POLICE BHAVAN KALABURAGI

POLICE BHAVAN KALABURAGI

24 January 2012

GULBARGA DIST REPORTED CRIME

ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಬಸವರಾಜ ತಂದೆ ಚಂದಪ್ಪ ಸಿಂಗೆ ಸಾ ಸಂಗೊಳಗಿ ತಾ ಅಕ್ಕಲಕೋಟ ಜಿ ಸೋಲಾಪೂರರವರು ನನ್ನ ತಂಗಿಯಾದ ಸತ್ಯವ ಇವಳಿಗೆ ನಂದರಗಾ ಗ್ರಾಮದ ಚಂದ್ರಕಾಂತ ತಂದೆ ಚನ್ನಪ್ಪ ದೊಡ್ಡಮನಿ ಎಂಬುವನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಬಳೂರ್ಗಿ ಗ್ರಾಮದಲ್ಲಿ ಹಿಟ್ಟಿನ ಗಿರಣಿ ಹಾಕಿಕೊಂಡು ಅಲ್ಲಿಯೇ ಕೆಲಸ ಮಾಡುತ್ತಿದ್ದಾಗ ನನ್ನ ತಂಗಿಯ ಮೇಲೆ ಶೀಲದ ಬಗ್ಗೆ ಶಂಕೆ ಪಟ್ಟು ಆಗಾಗ ತಕರಾರು ಮಾಡುತ್ತಾ ಇದ್ದನು. ಬಳೂರ್ಗಿ ಗ್ರಾಮದಲ್ಲಿನ ಹಿಟ್ಟಿನ ಗಿರಣಿಯನ್ನು ಮಾರಾಟ ಮಾಡಿ ತಮ್ಮ ಗ್ರಾಮವಾದ ನಂದರಗ ಗ್ರಾಮದಲ್ಲಿ ಮೂರು ತಿಂಗಳಿಂದ ಬಂದು ವಾಸವಾಗಿರುತ್ತಾರೆ ಇಲ್ಲಿಯೂ ಸಹ ತನ್ನ ಹೆಂಡತಿ ಸತ್ಯವ್ವ ಇವಳ ಮೇಲೆ ಸಂಶಯ ಪಟ್ಟು ಅವಳ ಜೊತೆಗೆ ತಕರಾರು ಮಾಡುತ್ತಿದ್ದನು ದಿನಾಂಕ 23.01.12 ರಂದು ರಾತ್ರಿ 9 ಗಂಟೆಯಿಂದ ದಿನಾಂಕ 24.01.12 ಬೆಳಿಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಾಮ ನನ್ನ ತಂಗಿಯ ಮೇಲೆ ಸಂಶಯ ಪಟ್ಟು ಮನೆಯಲ್ಲಿಯೆ ಅವಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮತಿ ಖೈರುನ ಬಿ ಗಂಡ ಅಬ್ದುಲ ನಬಿ ಗೋಳಾ ಸಾ: ರಾವೂರ ತಾ: ಚಿತ್ತಾಪೂರ ರವರು ನಾನು ದಿ 23-01-2012 ರಂದು ಮಧ್ಯಾಹ್ನ ಸುಪರ ಮಾಕೇಟ ಅಟೋ ಸ್ಟ್ಯಾಂಡ ರೋಡಿನ ಮೇಲೆ ಮಹಿಂದ್ರಾ ಟಾಟಾ ಎ.ಸಿ. ಗೂಡ್ಸ ನಂ: ಕೆಎ 33 -9511 ನೇದ್ದರ ಚಾಲಕ ಇಮಾಮೋದ್ದಿನ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ತನ್ನ ವಾಹನ ಅಲ್ಲಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ಶಾಮ ತಂದೆ ವಾಸುದೇವ ನಾನಾವತೆ ಸಾ: ಮನೆ £ÀA:1-16 ಬಿ ವೆಂಕಟೇಶ ನಗರ ಗುಲಬರ್ಗಾರವರು ನಾನು ದಿ 23-01-2012 ರಂದು ಮಧ್ಯಾಹ್ನ ಅನಂದ ಓ.ಪಿ ಕ್ರಾಸದಿಂದ ಕೋರ್ಟ ಕ್ರಾಸ್ ಮೇನ ರೋಡಿನಲ್ಲಿ ಬರುವ ಜಿಲ್ಲಾ ಅರಣ್ಯ ಇಲಾಖೆ ಕಾರ್ಯಾಲಯ ಎದುರು ರೋಡಿನ ಮೇಲೆ ನನ್ನ ಮೋಟಾರ ಸೈಕಲ ನಂ ಕೆಎ-32 ವಾಯಿ-2368 ನೇದ್ದರ ಮೇಲೆ ಹೋಗುತ್ತಿದ್ದಾಗ, ಮೋಟಾರ ಸೈಕಲ ನಂ: ಕೆಎ 32 ವಿ 9394 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ನಾನು ಸಿದ್ರಾಮ ತಂದೆ ಸೈಬಣ್ಣಾ ಕಟಗೆ ಸಾ:ಸುಲ್ತಾನಪೂರ ಗಲ್ಲಿ ಆಳಂದ ರವರು ನಮ್ಮ ಮತ್ತು ನಮ್ಮ ಮನೆಯ ಪಕ್ಕದ ಮಾರುತಿ ತಂದೆ ಪಕ್ಕಿರಪ್ಪ ಗಾಜರೆ ನಡುವೆ ಜಾಗಯ ಸಂಬಂದ ತಕರಾರು ಇರುತ್ತದೆ. ದಿನಾಂಕ 23/01/2012 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ನನ್ನ ತಾಯಿಯಾದ ಚಾಂಗುನಾಬಾಯಿ ಇವಳು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಕೂಳಿತು ಮುಸರಿ ಪಾತ್ರೆ ತೊಳೆಯುವಾಗ ಕೋಳಿ ಬಂದಿದೆ ಸೂ ಎಂದು ಅದಕ್ಕೆ ಹಳ್ಳ[ಚಿಕ್ಕ ಕಲ್ಲು] ದಿಂದ ಹೊಡೆದಾಗ ಸದರಿ ಹಳ್ಳಾ ಮಾರುತಿಯವರ ಮನೆಯ ಮುಂದೆ ಹೋದಾಗ ನಮ್ಮೊಂದಿಗೆ ಜಗಳ ತೆಗೆಯುವ ಉದೇಶದಿಂದ ಮಾರುತಿ ಮೊಮ್ಮಕ್ಕಳಾದ ಚಂದ್ರಕಾಂತ ತಂದೆ ಮೈಲಕಾರಲಿಂದ, ಪ್ರಕಾಶ ತಂದೆ ಮೈಲಾರಲಿಂಗ , ಸುಸಿಲಾಬಾಯಿ [ಸೊಸೆ] ಕೂಡಿ ಬಂದು ಚಂದ್ರಕಾಂತನು ಅವಾಚ್ಯವಾಗಿ ಬೈದಿರುತ್ತಾರೆ ಇವರೆಲ್ಲರೂ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಹಿರಾಚಂದ ಇತನು ನಾಯಿಗೆ ಚೌ ಹಚ್ಚಿ ನಾಯಿಯಿಂದ ಕಚ್ಚಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ 324.323.504.506.289.ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಶರಣಪ್ಪಾ ತಂದೆ ನರಸಪ್ಪಾ ಪರೀಟ್ ಸಾ: ಶಂಕರವಾಡಿ ರವರು ನಾನು ದಿನಾಂಕ:23/01/2012 ರಂದು ರಾತ್ರಿ ಶಂಕರವಾಡಿಯಿಂದ ಶಾಂತ ನಗರಕ್ಕೆ ಊಟ ಮಾಡಲು ಮೋಟಾರ ಸೈಕಲ್ ಕೆ.ಎ-32/ಎಫ್-1334 ನೇದ್ದರ ಮೇಲೆ ಬಂದು ಊಟ ಮಾಡಿ ನಂತರ ಶಂಕರವಾಡಿ ಗ್ರಾಮಕ್ಕೆ ಹೋಗುತ್ತಿರುವಾಗ ಸ್ಕೀಡ್ ಆಗಿ ನಾನೆ ಕೆಳಗೆ ಬಿದ್ದೇನು. ನನಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿದ್ದು ಮತ್ತು ಬಲತೊಳು ತರಚಿದ ಗಾಯ , ಮುಖಕ್ಕೆ ಮತ್ತು ಕೈ ಕಾಲುಗಳೀಗೆ ಸಣ್ಣ ಪುಟ್ಟ ರಕ್ತಗಾಯಗಳಾಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ: 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.