಾಂಕ:-15/04/2014 ರಂದು ಮದ್ಯಾಹ್ನ 01:00 ಗಂಟೆ ಸುಮಾರಿಗೆ ಅವರೆಲ್ಲರೂ ಹೊಡೆದು ಕೊಲೆ  ಮಾಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 20/05/2014 ರಂದು 12:15 ಎ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಬಸವೇಶ್ವರ ಕಾಲೋನಿಯಲ್ಲಿ ಬಸವಣ್ಣ ದೇವರ ಗುಡಿಯ ಮುಂದೆ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಮೇರೆಗೆ ಪಿ.ಎಸ್.ಐ. ಎಮ.ಬಿ. ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 07 ಜನರನ್ನು ಹಿಡಿದು ವಿಚಾರಿಸಲು 1. ವಿಜಯಕುಮಾರ ತಂದೆ ಸುರೇಶ ಜೈನ್ ಸಾಃ ಗಾಜಿಪೂರ ಗುಲಬರ್ಗಾ 2. ಅಂಬ್ರೀಷ ತಂದೆ ಗುರುಶಾಂತಪ್ಪಾ ಕಡಗಂಚಿ ಸಾಃ ಚ್ರಕಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 3. ರೇವಣಸಿದ್ದ ತಂದೆ ಸಂಗಪ್ಪಾ ಹತ್ತಿ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ  4. ರಾಜೇಂದ್ರ ತಂದೆ ದಸ್ತಯ್ಯ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 5. ರೋಹಿತ ತಂದೆ ಅಂಬು ವಳಕೇರಿ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 6. ಮಲ್ಲಿಕಾರ್ಜುನ ತಂದೆ ಚನ್ನಪ್ಪಾ ಫರತಾಬಾದ ಸಾಃ ಚಕ್ರಕಟ್ಟಿ ಹತ್ತಿರ ಗಾಜಿಪೂರ ಗುಲಬರ್ಗಾ 7. ವಿನೋದ ತಂದೆ ಮಲ್ಲಪ್ಪ ಸಿದ್ದಗೋಳ ಸಾಃ ಶಿವ ಮಂದಿರ ಹತ್ತಿರ ಎಂ.ಬಿ ನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ಒಟ್ಟು 10,000/- ರೂ. ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: