POLICE BHAVAN KALABURAGI

POLICE BHAVAN KALABURAGI

24 June 2013

GULBARGA DISTRICT REPORTED CRIME

ಅಪಹರಣ ಪ್ರಕರಣ:


ಮಳಖೇಡ ಪೊಲೀಸ್ ಠಾಣೆ:ದಿನಾಂಕ 24/06/2013 ರಂದು ಮಧ್ಯಾಹ್ನ 2:00 ಗಂಟೆ ಸುಮಾರಿಗೆ  2೦ ವರ್ಷದ ಮಗಳಿಗೆ ಇವಳಿಗೆ ದಿನಾಂಕ:14/06/2013 ರಂದು ಬೆಳಿಗ್ಗೆ 5:00 ಗಂಟೆಗೆ ತನ್ನ ತಾಯಿಯೊಂದಿಗೆ ಸಂಡಾಸಕ್ಕೆ ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿರುವಾಗ ಸೋಮಶೇಖರ, ಶಿವಾನಂದ, ಪದ್ಮಣ್ಣ ಯಲ್ಲಾಲಿಂಗ, ಬೀರಪ್ಪ ಇವರೆಲ್ಲರು ಕೂಡಿಕೊಂಡು ಬಂದು ಅವರಲ್ಲಿ ಸೋಮಶೇಖರ ಮತ್ತು ಶಿವಾನಂದ ಇವರು ನನ್ನ ಮಗಳ ಬಾಯಿಯನ್ನು ಒತ್ತಿ ಹಿಡಿದು ಮೋಟಾರು ಸೈಕಲ್ ಮೇಲೆ ಕೂಡಿಸಿಕೊಳ್ಳುತ್ತಿರುವದನ್ನು ಕಂಡು ಅವಳಿಗೆ ಬೀಡಿ ಅಂತಾ ನನ್ನ ಹೆಂಡತಿ ಚೀರಾಡುತ್ತಿರುವಾಗ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಯುವತಿಯ ತಂದೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:63/2013 ಕಲಂ 147. 366. 504. ಸಂಗಡ 149 ಐಪಿಸಿ ಮತ್ತು 3 (1) (X)ಎಸ್.ಸಿ  ಎಸ್.ಟಿ  ಪಿ.ಎ ಆಕ್ಟ್-1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ರಮೇಶ ತಂದೆ ಭೀಮಸಿಂಗ ರಾಠೋಡ  ಉ|| ಕಿರಾಣಿ ವ್ಯಾಪಾರ  ಜಾ|| ಲಂಬಾಣಿ ಸಾ|| ಏತೆಬಾರಪೂರ ರಾಮಶೆಟ್ಟಿನಾಯಕ  ತಾಂಡಾ ತಾ|| ಚಿಂಚೋಳಿ ರವರು ನಮ್ಮ ತಾಂಡಾದ ರಾವುಲ ತಂದೆ ಭಾವಸಿಂಗ ರಾಠೋಡ ವ|| 10 ವರ್ಷ ಇತನು ದಿನಾಂಕ 22-06-2013 ರಂಧು ಸಾಯಾಂಕಾಲ 04.30 ಗಂಟೆಗೆ ಸುಮಾರಿಗೆ ನಮ್ಮ ಕಿರಾಣಿ ಅಂಗಡಿಗೆ ಬಂದು ಪಾಪಡ ಕರಿದಿ ಮಾಡಿಕೊಂಡು ನಮ್ಮ ಕಿರಾಣಿ ಅಂಗಡಿಯ ಸಮಿಮ ವಿರುವ ಸರಕಾರಿ ಶಾಲೆಯ ಮುಂದೆ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಆಟವಾಡುತ್ತಿರುವಾಗ ರಾಹುಲ ಇತನು ಪಾಪಡ ತಿನ್ನುತ್ತಾ ಆಟವಾಡುವದನ್ನು ನೋಡತ್ತಾ ನಿಂತಿದ್ದನು. ಆಗ ಬಾಬು ತಂದೆ ಭೀಮಸಿಂಗ ಇತನು ಕಲ್ಲುಗಳನ್ನು ಹೊಡೆಯುತ್ತಾ ನಮ್ಮ ಕಿರಾಣಿ ಅಂಗಡಿಯ ಕಡೆಗೆ ಬಂದನು ಆಗ ನಾನು ಸದರಿ ಬಾಬು ಇತನಿಗೆ ಈ ರೀತಿ ಕಲ್ಲುಗಳು ಹೊಡೆಯಬೇಡಾ? ಯಾರಿಗಾದರೂ ಕಲ್ಲು ಬಡೆದು ಅನಾಹುತಾ ಮಾಡುತ್ತಿ ಅಂತ ಹೇಳಲು ನೀ ಏನು ಹೇಳುತ್ತಿ ಅಂತ ಪುನಃ  ಆಟವಾಡುತ್ತಿದ್ದ ಹುಡಗರ ಕಡೆಗೆ ಕಲ್ಲು ಹೊಡೆದನು ಹಾಗೆ ಕಲ್ಲು ಹೊಡೆದರೆ ಹುಡುಗರು ಸಾಯುತ್ತಾರೆ ಅಂತಾ ಹೇಳಿದರು ಉದ್ದೇಶಪೂರ್ವಕವಾಗಿ ಒಂದು ಕಲ್ಲನ್ನು ತೆಗೆದುಕೊಂಡು ಜೋರಾಗಿ ರಾಹುಲ ತಂದೆ ಭಾವಸಿಂಗ ರಾಠೋಡ ಇವನಿಗೆ ತಲೆಗೆ ಹೊಡೆದನು. ಇದರಿಂದ ತಲೆಗೆ ಪೆಟ್ಟಾಗಿ ರಕ್ತ ಬರುತ್ತಿತ್ತು ಅಷ್ಟರಲ್ಲಿ ಭಾವಸಿಂಗ ರಾಠೋಡ, ಶಾಂತಬಾಯಿ ಗಂಡ ಭಾವಸಿಂಗ ,ನಾರಾಯಣ ತಂಧೆ ದಾಮಲಾ ರಾಠೋಡ, ಶಾಮರಾವ್ ತಂಧೆ ಅಂಬುನಾಯಕ ಮತ್ತು ರಾಮು ತಂದೆ ಮೋತು ರಾಠೋಡ ಇವರು ಸಹ ಸದರಿ ಸ್ಥಳಕ್ಕೆ ಬಂದು ನಾವೆಲ್ಲರೂ ಕೂಡಿಕೊಂಡು ಸದರಿ ರಾವುಲ ಇವನಿಗೆ ಉಪಚಾರ ಕುರಿತು  ಸರಕಾರಿ ಆಸ್ಪತ್ರೆ ಚಂದಾಪೂರಕ್ಕೆ ತಂಧು ಸೆರಿಕೆ ಮಾಡಿದ್ದು ವೈಧ್ಯಾಧಿಕಾರಿಗಳು ಸದರಿ ರಾವುಲನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೋಟ್ಟಿರುತ್ತಾರೆ. ಸದರಿ ರಾವುಲ ಇತನು ಪ್ರಜ್ಞಾಹಿನಾ ಸ್ಥಿತಿಯಲ್ಲಿರುತ್ತಾನೆ. ಭಾಬು ತಂಧೆ ಬೀಮಸಿಂಗ ಪವಾರ ಇತನು ಉದ್ದೇಶಪೂರ್ವಕವಾಗಿ ರಾವುಲ ಇತನ ತಲೆಗೆ ಕಲ್ಲಿನಿಂದ ಹೊಡೆದು ಬಾರಿ ರಕ್ತಗಾಯಪಡಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:153/2013 ಕಲಂ 307 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:23-06-2013 ರಂದು ಮಧ್ಯಾಹ್ನ  ಪಿಎಸ್ಐ ಕಮಲಾಪೂರ ಮತ್ತು ಅವರ ಸಿಬ್ಬಂದಿಯವರು ಪಟವಾದ ಗ್ರಾಮದಲ್ಲಿ ಸಂತೋಷ ತಡೋಳಗಿ ಇವರ ಹೋಟೆಲ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಮೇಲೆ ದಾಳಿ ಜೂಜಾಟದಲ್ಲಿ ನಿರತರಾದ ಸಂತೋಷ ತಂದೆ ಶ್ಯಾಮರಾವ ತಡೋಳಗಿ,ರವಿ ತಂದೆ ಹಣಮಂತ ಜಮಾದಾರ,ಸತೀಷ ತಂದೆ ಮಲ್ಲಿಕಾಜರ್ುನ ಖಾನಾಪೂರ, ಶಂಕರ ತಂದೆ ನಾಗಶೆಟ್ಟೆಪ್ಪಾ ಪಾಟೀಲ,ಸಂತೋಷ ತಂದೆ ರಾಜಪ್ಪಾ ರಾಮಾ,ಅಮೃತ ತಂದೆ ನಾಗಪ್ಪಾ ಜಮಾದಾರ,ರಮೇಶ ತಂದೆ ನರಸಪ್ಪಾ ಜಮಾದಾರ,ರಮೇಶ ತಂದೆ ಹಣಮಂತಪ್ಪಾ ಜಮಾದಾರ,ಅನೀಲ ತಂದೆ ರೇವಣಸಿದ್ದಪ್ಪಾ ರಂಜೇರಿ  ಸಾಃ ಎಲ್ಲರೂ ಪಟವಾದ ತಾಃಜಿಃ ಗುಲಬರ್ಗಾ ರವರಿಂದ ನಗದು ಹಣ 3150-00 ರೂಪಾಯಿಗಳು ಹಾಗೂ ಜೂಜಾಟ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 61/2013 ಕಲಂ, 87 ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಚೌಕ ಪೊಲೀಸ ಠಾಣೆ: ಶ್ರೀ ಬಾಲಚಂದ್ರ ತಂದೆ ಸಂತಾನ ಕೃಷ್ಣ ನಾಯ್ಡು ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ರವರು ತಾನು ನೇತಾಜಿ ಚೌಕ ಹತ್ತಿರ ಎಸ್.ವಿ ಮಠಪತಿ ಬಿಲ್ಡಿಂಗನಲ್ಲಿ ಎಲೆಕ್ಟ್ರಿಕಲ್ ಹೊಲಸೆಲ್ ಅಂಗಡಿ ಇಟ್ಟುಕೊಂಡಿದ್ದು, ದಿನಾಂಕ:21.06.2013 ರಂದು ಎಂದಿನಂತೆ ವ್ಯಾಪಾರ ಮಾಡಿಕೊಂಡು ರಾತ್ರಿ 10 ಗಂಟೆಗೆ ಅಂಗಡಿ ಮುಚ್ಚಿಕೊಂಡು ಹೋಗಿದ್ದು ದಿನಾಂಕ:22.06.2013 ರಂದು ಬೆಳಗ್ಗೆ 07-00 ಗಂಟೆಗೆ ಪಕ್ಕದ ಬೇಕರಿಯ ಅಶೋಕ ಉಡಗಿಯವರು ಪೋನ ಮಾಡಿ ನಿಮ್ಮ ಅಂಗಡಿ ರಾತ್ರಿಯ ಸಮಯದಲ್ಲಿ ಕಳ್ಳತನವಾಗಿರುತ್ತದೆ ಅಂತಾ ತಿಳಸಿದ್ದರಿಂದ ಹೋಗಿ ನೋಡಲು ಅಂಗಡಿಯಲ್ಲಿದ್ದ 12-13 ಎಲೆಕ್ಟ್ರಾನಿಕ್ ಪ್ಲಕೇಜಿಬಲ್ ಹಾಗೂ ಕಾಪರ ವೈಯರ್ ಬಂಡಾಲ ಸಾಮಾನುಗಳು ಅಃಕಿಃ 99,000/- ರೂಪಾಯಿ ಬೆಲೆಬಾಳುವವು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಅಂತಾ ಠಾಣೆ ಗುನ್ನೆ ನಂ:136/2013 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.